Tag: ಪರವಾನಗಿ

  • ಪಂಜಾಬ್‍ನಲ್ಲಿ ಗನ್ ಸಂಸ್ಕೃತಿ ವಿರುದ್ಧ ಕ್ರಮ – ರಾಜ್ಯದಲ್ಲಿ 813 ಗನ್ ಪರವಾನಗಿ ರದ್ದು

    ಪಂಜಾಬ್‍ನಲ್ಲಿ ಗನ್ ಸಂಸ್ಕೃತಿ ವಿರುದ್ಧ ಕ್ರಮ – ರಾಜ್ಯದಲ್ಲಿ 813 ಗನ್ ಪರವಾನಗಿ ರದ್ದು

    ಚಂಡೀಗಢ: ಪಂಜಾಬ್‍ನಲ್ಲಿ (Punjab) ಗನ್ ಸಂಸ್ಕೃತಿ (Gun Culture) ವಿರುದ್ಧ ಭಗವಂತ್ ಮಾನ್ ನೇತೃತ್ವದ ಸರ್ಕಾರ ಪ್ರಮುಖ ಕ್ರಮವನ್ನು ಕೈಗೊಂಡಿದ್ದು, ರಾಜ್ಯದಲ್ಲಿ 813 ಬಂದೂಕುಗಳ ಪರವಾನಗಿಯನ್ನು ರದ್ದುಗೊಳಿಸಿದೆ.

    ಭಗವಂತ್ ಮಾನ್ (Bhagwant Mann) ಸರ್ಕಾರವು ಲೂಧಿಯಾನ ಗ್ರಾಮಾಂತರದಿಂದ 87, ಶಹೀದ್ ಭಗತ್ ಸಿಂಗ್ ನಗರದಿಂದ 48, ಗುರುದಾಸ್‍ಪುರದಿಂದ 10, ಫರೀದ್‍ಕೋಟ್‍ನಿಂದ 84, ಪಠಾಣ್‍ಕೋಟ್‍ನಿಂದ 199, ಹೋಶಿಯಾಪುರದಿಂದ 47, ಕಪುರ್ತಲಾದಿಂದ 6, ಎಸ್‍ಎಎಸ್ ಕಸ್ಬಾದಿಂದ 235 ಮತ್ತು ಸಂಗ್ರೂರ್‍ನಿಂದ 16 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಅಮೃತಸರ ಕಮಿಷನರೇಟ್‍ನ 27 ಮತ್ತು ಜಲಂಧರ್ ಕಮಿಷನರೇಟ್‍ನ 11 ಮತ್ತು ಇತರ ಹಲವು ಜಿಲ್ಲೆಗಳ ಶಸ್ತ್ರಾಸ್ತ್ರ ಪರವಾನಗಿಯನ್ನು (Licence) ಸಹ ರದ್ದುಗೊಳಿಸಲಾಗಿದೆ. ಪಂಜಾಬ್ ಸರ್ಕಾರ ಇದುವರೆಗೆ 2,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಗೊಳಿಸಿದೆ.

    ಬಂದೂಕುಗಳನ್ನು ಇಟ್ಟುಕೊಳ್ಳುವವರು ನಿಯಮಗಳನ್ನು ಅನುಸರಿಸಬೇಕು. ಪಂಜಾಬ್‍ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಸ್ಥಳಗಳು, ಮದುವೆ ಸಮಾರಂಭಗಳು ಅಥವಾ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಹಾಗೂ ಪ್ರದರ್ಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    ಪಂಜಾಬ್‍ನಲ್ಲಿ ಒಟ್ಟು 3,73,053 ಶಸ್ತ್ರಾಸ್ತ್ರ ಪರವಾನಗಿಗಳಿವೆ. ಬಂದೂಕು ಸಂಸ್ಕøತಿಯನ್ನು ಕೊನೆಗಾಣಿಸಲು ನಿರಂತರವಾಗಿ ಕ್ರಮ ಕೈಗೊಳ್ಳುತ್ತಿರುವುದಾಗಿ ಪಂಜಾಬ್ ಸರ್ಕಾರ ಹೇಳಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಸ್ವಾಗತಿಸಲು ನಿಂತಿದ್ದ ಅಭಿಮಾನಿಗಳಿಗೆ ಪ್ರಧಾನಿ ಪುಷ್ಪಾರ್ಚನೆ

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯು ಗನ್ ಸಂಸ್ಕೃತಿಯ ಪರ-ವಿರೋಧ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಿಯಂತ್ರಣ ಮಾಡಬೇಕು ಎಂಬುದು ಹೆಚ್ಚಾಗಿ ಕೇಳಿ ಬಂದಿತ್ತು.  ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು

  • ಜಾನ್ಸನ್ ಬೇಬಿ ಪೌಡರ್ ಪರವಾನಗಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ

    ಜಾನ್ಸನ್ ಬೇಬಿ ಪೌಡರ್ ಪರವಾನಗಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ

    ಮುಂಬೈ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾನ್ಸನ್ ಅಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್‌ನ ಬೇಬಿ ಪೌಡರ್(Johnson’s Baby Powder) ಉತ್ಪಾದನಾ ಪರವಾನಗಿಯನ್ನು(License) ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ(FDA) ರದ್ದುಗೊಳಿಸಿದೆ.

    ಜಾನ್ಸನ್ ಕಂಪನಿಯ ಉತ್ಪನ್ನವಾದ ಬೇಬಿ ಪೌಡರ್ ಮಕ್ಕಳ ಚರ್ಮದ ಮೇಲೆ ಪರಿಣಾಮ ಬೀರಬಹುದು. ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ ಇದರ ಪುಡಿಯ ಮಾದರಿ ಮಕ್ಕಳ ಚರ್ಮದ ಪಿಹೆಚ್ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ತಿರುಮಲಕ್ಕೆ ಭಾವಿ ಸೊಸೆಯೊಂದಿಗೆ ಮುಖೇಶ್ ಅಂಬಾನಿ ಭೇಟಿ – ದೇವಾಲಯಕ್ಕೆ 1.5 ಕೋಟಿ ದೇಣಿಗೆ

     

    ಉತ್ಪನ್ನದ ಗುಣಮಟ್ಟದ ತಪಾಸಣೆಯ ಉದ್ದೇಶಕ್ಕಾಗಿ ಪುಣೆ ಹಾಗೂ ನಾಸಿಕ್‌ನಿಂದ ಎಫ್‌ಡಿಎ ಜಾನ್ಸನ್ ಬೇಬಿ ಪೌಡರ್‌ನ ಮಾದರಿಗಳನ್ನು ಪಡೆದುಕೊಂಡಿದೆ. ಗುಣಮಟ್ಟದ ಪರೀಕ್ಷೆ ವೇಳೆ ಅದು ಐಎಸ್ 5339:2004 ರಷ್ಟು ನಿರ್ದಿಷ್ಟತೆಯನ್ನು ಪಡೆದುಕೊಂಡಿರದ ಕಾರಣ ಅದು ಮಕ್ಕಳ ತ್ವಚೆಗೆ ಯೋಗ್ಯವಾಗಿಲ್ಲ ಎಂದು ಘೋಷಿಸಲಾಗಿದೆ. ಇದನ್ನೂ ಓದಿ: ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

    ಇದೀಗ ಎಫ್‌ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಹಾಗೂ ನಿಯಮಗಳ ಅಡಿಯಲ್ಲಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿದೆ. ಮಾತ್ರವಲ್ಲದೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳ ಸ್ಟಾಕ್ ಅನ್ನು ಹಿಂಪಡೆಯುವಂತೆ ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯಪ್ರಿಯರಿಗೆ ಶಾಕ್‌ – ಇಂದಿನಿಂದ ಮದ್ಯ ಕೊರತೆ ಸಾಧ್ಯತೆ

    ಮದ್ಯಪ್ರಿಯರಿಗೆ ಶಾಕ್‌ – ಇಂದಿನಿಂದ ಮದ್ಯ ಕೊರತೆ ಸಾಧ್ಯತೆ

    ನವದೆಹಲಿ: ದೆಹಲಿಯ ಬಹುತೇಕ ಖಾಸಗಿ ಮದ್ಯದಂಗಡಿಗಳ ಪರವಾನಗಿ ಅವಧಿಯು ಮುಕ್ತಾಯಗೊಳ್ಳಲಿದ್ದು, ಅವುಗಳನ್ನು ಬಂದ್‌ ಮಾಡಲು ನಿರ್ಧರಿಸಿರುವುದರಿಂದ ರಾಷ್ಟ್ರರಾಜಧಾನಿಯಲ್ಲಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ದೆಹಲಿ ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ, ಮದ್ಯದ ಅಂಗಡಿಗಳು ಆಗಸ್ಟ್‌ ಅಂತ್ಯದ ವರೆಗೆ ತೆರೆದಿರಲು ಅವಕಾಶ ನೀಡುತ್ತವೆ ಎಂದು ಹೇಳಲಾಗಿದೆ. ಹಳೆಯ ಅಬಕಾರಿ ನೀತಿಯ ಆಡಳಿತಕ್ಕೆ ಮರಳಲು ನಿರ್ಧರಿಸಿರುವ ಸರ್ಕಾರ ತನ್ನದೇ ಏಜೆನ್ಸಿಗಳ ಮೂಲಕ ಮಳಿಗೆಗಳನ್ನು ನಡೆಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯಿಂದಾಗಿ ಹೊಸ ಅಂಗಡಿಗಳನ್ನು ತೆರೆಯಲು ಸ್ವಲ್ಪ ಕಾಲ ತೆಗೆದುಕೊಳ್ಳುತ್ತದೆ. ಹಾಗಾಗಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೊಡ್ಡಗೌಡರ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿದೆ – ಹೆಚ್‌ಡಿಕೆ, ರೇವಣ್ಣ ಕಣ್ಣೀರು

    ದೆಹಲಿ ಸರ್ಕಾರ ಹಳೆಯ ಅಬಕಾರಿ ನೀತಿಗೆ ಮರಳುವ ಮೂಲಕ 6 ತಿಂಗಳ ಕಾಲ ಸ್ವತಃ ಮಳಿಗೆಗಳನ್ನು ನಡೆಸುವುದಾಗಿ ಶನಿವಾರ ಹೇಳಿತ್ತು. 2021-22ರ ಅಬಕಾರಿ ನೀತಿ ಅಡಿಯಲ್ಲಿ ದೆಹಲಿಯಲ್ಲಿ 468 ಚಿಲ್ಲರೆ ಮದ್ಯದಂಗಡಿಗಳು ನಡೆಯುತ್ತಿದ್ದು, ಜುಲೈ 31ರ ನಂತರ ಪರವಾನಗಿ ಅವಧಿ ಮುಕ್ತಾಯವಾಗಲಿದೆ. ಇನ್ನೂ ಕೆಲ ಅಂಗಡಿಗಳಲ್ಲಿ ಬಿಯರ್‌ಗಳು ಮಾತ್ರವೇ ಲಭ್ಯವಾಗುತ್ತಿದ್ದು, ಜನರು ಅಗತ್ಯವಿದ್ದಷ್ಟು ಪಡೆದುಕೊಳ್ಳುತ್ತಿದ್ದಾರೆ. ಆದರೆ ತಮ್ಮ ನೆಚ್ಚಿನ ಬ್ರ್ಯಾಂಡ್‌ ಕೇಳಿಕೊಂಡು ಬರುವವರು ಮಾತ್ರ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ ಎಂದು ಮದ್ಯದಂಗಡಿ ಮಾಲೀಕರು ಹೇಳುತ್ತಿದ್ದಾರೆ. ಇದನ್ನೂ ಓದಿ: Commonwealth Cricket: ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್ – ಭಾರತದ ವನಿತೆಯರಿಗೆ ಸುಲಭ ಜಯ

    ದೆಹಲಿಯ ಹಳೆಯ ಮದ್ಯ ನೀತಿ ಏನು?
    ದೆಹಲಿಯ ಮೂಲ ಮದ್ಯ ನೀತಿ ಪ್ರಕಾರ, ಮದ್ಯ ಮಾರಾಟದಲ್ಲಿ ಯಾರೂ ಕೂಡ ರಿಯಾಯಿತಿ ಕೊಡುವಂತಿಲ್ಲ ಎಂದಿತ್ತು. ಮದ್ಯ ಮಾರಾಟದಲ್ಲಿ ಖಾಸಗಿಗಿಂತ ಸರ್ಕಾರಿ ಮಳಿಗೆಗಳೇ ಹೆಚ್ಚಿದ್ದವು. ಕರ್ನಾಟಕದಲ್ಲಿ ಎಂಎಸ್‌ಐಎಲ್ ಇದ್ದಂತೆ ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರಿ ಸ್ವಾಮ್ಯದ 4 ನಿಗಮಗಳಿವೆ. 2021ಕ್ಕೆ ಮುನ್ನ ದೆಹಲಿಯಲ್ಲಿ 864 ಮದ್ಯದಂಗಡಿಗಳಿದ್ದವು. ಅದರಲ್ಲಿ ಸರ್ಕಾರಿ ಸಂಸ್ಥೆಗಳ ಮಳಿಗೆಗಳೇ 475 ಇದ್ದವು. ದೆಹಲಿಯಲ್ಲಿ ಸಮರ್ಪಕವಾದ ಮದ್ಯ ನೀತಿ ಇರಲಿಲ್ಲ. ಆದ ಕಾರಣ ಸರ್ಕಾರಿ ಸ್ವಾಮ್ಯದ ಲಿಕ್ಕರ್ ಶಾಪ್‌ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಹಾವೇರಿ: ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹಾವೇರಿ ನಗರಸಭಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಆರೋಗ್ಯದ ದೃಷ್ಟಿಯಿಂದ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಆರೋಗ್ಯ, ವೈದ್ಯಕೀಯ, ಗೃಹ ಈ ಇಲಾಖೆಗಳದ್ದಷ್ಟೇ ಕೆಲಸ ಎಂದು ಭಾವಿಸದೆ ಜನರು ಈ ಬಗ್ಗೆ ಸ್ವಯಂಪ್ರೇರಿತರಾಗಿ ಜಾಗೃತರಾಗುವುದು ಮುಖ್ಯ ಎಂದು ಕರೆ ನೀಡಿದರು.

    ಖಾಸಗಿ ವೈದ್ಯರು ಮೆಡಿಕಲ್ ಶಾಪ್, ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಸರ್ಕಾರದ ನೊಟೀಸ್‍ಗೂ ಬೆಲೆಕೊಡದೆ ಯಾರಾದರೂ ವೈದ್ಯರು ಆಸ್ಪತ್ರೆ ತೆರೆಯದೇ ಇದ್ದಲ್ಲಿ ಅಂತಹ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಡಿ. ನಮ್ಮ ನಮ್ಮ ಮನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವ-ದಿಗ್ಬಂಧನ ಹಾಕಿಕೊಳ್ಳುವ ಮೂಲಕ ನಮ್ಮ ಹಾಗೂ ನಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಬದ್ಧರಾಗಿದ್ದು, ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು. ಅನಾವಶ್ಯಕ ಮನೆಯಿಂದ ಹೊರಬರಬೇಡಿ, ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ಅತಿ ಅವಶ್ಯಕ ವಸ್ತುಗಳಾದ ದಿನಸಿ, ತರಕಾರಿ, ಹಣ್ಣು-ಹಂಪಲುಗಳನ್ನು ವಾರ್ಡ್ ವಾರು ತಳ್ಳುವಗಾಡಿಯ ಮೂಲಕ ಮಾರಲು ಅನುಕೂಲ ಮಾಡಿಕೊಡಲಾಗಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.

    ಬಿ.ಸಿ.ಪಾಟೀಲ್ ಇಂದು ಜಿಲ್ಲೆಯ ಹಿರೇಕೆರೂರು ನಗರ, ರಾಣೆಬೆನ್ನೂರು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ, ಹಾವೇರಿ ಎಪಿಎಂಸಿ ಸೇರಿದಂತೆ ಹಲವೆಡೆ ಭೇಟಿ ನೀಡಿದ್ದರು. ಅಲ್ಲದೇ ಕೊರೊನಾ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ್, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಉಪಸ್ಥಿತರಿದ್ದರು.

  • ಗಣೇಶೋತ್ಸವ ಪರವಾನಗಿಗೆ ಹಿಂದೂಗಳನ್ನು ನಾಯಿಯಂತೆ ಅಲೆಸಬೇಡಿ- ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ

    ಗಣೇಶೋತ್ಸವ ಪರವಾನಗಿಗೆ ಹಿಂದೂಗಳನ್ನು ನಾಯಿಯಂತೆ ಅಲೆಸಬೇಡಿ- ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ

    ತುಮಕೂರು: ‘ಹಿಂದೂಗಳಿಗೆ ನಾಯಿಯಂತೆ ಅಲೆಯಿಸುತ್ತಾರೆ’ ಗಣೇಶೋತ್ಸವ ಪರವಾನಗಿ ಪಡೆಯಲು ಹಿಂದೂಗಳು ನಾಯಿಯಂತೆ ಅಲೆಯುವ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸದಿದ್ದಲ್ಲಿ ಮುಖ್ಯಮಂತ್ರಿಗಳಿಗೆ ಹೇಳಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶನನ್ನು ಕೂರಿಸಲು ಪರವಾನಗಿ ಪಡೆಯಲು ತೆರಳಿದರೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಸುತ್ತಾಡಿಸುತ್ತಾರೆ. ಈ ಬಾರಿ ಯಾವುದೇ ಕಾರಣಕ್ಕೂ ಹಾಗಾಗಬಾರದು. ಎಲ್ಲ ಪರವಾನಗಿಗಳು ಒಂದೇ ಕಡೆ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದು ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಈಗ ಇರುವುದು ಬೇರೆ ಯಾವುದೋ ಸರ್ಕಾರ ಅಲ್ಲ, ಬಿಜೆಪಿ ಸರ್ಕಾರ. ಅಧಿಕಾರಿಗಳು ಇದನ್ನು ಅರಿತು ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಯಾರೇ ಯಾವುದೇ ಯುವಕ ಸಂಘದಿಂದ ಗಣೇಶೋತ್ಸವಕ್ಕೆ ಪರವಾನಗಿ ಕೇಳಿದರೂ ಶೀಘ್ರವೇ ನೀಡಬೇಕು. ಸತಾಯಿಸಕೂಡದು ಎಂದು ತಿಳಿಸಿದ್ದಾರೆ.

    ವಿಜಯಪುರದಲ್ಲಿ ಬನಾಯೆಂಗೆ ಮಂದಿರ್ ಸೇರಿ 2 ಹಾಡುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶ ಹೊರಡಿಸಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆ ಸೆಪ್ಟೆಂಬರ್ 2 ರಿಂದ 12ರ ವರೆಗೆ ಬನಾಯೆಂಗೆ ಮಂದಿರ ಹಾಡಿಗೆ ನಿಷೇಧ ಹೇರಲಾಗಿದೆ. ಈ ಹಿಂದೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಹಾಡು ಬಳಕೆ ಹಿನ್ನೆಲೆ ಮತೀಯ ಗಲಭೆ ಉಂಟಾದ ಕಾರಣ ಹಾಡಿನ ಬಳಕೆ ನಿಷೇಧ ಮಾಡಲಾಗಿದೆ. ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಮ್ ಪತ್ರದಲ್ಲಿ ಉಲ್ಲೇಖ ಹಿನ್ನೆಲೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

  • ಆದಾಯಕ್ಕಾಗಿ ಹೊಸ ಮದ್ಯದ ಅಂಗಡಿಯ ಮೇಲೆ ಸರ್ಕಾರದ ಕಣ್ಣು!- ಚಿಲ್ಲರೆ ಅಂಗಡಿಯೇ ಯಾಕೆ?

    ಆದಾಯಕ್ಕಾಗಿ ಹೊಸ ಮದ್ಯದ ಅಂಗಡಿಯ ಮೇಲೆ ಸರ್ಕಾರದ ಕಣ್ಣು!- ಚಿಲ್ಲರೆ ಅಂಗಡಿಯೇ ಯಾಕೆ?

    ಬೆಂಗಳೂರು: ರೈತರ ಸಾಲ ಮನ್ನಾ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಿರುವ ರಾಜ್ಯ ಸರ್ಕಾರ, ತಮ್ಮ ಜನಪ್ರಿಯ ಯೋಜನೆಗಳಿಗೆ ಹಣ ಹೊಂದಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು ಈಗ ಮದ್ಯದ ಅಂಗಡಿಯ ಮೇಲೆ ಕಣ್ಣು ಹಾಕಿದೆ.

    ಹೌದು. ಹೊಸ ಚಿಲ್ಲರೆ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಮೂಲಕ ಖಜಾನೆ ತುಂಬಿಸಲು ಸಿದ್ಧತೆ ನಡೆಸಿದೆ. ಜನಸಂಖ್ಯೆಗೆ ಅನುಗುಣವಾಗಿ ಹೊಸ ಮದ್ಯದ ಅಂಗಡಿಗಳನ್ನು ಆರಂಭಿಸಲು ಪ್ಲಾನ್ ಮಾಡಿದೆ.

    ಈ ಪ್ಲಾನ್ ಜಾರಿಗಾಗಿ ಪ್ರತಿ ತಾಲೂಕಿಗೆ ಎಷ್ಟು ಚಿಲ್ಲರೆ ಮದ್ಯದಂಡಿಗಳು ಬೇಕಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ, ಪ್ರಸ್ತಾವನೆ ಸಲ್ಲಿಸುವಂತೆ ಅಬಕಾರಿ ಆಯುಕ್ತರು ಕೆಳ ಹಂತದ ಅಧಿಕಾರಿಗಳಿಗೆ ಸೆ.22ರಂದು ಪತ್ರ ಬರೆದಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆ ಸಮೀಕ್ಷೆ ಶುರು ಮಾಡಿದೆ. ಆದರೆ ಈ ಬಗ್ಗೆ ಏನು ಗೊತ್ತೇ ಇಲ್ಲ ಎನ್ನುವಂತೆ ಸಿಎಂ ಕುಮಾರಸ್ವಾಮಿ, ಅಬಕಾರಿ ಇಲಾಖೆ ನನ್ನ ಬಳಿಯೇ ಇದೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಕೊನೆಯದಾಗಿ ಹೊಸ ಮದ್ಯದಂಗಡಿಗಳಿಗೆ 1992ರಲ್ಲಿ ಪರವನಾಗಿ ನೀಡಿದ್ದು, 1991ರ ಜನಗಣತಿ ಆಧಾರದ ಮೇಲೆ ರಾಜ್ಯದಲ್ಲಿ 3901 ಚಿಲ್ಲರೆ ಮದ್ಯದಂಗಡಿ ಇದೆ. 2011ರ ಜನಗಣತಿ ಪ್ರಕಾರ ರಾಜ್ಯಕ್ಕೆ ಇನ್ನೂ ಸುಮಾರು 1750ಕ್ಕೂ ಹೆಚ್ಚು ಮದ್ಯದಂಗಡಿ ಅಗತ್ಯವಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ ಹೊಸ ಅಬಕಾರಿ ಲೈಸೆನ್ಸ್ ನೀಡಲು ಚಿಂತನೆ ನಡೆಸಿತ್ತು. ಈ ಸಂದರ್ಭದಲ್ಲಿ ಸಮಾಜದ ನಾನಾ ವರ್ಗದಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಮದ್ಯ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದ್ದು, ಬಿಯರ್ ಮಾರಾಟ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗುತ್ತಿದೆ.

    ಚಿಲ್ಲರೆ ಅಂಗಡಿಯೇ ಯಾಕೆ?
    ಅಬಕಾರಿ ವಲಯದಲ್ಲಿ ಚಿಲ್ಲರೆ ಅಂಗಡಿಗಳಿಗೆ (ಸಿಎಲ್-2) ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕ್ಲಬ್‍ಗಳು (ಸಿಎಲ್ 4), ಸ್ಟಾರ್ ಹೋಟೆಲ್ (ಸಿಎಲ್ 6ಎ), ಹೋಟೆಲ್-ವಸತಿ ಗೃಹಗಳು (ಸಿಎಲ್ 7), ಮಿಲಿಟರಿ ಕ್ಯಾಂಟೀನ್ (ಸಿಎಲ್ 8), ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್ 9), ಎಂಎಸ್‍ಐಎಲ್ ಮಳಿಗೆಗಳು (ಸಿಎಲ್ 11ಸಿ) ಪೈಕಿ ಜನರನ್ನು ಹೆಚ್ಚು ಆಕರ್ಷಿಸುವುದು ಚಿಲ್ಲರೆ ಅಂಗಡಿ. ಈ ಕಾರಣಕ್ಕೆ ಸರ್ಕಾರ ಚಿಲ್ಲರೆ ಅಂಗಡಿಗಳನ್ನು ಹೆಚ್ಚಳ ಮಾಡಿ ಖಜಾನೆ ತುಂಬಿಸುವ ಪ್ಲಾನ್ ಮಾಡಿದೆ.

    ಹೊಸ ಮದ್ಯದ ಅಂಗಡಿ ಆರಂಭಿಸಲು ಸರ್ಕಾರ ಮುಂದಾಗಿರುವುದು ಸರಿಯೇ? ನಿಮ್ಮ ಅಭಿಪ್ರಾಯವನ್ನು ತಿಳಿಸಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಲೈಸೆನ್ಸ್ ಗೆ ಅಲೆದು ಬೇಸತ್ತ ದಂಪತಿ ಪಟ್ಟಣಪಂಚಾಯತ್ ಬಾಗಿಲಲ್ಲೇ ರೆಸ್ಟೊರೆಂಟ್ ತೆರೆದ್ರು

    ಲೈಸೆನ್ಸ್ ಗೆ ಅಲೆದು ಬೇಸತ್ತ ದಂಪತಿ ಪಟ್ಟಣಪಂಚಾಯತ್ ಬಾಗಿಲಲ್ಲೇ ರೆಸ್ಟೊರೆಂಟ್ ತೆರೆದ್ರು

    ತುಮಕೂರು: ರೆಸ್ಟೊರೆಂಟ್ ತೆರೆಯಲು ಲೈಸೆನ್ಸ್ ಗಾಗಿ ಅಲೆದು ಅಲೆದು ಬೇಸತ್ತ ದಂಪತಿ ಕೊನೆಗೆ ಪಟ್ಟಣ ಪಂಚಾಯತ್ ಬಾಗಿಲಲ್ಲೇ ಹೊಟೇಲ್ ತೆರೆದು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣ ಪಂಚಾಯತ್ ದ್ವಾರದಲ್ಲಿ ಪ್ರಭಾಕರ್-ಇಂದಿರಾ ದಂಪತಿ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಅನ್ನ ಸಾಂಬಾರ್, ಚಪಾತಿ, ಪರೋಟಾ ತಯಾರಿಸಿ ಮುನ್ಸಿಪಲ್ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಭಾಕರ- ಇಂದಿರಾ ದಂಪತಿ 2014 ರಲ್ಲಿ ಮಾಯಸಂದ್ರ ರಸ್ತೆಯಲ್ಲಿ ಶ್ರಿನಿಧಿ ಗ್ರೀನ್ ಲ್ಯಾಂಡ್ ಹೆಸರಿನಲ್ಲಿ ರೆಸ್ಟೊರೆಂಟ್ ತೆರೆದಿದ್ರು. ಅದಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳ ಸೂಚನೆಯಂತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆದಿದ್ರು. ಸುಮಾರು ನಾಲ್ಕು ತಿಂಗಳು ರೆಸ್ಟೊರೆಂಟ್ ತೆರೆದಿತ್ತು. ಆಗ ಕ್ಯಾತೆ ತೆಗೆದ ಪಟ್ಟಣ ಪಂಚಾಯತ್ ಅಧಿಕಾರಿಗಳು, ರೆಸ್ಟೊರೆಂಟ್ ಜಮೀನು ವಿವಾದ ಕೋರ್ಟ್ ನಲ್ಲಿದೆ ಎಂದು ಸಬೂಬು ಹೇಳಿ ಏಕಾಏಕಿ ರೆಸ್ಟೊರೆಂಟ್ ಗೆ ಬೀಗ ಹಾಕಿದ್ದಾರೆ ಎನ್ನುವುದು ಪ್ರಭಾಕರ್ ದಂಪತಿಯ ಆರೋಪ.

    ಅಲ್ಲಿಂದ ಕಳೆದ ಮೂರು ವರ್ಷದಿಂದ ಪರವಾನಗಿ ನೀಡುವಂತೆ ದಂಪತಿ ಪಟ್ಟಣ ಪಂಚಾಯತಿಗೆ ಅಲೆದು ಅಲೆದು ಬೆಸತ್ತು ಈಗ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಪರವಾನಗಿ ಕೊಡದಿರಲು ಕಾಂಗ್ರೆಸ್ ಮುಖಂಡ ಟಿ.ಎನ್.ಶಿವರಾಜರೇ ಕಾರಣ ಎಂದು ಪ್ರಭಾಕರ್ ಆರೋಪಿಸಿದ್ದಾರೆ.