Tag: ಪರಣ್ಣ ಮುನವಳ್ಳಿ

  • ಹನುಮಂತ ಹುಟ್ಟಿದ ನಾಡಿಗೆ ಸಚಿವ ಸ್ಥಾನ ನೀಡಬೇಕು: ಪರಣ್ಣ ಮುನವಳ್ಳಿ

    ಹನುಮಂತ ಹುಟ್ಟಿದ ನಾಡಿಗೆ ಸಚಿವ ಸ್ಥಾನ ನೀಡಬೇಕು: ಪರಣ್ಣ ಮುನವಳ್ಳಿ

    ಕೊಪ್ಪಳ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನಾನು ಎರಡು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

    ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎರಡು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಇಲ್ಲಿನ ಜನರ ಆಶಯ ಈಡೇರಿಸಲು ಅಧಿಕಾರ ಬೇಕು. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ವರಿಷ್ಠರಿಗೆ ನಾನು ಕಳಕಳಿಯಿಂದ ಮನವಿ ಮಾಡಿದ್ದೇನೆ ಎಂದರು.

    ಹನುಮಂತ ಹುಟ್ಟಿದ ನಾಡಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಗಂಗಾವತಿ ಐತಿಹಾಸಿಕ ಹಿನ್ನೆಲೆ ಇರುವ ಕ್ಷೇತ್ರವಾಗಿದ್ದು, ಹನುಮಂತ ಹುಟ್ಟಿದ ನಾಡಿದು. ಇಲ್ಲಿಗೆ ಸಚಿವ ಸ್ಥಾನ ನೀಡಬೇಕು. ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದ ಅವರು, ಕೆಲ ಜಿಲ್ಲೆಗೆ 6 ಸಚಿವ ಸ್ಥಾನ ನೀಡಿದ್ದಾರೆ. ನಾನಂತೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಸಂಪುಟ ಪುನಾರಚನೆ ಸರ್ಕಸ್ ಬೆನ್ನಲ್ಲೇ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಹೊರಟ ಬೆನ್ನಲ್ಲೇ ಹೊಸ ದೋಸ್ತು ತಮಡ ಕೂಡ ಇಂದು ದೆಹಲಿಗೆ ತೆರಳಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಸಂಗಾಪೂರ ಸುತ್ತಮುತ್ತ ಕಲ್ಲು ಒಡೆಯಲು ಶಾಸಕರಿಗೆ 5 ಲಕ್ಷ ಮಾಮೂಲಿ: ಇಕ್ಬಾಲ್ ಅನ್ಸಾರಿ

    ಸಂಗಾಪೂರ ಸುತ್ತಮುತ್ತ ಕಲ್ಲು ಒಡೆಯಲು ಶಾಸಕರಿಗೆ 5 ಲಕ್ಷ ಮಾಮೂಲಿ: ಇಕ್ಬಾಲ್ ಅನ್ಸಾರಿ

    ಕೊಪ್ಪಳ: ಸಂಗಾಪೂರ ಸುತ್ತಮುತ್ತ ಭಾಗದ ಜನರು ಕಲ್ಲು ಒಡೆದು ಬದುಕು ಸಾಗಿಸುತ್ತಾರೆ. ಸದ್ಯ ಕಲ್ಲು ಒಡೆಯುವುದನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ. ಅದನ್ನು ಪುನಃ ಆರಂಭ ಮಾಡಬೇಕಾದರೆ ಶಾಸಕರಿಗೆ ಪ್ರತಿ ತಿಂಗಳು 5 ಲಕ್ಷ ರೂ. ಮಾಮೂಲಿ ರೂಪದಲ್ಲಿ ನೀಡಬೇಕು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರ ವಿರುದ್ಧ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಂಭೀರ ಆರೋಪವನ್ನು ಮಾಡಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ಅನ್ಸಾರಿಯವರ ನಡೆ ಜನಾಶೀರ್ವಾದ ಕಡೆಗೆ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅನ್ಸಾರಿ, ಸುಮಾರು ವರ್ಷಗಳಿಂದ ಕಲ್ಲು ಬಂಡೆಗಳನ್ನು ಒಡೆದು ಜೀವನ ಸಾಗಿಸುತ್ತಿದ್ದ ಗಂಗಾವತಿ ತಾಲೂಕಿನ ಮಲ್ಲಾಪೂರ, ಸಂಗಾಪೂರ, ಬಸವನದುರ್ಗ, ಗೂಗಿಬಂಡಿ ಕ್ಯಾಂಪ್, ರಾಂಪೂರ ಗ್ರಾಮಗಳಲ್ಲಿ ಇರುವ ಬಡ ವರ್ಗದವರಿಗೆ ಕಾನೂನುಗಳ ಮೂಲಕ ಕಲ್ಲು ಒಡೆಯುವ ಕಾಯಕವನ್ನು ನಿಲ್ಲಿಸಲಾಗಿದೆ. ಸದ್ಯ ಇವರು ಕೆಲಸ ಇಲ್ಲದೆ ಗ್ರಾಮದಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಸಂತ್ರಸ್ತೆ ತನಿಖೆಗೆ ಸ್ಪಂದಿಸುತ್ತಿಲ್ಲ: ಎಸ್‍ಟಿಎಸ್ ಆರೋಪ

    ಬಡವರ್ಗದವರ ಕಷ್ಟವನ್ನು ಹೇಳಿಕೊಳ್ಳಲು ಹಾಗೂ ಕಲ್ಲು ಒಡೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಪರಣ್ಣ ಮುನವಳ್ಳಿಯವರಿಗೆ ಮನವಿ ಮಾಡಿಕೊಂಡರೆ, ಅವರು ಮನವಿಗೆ ಸ್ಪಂದಿಸದೆ ಅವರಿಂದಲೂ ಕೂಡ ಮಾಮೂಲಿ ಪಡೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಕಲ್ಲು ಒಡೆಯಲು ಅವಕಾಶ ಬೇಕಾದರೆ ಪ್ರತಿ ತಿಂಗಳು 5 ಲಕ್ಷ ರೂ.ಗಳನ್ನು ಮಾಮೂಲಿ ರೂಪದಲ್ಲಿ ನೀಡಬೇಕು. ನೀಡಿದರೆ ನಿಮಗೆ ಕಲ್ಲು ಒಡೆಯಲು ಅವಕಾಶ ಕಲ್ಪಿಸಿಕೊಡಲಾಗುವುದು, ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ಬಡ ವರ್ಗದವರಿಂದಲೂ ಕೂಡ ಮಾಮೂಲಿ ಪಡೆದುಕೊಳ್ಳುವ ಕೆಲಸಕ್ಕೆ ಶಾಸಕರು ಮುಂದಾಗುತ್ತಿದ್ದಾರೆ. ಈ ರೀತಿಯಲ್ಲಿ ಕ್ಷೇತ್ರದಲ್ಲಿ ಬರಿ ಮಾಮೂಲಿ ರಾಜಕೀಯ ನಡೆಯುತ್ತಿದೆ. ಬಡವರು, ಕೂಲಿಕಾರರು ಬದುಕು ಸಾಗಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

  • ಸಚಿವ ಸ್ಥಾನ ಸಿಗದೆ ಇದ್ರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ: ಪರಣ್ಣ

    ಸಚಿವ ಸ್ಥಾನ ಸಿಗದೆ ಇದ್ರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ: ಪರಣ್ಣ

    ಕೊಪ್ಪಳ: ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಈ ಸಂದರ್ಭದಲ್ಲಿ ಹಲವು ಬಿಜೆಪಿ ಶಾಸಕರು ಸಚಿವಾಕಾಂಕ್ಷಿಯಾಗಿದ್ದರು. ಇದರಲ್ಲಿ ಕೆಲವರಿಗೆ ಅಸಮಾಧಾನ ಉಂಟಾಗಿದೆ. ಈ ಮಧ್ಯೆ ಕೊಪ್ಪಳ ಜಿಲ್ಲೆಯಲ್ಲಿ ಮೂರು ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಅದರಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್, ಸಿಎಂ ಜಿಲ್ಲೆಯಿಂದ ಹಾಲಪ್ಪ ಆಚಾರರನ್ನು ಸಚಿವರನ್ನಾಗಿ ಮಾಡಿದ್ದಾರೆ. ಈ ನಿರ್ಧಾರವನ್ನು ಪರಣ್ಣ ಮುನವಳ್ಳಿ ಸ್ವಾಗತಿಸಿದ್ದಾರೆ.

    ಇಂದು ಗಂಗಾವತಿಯಲ್ಲಿ ಮಾತನಾಡಿದ ಪರಣ್ಣ ಮುನವಳ್ಳಿ, ನಾನು ಸಚಿವ ಆಕಾಂಕ್ಷಿಯಾಗಿದ್ದೆ ಆದರೆ ಹೈಕಮಾಂಡ್, ಸಿಎಂ ತೆಗೆದುಕೊಂಡ ನಿರ್ಧಾರಕ್ಕೆ ಸ್ವಾಗತಿಸುತ್ತೇನೆ. ಎಂ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ, ಈ ಮಧ್ಯೆ ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ನೀಡಿದ್ದು ಸ್ವಾಗತ ಎಂದರು.

    ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಹಜವಾಗಿ ಸಚಿವ ಸ್ಥಾನ ಕೇಳಿದ್ದು ಸತ್ಯ, ಈಗ ಸಚಿವ ಸ್ಥಾನ ನೀಡದೆ ಇರುವುದಕ್ಕೆ 2-3 ದಿನ ಅಸಮಾಧಾನವಾಗುವುದು ಸಹಜ. ಹಾಗಂತ ಯಾವುದೇ ಪಕ್ಷದ ವಿರೋಧ ಚಟುವಟಿಕೆ ಮಾಡುವುದಿಲ್ಲ. ರಾಜ್ಯದಲ್ಲಿ ಇನ್ನೂ 3-4 ಸಚಿವ ಸ್ಥಾನ ಖಾಲಿ ಇವೆ. ಅವುಗಳಲ್ಲಿ ಕೇಳುವ ಬಗ್ಗೆ ವಿಚಾರ ಮಾಡಿಲ್ಲ. ಸಚಿವ ಸ್ಥಾನ ಸಿಗದಿದ್ದರೂ ಕ್ಷೇತ್ರದ ಜನರು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಪರಣ್ಣ ಮುನವಳ್ಳಿ ಹೇಳಿದ್ದಾರೆ.

  • ಬೊಮ್ಮಾಯಿ ಸಂಪುಟದಲ್ಲಿ ನಾನು ಕೂಡ ಸಚಿವಾಕಾಂಕ್ಷಿ: ಪರಣ್ಣ ಮುನವಳ್ಳಿ

    ಬೊಮ್ಮಾಯಿ ಸಂಪುಟದಲ್ಲಿ ನಾನು ಕೂಡ ಸಚಿವಾಕಾಂಕ್ಷಿ: ಪರಣ್ಣ ಮುನವಳ್ಳಿ

    ಕೊಪ್ಪಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಾನು ಕೂಡ ಸಚಿವನಾಗುವ ಆಕಾಂಕ್ಷಿ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

    ಇಂದು ಗಂಗಾವತಿಯಲ್ಲಿ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುವ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಾವು ಸಚಿವಾಕಾಂಕ್ಷಿಗಳು ಎಂದು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು, ನೀಡುತ್ತಾರೆ ಎಂಬ ವಿಶ್ವಾಸವಿದೆ. ಅದು ಗಂಗಾವತಿ ಕ್ಷೇತ್ರಕ್ಕೆ ನೀಡುತ್ತಾರೆ. ಖಂಡಿತವಾಗಿ ಗಂಗಾವತಿಗೆ ಸಚಿವ ಸ್ಥಾನ ಸಿಗುತ್ತದೆ, ನಾನು ಪಾಸಿಟಿವ್ ಆಗಿದ್ದೇನೆ. ಕೊಡದಿದ್ದರೆ ಎಂಬ ನೆಗಟಿವ್ ವಿಚಾರವಿಲ್ಲ, ಕೊಡದಿದ್ದರೆ ಮುಂದೆ ಎಂಬ ಪ್ರಶ್ನೆಯೇ ಇಲ್ಲ. ಕೊಡದಿದ್ದರೆ ಪಕ್ಷದ ಸಿದ್ದಾಂತಕ್ಕೆ ಬದ್ದ ಎಂದರು.

    ಇತ್ತೀಚಿನ ಮೊಟ್ಟೆ ಡೀಲ್ ಪ್ರಕರಣದ ಬಗ್ಗೆಯೂ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ. ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ಕೆಲವು ಗ್ರಾಫಿಕ್ ಗಳು ಇರಬಹುದು ನನಗೆ ಗೊತ್ತಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಗಂಗಾವತಿ ಕ್ಷೇತ್ರದ ಕೆಲವರು ನನ್ನ ಮೇಲೆ ಅತಿ ಪ್ರೀತಿಯಿಂದಾಗಿ ಈ ಪ್ರಕರಣದಲ್ಲಿ ಸಿಕ್ಕಿಸಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಇದು ರಾಜಕೀಯ ಪ್ರೇರಿತವಾಗಿ ಮಾಡಿರುವ ಪ್ರಕರಣ. ಕೊನೆಯದಾಗಿ ಕ್ಷೇತ್ರದ ಜನತೆಯೇ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನವೇ ಅಂತಿಮ ಎಂದು ಶಾಸಕರು ಹೇಳಿದರು.

  • ಸಿಎಂ ಬದಲಾವಣೆ ಬಗ್ಗೆ ಮಾತಾಡಬಾರದು: ಶಾಸಕ ಪರಣ್ಣ ಮುನವಳ್ಳಿ

    ಸಿಎಂ ಬದಲಾವಣೆ ಬಗ್ಗೆ ಮಾತಾಡಬಾರದು: ಶಾಸಕ ಪರಣ್ಣ ಮುನವಳ್ಳಿ

    ಕೊಪ್ಪಳ: ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಮಾತನಾಡಬಾರದು. ಈ ಸಂಬಂಧ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

    ಹಿರಿಯರಾಗಲಿ ಅಥವಾ ಯಾರೇ ಆಗಲಿ ಈ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಮಾತನಾಡಬಾರದು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗ ಎಲ್ಲರೂ ಒಗ್ಗಟ್ಟಿನಿಂದ ಸಂಕಷ್ಟ ಬಗೆಹರಿಸಬೇಕಾಗಿದೆ ಎಂದರು.

    ಬಿ.ಎಸ್.ಯಡಿಯೂರಪ್ಪ ಬಗ್ಗೆ ಹೈಕಮಾಂಡಿಗೆ ಮಾಹಿತಿ ಇದೆ. ಯಾರಿಗಾದರೂ ಏನಾದ್ರೂ ಅಸಮಾಧಾನವಿದ್ದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ವಿರೋಧ ಪಕ್ಷದವರು ಈಗ ಸಿಎಂ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.

    ಉಪಚುನಾವಣೆಯಲ್ಲಿ 14 ಸ್ಥಾನ ಬಿಜೆಪಿ ಗೆದ್ದಿದೆ. ಲೋಕಸಭೆ ಚುನಾಣೆಯಲ್ಲಿ ಕೇವಲ 25 ಜನ ಎಂಪಿಗಳು ಆಯ್ಕೆಯಾಗಿದ್ದಾರೆ. ಇನ್ನೂ ಎರಡು ವರ್ಷ ಸುಮ್ಮನೆ ಇರಬೇಕು. ಎರಡು ವರ್ಷದ ಬಳಿಕ ಚುನಾವಣೆ ಮೂಲಕ ಜನರ ಬಳಿ ಹೋಗೋಣ. ಅವರು ನೀಡುವ ತೀರ್ಮಾನಕ್ಕೆ ಬದ್ಧರಾಗಿರೋಣ. ಈಗ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಬಗ್ಗೆ ಮಾತನಾಡುವುದನ್ನು ವಿಪಕ್ಷ ನಾಯಕರು ನಿಲ್ಲಿಸಲಿ ಎಂದು ಆಗ್ರಹಿಸಿದರು.

  • ಕೊಪ್ಪಳದಲ್ಲಿ ಸೋಮವಾರದಿಂದ 5 ದಿನ ಲಾಕ್‍ಡೌನ್: ಪರಣ್ಣ ಮುನವಳ್ಳಿ

    ಕೊಪ್ಪಳದಲ್ಲಿ ಸೋಮವಾರದಿಂದ 5 ದಿನ ಲಾಕ್‍ಡೌನ್: ಪರಣ್ಣ ಮುನವಳ್ಳಿ

    ಕೊಪ್ಪಳ: ಜಿಲ್ಲೆಯಲ್ಲಿ ಮತ್ತೆ ಸೋಮವಾರದಿಂದ ಐದು ದಿನ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

    ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನಗಳ ಕಾಲ ಲಾಕ್ ಡೌನ್‍ಗೆ ಇಂದು ಕೊನೆಯ ದಿನವಾಗಿದೆ. ನಾಳೆ, ನಾಡಿದ್ದು ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂದರು.

    ಶನಿವಾರ, ರವಿವಾರ ಅಗತ್ಯ ವಸ್ತು, ತರಕಾರಿ ಖರೀದಿಗೆ ಅವಕಾಶ ನೀಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಶಾಸಕರು ಚರ್ಚೆ ಮಾಡಿದ್ದೇವೆ. ಎರಡು ದಿನ ಖರೀದಿಗೆ ಅವಕಾಶವಿದೆ ಎಂದು ತಿಳಿಸಿದರು.

    ಯಾರೂ ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಇದೇ ವೇಳೆ ಮನವಿ ಮಾಡಿಕೊಂಡ ಶಾಸಕರು, ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗ್ತಿದೆ. ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಇದು ಆತಂಕಕಾರಿ ವಿಷಯ. ಎಲ್ಲರೂ ನಾಳೆ ನಾಡಿದ್ದು ಖರೀದಿ ಮಾಡ್ರೀ, ಮತ್ತೆ ಐದು ದಿನ ಹೊರಗಡೆ ಬರಬೇಡಿ ಎಂದು ಹೇಳಿದರು.

  • ಸತ್ತ ಉಗ್ರರ ಲೆಕ್ಕ ಬೇಕಾದ್ರೆ ಶಾಸಕರು ಪಾಕಿಸ್ತಾನಕ್ಕೆ ಹೋಗಲಿ: ಹಿಟ್ನಾಳ್‍ಗೆ ಮುನವಳ್ಳಿ ತಿರುಗೇಟು

    ಸತ್ತ ಉಗ್ರರ ಲೆಕ್ಕ ಬೇಕಾದ್ರೆ ಶಾಸಕರು ಪಾಕಿಸ್ತಾನಕ್ಕೆ ಹೋಗಲಿ: ಹಿಟ್ನಾಳ್‍ಗೆ ಮುನವಳ್ಳಿ ತಿರುಗೇಟು

    ಕೊಪ್ಪಳ: ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್‍ನಲ್ಲಿ ಸಾವನ್ನಪ್ಪಿದ ಉಗ್ರರ ಲೆಕ್ಕ ಕೇಳುವ ಶಾಸಕರು ಪಾಕಿಸ್ತಾನಕ್ಕೆ ಹೋಗಲಿ ಎಂದು ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು, ರಾಘವೇಂದ್ರ ಹಿಟ್ನಾಳ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಶಾಸಕರು, ರಾಘವೇಂದ್ರ ಹಿಟ್ನಾಳ್ ಅವರಿಗೆ ಅನುಮಾನವಿದ್ದರೆ ನೇರವಾಗಿ ಪಾಕಿಸ್ತಾನಕ್ಕೆ ಹೋಗಿ ನೋಡಿ ಬರಲಿ. ಅಲ್ಲಿನ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡು ಬರಲಿ. ಈ ನಿಟ್ಟಿನಲ್ಲಿ ರಾಘವೇಂದ್ರ ಹಿಟ್ನಾಳ್ ಅವರು ಆದಷ್ಟು ಬೇಗ ಪಾಕಿಸ್ತಾನಕ್ಕೆ ಹೋಗಿ ಸಾಕ್ಷಿಗಳನ್ನು ತರಲಿ ಎಂದು ಕಿಡಿಕಾರಿದರು. ಇದನ್ನು ಓದಿ: ಬಾಲಕೋಟ್ ಉಗ್ರರ ಕ್ಯಾಂಪ್‍ನಿಂದ ಸಾಗಿಸಲಾಗಿತ್ತು 35 ಶವ: ಪ್ರತ್ಯಕ್ಷದರ್ಶಿಗಳಿಂದ ಬಯಲಾಯ್ತು ಪಾಕ್ ಬಣ್ಣ

    ಭಾರತೀಯ ಸೇನೆಯ ವಿಚಾರದಲ್ಲಿ ರಾಘವೇಂದ್ರ ಹಿಟ್ನಾಳ್ ಸಣ್ಣತನ ತೋರಿದ್ದಾರೆ. 12 ನಿಮಿಷದಲ್ಲಿ ಯದ್ಧ ಮಾಡೋದಕ್ಕೆ ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆಯನ್ನ ನಾವು ಖಂಡಿಸುತ್ತೇವೆ ಎಂದು ಗುಡುಗಿದರು. ಇದನ್ನು ಓದಿ: ಏರ್ ಸ್ಟ್ರೈಕ್ ಸಾಕ್ಷಿಯನ್ನ ಯಾರೂ ಕೇಳಿಲ್ಲ: ಎಂ.ಬಿ.ಪಾಟೀಲ್

    ಪಾಕಿಸ್ತಾನದ ನೆಲೆಯಲ್ಲಿರುವ ಉಗ್ರರನ್ನು ಸೆದೆಬಡಿಯಲು ಭಾರತೀಯ ವಾಯು ಪಡೆ ಏರ್ ಸ್ಟ್ರೈಕ್ ನಡೆಸಿದೆ. ಇದನ್ನು ಬಿಟ್ಟರೆ ಬೇರೆ ಯಾವ ಉದ್ದೇಶವೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಲಿಲ್ಲ. ಈ ಮೂಲಕ ಪುಲ್ವಾಮಾ ದಾಳಿಯ ಪ್ರತಿಕಾರವನ್ನು ತೀರಿಸಿಕೊಂಡಿದ್ದಾರೆ ಎಂದು ತಿಳಿದರು.

    https://youtu.be/oseIZ5XYm4o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಮೀಷನ್ ಕೊಟ್ರೆ ಮಾತ್ರ ತಮ್ಮ ಜೊತೆ ಇಟ್ಟುಕೊಳ್ತಾರೆ: ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಬಿಜೆಪಿ ಮುಖಂಡ ಆರೋಪ

    ಕಮೀಷನ್ ಕೊಟ್ರೆ ಮಾತ್ರ ತಮ್ಮ ಜೊತೆ ಇಟ್ಟುಕೊಳ್ತಾರೆ: ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಬಿಜೆಪಿ ಮುಖಂಡ ಆರೋಪ

    ಕೊಪ್ಪಳ: ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕನ ವಿರುದ್ಧ ಕಮಲ ಮುಖಂಡರೊಬ್ಬರು ಗಂಭೀರ ಆರೋಪವನ್ನು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸೈಯದ್ ಅಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.

    ಗಂಗಾವತಿಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಮುಖ್ಯ ಕಾರಣ ಕಾರ್ಯಕರ್ತರು. ಪರಣ್ಣ ಮುನವಳ್ಳಿಯವರು ಗೆಲ್ಲಲು ನಾನು ಮುಖ್ಯ ಕಾರಣ ಅನ್ನೋದನ್ನ ಮರೆತಿದ್ದಾರೆ. ಅವರಿಗೆ ಕಮೀಷನ್ ಯಾರು ಕೊಡ್ತಾರೋ ಅವರನ್ನ ಮಾತ್ರ ತಮ್ಮ ಜೊತೆ ಇಟ್ಟುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಶಾಸಕರಿಗೆ ಬಾರ್, ಕ್ಲಬ್, ಒಸಿ ನಡೆಸುವವರಿಂದ ಪ್ರತಿ ತಿಂಗಳು ಸುಮಾರು 4.5 ಲಕ್ಷ ರೂ ಕಮಿಷನ್ ಸಿಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಾಕ್ಷರು ಹಾಗೂ ಸದಸ್ಯರು ಯಾರು ಕೂಡ ಮಾತನಾಡುವ ಸ್ಥಿತಿಯಲ್ಲಿಲ್ಲ. 85 ಲಕ್ಷ ರೂ.ಗಳಷ್ಟು ಪಾರ್ಟಿ ಫಂಡ್ ಮತ್ತು ಲಂಚದ ಹಣ ನಗರಸಭೆ ಚುನಾವಣೆ ಸಮಯದಲ್ಲಿ ಬಂದಿದೆ. 2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 5 ಕೋಟಿ ರೂ.ಗಳಷ್ಟು ದುಡ್ಡನ್ನು ಯಡಿಯೂರಪ್ಪ ಅವರು ಶಿವರಾಮ್ ಗೌಡರಿಗೆ ನೀಡಿದ್ದರು. ಈ ವಿಚಾರವನ್ನು ಶಿವರಾಮ್ ಗೌಡರಿಗೆ ಕೇಳಬೇಕು ಅವರಿಗೆ ಸ್ಪಷ್ಟವಾಗಿ ಗೊತ್ತು, ಬಂದ ದುಡ್ಡನ್ನು ಯಾವ ಕಾರ್ಯಕರ್ತರಿಗೆ ಕೊಟ್ಟಿದ್ದಾರೆ? ಎಂದು ಬಿಜೆಪಿ ಮುಖಂಡ ಪ್ರಶ್ನಿಸಿದ್ದಾರೆ. ಪ್ರತಿ ತಿಂಗಳು ಶಾಸಕರಿಗೆ ಬಾರ್, ಕ್ಲಬ್‍ಗಳಿಂದ ಮಾಮೂಲಿ ಬರುತ್ತದೆ ಇದನ್ನು ಯಾರು ಕೇಳುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

    ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೈಯದ್ ಅಲಿ ಅವರು ನಾನು ನನಗೆ ಗೊತ್ತಿರುವ ವಿಚಾರವನ್ನು ನಿಮ್ಮ ಬಳಿ ಹೇಳಿದ್ದೇನೆ. ಚೈತ್ರಾ ಕುಂದಾಪುರ ಅವರಿಗೆ ಅನ್ಯಾಯ ಆಗಿದೆ. ಅವರ ಮೇಲೆ ಕೇಸ್ ಹಾಕಿದ್ದರೂ ಬೇಲ್ ಕೊಡಿಸುವ ವ್ಯವಸ್ಥೆಯನ್ನು ಶಾಸಕರು ಮಾಡಿಲ್ಲ. ಈ ಕುರಿತು ಕ್ರಮ ಕೈಗೊಂಡು ಅವರಿಗೆ ನ್ಯಾಯ ಕೊಡಿಸಬೇಕು. ಅಲ್ಲದೆಆರ್‌ಎಸ್‌ಎಸ್ ಮಧ್ಯಸ್ಥಿಕೆ ವಹಿಸಿಕೊಂಡು ಈ ಪ್ರಕರಣಕ್ಕೆ ಬೆಂಬಲ ನೀಡಬೇಕು. ಚೈತ್ರಾ ಅವರು ಹಿಂದೂ ಪರ ಸಂಘಟನೆ ಪರವಾಗಿ ಹಲವು ಕೆಲಸ ಮಾಡಿದ್ದಾರೆ ಅವರಿಗೆ ನ್ಯಾಯ ಕೊಡಿಸಿ ಎಂದು ಹೇಳಿದರು. ಬಿಜೆಪಿ ಗೆಲ್ಲಲು ಕಾರ್ಯಕರ್ತರು, ಅಲ್ಪಸಂಖ್ಯಾತರು ಕಾರಣ. ನಿಮ್ಮ ವಿರಶೈವರು ನಿಮ್ಮನ್ನು ಗೆಲ್ಲಿಸಿಲ್ಲ ಎಂದು ಗಂಗಾವತಿ ಶಾಸಕರ ವಿರುದ್ಧ ಸೈಯದ್ ಅಲಿ ಹೇಳಿಕೆ ನೀಡಿದ್ದಾರೆ.

    ಸದ್ಯ ಈ ಎಲ್ಲಾ ಆರೋಪಗಳಿಗೆ ಉತ್ತರಿಸಿರುವ ಶಾಸಕ ಪರಣ್ಣ ಮುನವಳ್ಳಿ, ಸೈಯದ್ ಅಲಿ ಅವರ ಆರೋಪಕ್ಕೆ ಯಾವುದೇ ಪುರಾವೆ ಅಥವಾ ದಾಖಲೆಗಳಿಲ್ಲ. ನಗರ ಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ್ದಕ್ಕೆ ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸೈಯದ್ ಅವರ ಬಳಿ ಶಾಸಕರ ವಿರುದ್ಧ ಅವರು ಮಾಡಿರುವ ಆರೋಪಗಳಿಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಕ್ಬಾಲ್ ಅನ್ಸಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

    ಇಕ್ಬಾಲ್ ಅನ್ಸಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

    ಕೊಪ್ಪಳ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಗಂಗಾವತಿಯ ನೂತನ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವ್ಯಂಗ್ಯವಾಡಿದ್ದಾರೆ.

    ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಇಕ್ಬಾಲ್ ಅನ್ಸಾರಿ ಹತಾಶರಾಗಿದ್ದಾರೆ. ಈ ಕಾರಣಕ್ಕೆ ಅವರ ಬೆಂಬಲಿಗರಿಗೆ ಕುಮ್ಮಕ್ಕು ನೀಡಿ ಕೋಮು ಗಲಭೆ ಮಾಡಿಸ್ತಿದ್ದಾರೆ. ಚುನಾವಣೆಯಲ್ಲಿ ಸೋತಿದ್ದರೂ, ನಮ್ಮ ಸರ್ಕಾರ ಇದೆ ಅಭಿವೃದ್ಧಿ ಮಾಡ್ತಿನಿ ಅಂತಿದ್ದಾರೆ. ಅನ್ಸಾರಿ ಹತಾಶರಾಗಿದ್ದು, ತಮ್ಮ ಬೆಂಬಲಿಗರ ಮೂಲಕ ಅಮಾಯಕರ ಮನೆ ಮುಂದೆ ಪಟಾಕಿ ಹೊಡೆದು ಗಲಭೆ ಮಾಡಿಸ್ತಿದ್ದಾರೆ ಎಂದು ಪರಣ್ಣ ಆರೋಪಿಸುತ್ತಿದ್ದಾರೆ.

    ನಾವು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಭ್ರಮಾಚಾರಣೆಯನ್ನು ಮಾಡಿಲ್ಲ. ಗಂಗಾವತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಹಿಂದೂ ಧರ್ಮಕ್ಕೆ ದಕ್ಕೆ ಉಂಟುಮಾಡುವ ಯಾರನ್ನೇ ಆಗಲಿ ನಾವು ಬಿಡುವುದಿಲ್ಲಾ. ಅಂತವರ ವಿರುದ್ಧ ಕಾನೂನು ಹೋರಾಟ, ಪ್ರತಿಭಟನೆ ಮಾಡುತ್ತೇವೆ ಎಂದು ನೂತನ ಶಾಸಕರು ಎಚ್ಚರಿಕೆ ನೀಡಿದ್ರು.

    ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ, ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂದು ಮಾಜಿ ಶಾಸಕ ಅನ್ಸಾರಿ ಬೆಂಬಲಿಗರು ವಿಜಯೋತ್ಸವದ ಆಚರಿಸಿದ್ದರು. ವಿಜಯೋತ್ಸವದ ವೇಳೆ ಅತಿರೇಕದಿಂದ ವರ್ತಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತತು ಆರೋಪಿಸುತ್ತಿದ್ದಾರೆ. ಒಟ್ಟಾರೆಯಾಗಿ ಗಂಗಾವತಿಯಲ್ಲಿ ವಿಜಯೋತ್ಸವದ ವೇಳೆ ಶನಿವಾರ ನಡೆದ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.

  • ನಾನು ಗಂಡಸ್ತನದ ಕೆಲಸ ಮಾಡಿದ್ದೇನೆ- ಮಾಜಿ ಶಾಸಕನಿಗೆ ಇಕ್ಬಾಲ್ ಅನ್ಸಾರಿ ಟಾಂಗ್

    ನಾನು ಗಂಡಸ್ತನದ ಕೆಲಸ ಮಾಡಿದ್ದೇನೆ- ಮಾಜಿ ಶಾಸಕನಿಗೆ ಇಕ್ಬಾಲ್ ಅನ್ಸಾರಿ ಟಾಂಗ್

    ಕೊಪ್ಪಳ: ನಾನು ಗಂಡಸ್ತನದ ಕೆಲಸ ಮಾಡಿದ್ದೇನೆ. ನನ್ನ ಧರ್ಮದಲ್ಲಿ ಒಪ್ಪಿಗೆ ಮೇರೆಗೆ ಎರಡು ಮದುವೆ ಆಗಬಹುದು ಎಂದು ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿಗೆ ಇಕ್ಬಾಲ್ ಅನ್ಸಾರಿ ಟಾಂಗ್ ಕೊಟ್ಟಿದ್ದಾರೆ.

    ಗಂಗಾವತಿಯಲ್ಲಿ ಮಾತನಾಡಿದ ಅನ್ಸಾರಿ, ನಮ್ಮ ಧರ್ಮದಲ್ಲಿ ಒಪ್ಪಿಗೆ ಮೇರೆಗೆ ಇನ್ನೊಂದು ಮದುವೆಯಾಗಬಹುದು. ಇದನ್ನು ಪ್ರಶ್ನಿಸಲು ನೀವ್ಯಾರು ಎಂದು ಪ್ರಶ್ನಿಸಿದರು. ನಾನು ಗಂಡಸ್ತನದ ಕೆಲಸ ಮಾಡಿದ್ದೀನಿ. ಸೂಳೆಗಾರಿಕೆ ಕೆಲಸ ಮಾಡಿಲ್ಲ. ಒಪ್ಪಿಗೆ ಮೇಲೆ ಮದುವೆಯಾಗೋದು ನಮ್ಮ ಧರ್ಮದಲ್ಲಿದೆ. ಒಪ್ಪಿ ಮದುವೆಯಾದರೇ ಅದು ಸೂಳೆಗಾರಿಕೆ ಅಲ್ಲ. ನಿಮ್ಮ ಧರ್ಮದಲ್ಲಿ ಅವಕಾಶವಿದ್ದರೆ ನೀವು ಹತ್ತು ಜನರನ್ನು ಮದುವೆಯಾಗಿ ಎಂದು ಹೇಳಿದ್ದಾರೆ. ಇದನ್ನು ಓದಿ: ಕನ್ನಡದ ನಟಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ 2ನೇ ಸಂಬಂಧ ಬಯಲು

    ಕೆಲ ದಿನಗಳ ಹಿಂದೆ ಅನ್ಸಾರಿಯ ಎರಡನೆ ಮದುಮೆಯ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇವರು ಚಿತ್ರನಟಿ ಪಂಚಮಿಯನ್ನ ಮದುವೆಯಾಗಿದ್ದರು. ಅಷ್ಟೇ ಅಲ್ಲದೇ ಮದುವೆ ಮಾಡಿಕೊಂಡು ಅವರ ಹೆಸರಿನಲ್ಲಿ ಬಾರೊಂದನ್ನು ತೆರೆದಿದ್ದರು. ಈ ವಿಚಾರದ ಬಗ್ಗೆ ಯಾವಾಗ ಪರದೆ ತಗಿಬೇಕು ಅಂತಾ ನನಗೆ ಗೊತ್ತಿದೆ. ನಾನು ಯಾವಾಗ ಹೇಳಬೇಕು ಅಂತಾ ನನಗೆ ಗೊತ್ತಿದೆ ಎಂದು ಅನ್ಸಾರಿ ಹೇಳಿದ್ದಾರೆ. ಇದನ್ನು ಓದಿ: ನ್ನಡದ ನಟಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ 2ನೇ ಸಂಬಂಧ ಬಯಲು