Tag: ಪರಿಸರ ದಿನಾಚರಣೆ

  • ಕಟ್ಟಡ ನಿರ್ಮಾಣ ಅನುಮತಿಗೆ ಸಸಿ ನೆಡುವುದು ಕಡ್ಡಾಯ – ಮಧ್ಯಪ್ರದೇಶ ಸಿಎಂ

    ಕಟ್ಟಡ ನಿರ್ಮಾಣ ಅನುಮತಿಗೆ ಸಸಿ ನೆಡುವುದು ಕಡ್ಡಾಯ – ಮಧ್ಯಪ್ರದೇಶ ಸಿಎಂ

    ಭೋಪಾಲ್: ರಾಜ್ಯದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಬೇಕಾದರೆ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಒಂದು ಸಸಿ ನೆಡುವುದು ಕಡ್ಡಾಯ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

    ನಿನ್ನೆ ಪರಿಸರ ದಿನದ ಅಂಗವಾಗಿ ಆನ್‍ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದಲ್ಲಿ ಇನ್ನುಮುಂದೆ, ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಬೇಕಾದಲ್ಲಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸಸಿ ನೆಡುವುದು ಕಡ್ಡಾಯ. ಇದು ರಾಜ್ಯದ ನಗರ ಪ್ರದೇಶ, ಮುನ್ಸಿಪಾಲಿಟಿ, ನಗರ ಪಂಚಾಯತ್ ಸೇರಿ, ಗ್ರಾಮ ಪಂಚಾಯತ್ ವರೆಗೆ ಅನ್ವಯಿಸುತ್ತದೆ. ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಜಾಗ ಇಲ್ಲದೆ ಇದ್ದರೆ ಸಮೀಪದ ಶಾಲೆ, ಸಾರ್ವಜನಿಕ ಉದ್ಯಾನವನ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟು ಅದನ್ನು ಬೆಳೆಸಬೇಕು ಎಂದರು. ಇದನ್ನೂ ಓದಿ:ರೈತರ ಬ್ಯಾಂಕ್ ಖಾತೆಗೆ 4 ಸಾವಿರ ರೂ. ವರ್ಗಾವಣೆ: ಶಿವರಾಜ್ ಸಿಂಗ್ ಚೌಹಾಣ್

    ಈ ನಿಯಮ ಕೇವಲ ಕಟ್ಟಡ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ ಬದಲಾಗಿ ರಾಜ್ಯದಲ್ಲಿ ಹೊಸದಾಗಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸುವ ಮನೆಗಳಿಗೂ ಅನ್ವಯಿಸುತ್ತದೆ. ಗ್ರಾಮಗಳಲ್ಲಿ ಈ ನಿಯಮವನ್ನು ಸರಿಯಾಗಿ ಪಾಲನೆ ಮಾಡಲು ಗ್ರಾಮ ಪಂಚಾಯತ್ ಸಹಕಾರಿಯಾಗಬೇಕು ಎಂದು ಮಾಹಿತಿ ನೀಡಿದರು.

    ಈ ನಿಯಮ ಎಲ್ಲಾ ಕಟ್ಟಡ ನಿರ್ಮಾಣಕ್ಕೂ ಅನ್ವಯಿಸಿದ್ದು ಸ್ವತಃ ಸರ್ಕಾರ ಹೊಸ ಕಟ್ಟಡ ಕಟ್ಟಲು ತಯಾರಿ ನಡೆಸಿದರು ಕೂಡ ಸಸಿ ನೆಟ್ಟು ಬೆಳೆಸಬೇಕು. ವಿಶ್ವಪರಿಸರ ದಿನ ಕೇವಲ ಆ ದಿನಕ್ಕೆ ಸೀಮಿತವಾಗದೇ ಪ್ರತಿದಿನ ಪರಿಸರ ದಿನ ಆಚರಣೆ ಆಗುವಂತೆ ಆಗಬೇಕು. ಪರಿಸರ ಸಂರಕ್ಷಣೆ ಧ್ಯೇಯ ವಾಕ್ಯವಾಗಿರದೆ ನಮಗೆ ಒಂದು ಮಂತ್ರವಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಸ್ವತಃ ನಾವು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

  • ಟೆರೇಸ್ ಮೇಲೆ ಪುಟ್ಟ ಕಾಡು – ಬೆಳೆದು ನಿಂತ 2500ಕ್ಕೂ ಹೆಚ್ಚು ಮರಗಳು

    ಟೆರೇಸ್ ಮೇಲೆ ಪುಟ್ಟ ಕಾಡು – ಬೆಳೆದು ನಿಂತ 2500ಕ್ಕೂ ಹೆಚ್ಚು ಮರಗಳು

    ಭೋಪಾಲ್: ಮನೆಯ ಟೆರೇಸ್ ಮೇಲೆ 40 ಪ್ರಭೇದದ, 2500ಕ್ಕೂ ಹೆಚ್ಚು ಬೋನ್ಸಾಯ್ ಮರಗಳನ್ನು ಬೆಳೆಸಿ ಅರಣ್ಯವನ್ನಾಗಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದಾರೆ. ಈ ಪುಟ್ಟ ಕಾಡಿನ ಫೋಟೋಗಳು ಇಂದಿನ ವಿಶ್ವ ಪರಿಸರ ದಿನಾಚರಣೆ ದಿನ ಸಿಕ್ಕಾಪಟೆ ವೈರಲ್ ಆಗಿವೆ. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

    ಸೋಹನ್ ಲಾಲ್ ದ್ವಿವೇದಿ ಅವರು ಮನೆಯ ಟೆರೇಸ್ ಮೇಲೆ 40 ಪ್ರಭೇದದ, 2500ಕ್ಕೂ ಹೆಚ್ಚು ಬೋನ್ಸಾಯ್ ಮರಗಳನ್ನು ಬೆಳೆಸಿ ಅರಣ್ಯ ನಿರ್ಮಿಸಿದ್ದಾರೆ. ಸೋಹನ್ ಲಾಲ್ ಅವರು ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಉದ್ಯೋಗದಿಂದ ನಿವೃತ್ತಿಹೊಂದಿದ ನಂತರ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಬೋನ್ಸಾಯ್ ಅರಣ್ಯ ನಿರ್ಮಾಣ ಮಾಡಲು ಮುಂಬೈ ಮೂಲದ ಮಹಿಳೆಯೊಬ್ಬರೇ ಸ್ಫೂರ್ತಿ ಎನ್ನುತ್ತಾರೆ ಸೋಹನ್ ಲಾಲ್.

    ಆಕೆ ಟೆರೇಸ್ ಮೇಲೆ 250 ಬೋನ್ಸಾಯ್ ಮರಗಳನ್ನು ನೆಟ್ಟಿ-ಬೆಳೆಸಿದ್ದರು. ಆಕೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದ ಸೋಹನ್ ಲಾಲ್ ತಾನೂ ಯಾಕೆ ಅದನ್ನು ಮಾಡಬಾರದು ಎಂದು ಯೋಚಿಸಿ, ಕಾರ್ಯಪ್ರವೃತ್ತರಾದರು. ಇದೀಗ ಇವರ ಮನೆ ಟೆರೇಸ್‍ಗೆ ಹೋದರೆ ಅಲ್ಲೊಂದು ಬೋನ್ಸಾಯ್ ಕಾಡು ನಿರ್ಮಾಣವಾಗಿದ್ದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

    ಬೋನ್ಸಾಯ್ ಮರಗಳೆಂದರೆ ಪುಟ್ಟಪುಟ್ಟ ಮರಗಳು. ಅವು ನೋಡಲೂ ಅಷ್ಟೇ ಸುಂದರವಾಗಿರುತ್ತದೆ. ಸೋಹನ್‍ಲಾಲ್ ಅವರ ಮನೆ ಟೆರೇಸ್ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ. ಇವತ್ತಿಗೂ ದಿನದ ಬಹುತೇಕ ಸಮಯ ಇಲ್ಲಿಯೇ ಕಳೆಯುತ್ತೇನೆ ಎನ್ನುತ್ತಾರೆ ಸೋಹನ್‍ಲಾಲ್. ಅದರಲ್ಲೂ ಈಗಂತೂ ಲಾಕ್‍ಡೌನ್. ನನಗೆ ಮನೆಯಿಂದ ಹೊರಹೋಗಿ ಯಾವುದೇ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯ ಟೆರೇಸ್‍ನಿಂದ ನನಗೆ ತುಂಬ ಆರಾಮ ಎನ್ನಿಸಿದೆ ಎಂದಿದ್ದಾರೆ.

  • ಗಿಡ ನೆಟ್ಟು ಮಾದರಿಯಾದ ಸಿನಿಮಾ ಸ್ಟಾರ್ಸ್

    ಗಿಡ ನೆಟ್ಟು ಮಾದರಿಯಾದ ಸಿನಿಮಾ ಸ್ಟಾರ್ಸ್

    ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತವಾಗಿ ಸೆಲೆಬ್ರೆಟಿಗಳು ಗಿಡನೆಟ್ಟು ಪರಿಚರ Pಕುರಿತಾಗಿ ಕೆಲವು ಸಾಲುಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಕೋರಿದ್ದಾರೆ. ಮನುಷ್ಯದ ಜೀವನದಲ್ಲಿ ಪ್ರಕೃತಿ ಬಹಳ ಮುಖ್ಯ, ಪರಿಸರ ಆರೋಗ್ಯವಾಗಿದ್ದರೆ ಮಾನವರ ಮುಂದಿನ ಪೀಳಿಗೆ ಆರೋಗ್ಯವಾಗಿರಲು ಸಾಧ್ಯ ಎಂಬ ಸಂದೇಶ ಸಾರಿದ್ದಾರೆ.

    ನಮ್ಮ ಜೀವನ ಪರಿಸರ ಇರುವವರೆಗೆ ಮಾತ್ರ ಎಂಬುದನ್ನು ಮರೆಯದಿರಿ, ನಮಗೆ ಬೇಕಾದಂತೆ ಪರಿಸರ ಬದಲಾಯಿಸುವ ಬದಲು, ಪರಿಸರಕ್ಕೆ ತಕ್ಕಂತೆ ನಾವು ಬದಲಾಗೋಣ ಎಂಬ ಸಂದೇಶವನ್ನು ಬರೆದುಕೊಂಡು ಪರಿಸರ ದಿನಾಚರಣೆಯ ಶುಭಾಶಯೊಂದಿಗೆ ಸಂದೇಶವನ್ನು ಕಿಚ್ಚ ಸುದೀಪ್ ನೀಡಿದ್ದಾರೆ. ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

     

    View this post on Instagram

     

    A post shared by Ragini dwivedi (@rraginidwivedi)

    ನಟ ಶರಣ್ ಸಹ ಟ್ವಿಟ್ಟರ್‌ನಲ್ಲಿ ಪರಿಸರ ದಿನಕ್ಕೆ ಶುಭಕೋರಿದರು. ಗುರುಶಿಷ್ಯರು ಚಿತ್ರದ ಸೆಟ್‍ನಲ್ಲಿ ಗಿಡ ನೆಡಲಾಗಿತ್ತು. ಆ ಫೋಟೋ ಶೇರ್ ಮಾಡಿ ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ. ಗುರುಶಿಷ್ಯರು ಚಿತ್ರದ ಶೂಟಿಂಗ್ ದಿನಗಳಲ್ಲಿ ಒಂದು ಪುಟ್ಟ ತೆಂಗಿನ ಸಸಿ ನೆಟ್ಟಿದ್ದ ನೆನಪುಗಳು ಎಂದು ಮೆಲುಕು ಹಾಕಿದ್ದಾರೆ.

     

    View this post on Instagram

     

    A post shared by Allu Arjun (@alluarjunonline)

    ಹೆಚ್ಚಿನ ಮರಗಳನ್ನು ನೆಡೋಣ, ಪರಿಸರ ಸ್ನೇಹಿ ಕೆಲಸಗಳಿಗೆ ಹೊಂದಿಕೊಳ್ಳೋಣ ಎಂದು ತೆಲುಗು ನಟ ಅಲ್ಲು ಅರ್ಜುನ್ ಗಿಡವೊಂದನ್ನು ನೆಡುವ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಮೂಲಕ ಪರಿಸರ ದಿನಕ್ಕೆ ಶುಭಕೋರಿದರು. ಸ್ಯಾಂಡಲ್‍ವುಡ್ ನಟ ಸತೀಶ್ ನಿನಾಸಂ ಹಚ್ಚ ಹಸಿರಿನ ವಾತಾವರಣದಲ್ಲಿ ಕುಳಿತು ಕ್ಲೀಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸೇರ್ ಮಾಡಿಕೊಂಡು ಪರಿಸರ ದಿನಾಚರಣೆ ಶುಭಕೋರಿದ್ದಾರೆ.

    ಪರಿಸರ ದಿನಾಚರಣೆಯ ಅಂಗವಾಗಿ ಸುಮಾರು 150 ಗಿಡಗಳನ್ನು ನೆಟ್ಟಿದ್ದೇವೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರಾಗಿಡೋಣ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುವ ಮೂಲಕ ಸ್ಯಾಂಡಲ್‍ವುಡ್ ನಟಿ ರಾಗಿಣಿ ಪರಿಸರ ದಿನವನ್ನು ಆಚರಿಸಿದ್ದಾರೆ.

    ಬಾಲಿವುಡ್‍ನಲ್ಲಿ ಕರೀನಾ ಕಪೂರ್, ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರು ಪರಿಸರ ದಿನಕ್ಕೆ ವಿಶ್ ಮಾಡಿದ್ದಾರೆ.

  • 100 ಮರಗಳನ್ನು ನೆಟ್ಟು ಪರಿಸರ ದಿನ ಆಚರಣೆ

    100 ಮರಗಳನ್ನು ನೆಟ್ಟು ಪರಿಸರ ದಿನ ಆಚರಣೆ

    ತುಮಕೂರು/ ಚಿಕ್ಕೋಡಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಹಾಗೂ ಪುರಸಭೆ ಹಾಗೂ ಸಂಕೇಶ್ವರ ಫೌಂಡೇಶನ್  100ಕ್ಕೂ ಹೆಚ್ಚು ಮರಗಳನ್ನೂ ನೆಡಲಾಯಿತ್ತು. ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಸಸಿ ನೆಟ್ಟು ನೀರುಣಿಸಿದರು.

    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪರಿಸರ ದಿನದ ನಿಮಿತ್ತವಾಗಿ 100 ಕ್ಕೂ ಹೆಚ್ಚು ಮರಗಳನ್ನ ನೆಡಲಾಯಿತು. ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಆದ ಜಗದೀಶ್ ಈಟಿ ಸಹಕಾರದೊಂದಿಗೆ ಸುಮಾರು 100 ಕ್ಕೂ ಹೆಚ್ಚು ಮರಗಳನ್ನ ಸಂಕೇಶ್ವರದ ದನಗಳ ಪೇಟೆ ಹಾಗೂ ಎಸ್ ಡಿ ವಿ ಎಸ್ ಶಾಲಾ ಮೈದಾನದಲ್ಲಿ ನೆಡಲಾಯಿತು. ಇದನ್ನೂ ಓದಿ: ಮೃಗಾಲಯಗಳನ್ನ ಉಳಿಸಿ ಬೆಳೆಸಿ: ದರ್ಶನ್ ಮನವಿ

    ಕೊರೊನಾ ಸಂದರ್ಭದಲ್ಲಿ ಹಣ ನೀಡಿ ಆಕ್ಸಿಜನ್ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೆಚ್ಚಿನ ಮರಗಳನ್ನ ನೆಟ್ಟರೇ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಆಕ್ಸಿಜನ್ ಸಿಗಲು ಸಾಧ್ಯ ಇಲ್ಲವಾದಲ್ಲಿ ಪರಿಸ್ಥಿತಿ ಸಾಕಷ್ಟು ಹದಗೆಡಲಿದೆ ಎಂದು ಪುರಸಭೆ ಸದಸ್ಯ ಹಾಗೂ ವೈದ್ಯರಾಗಿರುವ ಡಾ ಮಂದಾರ ಹಾವಳ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಎಸ್‍ಡಿವಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮುನ್ನೊಳೀ ಕ್ರೀಡಾ ಪ್ರೇಮಿ ಅಮಿತ್ ಘಸ್ತಿ ಹಾಗೂ ಸಂಕೇಶ್ವರ ಫ್ರೆಂಡ್ಸ್ ಫೌಂಡೆಶನ ಸದಸ್ಯರಾದ ಉಮೇಶ್ ಗೊಟುರೆ ಲಾಡಜಿ ಮುಲ್ತಾನಿ,ಪ್ರಭಾಕರ ಪಾಟೀಲ್ ಕುಮಾರ ಸೌoಸುದ್ದಿ ,ದಯಾನಂದ್ ಆಲೂರೆ ವಿನಯ ಬಕಾಯಿ ಆನಂದ ಶಿರಕೋಳಿ, ರೋಹಿತ್,ಮಹೇಂದ್ರ ಮಾಳಗಿ ಅರಣ್ಯ ಇಲಾಖೆಯ ಮಲೀಕ್ ಮುಲ್ತಾನಿ ಉಪಸ್ಥಿತರಿದ್ದರು. ಇದನ್ನೂ ಓದಿ: ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಣೆ- ಸಿಎಂಗೆ ಬಸವರಾಜ ಹೊರಟ್ಟಿ ಅಭಿನಂದನೆ

    ಕೋವಿಡ್ ಸೋಂಕು ಇರುವುದರಿಂದ ವಿಶ್ವ ಪರಿಸರ ದಿನಾಚರಣೆಯನ್ನು ತುಮಕೂರಿನಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಜಿಲ್ಲಾದ್ಯಂತ ಗಿಡಗಳನ್ನು ನೆಟ್ಟು ಹಸಿರನ್ನು ಬೆಳೆಸಿ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಮರಗಿಡಗಳನ್ನು ಬೆಳೆಸುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಸಾಧ್ಯ ವಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಕರೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಂಶಿಕೃಷ್ಣ, ಉಪ ವಿಭಾಗಾಧಿಕಾರಿ ಅಜಯ್, ತಹಶಿಲ್ದಾರ್ ಮೋಹನ್, ಮತ್ತಿತರರು ಹಾಜರಿದ್ದರು.

  • ಪರಿಸರ ದಿನಾಚರಣೆಗೆ 20 ಲಕ್ಷ ಖರ್ಚು

    ಪರಿಸರ ದಿನಾಚರಣೆಗೆ 20 ಲಕ್ಷ ಖರ್ಚು

    ಬೆಂಗಳೂರು: ಪರಿಸರ ದಿನಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಲಕ್ಷ ಲಕ್ಷ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

    ಪರಿಸರ ದಿನಾಚರಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಜೂನ್ 5 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗಿತ್ತು.

    ಸರಳವಾಗಿ ಆಚರಿಸಬೇಕಿದ್ದ ಪರಿಸರ ದಿನಾಚರಣೆಗೆ 20.45 ಲಕ್ಷ ರೂ. ಹಣ ಖರ್ಚಾಗಿದೆ. ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ.

    ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ?
    * ತಿಂಡಿ – 1,77,975 ರೂ.
    * ಊಟ – 4,44,000 ರೂ.
    * ಸೌಂಡ್ ಮಿಕ್ಸರ್ ವ್ಯವಸ್ಥೆ – 1,10,250 ರೂ.
    * ತ್ಯಾಜ್ಯ ನಿರ್ವಹಣೆ ತಂಡ – 1,05,000 ರೂ.
    * ಸ್ಟೇಜ್ – 1,01,250 ರೂ.
    * ವೀಡಿಯೋಗ್ರಾಫರ್ – 94,920 ರೂ.
    * ಫೋಟೋಗ್ರಾಫರ್ – 47,460 ರೂ.
    * ಹೂಗುಚ್ಛ + ಹಣ್ಣಿನ ಬುಟ್ಟಿ – 94,500 ರೂ.
    * ಪ್ರೆಸ್ ಕಿಟ್ – 20,000 ರೂ.
    * ಫ್ಲವರ್ ಪಾಟ್ – 30,000 ರೂ.
    * ಹಣ್ಣು + ಡ್ರೈ ಫ್ರೂಟ್ಸ್ – 15,750 ರೂ.

    ಈ ರೀತಿಯಾ ಒಟ್ಟಾಗಿ 20.45 ಲಕ್ಷ ರೂ. ಹಣ ಖರ್ಚಾಗಿದೆ. ಇದರಿಂದ ಸಾರ್ವಜನಿಕರು ಸರಳವಾಗಿ ಮಾಡಬೇಕಿದ್ದ ಪರಿಸರ ದಿನಾಚರಣೆಯನ್ನು ಈ ರೀತಿಯಾಗಿ ಅದ್ಧೂರಿಯಾಗಿ ಮಾಡಿ ಸುಮ್ಮನೆ ಲಕ್ಷ ಲಕ್ಷ ಹಣವನ್ನು ದುಂದು ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪರಿಸರ ದಿನಾಚರಣೆಯೇ ಹಾಸ್ಯಾಸ್ಪದ ವಿಷಯ: ಅನಂತ್‍ಕುಮಾರ್ ಹೆಗಡೆ

    ಪರಿಸರ ದಿನಾಚರಣೆಯೇ ಹಾಸ್ಯಾಸ್ಪದ ವಿಷಯ: ಅನಂತ್‍ಕುಮಾರ್ ಹೆಗಡೆ

    – ಒಂದು ದಿನದ ಪರಿಸರ ನಾಟಕ ಅಗತ್ಯವಿಲ್ಲ

    ಕಾರವಾರ: ಪರಿಸರ ದಿನ ಆಚರಣೆಯೇ ಒಂದು ಹಾಸ್ಯಾಸ್ಪದ ವಿಷಯವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿದ್ದಾರೆ.

    ಈ ಕುರಿತು ಫೇಸ್‍ಬುಕ್‍ನಲ್ಲಿ ಅನಿಸಿಕೆ ಹಂಚಿಕೊಂಡಿರುವ ಅನಂತ್‍ಕುಮಾರ್ ಹೆಗ್ಡೆ ಅವರು, ಹಿಂದೂಗಳಿಗೆ ಪರಿಸರ ದಿನಾಚರಣೆ ವಿಷಯವಲ್ಲ. ಪರಿಸರದ ಜೊತೆಗೆ ಬದುಕುವುದು ಹಿಂದೂಗಳ ಸಂಪ್ರದಾಯ. ಪರಿಸರ ರಕ್ಷಣೆ ನಮ್ಮ ಕರ್ತವ್ಯ. ನಮ್ಮ ಜೀವನ ಪದ್ಧತಿ ಮೂಲ ಸನಾತನ ಆಶಯದಂತೆ ನಡೆದಲ್ಲಿ ಒಂದು ದಿನದ ಪರಿಸರ ದಿನದ ನಾಟಕ ಅಗತ್ಯವಿರುವುದಿಲ್ಲ ಎಂದು ತಿಳಿದ್ದಾರೆ.

    ಹಿಂದೂಗಳು ಪರಿಸರ ರಕ್ಷಣೆ ಬದುಕಿನಲ್ಲಿ ನಡೆಸಿಕೊಂಡು ಬಂದಿರುವುದಾಗಿದೆ ಹಾಗೂ ಬದುಕಿನ ಹಾದಿ ಇದಾಗಿದೆ. ಹಿಂದೂ ಜೀವನದ ಪದ್ಧತಿ ಪ್ರಬುದ್ಧವಾಗಿದೆ. ಮತಿಗೆಟ್ಟ ಮೂಲಭೂತವಾದಿಗಳು ಮಾತ್ರ ಇನ್ನೊಂದು ಕೋಮಿನ ವಿಚಾರಕ್ಕೆ ಹೋಲಿಸುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಬರುವುದಿಲ್ಲ ಎಂದರು.

    ಪರಿಸರ ರಕ್ಷಣೆ ಹಿಂದೂಗಳಿಗೆ ಟಾಸ್ಕ್ ಅಲ್ಲ. ತಾಯಿಯ ಸೇವೆ ಮಗನ ಜನ್ಮಜಾತ ಕರ್ತವ್ಯ. ಅದು ಕೆಲಸವಲ್ಲ, ಕರ್ತವ್ಯ. ಪರಿಸರನ್ನು ಉಳಿಸಿ, ಬೆಳೆಸಿಕೊಂಡು ಮುಂದಿನ ತಲೆಮಾರಿಗೆ ಹೀಗೆ ಇಡಬೇಕು ಎಂದು ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಪರಿಸರ ಉಳಿಸೋಕೆ ಕೊಪ್ಪಳ ಗೆಳೆಯರ ಬಳಗದಿಂದ ಮಹತ್ವದ ಕಾರ್ಯ!

    ಪರಿಸರ ಉಳಿಸೋಕೆ ಕೊಪ್ಪಳ ಗೆಳೆಯರ ಬಳಗದಿಂದ ಮಹತ್ವದ ಕಾರ್ಯ!

    ಕೊಪ್ಪಳ: ಪರಿಸರ ದಿನಾಚರಣೆ ದಿನ ಒಂದು ಸಸಿ ನೆಟ್ಟು ಫೋಟೋಗೆ ಫೋಸ್ ಕೊಟ್ಟು ಕೆಲವರು ಸುಮ್ನಾಗ್ಬಿಡ್ತಾರೆ. ಆದ್ರೆ ಈ ಗೆಳೆಯರ ಬಳಗ ಪರಿಸರ ಉಳಿಸೋಕೆ ಬೆಳೆಸೋಕೆ ಪರಿಸರ ದಿನಾಚರಣೆ ಅಗತ್ಯವಿಲ್ಲಾ ಎನ್ನುವಂತೆ ಕೆಲಸ ಮಾಡ್ತಿದೆ.

    ಹೌದು. ಕೊಪ್ಪಳದ ಗಂಗಾವತಿಯಲ್ಲಿ ಈ ಗೆಳೆಯರ ಬಳಗದ ಕೆಲಸ ಇದೀಗ ಎಲ್ಲರ ಗಮನ ಸೆಳೆದಿದೆ. ಪ್ರತೀ ದಿನ ಗೆಳೆಯರೆಲ್ಲಾ ಒಂದು ಕಡೆ ಸೇರಿ ಟೀ ಕುಡಿದು ಮಾತಾಡಿ ಟೈಮ್ ಪಾಸ್ ಮಾಡಿ ಹೋಗ್ತಿದ್ದರು ಅಂತಾ ಎಲ್ಲರೂ ಅನ್ಕೊಂಡಿದ್ರು. ಆದ್ರೆ ಇವತ್ತು ಇವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ನಿಸರ್ಗ ರಕ್ಷಣೆಗೆ ಪಣತೊಟ್ಟ ನರಗುಂದ ಯುವಕರು

    ಸುಮ್ನೆ ಕೂತ್ಕೊಂಡು ಟೈಮ್ ಪಾಸ್ ಮಾಡಿ ಮನೆಗೆ ಹೋಗುವುದಕ್ಕಿಂತ ಏನಾದ್ರೂ ಮಾಡ್ಬೇಕು ಅಂತಾ ಡಿಸೈಡ್ ಮಾಡಿ. ಟೀ ಕುಡಿಯೋಕೆ ಬರುವ ಎಲ್ಲರೂ ಸೇರಿ ಅರಣ್ಯ ಪ್ರದೇಶದಲ್ಲಿ ಬೀಜವನ್ನು ಬಿತ್ತಿ, ಸಸಿ ಬೆಳಸುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ. ಇಷ್ಟಕ್ಕೂ ಈ ಟೀ ಕುಡಿದು ಟೈಮ್ ಪಾಸ್ ಮಾಡಿ ಹೋಗುತ್ತಿದ್ದವರು ಪೊಲೀಸರು, ಶಿಕ್ಷಕರು, ಪತ್ರಕರ್ತರು, ಸಂಘ ಸಂಸ್ಥೆ ಹೀಗೆ ಹಲವಾರು ಗೆಳೆಯರ ಬಳಗದವರು ಸೇರಿ ಈ ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಅಭಿಮಾನಿಗಳು ಗಿಡ ನೆಡೋದರಲ್ಲಿ ಬ್ಯುಸಿ!

    ನಾವು ಹಚ್ಚುವ 500 ಬೀಜಗಳಲ್ಲಿ 50 ಆದ್ರೂ ಬೆಳೆದು ಮರವಾದ್ರೆ ಅದೇ ಖುಷಿ ಅಂತ ಅವರು ಹೇಳುತ್ತಿದ್ದಾರೆ.

  • ಟೈಮ್ ಪಾಸ್ ಮಾಡೋರನ್ನ ತೆಗೆದು, ಕಷ್ಟದಲ್ಲಿರೋರಿಗೆ ಕೆಲ್ಸ ಕೊಡಿ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

    ಟೈಮ್ ಪಾಸ್ ಮಾಡೋರನ್ನ ತೆಗೆದು, ಕಷ್ಟದಲ್ಲಿರೋರಿಗೆ ಕೆಲ್ಸ ಕೊಡಿ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

    ಬೆಂಗಳೂರು: ಟೈಮ್ ಪಾಸ್ ಮಾಡೋ ಹಲವು ನೌಕರರು ವಿಧಾನಸೌಧದಲ್ಲಿ ಇದ್ದಾರೆ. ಅವರನ್ನು ತೆಗೆದು ಹಾಕಿ ಕಷ್ಟ ಪಡುವವರಿಗೆ ಕೆಲಸ ನೀಡಿ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

    ಅವರು ಇಂದು ಜೆಪಿ ನಗರದ ಮನೆ ಮುಂದೆ ಇರುವ ಪಾರ್ಕ್ ನಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅಚರಿಸಿದರು. ಈ ಕಾರ್ಯಕ್ರಮದಲ್ಲಿ ಜಯನಗರ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಕೂಡ ಭಾಗಿಯಾಗಿದ್ದರು.

    ಬಳಿಕ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಪರಿಸರಕ್ಕೆ ಹೆಚ್ಚು ಮಹತ್ವ ನೀಡುತ್ತೆ. ಇಂದು ನನ್ನ ಮನೆ ಮುಂದೆ ಇರೋ ಪಾರ್ಕ್‍ನಲ್ಲಿ ಗಿಡ ನೆಟ್ಟಿದ್ದೇನೆ. ಹಾಗೆಯೇ ರಾಜ್ಯದ ಪ್ರತಿಯೊಬ್ಬರು ಅವರ ಮನೆ ಮುಂದೆ ಗಿಡ ನೆಡುವುದರ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಬೇಕು. ಅದು ನಮ್ಮೆಲ್ಲರ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ್ರು.

    ಇದೇ ವೇಳೆ ಮನೆ ಮುಂದೆಯೇ ಜನತಾದರ್ಶನ ಮಾಡಿದ ಸಿಎಂ ಆಕ್ಸಿಡೆಂಟ್ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಆಸ್ಪತ್ರೆ ವೆಚ್ಚ ಭರಿಸುವುದಾಗಿ ಭರವಸೆಯನ್ನ ನೀಡಿದ್ರು. ಡಿಪ್ಲೋಮಾ ಮಾಡಿದ್ರು ಕೆಲಸವಿಲ್ಲದೆ ಅಲೆದಾಡುತ್ತಿದ್ದ ಮಹಿಳೆಗೆ ವಿಧಾನಸೌಧದಲ್ಲಿ ಕೆಲಸ ನೀಡಿ. ಟೈಮ್ ಪಾಸ್ ಮಾಡೋ ಹಲವು ನೌಕರರು ಇದ್ದಾರೆ. ಅವರನ್ನು ತೆಗೆದು ಹಾಕಿ ಕಷ್ಟ ಪಡುವವರಿಗೆ ವಿಧಾನಸೌದದಲ್ಲಿ ಕೆಲಸ ನೀಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.