Tag: ಪರಿವರ್ತನಾ ಸಮಾವೇಶ

  • 2014 ರ ಚುನಾವಣೆ ವೇಳೆ ಮಾತನಾಡಿದ ಸ್ಥಳದಲ್ಲೇ ಮತ್ತೆ ಮೋದಿ ಭಾಷಣ – ಕಾರ್ಯಕ್ರಮದ ಹೈಲೈಟ್ಸ್ ಹೀಗಿದೆ

    2014 ರ ಚುನಾವಣೆ ವೇಳೆ ಮಾತನಾಡಿದ ಸ್ಥಳದಲ್ಲೇ ಮತ್ತೆ ಮೋದಿ ಭಾಷಣ – ಕಾರ್ಯಕ್ರಮದ ಹೈಲೈಟ್ಸ್ ಹೀಗಿದೆ

    ಬೆಂಗಳೂರು: 2014 ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲೇ ನಾಳೆಯ ಸಮಾವೇಶದಲ್ಲೂ ಭಾಷಣ ಮಾಡಲಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆ ಸಿದ್ಧತೆ ನಡೆಸುವ ವಿಚಾರವಾಗಿ ಆಡಳಿತ ಪಕ್ಷದ ವೈಫಲ್ಯಗಳನ್ನು ತಿಳಿಸುವ ಸಲುವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂದಾಳತ್ವದಲ್ಲಿ ಕೈಗೊಂಡಿದ್ದ ಪರಿವರ್ತನಾ ಯಾತ್ರೆ ನಾಳೆ ಮುಕ್ತಾಯವಾಗಲಿದೆ. ಯಾತ್ರೆ ಮುಕ್ತಾಯದ ಭಾಗವಾಗಿ ಅರಮನೆ ಮೈದಾನದಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಮೋದಿ ಅವರ ಆಗಮಿಸುತ್ತಿರುವುದರಿಂದ ಸಮಾವೇಶದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆಗಳಿವೆ.

    2014ರಲ್ಲಿ ಭಾಷಣ ಮಾಡಿದ ಸ್ಥಳ: ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಬೃಹತ್ ಸಮಾವೇಶಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಮೈದಾನ ಪಶ್ಚಿಮ ದಿಕ್ಕಿನಲ್ಲಿ ಪೂರ್ವಕ್ಕೆ ಅಭಿಮುಖವಾಗಿ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಮೋದಿ ಅವರಿಗೆ ಇದು ಅದೃಷ್ಟದ ಸ್ಥಳ ಎನ್ನಲಾಗಿದ್ದು, 2014 ರ ಚುನಾವಣೆ ವೇಳೆಯೂ ಪ್ರಧಾನಿಗಳು ಇಲ್ಲೇ ಭಾಷಣ ಮಾಡಿದ್ದರು.

    ವೇದಿಕೆ ನಿರ್ಮಾಣ ಮಾಡುವ ಜಾಗದಲ್ಲಿ ಭೂಮಿ ಪೂಜೆ ಮಾಡುವಾಗಲೂ ಸುದರ್ಶನ ಹೋಮ, ವಾಸ್ತು ಹೋಮ, ನವಗ್ರಹ ಹೋಮ ಹವನ ಮೊರೆ ಹೋಗಲಾಗಿತ್ತು. ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆಗಬಾರದೆಂದು ಹೋಮ ನಡೆಸಲಾಗಿದೆ. ನಾಳಿನ ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ ಮೋದಿ ಜೊತೆ ಹಿರಿಯರಿಗಷ್ಟೇ ಸ್ಥಾನ ಕಲ್ಪಿಸಲಾಗಿದೆ. ಇದರಲ್ಲಿ ಎಸ್.ಎಂ.ಕೃಷ್ಣ, ಶ್ರೀನಿವಾಸ್ ಪ್ರಸಾದ್ ಸೇರಿದಂತೆ 27 ಪ್ರಮುಖ ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    3,500 ಬಸ್: ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರಿಗೆ ವೇದಿಕೆಯ ಮುಂಭಾಗದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ 60 ಸಾವಿರ ಜನರನ್ನು ಸೇರಿಸಲು ರಾಜ್ಯ ಬಿಜೆಪಿ ಯೋಜನೆ ನಡೆಸಿದೆ. ರಾಜ್ಯದ ಸಾರಿಗೆ ಇಲಾಖೆಯಿಂದ ರಾಜ್ಯದ ವಿವಿಧಡೆಯಿಂದ ಆಗಮಿಸುವ ಕಾರ್ಯಕರ್ತರಿಗಾಗಿ ಸುಮಾರು 3,500 ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

    ಬೃಹತ್ ಪ್ರಮಾಣದಲ್ಲಿ ಜನರು ಅರಮನೆ ಮೈದಾನಕ್ಕೆ ಆಗಮಿಸುತ್ತಿರುವುದರಿಂದ ನಾಳೆ ಸಮಾವೇಶದ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಟ್ರಾಫಿಕ್ ನಿಯಂತ್ರಣಕ್ಕೆ 250 ಮಂದಿ ಬಿಜೆಪಿ ಪ್ರಬಂಧಕರ ನೇಮಕ ಮಾಡಲಾಗಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪ್ರಸಾರ ಮಾಡಲು 20 ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ.

    ಸಮಾವೇಶದಲ್ಲಿ ಮಾತನಾಡುವ ಪ್ರಧಾನಿ ಅವರು ಮಹದಾಯಿ ವಿಚಾರವನನ್ನು ಪ್ರಸ್ತಾಪ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾತ್ರ ಮೋದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾಷಣದ ವೇಳೆ ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಪರಿವರ್ತನಾ ಯಾತ್ರೆ ಮುಕ್ತಾಯದ ನಂತರ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಈ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುತ್ತದೆ.

    ಸಮಾವೇಶದಲ್ಲಿ ಭಾಗವಹಿಸುವ ಕಾರ್ಯಕರ್ತರಿಗಾಗಿ ಟೋಪಿ ಹಾಗೂ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಧ್ಯಾಹ್ನ ಬಾದುಶಾ, ಪಕೋಡಾ, ರೈಸ್ ಬಾತ್, ಮೊಸರನ್ನ 250 ಫುಡ್ ಕೌಂಟರ್ ಗಳಿಂದ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಸಮಾವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ರಾಜ್ಯ ಬಿಜೆಪಿ ನಾಯಕರಾದ ಸಂಸದ ಅನಂತಕುಮಾರ್, ಮಾಜಿ ಡಿಸಿಎಂ ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ 5 ತಂಡಗಳು ಕಾರ್ಯನಿರ್ವಹಿಸುತ್ತಿದೆ.

  • ಹಿಂದೂ ವ್ಯಾಖ್ಯಾನ ವಿವರಿಸಿ ಸಿಎಂಗೆ ಟಾಂಗ್ ಕೊಟ್ಟ ಯುಪಿ ಸಿಎಂ

    ಹಿಂದೂ ವ್ಯಾಖ್ಯಾನ ವಿವರಿಸಿ ಸಿಎಂಗೆ ಟಾಂಗ್ ಕೊಟ್ಟ ಯುಪಿ ಸಿಎಂ

    ಬೆಂಗಳೂರು: ನಾನೂ ಕೂಡ ಹಿಂದೂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಿಂದೂ ವ್ಯಾಖ್ಯಾನ ನೀಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

    ನಗರದ ಗೋವಿಂದರಾಜನಗರ ಬಿಜಿಎಸ್ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಹಿಂದೂ ಎನ್ನುವವರು ಗೋಹತ್ಯೆ ನಿಷೇಧ ಮಾಡಲಿ, ಹಿಂದೂ ಪದ್ಧತಿಯಲ್ಲಿ ಗೋಮಾಂಸ ತಿನ್ನಲ್ಲ, ಹಿಂದೂ ವ್ಯಾಖ್ಯಾನ ಗೊತ್ತಾ ಅಂತಾ ಖಾರವಾಗಿ ಪ್ರಶ್ನಿಸಿದರು.

    ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದ್ದು, ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

    ಹಿಂದುತ್ವ ಭಾರತೀಯ ಪದ್ದತಿಯಾಗಿದ್ದು, ಅದು ಯಾವುದೇ ಜಾತಿ, ಧರ್ಮದ ವಿಚಾರ ಅಲ್ಲ. ಹಿಂದುತ್ವ ಭಾರತದ ಜೀವಾಳ. ಅತ್ಯಂತ ಉತ್ಕೃಷ್ಟ ಜೀವನ ಹಿಂದುತ್ವ. ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲು ಮುಂದಾಗಿತ್ತು. ಆದರೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಕಾಂಗ್ರೆಸ್ ಈ ದೇಶದ ಸಮಸ್ಯೆ ಆಗಿದೆ, ಭ್ರಷ್ಟಾಚಾರದ ಕಾರಣಕ್ಕಾಗಿ, ವಿನಾಶಕಾರಿ ನೀತಿಗಳ ಕಾರಣಕ್ಕಾಗಿ ಅದು ಸಮಸ್ಯೆಯಾಗಿದೆ. ರಾಜ್ಯದಲ್ಲೂ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.

    ಕರ್ನಾಟಕದ ರೈತರಿಗಾಗಿ, ಬೆಂಗಳೂರಿನ ಅಭಿವೃದ್ಧಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಕೇಂದ್ರ ಬೆಂಗಳೂರಿನ ಅಭಿವೃದ್ಧಿಗೆ ಮೆಟ್ರೋ ಸೇರಿದಂತೆ ಅನೇಕ ಯೋಜನೆಗಳನ್ನು ಕೊಟ್ಟಿದೆ. ಆದರೆ ಯೋಜನೆ ಅನುಷ್ಟಾನ, ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಮೇಲೂ ಜವಾಬ್ದಾರಿ ಇದೆ. ಆದರೆ ಅಭಿವೃದ್ಧಿ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿಲ್ಲ ಟೀಕಿಸಿದರು.

    ಕರ್ನಾಟಕ ಭಜರಂಗಬಲಿಯ ಜನ್ಮಸ್ಥಾನ. ಕರ್ನಾಟಕ ರಾಮನ ರಾಜಧಾನಿಯಿದ್ದಂತೆ. ಗೋರಖ್ ನಾಥ್ ಪರಂಪರೆ ಕರ್ನಾಟಕದಲ್ಲಿಯೂ ಇದೆ. ಸ್ವತಃ ಧರ್ಮಸ್ಥಳ ಮಂಜುನಾಥನೇ ಇಲ್ಲಿ ಗೋರಖನಾಥನಾಗಿದ್ದಾರೆ. ಅದರ ಪರಂಪರೆ ಆದಿಚುಂಚನಗಿರಿ ಮಠದಲ್ಲೂ ಮುಂದುವರಿದಿದೆ ಎಂದು ಶ್ರೀ ಬಾಲಗಂಗಾಧರ ಸ್ವಾಮೀಜಿಗಳನ್ನ ಸ್ಮರಿಸಿದರು.

    ಪ್ರಸ್ತುತ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂ, ಬಿಜೆಪಿ ಕಾರ್ಯಕರ್ತರ ಕೊಲೆಗಳು ಆಗಿವೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ತ್ರಿವಳಿ ತಲಾಕ್ ಜಾರಿಗೆ ಕಾಂಗ್ರೆಸ್ ಅಡ್ಡಿ ಪಡಿಸುತ್ತಿದೆ. ಕಾಂಗ್ರೆಸ್‍ಗೆ ಮನುಕುಲದ ಹೆಣ್ಣು ಮಕ್ಕಳು ಗೌರವಯುತವಾಗಿ ಬದುಕುವುದು ಬೇಕಿಲ್ಲ ಎಂದು ಕಿಡಿಕಾರಿದರು.

    ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರು ಫುಲ್ ಫಿದಾ ಆಗಿದ್ದರು. ‘ಯೋಗಿ ಯೋಗಿ’ ಎಂಬ ಘೋಷಣೆ ಅಬ್ಬರಿಸಿತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ, ಕೇಂದ್ರ ಸಚಿವ ಆನಂತಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಇದಕ್ಕೂ ಮುನ್ನ ಕುಂಬಳಗೂಡಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು, ಬಿಜಿಎಸ್ ಇಂಟರ್ ನ್ಯಾಷಿನಲ್ ರೆಸಿಡೆನ್ಸಿಯಲ್ ಶಾಲೆಯನ್ನು ವೀಕ್ಷಿಸಿದರು. ನಂತರ ಶಾಲಾ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು.

    ಕುಂಬಳಗೂಡಿನ ಶಾಖಾ ಮಠದ ಬಳಿ ಯಾವುದೇ ಬಿಜೆಪಿ ನಾಯಕರು ಬರಲು ಅವಕಾಶ ನೀಡಿರಲಿಲ್ಲ. ಬಳಿಕ 10.30ರ ನಂತರ ಯೋಗಿ ಆದಿತ್ಯನಾಥ್ ಅವರು ವಿಜಯನಗರದ ಸಮಾವೇಶದಲ್ಲಿ ಭಾಗವಹಿಸಲು ತೆರಳಿದರು. ಸಮಾವೇಶದ ನಂತರ ವಿಜಯನಗರದ ಆದಿಚುಂಚನ ಗಿರಿ ಮಠಕ್ಕೆ ಭೇಟಿ ನೀಡಿದ್ದರು. ಯೋಗಿ ಅವರ ಆಗಮನ ಹಿನ್ನೆಲೆಯಲ್ಲಿ ಮಠದ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಮೂರು ಕೆಎಸ್ ಆರ್ ಪಿ ತುಕಡಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಯೋಗಿ ಆಗಮನ ಹಿನ್ನಲೆ ಮಠಕ್ಕೆ ಭಕ್ತರ ಪ್ರವೇಶ ನಿಷೇಧ ಮಾಡಲಾಗಿತ್ತು. ಕೆಲ ಕಾಲ ಮಠದಲ್ಲಿ ವಿಶ್ರಾಂತಿ ಪಡೆದ ಯೋಗಿ ಅದಿತ್ಯನಾಥ್ ಅವರು ನಂತರ ಮಠದಿಂದ ನೆರವಾಗಿ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದರು.

    ಯಾಕೆ ಯೋಗಿಗೆ ಮಣೆ?
    ಬಿಜೆಪಿ ಪಾಳೆಯದಲ್ಲಿ ಯೋಗಿ ಆದಿತ್ಯನಾಥ್ ಈಗ ಸ್ಟಾರ್ ಪ್ರಚಾರಕರಾಗಿದ್ದು ಉತ್ತರ ಪ್ರದೇಶ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತ್ತು. ಇದಾದ ಬಳಿಕ ಗುಜರಾತ್ ನಲ್ಲಿ ಯೋಗಿ ಭಾಷಣ ಮಾಡಿದ್ದು ಅಲ್ಲೂ ಯಶಸ್ಸು ಸಿಕ್ಕಿತ್ತು.

    ಗುಜರಾತ್ ಚುನಾವಣೆಯ ಒಟ್ಟು 182 ಕ್ಷೇತ್ರಗಳನ್ನು ಬಿಜೆಪಿ ಎ, ಬಿ, ಸಿ ಎಂದು ಮೂರು ಭಾಗಗಳಾಗಿ ವಿಂಗಡಿಸಿತ್ತು. ಜಯ ಸಿಗುವ ಕ್ಷೇತ್ರಗಳನ್ನು ಎ, ಗೆಲ್ಲಲು ಕಷ್ಟವಾಗಿರುವ ಕ್ಷೇತ್ರಗಳನ್ನು ಬಿ, ಗೆಲ್ಲಲು ಸಿಕ್ಕಾಪಟ್ಟೆ ಕಷ್ಟವಿದೆ ಎನ್ನುವ ಕ್ಷೇತ್ರಗಳನ್ನು ಸಿ ಗುಂಪಿಗೆ ಸೇರಿಸಿತ್ತು. ಬಿ ಮತ್ತು ಸಿ ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ಈ 35 ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ಪರಿಣಾಮ ಬಿ ಮತ್ತು ಸಿ ಗುಂಪಿನಲ್ಲಿದ್ದ ಒಟ್ಟು 35 ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ ಗೆಲುವು ಕಂಡಿತ್ತು. ಈ ಎಲ್ಲ ಕಾರಣಕ್ಕಾಗಿ ಗುಜರಾತ್ ತಂತ್ರವನ್ನೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲೂ ಬಳಸಲು ಮುಂದಾಗುತ್ತಿದ್ದು, ಯೋಗಿ ಆದಿತ್ಯನಾಥ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಮುಂದಾಗಿದೆ ಎನ್ನಲಾಗಿದೆ.

    https://www.youtube.com/watch?v=JOr6vyVKj94

  • ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಯ್ತು, ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಯೋಗಿ

    ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಯ್ತು, ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಯೋಗಿ

    ಬೆಂಗಳೂರು: ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಗಿದ್ದು ಮತ್ತೆ ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಲಿದ್ದಾರೆ.

    ಜನವರಿ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನಾ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಬೆಂಗಳೂರು ನಗರ ಕೇಂದ್ರಿತ ಪರಿವರ್ತನಾ ಸಮಾವೇಶ ಗೋವಿಂದರಾಜನಗರದಲ್ಲಿ ನಡೆಯಲಿದ್ದು, ಈ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಷಣ ಮಾಡಲಿದ್ದಾರೆ.

    ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ಪರಿವರ್ತನಾ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಬಳಿಕ ರಾಜ್ಯದ ಕಾಂಗ್ರೆಸ್ ನಾಯಕರು ಯೋಗಿಯನ್ನು ಟೀಕಿಸಿ ಹೇಳಿಕೆ ನೀಡಿದ್ದರು.

    ಯಾಕೆ ಯೋಗಿಗೆ ಮಣೆ?
    ಬಿಜೆಪಿ ಪಾಳೆಯದಲ್ಲಿ ಯೋಗಿ ಆದಿತ್ಯನಾಥ್ ಈಗ ಸ್ಟಾರ್ ಪ್ರಚಾರಕರಾಗಿದ್ದು ಉತ್ತರ ಪ್ರದೇಶ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತ್ತು. ಇದಾದ ಬಳಿಕ ಗುಜರಾತ್ ನಲ್ಲಿ ಯೋಗಿ ಭಾಷಣ ಮಾಡಿದ್ದು ಅಲ್ಲೂ ಯಶಸ್ಸು ಸಿಕ್ಕಿತ್ತು.

    ಗುಜರಾತ್ ಚುನಾವಣೆಯ ಒಟ್ಟು 182 ಕ್ಷೇತ್ರಗಳನ್ನು ಬಿಜೆಪಿ ಎ, ಬಿ, ಸಿ ಎಂದು ಮೂರು ಭಾಗಗಳಾಗಿ ವಿಂಗಡಿಸಿತ್ತು. ಜಯ ಸಿಗುವ ಕ್ಷೇತ್ರಗಳನ್ನು ಎ, ಗೆಲ್ಲಲು ಕಷ್ಟವಾಗಿರುವ ಕ್ಷೇತ್ರಗಳನ್ನು ಬಿ, ಗೆಲ್ಲಲು ಸಿಕ್ಕಾಪಟ್ಟೆ ಕಷ್ಟವಿದೆ ಎನ್ನುವ ಕ್ಷೇತ್ರಗಳನ್ನು ಸಿ ಗುಂಪಿಗೆ ಸೇರಿಸಿತ್ತು. ಬಿ ಮತ್ತು ಸಿ ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ಈ 35 ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ಪರಿಣಾಮ ಬಿ ಮತ್ತು ಸಿ ಗುಂಪಿನಲ್ಲಿದ್ದ ಒಟ್ಟು 35 ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ ಗೆಲುವು ಕಂಡಿತ್ತು. ಈ ಎಲ್ಲ ಕಾರಣಕ್ಕಾಗಿ ಗುಜರಾತ್ ತಂತ್ರವನ್ನೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲೂ ಬಳಸಲು ಮುಂದಾಗುತ್ತಿದ್ದು, ಯೋಗಿ ಆದಿತ್ಯನಾಥ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಮುಂದಾಗಿದೆ ಎನ್ನಲಾಗಿದೆ.

    ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಹೋದ ಬಳಿಕ ಕಾಂಗ್ರೆಸ್ #YogiInsultsKarnataka ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯನ್ನು ಟೀಕಿಸಿತ್ತು.

    https://youtu.be/c5Mb4OAwpa8