Tag: ಪರಾರಿ

  • ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಥೈಲ್ಯಾಂಡ್: 11 ಜನರನ್ನು ಮದುವೆಯಾಗಿ ಯಾಮಾರಿಸಿ ಅವರ ಹಣದೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು, 32 ವರ್ಷದ ಜರಿಯಪೋರ್ನ್ ನುಯಾಯ್ ಬಂಧಿತ ಮಹಿಳೆಯಾಗಿದ್ದಾಳೆ. ಈಕೆಯನ್ನು ಸೆ.7ರಂದು ಥಾಯ್ಲೆಂಡ್ ಪೊಲೀಸರು ನಖೋನ್ ಪಾಥೊಮ್ ಪ್ರಾಂತ್ಯದ ಸ್ಯಾಮ್ ಫ್ರಾನ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಥೈಲ್ಯಾಂಡ್ ಸಂಪ್ರದಾಯದ ಪ್ರಕಾರ ವಿವಾಹವಾಗುವ ಪ್ರತಿ ಪುರುಷ ಭಾವಿ ಪತ್ನಿಗೆ ವಧುದಕ್ಷಿಣೆ ನೀಡುವ ಸಂಪ್ರದಾಯವಿದೆ. ಈಕೆ ಪ್ರತಿ ಪುರುಷನಿಂದ ಸುಮಾರು 6,000ದಿಂದ 30,000 ಡಾಲರ್ (38 ಸಾವಿರದಿಂದ- 1.9 ಲಕ್ಷ ರೂ.) ವಧುದಕ್ಷಿಣೆ ಪಡೆದು ಪರಾರಿಯಾಗಿದ್ದಳು.

    ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಆ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಾಳೆ. ಆ ನಂತ್ರ ಆತನನ್ನು ಮದುವೆಯಾಗುತ್ತಾಳೆ. ಆ ಬಳಿಕ ವಧು ದಕ್ಷಿಣೆಯೊಂದಿಗೆ ಅಲ್ಲಿಂದ ಕಾಲ್ಕೀಳುತ್ತಾಳೆ.

    ಈಕೆಯ ಚಾಣಾಕ್ಷತನ ಎಷ್ಟಿದೆ ಅಂದ್ರೆ ಅಗಸ್ಟ್ ಒಂದೇ ತಿಂಗಳಿನಲ್ಲಿ ಈಕೆ ನಾಲ್ವರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ಈಕೆ 11 ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರು ಇಲ್ಲಿನ ಸ್ಥಳೀಯ ಪತ್ರಿಕೆ ತಿಳಿಸಿದ್ದಾರೆ. ಇದೇ ರೀತಿ ಮೋಸ ಹೋದ ವ್ಯಕ್ತಿಯೊಬ್ಬರು ಈಕೆಯ ಬಗ್ಗೆ ಎಚ್ಚರವಾಗಿರಿ ಎಂದು ಫೇಸ್‍ಬುಕ್ ಪೋಸ್ಟ್ ಹಾಕುವವರೆಗೆ ಮೋಸ ಹೋದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಪೋಸ್ಟ್ ನೋಡಿದ ನಂತರ ಪೊಲೀಸರ ಬಳಿ ಹೋಗಿ ಹೇಗೆ ಮೋಸ ಹೋದ್ರು ಅನ್ನೋದನ್ನ ಹೇಳಿಕೊಂಡಿದ್ದಾರೆ.

    ಕಳೆದ ಎರಡು ವರ್ಷದಿಂದ ಈಕೆಯ ವಿರುದ್ಧ 4 ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು.

    ಸದ್ಯ ಮೋಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿ ಕಿಮಿನಲ್ ಕೋಡ್‍ನ ಸೆಕ್ಷನ್ 342 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನೇಪಾಳದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಆರೋಪಿ ಅರೆಸ್ಟ್

    ನೇಪಾಳದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಆರೋಪಿ ಅರೆಸ್ಟ್

    ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿ ಮಾಡಿದ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದೇರಳಕಟ್ಟೆಯ ನಿವಾಸಿಯಾದ ನೇಪಾಳ ಮೂಲದ 22 ವರ್ಷದ ಕುಮ್ಮ ಬಹದುರ್ ಸಿಂಗ್ ತೊಕ್ಕೊಟ್ಟಿನಲ್ಲಿ ಫಾಸ್ಟ್‍ಫುಡ್ ಮಾಡುತ್ತಿದ್ದ. ಕುಮ್ಮ ಆರು ತಿಂಗಳಿನಿಂದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗಿದೆ.

    ದೇರಳಕಟ್ಟೆಯ ಬಾಡಿಗೆ ಮನೆಯಲ್ಲಿ ನೇಪಾಳ ಮೂಲದ ಮೂರು ಕುಟುಂಬಗಳು ವಾಸವಾಗಿದ್ದರು. ಸಂತ್ರಸ್ತ ಬಾಲಕಿ ತನ್ನ ತಂದೆ-ತಾಯಿ ಜೊತೆ ವಾಸಿಸುತ್ತಿದ್ದಳು. ಆರೋಪಿ ಕುಮ್ಮಸಿಂಗ್ ಮತ್ತು ಅತನ ಸಹೋದರ ಕೂಡ ಅದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಆರೋಪಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ. ಇದರಿಂದ ಬಾಲಕಿ ಗರ್ಭವತಿಯಾಗಿದ್ದಾಳೆ. ಆಕೆ ಗರ್ಭಿಣಿ ಅಂತ ತಿಳಿದ ತಕ್ಷಣ ಆರೋಪಿ ಪರಾರಿಯಾಗಿದ್ದ.

    ಬಾಲಕಿಯ ಪೋಷಕರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಣಾಜೆ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.

     

  • ಸುಸೂ ಬಂತೆಂದು ಜೀಪಿನಿಂದ ಇಳಿದ ಆರೋಪಿ ಪೊಲೀಸ್ರಿಂದ ಎಸ್ಕೇಪ್!

    ಸುಸೂ ಬಂತೆಂದು ಜೀಪಿನಿಂದ ಇಳಿದ ಆರೋಪಿ ಪೊಲೀಸ್ರಿಂದ ಎಸ್ಕೇಪ್!

    ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ಪರಾರಿಯಾಗಿರೋ ಘಟನೆಯೊಂದು ನಗರದಲ್ಲಿ ನಡೆದಿದೆ.

    ಕುಖ್ಯಾತ ರೌಡಿ ಶೀಟರ್ ಪ್ರಶಾಂತ್ ಕುಮಾರ್ ಎಸ್ಕೇಪ್ ಅದ ಅರೋಪಿಯಾಗಿದ್ದು, ಶನಿವಾರ ರಾತ್ರಿ ಕೆಆರ್ ಪುರ ಬಳಿಯ ಐಟಿಐ ಗೇಟ್ ಬಳಿ ಈತ ಪರಾರಿಯಾಗಿದ್ದಾನೆ.

    ಪ್ರಕರಣವೊಂದರ ಸಂಬಂಧ ಆರೋಪಿ ಪ್ರಶಾಂತ್‍ನನ್ನು ಎಚ್‍ಎಎಲ್ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ಕೃತ್ಯ ಎಸಗಿದ್ದ ಸ್ಥಳಗಳ ಮಹಜರು ಮಾಡಲು ಹೋಗಿದ್ರು. ಈ ವೇಳೆ ಮೂತ್ರ ವಿಸರ್ಜನೆ ಮಾಡಬೇಕು ಅಂತ ಆರೋಪಿ ಹೇಳಿದ್ದನು. ಹೀಗಾಗಿ ಪೊಲೀಸರು ರಸ್ತೆ ಬದಿ ಜೀಪ್ ನಿಲ್ಲಿಸಿ ಆತನನ್ನು ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳಾದ ಕಾಂತರಾಜು ಹಾಗೂ ರವಿಚಂದ್ರನನ್ನು ತಳ್ಳಿ ಪರಾರಿಯಾಗಿದ್ದಾನೆ.

    ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ- ಜೈಲಿನಿಂದ ಪರಾರಿಯಾಗಿದ್ದ ಕೈದಿಗೆ ಗುಂಡೇಟು

    ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ- ಜೈಲಿನಿಂದ ಪರಾರಿಯಾಗಿದ್ದ ಕೈದಿಗೆ ಗುಂಡೇಟು

    ಕಲಬುರಗಿ: ಜೈಲಿನಿಂದ ಪರಾರಿಯಾಗಿದ್ದ ಕೈದಿ ಮೇಲೆ ಪೊಲೀಸರು ಗುಂಡೇಟು ನೀಡಿದ ಘಟನೆ ಕಲಬುರಗಿ ನಗರದ ಹೊರವಲಯದ ನಾಗನಹಳ್ಳಿ ಬಳಿ ನಡೆದಿದೆ.

    ತಾಜುದ್ದೀನ್ ಎಂಬ ಕೈದಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈತ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದು, ಕಳೆದ ಮಾರ್ಚ್‍ನಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದನು. ಹೀಗಾಗಿ ಪೊಳಿಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೈದಿ ಸಿಕ್ಕಿದ ಕೂಡಲೇ ಆತನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಕೈದಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಸದ್ಯ ಗಾಯಾಳು ಕೈದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಘುವೀರ್ ಹಲ್ಲೆಗೆ ಒಳಗಾದ ಪೊಲೀಸ್ ಪೇದೆಯಾಗಿದ್ದು, ಇವರು ಫರ್ತಾಬಾದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಾಯಗೊಂಡ ಪೊಲೀಸ್ ಪೇದೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಜೈಲಿನ ಕಿಟಿಕಿ ಮುರಿದು ವಿಚಾರಣಾಧೀನ ಕೈದಿಗಳು ಪರಾರಿ!

    ಜೈಲಿನ ಕಿಟಿಕಿ ಮುರಿದು ವಿಚಾರಣಾಧೀನ ಕೈದಿಗಳು ಪರಾರಿ!

    ಬೆಳಗಾವಿ: ಜೈಲಿನ ಕಿಟಕಿ ಮುರಿದು ಇಬ್ಬರು ವಿಚಾರಣೆ ಕೈದಿಗಳು ಪರಾರಿಯಾಗಿರೋ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿರುವ ಸಬ್ ಜೈಲಿನಲ್ಲಿ ನಡೆದಿದೆ.

    ಬೈಕ್ ಕಳ್ಳತನ ಆರೋಪದಡಿ ಸಬ್ ಜೈಲನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸುರೇಶ ಶರಣಪ್ಪ ಚಲವಾದಿ(36) ಹಾಗೂ ಮನೆ ಕಳ್ಳತನ ಪ್ರಕರಣದಲ್ಲಿವಿಚಾರಣೆಗಾಗಿ ಕಳೆದ ಮೂರು ತಿಂಗಳಿಂದ ರಾಮದುರ್ಗ ಸಬ್ ಜೈಲ್‍ನಲ್ಲಿದ್ದ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಕೈದಿ ಸಂತೋಷ ಶಿವಣ್ಣ ನಂದಿಹಾಳ್ (36) ಪರಾರಿಯಾದ ಕೈದಿಗಳು.

    ಸಬ್ ಜೈಲದಿಂದ ಪರಾರಿಯಾದ ಕೈದಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.