Tag: ಪರಮೇಶ್ವರ

  • ಗುರುವಾರದಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏನೆಲ್ಲ ಬದಲಾವಣೆ ಆಯ್ತು – ವೈದ್ಯ ಪರಮೇಶ್ ಹೇಳ್ತಾರೆ ಓದಿ

    ಗುರುವಾರದಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏನೆಲ್ಲ ಬದಲಾವಣೆ ಆಯ್ತು – ವೈದ್ಯ ಪರಮೇಶ್ ಹೇಳ್ತಾರೆ ಓದಿ

    – ಶನಿವಾರ ಮಧ್ಯಾಹ್ನದಿಂದ ಕಿಡ್ನಿಯಲ್ಲಿ ತೊಂದರೆ
    – ಸೋಮವಾರ ಕಿರಿಯ ಶ್ರೀಗಳನ್ನು 30 ಸೆಕೆಂಡ್ ದಿಟ್ಟಿಸಿ ನೋಡಿದ್ರು
    – ಆಸ್ಪತ್ರೆ ಹೇಗಿದೆ? ಹೇಗೆ ನಡೆಯುತ್ತಿದೆ? – ಪ್ರಶ್ನಿಸಿದ್ದ ಶ್ರೀಗಳು

    ಬೆಂಗಳೂರು: ಸುದೀರ್ಘ ಕಾಲದವರೆಗೂ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಪರಮೇಶ್ ಅವರು, ಗುರುವಾರದಿಂದ ಭಾನುವಾರದವರೆಗೆ ಶ್ರೀಗಳ ಆರೋಗ್ಯದಲ್ಲಾದ ಬದಲಾವಣೆಗಳ ಕುರಿತು ಪಬ್ಲಿಕ್ ಟಿವಿಗೆ ವಿವರಣೆ ನೀಡಿದ್ದಾರೆ.

    ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ಅವರು, ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಉತ್ಪಾದನೆ ನಿಂತು ಹೋಗಿತ್ತು. ಶನಿವಾರ ಮಧ್ಯಾಹ್ನದಿಂದ ಶ್ರೀಗಳ ದೇಹದಲ್ಲಿ ಬಿಪಿ, ಪಲ್ಸ್ ರೇಟ್ ಕಡಿಮೆಯಾಗತೊಡಗಿತು. ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ಗೊತ್ತಾಯಿತು. ಈ ಸಂದರ್ಭದಲ್ಲಿ ಗುರುಗಳನ್ನು ಮಠದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ವೈದ್ಯರಲ್ಲಿ ಬಂತು. ಆದರೆ ಡಯಾಲಿಸಿಸ್ ಮಾಡಿದರೆ ಶ್ರೀಗಳಿಗೆ ನಾವು ಮತ್ತಷ್ಟು ನೋವು ನೀಡಿದಂತೆ ಆಗುತ್ತದೆ. ಮತ್ತಷ್ಟು ಕಷ್ಟ ನೀಡುವುದು ಸರಿಯಲ್ಲ ಎನ್ನುವ ತೀರ್ಮಾನಕ್ಕೆ ಬಂದೆವು. ನಾವು ಪ್ರಯತ್ನ ನಡೆಸಿದರೂ ಕಿಡ್ನಿ ಸಾಮಾನ್ಯ ಸ್ಥಿತಿಗೆ ಬರಲಿಲ್ಲ. ಇದು ಶ್ರೀಗಳ ಶಿವೈಕ್ಯದ ಮುನ್ಸೂಚನೆ ಎನ್ನುವುದನ್ನು ನಾವು ಅರಿತೆವು ಎಂದು ಹೇಳಿದರು. ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    111 ವರ್ಷದಲ್ಲೂ ಸ್ವಾಮೀಜಿಗಳು ಈ ಎಲ್ಲ ಚಿಕಿತ್ಸೆಗೆ ಹೇಗೆ ಸ್ಪಂದನೆ ನೀಡುತ್ತಿದ್ದರು ಎನ್ನುವ ಪ್ರಶ್ನೆಗೆ, ನಾನು ಡಿಸೆಂಬರ್ 1 ರಿಂದ ದಿನವೂ ಹತ್ತಿರ 20 ಗಂಟೆ ಸ್ವಾಮೀಜಿಗಳ ಜೊತೆಯಲ್ಲೇ ಇರುತ್ತಿದ್ದೆ. ಅವರನ್ನು ಬಹಳ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. 111 ವರ್ಷ ಬದುಕಿರುವುದು ಪವಾಡವಾದರೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ರೀತಿಯೇ ಒಂದು ದೊಡ್ಡ ಪವಾಡ. ಒಮ್ಮೊಮ್ಮೊ ಬಿಪಿ, ಹೃದಯ ಬಡಿತ ಕಡಿಮೆ ಆಗುತ್ತಿದ್ದರೆ, ಒಮ್ಮೆ ದಿಢೀರ್ ಏರಿಕೆಯಾಗುತ್ತಿತ್ತು. 60, 70 ವರ್ಷದವರಿಗೆ ಈ ರೀತಿ ಆದರೆ ಅವರಿಗೆ ಕಾಯಿಲೆಯನ್ನು ತಡೆದುಕೊಳ್ಳಲು ಶಕ್ತಿ ಇರುವುದಿಲ್ಲ. ಆದರೆ ಸ್ವಾಮೀಜಿಯವರ ದೇಹದಲ್ಲಿ 140-150 ಹೃದಯ ಬಡಿತ ಆಗುತ್ತಿತ್ತು. ಆ ರೀತಿ ಹೃದಯ ಬಡಿತ ಜಾಸ್ತಿ ಆದರೆ ವ್ಯಕ್ತಿ ಬದುಕುವುದು ಕಷ್ಟ. ಮತ್ತೆ ನಾವು ಚಿಕಿತ್ಸೆ ನೀಡಿದಾಗ 70-80 ಹೃದಯ ಬಡಿತ ಇಳಿಕೆಯಾಗುತಿತ್ತು. ಇದು ನಮಗೆ ಅಚ್ಚರಿಯಾಗಿತ್ತು. ವೈದ್ಯ ಲೋಕಕ್ಕೆ ಇದೊಂದು ಪವಾಡವೇ ಸರಿ ಎಂದು ಡಾ.ಪರಮೇಶ್ ಹೇಳಿದರು. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಚೆನ್ನೈನಲ್ಲಿದ್ದಾಗ ಕಿರಿಯ ಶ್ರೀಗಳಲ್ಲಿ ವಯಸ್ಸು ಎಷ್ಟು ಎಂದು ಕೇಳಿದಾಗ 111 ಅಂದಿದ್ದಕ್ಕೆ ಇದು ಬಹಳ ಆಯ್ತು ಎಂದಿದ್ದರಂತೆ. ಇದು ಶ್ರೀಗಳು ಮಾತನಾಡಿದ ಕೊನೆಯ ಮಾತೇ ಎಂದು ಕೇಳಿದ ಪ್ರಶ್ನೆಗೆ, ನಾವು ಚೆನ್ನೈಯಿಂದ ವಾಪಸ್ ಬಂದಾಗ ಕೂಡ ಅವರು ಮಾತನಾಡಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆ ಹೇಗಿದೆ? ಆಸ್ಪತ್ರೆ ಹೇಗೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಇತ್ತೀಚೆಗೆ ಹಳೆ ಮಠಕ್ಕೆ ಬಂದಾಗ 4-5 ದಿನಗಳಲ್ಲಿ ಅವರು ಬಹಳ ಆಯಾಸಗೊಂಡಿದ್ದರು. ಆಗ ಸ್ವಾಮೀಜಿ ಅವರು ಚೇತರಿಕೆ ಆಗುತ್ತಿಲ್ಲ ಎಂದು ಅನಿಸುತ್ತಿತ್ತು. ಆದರು ನಾವು ಚಿಕಿತ್ಸೆ ನೀಡುತ್ತಿದ್ದೇವು ಎಂದು ವಿವರಿಸಿದರು. ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಭಾನುವಾರ ಸಂಜೆಯಿಂದ ನಮಗೆ ಯಾವುದೇ ಭರವಸೆ ಇರಲಿಲ್ಲ. ಅಚ್ಚರಿ ಏನೆಂದರೆ ಸೋಮವಾರ ಚಿಕ್ಕ ಸ್ವಾಮೀಜಿ ಅವರು ಹಳೆ ಮಠಕ್ಕೆ ಬಂದು ಸ್ವಾಮೀಜಿ ಅವರ ಪಕ್ಕದಲ್ಲಿ ನಿಂತು ಇಷ್ಟಲಿಂಗದ ಪೂಜೆ ಮಾಡಿದ್ದರು. ಎರಡು ದಿನದಿಂದ ಸ್ವಾಮೀಜಿ ಕಣ್ಣು ಬಿಡದೇ ಗಾಢ ನಿದ್ರೆಯಲ್ಲಿದ್ದರು. ಸೋಮವಾರ ಕಿರಿಯ ಸ್ವಾಮೀಜಿ ಪೂಜೆ ಮಾಡಿದ ನಂತರ ಶ್ರೀಗಳು ಕಣ್ಣು ಬಿಟ್ಟು ಕಿರಿಯ ಸ್ವಾಮೀಜಿ ಅವರನ್ನು 30 ಸೆಕೆಂಡ್ ದಿಟ್ಟಿಸಿ ನೋಡುತ್ತಿದ್ದರು. ಅದೇ ಅವರು ಕೊನೆಯದಾಗಿ ಕಣ್ಣು ಬಿಟ್ಟಿದ್ದು, ಆದಾದ ಬಳಿಕ ಅವರು ಕಣ್ಣು ಬಿಡಲೇ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಪರಮೇಶ್ ಮಾಹಿತಿ ನೀಡಿದರು.

    https://www.youtube.com/watch?v=mxA9HE4qgJQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಳೆಗಾಲಕ್ಕೆ ಸಜ್ಜಾದ ಮಿನಿಸ್ಟರ್ಸ್ ಮನೆ – ಬೆಂಗ್ಳೂರು ಮುಳುಗಿದ್ರು ಇವರ ಮನೆ ಸೇಫ್!

    ಮಳೆಗಾಲಕ್ಕೆ ಸಜ್ಜಾದ ಮಿನಿಸ್ಟರ್ಸ್ ಮನೆ – ಬೆಂಗ್ಳೂರು ಮುಳುಗಿದ್ರು ಇವರ ಮನೆ ಸೇಫ್!

    ಬೆಂಗಳೂರು: ಮಳೆಗಾಲಕ್ಕೆ ಸಚಿವರ ಮನೆಗಳು ಸಜ್ಜಾಗಿದೆ. ಮುಳುಗೋ ಏರಿಯಾಗಳಲ್ಲಿ ಮಳೆಗಾಲದ ಮುನ್ನೆಚ್ಚರಿಕೆ ವಹಿಸದ ಬಿಬಿಎಂಪಿ ಸದಾಶಿವನಗರದ ಸಚಿವರುಗಳ ಮನೆ ಮುಂದೆ ಮಾತ್ರ ಫುಲ್ ಆಕ್ಟೀವ್ ಆಗಿದೆ.

    ಮಳೆ ಬಂದಾಗ ಸದಾಶಿವ ನಗರದ ಯಾವ ಮನೆಗಳಿಗೂ ನೀರು ನುಗ್ಗಿದ ಉದಾಹರಣೆಯೇ ಇಲ್ಲ. ಆದರೆ ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಈಗ ಡಿಸಿಎಂ ಪರಮೇಶ್ವರ್ ಸರ್ಕಾರಿ ಮನೆ ಮತ್ತು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಮುಂಭಾಗದಲ್ಲಿ ಮಳೆ ನೀರು ನೇರವಾಗಿ ಸ್ಯಾಂಕಿಗೆ ಕೆರೆಗೆ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ.

    ಮಳೆ ನೀರು ಮನೆಗೆ ಬಿಡಿ, ರಸ್ತೆಯಲ್ಲಿ ನಿಲ್ಲದೇ ಸರಾಗವಾಗಿ ಸ್ಯಾಂಕಿ ಕೆರೆಗೆ ಹೋಗುವಂತೆ ಭೂಮಿಯೊಳಗೆ ಪೈಪ್ ಹಾಕಿ ಕೆರೆಗೆ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಇವರ ಮನೆ ಮುಂದೆ ಕೊಳಚೆ ನೀರು ಕಾಲುವೆ ಶುದ್ಧೀಕರಣ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಈ ಮಳೆ ನೀರಿನ ಜೊತೆಗೆ ಕೊಳಚೆ ನೀರನ್ನು ನೇರವಾಗಿ ಕೆರೆಗೆ ಹರಿಸುತ್ತಿದ್ದಾರಾ ಎನ್ನುವ ಅನುಮಾನವೂ ವ್ಯಕ್ತವಾಗಿದೆ.

    ಡಿಸಿಎಂ ನಿರ್ದೇಶನದಂತೆ ಬಿಬಿಎಂಪಿಯಿಂದ ಕಾರ್ಯ ನಡೆಯುತ್ತಿದ್ದು, ಡಿಸಿಎಂ ಸರ್ಕಾರಿ ಬಂಗಲೆ ಮುಂದಿನ ರಸ್ತೆ ಮೇಲಿರುವ ಕಾಳಜಿ ಜನಸಾಮಾನ್ಯರ ಮೇಲ್ಯಾಕೆ ಇಲ್ಲ. ಜಯಮಾಲ ಮೇಡಂ ಆಯ್ತು ಈಗ ಪರಮೇಶ್ವರ್ ಸರದಿ ಆಗಿದೆ. ಮಳೆಯ ನೀರಿನ ಜೊತೆಗೆ ಮೋರಿ ನೀರು ನೇರವಾಗಿ ಕೆರೆಗೆ ಹೋಗಲು ಕನೆಕ್ಷನ್ ಕೊಟ್ಟಿದ್ದಾರಾ. ಸಚಿವರ ಮನೆ ಮುಂದೆ ನಡೆಸುವ ಅಬ್ಬರದ ಕಾಮಗಾರಿಗಳು ಬೇರೆ ಕಡೆ ಯಾಕೆ ಇಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

  • ಕೆಪಿಸಿಸಿ ಕಚೇರಿಯಿಂದ ಎಸ್.ಎಂ.ಕೃಷ್ಣ ಫೋಟೋ ತೆಗೆದಿದಕ್ಕೆ ಪರಮೇಶ್ವರ್ ಗರಂ

    ಕೆಪಿಸಿಸಿ ಕಚೇರಿಯಿಂದ ಎಸ್.ಎಂ.ಕೃಷ್ಣ ಫೋಟೋ ತೆಗೆದಿದಕ್ಕೆ ಪರಮೇಶ್ವರ್ ಗರಂ

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಎಸ್‍ಎಂ ಕೃಷ್ಣ ಅವರ ಫೋಟೋವನ್ನ ಕಾಂಗ್ರೆಸ್‍ನ ಕಾರ್ಯಕರ್ತರು ತೆಗೆದ ಕಾರಣ ಹಾಲಿ ಅಧ್ಯಕ್ಷ ಪರಮೇಶ್ವರ್ ಒಂದು ಕ್ಷಣ ಕೋಪಗೊಂಡ ಘಟನೆ ನಡೆಯಿತು.

    ಪಕ್ಷದ ಕಚೇರಿಯ ಅಧ್ಯಕ್ಷರ ಸಾಲಿನಲ್ಲಿದ್ದ ಕೃಷ್ಣ ಅವರ ಫೋಟೋವನ್ನು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳಾದ ರಫಿಉಲ್ಲಾ ಮತ್ತು ಸರ್ದಾರ್ ಸೆರ್ಧಾರ್ ಷರೀಫ್ ಎಂಬವರು ತೆಗೆದಿದ್ದರು. ಇದರಿಂದ ಕೋಪಗೊಂಡ ಪರಮೇಶ್ವರ್ ತಕ್ಷಣವೇ ಎಸ್‍ಎಂಕೆ ಫೋಟೋ ಹಾಕಿಸಿ, ಅವರಿಬ್ಬರನ್ನ ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ.

    ಕೃಷ್ಣ ಅವರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ ಅವರ ಮೇಲೆ ನಮಗೆ ಗೌರವವಿದೆ ಅಂತ ಪರಮೇಶ್ವರ್ ಹೇಳಿದ್ದಾರೆ.

    https://www.youtube.com/watch?v=IfRFx5wQj5Q

  • ಪರಮೇಶ್ವರ್ ಅಧ್ಯಕ್ಷರಾಗಿ ಮುಂದುವರಿಕೆ ಅಧಿಕೃತವಾಯ್ತು – ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ

    ಪರಮೇಶ್ವರ್ ಅಧ್ಯಕ್ಷರಾಗಿ ಮುಂದುವರಿಕೆ ಅಧಿಕೃತವಾಯ್ತು – ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಅವರನ್ನು ಮುಂದುವರೆಸಿ ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಹಲವು ದಿನಗಳಿಂದ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.

    ಎಐಸಿಸಿ ಮುಖ್ಯಕಾರ್ಯದರ್ಶಿ ಜನಾರ್ದನ ದ್ವಿವೇದಿ ಹೊರಡಿಸಿದ ಎಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲೇ ಎದುರಿಸಲಿದೆ ಎಂದು ತಿಳಿಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ ನೀಡಲಿದ್ದಾರೆ.

    ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಜೊತೆ ಎಸ್.ಆರ್. ಪಾಟೀಲ್ ಅವರೂ ಕಾರ್ಯನಿರ್ವಹಿಸಲಿದ್ದಾರೆ. ಉತ್ತರ ಕರ್ನಾಟಕದ ಉಸ್ತುವಾರಿಯಾಗಿ ಎಸ್ ಆರ್ ಪಾಟೀಲ್ ಹಾಗೂ ದಕ್ಷಿಣ ಕರ್ನಾಟಕದ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ ಕಾರ್ಯನಿರ್ವಹಿಸಲಿದ್ದಾರೆ.

    ಮುಂದಿನ ವಿಧಾನ ಸಭೆ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಕಾರ್ಯದರ್ಶಿಯಾಗಿ ಸತೀಶ್ ಜಾರಕಿಹೊಳಿ, ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತರಾಗಿ ಕೆ ಎಚ್ ಮುನಿಯಪ್ಪ ಅವರನ್ನು ನೇಮಕಗೊಳಿಸಲಾಗಿದೆ ಎಂದು ಎಐಸಿಸಿ ಮಾಧ್ಯಮ ಪ್ರಕಟಣೆ ತಿಳಿಸಿದೆ.

     

  • ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಇಂದು ಫೈನಲ್ ಕಸರತ್ತು- ದೆಹಲಿಯಲ್ಲಿ ನೂತನ ಕೈ ಸಾರಥಿ ನೇಮಕ

    ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಇಂದು ಫೈನಲ್ ಕಸರತ್ತು- ದೆಹಲಿಯಲ್ಲಿ ನೂತನ ಕೈ ಸಾರಥಿ ನೇಮಕ

    ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಪಟ್ಟದ ಫೈನಲ್ ಮ್ಯಾಚ್ ಇಂದು ದೆಹಲಿಯಲ್ಲಿ ನಡೆಯಲಿದೆ. ಹೈಕಮಾಂಡ್ ಬುಲಾವ್ ಹಿನ್ನಲೆಯಲ್ಲಿ ಭಾನುವಾರವೇ ದೆಹಲಿಗೆ ಸಿಎಂ ತೆರಳಿದ್ದಾರೆ. ರಾಜ್ಯ ನಾಯಕರ ಅಭಿಪ್ರಾಯವನ್ನ ಸಂಗ್ರಹಿಸಲಿರುವ ಕಾಂಗ್ರೆಸ್ ಹೈಕಮಾಂಡ್ `ಕೈ’ ನೂತನ ಕ್ಯಾಪ್ಟನ್ ನೇಮಕ ಮಾಡಲಿದೆ.

    ಕುತೂಹಲಕ್ಕೆ ಕಾರಣವಾಗಿರೋ ಕೆಪಿಸಿಸಿ ಅಧ್ಯಕ್ಷ ಗಾದಿಯ ಆಯ್ಕೆ ಕಸರತ್ತು ಇಂದು ಬಹುತೇಕ ಮುಕ್ತಾಯಗೊಳ್ಳಲಿದೆ. ಅಧ್ಯಕ್ಷ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಣೆಗೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷಗಾದಿಗೆ ರಾಜ್ಯದ ಪ್ರಮುಖ ನಾಯಕರನ್ನ ಕರೆಸಿಕೊಂಡಿರೋ ಕಾಂಗ್ರೆಸ್ ಹೈಕಮಾಂಡ್ ಇಂದು ನಾಯಕರ ಅಭಿಪ್ರಾಯ ಸಂಗ್ರಹ ಮಾಡಲಿದೆ. ಆ ಬಳಿಕ ಅಳೆದು ತೂಗಿ ಕೆಪಿಸಿಸಿಗೆ ಹೊಸ ನಾಯಕನನ್ನ ಘೋಷಿಸಲಿದೆ.

    ಫೈನಲ್‍ನಲ್ಲಿ ಮೂರು ಹೆಸರುಗಳು: ದಲಿತ ಸಮುದಾಯದ ಬೆಂಬಲದೊಂದಿಗೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಪರಮೇಶ್ವರ್ ಕಸರತ್ತು ಮಾಡ್ತಿದ್ರೆ, ಒಕ್ಕಲಿಗರ ಜೊತೆ ಉಪಚುನಾವಣೆಗಳಲ್ಲಿ ಕೆಲಸ ಮಾಡಿ ಜಯದ ಹುಮ್ಮಸ್ಸಿನಲ್ಲಿರೋ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಪ್ರಭಾವ ಬೀರಿ ಮತ್ತೊಂದು ಕಡೆ ಲಾಬಿ ಮಾಡ್ತಿದ್ದಾರೆ. ಇನ್ನೊಂದು ಕಡೆ ಹೆಂಗಾದ್ರು ಮಾಡಿ ತನ್ನ ಅಭ್ಯರ್ಥಿಯನ್ನ ಕೂರಿಸಿ ಅಧಿಕಾರ ನಡೆಸಲು ಪ್ಲಾನ್ ಮಾಡಿರುವ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆಪ್ತ ಸಚಿವ ಎಂ.ಬಿ. ಪಾಟೀಲ್ ಪರ ಬ್ಯಾಟಿಂಗ್ ಮಾಡಲು ಮುಂದಾಗಿದ್ದಾರೆ.

    ರವಿವಾರ ಸಚಿವ ಡಿ.ಕೆ.ಶಿವಕುಮಾರ್ ಅವರು ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿದ್ದು ಕೂತುಹಲ ಮೂಡಿಸಿದೆ. ಆಶ್ಚರ್ಯ ಎಂಬಂತೆ ರವಿವಾರ ಸಿಎಂ ದೆಹಲಿಗೆ ತೆರಳುವ ವೇಳೆ ಅಧ್ಯಕ್ಷ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಕೂಡ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದು, ತೀವ್ರ ಕೂತುಹಲ ಮೂಡಿಸಿದೆ.