Tag: ಪರಪ್ಪನ ಅಗ್ರಹಾರ ಜೈಲು

  • Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    – ಮೋಸ್ಟ್‌ ವಾಂಟೆಡ್‌ಗಳಿರುವ ಹಿಂಡಲಗಾ ಜೈಲಿಗೆ ದರ್ಶನ್‌ ಶಿಫ್ಟ್‌ ಮಾಡಲು ಚಿಂತನೆ
    – ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್‌ಗಳು ದಾಖಲಾಗಿವೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್ ರಿಂದ ದೂರು ನೀಡಲಾಗಿದ್ದು, ಮೂರು ಪ್ರಕರಣಗಳಲ್ಲಿ ಎರಡರಲ್ಲಿ ದರ್ಶನ್ ಎ1 ಆರೋಪಿಯನ್ನಾಗಿಸಲಾಗಿದೆ‌. 3ನೇ ಎಫ್ಐಆರ್ ಜೈಲು ಅಧಿಕಾರಿಗಳ ಮೇಲಾಗಿದ್ದು, ದರ್ಶನ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ.

    ಏನೇನು ಪ್ರಕರಣ – ಯಾರು ಆರೋಪಿ?
    1) ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1- ದರ್ಶನ್
    A2- ನಾಗರಾಜ್
    A3-ವಿಲ್ಸನ್ ಗಾರ್ಡನ್ ನಾಗ
    A4-ಕುಳ್ಳ ಸೀನಾ.

    2) ಮತ್ತೊಂದು ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1-ದರ್ಶನ್
    A2-ಧರ್ಮ
    A3-ಸತ್ಯ

    3)U/S 42, 54 (1(A) Prisons Act & 238, 323 BNS ಅಕ್ಟ್ ಅಡಿ ಎಫ್‌ಐಆರ್‌
    A1-ಸುದರ್ಶನ್ ಕೆ.ಎಸ್.
    A2-ಮುಜೀಬ್
    A3-ಪರಮೇಶ ನಾಯಕ್ ಲಮಾಣಿ
    A4- ಕೆ ಬಿ ರಾಯಮನೆ

    ಸಿಸಿಬಿ ದಾಳಿ; ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆ:
    ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೇಲು ಎಂಬಾತನ ಮೊಬೈಲ್‌ನಿಂದ ದರ್ಶನ್‌ ಜೈಲಿನಲ್ಲಿ ದರ್ಬಾರ್‌ ನಡೆಸುತ್ತಿರೋ ಫೋಟೋ ಸೋರಿಕೆ ಆಗಿತ್ತು, ಧರ್ಮ ಎಂಬಾತ ಮೊಬೈಲ್‌ನಿಂದ ದರ್ಶನ್‌ ವೀಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಸಿಸಿಬಿ ಅಧಿಕಾರಿಗಳ ಕೈಗೆ ಯಾವುದೇ ಮೊಬೈಲ್‌ ಸಿಕ್ಕಿಲ್ಲ ಅಂತ ಅಧಿಕಾರಿಗಳು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಲ್ಲದೇ ಸಿಸಿಬಿ ದಾಳಿ ನಡೆಯುತ್ತೆ ಅಂತ ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆಯಾಗಿತ್ತು ಎಂದೂ ಮೂಲಗಳು ತಿಳಿಸಿವೆ.

    ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ:
    ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ರನ್ನ ಮಂಗಳವಾರ ಅಥವಾ ಬುಧವಾರ ರಾತ್ರಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಜೈಲಾಧಿಕಾರಿಗಳು ಚರ್ಚೆ ಮಾಡ್ತಿದ್ದಾರೆ. ನಟೋರಿಯಸ್ ರೌಡಿ ನಾಗನ ಜೊತೆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆಯಂತೆ. ನೂರು ವರ್ಷಗಳ ಇತಿಹಾಸ ಇರುವ ಈ ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿರೋ ಖೈದಿಗಳು ಇದ್ದಾರೆ. ನಟೋರಿಯಸ್ ರೌಡಿಗಳು, ಸಮಾಜಘಾತಕರು, ದೇಶದ್ರೋಹಿಗಳು, ವಿಕೃತ ಕಾಮಿಗಳು ಇರುವಂತ ಜೈಲಿಗೆ ದರ್ಶನ್ ಅವರನ್ನ ಶಿಫ್ಟ್ ಮಾಡಲಾಗ್ತಿದೆ. ಖುದ್ದು ಸಿಎಂ ಸಿದ್ದಾರಮಯ್ಯ ಅವರೇ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ನೀಡಿದ್ದಾರೆ. ಮೋಸ್ಟ್ ವಾಟೆಂಡ್ ಕ್ರಿಮಿನಲ್ ಇರುವಂಥ ಜೈಲು ಇದಾಗಿದ್ದು, ದರ್ಶನ್ ಗೆ ಶಿಫ್ಟ್ ಮಾಡುವ ಮೂಲಕ, ಈಗಿನಿಂದಲೇ ಶಿಕ್ಷೆ ಕೊಡೋಕೆ ಸಿದ್ಧತೆ ನಡೆದಿದೆ.

    ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ:
    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸಂಜೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿರುವ ಪೊಲೀಸರು ಮಂಗಳವಾರ (ಆ.27) ಕೋರ್ಟ್‌ ಗಮನಕ್ಕೆ ತಂದು ಬಾಡಿವಾರೆಂಟ್ ಗೆ ಪಡೆಯಲು ತಯಾರಿ ನಡೆಸಿದ್ದಾರೆ. ಮಂಗಳವಾರ ಸಂಜೆಯೇ ದರ್ಶನ್‌ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

  • ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ (Darshan) ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಫೋಟೋ ವೈರಲ್‌ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜೈಲಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ (Wilson Garden Naga) ರಾಯಲ್ ಲೈಫ್ ಒಂದೊಂದಾಗಿ ತೆರೆದುಕೊಳ್ತಿದೆ.

    ಬ್ರಾಂಡೆಡ್ ಬಟ್ಟೆ, ಬ್ರ್ಯಾಂಡೆಡ್ ಶೂ, ರುಚಿಯಾದ ಊಟ, ಕೈಯಲ್ಲಿ ಮೊಬೈಲ್, ಐಷಾರಾಮಿ ವೆಸ್ಟರ್ನ್ ಟಾಯ್ಲೆಟ್, ಹೈಟೇಕು ಹಾಸಿಗೆ, ಜಿಮ್ ಉಪಕರಣ, ಹೀಗೆ ಒಂದಾ ಎರಡಾ? ನಾಗನ ಐಷಾರಾಮಿ ಬ್ಯಾರಕ್ ನೋಡಿ ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದರ್ಶನ್‍ಗೆ ಜೈಲಲ್ಲಿ ರಾಜಾತಿಥ್ಯ | ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಪ್ರಲ್ಹಾದ್ ಜೋಶಿ

    ʻದಾಸʼನ ಜೊತೆ ಕುಳಿತು ಹರಟೆ ಹೊಡೆದಿದ್ದ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಧರಿಸಿದ್ದ ಬಾಲ್ಮೈನ್ ಟಿ-ಶರ್ಟ್ (T Shirt) ಬೆಲೆಯೇ 15-20 ಸಾವಿರ ರೂ. ಇದೆ ಎನ್ನಲಾಗಿದೆ. ದುಬೈ ಸೇರಿದಂತೆ ಫಾರಿನ್ ಕಾಸ್ಟ್ಲಿ ಬ್ರ್ಯಾಂಡ್ ಟಿ-ಶರ್ಟ್‌ಗಳನ್ನ ನಾಗ ಧರಿಸ್ತಿದ್ದಾನೆ. ಇದಲ್ಲದೇ ಬ್ಯಾರಕ್‌ನಲ್ಲಿ ಐದಾರು ಜೊತೆ ಬ್ರ್ಯಾಂಡೆಡ್ ಶೂ, ಕೆಜಿಗಟ್ಟಲೆ ಡ್ರೈಫ್ರೂಟ್ಸ್, ಫ್ರೂಟ್ಸ್ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಟಾರ್ಚ್ ಹಾಕಿ ತಡಕಾಡೋದು ಸಿಎಂಗೆ ಶೋಭೆಯಲ್ಲ – ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಿ: ಹೆಚ್‌ಡಿಕೆ ಎಚ್ಚರಿಕೆ

    ಇನ್ನೂ ನಾಗನ ಬ್ಯಾರಕ್‌ನಿಂದ ದಾಸನಿಗೆ ಊಟ ಹೋಗ್ತಿರೊ ಆರೋಪದ ನಡುವೆಯೇ ಫೋಟೊ ವೈರಲ್ ಆಗಿದೆ. ಇಷ್ಟಾದ್ರು ಖತರ್ನಾಕ್ ರೌಡಿಗಳನ್ನ ಶಿಫ್ಟಿಂಗ್ ಮಾಡ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಪೊಲೀಸ್‌ ಆಯುಕ್ತ ದಯಾನಂದ್ ಪತ್ರ ಕೂಡ ಬರೆದಿದ್ದರು. ಜೈಲಲ್ಲಿದ್ದಕೊಂಡೇ ಲಿಟಿಗೇಷನ್ ಪ್ರಾಪರ್ಟಿ ಸೇರಿದಂತೆ ಬೆದರಿಕೆ ಕಾಲ್ ಮಾಡ್ತಿರುವ ರೌಡಿಶೀಟರ್‌ಗಳ ವಿರುದ್ಧ ಕ್ರಮ ಆಗ್ತಿಲ್ಲ ಅನ್ನೋದಂತು ಸತ್ಯ. ಇದನ್ನೂ ಓದಿ: ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ

  • 13 ವರ್ಷಗಳ ನಂತರ ‘ದಾಸ’ ಮತ್ತೆ ಜೈಲುಪಾಲು!

    13 ವರ್ಷಗಳ ನಂತರ ‘ದಾಸ’ ಮತ್ತೆ ಜೈಲುಪಾಲು!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ (Renukaswamy Kidnap & Murder Case) ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪರಪ್ಪನ ಅಗ್ರಹಾರ ಸೇರಿದ್ದಾರೆ. ನಟ ದರ್ಶನ್ ಜೈಲು ಸೇರುವುದು ಇದೇ ಮೊದಲಲ್ಲ ಈ ಹಿಂದೆಯೂ ಒಂದು ಬಾರಿ ಜೈಲೂಟ ತಿಂದು ಬಂದವರಾಗಿದ್ದಾರೆ.

    ಹೌದು. ಪತ್ನಿ ವಿಜಯಲಕ್ಷ್ಮಿ (Vijayalakshmi) ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಆರೋಪದಲ್ಲಿ 2011 ಸೆಪ್ಟೆಂಬರ್ 9 ರಂದು ದರ್ಶನ್ ಬಂಧಿತರಾಗಿದ್ದರು. ಈ ಪ್ರಕರಣದಲ್ಲಿ ಅಂದು ವಿಜಯನಗರ ಪೊಲೀಸರು ದರ್ಶನ್ (Challening Star Darshan) ಅವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಸುಮಾರು ತಿಂಗಳ ಕಾಲ ಜೈಲುವಾಸ ಅನುಭವಿಸಿ 2011 ಅಕ್ಟೋಬರ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

    ಈಗ ಬರೋಬ್ಬರಿ 13 ವರ್ಷಗಳ ನಂತರ ಮತ್ತೆ ದರ್ಶನ್ ಸೆರೆಮನೆಗೆ ತೆರಳಿದ್ದಾರೆ. ಈ ಬಾರಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಮೂಲಕ ನಟ ದರ್ಶನ್ ತಮ್ಮ ಜೀವನದಲ್ಲಿ ಎರಡನೇ ಬಾರಿಗೆ ಜೈಲುವಾಸ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಜು. 4 ರವರೆಗೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ಜೈಲು

    ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮಾತ್ರವಲ್ಲದೇ ಸ್ನೇಹಿತೆ ಪವಿತ್ರಾ ಗೌಡ ಕೂಡ ಜೈಲುಪಾಲಾಗಿದ್ದಾರೆ. ದರ್ಶನ್ ಸೇರಿ ಸುಮಾರು 16 ಮಂದಿಯನ್ನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಬಳಿಕ ಮೂರು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಇಂದು ದರ್ಶನ್ ಸಹಿತ ನಾಲ್ವರು ಆರೋಪಿಗಳನ್ನು 24ನೇ ಎಸಿಎಂಎಂ ಕೋರ್ಟ್‍ಗೆ ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ದರ್ಶನ್ ಸೇರಿ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಇಂದು ಜೈಲಿನಿಂದ ರಿಲೀಸ್‌ ಆಗಲಿದ್ದಾರೆ ರೇವಣ್ಣ

    ಇಂದು ಜೈಲಿನಿಂದ ರಿಲೀಸ್‌ ಆಗಲಿದ್ದಾರೆ ರೇವಣ್ಣ

    ಬೆಂಗಳೂರು: ಕೆ.ಆರ್.ನಗರ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್‍ಡಿ ರೇವಣ್ಣಗೆ (HD Revanna) ಕಡೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಇಂದು ಬಿಡುಗಡೆಯಾಗಲಿದ್ದಾರೆ.

    ನಿನ್ನೆ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜೆ 6:30ಕ್ಕೆ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂಜೆಯಾದ ಕಾರಣ ಕೋರ್ಟ್ ಸಮಯ ಮುಗಿದಿದ್ದರಿಂದ ಷರತ್ತು ಪೂರೈಸಲು ಸಾಧ್ಯವಾಗಿರಲಿಲ್ಲ. ಮೊದಲಿಗೆ ಜನಪ್ರತಿನಿಧಿಗಳ ಕೋರ್ಟ್‍ನಲ್ಲಿ ಜಾಮೀನು ಪ್ರತಿ ಪಡೆಯಬೇಕು. ಆ ಬಳಿಕ ಸಿಸಿಎಚ್ 42ರಲ್ಲಿ ಷರತ್ತುಗಳ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಷರತ್ತು ಪೂರೈಸಲು ರೇವಣ್ಣ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.

    5 ಲಕ್ಷದ ಬಾಂಡ್, ಇಬ್ಬರು ವೈಯಕ್ತಿಕ ಶ್ಯೂರಿಟಿ ನೀಡಬೇಕು. 5 ಲಕ್ಷದ ಬಾಂಡ್‍ಗೆ ಸಹಿ ಮಾಡಿಸಿ ವಕೀಲರು ಕೋರ್ಟ್‍ಗೆ ತಲುಪಿಸಲಿದ್ದಾರೆ. ಎಸಿಎಂಎಂ ಕೋರ್ಟ್ 42ರಲ್ಲಿ ಈ ಎಲ್ಲಾ ಜಾಮೀನಿನ ಷರತ್ತು ಪೂರೈಸಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ರೇವಣ್ಣ ಜೈಲಿಂದ ಬಿಡುಗಡೆಯಾಗಲಿದ್ದಾರೆ. ಇದನ್ನೂ ಓದಿ: ಮಂಗಳವಾರ ರೇವಣ್ಣ ಬಿಡುಗಡೆ – ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹೇಗಿತ್ತು? ಜಾಮೀನು ಷರತ್ತು ಏನು?

  • ವಿವಾಹಿತೆಯೊಂದಿಗೆ ಪ್ರೇಮ; ಮದುವೆ ಬೇಡವೆಂದು ಹಲ್ಲೆ ನಡೆಸಿದ ಪ್ರೇಮಿ ಜೈಲು ಪಾಲು – ಮುಂದೇನಾಯ್ತು?

    ವಿವಾಹಿತೆಯೊಂದಿಗೆ ಪ್ರೇಮ; ಮದುವೆ ಬೇಡವೆಂದು ಹಲ್ಲೆ ನಡೆಸಿದ ಪ್ರೇಮಿ ಜೈಲು ಪಾಲು – ಮುಂದೇನಾಯ್ತು?

    – ಜೈಲಿಂದಲೇ ಮಹಿಳೆಗೆ ಕೊಲೆ ಬೆದರಿಕೆ ಕರೆ

    ಬೆಂಗಳೂರು: ಇದು ಸಿನಿಮಾ ಶೈಲಿಯಂತೆ ಒನ್‌ ವೇ ಲವ್‌ ಸ್ಟೋರಿ (Love Storty). ಆದ್ರೆ ಕಥೆಯಲ್ಲಿ ಪ್ರೇಮಿಯೇ ವಿಲನ್‌ ಆಗಿದ್ದಾನೆ. ಜೈಲಿನಿಂದಲೇ ಪ್ರಿಯತಮೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಮತ್ತೆ ಅಕ್ರಮಗಳ ಅಡ್ಡೆಯಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.

    ಇದು ಒಂಥರಾ ಒನ್‌ವೇ ಲವ್‌ಸ್ಟೋರಿ ಪತಿಯಿಂದ ದೂರವಾಗಿದ್ದ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿ, ಪ್ರೀತಿ ಮಾಡುವಂತೆ ಆಕೆಯನ್ನ ಕಾಡತೊಡಗಿಸಿದ್ದ. ಶ್ರೀನಿವಾಸ ಎಂಬಾತ ಮಹಿಳೆಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡತೊಡಗಿದ್ದ. ಪ್ರೀತಿಸದೇ ಇದ್ರೆ ಆ್ಯಸಿಡ್‌ ಹಾಕ್ತೀನಿ ಅಂತಾನೂ ಬೆದರಿಕೆ ಹಾಕಿದ್ದನಂತೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ, ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿಗೆ ಸಮ್ಮತಿಸಿದ್ದಳು. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದಾರೆ. ಆದ್ರೆ ಮಹಿಳೆ ಮದುವೆ (Marriage) ವಿಚಾರ ತೆಗೆದಿದ್ದೇ ತಡ ಶ್ರೀನಿವಾಸ ಉಲ್ಟಾ ಹೊಡೆದಿದ್ದಾನೆ. ನಿನ್ನನ್ನ ಮದುವೆ ಆಗಲ್ಲ ಜೊತೆಯಲ್ಲೇ ಇರು ಸಾಕು ಅಂದಿದ್ದನಂತೆ. ಇದರೊಂದಿಗೆ ಶ್ರೀನಿವಾಸ ಮತ್ತು ಆತನ ತಾಯಿ ಸೇರ್ಕೊಂಡು ಮಹಿಳೆ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇದರಿಂದ ನೊಂದ ಮಹಿಳೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಶ್ರೀನಿವಾಸನನ್ನ ಜೈಲಿಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಇತ್ತ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶ್ರೀನಿವಾಸ ಜೈಲಿನಲ್ಲಿದ್ದುಕೊಂಡೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ಮತ್ತೊಂದು ಆರೋಪ ಮಾಡಿದ್ದಾರೆ. ಶ್ರೀನಿವಾಸ ಜೈಲಿನಿಂದಲೇ ವಾಟ್ಸಪ್ ಕರೆ ಮಾಡಿ ತನ್ನನ್ನ ನೋಡಲು ಜೈಲಿಗೆ ಬರಬೇಕು ಅಂತಾ ಧಮ್ಕಿ ಹಾಕಿದ್ದನಂತೆ. ನನ್ನನ್ನ ಜೈಲಿಗೆ ಹಾಕಿಸಿದ್ದೀಯಾ ಅಲ್ವಾ, ನೀನು ಜೈಲಿಗೆ ಬಾ ನನ್ನೊಟ್ಟಿಗೆ ಇರು, ಇಲ್ಲದಿದ್ದರೆ ಹೊರಗೆ ಬಂದು ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿದ್ದಾಳೆ.

    ಇದೀಗ ಮತ್ತೆ ಆರೋಪಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಇದರಿಂದ ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಆರಾಮಾಗಿ ಸಿಗ್ತಿದೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಿಂತಾಗಿದೆ .

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಶಿಕಲಾಗೆ ವಿಶೇಷ ಸವಲತ್ತು ಕೊಡಿ ಅಂತ ಹೇಳಿಲ್ಲ – ಸತ್ಯನಾರಾಯಣರಾವ್ ಆರೋಪಕ್ಕೆ ಸಿಎಂ ಸ್ಪಷ್ಟನೆ

    ಶಶಿಕಲಾಗೆ ವಿಶೇಷ ಸವಲತ್ತು ಕೊಡಿ ಅಂತ ಹೇಳಿಲ್ಲ – ಸತ್ಯನಾರಾಯಣರಾವ್ ಆರೋಪಕ್ಕೆ ಸಿಎಂ ಸ್ಪಷ್ಟನೆ

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿಯಾಗಿರೋ ಶಶಿಕಲಾ ನಟರಾಜನ್‍ಗೆ ವಿಶೇಷ ಸೌಲಭ್ಯ ನೀಡುವಂತೆ ನಾನು ಹೇಳಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

    ಶಶಿಕಲಾ ಕಡೆಯವರು ನನ್ನನ್ನು ಬಂದು ಭೇಟಿ ಆಗಿದ್ರು. ಚಾಪೆ, ದಿಂಬು ಕೊಡ್ತಿಲ್ಲ ಅಂತ ಹೇಳಿದ್ರು. ಆಗ ನಾನೇ ಜೈಲು ನಿಯಮ ಪ್ರಕಾರ ಏನು ಸವಲತ್ತು ಕೊಡ್ಬಹುದೋ ಅದನ್ನು ಕೊಡಿ ಅಂತ ಕಾರಾಗೃಹ ಡಿಜಿಪಿ ಆಗಿದ್ದ ಸತ್ಯನಾರಾಯಣರಾವ್‍ಗೆ ಸೂಚಿಸಿದ್ದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಶಶಿಕಲಾ ರಾಜಾತಿಥ್ಯಕ್ಕೆ ಆದೇಶ ಕೊಟ್ಟಿದ್ದೇ ಸಿಎಂ- ಸತ್ಯನಾರಾಯಣ ರಾವ್ ಆರೋಪ

    ಮುಖ್ಯಮಂತ್ರಿಯವರು ಖುದ್ದು ನನ್ನನ್ನು ಕರೆದು ಶಶಿಕಲಾಗೆ ಜೈಲಲ್ಲಿ ಹಾಸಿಗೆ, ದಿಂಬು ಕೊಡುವಂತೆ ಸೂಚಿಸಿದ್ದರು. ಆದ್ರೆ ಇಂತಹ ಐಷಾರಾಮಿ ಸೌಲಭ್ಯ ನೀಡಲು ನನಗೆ ಅಧಿಕಾರವಿಲ್ಲವೆಂದರೂ ಸಿದ್ದರಾಮಯ್ಯ ಅವರು ಬಿಡಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ಆದೇಶದಂತೆ ನಾನು ಐಷಾರಾಮಿ ಸೌಲಭ್ಯ ನೀಡಿದ್ದೇನೆ. ಇದರಲ್ಲಿ ನನ್ನ ತಪ್ಪೇನಿಲ್ಲ ಅಂತ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಸಮಿತಿ ಎದುರು ಸತ್ಯನಾರಾಯಣ ರಾವ್ ಹೇಳಿದ್ದರು. ಅಲ್ಲದೇ ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಸತ್ಯನಾರಾಯಣ ರಾವ್ ಮಂಗಳವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

    ಜೈಲಿನಲ್ಲಿ ಶಶಿಕಲಾಗೆ ರಾಜಮರ್ಯಾದೆ ಕೊಡುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಆಗಿನ ಡಿಐಜಿಯಾಗಿದ್ದ ರೂಪಾ ಅವರು ವರದಿ ಕೊಟ್ಟಿದ್ದರು. ಆ ಬಳಿಕ ರಾಜಮರ್ಯಾದೆ ಕೊಡುತ್ತಿರೋ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಆ ವರದಿಯ ತನಿಖೆಗೆ ಸರ್ಕಾರ ಕೂಡ ಆದೇಶ ಮಾಡಿತ್ತು.