Tag: ಪರಿಷತ್ ಚುನಾವಣೆ

  • ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ; ಮೈತ್ರಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಗೆಲುವು

    ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ; ಮೈತ್ರಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಗೆಲುವು

    – ಸಿಎಂ ತವರಲ್ಲಿ ಕಾಂಗ್ರೆಸ್‌ ಧೂಳೀಪಟ

    ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ (South Teachers Constituency) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಹೀನಾಯ ಸೋಲನುಭವಿಸಿದ್ದು, ಸಿಎಂಗೆ ಮತ್ತೊಮ್ಮೆ ಮುಖಭಂಗವಾಗಿದೆ. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ನಗೆ ಬೀರಿದ್ದಾರೆ.

    4,622 ಮತಗಳ ಭಾರಿ ಅಂತರದಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ವಿವೇಕಾನಂದ ಗೆದ್ದಿದ್ದಾರೆ. ವಾಟಾಳ್ ನಾಗರಾಜ್‌ಗೆ ಕೇವಲ 84 ಮತಗಳು ಸಿಕ್ಕಿವೆ. 1,049 ಮತಗಳು ಅಸಿಂಧುವಾಗಿದೆ. ಇದನ್ನೂ ಓದಿ: ವಿಧಾನ ಪರಿಷತ್‌ ಚುನಾವಣೆ – 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

    ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಧೂಳಿಪಟವಾಗಿದೆ. ಮೊನ್ನೆ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯಕವಾಗಿ ಸೋಲು ಕಂಡಿತ್ತು. ಇಂದು ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಸೋತಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿದ್ದ ಜೆಡಿಎಸ್‌ನ (JDS) ಕೆ.ವಿವೇಕಾನಂದಗೆ ಭರ್ಜರಿ ಗೆಲುವು ಸಿಕ್ಕಿದೆ.

    ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಮೈತ್ರಿ ಪಕ್ಷ ಗೆಲವು ದಾಖಲಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಗೆಲುವಿನ ನಾಗಾಲೋಟಕ್ಕೆ ಮೈತ್ರಿ ಅಭ್ಯರ್ಥಿ ಬ್ರೇಕ್‌ ಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದರೋಡೆಕೋರರ ನಾಯಕ: ಛಲವಾದಿ ನಾರಾಯಣಸ್ವಾಮಿ

    ಸತತ ನಾಲ್ಕು ಬಾರಿ ಮರಿತಿಬ್ಬೇಗೌಡ ಗೆದ್ದಿದ್ದರು. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದು ನಂತರದ ದಿನಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದರು.

  • ಹೈಕಮಾಂಡ್ ಗಮನ ಸೆಳೆಯಲು ಕೆಜಿಎಫ್ ಬಾಬು ಹೊಸ ಪ್ಲ್ಯಾನ್!

    ಹೈಕಮಾಂಡ್ ಗಮನ ಸೆಳೆಯಲು ಕೆಜಿಎಫ್ ಬಾಬು ಹೊಸ ಪ್ಲ್ಯಾನ್!

    ನವದೆಹಲಿ: ಕಳೆದ ಬಾರಿ ಪರಿಷತ್ ಚುನಾವಣೆಯಲ್ಲಿ ಸೋಲನ್ನಪ್ಪಿದ್ದ ಕಾಂಗ್ರೆಸ್ ನಾಯಕ ಯೂಸುಫ್ ಷರಿಫ್ ಅಲಿಯಾಸ್ ಕೆಜಿಎಫ್ ಬಾಬು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರ ಗಮನ ಸೆಳೆಯುವ ಮೂಲಕ ಟಿಕೆಟ್ ಪಡೆಯಲು ಹೊಸ ತಂತ್ರ ಮಾಡಿದ್ದಾರೆ.

    2023ರ ವಿಧಾನಸಭೆ ಚುನಾವಣೆಗೆ ಚಿಕ್ಕಪೇಟೆಯಿಂದ ಸ್ಪರ್ಧಿಸಲು ಕೆಜಿಎಫ್ ಬಾಬು ತಯಾರಿ ಆರಂಭಿಸಿದ್ದಾರೆ. ಇದಕ್ಕಾಗಿ 350 ಕೋಟಿ ಹಣವನ್ನು ಕ್ಷೇತ್ರಕ್ಕೆ ಖರ್ಚು ಮಾಡಲು ನಿರ್ಧರಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಬೈಕ್, ಉಚಿತ ಮನೆ, ಕ್ಷೇತ್ರದಲ್ಲಿನ ಪ್ರತಿ ಕುಟುಂಬಕ್ಕೆ 5,000 ರೂಪಾಯಿ ಚೆಕ್ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ದಲಿತನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮದ ಮುಖ್ಯಸ್ಥ – ಬಂಧನ

    ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಅವರಿಗೆ ಚಿಕ್ಕಪೇಟೆಯಿಂದ ಟಿಕೆಟ್ ಸಿಗುವುದು ಇನ್ನು ಖಚಿತವಾಗಿಲ್ಲ. ರಾಜ್ಯ ನಾಯಕರ ಮುಂದೆ ಟಿಕೆಟ್‍ಗಾಗಿ ಮನವಿ ಮಾಡಿದ್ದು ಕೆಲವು ನಾಯಕರಿಂದ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಈ ಭರವಸೆಯನ್ನೇ ನಂಬಿ ಕೂರದ ಕೆಜಿಎಫ್ ಬಾಬು ಈಗ ಹೈಕಮಾಂಡ್ ಗಮನ ಸೆಳೆಯಲು ಪ್ಲ್ಯಾನ್ ಮಾಡಿದ್ದಾರೆ.

    Congress

    ಕೆಜಿಎಫ್ ಬಾಬು ಈಗ ತಾವು ಚಿಕ್ಕಪೇಟೆ ಕ್ಷೇತ್ರಕ್ಕೆ ಮಾಡುತ್ತಿರುವ ಕೆಲಸಗಳನ್ನು ವಿವರಿಸುವ ಫ್ಲೆಕ್ಸ್‌ಗಳನ್ನು ದೆಹಲಿಯ ಎಐಸಿಸಿ ಕಚೇರಿಯ ಮುಂಭಾಗದಲ್ಲಿ ಅಳವಡಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಕಾಂಪೌಂಡ್‍ಗೆ ಎರಡು ಹಾಗೂ ಕಚೇರಿಯ ಮುಖ್ಯದ್ವಾರಕ್ಕೆ ಅಭಿಮುಖವಾಗಿ ಮತ್ತೊಂದು ದೊಡ್ಡ ಫ್ಲೆಕ್ಸ್‌ ಹಾಕುವ ಮೂಲಕ ದೆಹಲಿ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ಮಾಂಸಾಹಾರ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ : ಸಿದ್ದರಾಮಯ್ಯ ಪ್ರಶ್ನೆ

    ದೆಹಲಿಯಲ್ಲಿರುವ ಎಐಸಿಸಿ ಕಚೇರಿಗೆ ನಿತ್ಯ ಹಲವು ಪ್ರಮುಖ ನಾಯಕರು ಆಗಮಿಸುತ್ತಾರೆ. ಈ ಫ್ಲೆಕ್ಸ್‌ಗಳನ್ನು ಇಲ್ಲಿ ಅಳವಡಿಸುವುದರಿಂದ ತಮ್ಮ ಸೇವೆ ದೆಹಲಿ ನಾಯಕರವರೆಗೂ ತಲುಪಬಹುದು ಎಂದು ಅವರು ಲೆಕ್ಕಚಾರ ಹಾಕಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುತ್ರನಿಗೆ ಕೈ ತಪ್ಪಿದ ಟಿಕೆಟ್‌ – ಮೌನಕ್ಕೆ ಜಾರಿದ ಯಡಿಯೂರಪ್ಪ

    ಪುತ್ರನಿಗೆ ಕೈ ತಪ್ಪಿದ ಟಿಕೆಟ್‌ – ಮೌನಕ್ಕೆ ಜಾರಿದ ಯಡಿಯೂರಪ್ಪ

    ಬೆಂಗಳೂರು: ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈತಪ್ಪಿದ ನಂತರ ಯಡಿಯೂರಪ್ಪ ಮೌನ ವಹಿಸಿರುವುದು ಬಿಜೆಪಿಯನ್ನು ಕಂಗೆಡಿಸಿದೆ.

    ಗುರುವಾರ ಬೆಳಗಾವಿ ಕಾರ್ಯಕ್ರಮಕ್ಕೆ ಗೈರಾಗಿದ್ದ ಬಿಎಸ್‍ವೈ, ಮುಂದಿನ 10 ದಿನ ವಿಶ್ರಾಂತಿಯಲ್ಲಿ ಇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಶೇ.87 ಮಂದಿಗೆ ಭಾರತದ ಪೌರತ್ವ 

    ಇದು ಪರಿಷತ್ ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರುವ ಸಂಭವ ಇದೆ ಅಂತಾ ಹೇಳಲಾಗ್ತಿದೆ. ಅತ್ತ ಬೆಳಗಾವಿ ಬಿಜೆಪಿಯಲ್ಲಿ ಬಣ ಜಗಳ ಜೋರಾಗಿದೆ. ಎಂಎಲ್‍ಸಿ ಲಖನ್ ಜಾರಕಿಹೊಳಿ ಬಿಜೆಪಿ ಬೆಂಬಲಿಸಲು ಸಿದ್ಧರಿದ್ದರೂ, ನಮಗೆ ಅವರ ಬೆಂಬಲ ಬೇಕಿಲ್ಲ ಎಂದು ಸಚಿವ ಉಮೇಶ್ ಕತ್ತಿ ಬಹಿರಂಗವಾಗಿ ಘೋಷಿಸಿದ್ದಾರೆ.

    ವಿಜಯೇಂದ್ರಗೆ ಟಿಕೆಟ್ ನೀಡದ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ.

  • ಉತ್ತರ ಪ್ರದೇಶ ಪರಿಷತ್‌ ಚುನಾವಣೆ : ಬಿಜೆಪಿ ಜಯಭೇರಿ – ಶೂನ್ಯ ಸುತ್ತಿದ ಎಸ್‌ಪಿ, ಬಿಎಸ್‌ಪಿ

    ಉತ್ತರ ಪ್ರದೇಶ ಪರಿಷತ್‌ ಚುನಾವಣೆ : ಬಿಜೆಪಿ ಜಯಭೇರಿ – ಶೂನ್ಯ ಸುತ್ತಿದ ಎಸ್‌ಪಿ, ಬಿಎಸ್‌ಪಿ

    ಲಕ್ನೋ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಗೆದ್ದು ಅಧಿಕಾರಕ್ಕೆ ಏರಿದ ಬಿಜೆಪಿ ಈಗ ವಿಧಾನ ಪರಿಷತ್‌ ಚುನಾವಣೆಯಲ್ಲೂ ಭರ್ಜರಿ ಜಯಗಳಿಸಿದೆ.

    ಒಟ್ಟು 36 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 33, ಪಕ್ಷೇತರ 2, ಜೆಎಸ್‌ಡಿ ಒಂದು ಸ್ಥಾನದಲ್ಲಿ ಜಯಗಳಿಸಿದೆ. ವಿರೋಧ ಪಕ್ಷವಾದ ಎಸ್‌ಪಿ ಜೊತೆ ಬಿಎಸ್‌ಪಿ, ಕಾಂಗ್ರೆಸ್‌ ಶೂನ್ಯ ಸಂಪಾದಿಸಿದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಪತ್ರಕರ್ತನಿಗೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ಬಿಜೆಪಿ ಜಯಗಳಿಸಿದ್ದರೂ ವಾರಣಾಸಿ ಕ್ಷೇತ್ರದಲ್ಲಿ ಸೋತಿದೆ. ಜೈಲಿನಲ್ಲಿರುವ ಮಾಫಿಯಾ ಡಾನ್‌ ಬ್ರಿಜೇಶ್‌ ಸಿಂಗ್‌ ಪತ್ನಿ ಅನುಪಮಾ ಸಿಂಗ್‌ ಸತತ ಎರಡನೇ ಬಾರಿ ಜಯಗಳಿಸಿದ್ದಾರೆ. ಅನುಪಮಾ ಸಿಂಗ್‌ 4,234 ಮತಗಳನ್ನು ಪಡೆದರೆ ಎಸ್‌ಪಿಯ ಉಮೇಶ್‌ ಯಾದವ್‌ 345 ಮತ ಪಡೆದಿದ್ದಾರೆ. ಬಿಜೆಪಿ ಸುಧಾಮ ಪಾಟೇಲ್‌ 170 ಮತಗಳನ್ನು ಪಡೆದರು. 1998ರಿಂದ ಬ್ರಿಜೇಶ್‌ ಕುಟುಂಬ ಈ ಕ್ಷೇತ್ರವನ್ನು ತನ್ನ ಬಳಿಯೇ ಇರಿಸಿಕೊಂಡಿದೆ. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು

  • ಪರಿಷತ್‌ ಫಲಿತಾಂಶ – ಡಿಕೆಶಿಗೆ ಮುನ್ನಡೆ, ಸಿದ್ದರಾಮಯ್ಯಗೆ ಹಿನ್ನಡೆ

    ಪರಿಷತ್‌ ಫಲಿತಾಂಶ – ಡಿಕೆಶಿಗೆ ಮುನ್ನಡೆ, ಸಿದ್ದರಾಮಯ್ಯಗೆ ಹಿನ್ನಡೆ

    ಬೆಂಗಳೂರು: ವಿಧಾನ ಪರಿಷತ್ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ ಪಾಳೆಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಯಾರಿಗೆ ಹಿನ್ನಡೆ? ಯಾರಿಗೆ ಮುನ್ನಡೆ ಎಂಬ ಚರ್ಚೆ ಆರಂಭವಾಗಿದೆ.

    ಹೌದು. ಪಕ್ಷದ ಅಭ್ಯರ್ಥಿಗಳ ಪೈಕಿ ಯಾರ ಬೆಂಬಲಿಗರು ಗೆದ್ದರು.? ಯಾರ ಕೈ ಮೇಲಾಯಿತು ಎಂಬ ಚರ್ಚೆಯಲ್ಲಿ ಡಿಕೆಶಿ ಬಣಕ್ಕೆ ಮುನ್ನಡೆ ಸಿಕ್ಕಿದೆ. ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿಕೊಂಡ ಕೈ ನಾಯಕರಲ್ಲಿ ಡಿಕೆಶಿಗೆ ಮೇಲುಗೈ ಸಾಧಿಸಿದರೆ ತಮ್ಮ ಆಪ್ತರ ಸೋಲಿನಿಂದಾಗಿ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

    ತಮ್ಮ ಆಪ್ತರಿಗೆ ಬೆಳಗಾವಿ, ಮಂಡ್ಯ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಶಿವಕುಮಾರ್ ಟಿಕೆಟ್‌ ನೀಡಿದ್ದರು. ನಾಲ್ವರು ಆಪ್ತರು ಗೆದ್ದಿದ್ದು ಡಿಕೆಶಿಗೆ ಬಲ ಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಗೆಲುವು – ಕೋರ್ಟ್‌ ಮೊರೆ ಹೋಗಲು ಮುಂದಾದ ಕಾಂಗ್ರೆಸ್‌

    ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರಿನಲ್ಲಿ ತಮ್ಮ ಆಪ್ತರಿಗೆ ಸಿದ್ದರಾಮಯ್ಯ ಟಿಕೆಟ್‌ ನೀಡಿದ್ದರು. ಮೈಸೂರು ಹೊರತುಪಡಿಸಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸೋಲಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬೆಂಬಲಿಗರ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಡಿಕೆಶಿಗೆ ಮೇಲುಗೈ ಸಿಕ್ಕಿದೆ.

  • 1,743 ಕೋಟಿ ಆಸ್ತಿಯ ಒಡೆಯ ಕೆಜಿಎಫ್‌ ಬಾಬುಗೆ ಸೋಲು

    1,743 ಕೋಟಿ ಆಸ್ತಿಯ ಒಡೆಯ ಕೆಜಿಎಫ್‌ ಬಾಬುಗೆ ಸೋಲು

    ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಾವಿರಾರು ಕೋಟಿ ಆದಾಯ ಘೋಷಿಸಿಕೊಂಡಿದ್ದ ಕೆಜಿಎಫ್‌ ಬಾಬು ಎಂದೇ ಪ್ರಸಿದ್ಧಿ ಪಡೆದಿದ್ದ ಯೂಸೂಫ್‌ ಷರೀಫ್‌ ಸೋಲನ್ನು ಅನುಭವಿಸಿದ್ದಾರೆ.

    ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಯೂಸೂಫ್‌ ಷರೀಫ್‌ 830 ಮತಗಳನ್ನು ಪಡೆದರೆ ಬಿಜೆಪಿಯ ಗೋಪಿನಾಥ್ ರೆಡ್ಡಿ 1227 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಗೋಪಿನಾಥ್ ರೆಡ್ಡಿ 397 ಮತಗಳಿಂದ ಗೆದ್ದು ಮೇಲ್ಮನೆಗೆ ಆಯ್ಕೆ ಆಗಿದ್ದಾರೆ. ಈ ಮೂಲಕ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ.

    ಒಟ್ಟು 2,057 ಮತಗಳನ್ನು ಎಣಿಕೆ ಮಾಡಿದ್ದು 13 ಮತಗಳನ್ನು ತಿರಸ್ಕೃತಗೊಳಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಶೀನಪ್ಪಗೆ ಒಂದು ಮತ ಬಿದ್ದಿಲ್ಲ. 2015ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ.ನಾರಾಯಣ ಸ್ವಾಮಿಗೆ 1,384 ಮತಗಳು ಬಿದ್ದಿದ್ದರೆ ಬಿಜೆಪಿಯ ದೊಡ್ಡ ಬಸವರಾಜ 1,302 ಮತಗಳನ್ನು ಪಡೆದಿದ್ದರು.ಗೋಪಿನಾಥ್ ರೆಡ್ಡಿ 2009 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ 9 ಮತಗಳ ಅಂತರದಲ್ಲಿ ಸೋತಿದ್ದರು. 2015ರ ಚುನಾವಣೆಯಲ್ಲಿ ಗೋಪಿನಾಥ್ ರೆಡ್ಡಿಗೆ ಟಿಕೆಟ್ ಸಿಕ್ಕಿರಲಿಲ್ಲ.  ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು

    ನಾಮಪತ್ರ ಸಲ್ಲಿಸುವ ವೇಳೆ ಯೂಸೂಫ್‌ ಷರೀಫ್‌ ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದರು. ಇಲ್ಲಿಯವರೆಗೆ ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್‌ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. 2019 ರಲ್ಲಿ ನಡೆದ ಉಪಚುನಾವಣೆಯ ವೇಳೆ ಎಂಟಿಬಿ 1200 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಎಂಟಿಬಿ ಹೆಸರಿನಲ್ಲಿದ್ದ ʼಶ್ರೀಮಂತ ಅಭ್ಯರ್ಥಿʼ ದಾಖಲೆಯನ್ನು ಯೂಸುಫ್‌ ಷರೀಫ್‌ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

  • ತೀವ್ರ ಕುತೂಹಲ ಕೆರಳಿಸಿರುವ ಪರಿಷತ್ ಚುನಾವಣಾ ಫಲಿತಾಂಶ – ಇಂದು ಮತ ಏಣಿಕೆ

    ತೀವ್ರ ಕುತೂಹಲ ಕೆರಳಿಸಿರುವ ಪರಿಷತ್ ಚುನಾವಣಾ ಫಲಿತಾಂಶ – ಇಂದು ಮತ ಏಣಿಕೆ

    ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿರುವ ವಿಧಾನಪರಿಷತ್ ಚುನಾವಣಾ ಮತಗಳ ಏಣಿಕೆ ಕಾರ್ಯಕ್ಕೆ ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

    ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಡಿಸೆಂಬರ್ 10 ರಂದು ಚುನಾವಣೆ ನಡೆದಿತ್ತು. ಕಣದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಇಂದು ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಆರಂಭವಾಗಲಿದೆ. ಇಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಒಂದು ವೇಳೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಯಾವೊಬ್ಬ ಅಭ್ಯರ್ಥಿಯೂ ಗೆಲ್ಲದಿದ್ದಲ್ಲಿ, ಎರಡನೇ ಪ್ರಾಶಸ್ತ್ಯದ ಮತಗಳ ಏಣಿಕೆ ಮಾಡಬೇಕಾಗುತ್ತದೆ. ಈ ರೀತಿ ಆದಲ್ಲಿ ಮಾತ್ರ ಫಲಿತಾಂಶ ಪ್ರಕಟವಾಗುವುದು ತಡವಾಗಲಿದೆ. ಇದನ್ನೂ ಓದಿ: ‘ಪಾಕಿಸ್ತಾನಿ ಆಹಾರೋತ್ಸವ’ ಎಂದು ಬರೆದ ಫ್ಲೆಕ್ಸ್ ಕಿತ್ತೆಸೆದು ಬೆಂಕಿಯಲ್ಲಿ ಸುಟ್ಟ ಬಜರಂಗ ದಳ

    ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಬಿಜೆಪಿಯಿಂದ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜೆಡಿಯು ಅಭ್ಯರ್ಥಿಯಾಗಿ ಶಶಿಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರವಿ ಸ್ಪರ್ಧಿಸಿದ್ದರು. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಆ ಪಕ್ಷದ ಜನಪ್ರತಿನಿಧಿಗಳು ಯಾರಿಗೆ ತಮ್ಮ ಮತ ನೀಡಿದ್ದಾರೆ ಎಂಬುದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

    ಶಿವಮೊಗ್ಗ ಜಿಲ್ಲೆಯ 7 ಹಾಗೂ ದಾವಣಗೆರೆ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಒಳಗೊಂಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಶೇ.99.86ರಷ್ಟು ಮತದಾನವಾಗಿತ್ತು. ಮತ ಎಣಿಕೆ ಕಾರ್ಯ ನಡೆಯುವ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹ್ಯಾದ್ರಿ ಕಾಲೇಜಿನ ವ್ಯಾಪ್ತಿಯಲ್ಲಿ ಡಿಸೆಂಬರ್ 14 ರಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 15 ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ. ಇದನ್ನೂ ಓದಿ: ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ 5 ವರ್ಷದ ಪೋರಿ

  • ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

    ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

    ತುಮಕೂರು: ಬಿಜೆಪಿ ಕಾರ್ಯಕರ್ತರೊಬ್ಬರನ್ನು ಪಾವಗಡ ಹೊರವಲಯದ ಬಿ.ಕೆಹಳ್ಳಿ ಕ್ರಾಸ್ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಪ್ರಸನ್ನ ಕುಮಾರ್ (46) ಕೊಲೆಯಾದ ವ್ಯಕ್ತಿ. ಪಾವಗಡದಿಂದ ಸ್ವಗ್ರಾಮ ಅಪ್ಪಾಜಿಹಳ್ಳಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಪ್ರಸನ್ನಕುಮಾರ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

    ಮಂಗಳವಾರ ಸಂಜೆ 5 ಗಂಟೆಯ ವೇಳೆ ಕೃತ್ಯ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಭೇಟಿ ನೀಡಿದ್ದಾರೆ.

    ವಿಧಾನಪರಿಷತ್ ಚುನಾವಣೆ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿದ್ದ ಪ್ರಸನ್ನ ಕುಮಾರ್ ತಾಲೂಕು ಬಿಜೆಪಿಯಲ್ಲಿ ರೈತ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

  • ಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್‌ನಲ್ಲಿ ಕುದುರೆ ವ್ಯಾಪಾರ ಜೋರು

    ಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್‌ನಲ್ಲಿ ಕುದುರೆ ವ್ಯಾಪಾರ ಜೋರು

    ಬೀದರ್: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕುದುರೆ ವ್ಯಾಪಾರ ಜೋರಾಗಿದ್ದು, ಬಸವಕಲ್ಯಾಣ ತಾಲೂಕಿನ ಮುಚಳಂಬ ಗ್ರಾಮ ಪಂಚಾಯತಿಯ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳಿಗೆ ಕಾಂಗ್ರೆಸ್ ಮುಖಂಡರು ಹಣದ ಆಮಿಷ ಒಡ್ಡಿದ್ದಾರೆ.

    ಕಾಂಗ್ರೆಸ್ ಮುಖಂಡ ಆನಂದ್ ದೇವಪ್ಪ, ನರಶೆಟ್ಟಿ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಮುಚಳಂಬ ಗ್ರಾಮದ ಲಿಂಗೇಶ್ವರ ದೇವಸ್ಥಾನದಲ್ಲಿ ಕುದುರೆ ವ್ಯಾಪಾರ ಮಾಡಿದ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಮಕ್ಕಳನ್ನು ಪೋಷಕರು ಈ ರೀತಿ ಕಾಪಾಡಿಕೊಳ್ಳಿ

    ಬಿಜೆಪಿ ಒಂದು ಮತಕ್ಕೆ ಅಡ್ವಾನ್ಸ್ ಆಗಿ 10 ಸಾವಿರ ನೀಡುತ್ತಿದ್ದು, ನಾವು ಅಡ್ವಾನ್ಸ್ ಆಗಿ 20 ಸಾವಿರ ನೀಡುತ್ತೇವೆ. ಬಳಿಕ ಬಿಜೆಪಿ 60 ರಿಂದ 70 ಸಾವಿರ ಫಿಕ್ಸ್ ಮಾಡಿದೆ. ನಾವು ಇನ್ನು ಹೆಚ್ಚಿನ ಹಣ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಹಣದ ಆಮಿಷ ಹಾಕಿದ್ದಾರೆ.

    BJP - CONGRESS

    ಈ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸಹೋದರ ಭೀಮ್ ರಾವ್ ಬಿ ಪಾಟೀಲ್ ಸ್ಪರ್ಧೆ ಮಾಡಿದ್ದಾರೆ.

  • ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ: ದೇವೇಗೌಡ

    ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ: ದೇವೇಗೌಡ

    ತುಮಕೂರು: ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ಪರಿಷತ್ ಚುನಾವಣೆ ಹಿನ್ನೆಲೆ, ತುಮಕೂರು ತಾಲೂಕಿನ ಬಳಗೆರೆಯ ಶಾಸಕ ಗೌರಿಶಂಕರ್ ನಿವಾಸದಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮತ್ತು ಪರಿಷತ್ ಚುನಾವಣೆಯ ಬಗ್ಗೆ ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿಗೆ ಇರುವಂತಹ ಕಷ್ಟ ಒಂದು ಮಾತಲ್ಲಿ ಹೇಳೋಕೆ ಆಗಲ್ಲ. ಇಡೀ ಪ್ರಪಂಚವನ್ನ ಪೀಡಿಸ್ತಿರೋ ಕೊರೊನಾನ ಎದುರಿಸೋದು ಅಷ್ಟು ಸುಲಭ ಅಲ್ಲ. ನಮ್ಮ ದೇಶ ಚಿಕ್ಕ ದೇಶವಲ್ಲ, 130 ಕೋಟಿ ಜನಸಂಖ್ಯೆ ಇರೋ ದೇಶವಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಆರ್ಥಿಕ ಅವ್ಯವಹಾರ ಇದೆ ಎಂದು ಅಧಿಕೃತ ವಿರೋಧ ಪಕ್ಷ ಇದರ ಬಗ್ಗೆ ವ್ಯಾಖ್ಯಾನ ಮಾಡ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ರಸ್ತೆ ಗುಂಡಿ – ಎಎಪಿಯಿಂದ ಬೃಹತ್ ಸಹಿ ಸಂಗ್ರಹ ಅಭಿಯಾನ ಆರಂಭ

    ಎಂಎಲ್ ಸಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅನಿಲ್‍ಕುಮಾರ್ ಅವರನ್ನು ಸ್ಪರ್ಧೆಗೆ ನಿಲ್ಲಿಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಮತದಾರರನ್ನು ಭೇಟಿಯಾಗುತ್ತಿದ್ದೇವೆ. 7 ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲರೂ ಚುನಾವಣೆಯಲ್ಲಿ ಗೆಲ್ಲಲೇ ಬೇಕು. ಶಾಸಕರು, ಮಾಜಿ ಶಾಸಕರು, ಮುಖಂಡರು ಎಲ್ಲರು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ವಿಜಯಪುರದಲ್ಲಿ 890, ಗುಲ್ಬರ್ಗಾದಲ್ಲಿ ಸಾವಿರ ಚಿಲ್ಲರೆ ವೋಟ್ ಗಳಿವೆ. ಬೀದರ್ ನಲ್ಲಿ 490, ರಾಯಚೂರಿನಲ್ಲಿ 890 ವೋಟ್ ಗಳಿವೆ. ಧಾರವಾಡ, ಗದಗ, ಹಾವೇರಿಯಲ್ಲಿ ವೋಟ್ ಗಳಿವೆ. ಅಲ್ಲಿ ನಾವು ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ ಅವರಿಗೆ ಹೆಚ್ಚಿನ ಮತಗಳಿವೆ. ಭಾನುವಾರ ಸಭೆ ನಡೆಸಿ ಧಾರವಾಡ, ಗದಗ ಹಾವೇರಿಯಲ್ಲಿ ಮತಗಳನ್ನು ಯಾರಿಗೆ ಕೊಡಬೇಕು ಎಂದು ತಿಳಿಸುತ್ತೇವೆ ಎಂದು ಹೇಳಿದರು.

    ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ. ಇಲ್ಲಿ ಬಿಜೆಪಿ ಕಾಂಗ್ರೆಸ್ ಅವರು ಸತ್ಯವಂತರು ಎಂದು ಹೇಳೋರು ಇದ್ದರೆ ಚರ್ಚೆ ಮಾಡೋಣ. ಮಣ್ಣಿನಮಗ ಅಂತಾ ನನ್ನ ತಂದೆ ನನಗೆ ನಾಮಕರಣ ಮಾಡಿಲ್ಲ. ಯಾರು ನಾಮಕರಣ ಮಾಡಿದ್ರೋ ನನಗೆ ಗೊತ್ತಿಲ್ಲ. ಯಾರು ಹೇಳಿದ್ರೋ, ಯಾವಾಗ ಹೇಳಿದ್ರೋ ಗೊತ್ತಿಲ್ಲ. ಅದನ್ನ ಹೇಳಿಕೊಂಡು ಬರ್ತಿದ್ದಾರೆ, ಯಾರು ಅಂತಾ ಹುಡುಕಲಿ. ಹೀಗೆ ಹೇಳಿ ಅಂತಾ ನಾನು ಯಾರಿಗಾದರೂ ಹೇಳಿದ್ದೀನಾ. ಜನರಿಗೆ ನನ್ನ ಮೇಲೆ ಪ್ರೀತಿ ಹಾಗೂ ಹೋರಾಟದ ಮೇಲೆ ನಂಬಿಕೆಯಿಂದ ಹಾಗೆ ಕೂಗ್ತಾರೆ ಎಂದರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

    ಮಾಜಿ ಸಿಎಂ ಕುಮಾರಸ್ವಾಮಿ ಅವರು ಆ ಭಾಗದ ಮುಖಂಡರ ಸಭೆ ನಡೆಸಲಿದ್ದಾರೆ. ಯಾರಿಗೆ ಬೆಂಬಲ ನೀಡಬೇಕು ಎಂದು ಭಾನುವಾರ ತೀರ್ಮಾನ ಮಾಡುತ್ತೇವೆ. ತುಮಕೂರು ಜಿಲ್ಲೆಯ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಈ ಚುನಾವಣೆಯಲ್ಲಿ ಸ್ವಂತ ಶಕ್ತಿಯಿಂದ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.