Tag: ಪಬ್

  • ಬೆಂಗ್ಳೂರಿನ ಯುವತಿ ಜೊತೆ ರಾತ್ರಿಯಿಡಿ ಅಸಭ್ಯವಾಗಿ ವರ್ತಿಸಿದ ಸ್ನೇಹಿತ

    ಬೆಂಗ್ಳೂರಿನ ಯುವತಿ ಜೊತೆ ರಾತ್ರಿಯಿಡಿ ಅಸಭ್ಯವಾಗಿ ವರ್ತಿಸಿದ ಸ್ನೇಹಿತ

    ಬೆಂಗಳೂರು: ಕುಡಿದ ನಶೆಯಲ್ಲಿ ಇದ್ದ ಯುವತಿ ಜೊತೆ ಆಕೆಯ ಸ್ನೇಹಿತನೇ ಇಡೀ ರಾತ್ರಿ ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.

    ಜಯಂತ್ ಅಸಭ್ಯವಾಗಿ ವರ್ತಿಸಿದ ಸ್ನೇಹಿತ. ಜಯಂತ್ ತನ್ನ ಸ್ನೇಹಿತೆ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ರಮ್ಯಾ ಭಾನುವಾರ ಅಶೋಕ್‍ನಗರ ಪಬ್‍ನಲ್ಲಿ ಎರಡು ಬಿಯರ್ ಕುಡಿದು ನಶೆ ಏರಿಸಿಕೊಂಡಿದ್ದಳು. ಬಳಿಕ ಕುಡಿದ ಮತ್ತಿನಲ್ಲಿ ಮನೆಗೆ ಹೋಗಲು ಆಗದೆ ಒಯೋ ರೂಂ ಬುಕ್ ಮಾಡಿದಳು.

    ಒಯೋ ರೂಂಗೆ ಬಂದು ಕಾಮುಕ ಜಯಂತ್ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಕಾಮುಕ ಜಯಂತ್ ತನ್ನ ಸ್ನೇಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕುಡಿದ ನಶೆಯಲಿದ್ದ ರಮ್ಯಾ ಜೊತೆ ಜಯಂತ್ ರಾತ್ರಿಯಿಡೀ ಕಾಲ ಕಳೆದಿದ್ದಾನೆ.

    ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • EXCLUSIVE: ರೆಡ್ಡಿ ಆಯ್ತು, ಈಗ ಮತ್ತೋರ್ವ ರಾಜಕಾರಣಿ ಕುಟುಂಬದ ಮೇಲೆ ಸಿಸಿಬಿ ಕಣ್ಣು

    EXCLUSIVE: ರೆಡ್ಡಿ ಆಯ್ತು, ಈಗ ಮತ್ತೋರ್ವ ರಾಜಕಾರಣಿ ಕುಟುಂಬದ ಮೇಲೆ ಸಿಸಿಬಿ ಕಣ್ಣು

    -ಸದ್ದು ಗದ್ದಲವಿಲ್ಲದೇ ನಡೆದಿದೆ ದಾಳಿ

    ಬೆಂಗಳೂರು: ಉಪಚುನಾವಣೆ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಹಣ ವರ್ಗಾವಣೆ ಮತ್ತು ಡೀಲ್ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿಸಿಬಿ ರಾಜ್ಯದ ಪ್ರಭಾವಿ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ಕುಟುಂಬದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ನೋಟಿಸ್ ಕೂಡ ಜಾರಿ ಮಾಡಿದೆ.

    ಸಿದ್ದರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ಪಾಲುದಾರಿಕೆಯ ಪಬ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸುವ ಚಿಂತನೆ ನಡೆಸಿದ್ದಾರೆ. ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಸ್ಮಿತಾ ರಾಕೇಶ್ ‘ಶುಗರ್ ಫ್ಯಾಕ್ಟರಿ’ ಎಂಬ ಹೆಸರಿನ ಪಬ್ ನಡೆಸುತ್ತಿದ್ದಾರೆ. ಈ ಪಬ್ ನ್ನು ಕಿರುತೆರೆ ನಟ ರೋಹನ್ ಗೌಡ ಸಹಪಾಲುದಾರಿಕೆಯನ್ನು ಹೊಂದಿದ್ದಾರೆ. ಸ್ಮಿತಾ ರಾಕೇಶ್ ಒಡೆತನದ ಪಬ್ ಹಲವು ಅಬಕಾರಿ ಕಾಯ್ದೆಯನ್ನು ಉಲ್ಲಂಘನೆ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.

    ಅಬಕಾರಿ ನಿಯಮ ಉಲ್ಲಂಘಿಸಿ ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಪಬ್ ತೆರೆದಿರೋದಕ್ಕೆ ಡಿಸಿಪಿ ಗಿರೀಶ್ ನೇತೃತ್ವದ ಟೀಂ ರೇಡ್ ಮಾಡಿ ಅಬಕಾರಿ ಅಧಿಕಾರಿಗಳಿಗೆ ಪಬ್ ಮುಚ್ಚಿಸಿ ಅಂತಾನೂ ಸೂಚನೆ ಕೊಟ್ಟಿದ್ದಾರಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತಾನಾಡಿರುವ ಅಬಕಾರಿ ವೆಸ್ಟ್ ಡಿಸಿ ಶಿವನೇಗೌಡ, ನಾವು ನೋಟಿಸ್ ನೀಡಿದ್ದೇವೆ 10 ದಿನದೊಳಗೆ ಉತ್ತರ ಬಾರದೇ ಇದ್ದರೆ ಪಬ್‍ನ್ನು ಮುಚ್ಚುತ್ತೇವೆ ಅಂತಾ ಹೇಳಿದ್ದಾರೆ.

    ಅನೇಕ ಪಬ್‍ಗಳು ಸಮಯ ಉಲ್ಲಂಘನೆ ಮಾಡಿ ತೆರೆದಿದ್ದರೂ ತಲೆಕೆಡಿಸಿಕೊಳ್ಳದ ಸಿಸಿಬಿ ಸಿದ್ದರಾಮಯ್ಯನವರ ಸೊಸೆಯ ಪಬ್ ಮೇಲೆ ದಾಳಿ ಮಾಡಿರುವ ಹಿಂದೆ ಪ್ರಭಾವಿಗಳು ಇದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅಬಕಾರಿಯಲ್ಲಿ ಸಿಎಂ ಕುಮಾರಸ್ವಾಮಿ ಆದೇಶವಿಲ್ಲದೇ ಹುಲ್ಲು ಕಡ್ಡಿಯೂ ಅಲ್ಲಾಡಲ್ಲ, ಅಂತಹದರಲ್ಲಿ ಮಾಜಿ ಸಿಎಂ ಸೊಸೆಯ ಪಬ್‍ನ್ನು ಮುಚ್ಚಿಸುವ ಹಿಂದೆ ರಾಜಕೀಯ ಹುನ್ನಾರವಿರಬಹುದೇ ಅನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    ಸಿದ್ದರಾಮಯ್ಯನವರನ್ನು ಕಂಟ್ರೋಲ್ ಮಾಡೋದಕ್ಕೆ ಸಿಸಿಬಿಯನ್ನು ಬಳಸಿಕೊಳ್ಳಲಾಗಿದೆ ಅನ್ನೋ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ. ಸ್ಮಿತಾ ಸೇರಿದಂತೆ ಕಿರುತೆರೆ ನಟ ಬಿಗ್ ಬಾಸ್ ಖ್ಯಾತಿಯ ರೋಹನ್ ಗೌಡ ಕೂಡ ಈ ಶುಗರ್ ಫ್ಯಾಕ್ಟರಿಯ ಪಾಲುದಾರರಾಗಿದ್ದಾರೆ. ಒಂದು ವೇಳೆ ನೋಟಿಸ್‍ಗೆ ಸ್ಮಿತಾ ರಾಕೇಶ್ ಉತ್ತರ ನೀಡದೇ ಇದ್ದಲ್ಲಿ ಪಬ್ ಮುಚ್ಚಿಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಿರುತೆರೆ ನಟ ಸುನಾಮಿ ಕಿಟ್ಟಿ ಬಂಧನ, ಬಿಡುಗಡೆ

    ಕಿರುತೆರೆ ನಟ ಸುನಾಮಿ ಕಿಟ್ಟಿ ಬಂಧನ, ಬಿಡುಗಡೆ

    ಬೆಂಗಳೂರು: ಪಬ್‍ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸುನಾಮಿ ಕಿಟ್ಟಿಯನ್ನು ಪೊಲೀಸರು ಬಂಧಿಸಿದ್ದು, ತದನಂತರ ಬಿಡುಗಡೆ ಮಾಡಿದ್ದಾರೆ.

    ಸಿಗರೇಟ್ ವಿಚಾರವಾಗಿ ಪಂಬ್ ಸಿಬ್ಬಂದಿಯ ಮೇಲೆ ಸುನಾಮಿ ಕಿಟ್ಟಿ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯನಗರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ಈಗ ಕಿಟ್ಟಿಯನ್ನು ಬಂಧಿಸಿದ್ದರು.

    ನಡೆದಿದ್ದೇನು?
    ಸುನಾಮಿ ಕಿಟ್ಟಿ ತನ್ನ ಸ್ನೇಹಿತರ ಜೊತೆ ಭಾನುವಾರ ರಾತ್ರಿ ಮದ್ಯಪಾನ ಮಾಡಲು ಪಬ್‍ಗೆ ಹೋಗಿದ್ದರು. ಈ ವೇಳೆ ಸುನಾಮಿ ಕಿಟ್ಟಿ ಸಿಂಗಲ್ ಸಿಗರೇಟ್ ಕೇಳಿದ್ದಾರೆ. ಆಗ ಸಿಂಗಲ್ ಸಿಗರೇಟ್ ಸಿಗಲ್ಲ, ಪ್ಯಾಕ್ ತೆಗೆದುಕೊಳ್ಳುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವಿಚಾರವಾಗಿ ಸುನಾಮಿ ಕಿಟ್ಟಿ ಹಾಗೂ ಪಬ್ ಸಿಬ್ಬಂದಿ ನಡುವೆ ಗಲಾಟೆ ನಡೆದಿತ್ತು.

    ಅಲ್ಲದೇ ಇದರಿಂದ ಕೋಪಗೊಂಡ ಸುನಾಮಿ ಕಿಟ್ಟಿ, ಹೈಲಾಂಚ್ ಪಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪಬ್ ಸಿಬ್ಬಂದಿ ಯಾವುದೇ ದೂರು ನೀಡಿರಲಿಲ್ಲ. ಸದ್ಯ ಪಬ್ ಸಿಬ್ಬಂದಿ, ಸುನಾಮಿ ಕಿಟ್ಟಿ ಜೊತೆ ರಾಜಿ ಸಂಧಾನ ಮಾಡಿಕೊಂಡು ಸುಮ್ಮನಾಗಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಸುಬ್ರಹ್ಮಣ್ಯನಗರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಸುನಾಮಿ ಕಿಟ್ಟಿಯನ್ನು ಇಂದು ಬಂಧಿಸಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ.

    ಈ ಹಿಂದೆ ಸುನಾಮಿ ಕಿಟ್ಟಿ ಕಿಡ್ನಾಪ್ ಕೇಸ್ ನಲ್ಲಿ ಜ್ಞಾನ ಭಾರತಿ ಠಾಣೆಯಲ್ಲಿ ಅರೆಸ್ಟ್ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತೆ ಪುಂಡಾಟ ಶುರು

    ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತೆ ಪುಂಡಾಟ ಶುರು

    ಬೆಂಗಳೂರು: ಕಿರುತೆರೆ ನಟ ಸುನಾಮಿ ಕಿಟ್ಟಿ ನಗರದ ಪ್ರತಿಷ್ಠಿತ ಒರಾಯನ್ ಮಾಲ್‍ನ ಹೈ ಲಾಂಚ್ ಪಬ್‍ನಲ್ಲಿ ಮತ್ತೆ ತನ್ನ ಪುಂಡಾಟವನ್ನು ಮುಂದುವರಿಸಿ ಸುದ್ದಿಯಾಗಿದ್ದಾರೆ.

    ಸುನಾಮಿ ಕಿಟ್ಟಿ ಸಿಗರೇಟ್ ವಿಚಾರವಾಗಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಸುನಾಮಿ ಕಿಟ್ಟಿ ತನ್ನ ಸ್ನೇಹಿತರ ಜೊತೆ ಭಾನುವಾರ ರಾತ್ರಿ ಮದ್ಯಪಾನ ಮಾಡಲು ಪಬ್‍ಗೆ ಹೋಗಿದ್ದಾರೆ. ಈ ವೇಳೆ ಸುನಾಮಿ ಕಿಟ್ಟಿ ಸಿಂಗಲ್ ಸಿಗರೇಟ್ ಕೇಳಿದ್ದು, ಸಿಂಗಲ್ ಸಿಗರೇಟ್ ಸಿಗಲ್ಲ, ಪ್ಯಾಕ್ ತೆಗೆದುಕೊಳ್ಳುವಂತೆ ಸಿಬ್ಬಂದಿ ಹೇಳಿದ್ದಾರೆ.

    ಈ ವಿಚಾರವಾಗಿ ಸುನಾಮಿ ಕಿಟ್ಟಿ ಹಾಗೂ ಪಬ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಅಲ್ಲದೇ ಇದರಿಂದ ಕೋಪಗೊಂಡು ಸುನಾಮಿ ಕಿಟ್ಟಿ ಹೈಲಾಂಚ್ ಪಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪಬ್ ಸಿಬ್ಬಂದಿ ಯಾವುದೇ ದೂರು ನೀಡಿಲ್ಲ. ಸದ್ಯ ಪಬ್ ಸಿಬ್ಬಂದಿ, ಸುನಾಮಿ ಕಿಟ್ಟಿ ಜೊತೆ ರಾಜಿ ಸಂಧಾನ ಮಾಡಿಕೊಂಡು ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ಹಿಂದೆ ಸುನಾಮಿ ಕಿಟ್ಟಿ ಕಿಡ್ನಾಪ್ ಕೇಸ್ ನಲ್ಲಿ ಜ್ಞಾನ ಭಾರತಿ ಠಾಣೆಯಲ್ಲಿ ಅರೆಸ್ಟ್ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಡರಾತ್ರಿ ಪಬ್, ಬಾರ್&ರೆಸ್ಟೋರೆಂಟ್ ಗಳ ಮೇಲೆ ಸಿಸಿಬಿ ದಾಳಿ- ಮಾಲೀಕರಿಗೆ ನೋಟಿಸ್

    ತಡರಾತ್ರಿ ಪಬ್, ಬಾರ್&ರೆಸ್ಟೋರೆಂಟ್ ಗಳ ಮೇಲೆ ಸಿಸಿಬಿ ದಾಳಿ- ಮಾಲೀಕರಿಗೆ ನೋಟಿಸ್

    ಬೆಂಗಳೂರು: ನಿನ್ನೆ ತಡ ರಾತ್ರಿ ಸಿಸಿಬಿ ಪೊಲೀಸರು ಅನಧಿಕೃತ ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ.

    ನಗರದ ಮೆಜೆಸ್ಟಿಕ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರದಲ್ಲಿ ದಾಳಿ ನಡೆಸಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಒಟ್ಟು 100ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.

    ಒಟ್ಟು 20ಕ್ಕೂ ಹೆಚ್ಚು ಕಡೆ ನಡೆದ ದಾಳಿಯಲ್ಲಿ ಕೆಲವೆಡೆ ಯುವತಿಯರನ್ನು ಅಕ್ರಮವಾಗಿ ಕೂಡಿಟ್ಟುಕೊಂಡು ಬಾರ್ ಗರ್ಲ್ಸ್ ಆಗಿ ಕೆಲಸ ಮಾಡಿಸುತ್ತಿರುವುದು ಕಂಡು ಬಂದಿದೆ. ದಾಳಿ ವೇಳೆ ಅಕ್ರಮವಾಗಿ ಪಬ್ ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಪಬ್ ಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಆಯಾ ಪಬ್ ಗಳ ಸಿಬ್ಬಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗ್ತಿದೆ.

    ಕೆಲ ಯುವತಿಯರನ್ನು ರಕ್ಷಿಸಿ ಅವರಿಂದಲೂ ಸಿಸಿಬಿ ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ. ಅಕ್ರಮವೆಸಗಿದ ಆಯಾ ಪಬ್ ಗಳು ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವಿಚ್ಚೇದನಕ್ಕಾಗಿ ಪಬ್‍ನಲ್ಲಿ ಹಲ್ಲೆ ಮಾಡಿದ್ರು ಅಂತಾ ಕಥೆ ಹೆಣೆದ ಪತ್ನಿ!

    ವಿಚ್ಚೇದನಕ್ಕಾಗಿ ಪಬ್‍ನಲ್ಲಿ ಹಲ್ಲೆ ಮಾಡಿದ್ರು ಅಂತಾ ಕಥೆ ಹೆಣೆದ ಪತ್ನಿ!

    ಮೈಸೂರು: ಒಂದು ತಿಂಗಳ ಹಿಂದೆ ಪಬ್‍ನಲ್ಲಿ ಯುವತಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿರುವುದು ಸ್ಪಷ್ಟವಾಗಿದೆ.

    ಕೆಲ ದಿನಗಳ ಹಿಂದೆ ಮೈಸೂರಿನ ಜಯಲಕ್ಷ್ಮಿಪುರಂನ ಪಬ್‍ನಲ್ಲಿ ಯುವಕರು ತಮ್ಮ ಮೇಲೆ ಹಲ್ಲೆ ಮಾಡಿದ್ದರು ಎಂದು ಅಮೃತಾ ಹಾಗೂ ಮಹಾಲಕ್ಷ್ಮಿ ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಪ್ರಕಾರ ಉಮೇಶ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.

    ಪ್ರಕರಣ ದಾಖಲಾದ ಬಳಿಕ ಉಮೇಶ್ ಮತ್ತು ಅಮೃತಾ ಪತಿ ಪತ್ನಿ ಎನ್ನುವ ವಿಚಾರ ಗೊತ್ತಾಗಿದೆ. ಉಮೇಶ್ ಅಮೃತಾ ಪ್ರೀತಿಸಿ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಪತಿ ಜೊತೆ ಜಗಳವಾಡಿಕೊಂಡು ಅಮೃತಾ ತವರು ಮನೆ ಸೇರಿದ್ದರು. ಇದಾದ ಬಳಿಕ ವಿಚ್ಛೇದನ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ದ ಎಂದು ಉಮೇಶ್ ಹೇಳಿದ್ದರು.

    ಉಮೇಶ್ ಆರೋಪ ಏನು?
    ನಾನು ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರೂ ಅಮೃತಾ ವಿಚ್ಚೇದನ ನೀಡುವಂತೆ ಮತ್ತೆ ಮತ್ತೆ ಒತ್ತಡ ಹೇರಿದ್ದಾಳೆ. ಇದಕ್ಕೆ ಒಪ್ಪದ್ದಕ್ಕೆ ಪಬ್‍ನಲ್ಲಿ ಆಕೆ ಮತ್ತು ಆಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾಗಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಉಮೇಶ್ ಈಗ ಆರೋಪಿಸಿದ್ದಾರೆ. ಈ ಹಿಂದೆ ನನ್ನ ಕಚೇರಿಯ ಬಳಿ ಕೆಲವರು ದಾಂಧಲೆ ನಡೆಸಿದ್ದರು. ಈ ದಾಂಧಲೆ ಹಿಂದೆ ಅಮೃತ ಕೈವಾಡವಿದೆ ಎನ್ನುವುದು ನನಗೆ ಈಗ ಗೊತ್ತಾಗಿದೆ ಎಂದು ಹೇಳಿದ್ದಾರೆ.

    ಈಗ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಉಮೇಶ್ ಅವರು ದಾಂಧಲೆ ನಡೆಸಿದ್ದಕ್ಕೆ ಪತ್ನಿ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

  • ಸ್ನೇಹಿತನ ಪಬ್ ಮೇಲೆ ದಾಳಿ: ಕ್ರಮ ಕೈಗೊಳ್ಳದಂತೆ ಪೊಲೀಸರ ಮೇಲೆ ನಲಪಾಡ್ ಒತ್ತಡ?

    ಸ್ನೇಹಿತನ ಪಬ್ ಮೇಲೆ ದಾಳಿ: ಕ್ರಮ ಕೈಗೊಳ್ಳದಂತೆ ಪೊಲೀಸರ ಮೇಲೆ ನಲಪಾಡ್ ಒತ್ತಡ?

    ಬೆಂಗಳೂರು: ಸ್ನೇಹಿತನ ಪಬ್ ಮೇಲೆ ಪೊಲೀಸ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸುದ್ದಿಯಾಗಿದ್ದಾನೆ.

    ಅನಧಿಕೃತ ಹಾಗೂ ಕಾನೂನುಬಾಹಿರವಾಗಿ ಪಬ್ ನಲ್ಲಿ ಯುವತಿಯರನ್ನು ಬಳಸಿಕೊಂಡಿದ್ದಕ್ಕೆ ಇಂದಿರಾನಗರದಲ್ಲಿರುವ ಪಬ್ ಮೇಲೆ ಜೀವನ್ ಭೀಮಾ ಪೊಲೀಸರು ದಾಳಿ ನಡೆಸಿದ್ದರು. ಈ ಪ್ರಕರಣ ಸಂಬಂಧ ಯಾರನ್ನೂ ಬಂಧಿಸದಂತೆ ನಲಪಾಡ್ ಹಿರಿಯ ಅಧಿಕಾರಿಗಳಿಂದ ಒತ್ತಡ ಹೇರುತ್ತಿರುವ ವಿಚಾರ ಮೂಲಗಳು ತಿಳಿಸಿವೆ. ಇದನ್ನೂ ಓದಿಕಾಂಗ್ರೆಸ್ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಆರೋಪಿ ನಲಪಾಡ್ ಮಿಂಚಿಂಗ್!

    ನಲಪಾಡ್ ಸ್ನೇಹಿತ ಹರೀಶ್‍ಗೆ ಸೇರಿದ ಪಬ್ ವೊಂದಕ್ಕೆ ಜೀವನ್ ಭೀಮಾ ಪೊಲೀಸರು ದಾಳಿ ನಡೆಸಿ, ಹಲವರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸರ ಮೂಲಕ ಯಾರನ್ನೂ ಬಂಧಿಸಬೇಡಿ ಎಂದು ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾನೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ವಿದ್ವತ್ ಮೇಲೆ ಹಲ್ಲೆ ನಡೆಸಿ, 3 ತಿಂಗಳ ಜೈಲುವಾಸ ಅನುಭವಿಸಿ ಇತ್ತೀಚೆಗೆ ಜಾಮೀನಿನ ಮೇಲೆ ನಲಪಾಡ್ ಬಿಡುಗಡೆಯಾಗಿದ್ದ.

    ಏನಿದು ಪಬ್ ದಾಳಿ?
    ಇಂದಿರಾನಗರದ 80 ಅಡಿ ರಸ್ತೆಯಲ್ಲಿರುವ ಪಬ್ ನಲ್ಲಿ ಅನಧಿಕೃತವಾಗಿ ಯುವತಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಗಳು ಕೇಳಿ ಬಂದಿತ್ತು. ಪಬ್ ನಲ್ಲಿ ಯುವತಿಯರಿಗೆ ತುಂಡು ಬಟ್ಟೆಗಳನ್ನು ನೀಡಿ ಅಶ್ಲೀಲ ನೃತ್ಯ ನಡೆಸಲಾಗುತ್ತಿದ್ದ ಕಾರಣ ಜೀವನ್ ಭೀಮಾ ನಗರ ಪೊಲೀಸರು ದಾಳಿ ನಡೆಸಿ, ಉತ್ತರ ಭಾರತದ 32 ಯುವತಿಯರನ್ನು ರಕ್ಷಣೆ ಮಾಡಿದ್ದು, ಪಬ್ ಮ್ಯಾನೇಜರ್ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಿದ್ದರು.

  • ಪಬ್‍ನಲ್ಲಿ ಯುವತಿ ಕೈಗೆ ಹೊಡೆದು, ಬಟ್ಟೆ ಹಿಡಿದು ಎಳೆದಾಡಿದ ಯುವಕರು!

    ಪಬ್‍ನಲ್ಲಿ ಯುವತಿ ಕೈಗೆ ಹೊಡೆದು, ಬಟ್ಟೆ ಹಿಡಿದು ಎಳೆದಾಡಿದ ಯುವಕರು!

    ಮೈಸೂರು: ಯುವತಿ ಜೊತೆ ಇಬ್ಬರು ಯುವಕರ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ ನಲ್ಲಿ ನಡೆದಿದೆ.

    ರುಕ್ಮಿಣಿ (ಹೆಸರು ಬದಲಾಯಿಸಲಾಗಿದೆ) ಕಿರುಕುಳಕ್ಕೆ ಒಳಗಾದ ಯುವತಿ. ಉಮೇಶ್‍ಕುಮಾರ್ ಹಾಗೂ ವಿವೇಕ್ ಎಂಬವರೇ ಕಿರುಕುಳ ನೀಡಿದ ಪುಂಡ ಯುವಕರು. ಯುವತಿ ಪಬ್‍ಗೆ ಹೋಗಿದ್ದಾಗ ಉಮೇಶ್‍ಕುಮಾರ್, ವಿವೇಕ್ ಮೊದಲಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಯುವತಿ ಕೈಗೆ ಹೊಡೆದು ಬಟ್ಟೆ ಹಿಡಿದು ಎಳೆದಾಡಿದ್ದಾರೆ.

    ಸದ್ಯ ಯುವತಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.

  • ಹೊಸವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ- ಮೊದಲ ಬಾರಿಗೆ ನಗರದೆಲ್ಲೆಡೆ ಖಾಕಿ ಪರೇಡ್

    ಹೊಸವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ- ಮೊದಲ ಬಾರಿಗೆ ನಗರದೆಲ್ಲೆಡೆ ಖಾಕಿ ಪರೇಡ್

    ಬೆಂಗಳೂರು: ಹೊಸವರ್ಷದ ಸ್ವಾಗತಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಮಧ್ಯೆ ಭಯೋತ್ಪಾದಕರ ಹಳೆಯ ವಿಡಿಯೋಗಳು ವೈರಲ್ ಆಗಿದ್ದು, ಯಾವುದೇ ಸಮಯದಲ್ಲಿ ಯಾವ ಪ್ರದೇಶದಲ್ಲಿ ಬೇಕಾದ್ರೂ ದಾಳಿ ನಡೆಯಬಹುದು ಅಂತಾ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ.

    ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೆಂಗಳೂರಿನ ಪ್ರಮುಖ ರಸ್ತೆಗಾಳಾದ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲಿ ಇದೇ ಮೊದಲ ಬಾರಿಗೆ ಪೊಲೀಸರು ಪರೇಡ್ ನಡೆಸ್ತಿದ್ದಾರೆ.

    ಪಬ್‍ಗಳು ಸೇರಿದಂತೆ ಎಲ್ಲಾ ಸಂಭ್ರಮಾಚರಣೆಯ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನು ಇಂದು ರಾತ್ರಿ 2 ಗಂಟೆವರೆಗೆ ಪಬ್ ಮತ್ತು ಬಾರ್‍ಗಳ ಓಪನ್‍ಗೆ ಅವಕಾಶ ನೀಡಿದ್ದು, ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್‍ನಲ್ಲಿ ಸಂಜೆ 8 ಗಂಟೆಯ ನಂತ್ರ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ BMTC ವೋಲ್ವೋ ಬಸ್ ಪ್ರಯಾಣಿಕರಿಗೊಂದು ಸಿಹಿಸುದ್ದಿ

    ಹೊಸ ವರ್ಷಾಚರಣೆಗೆ ಬರುವ ವಾಹನ ಸವಾರರಿಗೆ, ಕಬ್ಬನ್ ರೋಡ್, ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳ ಪಾರ್ಲರ್ ರೋಡ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 9 ಗಂಟೆಯ ನಂತರ ಬಳ್ಳಾರಿ ರೋಡ್‍ನ ಫ್ಲೈ ಓವರ್ ಹೊರತುಪಡಿಸಿ, ನಗರದ ಎಲ್ಲಾ ಫ್ಲೈಓವರ್‍ಗಳ ಮೇಲೆ ವಾಹನ ಓಡಾಟ ನಿಷೇಧಿಲಾಗಿದೆ.

    ಇನ್ನು ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ಆವಲಬೆಟ್ಟ ಮತ್ತು ಕಬ್ಬನ್ ಪಾರ್ಕ್‍ನಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಕಬ್ಬನ್ ಪಾರ್ಕ್, ನಂದಿ ಬೆಟ್ಟ ಮತ್ತು ಆವಲಬೆಟ್ಟಕ್ಕೆ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 8 ಗಂಟೆಯವರೆಗೆ ಎಂಟ್ರಿ ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

    ಮಡಿಕೇರಿ, ಮಂಗ್ಳೂರಲ್ಲೂ ಬಿಗಿ ಭದ್ರೆತೆ: ಪ್ರವಾಸಿಗರ ಹಾಟ್ ಫೇವರಿಟ್ ತಾಣ ಮಡಿಕೇರಿಯಲ್ಲೂ ನ್ಯೂ ಇಯರ್ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈಗಾಗಲೇ ಸಾವಿರಾರು ಪ್ರವಾಸಿಗರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ. ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳು ಕಂಪ್ಲೀಟ್ ಆಗಿ ಬುಕ್ ಆಗಿವೆ. ಹೊಸ ವರ್ಷದ ಸಂಭ್ರಮದ ಹೆಸರಲ್ಲಿ ಯಾವುದೇ ಹುಚ್ಚಾಟ ನಡೀಬಾರ್ದು ಅನ್ನೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.

    ರಾತ್ರಿ 12.30ರ ನಂತ್ರ ಮಡಿಕೇರಿಯಲ್ಲಿ ಎಲ್ಲಿಯೂ ನ್ಯೂಇಯರ್ ಸೆಲಬ್ರೇಷನ್ ಮಾಡುವಂತಿಲ್ಲ. ಅಲ್ಲದೇ ರಸ್ತೆಗಳಲ್ಲಿ ವಿಶ್ ಮಾಡೋ ಹೆಸರಲ್ಲಿ ಯಾರಿಗೂ ತೊಂದರೆ ನೀಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸೆಲಬ್ರೇಷನ್ ಮಾಡುವಂತಿಲ್ಲ. ಮುಖ್ಯವಾಗಿ ಹೋಂಸ್ಟೇಗಳಲ್ಲಿ ಲಿಕ್ಕರ್ ಸಪ್ಲೇ ಮಾಡುವಂತಿಲ್ಲವೆಂದು ಖಡಕ್ ಸೂಚನೆ ನೀಡಿದೆ. ರೆಸಾರ್ಟ್ ಹಾಗೂ ಹೋಂಸ್ಟೇಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲು ಖಾಕಿ ಪಡೆ ನಿಯೋಜಿಸಿದೆ.

    ಮಂಗಳೂರಲ್ಲಿ ವರ್ಷಾಚರಣೆ ವೇಳೆ ತಡರಾತ್ರಿ ರೆಸ್ಟೋರೆಂಟ್, ಅಂಗಡಿ ಮುಂಗಟ್ಟುಗಳು ತೆರೆಯದಂತೆ ಪೊಲೀಸ್ ಕಮೀಷನರ್ ಸೂಚಿಸಿದ್ದಾರೆ. ಈ ಮಧ್ಯೆ ತಡರಾತ್ರಿ ರೆಸ್ಟೋರೆಂಟ್ ಓಪನ್ ಇದ್ರೆ ರೇಡ್ ಮಾಡೋದಾಗಿ ಹಿಂದೂ ಸಂಘಟನೆಗಳು ಎಚ್ಚರಿಸಿದೆ.

  • ಇನ್ನು ಮುಂದೆ ಆಧಾರ್ ಇಲ್ಲದಿದ್ದರೆ ಪಬ್‍ಗಳಿಗೆ ಎಂಟ್ರಿ ಇಲ್ಲ!

    ಇನ್ನು ಮುಂದೆ ಆಧಾರ್ ಇಲ್ಲದಿದ್ದರೆ ಪಬ್‍ಗಳಿಗೆ ಎಂಟ್ರಿ ಇಲ್ಲ!

    ಹೈದರಾಬಾದ್: ಇನ್ನು ಮುಂದೆ ನೀವು ಹೈದರಾಬಾದ್ ಪಬ್‍ಗಳಿಗೆ ಹೋಗುತ್ತಿರಾ? ಹಾಗಾದ್ರೆ ನಿಮ್ಮ ಜೊತೆ ಆಧಾರ್ ಕಾರ್ಡ್ ಇರಲೇಬೇಕು.

    ಪಬ್‍ಗಳಿಗೆ ಬರುವವರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಅದರಲ್ಲೂ ಆಧಾರ್ ಕಾರ್ಡ್ ತೋರಿಸಿದ ಮೇಲೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ತೆಲಂಗಾಣ ಅಬಕಾರಿ ಇಲಾಖೆ ಹೇಳಿದೆ.

    ಇಲಾಖೆ ನಗರದಾದ್ಯಂತ ಇರುವಂತಹ ಪಬ್‍ಗಳ ಮಾಲೀಕರ ಜೊತೆ ಮಾತಾಡಿ, ಇನ್ನು ಮುಂದೆ ಪಬ್‍ಗೆ ಬರುವವರ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ಅದರಲ್ಲಿ ಅವರ ವಯಸ್ಸನ್ನು ನೋಡಿ ಖಚಿತ ಮಾಡಿಕೊಂಡು ನಂತರ ಪ್ರವೇಶಕ್ಕೆ ಅನುಮತಿ ನೀಡಬೇಕು. ಒಂದು ವೇಳೆ 21 ವಯಸ್ಸಿಗಿಂತ ಕಡಿಮೆ ಇರುವ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಿ ಎಂದು ತಿಳಿಸಿದೆ.

    17 ವರ್ಷದ ಹುಡುಗಿಯ ಕೊಲೆ ತನಿಖೆಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ನಗರದ ಹೋಟೆಲ್‍ಗಳಲ್ಲಿ ಅಪ್ರಾಪ್ತರಿಗೆ ಮದ್ಯಪಾನ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕಠಿಣ ಕ್ರಮವನ್ನು ಕೈಗೊಂಡಿದೆ.

    ಪಬ್‍ಗಳಿಗೆ ಆಗಮಿಸುವ ಎಲ್ಲ ಗ್ರಾಹಕರ ಮಾಹಿತಿಗಳನ್ನು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಎಲ್ಲಾ ಪಬ್ ಮತ್ತು ಬಾರ್‍ಗಳ ಮ್ಯಾನೇಜರ್‍ಗಳಿಗೆ ಸರ್ಕಾರ ಸೂಚಿಸಿದೆ.