Tag: ಪರಮಾಣು

  • ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

    ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

    ನವದೆಹಲಿ: ಮೇ 10 ರಂದು ಭಾರತೀಯ ವಾಯುಸೇನೆ (IAF) ಪಾಕ್‌ ವಾಯುನೆಲೆ (Pakistan Air Bases) ಮಾತ್ರವಲ್ಲ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಣಾ ಘಟಕ(Nuclear Weapons Facility) ಮೇಲೆ ಕ್ಷಿಪಣಿ ದಾಳಿ ನಡೆಸಿ ಎರಡೂ ಪ್ರವೇಶದ್ವಾರಗಳನ್ನು ಹೊಡೆದು ಹಾಕಿತ್ತು ಎಂದು ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾ ವಾಯು ಯುದ್ಧಗಳ ವಿಶ್ವ ಪ್ರಸಿದ್ಧ ಇತಿಹಾಸಕಾರ ಟಾಮ್ ಕೂಪರ್ (Tom Cooper) ಹೇಳಿದ್ದಾರೆ.

    ಖಾಸಗಿ ಸುದ್ದಿವಾಹಿನಿಯ ಜೊತೆ ಮಾತನಾಡಿದ ಅವರು, ಒಂದು ಕಡೆ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿರುವಾಗ ಮತ್ತೊಂದು ಕಡೆ ಪಾಕಿಸ್ತಾನಕ್ಕೆ ದಾಳಿ ಮಾಡುವ ಸಾಮರ್ಥ್ಯ ಇಲ್ಲದೇ ಇದ್ದಾಗ ನನ್ನ ಅಭಿಪ್ರಾಯದಲ್ಲಿ ಭಾರತದ ಸ್ಪಷ್ಟವಾಗಿ ಜಯ ದಾಖಲಿಸಿದೆ ಎಂದು ಅವರು ವಿಶ್ಲೇಷಿಸಿದರು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

    ಭಾರತೀಯ ವಾಯುಪಡೆಯು ಪಾಕಿಸ್ತಾನದಲ್ಲಿರುವ ವಾಯು ನೆಲೆಗಳ ಮೇಲೆ ಸ್ವತಂತ್ರವಾಗಿ ದಾಳಿ ಮಾಡಿತ್ತು. ಆದರೆ ಪಾಕಿಸ್ತಾನಕ್ಕೆ ಅದೇ ರೀತಿಯ ದಾಳಿ ಮಾಡಲು ಸಾಧ್ಯವಾಗಲಿಲ್ಲ. ಅಂದರೆ ಪಾಕಿಸ್ತಾನದ ಪ್ರತಿಬಂಧಕ ವಿಫಲವಾಗಿದೆ ಮತ್ತು ಅದರ ವಾಯು ರಕ್ಷಣಾ ವ್ಯವಸ್ಥೆಗಳು ಕುಸಿದಿದೆ ಎಂದರ್ಥ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಅಣ್ವಸ್ತ್ರ ಸಂಗ್ರಹ ಇರೋ ಬೆಟ್ಟದ ಮೇಲೆ ದಾಳಿ ಚರ್ಚೆ – ಪತ್ರಕರ್ತನಿಗೆ ಥ್ಯಾಂಕ್ಸ್‌ ಹೇಳಿದ ವಾಯುಸೇನೆ

    ಮೇ 10 ರಂದು, ಐಎಎಫ್ ಪಾಕ್ ವಾಯುಪಡೆಯ ನೆಲೆಗಳನ್ನು ಮಾತ್ರವಲ್ಲದೆ ಸರ್ಗೋಧಾ ಸಂಕೀರ್ಣದ ಭಾಗವಾಗಿರುವ ಮುಷಾಫ್ ವಾಯುನೆಲೆಯಲ್ಲಿರುವ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಣಾ ಸ್ಥಳದ ಎರಡೂ ಪ್ರವೇಶದ್ವಾರಗಳನ್ನೂ ಸಹ ಹೊಡೆದು ಹಾಕಿತ್ತು ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ?

    ಪಾಕಿಸ್ತಾನಿಗಳು ಸುಲಭವಾಗಿ ತಲೆಬಾಗುವ ಅಥವಾ ಸೋಲನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಯಾವಾಗ ವಾಯುನೆಲೆಯ ಜೊತೆಗೆ ಶಸ್ತ್ರಾಸ್ತ್ರ ಸಂಗ್ರಹಣಾ ಘಟಕದ ಮೇಲೆ ಭಾರತೀಯ ಕ್ಷಿಪಣಿಗಳು ದಾಳಿ ಮಾಡಿದಾಗ ಬೇರೆ ಯಾವುದೇ ಆಯ್ಕೆ ಇರಲಿಲ್ಲ.  ಪಾಕಿಸ್ತಾನ ಕರೆ ಮಾಡಿ ದಾಳಿ ನಿಲ್ಲಿಸಲು ಮನವಿ ಮಾಡಿತು ಎಂದು ತಿಳಿಸಿದರು.

  • ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

    ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

    – ಮಧ್ಯಪ್ರವೇಶ ಮಾಡುವಂತೆ ಬೇಡಿಕೊಂಡ ಪಾಕ್‌
    – ಪಾಕ್‌ ಅ‍ಣ್ವಸ್ತ್ರ ಕಾರ್ಯಕ್ರಮಕ್ಕೆ ಸಹಾಯ ಮಾಡಿದ್ದ ಅಮೆರಿಕ
    – ಎಫ್‌ 16 ಯುದ್ಧ ವಿಮಾನಗಳಿರುವ ವಾಯು ನೆಲೆಯ ಮೇಲೆಯೂ ದಾಳಿ

    ನವದೆಹಲಿ: ಪಾಕಿಸ್ತಾನದ (Pakistan) ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲೆಯೇ ಭಾರತ (India) ಕ್ಷಿಪಣಿ/ಬಾಂಬ್‌ ಹಾಕಿದ್ದರಿಂದ ಅಮೆರಿಕ (USA) ದಿಢೀರ್‌ ಮಧ್ಯಪ್ರವೇಶಿಸಿ ಕದನ ವಿರಾಮ ಮಾತುಕತೆ ನಡೆಸಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಭಾರತ ಮೇ 9 ಮತ್ತು 10ರ ರಾತ್ರಿ ಪಾಕಿಸ್ತಾನದ ಮೇಲೆ ಪ್ರಬಲವಾಗಿ ದಾಳಿ ನಡೆಸಿತ್ತು. ಅದರಲ್ಲೂ ವಾಯುಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಸೇನಾ ನೆಲೆಗಳ ಜೊತೆಯಲ್ಲಿ ಶಸ್ತ್ರಾಸ್ತ್ರ ಇರುವ ಜಾಗದ ಮೇಲೂ ಕ್ಷಿಪಣಿ ಹಾಕಿತ್ತು. ಈ ಪೈಕಿ ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಮತ್ತು ಮಿಲಿಟರಿ ಸಂಗ್ರಹಣಾ ಸ್ಥಳ ಮುಷಫ್ ವಾಯುನೆಲೆ (ಸರ್ಗೋಧಾ) ಬಳಿಯ ಕಿರಾನಾ ಬೆಟ್ಟದ ಮೇಲೆಯೇ ದಾಳಿ ನಡೆಸಿತ್ತು. ಕಿರಾನಾ ಬೆಟ್ಟದ (Kirana Hills)  ಒಳಗಡೆ ಪಾಕ್‌ ಭೂಗತ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹ ಸಂಕೀರ್ಣವನ್ನು ನಿರ್ಮಿಸಿತ್ತು.

     

    ಭಾರತ ಕಿರಾನಾ ಬೆಟ್ಟ ಅಲ್ಲದೇ ನೂರ್ ಖಾನ್ ವಾಯುನೆಲೆಯ ಮೇಲೆಯೂ ದಾಳಿ ನಡೆಸಿತ್ತು. ನೂರ್‌ ಖಾನ್‌ ವಾಯುನೆಲೆಯಲ್ಲಿ ಅಣ್ವಸ್ತ್ರಗಳ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ಇತ್ತು. ಭಾರತ ಈ ವಾಯುನೆಲೆ ಮತ್ತು ಕಿರಾನಾ ಬೆಟ್ಟವನ್ನೇ ಗುರಿಯಾಗಿಸಿ ಮತ್ತಷ್ಟು ಬಾಂಬ್‌, ಕ್ಷಿಪಣಿ ದಾಳಿ ನಡೆಸಿದರೆ ಅಣ್ವಸ್ತ್ರಗಳು ಸ್ಫೋಟಗೊಳ್ಳಬಹುದು ಎಂಬ ಆತಂಕ ಪಾಕ್‌ಗೆ ಎದುರಾಗಿತ್ತು. ಒಂದು ವೇಳೇ ಸ್ಫೋಟಗೊಂಡರೆ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಭಾರೀ ಪರಿಣಾಮ ಬೀರುವ ಸಾಧ್ಯತೆ ಇತ್ತು. ಹೀಗಾಗಿ ಭಯಕ್ಕೆ ಬಿದ್ದ ಪಾಕಿಸ್ತಾನ ಅಮೆರಿಕವನ್ನು ಸಂರ್ಪಕಿಸಿ ಮಧ್ಯಪ್ರವೇಶ ಮಾಡುವಂತೆ ಕೇಳಿಕೊಂಡಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌

     

    ಪಾಕಿಸ್ತಾನ ಅಮೆರಿಕವನ್ನೇ ಸಂಪರ್ಕಿಸಿದ್ದು ಯಾಕೆ ಎನ್ನುವುದಕ್ಕೂ ಕಾರಣ ಇದೆ. ಈ ಅಣ್ವಸ್ತ್ರ ಭೂಗತ ಸಂಗ್ರಹಗಾರ ನಿರ್ಮಾಣದ ಹಿಂದೆ ಅಮೆರಿಕದ ಪಾತ್ರವೂ ಇದೆ. ಅಮೆರಿಕದ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಕಾಪಾಡಿಕೊಳ್ಳುವ ಅತ್ಯಂತ ರಹಸ್ಯ ಕಾರ್ಯಕ್ರಮಕ್ಕಾಗಿ ಸುಮಾರು 100 ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಿತ್ತು. 2008 ರಲ್ಲೇ ನ್ಯೂಯಾರ್ಕ್‌ ಟೈಮ್ಸ್‌ ಈ ಬಗ್ಗೆ ವರದಿ ಮಾಡಿತ್ತು. ಅಷ್ಟೇ ಅಲ್ಲದೇ ಭಯೋತ್ಪಾದಕರು ಇರುವ ಪಾಕಿಸ್ತಾನಕ್ಕೆ ಈ ರೀತಿಯ ನೆರವು ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿತ್ತು.

    ಅಮೆರಿಕದಲ್ಲಿ ಪಾಕಿಸ್ತಾನಿ ಸಿಬ್ಬಂದಿಗೆ ತರಬೇತಿ ನೀಡಲು ಮತ್ತು ಪಾಕಿಸ್ತಾನದಲ್ಲಿ ಪರಮಾಣು ಕೇಂದ್ರದ ನಿರ್ಮಾಣಕ್ಕೆ ಈ ಹಣವನ್ನು ಖರ್ಚು ಮಾಡಲಾಗಿದೆ ಎಂದು ಅಮೆರಿಕದ ಫೆಡರಲ್‌ ಬಜೆಟ್‌ನಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಪಾಕ್‌ನಲ್ಲಿರುವ ಭೂಗತ ಪರಮಾಣು ಕೇಂದ್ರದ ಮೇಲೆ ಬಾಂಬ್‌ ಹಾಕಿದರೆ ಭಾರೀ ಸಮಸ್ಯೆಯಾಗಬಹುದು ಎಂಬುದನ್ನು ಅರಿತ ಅಮೆರಿಕ ಕೂಡಲೇ ಮಧ್ಯಪ್ರವೇಶ ಮಾಡಿ ಭಾರತದ ಜೊತೆ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್‌ ಪ್ರಧಾನಿ

    ಅಮೆರಿಕದ ಅತಂಕಕ್ಕೆ ಮತ್ತೊಂದು ಕಾರಣವೂ ಇತ್ತು. ಅಮೆರಿಕ ಈ ಹಿಂದೆ ಪಾಕಿಸ್ತಾನಕ್ಕೆ ಎಫ್‌ 16 ಯುದ್ಧ ವಿಮಾನಗಳನ್ನು ನೀಡಿತ್ತು. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಈ ವಿಮಾನಗಳನ್ನು ಬಳಕೆ ಮಾಡಬೇಕೆಂದು ಅಮೆರಿಕ ಷರತ್ತು ವಿಧಿಸಿತ್ತು. ಹೀಗಿದ್ದರೂ ಈ ವಿಮಾನಗಳನ್ನು ಪಾಕ್‌ ಭಾರತದ ವಿರುದ್ಧ ಕಾರ್ಯಾಚರಣೆಗೆ ಬಳಕೆ ಮಾಡುತ್ತಿತ್ತು. ಈ ಎಫ್‌ 16 ಯುದ್ಧ ವಿಮಾನಗಳ ಸ್ಕ್ವಾಡ್ರನ್ ಸರ್ಗೋಧಾದಲ್ಲಿ ಇತ್ತು.

    ತನ್ನ ಮೇಲೆ ದಾಳಿ ನಡೆಸುತ್ತಿರುವ ಎಫ್‌-16 ವಿಮಾನಗಳು ಸರ್ಗೋಧಾದಿಂದ ಟೇಕಾಫ್‌ ಅಗುತ್ತಿರುವ ವಿಚಾರ ತಿಳಿದಿದ್ದ ಭಾರತ ಈ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದಾಗಿ ವಾಯುನೆಲೆಗೆ ಭಾರೀ ಪೆಟ್ಟು ಬಿದ್ದಿತ್ತು. ಭಾರತ ಮತ್ತಷ್ಟು ಉಗ್ರವಾಗಿ ದಾಳಿ ಮಾಡಿದರೆ ವಾಯುನೆಲೆಯ ಹಲವು ಎಫ್‌- 16 ವಿಮಾನಗಳು ಧ್ವಂಸವಾಗುವ ಸಾಧ್ಯತೆ ಇತ್ತು. ಈ ಆತಂಕದ ವಿಚಾರವನ್ನು ಪಾಕ್‌ ಅಮೆರಿಕಕ್ಕೆ ತಿಳಿಸಿತ್ತು.

    ಭೂಗತ ಪರಮಾಣು ಕೇಂದ್ರ ನಿರ್ಮಾಣ ಮತ್ತು ಎಫ್‌ – 16 ಯುದ್ಧ ವಿಮಾನ ನೀಡುವಲ್ಲಿ ತನ್ನ ಪಾತ್ರ ಇರುವ ಕಾರಣ ಅಮೆರಿಕ ಕೂಡಲೇ ಮಧ್ಯಪ್ರವೇಶಿಸಿ ಭಾರತದ ಜೊತೆ ಮಾತುಕತೆ ನಡೆಸಿದೆ. ಎರಡು ದೇಶಗಳ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಟ್ರಂಪ್‌ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕದನ ವಿರಾಮ ಘೋಷಣೆಯಾಗಿದೆ ಎಂದು ಪ್ರಕಟಿಸಿದರು.

    ಅಮೆರಿಕ ಮತ್ತು ಪಾಕಿಸ್ತಾನದ ಮಧ್ಯೆ ನಡೆದಿರುವ ರಹಸ್ಯ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾದ ಚರ್ಚೆ ಆರಂಭವಾಗಿದೆ. ರಹಸ್ಯ ಕಾರ್ಯಕ್ರಮ ಆಗಿರುವ ಕಾರಣ ಅಮೆರಿಕದ ಪರಮಾಣು ಅಸ್ತ್ರಗಳು ಪಾಕಿಸ್ತಾನದಲ್ಲಿ ಇರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಪಾಕ್‌ ಅಮೆರಿಕದ ಮುಂದೆ ಹೋಗಿ ಅಂಗಲಾಚಿರಬಹುದು ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

    ಹಾಗೆ ನೋಡಿದರೆ ಟ್ರಂಪ್‌ ಸರ್ಕಾರದ ಜೊತೆ ಈಗಿನ ಪಾಕ್‌ ಸರ್ಕಾರದ ಸಂಬಂಧ ಅಷ್ಟಕಷ್ಟೇ. ಹೀಗಾಗಿ ಸಂಘರ್ಷವನ್ನು ನಿಲ್ಲಿಸಬೇಕಾದರೆ ಪಾಕ್‌ ತನ್ನ ಆಪ್ತ ದೇಶಗಳಾದ ಚೀನಾ ಅಥವಾ ಟರ್ಕಿಯ ಮೊರೆ ಹೋಗಬೇಕಿತ್ತು. ಆದರೆ ನಿರೀಕ್ಷೆ ಮಾಡದ ರೀತಿ ಭಾರತ ನೀಡಿದ ಶಾಕ್‌ನಿಂದ ಪಾಕ್‌ ಈ ಎರಡೂ ದೇಶಗಳನ್ನು ಬಿಟ್ಟು ಅಮೆರಿಕದ ಬಳಿ ಹೋಗಿತ್ತು.

    ಒಂದು ದೇಶದ ಪರಮಾಣು ನೆಲೆಯು ಮೇಲೆ ಅ‍ಣ್ವಸ್ತ್ರ ಹೊಂದಿದ ಮತ್ತೊಂದು ದೇಶ ದಾಳಿ ಮಾಡಿರುವುದು ಇದೇ ಮೊದಲು. ಇಲ್ಲಿಯವರೆಗೆ ಯಾವುದೇ ದೇಶ ಇಷ್ಟೊಂದು ಧೈರ್ಯ ತೋರಿಸಿರಲಿಲ್ಲ ಎಂಬ ಅಭಿಪ್ರಾಯಗಳು ಈಗ ವ್ಯಕ್ತವಾಗುತ್ತಿದೆ.

  • ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ಸಿಯೋಲ್: ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಲು ಯೋಜಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯ ನಡುವೆಯೇ ಭಾನುವಾರ ಮತ್ತೊಂದು ಅಪರಿಚಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.

    ಜಪಾನ್ ಮಾಹಿತಿ ಉಲ್ಲೇಖಿಸಿ, ದಕ್ಷಿಣ ಕೊರಿಯಾ ಅಧಿಕಾರಿಗಳು ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರದ ಕಡೆ ಹಾರಿಸಿದೆ ಎಂದು ತಿಳಿಸಿದ್ದಾರೆ. ಆದರೆ ಕ್ಷಿಪಣಿಯನ್ನು ಎಲ್ಲಿಂದ ಹಾರಿಸಲಾಯಿತು ಹಾಗೂ ಯಾವ ಗುರಿಗೆ ಹಾರಿಸಲಾಯಿತು ಎಂಬ ಬಗ್ಗೆ ತಿಳಿಸಿಲ್ಲ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಉತ್ತರ ಕೊರಿಯಾ ಆರ್ಥಿಕ ನಿರ್ಬಂಧಗಳನ್ನು ಎಸುರಿಸುತ್ತಿದ್ದರೂ ಈ ವರ್ಷ ತನ್ನ ಶಸ್ತ್ರಾಸ್ತ್ರ ನವೀಕರಣ ಯೋಜನೆಗಳನ್ನು ದ್ವಿಗುಣಗೊಳಿಸಿದೆ. ತನ್ನ 7ನೇ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಶೀಘ್ರವೇ ನಡೆಸಲಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯ ಅಧಿಕಾರಿಗಳು ಕಳೆದ 1 ವಾರದಿಂದ ಹೇಳುತ್ತಲೇ ಇದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

    ಕಳೆದ ತಿಂಗಳು 3 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಿಸಿದ್ದು, ಅವುಗಳಲ್ಲಿ ಅತಿದೊಡ್ಡ ಖಂಡಾಂತರ ಕ್ಷಿಪಣಿ ಹ್ವಾಸಾಂಗ್-17 ಕೂಡಾ ಇತ್ತು ಎಂದು ತಿಳಿದುಬಂದಿದೆ.

  • ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

    ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

    ಇಸ್ಲಾಂಬಾದ್: ಕಳ್ಳರಿಗೆ ಅಧಿಕಾರರ ಚುಕ್ಕಾಣಿಯನ್ನು ನೀಡುವುದಕ್ಕಿಂತ ಪರಮಾಣು ಬಾಂಬ್ ಹಾಕುವುದು ಉತ್ತಮ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಹಾಗೂ ನೂತನ ಸರ್ಕಾರದ ಬಗ್ಗೆ ವಿಚಿತ್ರವಾದ ಹೇಳಿಕೆಯನ್ನು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಅಧ್ಯಕ್ಷರು ಕೂಡ ದೇಶವನ್ನು ಲೂಟಿ ಮಾಡುತ್ತಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹವರಿಗೆ ಅಧಿಕಾರ ಹಸ್ತಾಂತರಿಸುವುದಕ್ಕಿಂತ ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕುವುದು ಉತ್ತಮ ಎಂದು ಹೇಳಿದರು.

    ಹಿಂದಿನ ಆಡಳಿತಗಾರರ ಭ್ರಷ್ಟಾಚಾರದ ಕಥೆಗಳನ್ನು ಹೇಳುವ ಪ್ರಬಲ ವ್ಯಕ್ತಿಗಳು ಇತರರ ವಿರುದ್ಧ ಆರೋಪಗಳನ್ನು ಮಾಡುವ ಬದಲಿಗೆ ತಮ್ಮ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಚಿಂತಿಸಬೇಕು ಎಂದ ಅವರು, ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಳ್ಳರು ಪ್ರತಿಯೊಂದು ಸಂಸ್ಥೆ ನ್ಯಾಯಾಂಗ ವ್ಯವಸ್ಥೆಯನ್ನು ನಾಶ ಪಡಿಸುತ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಯೂ ಪ್ರಕರಣದ ತನಿಖೆ ಮಾಡಲಾಗುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದಿ ಅಥವಾ ಯಾವುದೋ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ: TN ರಾಜ್ಯಪಾಲ ಆರ್.ಎನ್.ರವಿ

    Shehbaz Sharif

    ಈ ಹಿಂದೆ ಪ್ರಧಾನಿ ಶೆಹಬಾಜ್ ಷರೀಫ್ ಮಾತನಾಡಿ, ಇಮ್ರಾನ್ ಖಾನ್ ಅವರು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುವ ಮೂಲಕ ಪಾಕಿಸ್ತಾನದ ಜನರ ಮನಸ್ಸಿನಲ್ಲಿ ವಿಷವನ್ನು ಬಿತ್ತುತ್ತಿದ್ದಾರೆ. ಕಳ್ಳರು, ಡಕಾಯಿತರು ಎಂದು ಪದೇ ಪದೇ ಕರೆಯುವ ಮೂಲಕ ರಾಷ್ಟ್ರವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಕೃಷ್ಣಮೃಗ ಬೇಟೆಗಾರರಿಂದ 3 ಪೊಲೀಸರ ಹತ್ಯೆ – 1 ಕೋಟಿ ರೂ. ಪರಿಹಾರ ಫೋಷಿಸಿದ ಸಿಎಂ

  • ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಬೆಂಗಳೂರು: ದುಬಾರಿಯಾಗಿ ಬಲು ಭಾರವಾಗಿದ್ದ ಚಿನ್ನದ ದರ ಈಗ ಕೊಂಚ ಇಳಿಕೆಯಾಗಿ ರಿಲೀಫ್ ಮೂಡಿಸಿದೆ. ಕಳೆದ ಮೂರು ದಿನದಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿದ್ದ ಚಿನ್ನ ಇಂದು ಏಕಾಏಕಿ ಹತ್ತು ಗ್ರಾಂಗೆ 1200 ರೂ ಕುಸಿತ ಕಂಡಿದೆ.

    24 ಕ್ಯಾರೆಟ್ ಚಿನ್ನದ ಹಿಂದಿನ ದರ 31,900 ರೂ. ಆಗಿತ್ತು. ಆದರೆ ಇಂದು 1,270 ರೂ. ಕಡಿಮೆಯಾಗಿ 30,630 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಹಿಂದಿನ ದರ 28,750 ರೂ. ಆಗಿತ್ತು. ಆದರೆ ಈಗ 300 ರೂ. ಕಡಿಮೆಯಾಗಿದ್ದು 28,450 ರೂ. ಆಗಿದೆ.

    ಸಪ್ಟೆಂಬರ್ 8 ರಂದು ಒಂದೇ ದಿನ 990 ರೂ. ಏರಿಕೆಯಾಗಿತ್ತು. ಇದರಿಂದಾಗಿ 10 ಗ್ರಾಂ ಚಿನ್ನದ ಬೆಲೆ 31,350 ರೂ.ಗಳಿಗೆ ನೆಗೆದಿತ್ತು. ಈ ಬೆಲೆ ಕಳೆದ ಒಂದು ವರ್ಷಕ್ಕೂ ಮೀರಿದ ಅವಧಿಯಲ್ಲಿ ಚಿನ್ನ ಕಂಡಿರುವ ಗರಿಷ್ಠ ಏರಿಕೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.

    ಇದನ್ನೂ ಓದಿ: 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ದುಸ್ಸಾಹಸದ ಪ್ರದರ್ಶನಕ್ಕೆ ಇಳಿದಿದ್ದು ಮತ್ತು ಅಮೆರಿಕದಲ್ಲಿ ಉದ್ಯೋಗ ಅಂಕಿ ಅಂಶಗಳು ನಿರೀಕ್ಷೆಗಿಂತ ದುರ್ಬಲವಾಗಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಚಿನ್ನದ ದರ ಭಾರೀ ಏರಿಕೆಯಾಗಿತ್ತು.

    ಇದನ್ನೂ ಓದಿ: ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್