Tag: ಪರಿಸರ ಸ್ನೇಹಿ

  • ಮಲ್ಲೇಶ್ವರಂನಲ್ಲಿ ಪರಿಸರ ಸ್ನೇಹಿ 3,000 ಗಣೇಶ ಮೂರ್ತಿಗಳ ಹಂಚಿಕೆ

    ಮಲ್ಲೇಶ್ವರಂನಲ್ಲಿ ಪರಿಸರ ಸ್ನೇಹಿ 3,000 ಗಣೇಶ ಮೂರ್ತಿಗಳ ಹಂಚಿಕೆ

    ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸುಬ್ರಮಣ್ಯನಗರದ ಈಸ್ಟ್ ವೆಸ್ಟ್ ಸ್ಕೂಲ್ ಬಳಿ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಮತ್ತು ಮಲ್ಲೇಶ್ವರಂ ವಿಧಾನಸಭಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ಪರಿಸರ ಸ್ನೇಹಿ 3,000 ಗಣೇಶ ಮೂರ್ತಿಗಳನ್ನು ಟ್ರಸ್ಟ್ ನ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಪಾದರೇಣುರವರು ಮಕ್ಕಳಿಗೆ ವಿತರಣೆ ಮಾಡಿದರು.

    ganesh idol

    ಈ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಅಧ್ಯಕ್ಷರಾದ ಪಾದರೇಣುರವರು ಮಾತನಾಡಿ, ಇಂದಿನ ಮಕ್ಕಳೇ ದೇಶದ ಮುಂದಿನ ಮುಂದಿನ ಉತ್ತಮ ಪ್ರಜೆಗಳಾಗಬೇಕು. ತಂದೆ, ತಾಯಿ ಮತ್ತು ಗುರುಗಳಿಗೆ ಗೌರವ ತರುವ ಹಾಗೇ ಉತ್ತಮ ನಡತೆ ಬೆಳೆಸಿಕೊಳ್ಳಬೇಕು. ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

    ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಗಾಯಿತ್ರಿನಗರ, ಸುಬ್ರಮಣ್ಯನಗರ ಮತ್ತು ಪ್ಯಾಲೇಸ್ ಗುಟ್ಟಹಳ್ಳಿ, ಅರಮನೆ ನಗರ, ಅಶ್ವಥ್ ನಗರ ಎಸ್.ಸಿ/ಎಸ್.ಟಿ ಕಾಲೋನಿ ಮಕ್ಕಳಿಗೆ 3 ಸಾವಿರ ಪರಿಸರ ಸ್ನೇಹಿ ಮತ್ತು ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ದೋಚಲು ಹಣವಿಲ್ಲದಾಗ ಹಲ್ಲೆಗೈದು ರೇಪ್ ಮಾಡಿದೆವು – ಸತ್ಯ ಬಿಚ್ಚಿಟ್ಟ 7ನೇ ಆರೋಪಿ

  • ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಬೆಂಗಳೂರು: ಕೊರೊನಾ ಮಧ್ಯೆ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಜೊತೆಗೆ ತಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನ ವಿಗ್ರಹ ಕೂರಿಸಿ ಪೂಜೆ ಮಾಡುತ್ತಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. “ಶ್ರೀ ಗೌರಿ ಸುತನಾದ ಶ್ರೀ ಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ” ಎಂದು ಹಬ್ಬಕ್ಕೆ ವಿಶ್ ಮಾಡಿದ್ದಾರೆ.

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಗಣೇಶ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಅಲ್ಲದೇ ಪುತ್ರ ವಿನೀಶ್ ಜೊತೆ ಚಿಕ್ಕ ಗಣೇಶನ ವಿಗ್ರಹವನ್ನು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಳ್ಳುವ ಮೂಲಕ ವಿಜಯಲಕ್ಷ್ಮಿ ಪರಿಸರ ಸ್ನೇಹಿ ಗಣೇಶನ ಬಳಕೆಗೆ ಬೆಂಬಲ ಸೂಚಿಸಿದ್ದಾರೆ.

    ವಿಜಯಲಕ್ಷ್ಮಿ ಸ್ವತಃ ತಾವೇ ತಯಾರಿಸುವ ಗಣೇಶನನ್ನು ತಮ್ಮ ಮನೆಯಲ್ಲಿ ಕೂರಿಸಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. “ಸುಂದರವಾದ ಗಣೇಶ ಮೂರ್ತಿಯನ್ನು ತಯಾರಿಸಲು ಸುಲಭವಿದ್ದಾಗ ಏಕೆ ಖರೀದಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನಾಳಿನ ಆರೋಗ್ಯಕ್ಕಾಗಿ ಇಂದು ಪರಿಸರ ಸ್ನೇಹಿ ಗಣೇಶ ಬಳಸುವುದು ಉತ್ತಮ” ಎಂದು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

    ಫೋಟೋದಲ್ಲಿ ದರ್ಶನ್ ಪತ್ನಿ ಮತ್ತು ಮಗ ವಿನೀಶ್ ಪ್ರತ್ಯೇಕವಾಗಿ ಎರಡು ಗಣೇಶನ ವಿಗ್ರಹ ತಯಾರಿಸಿದ್ದಾರೆ. ಈ ಎರಡರಲ್ಲಿ ಯಾವುದು ಚೆನ್ನಾಗಿದೆ ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ತಮಾಷೆಯಾಗಿ ಪ್ರಶ್ನೆ ಕೇಳಿದ್ದಾರೆ.

  • ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸಿದ 18ರ ಯುವತಿ

    ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸಿದ 18ರ ಯುವತಿ

    -ನೆಟ್ಟಿಗರಿಂದ ಮೆಚ್ಚುಗೆ

    ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ಯುವತಿಯೊಬ್ಬರು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇಶಾನಾ ಮಾರ್ಕೆಟ್‍ ನಲ್ಲಿ ದೊರೆಯುವ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದರು. ಇದರಿಂದ ಅವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಸ್ವತಃ ಅವರೇ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸಲು ನಿರ್ಧರಿಸಿದ್ದರು. ಇಶಾನಾ ತಮಗೆ ಬೇಕಾಗಿರುವ ಸಾಮಾಗ್ರಿಗಳ ಜೊತೆಗೆ ಹೊಲಿಗೆ ಯಂತ್ರ ಹಾಗೂ ಇತರ ಅಗತ್ಯ ಉಪಕರಣಗಳೊಂದಿಗೆ ಕಾಟನ್ ಸ್ಯಾನಿಟರಿ ಪ್ಯಾಡ್ ತಯಾರಿಸುತ್ತಾರೆ ಎಂದು ವೆಬ್‍ಸೈಟ್ ಒಂದರಲ್ಲಿ ಪ್ರಕಟವಾಗಿದೆ. ಇದನ್ನೂ ಓದಿ: ಋತುಚಕ್ರದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸ್ತಿರೋ ಕೊಪ್ಪಳದ ಭಾರತಿ

    ಈ ಬಗ್ಗೆ ಮಾತನಾಡಿದ ಇಶಾನಾ, ಸಾಧಾರಣ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಾಗ ನನ್ನ ಆರೋಗ್ಯದಲ್ಲಿ ಸಮಸ್ಯೆ ಆಯಿತು. ಈ ರೀತಿ ಬೇರೆಯವರಿಗೆ ಆಗಬಾರದು ಎಂದು ನಾನು ಕಾಟನ್ ಸ್ಯಾನಿಟರಿ ಪ್ಯಾಡ್ ತಯಾರಿಸಲು ನಿರ್ಧರಿಸಿದೆ. ಕಾಟನ್ ಬಟ್ಟೆಯಿಂದ ಸ್ಯಾನಿಟರಿ ಪ್ಯಾಡ್ ಹೇಗೆ ತಯಾರಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಮಾರ್ಕೆಟ್‍ ನಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್‍ನಲ್ಲಿ ಕೆಮಿಕಲ್ ಜೆಲ್ ಉಪಯೋಗಿಸುತ್ತಾರೆ. ಇದು ಮಹಿಳೆಯರಿಗೆ ಅಪಾಯಕಾರಿ ಆಗಬಹುದು ಎಂದು ಪ್ರತಿಕ್ರಿಯಿಸಿದ್ದರು.

    ನಾನು ತಯಾರಿಸಿದ ಸ್ಯಾನಿಟರಿ ಪ್ಯಾಡ್‍ನಲ್ಲಿ ಕಾಟನ್ ಬಟ್ಟೆಯಿಂದ ಪದರಗಳಿವೆ. ಇದು ಮರುಬಳಕೆ ಮಾಡಬಹುದು. ಅಲ್ಲದೆ ಇದು ಪರಿಸರ ಸ್ನೇಹಿ ಕೂಡ ಎಂದು ಇಶಾನಾ ತಿಳಿಸಿದ್ದಾರೆ. ಇಶಾನಾ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು, ‘ವಾವ್’, ‘ಸೂಪರ್’, ‘ಟ್ಯಾಲೆಂಟೆಡ್ ಗರ್ಲ್’, ‘ಒಳ್ಳೆಯ ಕೆಲಸ ಮಾಡಿದ್ದೀರಿ’, ‘ಈ ಯುವತಿಗೆ ನಮ್ಮ ಸಲಾಂ’ ಎಂದು ಕಮೆಂಟ್ ಮಾಡಿ ಶಹಬ್ಬಾಸ್ ಗಿರಿ ನೀಡುತ್ತಿದ್ದಾರೆ.

  • ಪೊಲೀಸ್ ಅಧಿಕಾರಿಯ ಪರಿಸರ ಪ್ರೇಮ – 100 ಮಣ್ಣಿನ ಗಣೇಶ ಮೂರ್ತಿ ವಿತರಣೆ

    ಪೊಲೀಸ್ ಅಧಿಕಾರಿಯ ಪರಿಸರ ಪ್ರೇಮ – 100 ಮಣ್ಣಿನ ಗಣೇಶ ಮೂರ್ತಿ ವಿತರಣೆ

    – ಗಣೇಶ ಮೂರ್ತಿಯಲ್ಲಿ ತುಳಸಿ, ತರಕಾರಿ ಬೀಜ

    ರಾಯಚೂರು: ಜಿಲ್ಲೆಯಲ್ಲಿ ಈ ವರ್ಷ ಗಣೇಶ ಹಬ್ಬವನ್ನು ಪೊಲೀಸ್ ಇಲಾಖೆ ವಿಭಿನ್ನವಾಗಿ ಆಚರಿಸಲು ಮುಂದಾಗಿದೆ. ಪ್ರತೀ ವರ್ಷ ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೆ ಕಾನೂನು ಸುವ್ಯವಸ್ಥೆ ಮಾತ್ರ ಕಾಪಾಡುತ್ತಿತ್ತು. ಆದರೆ ಈ ವರ್ಷ ಪೊಲೀಸ್ ಅಧಿಕಾರಿಗಳೇ ಸ್ವತಃ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿತರಿಸುತ್ತಿದ್ದಾರೆ. ಜೊತೆಗೆ ಪರಿಸರ ಹಾಳು ಮಾಡಲು ಮುಂದಾಗುವವರ ವಿರುದ್ಧ ಖಡಕ್ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

    ಪೊಲೀಸರು ಅಂದರೆ ಈಗಲೂ ಜನರಿಗೆ ಏನೋ ಒಂಥರಾ ಭೀತಿ. ಇದನ್ನು ದೂರ ಮಾಡಬೇಕು ಎಂದು ರಾಯಚೂರಿನ ಪೊಲೀಸರು ಏನೇನೋ ಕಸರತ್ತು ಮಾಡುತ್ತಿದ್ದಾರೆ. ಉತ್ತಮ ನಾಗರಿಕರಿಗೆ ಜನಸ್ನೇಹಿಯಾಗಿರಲು ಪೊಲೀಸರು ಈ ಬಾರಿ ಗಣೇಶ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಮ್ಮ ಸ್ವಂತ ಖರ್ಚಿನಲ್ಲಿ 100 ಮಣ್ಣಿನ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಪರಿಸರ ಕಾಳಜಿಯನ್ನ ಮೂಡಿಸಲು ಮುಂದಾಗಿದ್ದಾರೆ.

    ಗಣೇಶ ಮೂರ್ತಿಯಲ್ಲಿ ಹಾಗಲಕಾಯಿ, ಈರೇಕಾಯಿ, ತುಳಸಿ ಸೇರಿ ವಿವಿಧ ತರಕಾರಿ, ಗಿಡಗಳ ಬೀಜಗಳನ್ನು ಸೇರಿಸಲಾಗಿದೆ. ಗಣೇಶ ವಿಸರ್ಜನೆಯ ಬಳಿಕ ಉತ್ತಮ ಮಣ್ಣು ಸಿಗುತ್ತೆ ಜೊತೆಗೆ ಬೀಜಗಳು ಮೊಳಕೆಯೊಡೆದು ಗಿಡಗಳಾಗುತ್ತೆವೆ. ಹೀಗಾಗಿ ಈ ಮಣ್ಣಿನ ಗಣೇಶಗಳಿಗೆ ರೈತ ಗಣೇಶ ಎಂದು ಹೆಸರಿಟ್ಟು ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಬೆಳಸಿಕೊಳ್ಳಲು ಎಸ್‍ಪಿ ಮನವಿ ಮಾಡಿದ್ದಾರೆ.

    ಇನ್ನೂ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದ್ದಾರೆ. ರಾಸಾಯನಿಕ ಬಣ್ಣಗಳನ್ನು ಬಳಸಿ ಗಣೇಶ ಮೂರ್ತಿಯನ್ನು ತಯಾರಿಸದಂತೆ ಎಚ್ಚರಿಕೆ ನೀಡಿದ್ದಾರೆ. ಗಣೇಶ ವಿಸರ್ಜನೆ ವೇಳೆ ಡಿಜೆ ಬಳಸಿ ಶಬ್ದ ಮಾಲಿನ್ಯ ಮಾಡುವವರಿಗೂ ಖಡಕ್ ವಾರ್ನಿಂಗ್ ಆಗಿದೆ. ಹೀಗಾಗಿ ಕೇವಲ ಹೇಳುವುದಕ್ಕಿಂದ ಮಾಡುವುದು ಉತ್ತಮ ಎಂದು ಕಲಾವಿದ ರಾಮಸಿಂಗ್ ಎಂಬುವವರಿಂದ 100 ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಪೊಲೀಸರು ವಿತರಿಸುತ್ತಿದ್ದಾರೆ. ಪರಿಸರ ಗಣೇಶಗಳನ್ನು ತಯಾರಿಸಿ ಕೊಡಲು ಎಸ್.ಪಿ ಕೇಳಿರುವುದಕ್ಕೆ ಗಣೇಶ ಮೂರ್ತಿ ತಯಾರಕ ರಾಮಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಬಾರಿ ಗಣೇಶ ಹಬ್ಬವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ಆಚರಿಸಲು ಪೊಲೀಸ್ ಇಲಾಖೆ ಕಠಿಣವಾದ ಕ್ರಮಗಳನ್ನು ಜನ ಸ್ನೇಹಿಯಾಗಿ ತೆಗೆದುಕೊಂಡಿದೆ. ಸಾರ್ವಜನಿಕರಿಗೆ ಹಾಗೂ ಪಿಓಪಿ ಗಣೇಶ ತಯಾರಕರಿಗೆ ಸ್ವಲ್ಪಮಟ್ಟಿಗೆ ಕಷ್ಟವಾದರೂ ಉತ್ತಮ ನಿರ್ಧಾರಕ್ಕೆ ಎಲ್ಲರೂ ಜೈ ಅಂದಿದ್ದಾರೆ.

  • ಉಡುಪಿಯಲ್ಲಿ 20 ಕೆಜಿ ಧಾನ್ಯಗಳಲ್ಲಿ ಪ್ರತ್ಯಕ್ಷನಾದ ಗಣಪ!

    ಉಡುಪಿಯಲ್ಲಿ 20 ಕೆಜಿ ಧಾನ್ಯಗಳಲ್ಲಿ ಪ್ರತ್ಯಕ್ಷನಾದ ಗಣಪ!

    ಉಡುಪಿ: ವಿಘ್ನ ನಿವಾರಕನ ಆರಾಧಾನ ದಿನವಾದ ಇಂದು, ಉಡುಪಿಯ ರಾಧಾ ಸಂಸ್ಥೆಯ ಟಿವಿಎಸ್ ಶೋ ರೂಂನಲ್ಲಿ ಧಾನ್ಯಗಳ ರೂಪ ಪಡೆದು ಗಣೇಶ ಪ್ರತ್ಯಕ್ಷನಾಗಿದ್ದಾನೆ. ಸುಮಾರು 12 ಅಡಿ ಎತ್ತರ ಹಾಗೂ 6 ಅಡಿ ಅಗಲದ ಧಾನ್ಯಗಳಿಂದ ಮಾಡಿದ ಗಣಪತಿ ಈಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.

    ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಎಂಬವರು ಈ ಧಾನ್ಯರೂಪದ ಗಣಪನಿಗೆ ರೂಪ ತಂದಿದ್ದಾರೆ. ಇದಕ್ಕಾಗಿ ಸುಮಾರು 20 ಕೆಜಿ ಧಾನ್ಯಗಳನ್ನು ಉಪಯೋಗಿಸಿಕೊಂಡು ನಯನಮನೋಹರವಾಗಿ ಗಣಪನನ್ನು ಸೃಷ್ಟಿಸಿದ್ದಾರೆ.

    ಈ ಧಾನ್ಯ ಗಣಪನ ಕಲಾಕೃತಿ ರಚನೆಯಲ್ಲಿ ಕಡ್ಲೆಬೇಳೆ, ಹುರಿಗಡಲೆ, ಅವರೆ, ಬಟಾಣಿ, ಸಾಸಿವೆ, ಬೀನ್ಸ್ ಹಾಗೂ ಸಾಬಕ್ಕಿಯಿಂದ ಸಿದ್ಧಗೊಂಡಿದೆ. ಕಳೆದ 10 ದಿನಗಳಿಂದ ಶ್ರಮವಹಿಸಿ, ಮೈದಾಹಿಟ್ಟಿನ ಅಂಟು ಬಳಕೆ ಮಾಡಿಕೊಂಡು, ಧಾನ್ಯಗಳನ್ನು ಅಂಟಿಸುತ್ತಾ, ಜೊತೆಗೆ ಪೇಪರ್, ಮರ ಹಾಗೂ ಥರ್ಮಾಕೋಲ್ ಒಳಗೊಂಡತೆ ಈ ಬೃಹತ್ ಕಲಾಕೃತಿಗೆ ಗಣಪನ ರೂಪವನ್ನು ಕೊಟ್ಟಿದ್ದಾರೆ.

    ಒಂದು ವಾರಗಳ ಕಾಲ ಪ್ರದರ್ಶನದ ನಂತರ ಈ ಗಣಪನ ಮೂರ್ತಿಯಲ್ಲಿ ಗಮ್ ಬಳಸದೇ ನೈಸರ್ಗಿಕ ಮೈದಾ ಹಿಟ್ಟನ್ನು ಬಳಸಿರುವುದರಿಂದ ಈ ಧಾನ್ಯಗಳನ್ನು ಪುನಃ ಆಹಾರವಾಗಿ ಉಪಯೋಗಿಸಲಾಗುತ್ತದೆ. ಕಳೆದ ಐದು ವರ್ಷಗಳಿಂದಲೂ ವಿಭಿನ್ನ ಹಾಗೂ ಪರಿಸರ ಸ್ನೇಹಿ ಗಣಪನನ್ನು ಮಾಡಿಕೊಂಡು ಬರುತ್ತಿರುವ ಟಿವಿಎಸ್ ಶೋರೂಮಿನವರು ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

    ಈ ಕುರಿತು ತಯಾರಕರಾದ ಶ್ರೀನಾಥ್ ಹಾಗೂ ರವಿ ಮಾತನಾಡಿ, ಕಲಾವಿದರಿಗೆ ಗಣೇಶ ಪ್ರಸಿದ್ಧ ದೇವರು. ಗಣಪನ ಮೂರ್ತಿಯನ್ನು ನಮ್ಮ ಆಲೋಚನೆ ಹಾಗೂ ಕನಸಿನಂತೆ ತಯಾರು ಮಾಡಬಹುದು. ನಾವು ಮಾಡುವ ಗಣಪ ಪರಿಸರಕ್ಕೆ ಮಾರಕವಾಗದೆ ಇದ್ದರೇ ಸಾಕು ಅನ್ನುವುದು ನಮ್ಮಯ ಆಶಯ. ಪ್ರತಿ ವರ್ಷ ರಾಧಾ ಸಂಸ್ಥೆಯವರು ಇಂತಹ ಗಣಪನ ಮೂರ್ತಿಗಳನ್ನು ತಯಾರಿಸಲು ಅವಕಾಶ ಕೊಡುತ್ತಿದ್ದು, ಮುಂದಿನ ವರ್ಷ ಮತ್ತೊಂದು ವಿಭಿನ್ನ ಗಣಪನನ್ನು ತಯಾರಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv