Tag: ಪರಶುರಾಮ ಥೀಂ ಪಾರ್ಕ್‌

  • ಕಾರ್ಕಳ ಪರಶುರಾಮನ ಮೂರ್ತಿ ಕಂಚು, ಫೈಬರಿನದ್ದಲ್ಲ, ಹಿತ್ತಾಳೆಯದ್ದು – ಕೋರ್ಟ್‌ಗೆ ಪೊಲೀಸರ ಚಾರ್ಜ್‌ಶೀಟ್

    ಕಾರ್ಕಳ ಪರಶುರಾಮನ ಮೂರ್ತಿ ಕಂಚು, ಫೈಬರಿನದ್ದಲ್ಲ, ಹಿತ್ತಾಳೆಯದ್ದು – ಕೋರ್ಟ್‌ಗೆ ಪೊಲೀಸರ ಚಾರ್ಜ್‌ಶೀಟ್

    ಉಡುಪಿ: ಬಹು ಚರ್ಚಿತ ಕಾರ್ಕಳ (Karkala) ಬೈಲೂರಿನ ಪರಶುರಾಮ ಮೂರ್ತಿ (Parashurama Statue) ಕಂಚಿನದ್ದಲ್ಲ, ಹಿತ್ತಾಳೆಯದ್ದು ಎಂದು ಪೊಲೀಸ್ ಮತ್ತು ತಜ್ಞರ ತನಿಖೆಯಲ್ಲಿ ಧೃಡಪಟ್ಟಿದೆ. ಈ ಮೂಲಕ ಉಡುಪಿ (Udupi) ಜಿಲ್ಲೆಯ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಮೂರ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಳೆ ಆರೋಪಕ್ಕೆ ಬ್ರೇಕ್ ಬಿದ್ದಿದೆ. ಇದೀಗ ಹೊಸ ಚರ್ಚೆ ಶುರುವಾಗಿದೆ.

    ಕಾರ್ಕಳ ನಗರಠಾಣಾ ಪೊಲೀಸರು ತನಿಖೆ ನಡೆಸಿ, ತಜ್ಞರು ನೀಡಿದ ವರದಿಯಾಧಾರದಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಪರಶುರಾಮ ಮೂರ್ತಿಯನ್ನು ಹಿತ್ತಾಳೆಯಿಂದ ಮಾಡಲಾಗಿದೆ. ಕಂಚಿನ ಮೂರ್ತಿಯಲ್ಲ ಎಂದು ತನಿಖಾ ವರದಿಯನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. 2023ರ ಜನವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರಶುರಾಮ ಥೀಂ ಪಾರ್ಕನ್ನು ಉದ್ಘಾಟನೆ ಮಾಡಿದ್ದರು. ಶಾಸಕ ಮಾಜಿ ಸಚಿವ ಸುನಿಲ್ ಕುಮಾರ್ ಚುನಾವಣೆಯ ಉದ್ದೇಶದಿಂದ ತರಾತುರಿಯಲ್ಲಿ ಮೂರ್ತಿಯನ್ನು ಉದ್ಘಾಟನೆ ಮಾಡಿಸಿದರು ಎಂಬುದು ಆರೋಪ. ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

    ರಟ್ಟು, ಫೈಬರ್, ಪ್ಲಾಸ್ಟಿಕ್ ಎಂದು ಕಾಂಗ್ರೆಸ್ ವಾದ ಮಾಡುತ್ತಿತ್ತು. ಮೂರ್ತಿ ಕಂಚಿನದ್ದೇ ಎಂದು ಬಿಜೆಪಿ ವಾದಿಸುತ್ತಿತ್ತು. ತಜ್ಞರ ಪರಿಶೀಲನೆ ಮತ್ತು ಪೊಲೀಸ್ ತನಿಖೆಯಿಂದ ಈಗ ಹಿತ್ತಾಳೆ ಎಂದು ಸಾಬೀತಾಗಿದೆ. ಶಿಲ್ಪಿ ಕೃಷ್ಣ ನಾಯಕ್ ಅವರ ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್‌ನಲ್ಲಿ ನಿರ್ಮಿಸಿದ್ದ ಮೂರ್ತಿಯಾಗಿದ್ದು, ಉಡುಪಿ ನಿರ್ಮಿತಿ ಕೇಂದ್ರ ಥೀಂ ಪಾರ್ಕ್ ಯೋಜನೆ ಮತ್ತು ಕಾಮಗಾರಿ ನಡೆಸಿತ್ತು. ಇದನ್ನೂ ಓದಿ: ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿದ ಚಾಲಕ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    2024ರ ಜೂನ್ 21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ. ಪೊಲೀಸರಿಂದ 1,231 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ವಿವಾದ ಚರ್ಚೆಯ ನಡುವೆ ಅರ್ಧ ಮೂರ್ತಿ ತೆರವು ಮಾಡಿ, ಅದನ್ನು ಶೆಡ್ ನಲ್ಲಿಟ್ಟು ಬೆಂಗಳೂರಿಗೆ ರವಾನೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಶಿಲ್ಪಿ ಕೃಷ್ಣನಾಯ್ಕ್, ನಿರ್ಮಿತಿ ಕೇಂದ್ರದ ಅರುಣ್, ಸಚಿನ್ ಒಳಸಂಚು, ನಂಬಿಕೆ ದ್ರೋಹ, ವಂಚನೆ- ಸಾಕ್ಷ್ಯ ನಾಶ ಮಾಡಿದ್ದು ದೃಢಪಟ್ಟಿದೆ. ಇದನ್ನೂ ಓದಿ: ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ

  • ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ: ಸುನಿಲ್ ಕುಮಾರ್ ತಿರುಗೇಟು

    ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ: ಸುನಿಲ್ ಕುಮಾರ್ ತಿರುಗೇಟು

    ಉಡುಪಿ: ಕಾರ್ಕಳದ (Karkala) ಪರಶುರಾಮ ಥೀಂ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ (Congress) ಬಿಜೆಪಿ (BJP) ಎರಡನೇ ಸುತ್ತಿನ ಜಟಾಪಟಿ ಶುರುವಾಗಿದೆ. ಸರಣಿ ಆರೋಪಗಳನ್ನು ಮಾಡುತ್ತಿದ್ದವರಿಗೆ ಒಂದು ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ದಾಖಲೆಗಳ ಜೊತೆ ತಿರುಗೇಟು ಕೊಟ್ಟಿದ್ದಾರೆ.

    ಉಡುಪಿ (Udupi) ಜಿಲ್ಲೆಯ ಪರಶುರಾಮ ಥೀಮ್ ಪಾರ್ಕ್ ಗಲಾಟೆ ತಾರಕಕ್ಕೇರಿದೆ. ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್ ಬಂಧನ ಬೆನ್ನಲ್ಲೇ ಮತ್ತೊಮ್ಮೆ ವಿವಾದ ಸ್ಫೋಟವಾಗಿದೆ. ಕಾಂಗ್ರೆಸ್ ಬಿಜೆಪಿ ರಾಜಕೀಯ ಕಚ್ಚಾಟಕ್ಕೆ ಬಲಿಯಾದ ಕಲಾವಿದನ ಪರವಾಗಿ ಸುನಿಲ್ ಕುಮಾರ್ ಮಾತನಾಡಿದ್ದಾರೆ. ಮೊದಲ ಬಾರಿಗೆ ಸಂಪೂರ್ಣ ದಾಖಲೆಯೊಂದಿಗೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಕಲಾವಿದ ಕೃಷ್ಣ ನಾಯ್ಕ್‌ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ರಾಜಕೀಯ ದ್ವೇಷ ಮತ್ತು ಸೋಲಿನ ಹತಾಶೆಯೇ ಕಾರಣ ಎಂದಿದ್ದಾರೆ. ಇದನ್ನೂ ಓದಿ: ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಒಟ್ಟು 14 ಕೋಟಿ ರೂ. ವೆಚ್ಚದ ಕಾರ್ಕಳ ಥೀಂ ಪಾರ್ಕ್‌ಗೆ 4.50 ಕೋಟಿ ರೂ. ಹಣ ಮಂಜೂರಾದರೂ ಸರಕಾರ ಬಿಡುಗಡೆ ಮಾಡಲಿಲ್ಲ. ಶಿಲ್ಪಿ ಮೂರ್ತಿಯ ವಿನ್ಯಾಸ ಬದಲಿಸಲು ಅನುಮತಿ ಪಡೆದು ಮೂರ್ತಿ ತೆರವು ಪ್ರಕ್ರಿಯೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು, ಕೋರ್ಟ್ ಸೂಚನೆ ಕೊಟ್ಟರು ಕಾಮಗಾರಿ ಬಿಡುತ್ತಿಲ್ಲವಂತೆ. ಸರ್ಕಾರದ ಯೋಜನೆ ಹಸ್ತಾಂತರ ಮೊದಲೇ ತನಿಖೆ ಮಾಡುವ ಪರಂಪರೆ ಉಡುಪಿಯಲ್ಲಿ ಶುರುವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಶರಾವತಿ ಹಿನ್ನೀರಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ನೀರುಪಾಲು

  • 4 ತಿಂಗಳ ಒಳಗಡೆ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿ: ಹೈಕೋರ್ಟ್‌

    4 ತಿಂಗಳ ಒಳಗಡೆ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿ: ಹೈಕೋರ್ಟ್‌

    ಬೆಂಗಳೂರು: ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಂ ಪಾರ್ಕ್ (Parashurama Theme Park) ಕಾಮಗಾರಿಯನ್ನು 4 ತಿಂಗಳ ಒಳಗಡೆ ಪೂರ್ಣಗೊಳಿಸುವಂತೆ ಉಡುಪಿ (Udupi) ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್‌ (High Court) ಸೂಚನೆ ನೀಡಿದೆ.

    ಪರಶುರಾಮ ಪ್ರತಿಮೆ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯ್ಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ (High Court) ನ್ಯಾ.ಮೂ.ಎಂ.ನಾಗಪ್ರಸನ್ನ ಆದೇಶ ಪ್ರಕಟಿಸಿದ್ದಾರೆ.

    ಬಾಕಿ ಕೆಲಸ ಪೂರ್ಣಗೊಳಿಸುವುದಕ್ಕೆ ಸೂಕ್ತ ಭದ್ರತೆ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಿಕೊಡಿ‌ ಎಂದು ಕೃಷ್ಣ ನಾಯ್ಕ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಪ್ರಕಟಗೊಂಡ ನಾಲ್ಕು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದೆ.  ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಗರ್ಭಿಣಿ – ದೂರು ನೀಡಿದ್ರೆ ಕೊಲೆ ಬೆದರಿಕೆ ಹಾಕಿದ್ದ ಯುವಕ

    ಷಡ್ಯಂತ್ರಕ್ಕೆ ಸೋಲು:
    ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದರೊಂದಿಗೆ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಸ್ಥಾಪಿತ ಹಿತಾಸಕ್ತಿಗಳು ನಡೆಸಿದ ಷಡ್ಯಂತ್ರಕ್ಕೆ ಸೋಲಾಗಿದ್ದು, ತಕ್ಷಣ ಕಾಮಗಾರಿ ಪ್ರಾರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಸುನಿಲ್‌ ಕುಮಾರ್‌ ಎಕ್ಸ್‌ನಲ್ಲಿ ಬರೆದಿದ್ದಾರೆ.

    ಏನಿದು ಪ್ರಕರಣ?
    ಕಾರ್ಕಳ ಮಾಜಿ ಸಚಿವ, ಹಾಲಿ ಶಾಸಕ ಸುನೀಲ್‌ ಕುಮಾರ್‌ (Sunil Kumar) ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿದ್ದರು. ಕಾಮಗಾರಿ ಪೂರ್ಣಗೊಳ್ಳದೇ ಈ ಥೀಮ್‌ ಪಾರ್ಕ್‌ ಉದ್ಘಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್‌ (Congress) ಆರೋಪಿಸಿತ್ತು. ಈ ಸಂಬಂಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೀಗ ಸಿಐಡಿ ತನಿಖೆಗೆ ಆದೇಶಿಸಿದ್ದರು. ಇದನ್ನೂ ಓದಿ: ಅಮಿತ್‌ ಶಾ ನಕಲಿ ವೀಡಿಯೋ ಪ್ರಕರಣ – ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

    ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಂ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಶೀಲನೆ ಮಾಡಿದ್ದರು. ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡದ ಹಿನ್ನಲೆಯಲ್ಲಿ ತನಿಖೆಗೆ ಆದೇಶ ನೀಡಿದ್ದರು.

     

  • ಪರಶುರಾಮ ಥೀಂ ಪಾರ್ಕ್ ಬಗ್ಗೆ ಸಿಐಡಿ ತನಿಖೆ ನಡೆಸುವುದನ್ನು ಸ್ವಾಗತಿಸುತ್ತೇನೆ: ಸುನಿಲ್ ಕುಮಾರ್

    ಪರಶುರಾಮ ಥೀಂ ಪಾರ್ಕ್ ಬಗ್ಗೆ ಸಿಐಡಿ ತನಿಖೆ ನಡೆಸುವುದನ್ನು ಸ್ವಾಗತಿಸುತ್ತೇನೆ: ಸುನಿಲ್ ಕುಮಾರ್

    ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಪರಶುರಾಮ ಥೀಮ್ ಪಾರ್ಕ್ (Parashurama Theme Park) ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸಿದೆ. ಈ ಕುರಿತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ಸಿಐಡಿ ತನಿಖೆ ನಡೆಸಲು ಮುಂದಾಗಿರುವುದನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಪರಶುರಾಮ ಥೀಂ  ಪಾರ್ಕ್ ವಿಚಾರದ ಬಗ್ಗೆ ಅನಗತ್ಯವಾಗಿ ಎಬ್ಬಿಸುತ್ತಿದ್ದ ಊಹಾಪೋಹ ಹಾಗೂ ಸುಳ್ಳು ಆರೋಪಗಳಿಗೆ ಒಂದು ಪೂರ್ಣ ವಿರಾಮ ಬೇಕಿತ್ತು. ಈ ಸುಳ್ಳು ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರ ಕೊನೆಗೂ ಸಿಐಡಿ ತನಿಖೆ ನಡೆಸಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ. ಇದನ್ನೂ ಓದಿ: ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಗೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು

    ಈ ಬಗ್ಗೆ ತನಿಖೆ ನಡೆಯಬೇಕೆಂದು ಆರು ತಿಂಗಳು ಹಿಂದೆಯೇ ನಾನು ಆಗ್ರಹಿಸಿದ್ದೆ. ಸರ್ಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವ ಜೊತೆಗೆ ಥೀಂ ಪಾರ್ಕ್ ಅಭಿವೃದ್ಧಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಇದನ್ನೂ ಓದಿ: ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಸಿಐಡಿ ತನಿಖೆಗೆ

    ಆದಷ್ಟು ಬೇಗ ಥೀಂ ಪಾರ್ಕ್ ಪ್ರವಾಸಿಗಳ ವೀಕ್ಷಣೆಗೆ ಮುಕ್ತಗೊಳ್ಳುವಂತಾಗಬೇಕೆಂದು ಒತ್ತಾಯಿಸುತ್ತೇನೆ. ಸಿಐಡಿ ತನಿಖೆಗೆ ಒತ್ತಾಯ ಹಾಗೂ ಮುತುವರ್ಜಿ ತೋರಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಒಬಿಸಿಯಲ್ಲಿ ಹುಟ್ಟಿಲ್ಲ, ಜನರ ದಾರಿ ತಪ್ಪಿಸುತ್ತಿದ್ದಾರೆ: ರಾಹುಲ್‌ ಗಾಂಧಿ

  • ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ – ತುಳುನಾಡು ಬಂಗಾರದ ನಾಡು ಆಗಲಿದೆ: ಸಿಎಂ

    ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ – ತುಳುನಾಡು ಬಂಗಾರದ ನಾಡು ಆಗಲಿದೆ: ಸಿಎಂ

    ಉಡುಪಿ: ಕಾರ್ಕಳ ತಾಲೂಕಿನ ಬೈಲೂರಿನ ಉಮಿ ಕುಂಜ ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಪರಶುರಾಮ ಥೀಂ ಪಾರ್ಕನ್ನು (Parashurama Theme Park) ಸಿ.ಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಉದ್ಘಾಟನೆ ಮಾಡಿದರು. ಪರಶುರಾಮನ ಬೃಹತ್ ಪ್ರತಿಮೆಯ ಮೂಲಕ ತುಳುನಾಡು (Tulu Nadu) ಬಂಗಾರದ ನಾಡು ಆಗಲಿ ಎಂದು ಈ ವೇಳೆ ಸಿಎಂ ಶುಭ ಹಾರೈಸಿದರು.

    ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಕಾರ್ಕಳಕ್ಕೆ ಆಗಮಿಸಿದ ಬೊಮ್ಮಾಯಿ, ಕಾರ್ಕಳ ಜಿಲ್ಲಾ ಕ್ರೀಡಾಂಗಣದಲ್ಲಿ ಇಳಿದು ರಸ್ತೆ ಮಾರ್ಗ ಮೂಲಕ ಬೈಲೂರಿಗೆ ಆಗಮಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್ ಪರಶುರಾಮನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಥೀಂ ಪಾರ್ಕ್ ನ ಉದ್ಘಾಟನೆ ಮಾಡಲಾಯಿತು.

    ಸುಮಾರು 15 ಕೋಟಿ ವೆಚ್ಚದಲ್ಲಿ ಪರಶುರಾಮನ ಪ್ರತಿಮೆ, ಬಯಲು ರಂಗ ಮಂದಿರ ಆರ್ಟ್ ಗ್ಯಾಲರಿ, ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ. ಶೇ.90ರಷ್ಟು ಕಾಮಗಾರಿ ಪೂರ್ಣವಾಗಿದೆ. ಪರಶುರಾಮ ಥೀಂ ಪಾರ್ಕ್ ಉದ್ಘಾಟಿಸಿ ಸಿಎಂ ಬೊಮ್ಮಾಯಿ ಪುರಾಣದ ಕಥೆಗಳನ್ನು ಹೇಳಿದರು. ಇಂದು ಕರ್ನಾಟಕದ ಕರಾವಳಿಯ (Karavali) ಐತಿಹಾಸಿಕ ದಿನ. ಪರಶುರಾಮ ಥೀಂ ಪಾರ್ಕ್, ಪ್ರತಿಮೆ ಅನಾವರಣ ಮಾಡಿದ ನಾವು ಭಾಗ್ಯವಂತರು. ಇದೊಂದು ಇತಿಹಾಸ ಸೃಷ್ಟಿ ಮಾಡಿದ ದಿನ ಎಂದು ಹೇಳುತ್ತೇನೆ. ಪರಶುರಾಮ ರೋಚಕ ಕಥೆ ಇರುವ ಅವತಾರ ಪುರುಷ ಎಂದು ಬಣ್ಣಿಸಿದರು.

    ಪರಶುರಾಮ (Parashurama) ಮಹಾಭಾರತದಲ್ಲಿ ಕರ್ಣನ ವ್ಯಕ್ತಿತ್ವದಂತೆಯೇ. ಶಿವನಿಂದ ವರ ಪಡೆದ ವೀರ ಶೂರ ಅಗಾಧ ಶಕ್ತಿ ಹೊಂದಿದ್ದ ವ್ಯಕ್ತಿ ಪರಶುರಾಮ. ರೇಣುಕಾದೇವಿಯ ಪ್ರೀತಿಯ ಮಗ ಕೊನೆಗೆ ತಾಯಿಯ ಶಿರಚ್ಛೇದನ ಮಾಡುತ್ತಾನೆ. ವಿಶ್ವವನ್ನು 21 ಬಾರಿ ಸುತ್ತಿ ಗೆಲುವು ಸಾಧಿಸುತ್ತಾನೆ. ಸಮುದ್ರಕ್ಕೆ ಕೊಡಲಿ ಎಸೆದು ಭೂಭಾಗ ಸೃಷ್ಟಿಯಾಗುತ್ತದೆ. ಸೃಷ್ಟಿಕರ್ತನ ಕಥೆ ಪುರಾಣದಲ್ಲಿದೆ. ಮುಂದಿನ ಪೀಳಿಗೆಗೆ ಈ ಕಥೆ ಬೇಕಾಗುತ್ತದೆ ಅದಕ್ಕಾಗಿ ಈ ಥೀಂ ಪಾರ್ಕ್ ಸ್ಥಾಪನೆ ಆಗಿದೆ ಎಂದರು.

    ಸುನೀಲ್ ಕುಮಾರ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಜನ ಸೇವಕನ ಗುಣ. ನಾನು ಪರಶುರಾಮನ ಭಕ್ತನಾಗಿ ಉದ್ಘಾಟನೆಗೆ ಬಂದಿದ್ದೇನೆ. ಥೀಂ ಪಾರ್ಕ್ ಟೂರಿಸಂ ಸೆಂಟರ್ ಜೊತೆ ಪುಣ್ಯಭೂಮಿ ಕೂಡಾ ಆಗಲಿದೆ. ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಕರಾವಳಿಗೆ ಟೂರಿಸಂ ನ ಮಾಸ್ಟರ್ ಪ್ಲ್ಯಾನ್ ಮಾಡಿದ್ದೇವೆ. ಈ ಭಾಗದ ಜನ ಪರಿಶ್ರಮ ಜೀವಿಗಳು. ಕರಾವಳಿ ಭಾಗಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಕರಾವಳಿಗೆ ಪ್ಯಾಕೇಜ್ ಕೊಡಲ್ಲ ಬದುಕು ಕಟ್ಟಿಕೊಡುತ್ತೇವೆ. ಪರಶುರಾಮನ ಸ್ಥಾಪನೆ ನಂತರ ತುಳುನಾಡು ಬಂಗಾರದ ನಾಡು ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: Pariksha Pe Charcha 2023: ಪೋಷಕರು ಮಕ್ಕಳಿಗೆ ಒತ್ತಡ ಹಾಕಬೇಡಿ – ವಿದ್ಯಾರ್ಥಿಗಳು ತಾಯಿಯಿಂದ ಸಮಯದ ನಿರ್ವಹಣೆ ಕಲಿಯಿರಿ: ಮೋದಿ

    ಇಂಧನ ಮತ್ತು ಕನ್ನಡ ಸಂಸ್ಕೃತಿಯ ಇಲಾಖೆಯ ಸಚಿವ ಸುನಿಲ್ ಕುಮಾರ್ (Sunil Kumar) ಮಾತನಾಡಿ, ಕರಾವಳಿಯ ಪ್ರವಾಸೋದ್ಯಮದ ಪಟ್ಟಿಗೆ ಪರಶುರಾಮ ಥೀಂ ಪಾರ್ಕ್ ಸೇರ್ಪಡೆಯಾಗಿದೆ. ಬೆಟ್ಟದ ಮೇಲಿಂದ 360 ಡಿಗ್ರಿಯಲ್ಲಿ ಸುತ್ತಲ ಪರಿಸರವನ್ನು ನೋಡುವ ಅವಕಾಶ ಇದೆ. ಒಂದು ಭಾಗದಲ್ಲಿ ಸಮುದ್ರ ಮತ್ತೊಂದು ಭಾಗದಲ್ಲಿ ಪಶ್ಚಿಮ ಘಟ್ಟವನ್ನು ಕಣ್ತುಂಬಿಕೊಳ್ಳಬಹುದು ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k