Tag: ಪರಪ್ಪನ ಅಗ್ರಹಾರ ಜೈಲು

  • ಕೈದಿಗಾಗಿ ಒಳಉಡುಪಿನಲ್ಲಿ ಮೊಬೈಲ್‌ ಸಾಗಿಸ್ತಿದ್ದ ಪರಪ್ಪನ ಅಗ್ರಹಾರ ಜೈಲು ವೀಕ್ಷಕ ಅರೆಸ್ಟ್!

    ಕೈದಿಗಾಗಿ ಒಳಉಡುಪಿನಲ್ಲಿ ಮೊಬೈಲ್‌ ಸಾಗಿಸ್ತಿದ್ದ ಪರಪ್ಪನ ಅಗ್ರಹಾರ ಜೈಲು ವೀಕ್ಷಕ ಅರೆಸ್ಟ್!

    – ಕೊಲೆ ಪ್ರಕರಣದ ಕೈದಿಯಿಂದ 10,000 ರೂ. ಮುಂಗಡ ಹಣ ಪಡೆದಿದ್ದ ಸಿಬ್ಬಂದಿ

    ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿ ಸುದ್ದಿಯಾಗಿದ್ದ ಪರಪ್ಪನ್ನ ಅಗ್ರಹಾರ ಜೈಲು ಈಗ ಮತ್ತೊಂದು ಪ್ರಕರಣಕ್ಕೆ ಸುದ್ದಿಯಾಗಿದೆ. ಜೈಲಿನಲ್ಲಿ 20 ಸಾವಿರ ರೂ.ಗೆ ಮೊಬೈಲ್‌ ಮಾರಾಟ ಮಾಡಲು ಹೋಗಿ ಜೈಲು ಸಿಬ್ಬಂದಿಯೇ ಸಿಕ್ಕಿಬಿದ್ದ ಘಟನೆ ನಡೆದಿದೆ.

    ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಜೈಲು ವೀಕ್ಷಕ (ವಾರ್ಡನ್) ‌ಅಮರ್ ಪ್ರಾಂಜೆ (29) ನನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್‌ ಮಾರಾಟ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ ಆರೋಪಿ. ಈ ಪ್ರಕರಣದಿಂದ ಕಾರಾಗೃಹದಲ್ಲಿ ಅಕ್ರಮಗಳಿಗೆ ಜೈಲು ಸಿಬ್ಬಂದಿಗಳೇ ಸಾಥ್‌ ನೀಡ್ತಿದ್ದಾರೆ ಅನ್ನೋದು ಮತ್ತೊಮ್ಮೆ ಬಟಾಬಯಲಾಗಿದೆ. ಇದನ್ನೂ ಓದಿ: ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ

    ಒಳಉಡುಪಿನಲ್ಲಿ ಫೋನ್‌, ಇರಯ್‌ ಫೋನ್‌
    ಅಮರ್‌ ಇದೇ ಅಕ್ಟೋಬರ್‌ 23ರಂದು ಕರ್ತವ್ಯಕ್ಕೆ ಆಗಮಿಸಿದ್ದ. ಈ ವೇಳೆ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್ (KSISF) ಸಿಬ್ಬಂದಿ ತಪಾಸಣೆಗೆ ಒಳಪಡಿಸಲು ಮುಂದಾಗಿದ್ರು. ಆದ್ರೆ ಅಮೆರ್‌ ತಪಾಸಣೆಗೆ ನಿರಾಕರಿಸಿ ವಾಪಸ್‌ ಹೋಗಲು ಮುಂದಾದರು. ಇದರಿಂದ ಅನುಮಾನಗೊಂಡ ಸಿಬ್ಬಂದಿ ಅವರನ್ನ ಹಿಡಿದು ತಪಾಸಣೆ ನಡೆಸಿದಾಗ ಒಳುಡುಪಿನಲ್ಲಿ ಒಂದು ಸ್ಮಾರ್ಟ್‌ಫೋನ್‌, ಇಯರ್‌ ಫೋನ್‌ ಪತ್ತೆಯಾಗಿದೆ. ಇದನ್ನೂ ಓದಿ: ದತ್ತಪೀಠದ ಗೋರಿಗಳು ನಕಲಿ – ಹಿಂದೂಪರ ಸಂಘಟನೆಗಳ ಆರೋಪ

    ತಕ್ಷಣ ಜೈಲಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಮರ್ ಪ್ರಾಂಜೆಯನ್ನ ಬಂಧಿಸಿದ್ದಾರೆ. ಮೊಬೈಲ್ ಸಮೇತ ಪೊಲೀಸರು ಬಂಧಿಸಿದ್ದಾರೆ. ಜೈಲು ಅಧೀಕ್ಷಕ ಹೆಚ್.ಎ ಪರಮೇಶ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜೈಲು ಕಾಯಿದೆ ಅನ್ವಯ ಜೈಲಿನ ಒಳಗೆ ಮೊಬೈಲ್ ಬಳಕೆ ನಿಷೇಧ ಇದೆ. ಅಮರ್ ವಿಚಾರಣೆ ವೇಳೆ ಜೈಲಿನಲ್ಲಿರುವ ಕೊಲೆ ಪ್ರಕರಣದ ಕೈದಿಯೊಬ್ಬರಿಂದ 20 ಸಾವಿರ ರೂ.ಗಳನ್ನ ಪಡೆದು ಹೊರಗಡೆಯಿಂದ ಮೊಬೈಲ್ ತಂದು ಕೊಡಲು ಮುಂದಾಗಿದ್ದೆ. ಅದರಂತೆ 10 ಸಾವಿರ ರೂ. ಮುಂಗಡ ಹಣ ಪಡೆದು ಮೊಬೈಲ್ ತಂದು ಒಳಗಡೆ ತಲುಪಿಸಲು ಪ್ರಯತ್ನಿಸಿದ್ದೆ ಎಂದು ಆರೋಪಿ ಅಮರ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ತೀವ್ರ ಕಳಪೆ ಮಟ್ಟಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ – ಅ.29, 30ರಂದು ಕೃತಕ ಮಳೆ ಸಾಧ್ಯತೆ

    ಮೊಬೈಲ್ ಖರೀದಿಗೆ ಹಣ ಕೊಟ್ಟಿದ್ದ ಕೈದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ತಿರ್ಮಾನಿಸಿದ್ದಾರೆ. ಅಮರ್ ಪ್ರಾಂಜೆ 2019ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವೀಕ್ಷಕನಾಗಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದರು. ಇದನ್ನೂ ಓದಿ: ವೈದ್ಯೆ ಆತ್ಮಹತ್ಯೆ ಕೇಸ್‌ – ರೇಪ್‌ ಆರೋಪಿ ಇನ್ಸ್‌ಪೆಕ್ಟರ್‌ ಪೊಲೀಸರಿಗೆ ಶರಣು

  • ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    – ದರ್ಶನ್‌ಗೆ ಕಾಲಿನಲ್ಲಿ ಫಂಗಸ್ ಆಗಿಲ್ಲ, ಚರ್ಮ ಒಡೆದಿದೆ ಅಷ್ಟೇ
    – ಎಲ್ಲಾ ಖೈದಿಗಳಿಗೆ ಟಿವಿ ಕೊಡೋಕಾಗಲ್ಲ; ಸೊಳ್ಳೆಬತ್ತಿ, ಬಾಚಣಿಗೆಯೂ ಕೊಡುವಂತಿಲ್ಲ

    ಬೆಂಗಳೂರು: ಹಾಸಿಗೆ, ದಿಂಬು ಸೇರಿದಂತೆ ಜೈಲಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕೇಳಿಕೊಂಡಿದ್ದ ಕೊಲೆ ಆರೋಪಿ, ನಟ ದರ್ಶನ್‌ಗೆ ಕಾನೂನು ಸೇವಾ ಪ್ರಾಧಿಕಾರದ (Legal Services Authority) ವರದಿ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಿದೆ. ದರ್ಶನ್‌ಗೆ ಬಿಸಿಲು ಹೊರತುಪಡಿಸಿದ್ರೆ ಜೈಲು ಮ್ಯಾನ್ಯುವಲ್‌ ಪ್ರಕಾರ, ಉಳಿದೆಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ದರ್ಶನ್‌ (Darshan) ಫಂಗಸ್‌ ನಾಟಕಕ್ಕೂ ವರದಿಯಲ್ಲಿ ಉತ್ತರ ಕೊಡಲಾಗಿದೆ.

    ಪ್ರಾಧಿಕಾರದ ವರದಿಯಲ್ಲಿ ಏನಿದೆ…? ದರ್ಶನ್‌ಗೆ ಏನು ಸೌಲಭ್ಯ ಸಿಕ್ಕಿದೆ…?
    ದರ್ಶನ್ ಇರುವ ಬ್ಯಾರಕ್‌ನಲ್ಲಿ 1 ಇಂಡಿಯನ್‌ ಟಾಯ್ಲೆಟ್‌, 2 ವೆಸ್ಟ್ರನ್ ಟಾಯ್ಲೆಟ್ ಇದೆ. ದರ್ಶನ್ 2 ಬಾತ್ ರೂಂಗಳು (ಸ್ನಾನಗೃಹ) ಇವೆ. ದರ್ಶನ್ ಬ್ಯಾರಕ್‌ನಲ್ಲಿ ಸಿಬ್ಬಂದಿಯ ಬಾಡಿ ಓರ್ನ್ ಕ್ಯಾಮೆರಾ ಕೂಡ ಪರಿಶೀಲಿಸಲಾಗಿದೆ. ದರ್ಶನ್ ಇರುವ ಬ್ಯಾರಕ್‌ನಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಇದೆ ಎಂದು ಹೇಳಿದೆ.

    ಇನ್ನೂ ಇಡೀ ರಾತ್ರಿ ಲೈಟ್ ಇರೋದ್ರಿಂದ ನಿದ್ರೆಗೆ ಸಮಸ್ಯೆಯಾಗ್ತಿದೆ. ಸಂಜೆ 6 ಗಂಟೆಗೆ ಲೈಟ್ ಹಾಕೋದ್ರಿಂದ ನಿದ್ರೆ ಮಾಡೋದಕ್ಕೆ ಆಗ್ತಿಲ್ಲ ಅನ್ನೋದು ದರ್ಶನ್‌ ಆರೋಪ. ಆದ್ರೆ ಕೈದಿಗಳ (Prisoners) ಭದ್ರತೆಯ ಕಾರಣಕ್ಕೆ ಇಡೀ ರಾತ್ರಿ ಲೈಟ್ ಹಾಕಲಾಗುತ್ತೆ.

    ದರ್ಶನ್‌ ದಿಂಬು ಹಾಸಿಗೆ ಕೇಳಿದ್ದಾರೆ. ಶಿಕ್ಷಿತ ಅಪರಾಧಿಗಳಿಗೆ (ಸಜಾ ಖೈದಿ) ಮಾತ್ರ ಹಾಸಿಗೆ, ದಿಂಬು ಹೊದಿಕೆ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡಲು ಜೈಲ್‌ ಮ್ಯಾನುವಲ್‌ನಲ್ಲಿ ಅವಕಾಶ ಇಲ್ಲ. ಅಲ್ಲದೇ ದರ್ಶನ್ ಸೆಲೆಬ್ರಿಟಿ ಆಗಿರೋದ್ರಿಂದ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡುವಾಗ ಇತರೆ ಕೈದಿಗಳು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಂದ ದರ್ಶನ್ ಫೋಟೋ ತೆಗೆಯುವ ಸಾಧ್ಯತೆ ಇದೆ. ಆದ್ದರಿಂದ ಜೈಲು ಮ್ಯಾನುವಲ್ ಪ್ರಕಾರ 1 ಗಂಟೆಗೆ ವಾಕಿಂಗ್‌ಗೆ, ಆಟಕ್ಕೆ ಅವಕಾಶ ಕೊಡಲಾಗಿದೆ. ಎಲ್ಲ ಸೌಲಭ್ಯಗಳನ್ನ ನೀಡಲಾಗಿದೆ. ಅಗತ್ಯಬಿದ್ದರೆ ಜೈಲಿನಲ್ಲಿ ಶಿಸ್ತುಪಾಲನೆ, ನಿರ್ವಹಣೆಗಾಗಿ ವಾಕಿಂಗ್/ಆಟಕ್ಕೂ ನಿರ್ಬಂಧ ಏರಬಹುದು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಟಿವಿ, ಕನ್ನಡಿ, ಬಾಚಣಿಗೆ ಕೊಡೋಕಾಗಲ್ಲ
    ದರ್ಶನ್ ಟಿವಿ ಕೇಳಿದ್ದಾನೆ, ಆದ್ರೆ ಎಲ್ಲಾ ಖೈದಿಗಳಿಗೂ ಟಿವಿ ನೀಡಲು ಅವಕಾಶ ಇಲ್ಲ. ಎಲ್ಲಾ ಬ್ಯಾರಕ್ ಅಲ್ಲಿ ಕೂಡ ಟಿವಿ ಸೌಲಭ್ಯ ಮಾಡಲು ಸಾಧ್ಯವಿಲ್ಲ. ಫೋನ್‌ನಲ್ಲಿ ಮಾತಾಡುವಾಗ ಸ್ಪೀಕರ್ ಆನ್ ಮಾಡ್ತಾರೆ ಎಂಬ ಆರೋಪವನ್ನು ದರ್ಶನ್‌ ಮಾಡಿದ್ದಾರೆ. ಆರೋಪಿಗಳ ಸುರಕ್ಷತೆ ದೃಷ್ಟಿಯಿಂದ ಸ್ಪೀಕರ್ ಆನ್ ಮಾಡುವುದು ನಿಯಮ. ಏಕೆಂದ್ರೆ ಖೈದಿಗಳಿಗೆ ಹೇಳಿ ಫೋನ್‌ಕಾಲ್‌ ರೆಕಾರ್ಡ್ ಮಾಡುವ ಅವಕಾಶ ಇದೆ.

    ಫಂಗಸ್‌ ನಾಟಕಕ್ಕೂ ಉತ್ತರ
    ಇನ್ನೂ ದರ್ಶನ್‌ ಕಾಲಿನಲ್ಲಿ ಫಂಗಸ್‌ ಬಂದಿದೆ ಅಂತ ದರ್ಶನ್‌ ಆರೋಪ ಮಾಡಿದ್ದಾರೆ. ಆದ್ರೆ ಅದು ಫಂಗಸ್ ಅಲ್ಲ, ಚರ್ಮ ಒಡೆದಿರೋದು (ಕಾಲಿನಲ್ಲಿ ಆಗಿರೋ ಬಿರುಕು) ಅಷ್ಟೇ. ಚರ್ಮರೋಗ ತಜ್ಞೆ ಡಾ.ಜ್ಯೋತಿ ಬಾಯ್ ಅವರಿಂದ ದರ್ಶನ್‌ಗೆ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಜೈಲಿನ ವೈದ್ಯರಿಂದ ಫಿಸಿಯೋ ತೆರಪಿ ಕೂಡ ಮಾಡಿಸಲಾಗಿದೆ. ಸೊಳ್ಳೆಬತ್ತಿ, ಕನ್ನಡಿ ಮತ್ತು ಬಾಚಣಿಗೆ ನೀಡಿಲ್ಲ ಎಂಬುದು ದರ್ಶನ್‌ ಆರೋಪ, ಶಿಕ್ಷಿತ ಅಪರಾಧಿಗೆ ಮಾತ್ರ ಇದೆಲ್ಲ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಖೈದಿಗಳಿಗೆ ನೀಡಲು ಅವಕಾಶ ಇಲ್ಲ. ಅಲ್ಲದೇ ಕನ್ನಡಿ ಬಾಚಣಿಗೆ ನೀಡಿದ್ರೆ ಅನಾಹುತ ಆಗುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚುವರಿ ಸೌಲಭ್ಯ ನೀಡೋಕಾಗೋದಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ದರ್ಶನ್‌ಗೆ ದಿಂಬು, ಹಾಸಿಗೆ – ಪರಪ್ಪನ ಅಗ್ರಹಾರಕ್ಕಿಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯರ ಭೇಟಿ

    ದರ್ಶನ್‌ಗೆ ದಿಂಬು, ಹಾಸಿಗೆ – ಪರಪ್ಪನ ಅಗ್ರಹಾರಕ್ಕಿಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯರ ಭೇಟಿ

    ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗಿದೆಯೇ ಅಂತ ಪರಿಶೀಲಿಸುವಂತೆ ಕೋರ್ಟ್ ಸೂಚನೆ ಹಿನ್ನೆಲೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಸದಸ್ಯರು ಇಂದು ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಭೇಟಿ ನೀಡಲಿದ್ದಾರೆ.

    ಎರಡನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲು ನರಕವಾಗಿದೆ. ಜೈಲಿನಲ್ಲಿ ಅಧಿಕಾರಿಗಳು ಅಗತ್ಯ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ದರ್ಶನ್ ಅರ್ಜಿ ಪುರಸ್ಕರಿಸಿದ ಕೋರ್ಟ್ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಿಗೆ ಜೈಲಿಗೆ ಭೇಟಿ ಪರಿಶೀಲಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

    ಕೋರ್ಟ್ ಸೂಚನೆ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ ದರ್ಶನ್ ಇರುವ ಕ್ವಾರೆಂಟೈನ್ ಸೆಲ್‌ನ ಪರಿಶೀಲನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ತಲೆ ದಿಂಬು, ಹಾಸಿಗೆ ನೀಡಲಾಗಿದ್ಯಾ? ಜೈಲಿನ ಮ್ಯಾನ್ಯುವಲ್ ಅಡಿ ನೀಡಲಾಗಿರುವ ವಸ್ತುಗಳು ಯವ್ಯಾವು? ಹೀಗೆ ಅಧಿಕಾರಿಗಳು ಎಲ್ಲದರ ವರದಿ ಪಡೆಯಲಿದ್ದಾರೆ.

    ಆ ಬಳಿಕ ಕಾನೂನು ಸೇವಾ ಅಧಿಕಾರಿಯು ದರ್ಶನ್ ಹೇಳಿಕೆ ಪಡೆಯಲಿದ್ದಾರೆ. ಈ ವರದಿಯನ್ನು ಅ.18ರ ಒಳಗೆ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ವರದಿ ಸಿದ್ಧಪಡಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.

  • ಪರಪ್ಪನ ಅಗ್ರಹಾರ ಜೈಲಲ್ಲೇ ರೌಡಿಶೀಟರ್ ಭರ್ಜರಿ ಬರ್ತ್ಡೇ ಪಾರ್ಟಿ

    ಪರಪ್ಪನ ಅಗ್ರಹಾರ ಜೈಲಲ್ಲೇ ರೌಡಿಶೀಟರ್ ಭರ್ಜರಿ ಬರ್ತ್ಡೇ ಪಾರ್ಟಿ

    – ಸೇಬಿನ ಹಾರ ಹಾಕ್ಕೊಂಡು ಕೇಕ್ ಕಟ್ ಮಾಡಿ ಸೆಲಬ್ರೇಷನ್

    ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲೇ ರೌಡಿಶೀಟರ್‌ವೊಬ್ಬ ಕೇಕ್ ಕಟ್ ಮಾಡಿ ಭರ್ಜರಿಯಾಗಿ ಬರ್ತ್‌ಡೇ ಪಾರ್ಟಿ ಮಾಡಿರುವ ಘಟನೆ ನಡೆದಿದೆ.

    ದರ್ಶನ್ ಕೇಸ್ ಬಳಿಕ ಜೈಲಿನಲ್ಲಿ ರಾಜಾತಿಥ್ಯಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ಬಯಲಾಗಿದೆ. ಇದನ್ನೂ ಓದಿ: ಬೆಳಗಾವಿ | ಕಲ್ಲು ತೂರಾಟಕ್ಕೆ ಹಿಂದೂ ಯುವಕರ ಕೌಂಟರ್ – `ಐ ಲವ್ ಶ್ರೀರಾಮ್‌’ ಫಲಕ ಅಳವಡಿಕೆ

    ಜೈಲಿನಲ್ಲಿ ಕೈದಿಗಳ ಕಳ್ಳಾಟ ಇನ್ನೂ ನಿಂತಿಲ್ಲ. ವಿಚಾರಣಾಧೀನ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಇಲ್ಲ ಎಂಬಂತಾಗಿದೆ. ನಟೋರಿಯಸ್ ರೌಡಿಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಲ್ಲೇ ಭರ್ಜರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ.

    ಆ್ಯಪಲ್ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈತ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟೋರಿಯಸ್ ರೌಡಿಶೀಟರ್. ಮೊಬೈಲ್‌ನಲ್ಲಿ ಬರ್ತ್ಡೇ ಪಾರ್ಟಿಯ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜೈಲಲ್ಲಿ ದರ್ಶನ್‌ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು

    ಜೈಲಿನಿಂದಲೇ ವಿಡಿಯೋ, ಪೋಟೋ ಪೋಸ್ಟ್ ಆಗಿದೆ. ಗುಬ್ಬಚ್ಚಿ ಸೀನನ ಶಿಷ್ಯಂದಿರಿಂದ ಪೋಸ್ಟ್ ಆಗಿದೆ. ಜೈಲಧಿಕಾರಿಗಳು, ಸಿಬ್ಬಂದಿಯಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದನ್ನು ವೀಡಿಯೋ ಬಹಿರಂಗಪಡಿಸಿದೆ.

  • ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ಅರ್ಜಿ – ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ಅರ್ಜಿ – ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯ ಆದೇಶವನ್ನು 64ನೇ ಸಿಸಿಹೆಚ್ ನ್ಯಾಯಾಲಯ ಅ.9ಕ್ಕೆ ಕಾಯ್ದಿರಿಸಿದೆ.

    ಕನಿಷ್ಟ ಸವಲತ್ತುಗಳನ್ನು ಒದಗಿಸಲು ಕೋರ್ಟ್ ಆದೇಶವಿದ್ದರೂ ಕೂಡ ಪರಪ್ಪನ ಅಗ್ರಹಾರ ಜೈಲಧಿಕಾರಿಗಳು ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ನಟ ದರ್ಶನ್ ಪರ ವಕೀಲರು ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು (ಸೆ.30) ವಿಚಾರಣೆ ನಡೆಯಿತು.ಇದನ್ನೂ ಓದಿ: ಮಹಿಳೆಯ ಖಾಸಗಿ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್‌ ಆರೋಪ – ಪುಡಿ ರೌಡಿ ವಿರುದ್ಧ ಎಫ್‌ಐಆರ್‌ ದಾಖಲು

    ವಿಚಾರಣೆ ಸಂದರ್ಭದಲ್ಲಿ ಜೈಲ್ ಸೂಪರಿಂಟೆಂಡೆಂಟ್ ಸುರೇಶ್ ಕೂಡ ಹಾಜರಾಗಿದ್ದರು. ಈ ವೇಳೆ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸುನೀಲ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅ.9ಕ್ಕೆಆದೇಶವನ್ನು ಕಾಯ್ದಿರಿಸಿದೆ.

    ಈ ಮೊದಲು ದರ್ಶನ್ ಪರ ವಕೀಲರು, ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ನ್ಯಾಯಾಲಯವೂ ಕೂಡ ಕನಿಷ್ಠ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿತ್ತು. ಆದರೆ ಜೈಲಧಿಕಾರಿಗಳು ಕೋರ್ಟ್ ಆದೇಶವನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ: ಮಹೇಶ್‌ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

  • ತನ್ನ ಸ್ವಾರ್ಥಕ್ಕಾಗಿ ನಮ್ಮನ್ನಿಲ್ಲಿ ಕೊಳೆಯುವಂತೆ ಮಾಡಿದ್ದಾನೆ – ದರ್ಶನ್‌ ವಿರುದ್ಧವೇ ಗ್ಯಾಂಗ್‌ ಸದಸ್ಯರ ಅಸಮಾಧಾನ?

    ತನ್ನ ಸ್ವಾರ್ಥಕ್ಕಾಗಿ ನಮ್ಮನ್ನಿಲ್ಲಿ ಕೊಳೆಯುವಂತೆ ಮಾಡಿದ್ದಾನೆ – ದರ್ಶನ್‌ ವಿರುದ್ಧವೇ ಗ್ಯಾಂಗ್‌ ಸದಸ್ಯರ ಅಸಮಾಧಾನ?

    – ಬೇರೆ ಜೈಲಿಗೆ ಶಿಫ್ಟ್‌ ಆಗೋದಕ್ಕೂ ದರ್ಶನ್‌ ಅಡ್ಡಿ ಅಂತ ಬೇಸರ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ (Renukaswamy Murder Case) ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅಂಡ್ ಗ್ಯಾಂಗ್ (Darshan And Gang) ನಡುವೆ ಒಡಕು ಮೂಡಿದೆ. ಸ್ವತಃ ಗ್ಯಾಂಗ್‌ನ ಸದಸ್ಯರೇ ದರ್ಶನ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಅನ್ನೋದು ಮೂಲಗಳಿಂದ ತಿಳಿದುಬಂದಿದೆ.

    ಹೌದು. ದರ್ಶನ್, ಪ್ರದೋಷ್, ಲಕ್ಷ್ಮಣ್, ಅನ್ಬುಕುಮಾರ್, ಜಗದೀಶ್, ನಾಗರಾಜ್, ಪವಿತ್ರಾಗೌಡ (Pavithra Gowda) ಅವರ ಜಾಮೀನನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬಳಿಕ ಎಲ್ಲರನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ದರ್ಶನ್ ಅಂಡ್ ಗ್ಯಾಂಗ್ ನನ್ನ ಪರಪ್ಪನ ಅಗ್ರಹಾರದ ಜೈಲಿನ ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: Andhra Pradesh | ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

    ಮೊದಲ ಬಾರಿ ಜೈಲಿಗೆ ಹೋಗಿದ್ದಾಗ ದರ್ಶನ್‌ಗೆ ಬಳ್ಳಾರಿ ಜೈಲು ಸೇರಿದಂತೆ ಉಳಿದ ಆರೋಪಿಗಳಿಗೆ ಬೇರೆ ಬೇರೆ ಜೈಲಿನಲ್ಲಿ ಇರಿಸಲಾಗಿತ್ತು. ಆದೇ ರೀತಿ ಆಡಳಿತ ಹಾಗೂ ಭದ್ರತೆ ದೃಷ್ಠಿಯಿಂದ ಕಳೆದ ಬಾರಿ ಇದ್ದ ಜೈಲುಗಳಿಗೆ ದರ್ಶನ್ ಸೇರಿದಂತೆ ಗ್ಯಾಂಗ್ ಸದಸ್ಯರುಗಳಿಗೆ ಆಯಾ ಜೈಲಿಗೆ ಶಿಫ್ಟ್ ಮಾಡಬೇಕೆಂದು ಸರ್ಕಾರಿ ಪರ ವಕೀಲರು ಅರ್ಜಿ ಹಾಕಿಕೊಂಡಿದ್ದರು. ಟ್ರಯಲ್ ದಿನಾಂಕ ನಿಗದಿಯಾಗುವುದರಿಂದ ಪ್ರತಿಭಾರಿ ದರ್ಶನ್ ಅಂಡ್ ಗ್ಯಾಂಗ್ ಕರೆದುಕೊಂಡು ಬರಲು ಕಷ್ಟವಾಗುತ್ತೆ ಹಾಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ವಾದ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾದೀಶರು ದರ್ಶನ್ ಅಂಡ್ ಗ್ಯಾಂಗ್ ಜೈಲಿಗೆ ಹೋದ ದಿನದಿಂದ ದುರ್ವರ್ತನೆ ತೋರದ ಕಾರಣ ಬೇರೆ ಜೈಲಿಗೆ ಶಿಫ್ಟ್ ಮಾಡಲು ಆಗಲ್ಲ ಎಂದು ಕೋರ್ಟ್ ದರ್ಶನ್ ಅಂಡ್ ಗ್ಯಾಂಗ್ ಅನ್ನ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲು ಕೋರ್ಟ್ ನಿರಾಕರಿಸಿತ್ತು. ಇದನ್ನೂ ಓದಿ: ರಾಯಚೂರಿನಲ್ಲಿ ಸರ್ಕಾರಿ ಬಸ್ ಪಲ್ಟಿ – ಪ್ರಯಾಣಿಕನ ಕಾಲು ಮುರಿತ, 15 ಮಂದಿಗೆ ಗಾಯ

    ಇದು ದರ್ಶನ್ ಅಂಡ್ ಗ್ಯಾಂಗ್ ನಡುವೆ ಒಡಕು ಮೂಡಲು ಕಾರಣವಾಗಿದೆ ಎಂದು ಹೇಳಲಾಗ್ತಿದೆ. ಬೇರೆ ಜೈಲಿಗೆ ಶಿಫ್ಟ್ ಆಗುವ ವಿಚಾರದಲ್ಲಿ ದರ್ಶನ್ ಅಡ್ಡಿ ಆಗ್ತಿದ್ದಾರೆಂದು ಗ್ಯಾಂಗ್‌ನ ಸದಸ್ಯರು ಮನಸ್ತಾಪ ಮಾಡಿಕೊಂಡಿದ್ದಾರಂತೆ. ದರ್ಶನ್ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನ ಇಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಚಿತ್ರದುರ್ಗದ ಆರೋಪಿಗಳಾದ ಅನ್ಬುಕುಮಾರ್ ಹಾಗೂ ಜಗದೀಶ್ ಅಸಮಾಧಾನ ಹೊರ ಹಾಕುತ್ತಿದ್ದಾರಂತೆ. ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದರೇ ನಮ್ಮ ಪೋಷಕರಿಗೆ ಬಂದು ಹೋಗುವುದಕ್ಕೆ ಅನುಕೂಲವಾಗುತ್ತಿತ್ತು. ಇವರ ಅನುಕೂಲಕ್ಕೆ ಬೇರೆ ಜೈಲಿಗೆ ಹೋಗದಂತೆ ಮಾಡಿಕೊಂಡರು ಎಂದು ಆರೋಪಿಗಳಾದ ಜಗದೀಶ್, ಅನ್ಬುಕುಮಾರ್ ದರ್ಶನ್ ಗ್ಯಾಂಗ್ ಉಳಿದ ಸದಸ್ಯರ ಬಳಿ ಅಸಮದಾನ ಹೊರಹಾಕುತ್ತಿದ್ದಾರಂತೆ. ಇದನ್ನೂ ಓದಿ: ಪಿಜಿಯಲ್ಲಿ ಯುವತಿ ಅನುಮಾನಾಸ್ಪದ ಸಾವು – ನೇತಾಡುತ್ತಿದ್ದ ಶವ ಕಂಡು ಹೊರಗೆ ಓಡಿದ ವಿದ್ಯಾರ್ಥಿನಿಯರು

  • ಮತ್ತೆ `ಕುಂಟು’ನೆಪ – ದರ್ಶನ್ ಬೆನ್ನುನೋವಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!

    ಮತ್ತೆ `ಕುಂಟು’ನೆಪ – ದರ್ಶನ್ ಬೆನ್ನುನೋವಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!

    – ದರ್ಶನ್ ಬಿಪಿ, ಶುಗರ್ ನಾರ್ಮಲ್

    ಬೆಂಗಳೂರು: ನಟ ದರ್ಶನ್ (Darshan) ಜಾಮೀನು ರದ್ದಾದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿದ್ದಾರೆ. ಕಳೆದ ಗುರುವಾರ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಕೋರ್ಟ್ಗೆ ಹಾಜರು ಪಡಿಸುವುದಕ್ಕೂ ಮುನ್ನ ಆರೋಗ್ಯ ತಪಾಸಣೆಯಲ್ಲಿ ಒಂದಷ್ಟು ವ್ಯತ್ಯಾಸ ಕಂಡು ಬಂದಿದ್ದು ಬಿಪಿ ಸಮಸ್ಯೆ ಆಗಿತ್ತು. ಮತ್ತೆ ಬೆನ್ನು ನೋವಿದೆ (Backpain) ಅಂತಾ ವೈದ್ಯಕೀಯ ತಪಾಸಣೆ ಮಾಡಿದವರಿಗೆ ದರ್ಶನ್ ಹೇಳಿದ್ದರು ಎನ್ನಲಾಗಿದೆ.

    ನಟ ದರ್ಶನ್ ಜೈಲಿಗೆ ಹೋದ ಬಳಿಕ ವೈದ್ಯಕೀಯ ತಪಾಸಣೆ ಆಗಿದ್ದು, ಡಿಟೇಲ್ ಆಗಿ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಬಿಪಿ ಸಮಸ್ಯೆ ಇತ್ತು. ಆದರೆ ಈಗ ಅದು ಸುಧಾರಣೆ ಆಗಿದೆ ಅಂತಾ ಜೈಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಇದೀಗ ದರ್ಶನ್, ಬಿಪಿ ಮತ್ತು ಶುಗರ್ ಕಂಟ್ರೋಲ್‌ನಲ್ಲಿ ಇರೋದು ವೈದ್ಯಕೀಯ ತಪಾಸಣೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

    ಮತ್ತೊಂದು ಶಾಕಿಂಗ್ ವಿಚಾರವನ್ನು ವೈದ್ಯರು ಬಿಚ್ಚಿಟ್ಟಿದ್ದು, ನಟ ದರ್ಶನ್‌ಗೆ ಬೆನ್ನು ನೋವು ಇದ್ದು, ಈಗ ಬೆನ್ನು ನೋವಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಈ ಹಿಂದೆ ಬೆನ್ನು ನೋವಿಗೆ ಏನು ಔಷಧಿಯನ್ನು ತೆಗೆದುಕೊಳ್ತಾ ಇದ್ರೋ ಅದೇ ಮಾದರಿಯಲ್ಲೇ ಚಿಕಿತ್ಸೆ ಮತ್ತು ಔಷಧಿಯನ್ನ ವೈದ್ಯರು ನೀಡ್ತಾ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ದರ್ಶನ್ ಆರೋಗ್ಯ ಸುಧಾರಣೆ ಆಗಿದ್ದು, ಜೈಲಿನಲ್ಲೇ ಬೆನ್ನು ನೋವಿಗೆ ಟ್ರೀಟ್‌ಮೆಂಟ್ ನೀಡಲಾಗ್ತಿದೆ.

  • ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ – ನಿಷೇಧಿತ ವಸ್ತುಗಳು ಪತ್ತೆ

    ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ – ನಿಷೇಧಿತ ವಸ್ತುಗಳು ಪತ್ತೆ

    ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲು ಅಕ್ರಮದ ಅಡ್ಡೆಯಾಗಿ ಪರಿವರ್ತನೆ ಆಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ಹೆಚ್ಚಾಗಿ ಬಳಕೆಯಾಗುತ್ತಿವೆ. ಅಕ್ರಮವಾಗಿ ನಿಷೇಧಿತ ವಸ್ತು ಬಳಕೆಯಾಗುತ್ತಿರುವ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಸೋಮವಾರ ದಾಳಿ ಮಾಡಿದ್ದಾರೆ.

    ಜೂನ್ 16ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೂ ಜೈಲಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಸಿಸಿಬಿ ದಾಳಿ (CCB Raid) ವೇಳೆ ಅಪಾರ ಪ್ರಮಾಣದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಪರಪ್ಪನ ಅಗ್ರಹಾರ ಕಾರಾಗೃಹದ ಸಜಾಬಂಧಿ ಬ್ಯಾರಕ್ ಹಾಗೂ ವಿಐಪಿ ಬ್ಯಾರಕ್‌ನಲ್ಲಿ ಸಿಸಿಬಿಯ ಐವತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ನಡೆಸಿದ್ದರು. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

    ದಾಳಿ ವೇಳೆ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್ಸ್, ಗಾಂಜಾ ಚಿಲ್ಲಂಸ್, ಮೊಳೆಗಳು, ಹರಿತವಾದ ವಸ್ತುಗಳು, ಗುಟ್ಕಾ ತಂಬಾಕು ಪ್ಯಾಕೆಟ್ಸ್, ಸುಣ್ಣದ ಡಬ್ಬಿ, ಡೈರಿಗಳು, ಚಾಕುಗಳು, ನಗದು ಹಣ, ಮೊಬೈಲ್ ಚಾರ್ಜರ್, ಕತ್ತರಿ, ಕಬ್ಬಿಣದ ರಾಡ್ ಪತ್ತೆಯಾಗಿದೆ. ಇದನ್ನೂ ಓದಿ: EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ಬಳಕೆಯಾಗುತ್ತಿರುವ ಬಗ್ಗೆ ಸಿಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹತ್ತರ ಬದಲಾವಣೆ: ಜೈಲನ್ನು 3 ವಿಭಾಗ ಮಾಡಲಿರುವ ಗೃಹ ಇಲಾಖೆ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹತ್ತರ ಬದಲಾವಣೆ: ಜೈಲನ್ನು 3 ವಿಭಾಗ ಮಾಡಲಿರುವ ಗೃಹ ಇಲಾಖೆ

    ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಮಹತ್ತರ ಬದಲಾವಣೆ ತರಲಾಗಿದ್ದು, ಗೃಹ ಇಲಾಖೆ ಸೂಚನೆಯೊಂದಿಗೆ ಜೈಲನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ತನಿಖೆ ನಡೆದಿದ್ದು, ಇದೀಗ ಪರಪ್ಪನ ಅಗ್ರಹಾರ ಜೈಲನ್ನು ಮೂರು ವಿಭಾಗಗಳಾಗಿ ಮಾಡಲು ಮುಂದಾಗಿದ್ದಾರೆ.ಇದನ್ನೂ ಓದಿ: ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಸಿರಾಜ್‌

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಆರೋಪಿಗಳನ್ನು ಕೂಡ ಬೇರೆ ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಬಳಿಕ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತನ ಗ್ಯಾಂಗ್‌ನ್ನು ಕೂಡ ಎತ್ತಂಗಡಿ ಮಾಡಿಸಲಾಗಿತ್ತು. ಈಗ ಸದ್ಯ ಜೈಲಿನಲ್ಲಿ 5150ಕ್ಕೂ ಹೆಚ್ಚು ಜನ ಕೈದಿಗಳು ಇದ್ದಾರೆ.

    ಸದ್ಯ ಪರಪ್ಪನ ಅಗ್ರಹಾರ ಜೈಲನ್ನು ಮೂರು ವಿಭಾಗಗಳಾಗಿ ಮಾಡಲು ಮುಂದಾಗಿದ್ದು, ಜೈಲಿನ ಕ್ವಾರಂಟೈನ್ ವಿಭಾಗಕ್ಕೆ ಮಹಿಳಾ ಕೈದಿಗಳನ್ನು ಶಿಫ್ಟ್ ಮಾಡಲು ಮುಂದಾಗಿದ್ದು, 200ಕ್ಕೂ ಹೆಚ್ಚು ಜನ ಮಹಿಳಾ ಕೈದಿಗಳು ಶಿಫ್ಟ್ ಅಗಲಿದ್ದಾರೆ. ಮುಖ್ಯ ಜೈಲಿನ ಪಕ್ಕದಲ್ಲಿರುವ ಹೊಸದಾದ ಜೈಲಿಗೆ ಸಜಾಬಂಧಿಗಳು ಇರಲಿದ್ದು, ಮುಖ್ಯ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ಇರುವ ಸಾಧ್ಯತೆಯಿದೆ.

    ಅಕ್ರಮದ ಅಡ್ಡೆಯಾಗಿದ್ದ ಪರಪ್ಪನ ಅಗ್ರಹಾರ ಜೈಲಿಗೆ ಹೊಂದಿಕೊಂಡಿರುವ ಕ್ವಾರಂಟೈನ್ ಜೈಲು ಕೊನೆಗೂ ಮಹಿಳಾ ಸೂಪರಿಟೆಂಡೆಂಟ್ ಜೊತೆಗೆ ಕೇವಲ ಮಹಿಳಾ ಕೈದಿಗಳಿಗೆ ಮಾತ್ರ ಸೀಮಿತವಾಗಲಿದೆ. ಪರಪ್ಪನ ಅಗ್ರಹಾರ ಮುಖ್ಯ ಜೈಲಿನಲ್ಲಿ 3400 ವಿಚಾರಣಾಧೀನ ಕೈದಿಗಳು ಮಾತ್ರ ಇರಲಿದ್ದಾರೆ. ಹೊಸದಾಗಿ ಸಿದ್ಧ ಆಗಿರುವ ಜೈಲಿನಲ್ಲಿ 1550 ಸಜಾ ಕೈದಿಗಳು ಶಿಫ್ಟ್ ಆಗಲಿದ್ದಾರೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಇದನ್ನೂ ಸಂಪೂರ್ಣವಾಗಿ ನಿಲ್ಲಿಸಲು ಮುಂದಿನ ಒಂದು ವಾರದೊಳಗಾಗಿ ಪ್ರತ್ಯೇಕ ಜೈಲಿನಲ್ಲಿ ಡಿಜಿ ಒಬ್ಬರನ್ನು ನೇಮಕ ಮಾಡಿ, ಪ್ರತ್ಯೇಕ ಮೂರು ಜನ ಸೂಪರಿಟೆಂಡೆಂಟ್ ಕೂಡ ನೇಮಕ ಆಗಲಿದ್ದಾರೆ ಎಂದು ಜೈಲು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.ಇದನ್ನೂ ಓದಿ: ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ: ವಿಜಯಲಕ್ಷ್ಮಿ

  • ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    – ವಿಲ್ಸನ್‌ಗಾರ್ಡನ್ ನಾಗನದ್ದು ಸೇರಿದಂತೆ 18 ಮೊಬೈಲ್ ಸೀಜ್
    – ಡಿಸಿಪಿ ಸ.ರಾ ಫಾತಿಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

    ಬೆಂಗಳೂರು: ದರ್ಶನ್ (Actor Darshan) ರಾಜಾತಿಥ್ಯ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಮೊಬೈಲ್ ಸೇರಿದಂತೆ ಮಾದಕ ವಸ್ತು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದ ದರ್ಶನ್ ಹಾಗೂ ವಿಲ್ಸನ್‌ಗಾರ್ಡನ್ ನಾಗನ ಫೋಟೋ ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ಹದ್ದಿನ ಕಣ್ಣಿದ್ದರು. ಜೊತೆಗೆ ಜೈಲಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಏಕಾಏಕಿ ದಾಳಿ ನಡೆಸಿದ್ದಾರೆ.ಇದನ್ನೂ ಓದಿ: Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

    ಪರಪ್ಪನ ಅಗ್ರಹಾರ ಜೈಲಿನ ಮೇಲೆ ಆಗ್ನೇಯ ಪೊಲೀಸರಿಂದ ದಾಳಿ ನಡೆದಿದ್ದು, ರಾತ್ರಿ ಏಕಾಏಕಿ ಡಿಸಿಪಿ ಸರಾ ಫಾತಿಮಾ (DCP Sarah Fathima) ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆಸಲಾಗಿದೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಬಲವಾದ ಪುರಾವೆಗಳು ಲಭ್ಯವಾಗಿದ್ದು, ಜೈಲಾಧಿಕಾರಿಗಳ ಕಳ್ಳಾಟ ಮುಂದುವರೆದಿರುವುದು ದಾಳಿ ವೇಳೆ ಸಾಬೀತಾಗಿದೆ.

    ಕುಖ್ಯಾತ ರೌಡಿ ವಿಲ್ಸನ್‌ಗಾರ್ಡನ್ ನಾಗನ (Wilson Garden Naga) ಬ್ಯಾರಕ್ ಅಕ್ಕಪಕ್ಕದಲ್ಲಿ ಮೊಬೈಲ್‌ಗಳು ಪತ್ತೆಯಾಗಿದ್ದು, ಸುಮಾರು 17 ಆಂಡ್ರಾಯ್ಡ್ ಫೋನ್‌ಗಳು ಸಿಕ್ಕಿವೆ. ವಿಲ್ಸನ್ ಗಾರ್ಡನ್ ನಾಗನ ಮೊಬೈಲ್ ಸೇರಿದಂತೆ ಸಹಚರರ ಸುಮಾರು 18 ಮೊಬೈಲ್ ಸೀಜ್ ಮಾಡಿದ್ದಾರೆ. ಜೊತೆಗೆ ಮಾದಕ ವಸ್ತು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನು ಕಂಡು ಖುದ್ದು ಪೊಲೀಸರೇ ಶಾಕ್ ಆಗಿದ್ದಾರೆ. ಇಷ್ಟೆಲ್ಲಾ ಇದ್ದರೂ ವಿಲ್ಸನ್‌ಗಾರ್ಡನ್ ನಾಗನನ್ನು ಬೇರೆ ಕಡೆ ಏಕೆ ವರ್ಗಾವಣೆ ಮಾಡಲಿಲ್ಲ. ಅವನ ಹಿಂದೆ ಯಾರಿದ್ದಾರೆ? ಅವನಿಗೆ ಇಲಾಖೆಯಲ್ಲಿ ಇಷ್ಟೊಂದು ಪ್ರಭಾವವಿದೇಯಾ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌