Tag: ಪರಂಬ್ರತ ಚಟ್ಟೋಪಾಧ್ಯಾಯ

  • ಬಾಲಿವುಡ್‍ನತ್ತ ಗೂಗ್ಲಿ ಡೈರೆಕ್ಟರ್: ಬಾಲಿವುಡ್ ಸ್ಟಾರ್ ಪರಂಬ್ರತ ಚಟ್ಟೋಪಾಧ್ಯಾಯಗೆ ಪವನ್ ಒಡೆಯರ್ ಆ್ಯಕ್ಷನ್ ಕಟ್

    ಬಾಲಿವುಡ್‍ನತ್ತ ಗೂಗ್ಲಿ ಡೈರೆಕ್ಟರ್: ಬಾಲಿವುಡ್ ಸ್ಟಾರ್ ಪರಂಬ್ರತ ಚಟ್ಟೋಪಾಧ್ಯಾಯಗೆ ಪವನ್ ಒಡೆಯರ್ ಆ್ಯಕ್ಷನ್ ಕಟ್

    ನ್ನಡ ಚಿತ್ರರಂಗದ ಟ್ಯಾಲೆಂಟೆಂಡ್ ಡೈರೆಕ್ಟರ್, ಲಿರಿಕ್ಸ್ ರೈಟರ್, ನಿರ್ಮಾಪಕ ಪವನ್ ಒಡೆಯರ್ ಈಗ ಬಾಲಿವುಡ್‍ನತ್ತ ಹೆಜ್ಜೆ ಇಟ್ಟಿದ್ದಾರೆ. ಚಂದನವನದ ಚಿತ್ರರಸಿಕರ ಮಡಿಲಿಗೆ ‘ಗೋವಿಂದಾಯ ನಮಃ’, ‘ರಣವಿಕ್ರಮ’, ‘ಗೂಗ್ಲಿ’ ಮತ್ತು ‘ನಟಸಾರ್ವಭೌಮ’ ಸೇರಿದಂತೆ ಹಲವು ಸೂಪರ್ ಹಿಟ್‍ ಸಿನಿಮಾಗಳನ್ನು ಕೊಟ್ಟಿರುವ ಪವನ್ ಒಡೆಯರ್ ನಟನೆಯಲ್ಲಿಯೂ ಛಾಪೂ ಮೂಡಿಸಿದ್ದಾರೆ. ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗೂಗ್ಲಿ ಡೈರೆಕ್ಟರ್ ಈಗ ಡೈರೆಕ್ಟ್ ಆಗಿ ಬಾಲಿವುಡ್‍ಗೆ ಲ್ಯಾಂಡ್ ಆಗಿದ್ದಾರೆ.

    ‘ನೋಟರಿ’ ಚಿತ್ರಕ್ಕೆ ಪವನ್ ಸಾರಥಿ
    ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಬಾಲಿವುಡ್ ಸಿನಿಮಾಗೆ ‘ನೋಟರಿ’ ಎಂದು ಟೈಟಲ್ ಇಡಲಾಗಿದ್ದು, ಇದೊಂದು ಕಾಮಿಡಿ ಡ್ರಾಮಾ ಸಿನಿಮಾವಾಗಿದೆ. ಬೆಂಗಾಳಿಯ ಖ್ಯಾತ ಕಲಾವಿದ, ನಿರ್ದೇಶಕ, ಬಿ’ಟೌನ್ ಬ್ಯೂಟೀಸ್‍ಗಳಾದ ವಿದ್ಯಾ ಬಾಲನ್, ಅನುಷ್ಕಾ ಶರ್ಮಾ ಹಾಗೂ ರವೀನಾ ಟಂಡನ್ ಜೊತೆ ಪರಂಬ್ರತ ಚಟ್ಟೋಪಾಧ್ಯಾಯ ಅವರು ನಟಿಸಿದ್ದಾರೆ. ಓಟಿಟಿಯಲ್ಲಿ ರಿಲೀಸ್ ಆಗಿರುವ ಸೂಪರ್ ಹಿಟ್ ಶೋ ‘ಅರಣ್ಯಕಾ’ದಲ್ಲಿ ಈ ನಟ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:  ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್

    ‘ನೋಟರಿ’ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಸಹ ಹೊತ್ತಿದ್ದಾರೆ. ಗುಪ್ತ್, ಮೋಹರಾ, ಶೆರ್ ಷಾ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಖ್ಯಾತ ನಿರ್ಮಾಪಕ ಶಬೀರ್ ಬಾಕ್ಸ್ ವಾಲ್ ಅವರ ‘ಕಾಶ್ ಎಂಟರ್ ಟೈನ್ ಮೆಂಟ್’ ಜೊತೆಗೂಡಿ ಪವನ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ನಡಿ ಸಿನಿಮಾಗೆ ಹಣ ಹಾಕಿದ್ದಾರೆ.

    ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಮಧ್ಯಪ್ರದೇಶ ಅಥವಾ ಛತ್ತೀಸ್‌ಗಢದಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿಕೊಂಡಿದೆ. ಸದ್ಯದಲ್ಲಿಯೇ ಉಳಿದ ತಾರಾಗಣ ಮತ್ತಿತರ ಅಪ್ಡೇಟ್‍ಗಳನ್ನು ಪ್ರಚಂಚದ ಎದುರು ತೆರೆದಿಡಲಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ 

    ಪ್ರಸ್ತುತ ಪವನ್ ಒಡೆಯರ್ ‘ರೆಮೋ’ ಸಿನಿಮಾ ರಿಲೀಸ್‍ಗೆ ಎದುರು ನೋಡ್ತಿದ್ದಾರೆ. ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಇದರ ಜೊತೆಗೆ ವಿವಿಧ ದೇಶಗಳಲ್ಲಿ ಪ್ರದರ್ಶನ ಕಂಡು 12 ಪ್ರಶಸ್ತಿಗೆ ಭಜನವಾಗಿರುವ ‘ಡೊಳ್ಳು’ ಸಿನಿಮಾವನ್ನು ಬಿಗ್ ಸ್ಕ್ರೀನ್ ಗೆ ತರಲಿದ್ದಾರೆ.