Tag: ಪರಾರಿ

  • ಚಾಕು ಇರಿದು ಉದ್ಯಮಿಯಿಂದ 25 ಲಕ್ಷ ದರೋಡೆ

    ಚಾಕು ಇರಿದು ಉದ್ಯಮಿಯಿಂದ 25 ಲಕ್ಷ ದರೋಡೆ

    ಚಿತ್ರದುರ್ಗ: ಉದ್ಯಮಿಗೆ ಚಾಕು ಇರಿದು 25 ಲಕ್ಷ ರೂಪಾಯಿ ದರೋಡೆ ಮಾಡಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಜಯನಗರದಲ್ಲಿ ನಡೆದಿದೆ.

    ಹಿರಿಯೂರಿನ ಉದ್ಯಮಿ ವಲಿಸಾಬ್ ಎಂಬವರು ಇಂದು ಬೆಳಗ್ಗೆ ಹೊಸದುರ್ಗಕ್ಕೆ ಗುಟ್ಕಾ ವ್ಯಾಪಾರದ ಬಾಕಿ ವಸೂಲಿಗಾಗಿ ತೆರಳಿದ್ದು, ಹಣ ಸಂಗ್ರಹದ ಬಳಿಕ ಖಾಸಗಿ ಬಸ್ ಮೂಲಕ ಹಿರಿಯೂರಿಗೆ ವಾಪಾಸ್ ಆಗಿದ್ದರು. ಬಸ್ ನಿಲ್ದಾಣದಿಂದ ಮನೆಗೆ ಆಟೋದಲ್ಲಿ ತೆರಳುವಾಗ ಈ ಘಟನೆ ನಡೆದಿದೆ.

    ಹೊಸದುರ್ಗದಿಂದಲೇ ಇವರನ್ನು ಹಿಂಬಾಲಿಸಿರೋ ದರೋಡೆಕೋರರು, ಮನೆ ಸಮೀಪಿಸುತ್ತಿರುವುದನ್ನ ಅರಿತು ಏಕಾಏಕಿ ಚಾಕುವಿನಿಂದ ವಲಿಸಾಬ್ ಗೆ ಇರಿದು 25 ಲಕ್ಷ ಹಣವಿರೋ ಬ್ಯಾಗನ್ನು ಲಪಟಾಯಿಸಿಕೊಂಡು ಪಲ್ಸರ್ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ.

    ದರೋಡೆಕೋರರು ಪರಾರಿಯಾಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಚಾಕು ಇರಿತಕ್ಕೊಳಗಾಗಿರೋ ಗಾಯಾಳು ವಲಿಸಾಬ್ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ.

    ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆಯಾದ 15 ದಿನಕ್ಕೇ ವಿವಾಹ ಮಾಡಿಸಿದ್ದ ಪಂಡಿತನ ಜೊತೆ ವಧು ಎಸ್ಕೇಪ್

    ಮದ್ವೆಯಾದ 15 ದಿನಕ್ಕೇ ವಿವಾಹ ಮಾಡಿಸಿದ್ದ ಪಂಡಿತನ ಜೊತೆ ವಧು ಎಸ್ಕೇಪ್

    – ಬೇರೆ ಮದ್ವೆಯನ್ನು ಅರ್ಧಕ್ಕೆ ನಿಲ್ಲಿಸಿ ಪಂಡಿತ ಜೂಟ್
    – ಎರಡು ಮಕ್ಕಳ ತಂದೆಯ ಮೇಲೆ ವಧುಗೆ ಲವ್

    ಭೋಪಾಲ್: ಮದುವೆಯಾದ 15 ದಿನದಲ್ಲಿಯೇ ನವವಿವಾಹಿತೆಯೊಬ್ಬಳು ವಿವಾಹ ಮಾಡಿಸಿದ್ದ ಪಂಡಿತನ ಜೊತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ.

    ಈ ಘಟನೆ ಸಿರೋಜ್‍ನ ಟೋರಿ ಬ್ಯಾಗ್ರೋಡ್ ಪ್ರದೇಶದಲ್ಲಿ ನಡೆದಿದೆ. 21 ವರ್ಷದ ಯುವತಿಯ ಮದುವೆ ಮೇ 7 ರಂದು ನಡೆದಿತ್ತು. ಅದೇ ಗ್ರಾಮದ ಪಂಡಿತ  ವಿನೋದ್ ಮಹಾರಾಜ್ ಯುವತಿಯ ಮದುವೆ ಮಾಡಿಸಿದ್ದನು.

    ಮದುವೆಯಾದ ಮೂರನೇ ದಿನಕ್ಕೆ ವಧು ಸಂಪ್ರದಾಯದಂತೆ ತವರು ಮನೆಗೆ ಹಿಂದಿರುಗಿದ್ದಳು. ಮೇ 23ರಂದು ಯುವತಿಯ ಕುಟುಂಬಸ್ಥರು ಮತ್ತೊಂದು ಮದುವೆಯ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ಮದುವೆಯನ್ನು ಸಹ ವಿನೋದ್ ಮಹಾರಾಜ್ ಮುಂದೆ ನಿಂತು ಮಾಡಿಸುತ್ತಿದ್ದನು. ಮಾಂಗಲ್ಯ ಧಾರಣೆ ಮತ್ತು ಸಪ್ತಪದಿಯ ವೇಳೆಗೆ ವಿನೋದ್ ಮಹಾರಾಜ್ ನಾಪತ್ತೆಯಾಗಿದ್ದಾನೆ. ಈ ವೇಳೆ ಆತನನ್ನು ಹುಡುಕಲು ಹೋದಾಗ ನವವಿವಾಹಿತೆಯೊಂದಿಗೆ ಓಡಿಹೋಗಿರುವ ವಿಚಾರ ಬೆಳಕಿಗೆ ಬಂದಿದೆ.

    ವಿಷಯ ತಿಳಿಯುತ್ತಿದ್ದಂತೆ ವರನ ಮನೆಯವರು ಯುವತಿಯ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆಗ ಪಂಡಿತ ವಿನೋದ್ ಮತ್ತು ಯುವತಿ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಈಗಾಗಲೇ ವಿನೋದ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಜೊತೆಗೆ ಅಂದಿನ ದಿನವೇ ಪಂಡಿತನ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ವರನ ತಾಯಿ ಮತ್ತು ಸಂಬಂಧಿಕರು, ನಮಗೆ ಮೋಸ ಮಾಡಿ ಪಂಡಿತನ ಜೊತೆ ಓಡಿ ಹೋಗಿದ್ದಾಳೆ. ಜೊತೆಗೆ 1.5 ಲಕ್ಷ ರೂ. ಮೌಲ್ಯದ ಆಭರಣ ಮತ್ತು 30 ಸಾವಿರ ನಗದು ಕದ್ದು ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಯುವತಿ ಮತ್ತು ಪಂಡಿತನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಇಬ್ಬರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕಿಗೆ ಕಿಡಿಗೇಡಿಯಿಂದ ಬೆಂಕಿ

    ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕಿಗೆ ಕಿಡಿಗೇಡಿಯಿಂದ ಬೆಂಕಿ

    ಹಾಸನ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‍ಗೆ ಕಿಡಿಗೇಡಿಯೊಬ್ಬ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರೇಣುಕಾಂಬ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಎಂಜಿ ಗ್ರಾಫಿಕ್ಸ್ ಮಾಲೀಕ ಮುಬಷಿರ್ ಅಹಮದ್ ಎಂಬವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್ ಇದಾಗಿದ್ದು, ಬೆಂಕಿಯಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಮಧ್ಯರಾತ್ರಿ ಬರುವ ಕಿಡಿಗೇಡಿ ಮೊದಲು ಬೈಕ್‍ನ ಪೆಟ್ರೋಲ್ ಪೈಪ್ ಕಿತ್ತು, ಪೆಟ್ರೋಲ್ ಬಿಟ್ಟು ನಂತರ ಜೇಬಿನಿಂದ ಬೆಂಕಿ ಪೊಟ್ನ ತೆಗೆದು ಕಡ್ಡಿ ಗೀರಿ ಬೆಂಕಿ ಹಚ್ಚಿದ್ದಾನೆ. ಇದರಿಂದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ರಾತ್ರಿ ಅಂಗಡಿಯಲ್ಲಿಯೇ ಕೆಲಸ ಮಾಡುತ್ತಿದ್ದ ಮಾಲೀಕ ಹೊರಕ್ಕೆ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ.

    ಕಿಡಿಗೇಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಚನ್ನರಾಯಪಟ್ಟಣ ನಗರ ಪೊಲೀಸರು ಕಿಡಿಗೇಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಪ್ರಯಾಣಿಕರು ಬೈದಿದ್ದಕ್ಕೆ ಸ್ಥಳದಲ್ಲೇ ಬಸ್ ಬಿಟ್ಟು ಚಾಲಕ ಪರಾರಿ

    ಪ್ರಯಾಣಿಕರು ಬೈದಿದ್ದಕ್ಕೆ ಸ್ಥಳದಲ್ಲೇ ಬಸ್ ಬಿಟ್ಟು ಚಾಲಕ ಪರಾರಿ

    ತುಮಕೂರು: ಪ್ರಯಾಣಿಕರು ಬೈದಿದ್ದಕ್ಕೆ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾದ ಘಟನೆ ತುಮಕೂರು ಎಪಿಎಂಸಿ ಬಳಿ ನಡೆದಿದೆ.

    ಖಾಸಗಿ ಬಸ್ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಚಾಲಕ ನಿದ್ದೆಯಲ್ಲಿದ್ದಕ್ಕೆ ಪ್ರಯಾಣಿಕರು ಬೈದಿದ್ದರು. ಪ್ರಯಾಣಿಕರ ಸಿಟ್ಟಿಗೆ ಚಾಲಕ ಇಂದು ಬೆಳಗ್ಗೆ ತುಮಕೂರು ಎಪಿಎಂಸಿ ಬಳಿ ಬಸ್ ನಿಲ್ಲಿಸಿ ಪರಾರಿ ಆಗಿದ್ದಾನೆ.

    ಖಾಸಗಿ ಬಸ್ ಜಿಪಿಆರ್ ಟ್ರಾವೆಲ್ಸ್ ನ ಆಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕ ಬಸ್ ನಿಲ್ಲಿಸಿ ಪರಾರಿಯಾಗಿದ್ದರಿಂದ ಪ್ರಯಾಣಿಕರು ಕೆಲಕಾಲ ಪರದಾಡಿದ್ದರು. ಈ ಬಗ್ಗೆ ಪ್ರಯಾಣಿಕರು ದೂರವಾಣಿ ಕರೆ ಮಾಡಿದರೂ ಟ್ರಾವೆಲ್ಸ್ ಸಿಬ್ಬಂದಿ ಸ್ಪಂದಿಸಿಲ್ಲ. ಪ್ರಯಾಣಿಕರು ಆನ್‍ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು.

    ಚಾಲಕ ರಾತ್ರಿಯಿಡೀ ನಿದ್ರೆ ಮಂಪರಿನಲ್ಲಿದ್ದನು. ಹಾಗಾಗಿ ಪ್ರಯಾಣಿಕರು ಆತನನ್ನು ಬೈದಿದ್ದರು. ಖಾಸಗಿ ಟ್ರಾವೆಲ್ಸ್ ಪ್ರಯಾಣಿಕರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಿರುಪತಿ ಚಿನ್ನ ಕೊಡಸ್ತೀನಿ ಅಂತ 50 ಲಕ್ಷ ರೂ. ನಾಮ ಹಾಕ್ದ..!

    ತಿರುಪತಿ ಚಿನ್ನ ಕೊಡಸ್ತೀನಿ ಅಂತ 50 ಲಕ್ಷ ರೂ. ನಾಮ ಹಾಕ್ದ..!

    ಧಾರವಾಡ: ವಂಚಕನೊಬ್ಬ ತಿರುಪತಿ ತಿಮ್ಮಪ್ಪನ ಚಿನ್ನಾಭರಣ ಕೊಡುವುದಾಗಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬನನ್ನು ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದಿಂದ ಗಡಿಪಾರಾಗಿರುವ ಚೀಟರ್ ಮೋನ್ಯಾ ಅಲಿಯಾಸ್ ಮೋಹನ್ ವಾಳ್ವೇಕರ್ ಎಂಬ ವ್ಯಕ್ತಿ ಮೋಸ ಮಾಡಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ ಅಶ್ವಿನ್ ಪಾಟೀಲ ಎಂಬವರಿಗೆ ತಿರುಪತಿಯ ಚಿನ್ನ ಕೊಡುವುದಾಗಿ ಹೇಳಿ ಅವರಿಂದ 50 ಲಕ್ಷ ರೂ. ಪಡೆದು ಆರೋಪಿ ಪರಾರಿಯಾಗಿದ್ದಾನೆ. ಅಶ್ವಿನ್ ಬಳಿ ಮೊದಲು ಹಣ ಕೊಡಿ ನಂತರ ತಿರುಪತಿ ತಿಮ್ಮಪ್ಪನ ಚಿನ್ನಾಭರಣ ತಂದು ಕೊಡುತ್ತೇನೆ ಅಂತ ಹಣ ಪಡೆದು ಚಿನ್ನ ನೀಡದೆ ನಾಮ ಹಾಕಿದ್ದಾನೆ.

    ಈ ಹಿಂದೆ ನಕಲಿ ನೋಟು ಹಾಗೂ ಜನರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಚೀಟರ್ ಮೋನ್ಯಾ ಭಾಗಿಯಾಗಿದ್ದನು. ಆದರಿಂದ ಜಿಲ್ಲೆಯ ಪೊಲೀಸ್ ಆಯುಕ್ತರು ಮೋನ್ಯಾನನ್ನು ಗಡಿಪಾರು ಮಾಡಿ ಎಂದು ಆದೇಶ ಮಾಡಿದ್ದರು. ಆದ್ರೆ ಪೊಲೀಸ್ ಆಯುಕ್ತರ ಆದೇಶವನ್ನು ಮೀರಿ ನಗರದಲ್ಲೇ ಬಿಡು ಬಿಟ್ಟಿದ್ದ ಚೀಟರ್ ಮೋನ್ಯಾ ಜನರಿಗೆ ವಂಚನೆ ಮಾಡುವ ಕೆಲಸವನ್ನು ಮುಂದುವರಿಸಿದ್ದಾನೆ.

    ಸದ್ಯ ಘಟನೆ ಕುರಿತು ಅಶ್ವಿನ್ ಆರೋಪಿ ಮೋನ್ಯಾ ಹಾಗೂ ಅವನ ಕುಟುಂಬದ ಮೇಲೆ ದೂರು ನೀಡಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ, ಇಬ್ಬರು ಮಕ್ಕಳಿದ್ರೂ ತಮ್ಮನ ಹೆಂಡ್ತಿ ಜೊತೆ ಎಸ್ಕೇಪ್

    ಪತ್ನಿ, ಇಬ್ಬರು ಮಕ್ಕಳಿದ್ರೂ ತಮ್ಮನ ಹೆಂಡ್ತಿ ಜೊತೆ ಎಸ್ಕೇಪ್

    ಚಾಮರಾಜನಗರ: ಪತಿ ಮಹಾಶಯನೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನ ಬಿಟ್ಟು ಸ್ವಂತ ತಮ್ಮನ ಪತ್ನಿಯ ಜೊತೆ ಓಡಿ ಹೋಗಿದ್ದು, ಮಕ್ಕಳು ಅಪ್ಪ ಬೇಕು ಎಂದು ಕಣ್ಣೀರಿಡುತ್ತಿರುವ ಕರುಣಾಜನಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಾಮರಾಜನಗರ ತಾಲೂಕಿನ ಹೆಚ್.ಮೂಕಳ್ಳಿಯ ನಿವಾಸಿ ಮಹದೇವಯ್ಯ(35) ತನ್ನ ಸಹೋದರನ ಹೆಂಡತಿಯನ್ನೇ 15 ದಿನಗಳ ಹಿಂದೆ ಕರೆದುಕೊಂಡು ಹೋಗಿದ್ದಾನೆ. ಇತ್ತ ಶಾಲೆಗೆ ಹೋಗುತ್ತಿರುವ ಮಕ್ಕಳು ನಮಗೆ ಅಪ್ಪ ಬೇಕು ಎಂದು ಅಳುತ್ತಿದ್ದಾರೆ.

    ಮಹದೇವಯ್ಯ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕಚೇರಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಈ ಹಿಂದೆ ಕೂಡ ತನ್ನ ತಮ್ಮನ ಪತ್ನಿ ಶಾಂತಮ್ಮಳೊಂದಿಗೆ ಓಡಿ ಹೋಗಿದ್ದನು. ನಂತರ ಈ ಬಗ್ಗೆ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಮರಳಿ ಬಂದಿದ್ದನು. ಮರಳಿ ಬಂದ ಮಹದೇವಯ್ಯ ಹೆಂಡತಿ ಮಕ್ಕಳನ್ನ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದನು. ಆದರೆ ಈ ಘಟನೆ ನಡೆದ 2 ವಾರ ಕಳೆಯುವುದರೊಳಗೆ ಮತ್ತೇ ಶಾಂತಮ್ಮಳೊಂದಿಗೆ ಓಡಿ ಹೋಗಿದ್ದಾನೆ.

    ನನ್ನ ಮಕ್ಕಳು ಪ್ರತಿದಿನ ಅಪ್ಪ ಬೇಕು ಎಂದು ಕಣ್ಣೀಡುತ್ತಿದ್ದಾರೆ. ಅವರಿಲ್ಲದೇ ನಾನೊಬ್ಬಳು ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಅವರು ಬೇಗ ಮನೆಗೆ ವಾಪಸ್ ಬರಬೇಕು. ಒಂದು ವೇಳೆ ತಮ್ಮ ತಪ್ಪನ್ನು ತಿದ್ದಿಕೊಂಡರೇ ನಾನು ಅವರನ್ನು ಒಪ್ಪಿಕೊಳ್ಳುತ್ತೇನೆ. ಇಲ್ಲವಾದರೆ ಕಾನೂನಿಕ ಪ್ರಕಾರ ಮಕ್ಕಳ ಭವಿಷ್ಯಕ್ಕಾಗಿ ಪರಿಹಾರ ಕೊಡಿಸಿ ಎಂದು ನೊಂದ ಪತ್ನಿ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆಶ್ರಯ ತಾಣದಿಂದ ನಾಲ್ವರು ಅಪ್ತಾಪ್ತೆಯರು ಪರಾರಿ

    ಆಶ್ರಯ ತಾಣದಿಂದ ನಾಲ್ವರು ಅಪ್ತಾಪ್ತೆಯರು ಪರಾರಿ

    ಪಾಟ್ನಾ: ನಾಲ್ವರು ಅಪ್ರಾಪ್ತ ಬಾಲಕಿಯರು ದುಪ್ಪಟ್ಟಾ ಬಳಸಿ ಬಾಲಕಿಯರ ಆಶ್ರಯ ತಾಣಗಳಿಂದ ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ನಾಲ್ವರು ಬಾಲಕಿಯರು ರಾಜ್ಯದ ಪಾಟಲೀಪುತ್ರ ಕಾಲನಿಯಲ್ಲಿರುವ ಸರ್ಕಾರಿ ಅನುದಾನಿತ ಆಶಾ ಕಿರಣ ಬಾಲಕಿಯರ ನಿಲಯದಿಂದ ಭಾನುವಾರ ಎಸ್ಕೇಪ್ ಆಗಿದ್ದಾರೆ. ಅವರಲ್ಲಿ 16 ವರ್ಷದ ಮೂವರು ಬಾಲಕಿಯರು ಮತ್ತು 12 ವರ್ಷದ ಒಬ್ಬ ಬಾಲಕಿ ಇದ್ದಳು. ಇವರು ನಿಲಯ ಕಟ್ಟಡದ ಎರಡನೇ ಮಹಡಿಯಿಂದ ದುಪ್ಪಟ್ಟಾದಿಂದ ಕೆಳಗಿಳಿದು ಪರಾರಿಯಾಗಿದ್ದಾರೆ ಎಂದು  ಪೊಲೀಸ್ ಅಧಿಕಾರಿ ತರ್ಕೇಶ್ವರ್ ನಾಥ್ ತಿವಾರಿ ಹೇಳಿದ್ದಾರೆ.

    ಬಾಲಕಿಯರು ಕಳೆದ ತಿಂಗಳಷ್ಟೇ ಆಶ್ರಯ ತಾಣಕ್ಕೆ ಬಂದಿದ್ದರು. ಆದರೆ ನಾಲ್ವರು ಏಕಕಾಲಕ್ಕೆ ಪರಾರಿಯಾಗಿದ್ದು, ಇದರಿಂದ ಅನೇಕ ಅನುಮಾನಗಳು ಮೂಡುತ್ತಿವೆ. ಸದ್ಯಕ್ಕೆ ಬಾಲಕಿಯರು ತಪ್ಪಿಸಿಕೊಂಡು ಹೋಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿವಾರಿ ಹೇಳಿದರು.

    ಬಾಲಕಿಯರು ತಪ್ಪಿಸಿಕೊಂಡು ಹೋಗುವಾಗ ಆಶ್ರಯ ತಾಣದ ಭದ್ರತಾ ಸಿಬ್ಬಂದಿ ಕಟ್ಟಡದ ಒಳಗೆ ಇದ್ದರು ಎಂದು ತಿಳಿದು ಬಂದಿದೆ. ಆಶ್ರಯ ತಾಣದ ಅಧಿಕಾರಿಗಳು ಈ ಬಗ್ಗೆ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.

    ಬಿಹಾರದಲ್ಲಿ ಈ ಮೊದಲು ಏಪ್ರಿಲ್ ನಲ್ಲಿ ಮುಜಾಫರ್ ಪುರ್ ಆಶ್ರಯ ನಿಲಯದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇನ್ನೂ ಸೆಪ್ಟಂಬರ್ 24ರಂದು ಪಾಟ್ನಾದ ಆಶ್ರಯ ನಿಲಯದಿಂದ ಮಹಿಳೆಯೊಬ್ಬರು ಪರಾರಿಯಾಗಿದ್ದರು.

    ಅಕ್ಟೋಬರ್ 29 ರಂದು ಖಗಾರಿಯಾ ಜಿಲ್ಲೆಯ ಆಶ್ರಯ ತಾಣದಲ್ಲಿದ್ದ ಇಬ್ಬರು ಬಾಲಕಿಯರು ಎಸ್ಕೇಪ್ ಆಗಿದ್ದರು. ಪಾಟ್ನಾ ಆಶ್ರಯ ನಿಲಯದಿಂದ ಪರಾರಿಯಾಗಿದ್ದ ಮಹಿಳೆ ನಂತರ ಪತ್ತೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪತಿ, ಮಗನನ್ನು ಬಿಟ್ಟು ಅಣ್ಣನ ಜೊತೆ ಓಡಿ ಹೋದ ವಿವಾಹಿತೆ!

    ಪತಿ, ಮಗನನ್ನು ಬಿಟ್ಟು ಅಣ್ಣನ ಜೊತೆ ಓಡಿ ಹೋದ ವಿವಾಹಿತೆ!

    ತುಮಕೂರು: ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಮಗನನ್ನು ಬಿಟ್ಟು ಪ್ರೀತಿಸಿದ ಅಣ್ಣನ ಜೊತೆ ಓಡಿಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಭೀಮನಕುಂಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮಮತಾ ಅಣ್ಣನನ್ನೇ ಪ್ರೀತಿಸಿ ಮನೆಬಿಟ್ಟು ಓಡಿ ಹೋದ ವಿವಾಹಿತ ಮಹಿಳೆ. ಮಮತಾ ತನ್ನ ಚಿಕ್ಕಮ್ಮನ ಮಗನಾದ ವೆಂಕಟೇಶ್ ನನ್ನು ಪ್ರೀತಿಸಿದ್ದು, ಈಗ ಪತಿ ರಮೇಶ್ ನನ್ನು ಬಿಟ್ಟು ಅಣ್ಣ ವೆಂಕಟೇಶ್ ಜೊತೆ ಓಡಿ ಹೋಗಿದ್ದಾಳೆ.

    ಮಮತಾಗೆ ರಮೇಶ್ ಜೊತೆ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ 8 ವರ್ಷದ ಮಗನೂ ಇದ್ದಾನೆ. ವೆಂಕಟೇಶ್ ಅದೇ ಗ್ರಾಮದವನಾಗಿದ್ದು, ಆತನಿಗೂ ಮದುವೆಯಾಗಿತ್ತು. ವೆಂಕಟೇಶ್ ಪದೇ ಪದೇ ಮಮತಾ ಮನೆಗೆ ಬರುತ್ತಿದ್ದನು. ಆಗ ಇಬ್ಬರಿಬ್ಬರ ನಡುವೆ ಪ್ರೀತಿಯಾಗಿದೆ.

    ಸುಮಾರು ನಾಲ್ಕು ವರ್ಷಗಳಿಂದ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಅನೇಕ ಬಾರಿ ಇವರಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆಗ ಇವರಿಬ್ಬರ ವಿಚಾರ ಮನೆಯವರಿಗೆ ತಿಳಿದಿದ್ದು, ಕುಟುಂಬಸ್ಥರು ಬುದ್ಧಿ ಹೇಳಿದ್ದರು. ಆದರೆ ಇವರು ಮನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳದೇ ಇದೇ ತಿಂಗಳ 6 ರಂದು ವೆಂಕಟೇಶ್ ಮತ್ತು ಮಮತಾ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದಾರೆ.

    ಈ ಕುರಿತು ಪತಿ ಮತ್ತು ಸಂಬಂಧಿಕರು ಪಾವಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಮಮತಾಳಿಗಾಗಿ ಮಗ ಮತ್ತು ಪತಿ ರಮೇಶ್ ಇಬ್ಬರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫಸ್ಟ್ ನೈಟಿನಲ್ಲೇ ವರ, ಕುಟುಂಬಕ್ಕೆ ಶಾಕ್ ಕೊಟ್ಟ ವಧು!

    ಫಸ್ಟ್ ನೈಟಿನಲ್ಲೇ ವರ, ಕುಟುಂಬಕ್ಕೆ ಶಾಕ್ ಕೊಟ್ಟ ವಧು!

    ಪಾಟ್ನಾ: ಮೊದಲ ರಾತ್ರಿಯಂದೇ ನವವಿವಾಹಿತೆ ಪರಾರಿಯಾಗಿ ಕುಟುಂಬದವರಿಗೆ ಶಾಕ್ ಕೊಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಈ ಘಟನೆಯು ಬಿಹಾರದ ಭಬುವಾದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ಸಂಗೀತಾ ಕುಮಾರಿ ಪರಾರಿಯಾಗಿರುವ ನವವಿವಾಹಿತೆ. ಈಕೆ ಮದುವೆಯಾಗಿ ಮೊದಲ ರಾತ್ರಿಯಂದೇ ಆಭರಣಗಳು ಸೇರಿದಂತೆ 20 ಸಾವಿರ ರೂ. ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

    ಇತ್ತ ನಾಪತ್ತೆಯಾದ ವಧುನಿಂದ ಆಘಾತಗೊಂಡ ವರ ಮತ್ತು ವರನ ತಾಯಿ, ಹುಡುಗಿ ಮತ್ತು ಹುಡುಗಿಯ ಕುಟುಂಬದವರು ನಮಗೆ ಮೋಸ ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಅವರು ನಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ನಮಗೆ ನ್ಯಾಯ ಬೇಕು ಎಂದು ಪೊಲೀಸ್ ಮೆಟ್ಟಿಲೀರಿದ್ದಾರೆ.

    ಘಟನೆಯ ವಿವರ?:
    ವರ ತಾಯಿ ತನ್ನ ಮಗ ಪಂಕಜ್ ಕುಮಾರ್ ಗೆ ಹುಡುಗಿಯನ್ನು ಹುಡುಕುತ್ತಿದ್ದರು. ಅದೇ ರೀತಿ ಸಂಗೀತಾ ಕುಮಾರಿಗೂ ಹುಡುಗನನ್ನು ಹುಡುಕುತ್ತಿದ್ದರು. ಬಳಿಕ ಅವರ ಸಂಬಂಧಿಕರು ಸಂಗೀತಾ ಸಂಬಂಧವನ್ನು ತಂದಿದ್ದಾರೆ. ಬಳಿಕ ಎರಡು ಕುಟುಂಬದವರು ಒಪ್ಪಿ ಸೋಮವಾರ ಭಬುವಾ ಹೊರವಲಯದಲ್ಲಿರುವ ಒಂದು ದೇವಾಲಯದಲ್ಲಿ ಇಬ್ಬರಿಗೂ ಸರಳವಾಗಿ ಮದುವೆ ಮಾಡಿದ್ದಾರೆ.

    ಸೋಮವಾರ ರಾತ್ರಿಯೇ ಕುಟುಂಬದವರು ಮೊದಲ ರಾತ್ರಿಗೆ ಸಿದ್ಧಪಡಿಸಿದ್ದಾರೆ. ಆಗ ಸಂಗೀತಾ ತನಗೆ ಮುಟ್ಟಾಗಿದೆ ಅಂತ ಕಾರ್ಯಕ್ರಮವನ್ನು ರದ್ದು ಮಾಡಿಸಿದ್ದಾಳೆ. ಬಳಿಕ ತನಗೆ ಬೇರೆ ರೂಮ್ ಬೇಕೆಂದು ಕೇಳಿ ಒಬ್ಬಳೇ ಕೊಠಡಿಯಲ್ಲಿ ಮಲಗಿದ್ದಾಳೆ. ರಾತ್ರಿ ಎಲ್ಲರೂ ಮಲಗಿಕೊಳ್ಳುವರೆಗೂ ಕಾದು ಬಳಿ ಆಭರಣ, ಹಣ, ಮೌಲ್ಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾಳೆ.

    ಮಂಗಳವಾರ ಬೆಳಗ್ಗೆ ಸಂಗೀತಾಳನ್ನು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಹಣ, ಚಿನ್ನ ಮತ್ತು ವಸ್ತುಗಳು ಕಾಣಲಿಲ್ಲ. ಕೊನೆಗೆ ಎಲ್ಲವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ತಿಳಿದು ಪಂಕಜ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

    ವರ ಪಂಕಜ್ ಮತ್ತು ತಾಯಿ ನೀಡಿದ ದೂರಿನ ಆಧಾರದ ಮೇಲೆ ನಾವು ದೂರು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ವರನ ಕುಟುಂಬದವರು ವಧು ಸೇರಿದಂತೆ ಹುಡುಗಿಯನ್ನು ತೋರಿಸಿದ ಸಂಬಂಧಿಕರ ಮೇಲೆ ದೂರು ನೀಡಿದ್ದಾರೆ. ಸದ್ಯಕ್ಕೆ ಪರಾರಿಯಾಗಿರುವ ಹುಡುಗಿಯನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ರಾಮ್ ತಿಳಿಸಿದ್ದಾರೆ.

  • ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಾಯಕ ಕಾರ್ಯದರ್ಶಿ 10 ಕೋಟಿ ರೂ. ಸಾಲ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ಬಿ ಸಂಕನಗೌಡರ್ ನಾಪತ್ತೆಯಾದ ಸಹಾಯಕ ಕಾರ್ಯದರ್ಶಿ. ನಟ ದರ್ಶನ್ ಹೆಸರು ಹೇಳಿಕೊಂಡು ಮಲ್ಲಿಕಾರ್ಜುನ್ ವಿವಿಧ ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರು ಎನ್ನುವ ಆರೋಪ ಇವರ ಮೇಲಿದೆ.

    ದರ್ಶನ್ ಸಹೋದರ ದಿನಕರ್ ಅವರನ್ನು ಮಲ್ಲಿಕಾರ್ಜುನ್ ಪರಿಚಯ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತರ ದರ್ಶನ್ ಅವರಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೆ ಅವರ ಹಣಕಾಸಿನ ವ್ಯವಹಾರನ್ನು ನೋಡಿಕೊಳ್ಳುತ್ತಿದ್ದರು. ಅನೇಕ ವರ್ಷಗಳಿಂದ ದರ್ಶನ್ ಅವರನ್ನು ಸಂಪರ್ಕಿಸಲು ಮಲ್ಲಿಕಾರ್ಜುನ್ ಅವರಿಂದ ಮೊದಲು ಒಪ್ಪಿಗೆ ಪಡೆಯಬೇಕಾಗಿತ್ತು. ಹೀಗಾಗಿ ದರ್ಶನ್ ಅವರ ಹೆಸರಿನ ಬಲದಿಂದಲೇ ಮಲ್ಲಿಕಾರ್ಜುನ್ ಬರೋಬ್ಬರಿ 10 ಕೋಟಿ ರೂ. ಸಾಲ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

    ಈ ವಿಚಾರದ ಬಗ್ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಏನು ವಂಚನೆ ನಡೆದಿದೆ ಗೊತ್ತಿಲ್ಲ. ದರ್ಶನ್‍ಗೆ ಆರ್ಥಿಕ ಸಮಸ್ಯೆ ಇದೆ ಎಂದರೆ ಹಣ ನೀಡುವ ಮೊದಲು ದರ್ಶನ್ ಅವರನ್ನೇ ಸಂಪರ್ಕಿಸಬೇಕು. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. 10 ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ್ದಾಗ ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿದ್ದರು. ಈಗ ನಾನು ಅವರಿಗೆ ಫೋನ್ ಮಾಡಿದ್ದರೂ ಸ್ವಿಚ್ ಆಫ್ ಆಗಿದೆ. ಈ ವಿಚಾರದಲ್ಲಿ ದರ್ಶನ್ ಹೆಸರು ಯಾಕೆ ಬಂತು ಎನ್ನುವುದೇ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.