Tag: ಪರಿಶಿಷ್ಟ ಪಂಗಡ

  • ಎಸ್‍ಟಿ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ರಮೇಶ್ ಜಾರಕಿಹೊಳಿ ಲಾಬಿ

    ಎಸ್‍ಟಿ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ರಮೇಶ್ ಜಾರಕಿಹೊಳಿ ಲಾಬಿ

    ನವದೆಹಲಿ: ಪರಿಶಿಷ್ಟ ಪಂಗಡ (ಎಸ್‍ಟಿ) ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡುಬೇಕು ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೋಳಿ ಹಾಗೂ ಅವರ ತಂಡವು ಒತ್ತಾಯಿಸಿದ್ದಾರೆ.

    ಸೋಮವಾರ ಸಚಿವ ರಮೇಶ್ ಜಾರಕಿಹೋಳಿ, ಪ್ರತಾಪ್ ಗೌಡ ಪಾಟೀಲ್, ರಹೀಂಖಾನ್, ಮಹೇಶ ಕಮತಗಿ, ಬಿ.ನಾಗೇಂದ್ರ ಸೇರಿ ಒಟ್ಟು ಎಂಟು ಜನ ಶಾಸಕರು ದೆಹಲಿಗೆ ತೆರಳಿದ್ದು, ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಹಿರಿಯ ನಾಯಕ ಅಹ್ಮದ್ ಪಟೇಲ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಲೋಕಸಭೆ ಚುನಾವಣೆ ದೃಷ್ಟಿಯಿಂದ ಎಸ್‍ಟಿ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದರು.

    ಆಷಾಢದ ಬಳಿಕ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿತ್ತು. ಹೀಗಾಗಿ ಅನೇಕ ಕೈ ನಾಯಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.