Tag: ಪರಶುರಾಮ್

  • PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

    PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

    – ಕೇಸ್‌ ದಾಖಲಾಗ್ತಿದ್ದಂತೆ ಶಾಸಕ ಚನ್ನಾರೆಡ್ಡಿ, ಪುತ್ರ ನಾಪತ್ತೆ

    ಯಾದಗಿರಿ: ಇಲ್ಲಿನ ನಗರ ಠಾಣೆ ಪಿಎಸ್‌ಐ ಪರಶುರಾಮ್‌ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ಹೊಣೆ ಹೊತ್ತಿರುವ ಸಿಐಡಿ ತನಿಖಾ ತಂಡ (CID Investigation Team) ಯಾದಗಿರಿಗೆ ಭಾನುವಾರ ಭೇಟಿ ನೀಡಿದೆ.

    ಪರಶುರಾಮ್‌ ಸಾವು ಪ್ರರಕರಣ ಸಂಬಂಧ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Channa Reddy Patel) ಮತ್ತು ಅವರ ಪುತ್ರ ಪಂಪಣ್ಣಗೌಡ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಶನಿವಾರ (ಆ.3) ಆದೇಶ ಹೊರಡಿಸಿತ್ತು. ಸರ್ಕಾರ ಆದೇಶಿಸಿದ ಮರುದಿನವೇ ಡಿವೈಎಸ್‌ಪಿ (DYSP) ಪುನೀತ ನೇತೃತ್ವದ ಸಿಐಡಿ ತನಿಖಾ ತಂಡ ಯಾದಗಿರಿಗೆ (Yadagiri) ಭೇಟಿ ಕೊಟ್ಟಿದೆ.

    ಯಾದಗಿರಿ ನಗರ ಪೊಲೀಸ್‌ ಠಾಣೆಗೆ (Yadagiri City Police Station) ಭೇಟಿ ನೀಡಿದ್ದ ಸಿಐಡಿ ತಂಡ ಈಗಾಗಲೇ ಡಿವೈಎಸ್ಪಿ ಕಚೇರಿಯಲ್ಲಿ ಕೇಸ್‌ಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದೆ. ಇಂದೇ ಪೊಲೀಸರಿಂದ ಕೇಸ್ ಫೈಲ್ ಪಡೆದು, ತನಿಖೆ ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

    ಶಾಸಕ ಚನ್ನಾರೆಡ್ಡಿ, ಪಂಪಣ್ಣಗೌಡಗೆ ಬಂಧನ ನಾಪತ್ತೆ:
    ಇನ್ನೂ ಪರಶುರಾಮ್‌ ನಿಗೂಢ ಸಾವು ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕೇಸ್‌ ದಾಖಲಾಗುತ್ತಿದ್ದಂತೆ ಬಂಧನದ ಭೀತಿಗೆ ಒಳಗಾಗಿರುವ ಶಾಸಕ ಹಾಗೂ ಪುತ್ರ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕದಲ್ಲಿಯೂ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪರಶುರಾಮ್ ತಂದೆ ಹೇಳಿದ್ದೇನು?
    ಮಗನ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಶುರಾಮ್ ತಂದೆ ಜನಕಮುನಿ, ಶುಕ್ರವಾರ ಮಧ್ಯಾಹ್ನ ಇಬ್ಬರೂ ಸೇರಿ ಮನೆಯಲ್ಲಿ ಅಡುಗೆ ಮಾಡಿದ್ದೆವು. ಚಿತ್ರಾನ್ನ ಮಾಡಿ ಊಟ ಮಾಡಿಕೊಂಡಿದ್ದೆವು. ಆನಂತರ ಅವನು ಹೋಗಿ ಅವನ ಕೋಣೆಯಲ್ಲಿ ಮಲಗಿದ್ದ. ರಾತ್ರಿ 8 ಗಂಟೆ ಹೊತ್ತಿಗೆ ಎಬ್ಬಿಸಲು ಹೋದಾಗ ಅವನು ಎದ್ದೇಳಲಿಲ್ಲ. ಬೆಡ್ ಬಳಿ ಸ್ವಲ್ಪ ರಕ್ತ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದ್ರು ಅವನು ಬದುಕಲಿಲ್ಲ. ನಮ್ಮದು ತೀರಾ ಬಡತನದ ಕುಟುಂಬ. ಬಡತನದಲ್ಲೇ ಕಷ್ಟಪಟ್ಟು ಓದಿ ನೌಕರಿ ಪಡೆದಿದ್ದ. ಏನೇ ನೋವಾದರೂ ಅವನ ಹೆಂಡತಿ, ತಾಯಿ ಜೊತೆ ಹಂಚಿಕೊಳ್ತಿದ್ದ. ಶುಕ್ರವಾರ ಬೆಳಗ್ಗೆ ಯಾಕೋ ಬೇಜಾರಾಗಿದ್ದ. ಅವನ ಸಾವಿನಿಂದ ನಮಗೆಲ್ಲ ತುಂಬಾ ಆಘಾತವಾಗಿದೆ. ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು. ನನ್ನ ಸೊಸೆಗೆ ಬದುಕಲು ದಾರಿ ಮಾಡಿಕೊಡಬೇಕು ಅಂತ ಆಗ್ರಹಿಸಿದ್ದಾರೆ.

    ಏನಿದು ಪ್ರಕರಣ?
    ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನ ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಕಳೆದ ಗುರುವಾರ ಅವರನ್ನು ಪೊಲೀಸ್‌ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ (ಆ.2) ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ನಗರ ಠಾಣೆಗೆ ದೂರು ನೀಡಿದೆ. ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.

  • ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    – ಕಾಂಗ್ರೆಸ್‌ ಶಾಸಕ ಚೆನ್ನಾರೆಡ್ಡಿ ಪಾಟೀಲ್‌, ಪುತ್ರನ ವಿರುದ್ಧ ಗಂಭೀರ ಆರೋಪ
    – ಅಂಬುಲೆನ್ಸ್‌ ತಡೆದು ದಲಿತ ಸಂಘಟನೆಗಳಿಂದ ಪ್ರತಿಭಟನೆ

    ಯಾದಗಿರಿ: ಯಾದಗಿರಿ ನಗರದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ (Parashuram) ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು  ದಲಿತ ಸಂಘಟನೆಗಳು ಆಗ್ರಹಿಸಿವೆ. ಅಷ್ಟೇ ಅಲ್ಲದೇ ಪರಶುರಾಮ್‌ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ (Channa Reddy Patel) ಮತ್ತು ಪುತ್ರ ಸನ್ನಿಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಕುಟುಂಬಸ್ಥರ ಆರೋಪ ಏನು?
    ಪೋಸ್ಟಿಂಗ್‌ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್‌ ಶಾಸಕ (Congress MLA) ಚೆನ್ನಾರೆಡ್ಡಿ ಪಾಟೀಲ್‌ ಬೇಡಿಕೆ ಇಟ್ಟಿದ್ದರು. ಈಗ ನಿಯಮಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್‌ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್‌ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಎಂದು ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.  ಇದನ್ನೂ ಓದಿ: ಕೋಲಾರದಲ್ಲಿ ಆಡಿ ಕಾರು ಮರಕ್ಕೆ ಡಿಕ್ಕಿ – ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು, ಓರ್ವ ಪಾರು

    ಪರಶುರಾಮ್‌ ಅವರು ಪಿಎಸ್‌ಐ ಹುದ್ದೆ ಪಡೆಯಲು 30 ಲಕ್ಷ ರೂ. ನೀಡಿದ್ದರು. ಈ ಹುದ್ದೆ ಪಡೆಯಲು ಬಹಳ ಸಾಲ ಮಾಡಿದ್ದರು. ಈಗ ಮತ್ತೆ ನಿಯಮಬಾಹಿರವಾಗಿ ಒಂದು ವರ್ಷ ಪೂರೈಸುವ ಮುನ್ನವೇ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಖಿನ್ನತೆಗೆ ಜಾರಿದ್ದರು. ಈ ಕಾರಣದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.

    ಕಾರ್ಯಕರ್ತರ ಪ್ರತಿಭಟನೆ:
    ಪಿಎಸ್‌ಐ ಪರಶುರಾಮ್‌ ಮೃತಪಟ್ಟ ಹಿನ್ನೆಲೆಯಲ್ಲಿ ಯಾದಗಿರಿಯ ದಲಿತ ಸಂಘಟನೆಗಳು ರಾತ್ರಿಯೇ ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಅಂಬುಲೆನ್ಸ್‌ ತಡೆದು ಪ್ರತಿಭಟಿಸಿದ್ದಾರೆ.

    ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಬುಲೆನ್ಸ್‌ನಲ್ಲಿ ರವಾನೆ ಮಾಡಲಾಗುತ್ತಿತ್ತು. ಈ ವೇಳೆ ಆಂಬುಲೆನ್ಸ್‌ ತಡೆದು ಪ್ರತಿಭಟಿಸಿದ್ದಾರೆ. ಉತ್ತಮ ಕೆಲಸದಿಂದ ಪರಶುರಾಮ್‌ ಅವರು ಹೆಸರು ಪಡೆದಿದ್ದರು. ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

     

    ಏನಿದು ಪ್ರಕರಣ?
    ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಗುರುವಾರ ಅವರನ್ನು ಪೊಲೀಸ್‌ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

  • ವಾಲ್ಮೀಕಿ ನಿಗಮ ಗೋಲ್ಮಾಲ್‌ಗೆ ಸ್ಪೋಟಕಆಡಿಯೋ ಸಾಕ್ಷ್ಯ – ನಾಗೇಂದ್ರ ಕಡೆಯವರಿಂದಲೇ ಅಕ್ರಮ ಆರೋಪ

    ವಾಲ್ಮೀಕಿ ನಿಗಮ ಗೋಲ್ಮಾಲ್‌ಗೆ ಸ್ಪೋಟಕಆಡಿಯೋ ಸಾಕ್ಷ್ಯ – ನಾಗೇಂದ್ರ ಕಡೆಯವರಿಂದಲೇ ಅಕ್ರಮ ಆರೋಪ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಬಯಲಾದ ಆಡಿಯೋ, ವೀಡಿಯೋ ಸಾಕ್ಷ್ಯಗಳು ಹಗರಣದ ಕರ್ಮಕಾಂಡವನ್ನು ಬಟಾಬಯಲು ಮಾಡಿವೆ.

    ಅಧೀಕ್ಷಕ ಚಂದ್ರಶೇಖರ್ (Chandrashekar) ಆತ್ಮಹತ್ಯೆಗೆ (Suicide) 3 ದಿನ ಮೊದಲು ಅಂದ್ರೆ ಮೇ 24ರಂದು ನಿಗಮದ ಎಂಡಿ ಪದ್ಮನಾಭ್ (MD Padmanabhan) ಮತ್ತು ಲೆಕ್ಕಪರಿಶೋಧಕ ಪರಶುರಾಮ್ (Parashuram) ಹೋಟೆಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ್ದರು. ಹಗರಣದಲ್ಲಿ ಯಾರ‍್ಯಾರು ಪಾಲುದಾರರು? ಹಗರಣ ಬಯಲಾದ್ರೆ ಏನಾಗುತ್ತೆ? ಸಿಬಿಐ ತನಿಖೆ ನಡೆದರೆ ಏನಾಗುತ್ತದೆ? ಸ್ಥಳೀಯವಾಗಿಯೇ ತನಿಖೆ ನಡೆಸಿದರೆ ಏನಾಗುತ್ತೆ? ಎಂಬ ಬಗ್ಗೆ ಪದ್ಮನಾಭ್-ಪರಶುರಾಮ್ ಮಾತಾಡಿಕೊಂಡಿದ್ದರು.

    ಎಂಡಿ ತಮ್ಮನ್ನು ಹಗರಣದಲ್ಲಿ ಸಿಲುಕಿಸಬಹುದು ಎಂಬ ಭಯಕ್ಕೆ ಇದೆಲ್ಲವನ್ನು ಅಧೀಕ್ಷಕ ಪರಶುರಾಮ್ ರೆಕಾರ್ಡ್ ಮಾಡಿಕೊಂಡಿದ್ದರು. ಇದೀಗ ಇದೇ ಆಡಿಯೋ-ವೀಡಿಯೋ ಔಟ್ ಆಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ನಿಖಿಲ್ ಕುಮಾರಸ್ವಾಮಿ

     

    ಆಡಿಯೋ ಸಾಕ್ಷ್ಯ 1 – ಸಚಿವ ನಾಗೇಂದ್ರಗೆ ಗೊತ್ತು!
    ಪರಶುರಾಮ್, ಲೆಕ್ಕ ಪರಿಶೋಧಕ: ಮಿನಿಸ್ಟರ್ ಗಮನಕ್ಕೆ ಇಲ್ವಾ ಸರ್ ಇದು. ನೆಕ್ಕಂಟಿ ನಾಗರಾಜ್ ಅಕೌಂಟ್ ಓಪನ್ ಮಾಡಿರೋದು.
    ಪದ್ಮನಾಭ, ಎಂಡಿ: ಅದು ಗೊತ್ತು ಅವರಿಗೆ, ಅವರೇ ಅಲ್ವಾ, ಎಲ್ಲರನ್ನು ಕರೆಸಿ, ಮಾತನಾಡಿದ್ದು.
    ಪರಶುರಾಮ್, ಲೆಕ್ಕ ಪರಿಶೋಧಕ: ಅಕೌಂಟ್ ಓಪನ್ ಮಾಡೋವಾಗ ಇದ್ದರಲ್ಲ.

    ಆಡಿಯೋ ಸಾಕ್ಷ್ಯ 2 – ಅಧ್ಯಕ್ಷರಿಗೆ ಹೇಳ್ಬೇಡಿ ರಾದ್ದಾಂತ ಆಗುತ್ತೆ!
    ಪರಶುರಾಮ್, ಲೆಕ್ಕ ಪರಿಶೋಧಕ : ಬ್ಯಾಂಕ್‌ನವರು ಈಗ ಕೇಸ್ ಮಾಡ್ತಿವಲ್ಲ ನಮ್ಮ ದುಡ್ಡು ನಮಗೆ ಕೊಡ್ತಾರಾ ಅವರು ಅಂತಾ? ಅಧ್ಯಕ್ಷರಿಗೆ ಹೇಳೋದಾ ಬೇಡ್ವಾ ಅಂತಾ.
    ಪದ್ಮನಾಭ, ಎಂಡಿ : ಹೇಳಿದ್ರೆ ದೊಡ್ಡ ರಾದ್ದಾಂತ ಮಾಡ್ತಾರೆ ಈಗ. ಸೋಮವಾರ, ಮಂಗಳವಾರ, ಬುಧವಾರ ಮೂರು ದಿನ ಬಿಡೋಣ ಈಗ. ಮ್ಯಾನೇಜ್ ಮಾಡಿ ಕಳಿಸಿ. ಅವನಿಗೂ ಅಷ್ಟೇ, ಆಯ್ತಪ್ಪ ಎಲ್ಲಾ ಪ್ರಿಂಟ್ ತೆಗೆಯಕ್ಕೆ ಹೇಳಿದ್ದೀನಿ ಕೊಡ್ತಿನಿ ಅಂತಾ ಹೇಳಿ ಕಳಿಸಿ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

     

    ಆಡಿಯೋ ಸಾಕ್ಷ್ಯ 3 ಹಗರಣ ಬಯಲಾದ್ರೆ ಏನ್ ಹೇಳ್ಬೇಕು?
    ಪರಶುರಾಮ್, ಲೆಕ್ಕ ಪರಿಶೋಧಕ : ನಿಮ್ಮ ಕಾಂಟ್ಯಾಕ್ಟ್‌ನಲ್ಲಿ ಯಾರು ಇದ್ದಾರೆ ಸಾರ್?
    ಪದ್ಮನಾಭ, ಎಂಡಿ : ಅದೇ ನಾಗರಾಜ್ ಬಾಮೈದ
    ಪರಶುರಾಮ್, ಲೆಕ್ಕ ಪರಿಶೋಧಕ : ನಾನು ಅವತ್ತೇ ಹೇಳಿದ್ದೆ ಸಾರ್, ಬೇಡ ಬೇಡ ಅಂತಾ. ಈ ಸೂ… ಮಕ್ಕಳು ಬಂದ್ರಲ್ಲ.
    ಪದ್ಮನಾಭ, ಎಂಡಿ: ನಾವು ಅದನ್ನು ಹೇಳಬಾರದು. ಒಂದೇ ಮಾತಲ್ಲಿ ಹೇಳಬೇಕು. ಮಿನಿಸ್ಟರ್ ಆಫೀಸ್‌ನಿಂದ ಹೇಳಿದ್ರು. ನಾಗರಾಜ್ ಕಡೆಯಿಂದ ಒತ್ತಡ ಬಂತು. ನಾವು ಆಯಿತು ಅಂತಾ, ಇದ್ದ ಅಕೌಂಟ್ ಟ್ರಾನ್ಸ್‌ಫರ್‌ ಮಾಡಿಕೊಟ್ವಿ.

  • ಮಂಡ್ಯದಲ್ಲಿ ಡ್ರಗ್ಸ್ ದಂಧೆ ಇಲ್ಲ, ಗಾಂಜಾ ಮಾರಾಟ ನಡೆದಿರೋದು ನಿಜ: ಎಸ್‍ಪಿ ಸ್ಪಷ್ಟನೆ

    ಮಂಡ್ಯದಲ್ಲಿ ಡ್ರಗ್ಸ್ ದಂಧೆ ಇಲ್ಲ, ಗಾಂಜಾ ಮಾರಾಟ ನಡೆದಿರೋದು ನಿಜ: ಎಸ್‍ಪಿ ಸ್ಪಷ್ಟನೆ

    ಮಂಡ್ಯ: ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಇಲ್ಲ. ಆದರೆ ಗಾಂಜಾ ಮಾರಾಟ ನಡೆದಿರುವುದು ನಿಜ ಎಂದು ಮಂಡ್ಯ ಎಸ್‍ಪಿ ಪರಶುರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ:  ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ 

    ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ, ಇದುವರೆಗೆ ಮಂಡ್ಯ ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟ ಕಂಡುಬಂದಿಲ್ಲ. ಆದರೆ ಗಾಂಜಾ ಮಾರಾಟ ಪ್ರಕರಣಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ. ಮಂಡ್ಯದಲ್ಲಿ ಡ್ರಗ್ಸ್ ಸಿಗುತ್ತೇ ಎಂದು ಮಾಜಿ ಎಂಪಿ ಶಿವರಾಮೇಗೌಡ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಆರೋಪಿಸಿದ್ದರು.

    ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 43 ಗಾಂಜಾ ಪ್ರಕರಣಗಳು ಪತ್ತೆಯಾಗಿವೆ. 5 ವರ್ಷದಲ್ಲಿ 145 ಕೆಜಿ ಗಾಂಜಾವನ್ನು ಸೀಜ್ ಮಾಡಿದ್ದೇವೆ. ಇದುವರೆಗೆ 64 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದೇವೆ. ಇದರಲ್ಲಿ ಪೆಡ್ಲರ್, ಗ್ರಾಹಕರು ಮತ್ತು ಮಾರಾಟ ಮಾಡುವವರು ಇದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹೆಚ್ಚು ಗಾಂಜಾ ಮಾರಾಟವಾಗುತ್ತಿತ್ತು. ಕಳೆದ ವರ್ಷ 7 ಪ್ರಕರಣಗಳ ದಾಖಲಾಗಿವೆ. ಒಂಭತ್ತು ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು.

    ನಾಗಮಂಗಲಕ್ಕೆ ಆಂಧ್ರ ಪ್ರದೇಶದ ಲಿಂಕ್ ಇದೆ. ನಾಗಮಂಗಲಕ್ಕೆ ಆಂಧ್ರ ಪ್ರದೇಶದಿಂದ ಗಾಂಜಾ ಬರುತ್ತಿತ್ತು. ಆ ಲಿಂಕ್‍ನನ್ನು ಈಗ ಬ್ರೇಕ್ ಮಾಡಿದ್ದೇವೆ. ಮಂಡ್ಯ ಜಿಲ್ಲೆಗೆ ಮೈಸೂರು, ಬಳ್ಳಾರಿ ಹಾಗೂ ಆಂಧ್ರದ ಲಿಂಕ್ ಹೆಚ್ಚಿದೆ. ಇಲ್ಲಿಂದ ಹೆಚ್ಚು ಗಾಂಜಾ ಸಪ್ಲೈ ಆಗುತ್ತಿದೆ. ಗಾಂಜಾ ಮಾರಾಟ ಹಾಗೂ ಸೇವನೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಎಸ್‍ಪಿ ಪರಶುರಾಮ್ ಹೇಳಿದರು.

  • ಗೌರಿ ಕೇಸ್:  ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ರಾಯಚೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪದಲ್ಲಿ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆ ಕುರಿತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಬೆಳಕಿಗೆ ಬಂದಿವೆ.

    ರಾಯಚೂರಿನ ಮಾನ್ವಿಯ ಇಸ್ಲಾಂನಗರದಲ್ಲಿರುವ ಅಲ್ ಫುರ್ ಖಾನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ತರಗತಿಯ ವರೆಗೆ ಪರಶುರಾಮ್ ವಿದ್ಯಾಭ್ಯಾಸ ನಡೆಸಿದ್ದಾನೆ. ಅಲ್ಲದೇ ಪರಶುರಾಮ್ ಕುಟುಂಬ ಮಾನ್ವಿಯಲ್ಲಿ ನೆಲೆಸಿದ್ದ ವೇಳೆ ಮುಸ್ಲಿಮರು ಹೆಚ್ಚು ವಾಸಿಸುವ ಇಸ್ಲಾಂ ನಗರದಲ್ಲೇ ವಾಸವಾಗಿತ್ತು.

    ಉಳಿದಂತೆ 1997 ರಿಂದ 2005ರ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಪರಶುರಾಮ್, ಮಾನ್ವಿಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿಯನ್ನ ಓದಿದ್ದಾನೆ. 2007 ರಿಂದ 2009ರಲ್ಲಿ ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ಮುಗಿಸಿ ಬಳಿಕ ಅದೇ ಕಾಲೇಜಿನಲ್ಲಿ ಬಿಕಾಂ ಸೇರಿದ್ದ. ಆದರೆ ಬಿಕಾಂ ಮೊದಲ ಹಾಗೂ ಎರಡನೇ ಸೆಮಿಸ್ಟರ್ ಗಳಲ್ಲಿ ಫೇಲ್ ಆಗಿದ್ದ ಆಕರಣ ಬಳಿಕ ಬಿಕಾಂ ಮೂರನೇ ಸೆಮಿಸ್ಟರ್ ಗೆ ಲಿಂಗಸುಗೂರಿನ ವಿಸಿಬಿ ಎಜುಕೇಶನ್ ಸೊಸೈಟಿ ಕಾಲೇಜ್ ಗೆ ಪ್ರವೇಶ ಪಡೆದಿದ್ದ.

    ಈ ಕುರಿತು ಮಾಹಿತಿ ನೀಡಿದರುವ ಕಾಲೇಜು ಪ್ರಾಂಶುಪಾಲರು ಕಾಲೇಜಿಗೆ ಪ್ರವೇಶದ ಪಡೆದ ಪರಶುರಾಮ್ ಬಳಿಕ ತರಗತಿಗಳಿಗೆ ಹಾಜರಾಗಿಲ್ಲ. ಇದರಿಂದ ಆತನ ಓದು ಅಲ್ಲಿಗೆ ಅಂತ್ಯವಾಗಿದೆ ಎಂದು ತಿಳಿಸಿದ್ದು, ಈ ವೇಳ ಪರಶುರಾಮ್ ಯಾವ ಸಂಘಟನೆಗಳ ಜೊತೆಗೂ ಗುರುತಿಸಿಕೊಂಡಿರುವ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.