ಬೆಂಗಳೂರು/ನವದೆಹಲಿ: ಕಳೆದ ಒಂದೂವರೆ ಎರಡು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ನವೆಂಬರ್ ಮಹಾಕ್ರಾಂತಿಯ ಚರ್ಚೆ ಆಗ್ತಲೇ ಇದೆ. ನವೆಂಬರ್ ಆರಂಭಕ್ಕೆ ಬಾಕಿ ಇರೋದು ಇನ್ನೆರಡೇ ದಿನ. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯೋ? ಸಂಪುಟ ಪುನಾರಚನೆಯೋ? ಅನ್ನೋ ಕುತೂಹಲ ಹೆಚ್ಚುತ್ತಲೇ ಇದೆ. ಈ ನಡುವೆಯೇ ದಲಿತ ಸಮಾವೇಶ ಅಸ್ತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ.
ಸಮಾವೇಶ ನಡೆಸುವುದಿದ್ದರೆ, ಹಾಸನ ಸಮಾವೇಶ ಮಾಡಲ್ ಅನುಸರಿಸುವಂತೆ ಎಐಸಿಸಿ ಸೂಚನೆ ನೀಡಿದೆ. ಜೊತೆಗೆ ದಲಿತ ಸಮಾವೇಶ ನಡೆಸುವುದಾದರೆ ನಡೆಸಿ, ಆದ್ರೆ ಪಕ್ಷದ ವೇದಿಕೆಯಲ್ಲಿ, ಪಕ್ಷದ ಬ್ಯಾನರ್ ನಲ್ಲೇ ನಡೆಸಿ ಅಂತ ಹೇಳಿದೆ. ಈ ಬಗ್ಗೆ ಪರಮೇಶ್ವರ್ ಸೇರಿದಂತೆ ದಲಿತ ಸಚಿವರಿಗೆ ಹೈಕಮಾಂಡ್ ನಿಂದ ನೇರ ಸಂದೇಶ ರವಾನೆ ಮಾಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಹಾಸನ ಸಮಾವೇಶವನ್ನ ಹೇಗೆ ಪಕ್ಷದ ವೇದಿಕೆಯಲ್ಲಿ ಮಾಡಲಾಯ್ತೋ ಅದೇ ರೀತಿ ದಲಿತ ಸಮಾವೇಶವೂ ಪಕ್ಷದ ವೇದಿಕೆಯಲ್ಲಿ ಆಯೋಜಿಸಿ. ಅಗತ್ಯವಿದ್ದರೆ ಎಐಸಿಸಿಯಿಂದಲೇ ಸಮಾವೇಶ ಆಯೋಜನೆಗೆ ಪದಾಧಿಕಾರಿಗಳನ್ನ ನೇಮಕ ಮಾಡುತ್ತೇವೆ ಎಂದು ಹೇಳಿದೆ. ಈ ಮೂಲಕ ಪ್ರತ್ಯೇಕ ಶಕ್ತಿ ಪ್ರದರ್ಶನಕ್ಕೆ ಮುಂದಾದ ದಲಿತ ಸಚಿವರಿಗೆ ಹೈಕಮಾಂಡ್ ಮೂಗುದಾರ ಹಾಕಿದೆ.
ಬೆಂಗಳೂರು: ಧರ್ಮಸ್ಥಳದ ಪ್ರಕರಣಗಳ (Dharmasthala Case) ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ (SIT) ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿಯವರು ಹೇಳಿದ್ದರು. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು. ಅಂತಿಮ ವರದಿಯನ್ನು ಕೊಡುವಂತೆ ಹೇಳಿದ್ದೇವೆ. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ರಿಪೋರ್ಟ್ಸ್ ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪುನಾರಚನೆಗೆ ಅವಕಾಶ ನೀಡಿದ್ರೆ ಸಿಎಂ ಸ್ಥಾನ ಅಬಾಧಿತ, ಇಲ್ಲದೇ ಇದ್ರೆ ರಾಜಕೀಯ ಚಟುವಟಿಕೆ: ರಾಜಣ್ಣ
ನವೆಂಬರ್ 1ರಂದು ಮುಖ್ಯಮಂತ್ರಿಗಳು ಸಂತೋಷ ಕೂಟ ಏರ್ಪಡಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಊಟ ಹಾಕಿಸಿದರೆ, ರಾಜಕೀಯ ದೊಡ್ಡ ಬೆಳವಣಿಗೆ ಎನ್ನಬೇಕಿಲ್ಲ. ಇದಕ್ಕೆ ರಾಜಕೀಯವಾಗಿ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಸಂಪುಟ ಪುನರ್ ರಚನೆ ಮಾಡುವ ಕುರಿತು ಹೈಕಮಾಂಡ್‌ನವರು ಈವರೆಗೆ ಯಾರೂ ಹೇಳಿಲ್ಲ. ಈ ಬಗ್ಗೆ ಮುನ್ಸೂಚನೆಯೂ ಇಲ್ಲ ಎಂದರು. ಇದನ್ನೂ ಓದಿ: ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು
ಬೆಂಗಳೂರು: ಕೆ.ಹೆಚ್ ಮುನಿಯಪ್ಪ (KH Muniyappa) ಸಿಎಂ ಆದರೆ ನಾನೂ ಸಂತೋಷ ಪಡ್ತೇನೆ ಅಂತಾ ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿದ್ದಾರೆ.
ನಿನ್ನೆ ಶಿವಮೊಗ್ಗದಲ್ಲಿ (Shivamogga) ಮುನಿಯಪ್ಪ ಪರ ಕಾರ್ಯಕರ್ತರು ಸಿಎಂ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಕೆಚ್.ಹೆಚ್ ಮುನಿಯಪ್ಪರವರು ಹಿರಿಯರಿದ್ದಾರೆ. ಅವರು ಸಮರ್ಥರು. ತುಳಿತಕ್ಕೆ ಒಳಗಾಗಿರೋ ಸಮುದಾಯದಿಂದ ಬಂದವರು. ಮುನಿಯಪ್ಪರವರು ಸಿಎಂ ಆದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಸ್ತೆಗಳಲ್ಲಿ ಬಟರ್ ಫ್ಲೈ ಲೈಟ್ ಹಾಕಿದ್ದೇವೆಂದು 73 ಲಕ್ಷ ಹಣ ಪಡೆದು ಗುಳುಂ; ಗೋಲ್ಮಾಲ್ ಬಹಿರಂಗ
ನವೆಂಬರ್ ಕ್ರಾಂತಿ ಬಗ್ಗೆ ಗೊತ್ತಿಲ್ಲ
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವರು, ನವೆಂಬರ್-ಡಿಸೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೊ ಗೊತ್ತಿಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಂಪುಟ ಪುನಾರಚನೆ, ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯೋ ಬಗ್ಗೆ ಹೈಕಮಾಂಡ್‌ನವ್ರು ತೀರ್ಮಾನ ಮಾಡ್ತಾರೆ. ನಾವು ನಿತ್ಯ ಇಲ್ಲಿ ಮಾತನಾಡುವುದರಿಂದ ಗೊಂದಲ ಆಗುತ್ತೆ. ಆಡಳಿತದ ಕಡೆ ಗಮನ ಕೊಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದ್ರು. ಇನ್ನು ಸಂಪುಟ ಪುನಾರ್‌ರಚನೆ ಬಗ್ಗೆ ಮಾತನಾಡಿ ಸಂಪುಟ ಪುನಾರಚನೆ ಹೈಕಮಾಂಡ್‌ನವರಾಗಲಿ ಇಲ್ಲಿಯವರಾಗಲೀ ಏನು ಹೇಳಿಲ್ಲ. ಹೈಕಮಾಂಡ್‌ನವರು ಹೇಳಿದ್ರೆ ಏನಾದ್ರು ಮಾತನಾಡಬಹುದು.
ಬೆಂಗಳೂರು: ಸಿಎಂ ಡಿನ್ನರ್ ಮೀಟಿಂಗ್ (CM Dinner Meeting) ಕರೆದಿರೋದಕ್ಕೂ ಎರಡೂವರೆ ವರ್ಷ ಅಧಿಕಾರ ಹಸ್ತಾಂತರಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಊಟಕ್ಕೆ ಕರೆಯುತ್ತಾರೆ. ಸೆಷನ್ ಇದ್ದಾಗಲೂ ಅವರು ಕರೆಯುತ್ತಾರೆ. ಕೆಲವರು ಮಂತ್ರಿಗಳು ಕರೆಯುತ್ತಾರೆ. ಅದೇ ರೀತಿ ಈಗ ಸಿಎಂ ಕರೆದಿದ್ದಾರೆ. ನಾನು ಹೇಳೋದು ಇದೇನು ದೊಡ್ಡದಲ್ಲ. ಊಟಕ್ಕೂ, ಎರಡೂವರೆ ವರ್ಷ ಅಧಿಕಾರ ಬದಲಾವಣೆಗೂ ಸಂಬಂಧವಿಲ್ಲ ಎಂದರು. ಇದನ್ನೂ ಓದಿ: ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಸಿಎಂ ಆಯ್ಕೆ ಮಾಡೋದು: ಡಿಕೆಶಿಗೆ ಪರಮೇಶ್ವರ್ ತಿರುಗೇಟು
ಬಿಹಾರ ಎಲೆಕ್ಷನ್ (Bihar Election) ವಿಚಾರವಾಗಿ ಸಿಎಂ ಕರೆದಿದ್ದಾರೆಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ಬಿಜೆಪಿಯವರು ಹೇಗೆ ಬೇಕಾದ್ರೂ ಮಾತನಾಡಬಹುದು. ಹಾಗೆ ಮಾತನಾಡಬೇಕು ಹೀಗೆ ಮಾತಾಡಬೇಕು ಅಂತ ಏನಿಲ್ಲ. ಅವರು ಏನು ಬೇಕಾದ್ರೂ ಮಾತನಾಡಬಹುದು ಅಂತ ತಿರುಗೇಟು ಕೊಟ್ರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ RSS ಬಗ್ಗೆ ಸಿಎಂಗೆ ಪತ್ರ ಬರೆದಿರೋದು ನನಗೆ ಗೊತ್ತಿಲ್ಲ: ಪರಮೇಶ್ವರ್
RSS ನಿಷೇಧದ ಬಗ್ಗೆ ಗೃಹ ಇಲಾಖೆಗೆ ಪ್ರಸ್ತಾವನೆ ಬಂದರೆ ಪರಿಶೀಲನೆ
ಬೆಂಗಳೂರು: ಪ್ರಿಯಾಂಕ್ ಖರ್ಗೆ (Priyank Kharge) RSS ಕಾರ್ಯಕ್ರಮಗಳನ್ನ ನಿಷೇಧ ಮಾಡಬೇಕು ಅಂತ ಸಿಎಂಗೆ ಪತ್ರ ಬರೆದಿರೋದು ನನಗೇನು ಗೊತ್ತಿಲ್ಲ. ಗೃಹ ಇಲಾಖೆಗೆ ಆ ಪತ್ರ ಬಂದರೆ ಪರಿಶೀಲನೆ ಮಾಡುತ್ತೇವೆ ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದರು.
RSS ಬ್ಯಾನ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪತ್ರ ಬರೆದಿರೋದು ಎಲ್ಲವೂ ನಿಮಗೆ ಗೊತ್ತಿದೆಯಲ್ಲ. ನೀವೇ ಹೇಳಿದಂತೆ ಅವರು ಪತ್ರ ಬರೆದಿದ್ದಾರೆ. ಶಾಲೆ, ಸರ್ಕಾರಿ ಜಾಗದಲ್ಲಿ ಬೇಡ ಅಂತ ಹೇಳಿದ್ದಾರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅವರು ಅದರ ಬಗ್ಗೆ ಚರ್ಚೆ ಮಾಡ್ತಾರೇನೋ, ಸಿಎಸ್ ಅವರು ನಿರ್ಧಾರ ತೆಗೆದುಕೊಳ್ತಾರೆ ಅಂತ ಹೇಳಿದರು.
ಈ ಬಗ್ಗೆ ನಮ್ಮ ಇಲಾಖೆಗೆ ಬಂದರೆ ಪರಿಶೀಲನೆ ಮಾಡ್ತೇವೆ. ಅದರ ಸಾಧಕ ಬಾಧಕ ಪರಿಶೀಲನೆ ಮಾಡ್ತೇವೆ. ದೂರು ಬಂದರೆ ಮಾಡಬಹುದು. ವೈಯುಕ್ತಿಕವಾಗಿ ನನ್ನ ಅಭಿಪ್ರಾಯ ಯಾಕೆ ಹೇಳಬೇಕು? ಎಂದರು.
ಎಬಿವಿಪಿ ಕಾರ್ಯಕ್ರಮದಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೆ? ಮೆರವಣಿಗೆ ಬರ್ತಿತ್ತು ಕೈಮುಗಿದೆ. ಅಬ್ಬಕ್ಕನಿಗೆ ಕೈಮುಗಿಯೋದು ತಪ್ಪೇ?ಅದನ್ನೇ ತಪ್ಪು ಅಂದ್ರೆ ಹೇಗೆ? ಅವತ್ತೇ ಕ್ಲಾರಿಪಿಕೇಶನ್ ಕೊಟ್ಟಿದ್ದೇನೆ. ಇವತ್ತು ನಾನು ಕೊಡ್ತಿದ್ದೇನೆ. ನನಗೆ ಪರ್ಮಿಷನ್ ಕೇಳಿದ್ರೆ ಪೊಲೀಸರು ಕೊಡ್ತಾರೆ. ಸರ್ಕಾರ ಬ್ಯಾನ್ ಮಾಡಿದ್ರೆ ಕೊಡಲ್ಲ. ಇನ್ನೂ ಏನು ಬ್ಯಾನ್ ಆಗಿಲ್ಲವಲ್ಲ. ನಮ್ಮ ಇಲಾಖೆಗೆ ಫಾರ್ವರ್ಡ್ ಮಾಡಬೇಕು. ಆಗ ನಾವು ನೋಡ್ತೇವೆ ಅಂತ ತಿಳಿಸಿದರು.
ಬೆಂಗಳೂರು: ಬಿಹಾರ ಚುನಾವಣೆಯಲ್ಲಿ (Bihar Election) ಇಂಡಿ ಕೂಟ ಗೆದ್ದರೆ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಕೊಡುವ ಗ್ಯಾರಂಟಿ ಘೋಷಣೆಯನ್ನ ಗೃಹಸಚಿವ ಪರಮೇಶ್ವರ್ (Parameshwar) ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಜನಗಳಿಗೆ ಏನು ಬೇಕಾಗುತ್ತೆ ಅನ್ನೋದನ್ನ ತಿಳಿದುಕೊಂಡು ಚುನಾವಣೆ ಸಮಯದಲ್ಲಿ ಘೋಷಣೆ ಮಾಡುತ್ತೇವೆ. ಎಲ್ಲರೂ ಮಾಡೋದು ಅದೇ ಕೆಲಸ. ನಮ್ಮ ಮೈತ್ರಿ ಪಕ್ಷದವರು ಪ್ರತಿ ಮನೆಗೆ ಉದ್ಯೋಗ ಕೊಡ್ತೀನಿ ಅಂತ ಘೋಷಣೆ ಮಾಡಿದ್ದಾರೆ. ಉದ್ಯೋಗ ಅನ್ನೋದು ಬಹಳ ಮುಖ್ಯ. ಎಲ್ಲಾ ಕಡೆ ನಿರುದ್ಯೋಗದ ಸಮಸ್ಯೆ ಬಹಳ ಕಾಡ್ತಿದೆ. ಯುವಕರಿಗೆ ಉದ್ಯೋಗ ಸಿಕ್ತಿಲ್ಲ ಅನ್ನೋದು ದೊಡ್ಡ ಪ್ರಶ್ನೆ. ಹಾಗಾಗಿ ಚುನಾವಣೆ ಪ್ರಣಾಳಿಕೆ ಮಾಡಬೇಕು ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್
3 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಂತ ಹಂತವಾಗಿ ಮಾಡ್ತಾರೆ. ಒಂದೇ ದಿನ ಘೋಷಣೆ ಮಾಡಿ, ಒಂದೇ ದಿನ ಕೆಲಸ ಕೊಡೋಕೆ ಆಗುತ್ತಾ? ನಾವು ಕರ್ನಾಟಕದಲ್ಲಿ 2.5 ಲಕ್ಷ ಖಾಲಿ ಇರೋ ಹುದ್ದೆ ಭರ್ತಿ ಮಾಡ್ತೀವಿ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ವಿ. ನಾವು ಒಂದೇ ಬಾರಿ ಹುದ್ದೆ ಭರ್ತಿ ಮಾಡ್ತೀವಿ ಅಂತ ಅಲ್ಲ. ಈಗ ಪ್ರಾರಂಭ ಮಾಡಿದ್ದೇವೆ. ಒಳ ಮೀಸಲಾತಿ ತೊಂದರೆ ಆಗಿತ್ತು. ಈಗ ಅದೆಲ್ಲ ಬಗೆಹರಿಸಿಕೊಂಡು ನೇಮಕಾತಿ ಪ್ರಾರಂಭ ಮಾಡ್ತಿದ್ದೇವೆ. ಪೊಲೀಸ್ ಇಲಾಖೆ ಸೇರಿ ಬೇರೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಎಂದಿದ್ದಾರೆ.
ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು. ಅವರು ಕೊಡಲಿಲ್ಲ. ಅವರು ಮಾಡಿದ್ರೆ ನಾವು ಯಾಕೆ ಟೀಕೆ ಮಾಡ್ತಿದ್ವಿ. ಮೋದಿ ಚುನಾವಣೆ ಸಮಯದಲ್ಲಿ ಹೇಳಿದ್ದು ನಿಜ. ಹೇಳಿದ್ದು ಮಾಡಿದ್ರೆ ಯಾರು ಕೇಳ್ತಿದ್ರು? ಅವರು ಮಾಡಿದ್ರೆ ಹೊಗಳುತಿದ್ವಿ. ನಾವು 5 ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ವಿ ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.
– ಸಿಎಂ ಡಿನ್ನರ್ ಪಾರ್ಟಿ ಅಜೆಂಡಾ ಊಟ ಅಷ್ಟೆ, ನವೆಂಬರ್ ಕ್ರಾಂತಿ ಯಾವುದು ಇಲ್ಲ
ಬೆಂಗಳೂರು: ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ ಯಾವುದೇ ಪೊಲಿಟಿಕಲ್ ಮೀಟಿಂಗ್ ಮಾಡಿಲ್ಲ ಎಂದು ಗೃಹಸಚಿವ ಪರಮೇಶ್ವರ್ (Parameshwar) ಸ್ಪಷ್ಟಪಡಿಸಿದ್ದಾರೆ.
ಗುರುವಾರ ಮಹದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ (Satish Jarkiholi) ಅಪಾರ್ಟ್ಮೆಂಟ್‌ನಲ್ಲಿ ಸಭೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಸಭೆಯಲ್ಲಿ ಯಾವುದೇ ವಿಶೇಷ ಇಲ್ಲ. ಮಾಧ್ಯಮಗಳಿಗೆ ಯಾವ ರೀತಿ ಕಣ್ಣಿಗೆ ಕಾಣಿಸುತ್ತೆ ಅಂತ ಗೊತ್ತಿಲ್ಲ. ಹಾಗೆ ಸಭೆ ಮಾಡಿರೋದು ಮೊದಲ ಬಾರಿ ಅಲ್ಲ. ಅನೇಕ ಬಾರಿ ನಾನು ಜಾರಕಿಹೊಳಿ, ಮಹದೇವಪ್ಪ ಸಭೆ ಮಾಡಿದ್ದೇವೆ. ನಾವೆಲ್ಲ ಸ್ನೇಹಿತರು, ಕೆಲವು ವಿಷಯಗಳು ಚರ್ಚೆ ಮಾಡಬೇಕು ಅಂದಾಗ ಭೇಟಿ ಮಾಡುತ್ತೇವೆ. ಅದು ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಂಪುಟ ಪುನರ್‌ಚನೆ ವದಂತಿ ಬೆನ್ನಲ್ಲೇ ಮೂವರು ಸಚಿವರಿಂದ ಬ್ರೇಕ್‌ಫಾಸ್ಟ್ ಮೀಟಿಂಗ್
ರಾಜಣ್ಣ ಮಂತ್ರಿ ಅಲ್ಲ ಅದಕ್ಕೆ ಬಂದಿರಲಿಲ್ಲ. ನಿನ್ನೆ ಕ್ಯಾಬಿನೆಟ್ ಸಭೆ ಇತ್ತು. ಕೆಲವು ವಿಷಯ ಸೂಕ್ಷ್ಮ ಇತ್ತು ಹಾಗೇ ಮಾತಾಡಿಕೊಂಡು, ತಿಂಡಿ ತಿಂದು ಹೋಗೋಣ ಅಂತ ಸಭೆ ಮಾಡಿದ್ವಿ. ಅದೊಂದು ಸಾಮಾನ್ಯ ಮೀಟಿಂಗ್ ಅಷ್ಟೇ. ಈ ಹಿಂದೆ ಬೇಕಾದಷ್ಟು ಬಾರಿ ನಾವು ಸಭೆ ಮಾಡಿದ್ದೇವೆ. ಇದೇನು ಮೊದಲ ಸಭೆ ಅಲ್ಲ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಮನೆಯಲ್ಲಿ ಅನೇಕ ಬಾರಿ ಮೀಟ್ ಮಾಡಿದ್ದೇವೆ. ಹೊಸದೇನು ಅಲ್ಲ ಎಂದಿದ್ದಾರೆ.
ದಲಿತ ನಾಯಕರ ಬೇಡಿಕೆ ಕಾಂಗ್ರೆಸ್‌ನಲ್ಲಿ ಈಡೇರುತ್ತಿಲ್ಲ ಅಂತ ಯಾರು ಹೇಳಿದ್ರು? ಹೆಚ್ಚುವರಿ ಡಿಸಿಎಂ ಬೇಕು ಅಂತ ನಾನು ಹೇಳಿರಲಿಲ್ಲ. ಯಾರು ಹೇಳಿದ್ರು, ಯಾರು ಒತ್ತಾಯ ಮಾಡಿದ್ರು? ಸತೀಶ್ ಜಾರಕಿಹೊಳಿ, ರಾಜಣ್ಣ ಒತ್ತಾಯ ಮಾಡಿರೋದು ನನಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ, ನಾವು ಜನರಲ್ ಆಗಿ ಮಾತಾಡಿದ್ದೇವೆ. ಇದೇ ರೀತಿ ಆಗಬೇಕು ಅಂತ ನಾವ್ಯಾರು ಮಾತಾಡಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ
ಸಿಎಂ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಹಿಂದೆಯೂ ಅನೇಕ ಬಾರಿ ಊಟಕ್ಕೆ ಕರೆದಿದ್ದಾರೆ. ತುಂಬಾ ದಿನ ಆಗಿತ್ತು. ಹೀಗಾಗಿ ಊಟಕ್ಕೆ ಕರೆದಿದ್ದಾರೆ. ಡಿನ್ನರ್ ಕರೆಯೋದಕ್ಕೆ ಏನು ವಿಶೇಷತೆ ಇಲ್ಲ. ಊಟ ಹಾಕ್ತಾರೆ, ಊಟ ಮಾಡಿಕೊಂಡು ಬರುತ್ತೇವೆ. ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ. ಸಿಎಂ ಊಟಕ್ಕೆ ಕರೆದಿರೋದು ಒಂದು ಸಾಮಾನ್ಯ ಮೀಟಿಂಗ್ ಅಷ್ಟೆ. ಜಾಸ್ತಿ ದಿನ ಆಗಿದೆ ಅಂತ ಊಟಕ್ಕೆ ಕರೆದಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲಿದೆ ನವೆಂಬರ್ ಕ್ರಾಂತಿ? ಯಾರು ಹೇಳಿದ್ರು ನವೆಂಬರ್ ಕ್ರಾಂತಿ ಅಂತ? ಯಾವ ಕ್ರಾಂತಿಯೂ ಇಲ್ಲ. ಸಂಪುಟ ಪುನಾರಚನೆ ಆಗೋದು ಎಲ್ಲಾ ಸಿಎಂ ಅವರನ್ನ ಕೇಳಬೇಕು. ಸಂಪುಟ ಪುನರಾಚನೆ ಇದ್ಯಾ, ಯಾರನ್ನಾದ್ರು ಹೊಸಬರನ್ನ ಮಂತ್ರಿಯಾಗಿ ತಗೋತೀರಾ ಅಂತ ಸಿಎಂ ಅವರನ್ನ ಕೇಳಿ ಎಂದಿದ್ದಾರೆ.
ಹೈಕಮಾಂಡ್ ಸಚಿವರ ಮೌಲ್ಯಮಾಪನ ಏನು ಮಾಡಿಲ್ಲ. ಸಚಿವರ ಬಗ್ಗೆ ಬೇರೆ ಬೇರೆ ಸಮಯದಲ್ಲಿ ಮಾಹಿತಿ ತಗೊಂಡಿದ್ರು. ಇದೆಲ್ಲ ಸಾಮಾನ್ಯವಾಗಿ ಹಾಗೂ ನಿರಂತರವಾಗಿ ನಡೆಯುತ್ತದೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡೋದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ ಎಂದು ತಿಳಿಸಿದ್ದಾರೆ.
ತುಮಕೂರು: ತುಮಕೂರಿನ ಎರಡನೇ ವರ್ಷದ ದಸರಾ (Tumakuru Dasara) ವಿಜೃಂಭಣೆಯಿಂದ ನಡೆಯಿತು. ಅಂಬಾರಿ ಹೊತ್ತ ಆನೆ ಶ್ರೀರಾಮ ಶಾಂತತೆಯಿಂದ ಹೆಜ್ಜೆ ಹಾಕಿ ಎಲ್ಲರ ಕಣ್ಮನ ಸೆಳೆಯಿತು.
ಮಧ್ಯಾಹ್ನ 12 ಗಂಟೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ನಂದಿ ಧ್ವಜಕ್ಕೆ ಪೂಜೆ ನೆರವೇರಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು, 50ಕ್ಕೂ ಹೆಚ್ಚು ದೇವರುಗಳು, ಪೊಲೀಸ್ ಕುದುರೆ ಸವಾರಿ, ನಾಟಿ ಎತ್ತುಗಳ ಮೆರವಣಿಗೆಯು ನಗರದ ಬಿಜಿಎಸ್ (ಟೌನ್ ಹಾಲ್ ವೃತ್ತ) ವೃತ್ತದಿಂದ ಪ್ರಾರಂಭಗೊಂಡಿತು. ಇದನ್ನೂ ಓದಿ: 5 ವರ್ಷದ ಬಳಿಕ ಭಾರತ, ಚೀನಾ ಮಧ್ಯೆ ನೇರ ವಿಮಾನ ಸೇವೆ ಆರಂಭ
ಬೆಂಗಳೂರು: ಸಚಿವ ಸಂಪುಟ ಪುನಾರಚನೆ (Cabinet Reshuffle Karnataka) ಬಗ್ಗೆ ಹೈಕಮಾಂಡ್ ಸಿಎಂ ಹಾಗೂ ಡಿಸಿಎಂ ಏನು ಮಾತಾಡಿಕೊಂಡಿದ್ದಾರೋ ಗೊತ್ತಿಲ್ಲ. ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ನಮಗೆ ಮಾಹಿತಿ ಕೊಡಲ್ಲ ಅಂತ ಗೃಹ ಸಚಿವ ಪರಮೇಶ್ವರ್ (G. Parameshwara) ತಿಳಿಸಿದರು.
ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಸಂಪುಟ ಪುನಾರಚನೆ ಅಥ ವಿಸ್ತರಣೆ ಮಾಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಇದೆಲ್ಲ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನಮಗೆ ಗೊತ್ತೇ ಆಗೋದಿಲ್ಲ. ಕೆಲವರು ಅವರವರ ಅಭಿಪ್ರಾಯ ಹೇಳ್ತಾರೆ. ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಆಗಬೇಕು ಅಂತ ಹೇಳ್ಕೊಂಡು ಬರ್ತಿದ್ದಾರಲ್ಲ ಇದರ ಬಗ್ಗೆ ನಮಗ್ಯಾರಿಗೂ ಗೊತ್ತೇ ಇಲ್ಲ. ಹೈಕಮಾಂಡ್‌ನವರು ಯಾರೂ ಹೇಳಿಲ್ಲ, ಅಥವಾ ಸಿಎಂ ಆಗಲೀ ಅಧ್ಯಕ್ಷರಾಗಲೀ ನಮಗೆ ಇದರ ಬಗ್ಗೆ ಹೇಳಿಲ್ಲ. ಒಳಗೆ ಅವರು ಏನು ಅಂಡರ್‌ಸ್ಟ್ಯಾಂಡಿಂಗ್‌ಗೆ ಬಂದಿದ್ದಾರೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪೊಲೀಸ್ ನೇಮಕಾತಿಗಳಿಗೆ ಪ್ರತ್ಯೇಕ ಶಾಶ್ವತ ವಯೋಮಿತಿ ಸಡಿಲಿಕೆ ಮಾಡ್ತೇವೆ – ಪರಮೇಶ್ವರ್
ಸಾಮಾಜಿಕ ಆರ್ಥಿಕ ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಮಾತಾಡಿದ ಪರಮೇಶ್ವರ್, ಜಾತಿ ಸಮೀಕ್ಷೆ ಬಗ್ಗೆ ಗೊಂದಲದ ಹೇಳಿಕೆ ಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಸಾಮಾಜಿಕ ಆರ್ಥಿಕ ಸಮೀಕ್ಷೆ ಮೂಲಕ ಸಮುದಾಯಗಳ ಸ್ಥಿತಿಗತಿ ಗೊತ್ತಾಗುತ್ತದೆ. ಇದರ ಹೊರತಾಗಿ ಈ ಸಮೀಕ್ಷೆಯಿಂದ ಇನ್ನೇನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯ? ಕೇಂದ್ರದಿಂದಲೂ ಮುಂದೆ ಗಣತಿ ಮಾಡ್ತಾರೆ. ಆಗ ಯಾರಾದರೂ ನಾವು ಗಣತಿಯಲ್ಲಿ ಭಾಗವಹಿಸಲ್ಲ ಅಂತ ಹೇಳಿದರೆ ಗೊಂದಲ ಆಗಲ್ವಾ? ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದದರು. ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್- ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ
ಇನ್ನು ನಿಗದಿತ ಗಡುವಿನೊಳಗೆ ಸಮೀಕ್ಷೆ ಮುಗಿಸ್ತೇವೆ. ನಮ್ಮ ಜಿಲ್ಲೆಯಲ್ಲೂ ಸಮೀಕ್ಷೆ ವೇಗ ಪಡೆದುಕೊಂಡಿದೆ ಎಂದು ತಿಳಿಸಿದರು.
ಬೆಂಗಳೂರು: ಬುರುಡೆ ಗ್ಯಾಂಗ್‌ಗೆ ಸುಪ್ರೀಂ ಕೋರ್ಟ್ (Supreme Court) ಛೀಮಾರಿ ಹಾಕಿದ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡಲು ಗೃಹ ಸಚಿವ ಪರಮೇಶ್ವರ್ (Parameshwar) ನಿರಾಕರಿಸಿದ್ದಾರೆ.
ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ. ತಿಳಿದುಕೊಂಡು ಮಾತನಾಡದೇ ಹೋದರೆ ಹೋದ್ರೆ ಸಚಿವರಿಗೆ ಏನು ಗೊತ್ತಿಲ್ಲ ಎನ್ನುತ್ತೀರಿ. ತಿಳಿದುಕೊಂಡು ಅಮೇಲೆ ಮಾತನಾಡುತ್ತೇನೆ ಎಂದು ಉತ್ತರ ನೀಡಿದ್ದಾರೆ.
ಏನಿದು ಪ್ರಕರಣ?
ಕಳೆದ ಏಪ್ರಿಲ್ 30 ರಂದು ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯಿಸಿ ಬುರುಡೆ ಗ್ಯಾಂಗ್ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ ಮೇ 5ರಂದೇ ಸುಪ್ರೀಂ ಕೋರ್ಟ್ ಬುರುಡೆ ಗ್ಯಾಂಗ್‌ಗೆ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿತ್ತು.
ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ, ವೈಯಕ್ತಿಕ ಹಿತಾಸಕ್ತಿ ಕಾಣಿಸುತ್ತಿದೆ. ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಎಂದು ಬುರುಡೆ ಗ್ಯಾಂಗ್‌ಗೆ ತಪರಾಕಿ ಹಾಕಿತ್ತು. ನಾಚಿಕೆ ಮಾನಾ ಮರ್ಯಾದೆ ಎಲ್ಲವನ್ನೂ ಬಿಟ್ಟು ಬಂದು ದೂರು ನೀಡಿದ್ದೀರಿ ದಶಕಗಳು ಕಳೆದ ಬಳಿಕ ತಡವಾಗಿ ಯಾಕೆ ಈ ಅರ್ಜಿ ಸಲ್ಲಿಸಿದ್ದೀರಿ ಎಂದು ಗ್ಯಾಂಗನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಾರಾಸಗಟಾಗಿ ಅರ್ಜಿಯನ್ನ ತಿರಸ್ಕರಿಸಿತ್ತು. ಆದರೆ ಈ ವಿಚಾರವನ್ನು ಮುಚ್ಚಿಟ್ಟು ಬುರುಡೆ ಗ್ಯಾಂಗ್ ಬೆಳ್ತಂಗಡಿ ನ್ಯಾಯಾಲಯದಲ್ಲಿ ಶವ ಹೂಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿತ್ತು ಮತ್ತು ಚಿನ್ನಯ್ಯನ ಹೇಳಿಕೆಯನ್ನು ದಾಖಲು ಮಾಡಿಸಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ದಕ್ಷಿಣ ಕನ್ನಡ ಪೊಲೀಸರು ಚಿನ್ನಯ್ಯ ಮಂಪರು ಪರೀಕ್ಷೆ ನಡೆಸಲು ಅರ್ಜಿ ಹಾಕಿದ್ದರು. ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಸರ್ಕಾರ ದಿಡೀರ್ ಎಂಬಂತೆ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಪ್ರಕಟಿಸಿತ್ತು.