Tag: ಪರಿ

  • ಅನುಷ್ಕಾ ಶರ್ಮಾ ಪರಿ ಚಿತ್ರದ ಬಿಹೈಂಡ್ ದಿ ಸೀನ್ಸ್ ಫೋಟೋ ವೈರಲ್

    ಅನುಷ್ಕಾ ಶರ್ಮಾ ಪರಿ ಚಿತ್ರದ ಬಿಹೈಂಡ್ ದಿ ಸೀನ್ಸ್ ಫೋಟೋ ವೈರಲ್

    ಮುಂಬೈ: ಪರಿ ಸಿನಿಮಾದಲ್ಲಿ ಅನುಷ್ಕಾಗೆ ಮಾಡಿದ ಮೇಕಪ್ ನಿಜಕ್ಕೂ ಎಷ್ಟು ಅದ್ಭುತವಾಗಿದೆ ಎಂದು ಸಿನಿರಸಿಕರು ಹೊಗಳಿದ್ದಾರೆ. ಇದೀಗ ಅನುಷ್ಕಾ ಸೆಟ್‍ನಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳು ವೈರಲ್ ಆಗಿವೆ.

    ಬ್ರಿಟನ್ ಮೂಲದ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಪರಿ ಚಿತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್‍ನಲ್ಲಿ ಬರುವ ಹಾರರ್ ಚಿತ್ರಗಳಲ್ಲಿ ಮುಖ್ಯವಾಗಿ ಕಾಣುವುದು ಅಲ್ಲಿಯ ಕಲಾವಿದರ ಮೇಕಪ್. ಅವರು ಎಷ್ಟು ಚೆನ್ನಾಗಿ(ಭಯಂಕರವಾಗಿ) ಕಾಣಿಸುತ್ತಾರೋ ಅದೇ ರೀತಿ ಅವರ ಪಾತ್ರಗಳು ಸಹ ವಿಭಿನ್ನ ಮತ್ತು ಆಕರ್ಷಕವಾಗಿ ಕಾಣಿಸುತ್ತದೆ. ಇದೇ ರೀತಿಯ ಹೊಸ ಪ್ರಯತ್ನವನ್ನ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ತಮ್ಮ ಪರಿ ಚಿತ್ರದಲ್ಲಿ ಮಾಡಿದ್ದಾರೆ.

    ಚಿತ್ರದ ಕಥೆಯಲ್ಲಿ ಬರುವ ರುಖ್ಸಾನ ಮತ್ತು ಕಾಲಾಪೋರಿ ಪಾತ್ರಗಳು ವೀಕ್ಷಕರ ಎದೆ ಬಡಿತ ಹೆಚ್ಚಿಸಿದ್ದು, ಇವರ ಪಾತ್ರಕ್ಕೆ ತಕ್ಕಂತೆ ಬ್ರಿಟಿಷ್ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಅದ್ಭುತವಾಗಿ ಮೇಕಪ್ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಕಾಲಾಪೋರಿ ಪಾತ್ರಕ್ಕೆ ಪ್ರೋಸ್ಥೆಟಿಕ್ಸ್ (ಕೃತಕ ಚರ್ಮ ಮತ್ತು ಅಂಗಗಳು) ಬಳಸಿದ್ದು, ಇದರಿಂದ ಕಾಲಾಪೋರಿ ಪಾತ್ರಕ್ಕೆ ಜೀವ ಬಂದಿದೆ.

    ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗೆಡೆ ಮಾಡಿದ್ದು, ಇದು ಮುಖವಾಡ ಅಲ್ಲ, ನೈಜ ಮತ್ತು ಸತ್ಯ. ಕೇವಲ ಮುಖವಾಡ ಧರಿಸಿರುವವರಿಗೆ ಮಾತ್ರ ಇದು ಮುಖವಾಡದ ರೀತಿ ಕಾಣಿಸುತ್ತದೆ ಎಂದು ವಿಡಿಯೋ ಕೊನೆಯಲ್ಲಿ ಹೇಳಲಾಗಿದೆ.

    ಚಿತ್ರತಂಡದ ಜೊತೆ ತಮ್ಮ ಅನುಭವನ್ನು ಹಂಚಿಕೊಂಡ ಕ್ಲೂವರ್ ವೂಟನ್, ಅನುಷ್ಕಾ ಶರ್ಮಾ ಅವರನ್ನು ನಾನು ರಣಬೀರ್ ಸೆಟ್ ನಲ್ಲಿ ಭೇಟಿ ಮಾಡಿದ್ದೆ. ನನ್ನ ಕೆಲಸವನ್ನ ಮೆಚ್ಚಿದ ಅವರು ಪರಿ ಚಿತ್ರದ ನಿದೇರ್ಶಕರ ನಂಬರ್ ಕೊಟ್ಟರು ಎಂದರು. ಅನುಷ್ಕಾ ಅವರಿಗೆ ಮೇಕಪ್ ಮಾಡುವುದಕ್ಕೆ ತುಂಬಾ ಖುಷಿಯಾಗುತ್ತೆ. ಮೇಕಪ್‍ಗೂ ಮೊದಲು ಅವರು ಯಾವುದೇ ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಅಂತ ನೋಡಬೇಕಿತ್ತು. ಈ ಚಿತ್ರದಲ್ಲಿ ಅವರು ನೈಜವಾಗಿ ಕಾಣಿಸಿದ್ದು, ಅವರ ಸ್ಕಿನ್ ಸುಕೋಮಲವಾಗಿದೆ ಎಂದು ಹೇಳಿದರು.

    https://www.instagram.com/p/BfvZQJKgnkr/?hl=en&taken-by=anushkasharma

    https://www.instagram.com/p/BfkgVrggwuT/?hl=en&taken-by=anushkasharma

  • ಪರಿ ಸಿನಿಮಾ ನೋಡಿ ಹೆದರಿದ್ರಂತೆ ಕೊಹ್ಲಿ- ಹೆಂಡ್ತಿ ಅಭಿನಯದ ಬಗ್ಗೆ ಪ್ರಶಂಸೆ

    ಪರಿ ಸಿನಿಮಾ ನೋಡಿ ಹೆದರಿದ್ರಂತೆ ಕೊಹ್ಲಿ- ಹೆಂಡ್ತಿ ಅಭಿನಯದ ಬಗ್ಗೆ ಪ್ರಶಂಸೆ

    ಮುಂಬೈ: ಕ್ರಿಕೆಟರ್ ವಿರಾಟ್ ಕೊಹ್ಲಿ ತನ್ನ ಮಡದಿ ಅನುಷ್ಕಾ ಶರ್ಮಾ ಅವರನ್ನ ಹಾಡಿ ಹೊಗಳಿದ್ದಾರೆ.

    ಇಂದು ಅನುಷ್ಕಾ ಶರ್ಮಾ ಅಭಿನಯದ ಹಾರರ್ ಸಿನಿಮಾ ಪರಿ ಬಿಡುಗಡೆಯಾಗಿದ್ದು, ಕೊಹ್ಲಿ ಚಿತ್ರವನ್ನ ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ಇದು ನನ್ನ ಹೆಂಡತಿ ಮಾಡಿರುವ ಅತ್ಯುತ್ತಮ ಚಿತ್ರ ಎಂದು ಕೊಹ್ಲಿ ಅನುಷ್ಕಾ ಶರ್ಮಾ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರೋ ಕೊಹ್ಲಿ, ಕಳೆದ ರಾತ್ರಿ ಪರಿ ಸಿನಿಮಾ ನೋಡಿದೆ. ಇದು ಈವರೆಗಿನ ನನ್ನ ಹೆಂಡತಿಯ ಅತ್ಯುತ್ತಮ ಚಿತ್ರ. ನಾನು ದೀರ್ಘ ಸಮಯದ ಬಳಿಕ ನೋಡಿದ ಬೆಸ್ಟ್ ಸಿನಿಮಾ. ಸ್ವಲ್ಪ ಹೆದರಿಕೆ ಆಯ್ತು. ಆದರೂ ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ ಅನುಷ್ಕಾ ಎಂದು ಬರೆದುಕೊಂಡಿದ್ದಾರೆ.

    ಭಯ ಹುಟ್ಟಿಸುವಂತಹ ಟ್ರೇಲರ್ ಹಾಗೂ ಪೋಸ್ಟರ್‍ಗಳಿಂದಲೇ ಪರಿ ಚಿತ್ರ ಸಾಕಷ್ಟು ನಿರೀಕ್ಷೆಯನ್ನ ಹುಟ್ಟಿಸಿತ್ತು. ಈ ಚಿತ್ರವನ್ನ ಪ್ರೋಸಿತ್ ರಾಯ್ ನಿರ್ದೇಶಿಸಿದ್ದು, ಅನುಷ್ಮಾ ಶರ್ಮಾ ಅವರ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಹಾಗೂ ಕ್ರಿಆರ್ಜ್ ಎಂಟರ್‍ಟೈನ್‍ಮೆಂಟ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡಲಾಗಿದೆ. ಎನ್‍ಹೆಚ್10 ಹಾಗೂ ಫಿಲೌರಿ ಚಿತ್ರಗಳ ನಂತರ ಅನುಷ್ಕಾ ಶರ್ಮಾ ಅವರ ಬ್ಯಾನರ್ ಅಡಿ ನಿರ್ಮಾಣವಾದ ಚಿತ್ರ ಇದಾಗಿದೆ. ಚಿತ್ರದಲ್ಲಿ ಬೆಂಗಾಲಿ ನಟ ಪರಂಬ್ರತಾ ಚಟರ್ಜಿ ಕೂಡ ಕಾಣಿಸಿಕೊಂಡಿದ್ದಾರೆ.

     

    ಅನುಷ್ಮಾ ಶರ್ಮಾ ಸದ್ಯ ಸೂಯಿಧಾಗಾ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿದ್ದು, ಈ ಚಿತ್ರದಲ್ಲಿ ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

  • ಕಾರ್ಟೂನ್ ವೀಕ್ಷಿಸುತ್ತಿರುವ ‘ಪರಿ’ ಅನುಷ್ಕಾ ಶರ್ಮಾ ಕಾಲಿನ ಉಗುರು ಬೆಳೆಯಿತು ಉದ್ದ

    ಕಾರ್ಟೂನ್ ವೀಕ್ಷಿಸುತ್ತಿರುವ ‘ಪರಿ’ ಅನುಷ್ಕಾ ಶರ್ಮಾ ಕಾಲಿನ ಉಗುರು ಬೆಳೆಯಿತು ಉದ್ದ

    ಮುಂಬೈ: ಶುಕ್ರವಾರದಂದು ತೆರೆಕಂಡ ಪರಿ ಚಿತ್ರದ ಎರಡನೆಯ ಟೀಸರ್ ಎಲ್ಲರ ಎದೆ ಝಲ್ ಎನ್ನುವಂತೆ ನಡುಕ ಹುಟ್ಟಿಸಿದೆ. ಮೊದಲನೆಯ ಟೀಸರ್‍ನಲ್ಲಿ ಅನುಷ್ಕಾ ಶರ್ಮಾ ಕೆಂಪನೆಯ ಕಣ್ಣುಗಳಿಂದ ನೋಡುತ್ತಿರುವ ದೃಶ್ಯ ನಿಬ್ಬೆರಗಾಗಿಸಿತ್ತು.

    ಚಿತ್ರದ ಟ್ರೇಲರ್ ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿರುವ ಅನುಷ್ಕಾ ಅವರ ಗಾಯವಾದ ಕೈ-ಕಾಲುಗಳಿಗೆ ಸರಪಳಿಯನ್ನು ಸುತ್ತಿರುತ್ತದೆ. ಅನುಷ್ಕಾ ಕಾಲಿನ ಉಗುರುಗಳು ಇದ್ದಕ್ಕಿದಂತೆ ಉದ್ದವಾಗಿ ಬೆಳೆಯುತ್ತಿರುವ ದೃಶ್ಯ ಎಂತಹವರನ್ನು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ‘ಅವಳು ನಿನ್ನ ಮೇಲೂ ಬರುತ್ತಾಳೆ’ ಎಂದು ಬರೆದು ಅನುಷ್ಕಾ ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಟೀಸರ್  ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಸದಾ ಹೊಸ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿ ಮಾರ್ಚ್ 2, ಹೋಳಿ ಹಬ್ಬದಂದು ಬಿಡುಗಡೆಯಾಗಲಿದ್ದು, ಚಿತ್ರದ ಪೋಸ್ಟರ್ ಮತ್ತು ಟೀಸರ್ ಮೂಲಕ ಬಾಲಿವುಡ್‍ನಲ್ಲಿ ಭಾರಿ ಸದ್ದು ಮಾಡುತ್ತಿದೆ.

    ಎನ್‍ಹೆಚ್ 10 ಮತ್ತು ಫಿಲೌರಿ ಸಿನಿಮಾದ ನಂತರ ಅನುಷ್ಕಾ ಶರ್ಮಾರ ಬ್ಯಾನರ್ ಅಡಿಯಲ್ಲಿ ಪರಿ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆ ‘ಝೀರೊ’ ಸಿನಿಮಾ ಮಾಡಿತ್ತಿದ್ದು, ಈ ಚಿತ್ರವು ಡಿಸೆಂಬರ್ ನಲ್ಲಿ ತೆರೆಕಾಣಲಿದೆ. ಮದುವೆಯಾದ ಬಳಿಕ ಅನುಷ್ಕಾ ಶರ್ಮಾ `ಸೂಯಿಧಾಗಾ’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವರುಣ್ ಧವನ್ ಸೂಯಿಧಾಗಾ ಚಿತ್ರದಲ್ಲಿ ಅನುಷ್ಕಾಗೆ ಜೊತೆ ಆಗಿದ್ದಾರೆ. ಸೂಯಿ ಧಾಗಾ ಅಕ್ಟೋಬರ್ 02ರಂದು ತೆರೆ ಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.