Tag: ಪರದಾಟ

  • ಲಾಕ್‍ಡೌನ್‍ನಿಂದ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳ ಪರದಾಟ

    ಲಾಕ್‍ಡೌನ್‍ನಿಂದ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳ ಪರದಾಟ

    ಬೆಳಗಾವಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೆ ಈ ಲಾಕ್ ಡೌನ್ ನಿಂದ ಸುಮಾರು 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಪರದಾಟ ಅನುಭವಿಸುತ್ತಿವೆ.

    ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮದಲ್ಲಿ ಉತ್ತರಕನ್ನಡ ಜಿಲ್ಲೆಯ ಹಡಗಲಿ, ಡೊಂಗ್ರಿಕೊಪ್ಪ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ. ಹಸುಗೂಸಿನೊಂದಿಗೆ ವಾಸವಿರುವ ಬಾಣಂತಿ, ಪುಟ್ಟ ಪುಟ್ಟ ಕಂದಮ್ಮಗಳ ಜೊತೆ ಇಲ್ಲಿ ಕುಟುಂಬಗಳು ವಾಸವಾಗಿವೆ.

    ಇವರು ವರ್ಷದ 9 ತಿಂಗಳು ಊರೂರು ಸುತ್ತಿ ಮನೆ ಮನೆಗೆ ತೆರಳಿ ಅವರ ಕುಟುಂಬದ ಇತಿಹಾಸ ಹೇಳುವವರಾಗಿದ್ದಾರೆ. ಬೈಲಹೊಂಗಲ, ಗೋಕಾಕ್, ಬಾಗಲಕೋಟೆ ಹಾಗೂ ರಾಯಚೂರು ಸೇರಿ ವಿವಿಧೆಡೆ ತೆರಳುತ್ತಿದ್ದರು. ಆದರೆ ಇದೀಗ ಲಾಕಡೌನ್‍ನಿಂದ ಎಲ್ಲಿಯೂ ಹೋಗದೆ ಕುಟುಂಬ ಕೆಂಗಾನೂರಲ್ಲಿ ಸಿಲುಕಿದ್ದು, ಜಾಗ ಖಾಲಿ ಮಾಡಿ ಅಂತ ಪೊಲೀಸರು ಹೇಳುತ್ತಿದ್ದಾರೆ ಎಂದು ಅವರು ಆರೋಪ ಮಾಡುತ್ತಿದ್ದಾರೆ.

    ಸದ್ಯ ಲಾಕ್‍ಡೌನ್‍ನಲ್ಲಿ ಸಿಲುಕಿರುವ ಕುಟುಂಬಗಳಿಗೆ ತಾಲೂಕು ಆಡಳಿತ ಪಡಿತರ ವ್ಯವಸ್ಥೆ ಕಲ್ಪಿಸಿದೆ. ಆದರೆ ಇತರೆ ಸಾಮಗ್ರಿ ವಿತರಿಸುವಂತೆ ಹೆಳವರ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

  • ಜೀವಜಲಕ್ಕಾಗಿ ನೀರೆಯರ ಪರದಾಟ..!- ಕಿ.ಮೀಗಟ್ಟಲೆ ಗುಡ್ಡ ಹತ್ತಿ ನೀರು ತರುತ್ತಾರೆ ಗ್ರಾಮಸ್ಥರು

    ಜೀವಜಲಕ್ಕಾಗಿ ನೀರೆಯರ ಪರದಾಟ..!- ಕಿ.ಮೀಗಟ್ಟಲೆ ಗುಡ್ಡ ಹತ್ತಿ ನೀರು ತರುತ್ತಾರೆ ಗ್ರಾಮಸ್ಥರು

    ಬೆಳಗಾವಿ: ತಲೆಯ ಮೇಲೊಂದು, ಸೊಂಟದ ಮೇಲೊಂದು ಕೊಡ ಹೊತ್ತು ಕಿಲೋಮೀಟರ್ ಗಟ್ಟಲೆ ಗುಡ್ಡ ಹತ್ತಿ ಇಳೀದು ನೀರು ತರುವ ತುಂಬು ಗರ್ಭಿಣಿ, ಶಾಲಾ ಮಕ್ಕಳು ಹಾಗೂ ಮಹಿಳೆಯರು ಪರದಾಟ ನಡೆಸುತ್ತಿರೋ ಮನಕಲಕುವ ದೃಶ್ಯ ಜಿಲ್ಲೆಯ ರಾಮದುರ್ಗ ತಾಲೂಕಿನ ಬುದ್ನಿಖುರ್ದ ಗ್ರಾಮದಲ್ಲಿ ಕಂಡುಬಂದಿದೆ.

    ಹೌದು. ಹಲವು ವರ್ಷಗಳಿಂದಲೂ ಬುದ್ನಿಖುರ್ದ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಆದ್ರೆ ಈ ಸಮಸ್ಯೆಯನ್ನು ಮಾತ್ರ ಯಾರಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ. ಈ ಗ್ರಾಮದಲ್ಲಿರೋ ಒಂದು ಬೋರ್ ವೆಲ್ ನೀರಿನಿಂದಲೇ ಇಡೀ ಗ್ರಾಮದ ಜನ ನೀರು ಕುಡಿಯುತ್ತಿದ್ದಾರೆ. ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ನೀರು ಹೊತ್ತು ತರುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ. ನಿತ್ಯವೂ ಎರಡು ಕಿ.ಮೀ ನಡೆದುಕೊಂಡು ಹೋಗಿಯೇ ನೀರು ತರುವ ಸ್ಥಿತಿ ಇಲ್ಲಿದೆ. ಒಂದೆಡೆ ಪುರುಷರು ಕೂಲಿ ಮಾಡಲು ಹೋದರೆ, ಮತ್ತೊಂದೆಡೆ ಮಹಿಳೆಯರು ಹಾಗೂ ಮಕ್ಕಳು ನೀರು ತುಂಬುವ ಕೆಲಸ ಮಾಡುತ್ತಾರೆ.

    ವಿಪರ್ಯಾಸ ಅಂದ್ರೆ ಗರ್ಭಿಣಿ ಮಹಿಳೆಯರು ಕೂಡ ಎರಡು ಕಿ.ಮೀ ನಡೆದುಕೊಂಡು ಹೋಗಿ ನೀರು ತರುತ್ತಾರೆ. ರಸ್ತೆಗಳು ಕೂಡ ಸರಿಯಿಲ್ಲದ ಕಾರಣ ಈ ಗ್ರಾಮದಲ್ಲಿ ಒಂದು ಕಿ.ಮೀ ನಷ್ಟು ಗುಡ್ಡವನ್ನ ಹತ್ತಿ ನೀರು ತರುವುದರಿಂದ ಮಹಿಳೆಯರು ಹೊಟ್ಟೆನೋವು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಕೆಲವೊಮ್ಮೆ ಬಿದ್ದು ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳು ಕೂಡ ನಡೆದಿದೆ.

    ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ ಅಂದರೆ, ಪುಟ್ಟ ಪುಟ್ಟ ಮಕ್ಕಳು ಕೂಡ ನೀರಿಗಾಗಿ ಕೆಲವೊಮ್ಮೆ ಶಾಲೆಯನ್ನ ಬಿಟ್ಟು ನೀರು ತುಂಬುತ್ತಾರೆ. ಇತ್ತ ನೀರಿನ ಸಮಸ್ಯೆ ಇದ್ದುದರಿಂದ ದನಕರುಗಳನ್ನ ಸಾಕುವುದನ್ನು ಕೂಡ ಗ್ರಾಮಸ್ಥರು ಬಹುತೇಕವಾಗಿ ನಿಲ್ಲಿಸಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಗ್ರಾಮದ ಎಲ್ಲಾ ಜನರು ನಿತ್ಯವೂ ಕಿ.ಮೀ ಗಟ್ಟಲೇ ನಡೆದುಕೊಂಡು ಹೋಗಿ ನೀರು ತರುವ ಸ್ಥಿತಿ ಇದ್ದು, ಇದನ್ನ ಪರಿಹರಿಸಿ ಎಂದು ಹಲವು ಬಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಗೆ ಮನವಿ ಮಾಡಿಕೊಂಡ್ರೂ ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರಂತೂ ಬರೀ ಚುನಾವಣೆ ಬಂದಾಗ ಮಾತ್ರ ಗ್ರಾಮಕ್ಕೆ ಬರ್ತಾರೆ ಚುನಾವಣೆ ಮುಗಿದ ಮೇಲೆ ಇತ್ತ ಸುಳಿಯುವುದೇ ಇಲ್ಲ. ಹೀಗಾಗಿ ಈ ಬಾರಿ ವೋಟ್ ಕೇಳೊಕೆ ಬಂದರೇ ಅವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಯಾವುದೇ ಪ್ರಯೋಜನ ಆಗ್ತಿಲ್ಲ. ವಿದ್ಯುತ್ ಕಡಿತಗೊಂಡರೇ ಕೆಲವೊಮ್ಮೆ ಕೆರೆ ನೀರು ಕುಡಿದು ಕಾಯಿಲೆಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೆ ಜನನಾಯಕರ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಮತ ಕೇಳಲು ಹೋಗುವ ಮುಖಂಡರಿಗೆ ಸರಿಯಾಗಿ ಉತ್ತರಿಸಲು ಜನರು ತಯಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಾಲೀಕ ಬ್ಯಾಂಕ್ ಸಾಲ ಕಟ್ಟದ್ದಕ್ಕೆ ಬಾಡಿಗೆದಾರರ ಮನೆಗೂ ಬೀಗ!

    ಮಾಲೀಕ ಬ್ಯಾಂಕ್ ಸಾಲ ಕಟ್ಟದ್ದಕ್ಕೆ ಬಾಡಿಗೆದಾರರ ಮನೆಗೂ ಬೀಗ!

    ಬೆಂಗಳೂರು: ಮನೆ ಮಾಲೀಕ ತೆಗೆದುಕೊಂಡ ಸಾಲ ಕಟ್ಟದ್ದಕ್ಕೆ ಬ್ಯಾಂಕ್‍ನವರು ಬಾಡಿಗೆದಾರರ ಮನೆಗೂ ಬೀಗ ಹಾಕಿರುವ ಅಮಾನವೀಯ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ.

    ಮನೆ ಮಾಲೀಕ ಕೇಶವ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಮನೆ ಮಾಲೀಕ ಕೇಶವ್ ಬ್ಯಾಂಕ್ ಸಾಲ ಮಾಡಿದ್ದಕ್ಕೆ ಕೋರ್ಟ್ ಆದೇಶದಂತೆ ಮಲ್ಲೇಶ್ವರಂ ಸೊಸೈಟಿ ಬ್ಯಾಂಕ್ ಮಂಗಳವಾರ ಮಧ್ಯಾಹ್ನ ಎಲ್ಲ 15 ಮನೆಗಳಿಗೂ ಬೀಗ ಹಾಕಿ ಮನೆಯವರನ್ನು ಹೊರಹಾಕಿದ್ದಾರೆ. ಇದರಿಂದಾಗಿ ಬಾಡಿಗೆದಾರರು ಪರದಾಡುವ ಸ್ಥಿತಿ ಎದುರಾಗಿದೆ.

    ಬಾಡಿಗೆದಾರರ ಪೈಕಿ ಎರಡು ದಿನಗಳ ಹಿಂದೆ ಕಂದಮ್ಮ ಐಸಿಯುನಿಂದ ಡಿಸ್ಚಾರ್ಜ್ ಆಗಿತ್ತು, ಈಗ ಬಾಣಂತಿ ಪರದಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಊಟ ತಿಂಡಿಯಿಲ್ಲದೇ 30ಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು, ವಯಸ್ಸಾದವರು ನಿನ್ನೆ ರಾತ್ರಿಯಿಂದ ಪರದಾಡುತ್ತಿದ್ದಾರೆ. ಮನೆಗೆ ಬೀಗ ಹಾಕಿರುವುದರಿಂದ ಬಾಡಿಗೆದಾರರ ಬದುಕು ಬೀದಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರ್ತೂರು ಕೋಡಿಯಲ್ಲಿ ಮುಂದುವರಿದ ನೊರೆಯ ಆರ್ಭಟ – ಸ್ಥಳೀಯರ ಪರದಾಟ

    ವರ್ತೂರು ಕೋಡಿಯಲ್ಲಿ ಮುಂದುವರಿದ ನೊರೆಯ ಆರ್ಭಟ – ಸ್ಥಳೀಯರ ಪರದಾಟ

    ಬೆಂಗಳೂರು: ವರ್ತೂರು ಕೋಡಿಯಲ್ಲಿ ಇಂದು ಸಹ ನೊರೆಯ ಅರ್ಭಟ ಮುಂದುವರೆದಿದೆ. ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೊರೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

    ರಸ್ತೆಗೆ ಹಾರುತ್ತಿರುವ ನೊರೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ನೊರೆಯ ಅರ್ಭಟದ ನಡುವೆಯೇ ವಾಹನ ಸವಾರರು ಸಾಗುತ್ತಿದ್ದಾರೆ. ಇದರಿಂದಾಗಿ ಸಾಂಕಾಮಿಕ ರೋಗಗಳು ಹರಡಬಹುದೆಂದು ಜನರು ಆತಂಕದಲ್ಲಿದ್ದಾರೆ.

    https://www.youtube.com/watch?v=5ijDLdSCP98&feature=youtu.be

    ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ವಾರ್ಡ್‍ನ ಯುತೋಪಿಯಾ ಅಪಾರ್ಟ್ಮೆಂಟ್ ಕಾಂಪೌಂಡ್ ಗೋಡೆ ಕುಸಿದಿದ್ದು ಇಂದು ಮುಂಜಾನೆ ಮೇಯರ್ ಪದ್ಮಾವತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಹದೇವಪುರ ಜಂಟಿ ಆಯುಕ್ತೆ ವಾಸಂತಿ ಅಮರ್, ಬೆಳ್ಳಂದೂರು ವಾರ್ಡ್ ಕಾರ್ಪೋರೇಟರ್ ಆಶಾ ಸುರೇಶ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.

    ಈ ವೇಳೆ ತಂತ್ರಜ್ಞರು ಪರಿಶೀಲನೆ ನಡೆಸಿದ್ದು ಕಾಂಪೌಂಡ್ ಗೋಡೆ ಕುಸಿತದಿಂದ ಯುತೊಪಿಯಾ ಅಪಾರ್ಟ್‍ಮೆಂಟ್‍ಗೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ಕಟ್ಟಡದ ಕಾಂಪೌಂಡ್ ಕುಸಿದ ಸ್ಥಳ ಮತ್ತು ಮಣ್ಣುಗೋಡೆ ಕುಸಿದ ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಸಲಾರ್ ಪುರಿಯಾ ಸಂಸ್ಥೆ ನೆರವೇರಿಸಬೇಕು. ಅಲ್ಲಿವರೆಗೆ ಸಾಫ್ಟ್ ವೇರ್ ಪಾರ್ಕ್ ಕಾಮಗಾರಿ ನಿಲ್ಲಿಸುವಂತೆ ಆದೇಶಿಸಲಾಗಿದ್ದು, ಒಂದೊಮ್ಮೆ ಸಾಫ್ಟ್ ವೇರ್ ಪಾರ್ಕ್ ಕಟ್ಟಡ ಕಾಮಗಾರಿಯಲ್ಲಿ ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮೇಯರ್ ಪದ್ಮಾವತಿ ತಿಳಿಸಿದ್ದಾರೆ.