Tag: ಪರಮಾಣು ಶಸ್ತ್ರಾಸ್ತ್ರ

  • 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    ಮಾಸ್ಕೋ: 2ನೇ ವಿಶ್ವ ಮಹಾಯುದ್ಧದ ನಂತರ ಅತಿಹೆಚ್ಚು ಸಾವು-ನೋವು ಕಂಡ ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಬರೋಬ್ಬರಿ 1,000 ದಿನಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹೊಸ ಪರಮಾಣು ನೀತಿಯನ್ನು ಅನುಮೋದಿಸಿದ್ದಾರೆ. ಈ ಮೂಲಕ ಉಕ್ರೇನ್‌ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಎಚ್ಚರಿಕೆ ನೀಡಿದ್ದಾರೆ.

    2022ರ ಫ್ರೆಬ್ರವರಿ 24ರಂದು ಶುರುವಾದ ಯುದ್ಧ 1,000 ದಿನಗಳನ್ನು ಪೂರೈಸುತ್ತಿದ್ದಂತೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಪುಟಿನ್‌ ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಪರಿಷ್ಕೃತ ಪರಮಾಣು ಸಿದ್ಧಾಂತಕ್ಕೆ (Nuclear Deterrent Policy) ಸಹಿ ಹಾಕಿದ್ದು, ಪರಮಾಣು ಶಕ್ತಿ ಬೆಂಬಲಿತವಾಗಿರುವ ಯಾವುದೇ ರಾಷ್ಟ್ರವು ರಷ್ಯಾದ ಮೇಲೆ ನಡೆಸುವ ಸಾಂಪ್ರದಾಯಿಕ ದಾಳಿಯನ್ನು ಜಂಟಿ ದಾಳಿ ಎಂದು ಪರಿಗಣಿಸುವುದಾಗಿ ಘೋಷಿಸಿದ್ದಾರೆ.

    ರಷ್ಯಾದ ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಉಕ್ರೇನ್‌ಗೆ ಒಪ್ಪಿಗೆ ನೀಡಿದ ಒಂದು ದಿನದ ನಂತರ ಪುಟಿನ್‌ ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    ಅನಿವಾರ್ಯತೆ ಬಂದ್ರೆ ಯೋಚಿಸಲ್ಲ:
    ಇದೇ ವೇಳೆ ಕ್ರೆಮ್ಲಿನ್‌ (Kremlin) ಉಕ್ರೇನ್‌ ಅನ್ನು ಸೋಲಿಸಲು ಪ್ರತಿಜ್ಞೆ ಮಾಡಿದೆ. ಕೈವ್‌ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲದಿಂದ ಸಂಘರ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಸಿದ್ದಾರೆ.

    ಅಲ್ಲದೇ ರಷ್ಯಾ ಯಾವಾಗಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಕೊನೆಯ ಅಸ್ತ್ರವಾಗಿ ಬಳಕೆ ಮಾಡಲು ನಿರ್ಧರಿಸಿದೆ. ಅನಿವಾರ್ಯ ಅನ್ನಿಸಿದ್ರೆ ಬಳಸಲು ಹಿಂದೆ ಮುಂದೆ ಯೋಚಿಸಲ್ಲ ಎಂದು ಪೆಸ್ಕೋವ್‌ ಹೇಳಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ಅಮೆರಿಕ ಉಕ್ರೇನ್‌ಗೆ ಹೇಳಿದ್ದೇನು?
    ರಷ್ಯಾ-ಉಕ್ರೇನ್‌ (Russia- Ukraine) ಯುದ್ಧ ನಿಲ್ಲಿಸುತ್ತೇನೆಂದು ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದರ ಹೊರತಾಗಿಯೂ ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ (Joe Biden) ರಷ್ಯಾ ವಿರುದ್ಧ ಯುದ್ಧ ಮಾಡುವಂತೆ ಉಕ್ರೇನ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

    ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿ ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾದ ಪಡೆಗಳನ್ನು ರಷ್ಯಾ ನಿಯೋಜಿಸಿದ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ. 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ದಾಳಿಯನ್ನು ಉಕ್ರೇನ್‌ ನಡೆಸುವ ಸಾಧ್ಯತೆಯಿದೆ. ಇದಕ್ಕೆ ಜೋ ಬೈಡನ್‌ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿತ್ತು.

    120 ಕ್ಷಿಪಣಿಗಳಿಂದ ದಾಳಿ:
    ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

  • ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    – ಹಿರೋಷಿಮಾ, ನಾಗಸಾಕಿ ಅಣ್ವಸ್ತ್ರಕ್ಕಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿ ರಷ್ಯಾದ ಅಣ್ವಸ್ತ್ರ

    ಮಾಸ್ಕೋ: ಉಕ್ರೇನ್ (Ukranine) ಮೇಲೆ ವರ್ಷದಿಂದ ಯುದ್ಧ ಮಾಡುತ್ತಿರುವ ರಷ್ಯಾ (Russia) ಇದೀಗ ತನ್ನ ಮೊದಲ ಬ್ಯಾಚ್‌ನ ಪರಮಾಣು ಶಸ್ತ್ರಾಸ್ತ್ರವನ್ನು (Nuclear Weapons) ಬೆಲಾರಸ್‌ಗೆ (Belarus) ಕಳುಹಿಸಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶುಕ್ರವಾರ ತಿಳಿಸಿದ್ದಾರೆ. ಈ ವಿಚಾರ ದೃಢವಾಗುತ್ತಲೇ ಇಡೀ ಜಗತ್ತಿಗೆ ಭೀತಿ ಉಂಟಾಗಿದೆ.

    ಸೆಂಟ್ ಪೀಟರ್ಸ್ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿರುವ ಪುಟಿನ್, ಈ ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪಿಸುವ ಗುರಿಯಿದೆ. ಇದು ರಷ್ಯಾ ಹಾಗೂ ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಯೋಚಿಸುತ್ತಿರೋ ಎಲ್ಲಾ ವಿರೋಧಿಗಳಿಗೂ ತಿರುಗೇಟಿನ ಕ್ರಮವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರದ ಬಳಕೆ ಮಾಡುತ್ತದೋ ಎಂಬ ಪ್ರಶ್ನೆಗೆ ಕಾರಣವಾಗಿದೆ ಮಾತ್ರವಲ್ಲದೇ ಜಗತ್ತಿನ ನಿದ್ದೆಗೆಡಿಸಿದಂತಾಗಿದೆ.

    ಈ ವಾರ ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು, ನಾವು ರಷ್ಯಾದಿಂದ ಬಾಂಬ್‌ಗಳು ಹಾಗೂ ಕ್ಷಿಪಣಿಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಾಂಬ್‌ಗಳು ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಬಳಸಲಾಗಿದ್ದ ಅಣ್ವಸ್ತ್ರಕ್ಕಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್‌ ರಾಜಕಾಲುವೆ

    ಉಕ್ರೇನ್ ಹಾಗೂ ರಷ್ಯಾದ ನಡುವೆ ಯುದ್ಧ ಆರಂಭವಾಗಿ ವರ್ಷವೇ ಕಳೆದಿದೆ. ಯುದ್ಧ ಇನ್ನೇನು 500ನೇ ದಿನ ಪೂರೈಸಲಿದೆ. ಅಮೆರಿಕ ಈ ಯುದ್ಧದ ಬಗ್ಗೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಇದೀಗ ರಷ್ಯಾ ನೇರವಾಗಿ ಅಣ್ವಸ್ತ್ರವನ್ನೇ ತನ್ನ ಮಿತ್ರ ರಾಷ್ಟ್ರ ಬೆಲಾರಸ್‌ಗೆ ಕಳುಹಿಸಿ ಕೊಟ್ಟಿದೆ. ಬೆಲಾರಸ್‌ನ ಗಡಿಯಿಂದ ಉಕ್ರೇನ್‌ನ ರಾಜಧಾನಿ ಕೀವ್‌ಗೆ ಕೇವಲ 200 ಕಿ.ಮೀ ದೂರವಿದೆ. ಇದೀಗ ರಷ್ಯಾ ನೇರವಾಗಿ ಕೀವ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಚಿಪ್ಸ್ ಕರೆಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು

  • ಸೇನೆಯನ್ನು ಭಾಗಶಃ ಸಜ್ಜುಗೊಳಿಸಿ – ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್

    ಸೇನೆಯನ್ನು ಭಾಗಶಃ ಸಜ್ಜುಗೊಳಿಸಿ – ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್

    ಮಾಸ್ಕೋ: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಸೇನೆಯನ್ನು (Military) ಭಾಗಶಃ ಸಜ್ಜುಗೊಳಿಸುವಂತೆ ಆದೇಶ ನೀಡಿದ್ದಾರೆ. ಈ ಆದೇಶದಿಂದಾಗಿ ರಷ್ಯಾ ಉಕ್ರೇನ್ (Ukraine) ಮೇಲಿನ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರವನ್ನು (Nuclear Weapons) ಬಳಸುವ ಸುಳಿವು ನೀಡಿದ್ದಾರೆ.

    ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಿದ್ದರೆ, ರಷ್ಯಾ ಹಾಗೂ ನಮ್ಮ ಜನರನ್ನು ರಕ್ಷಿಸಲು ನಾವು ನಮ್ಮಿಂದಾಗುವ ಎಲ್ಲಾ ರೀತಿಯ ವಿಧಾನಗಳನ್ನೂ ಬಳಸುತ್ತೇವೆ ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ರಷ್ಯಾ ತನ್ನ ಎಲ್ಲಾ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಬಗ್ಗೆ ಪುಟಿನ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹಿಂದೂ, ಮುಸ್ಲಿಮರು ಸಹೋದರ, ಸಹೋದರಿಯರಂತೆ ಇದ್ದೇವೆ- ಬ್ರಿಟನ್‌ನಲ್ಲಿ ಒಗ್ಗಟ್ಟಿನ ಮಂತ್ರ

    Vladimir Putin

    ಅಮೆರಿಕ, ಯುರೋಪಿಯನ್ ಯೂನಿಯನ್, ಹಾಗೂ ಬ್ರಿಟನ್ ಉಕ್ರೇನ್ ಅನ್ನು ಪ್ರೋತ್ಸಾಹಿಸುತ್ತಿದ್ದು, ರಷ್ಯಾದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಸಂಚು ರೂಪಿಸಿವೆ. ಪಶ್ಚಿಮವು ಪರಮಾಣು ಬ್ಲ್ಯಾಕ್‌ಮೇಲ್‌ನಲ್ಲಿ ತೊಡಗಿದೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ರಷ್ಯಾದಲ್ಲಿಯೂ ಸಾಕಷ್ಟು ಶಸ್ತ್ರಾಸ್ತ್ರಗಳಿವೆ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರತನ್‌ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ

    ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶವನ್ನು ಸ್ವತಂತ್ರ್ಯಗೊಳಿಸುವ ಗುರಿಯಿದೆ. ರಷ್ಯಾದ ನಿಯಂತ್ರಣದಲ್ಲಿರುವ ಆ ಪ್ರದೇಶದಲ್ಲಿ ಹೆಚ್ಚಿನ ಜನರು ಕೀವ್‌ನಿಂದ ಆಡಳಿತ ನಡೆಯುವುದನ್ನು ನಿರಾಕರಿಸುತ್ತಿದ್ದಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ನಮ್ಮ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ

    ನಮ್ಮ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ

    ಮಾಸ್ಕೋ: ರಷ್ಯಾದ ಅಸ್ತಿತ್ವಕ್ಕೆ ಬೆದರಿಕೆಯಿದ್ದರೆ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ನಾವು ಭದ್ರತಾ ಪರಿಕಲ್ಪನೆಯನ್ನು ಹೊಂದಿದ್ದೇವೆ. ರಾಜ್ಯದ ಅಸ್ತಿತ್ವಕ್ಕೆ ಬೆದರಿಕೆ ಉಂಟಾದಾಗ ಮಾತ್ರ ಅದನ್ನು ತೊಡೆದುಹಾಕಲು ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆ ಇದೆ ಹಾಗೂ ಖಂಡಿತವಾಗಿಯೂ ಬಳಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರವಾರ ಬಂದರು ವಿಸ್ತರಣೆ ಕಾಮಗಾರಿ ಮುಂದುವರಿಸಬೇಡಿ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

    ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೇಶದ ಕಾರ್ಯತಂತ್ರದ ಪರಮಾಣು ಪಡೆಗೆ ಆಕ್ರಮಣಕ್ಕೆ ತಯಾರಾಗಿರಲು ತಿಳಿಸಿದ್ದರು. ಈ ಆದೇಶ ಜಾಗತಿಕವಾಗಿಯೇ ಎಚ್ಚರಿಕೆಯ ಕರೆಗಂಟೆಯಾಗಿದೆ. ಇದನ್ನೂ ಓದಿ: ಮುಟ್ಟಾಳೆ ಧರಿಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಮೈ ಮಹಾಲಿಂಗ ನಾಯ್ಕ

    ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗಾಗಿ ಪರಮಾಣು ಶಸ್ತ್ರಾಸ್ತ್ರ ಬಳಕೆ ಕಾರಣವಾಗುವುದಿಲ್ಲ. ಬದಲಾಗಿ ರಷ್ಯಾಗೆ ಬೆದರಿಕೆಯಿದ್ದಲ್ಲಿ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಸುವುಗಿ ಡಿಮಿಟ್ರಿ ಪೆಸ್ಕೋವ್ ಸ್ಪಷ್ಟಪಡಿಸಿದ್ದಾರೆ.

  • 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    ಮಾಸ್ಕೋ: ಮೂರನೇ ಮಹಾಯುದ್ಧ ನಡೆದರೆ ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುತ್ತದೆ. ಜೊತೆಗೆ ವಿನಾಶಕಾರಿಯಾಗಿರುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.

    ಕೀವ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಂಡರೆ ನಿಜವಾದ ಅಪಾಯ ಎದುರಿಸಬೇಕಾಗುತ್ತದೆ ಎಂದು ಉಕ್ರೇನ್‌ಗೆ ಲಾವ್ರೊವ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಉಕ್ರೇನ್‌ ಗಡಿ ದಾಟಿದ ಪಾಕಿಸ್ತಾನ ವಿದ್ಯಾರ್ಥಿಗಳು!

    ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ನಗರ ಖಾರ್ಕಿವ್‌ನ ಮಧ್ಯಭಾಗದಲ್ಲಿರುವ ಸ್ಥಳೀಯ ಸರ್ಕಾರದ ಪ್ರಧಾನ ಕಛೇರಿಯ ಮೇಲೆ ಭೀಕರ ದಾಳಿ ನಡೆಸಿತು. ಇದರಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಉಕ್ರೇನ್‌ ರಾಜಧಾನಿ ಕೀವ್‌ನ ಟೆಲಿವಿಷನ್‌ ಟವರ್‌ ಮೇಲೂ ರಷ್ಯಾ ದಾಳಿ ನಡೆಸಿದ್ದು, ಐವರು ಬಲಿಯಾಗಿದ್ದಾರೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ದೂರವಾಣಿ ಕರೆಯಲ್ಲಿ ಮಾತನಾಡಿ, ಆಕ್ರಮಣಕಾರಿ ರಷ್ಯಾವನ್ನು ತಡೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 6 ದಿನದಲ್ಲಿ 6 ಸಾವಿರ ರಷ್ಯಾ ಯೋಧರ ಹತ್ಯೆ: ಉಕ್ರೇನ್ ಅಧ್ಯಕ್ಷ

    ನಿನ್ನೆ ಕೂಡ ಯೂರೋಪಿಯನ್‌ ನಾಯಕರೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡಿದ್ದ ಝೆಲೆನ್‌ಸ್ಕಿ, ನಾವು ನಿಮ್ಮೊಂದಿಗಿದ್ದೇವೆ ಎಂಬುದನ್ನು ಸಾಬೀತುಪಡಿಸಿ ಎಂದು ಯೂರೋಪಿಯನ್‌ ನಾಯಕರಿಗೆ ತಾಕೀತು ಮಾಡಿದ್ದರು. ನೀವಿಲ್ಲದೇ ಉಕ್ರೇನ್‌ ಏಕಾಂಗಿಯಾಗಲಿದೆ ಎಂದು ಹೇಳಿದ್ದರು.

    ರಷ್ಯಾದ ಆಕ್ರಮಣದ ನಂತರ 6,77,000 ಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಪಲಾಯನ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಯುಎನ್‌ನ ನಿರಾಶ್ರಿತರ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?