Tag: ಪರಿಸರವಾದಿ

  • ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಚಾಮರಾಜನಗರ: ಸಾಮಾನ್ಯವಾಗಿ ಮದುವೆಯಲ್ಲಿ ಬಂದ ಅತಿಥಿಗಳಿಗೆ ತಾಂಬೂಲದ ಜೊತೆ ಉಡುಗೊರೆಗಳನ್ನು ಕೊಡುವುದು ವಾಡಿಕೆ. ಆದರೆ ಕೊಳ್ಳೇಗಾಲದಲ್ಲಿ ಮದುವೆಯಲ್ಲಿ ಬಂದ ಅತಿಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಗಿಡಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಹಸಿರೇ ಉಸಿರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪರಿಸರವಾದಿ ಕೃಷ್ಣಮೂರ್ತಿ ಅವರು ಕಳೆದ ಒಂದು ದಶಕದಿಂದ ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಮರಗಳ ಹನನ, ಅಕ್ರಮ ಮರಳು ಸಾಗಾಣಿಕೆ, ಪ್ರಾಣಿಗಳ ಬೇಟೆ, ಮರಗಳ್ಳತನ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ತಮ್ಮ ಮಗಳ ಮದುವೆಯಲ್ಲೂ ಪರಿಸರ ಕಾಳಜಿ ಮೆರೆದಿದ್ದಾರೆ.

    ಕೃಷ್ಣಮೂರ್ತಿ ತಮ್ಮ ಮಗಳ ಮದುವೆಗೆ ಬಂದ ಅತಿಥಿಗಳಿಗೆ ಹಾಗು ಬಂಧು- ಬಾಂಧವರಿಗೆ ತಟ್ಟೆ, ಲೋಟ ಮತ್ತಿತರ ಉಡುಗೊರೆ ಬದಲಿಗೆ ಗಿಡಗಳನ್ನು ನೀಡಿದರೆ ಹೇಗೆ ಎಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

    ಕೊಳ್ಳೇಗಾಲದಲ್ಲಿ ನಡೆದ ತಮ್ಮ ಮಗಳು ಕಾವೇರಿಯ ಮದುವೆಗೆ ಬಂದ ಅತಿಥಿಗಳಿಗೆಲ್ಲಾ ಐದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೀಡುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಮಾವು, ಬೇವು, ನೇರಳೆ, ಸೀಬೆ, ನಿಂಬೆ, ಸಪೋಟ, ಹೊಂಗೆ ಮತ್ತಿತರ ಜಾತಿಯ ಗಿಡಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

    ಕೃಷ್ಣಮೂರ್ತಿ ಅವರ ಈ ಕಾಳಜಿಗೆ ಅರಣ್ಯ ಇಲಾಖೆಯೂ ಕೈಜೋಡಿಸಿತ್ತು. ಜೊತೆಗೆ ಮದುವೆಯಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ರೋಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಹಾಕಲಾಗಿತ್ತು. ಈ ವಿವಾಹ ಮಹೋತ್ಸವಕ್ಕೆ ಬಂದ ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇದೊಂದು ವಿಭಿನ್ನ ಪ್ರಯತ್ನವಾಗಿತ್ತು.

  • ಸಚಿವ ಜಾರ್ಜ್‌ಗೆ ಶುರುವಾಯ್ತು ಹೊಸ ಕ್ರೇಜ್

    ಸಚಿವ ಜಾರ್ಜ್‌ಗೆ ಶುರುವಾಯ್ತು ಹೊಸ ಕ್ರೇಜ್

    – ಸಚಿವರ ಕ್ರೇಜ್‍ನಿಂದ ಪಕ್ಷಿಗಳಿಗೆ ಆಪತ್ತು

    ಬೆಂಗಳೂರು: ಸಚಿವ ಜಾರ್ಜ್ ಅವರಿಗೆ ಈಗ ಹೊಸ ರೇಸ್ ಕ್ರೇಜ್ ಶುರುವಾಗಿದೆ. ಅದುವೇ ಡ್ರೋಣ್ ರೇಸ್ ಕ್ರೇಜ್. ಇದೇ 29 ರಂದು ಸತತ ಮೂರು ದಿನಗಳ ಕಾಲ ಅರಮನೆ ಮೈದಾನದಂಗಳದಲ್ಲಿ ಡ್ರೋಣ್ ರೇಸ್ ನಡೆಯಲಿದೆ.

    ಡಿ.1ರಿಂದ ವಾಣಿಜ್ಯ ಉದ್ದೇಶಕ್ಕೆ ಡ್ರೋಣ್ ಬಳಕೆಗೆ ಕೇಂದ್ರ ಅನುಮತಿ ನೀಡಿದ್ದು, ಇದೇ ಸಂಭ್ರಮದ ಹೆಸರಲ್ಲಿ ಬೆಂಗಳೂರಿನ ಒಪನ್ ಗ್ರೌಂಡ್‍ನಲ್ಲಿ ಡ್ರೋಣ್ ರೇಸ್ ನಡೆಯಲಿದೆ. 3 ದಿನಗಳ ರೇಸ್‍ನಲ್ಲಿ 30 ಡ್ರೋಣ್ ತಯಾರಿಕಾ ಕಂಪನಿಗಳು ಭಾಗಿಯಾಗಲಿವೆ. ಆದ್ರೆ ಸಚಿವ ಕೆ .ಜೆ ಜಾರ್ಜ್ ಅವರ ಡ್ರೋಣ್ ರೇಸ್ ಕುರಿತು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಡ್ರೋಣ್ ಹಾರಾಟದಿಂದ ಬೆಂಗಳೂರಿನ ಅಪರೂಪದ ಪಕ್ಷಿಗಳು ಪ್ರಾಣ ಕಳೆದುಕೊಳ್ಳಲಿದೆ. ಅಲ್ಲದೇ ಪಕ್ಷಿಗಳು ಮೈಗ್ರೇಟ್ ಆಗಲಿದೆ. ಹೀಗಾಗಿ ಈ ರೇಸ್ ನಡೆಯಬಾರದು ಅಂತ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ರೇಸ್‍ಗೆ ತಡೆಯೊಡ್ಡುವಂತೆ ಅರಣ್ಯ ಇಲಾಖೆಗೆ ದೂರು ಕೊಡಲು ಪರಿಸರವಾದಿಗಳು ಮುಂದಾಗಿದ್ದಾರೆ. ತೆರೆದ ಮೈದಾನದಲ್ಲಿ ಈ ರೀತಿ ಮಾಡೋದು ಪಕ್ಷಿ ಸಂಕುಲಕ್ಕೆ ತೊಂದರೆಯಾಗಲಿದೆ. ಅಲ್ಲದೇ ಅರಮನೆ ಮೈದಾನದ ಸುತ್ತಮುತ್ತ ಅಪರೂಪದ ಪಕ್ಷಿಗಳಿವೆ. ಇಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿಕೊಂಡಿರೋದ್ರಿಂದ ಸಮಸ್ಯೆ ಎದುರಾಗಲಿದೆ ಅಂತಾ ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ ಅಂತ ಪರಿಸರವಾದಿ ರಾಜೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 3 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದ ಪಬ್ಲಿಕ್ ಹೀರೋ ಲಕ್ಷ್ಮಣ್ ಇನ್ನಿಲ್ಲ

    3 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದ ಪಬ್ಲಿಕ್ ಹೀರೋ ಲಕ್ಷ್ಮಣ್ ಇನ್ನಿಲ್ಲ

    ಬೆಂಗಳೂರು: ಶಿಕ್ಷಕ, ರಂಗಕರ್ಮಿ ಪರಿಸರವಾದಿಯಾಗಿ ಗುರಿತಿಸಿಕೊಂಡಿದ್ದ ಪಬ್ಲಿಕ್ ಹೀರೋ ಲಕ್ಷ್ಮಣ್ ವಿಧಿವಶರಾಗಿದ್ದಾರೆ.

    ಬ್ರೇನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಣ್, ಮಂಗಳವಾರ ರಾತ್ರಿ ಉತ್ತರಹಳ್ಳಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಮೂಲಕ ಲಕ್ಷ್ಮಣ್, ಪಬ್ಲಿಕ್ ಹೀರೋ ಕೂಡ ಆಗಿದ್ದರು.

    ಲಕ್ಷ್ಮಣ್ ಅವರು 2013 ರಲ್ಲಿ ಉತ್ತಮ ಶಿಕ್ಷಕ ಎಂದು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. 2015ರಲ್ಲಿ ರಾಜ್ಯ ಸರ್ಕಾರದ ಪರಿಸರ ಪ್ರಶಸ್ತಿ ಸಹ ಇವರಿಗೆ ಲಭಿಸಿತ್ತು. ಪರಿಸರಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರ, ನಾಟಕ ಅಲ್ಲದೇ ಮಕ್ಕಳ ಸಿನಿಮಾ ಕೂಡ ನಿರ್ದೇಶನ ಮಾಡಿದ್ದರು.

    https://www.youtube.com/watch?v=b_gomj5VZ8k