Tag: ಪರಿಸರ ಕಾಳಜಿ

  • ಪರಿಸರ ಸ್ನೇಹಿ ಬ್ಯಾಗ್‍ನಲ್ಲಿ ತಿರುಪತಿ ಲಡ್ಡು

    ಪರಿಸರ ಸ್ನೇಹಿ ಬ್ಯಾಗ್‍ನಲ್ಲಿ ತಿರುಪತಿ ಲಡ್ಡು

    ಹೈದರಾಬಾದ್: ಜಗತ್‍ ಪ್ರಸಿದ್ಧ ತಿರುಮಲ ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದ ವಿಲೇವಾರಿಗಾಗಿ ಪರಿಸರ ಸ್ನೇಹಿ ಬ್ಯಾಗ್‍ಗಳನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದೆ.

    ಹೊಸ ಬ್ಯಾಗ್‍ಗಳಲ್ಲಿ ಲಡ್ಡು ವಿತರಿಸುವ ಕೌಂಟರ್‌ಅನ್ನು ನಿನ್ನೆ ಡಿಆರ್‌ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಸ್ ಜವಾಹರ್ ರೆಡ್ಡಿ ಉದ್ಘಾಟಿಸಿದ್ದಾರೆ.

    ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ಲಾಸ್ಟಿಕ್ ಬ್ಯಾಗ್‍ಗಳು, ಪೆಟ್ರೋಕೆಮಿಕಲ್ಸ್‌ನಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಆರೋಗ್ಯಕ್ಕೆ ಹಾನಿಕಾರಕ. ಅಂಥ ಬ್ಯಾಗ್‍ಗಳು ಮಣ್ಣಿನಲ್ಲಿ ಕೊಳೆಯಲು 200ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಡಿಆರ್‌ಡಿಒ ತಯಾರಿಸಿರುವ ಬ್ಯಾಗ್‍ಗಳು, ಆರೋಗ್ಯಕ್ಕೆ ಹಾನಿಕಾರವಲ್ಲ. ಮಣ್ಣಿನಲ್ಲಿ ಬೇಗನೇ ಕೊಳೆಯುತ್ತವೆ. ಅಲ್ಲದೆ ಇವುಗಳ ತಯಾರಿಕಾ ವೆಚ್ಚವೂ ಕಡಿಮೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಆ. 31ರೊಳಗೆ ನಿಮ್ಮ ಸೇನೆ ಇಲ್ಲಿಂದ ಕಾಲ್ಕಿತ್ತಬೇಕು- ಅಮೆರಿಕಾಗೆ ತಾಲಿಬಾನಿಗಳ ಬೆದರಿಕೆ

    ಮನುಕುಲದ ಉಳಿವಿಗೆ ಈ ರೀತಿಯ ಉತ್ಪನ್ನಗಳು ಅತ್ಯಗತ್ಯ. ಕೆಲವು ದಿನಗಳ ಕಾಲ ಯಾತ್ರಾರ್ಥಿಗಳ ಪ್ರತಿಕ್ರಿಯೆಯನ್ನು ಗಮನಿಸಿದ ನಂತರ ನಾವು ಅದರ ಮಾರಾಟವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಪೊಲೀಸರಿಂದ ಪರಿಸರ ಪ್ರೇಮ – ಬೀಟ್‍ಗೊಂದು ಮರ ಅಭಿಯಾನ

    ಪೊಲೀಸರಿಂದ ಪರಿಸರ ಪ್ರೇಮ – ಬೀಟ್‍ಗೊಂದು ಮರ ಅಭಿಯಾನ

    ಹುಬ್ಬಳ್ಳಿ: ಪರಿಸರ ಪ್ರೇಮದಿಂದ ಪೊಲೀಸರು ಬೀಟ್ ಗೊಂದು ಮರ ಎಂಬ ಅಭಿಯಾನ ಮೂಲಕವಾಗಿ ಹುಬ್ಬಳ್ಳಿ ಪೊಲೀಸರು ಪರಿಸರ ಕಾಳಜಿ ಮೆರೆದಿದ್ದಾರೆ.

    ಕ್ರೈಂಗಳಿಗೆ ಕಡಿವಾಣ ಹಾಕಲು ಶ್ರಮಿಸುತ್ತಿದ್ದ ಪೊಲೀಸ್ ಇಲಾಖೆ ಈಗ ಮತ್ತೊಂದು ಸಾಮಾಜಿಕ ಜವಾಬ್ದಾರಿಗೆ ಮುಂದಾಗಿದೆ. ಹುಬ್ಬಳ್ಳಿ ಪೊಲೀಸರು ಈಗ ಪರಿಸರ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಬೀಟ್ ಗೊಂದು ಮರ ಅಂತ ಗೋಕುಲ್ ಪೊಲೀಸರು ಅಭಿಯಾನ ಆರಂಭಿಸಿದ್ದು ಪೊಲೀಸರ ಪರಸರ ಪ್ರೇಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಸಾಕಷ್ಟು ಜನಮನ್ನಣೆ ಪಡೆದಿರುವ ವಿಭಾಗವಾಗಿದೆ. ಈಗ ಹುಬ್ಬಳ್ಳಿ- ಧಾರವಾಡ ಕಮೀಷನರೇಟ್ ಪರಿಸರ ಕಾಳಜಿ ಮೆರೆಯುತ್ತಿದೆ.

    ಹುಬ್ಬಳ್ಳಿ, ಧಾರವಾಡ ಪೊಲೀಸ್ ಕಮಿಷನರೇಟ್‍ನ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಆಯೋಜಿಸಿರುವ ಬೀಟ್‍ಗೊಂದು ಮರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಗೋಕುಲ್ ಠಾಣಿ ಇನ್‍ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಅವರ ನೇತೃತ್ವದಲ್ಲಿ ಕೊಲ್ಲೂರು ಲೇಔಟ್ ಹಾಗೂ ಅಕ್ಷಯ ಕಾಲನಿಯಲ್ಲಿ ಸಸಿ ನೆಡುವ ಮೂಲಕವಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.

    ಮನುಷ್ಯ ಮಾಡಿದ ತಪ್ಪಿಗೆ ಕೊರೊನಾದಂತ ರೋಗಗಳು ಇದರಿಂದ ಸೃಷ್ಟಿಯಾಗುತ್ತಿವೆ. ನಿಸರ್ಗದ ಪರಿಸ್ಥಿತಿ ಬಿಗಡಾಯಿಸಿ, ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನೂ ಖರೀದಿಸಬೇಕಾದ ದುಸ್ಥಿತಿ ಬಂದಿದೆ. ನಿಸರ್ಗದತ್ತವಾದ ಸಸ್ಯ ಸಂಪತ್ತಿನ ಮೂಲಕ ಕೊಡುಗೆಯಾಗಿ ಕೊಟ್ಟಿರುವ ಆಮ್ಲಜನಕವನ್ನು ಸರಿಯಾಗಿ ಬಳಸಿಕೊಂಡು, ಉಳಿಸಿಕೊಂಡು ಹೋಗಬೇಕು ಎಂಬ ಸದುದ್ದೇಶದಿಂದ ಈ ಯೋಜನೆಯನ್ನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ಕೈಗೆತ್ತಿಕೊಂಡಿದೆ. ಇದನ್ನೂ ಓದಿ:  ಡಾನ್ಸರ್ಸ್ ಕಷ್ಟಕ್ಕೆ ನಿಂತ ನಿಖಿಲ್ ಕುಮಾರಸ್ವಾಮಿ

    ಠಾಣೆಯ 68 ಬೀಟ್‍ನಲ್ಲಿ 68 ಸಸಿ ನೆಟ್ಟು ಪೋಷಿಸಲಾಗುವುದು. ಅದಕ್ಕೆ ಪೊಲೀಸ್ ಮರ ಎಂದು ನಾಮಕರಣ ಮಾಡಲಾಗಿದ್ದು, ಇದಕ್ಕೆ ವಿವಿಧ ಸಂಘ ಸಂಸ್ಥೆಗಳು, ಸ್ಥಳೀಯರು ಕೈಜೋಡಿಸಿರುವುದು ವಿಶೇಷವಾಗಿದೆ.