Tag: ಪಬ್

  • ಪ್ರತಿಷ್ಠಿತ ಪಬ್‍ನಲ್ಲಿ ಹೊಡೆದಾಟ – ಸುನಾಮಿ ಕಿಟ್ಟಿಯಿಂದ ಹಲ್ಲೆ ಆರೋಪ

    ಪ್ರತಿಷ್ಠಿತ ಪಬ್‍ನಲ್ಲಿ ಹೊಡೆದಾಟ – ಸುನಾಮಿ ಕಿಟ್ಟಿಯಿಂದ ಹಲ್ಲೆ ಆರೋಪ

    ಬೆಂಗಳೂರು: ಪ್ರತಿಷ್ಠಿತ ಬಾರ್‌ವೊಂದರಲ್ಲಿ ಕಿರುತೆರೆ ನಟ ಹಾಗೂ ಆತನ ಗೆಳೆಯರು ಕಂಠ ಪೂರ್ತಿ ಕುಡಿದು ಶಾಂಪೇನ್ ಬಾಟೆಲ್ ಓಪನ್ ಮಾಡುವ ವಿಚಾರಕ್ಕೆ ಗಲಾಟೆ ಮಾಡಿದ ಆರೋಪ ಬಂದಿದೆ.

    ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಆತನ ಗೆಳೆಯ ಚೇತನ್ ಗೌಡ ಶಾಂಪೇನ್ ಓಪನ್ ಮಾಡಿದ್ದಾಗ ಪಕ್ಕದಲ್ಲಿ ಇದ್ದ ಕೃಷ್ಣ ಮತ್ತು ಪ್ರಶಾಂತ್ ಮೇಲೆ ಚೆಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ಮತ್ತು ಪ್ರಶಾಂತ್ ಶಾಂಪೇನ್ ಚೆಲ್ಲಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಆತನ ಗೆಳೆಯ ಚೇತನ್ ಗೌಡ ಇಬ್ಬರು ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಚಿರತೆ ಆತಂಕ – ಶಾಲೆಗಳಿಗೆ ರಜೆ

    POLICE JEEP

    ಘಟನೆ ಸಂಬಂಧಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಶಾಂತ್ ದೂರು ದಾಖಲಿಸಿದ್ದು, ಅಪರಿಚಿತ ವ್ಯಕ್ತಿಗಳು ನಮ್ಮ ಜೊತೆಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನೂ ಸುನಾಮಿ ಕಿಟ್ಟಿ ಹಾಗೂ ಆತನ ಸ್ನೇಹಿತ ದೂರು ನೀಡಿದ್ದು, ಮದ್ಯ ಚಲ್ಲಿದ್ದ ಕಾರಣಕ್ಕೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಎರಡು ಕೇಸ್ ದಾಖಲು ಮಾಡಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 500ಮೀ. ದೂರದವರೆಗೆ ಕಾರನ್ನು ಎಳೆದೊಯ್ದ ಟ್ರಕ್- ಸಮಾಜವಾದಿ ಮುಖಂಡನಿದ್ದ ಕಾರು ಜಖಂ

    Live Tv
    [brid partner=56869869 player=32851 video=960834 autoplay=true]

  • ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್

    ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್

    ಮಂಗಳೂರು: ಮಂಗಳೂರಿನ ಪಬ್ ಮೇಲೆ ಭಜರಂಗದಳ ದಾಳಿ ವಿಚಾರವಾಗಿ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

    ಸೋಮವಾರ ರಾತ್ರಿ ಕಾಲೇಜು ಫೇರ್‌ವೆಲ್ ನೆಪದಲ್ಲಿ ಮಂಗಳೂರಿನ ಪ್ರತಿಷ್ಠಿತ ರಿ-ಸೈಕಲ್ ದಿ ಲಾಂಜ್ ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡಿದ್ದಾರೆ. ಈ ವೇಳೆ ಏಕಾಏಕಿ ಪಬ್‍ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬುದ್ಧಿ ಹೇಳಿ ಪಬ್‍ನಿಂದ ಹೊರಗೆ ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.  ಇದನ್ನೂ ಓದಿ: ಇತ್ತೀಚಿನ ನಡೆಯುತ್ತಿರುವ ಕ್ಷುಲ್ಲಕ ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ: ಮಸ್ಕ್

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಶಶಿಕುಮಾರ್ ಅವರು, ನಗರದಲ್ಲಿ ಯಾವುದೇ ಪಬ್ ಮೇಲೆ ದಾಳಿ ಆಗಿಲ್ಲ. ಬಲ್ಮಠದ ಪಬ್ ಮುಂದೆ ಭಾನುವಾರ ರಾತ್ರಿ ಹತ್ತು-ಹನ್ನೆರೆಡು ಮಂದಿ ಜಮಾಯಿಸಿದ್ದರು. ಪಬ್ ಒಳಗೆ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಅವರದ್ದಾಗಿತ್ತು. ಈ ಬಗ್ಗೆ ಬೌನ್ಸರ್ ಜೊತೆ ಸಂಘಟನೆಯೊಂದಕ್ಕೆ ಸೇರಿದ ಯುವಕರು ಮಾತನಾಡಿದ್ದರು. ಬೌನ್ಸರ್ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾನೆ. ಇದನ್ನೂ ಓದಿ: ಮಂಗಳೂರಿನ ಪಬ್‍ನಲ್ಲಿ ವಿದ್ಯಾರ್ಥಿಗಳ ಮೋಜು – ಪಾರ್ಟಿಗೆ ಭಜರಂಗದಳದಿಂದ ತಡೆ

    ಇಲ್ಲಿ ಯಾವುದೇ ಅಟ್ಯಾಕ್, ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ. ತಡರಾತ್ರಿ ನಡೆದ ಘಟನೆಗೂ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆ ಪ್ರಕರಣದಲ್ಲಿ ಭಾಗಿಯಾದವರು ಯಾರೂ ನಿನ್ನೆ ಪಬ್‍ನ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಇನ್ನೂ ಈ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನ ಪಬ್‍ನಲ್ಲಿ ವಿದ್ಯಾರ್ಥಿಗಳ ಮೋಜು – ಪಾರ್ಟಿಗೆ ಭಜರಂಗದಳದಿಂದ ತಡೆ

    ಮಂಗಳೂರಿನ ಪಬ್‍ನಲ್ಲಿ ವಿದ್ಯಾರ್ಥಿಗಳ ಮೋಜು – ಪಾರ್ಟಿಗೆ ಭಜರಂಗದಳದಿಂದ ತಡೆ

    ಮಂಗಳೂರು: ಭಜರಂಗ ದಳದ ಕಾರ್ಯಕರ್ತರು ಪಬ್ ಮೇಲೆ ದಾಳಿ ನಡೆಸಿ ವಿದ್ಯಾರ್ಥಿಗಳ ಫೇರ್‌ವೆಲ್ ಪಾರ್ಟಿಗೆ ತಡೆ ಒಡ್ಡಿದ್ದಾರೆ.

    ಸೋಮವಾರ ರಾತ್ರಿ ಕಾಲೇಜು ಫೇರ್‌ವೆಲ್ ನೆಪದಲ್ಲಿ ಮಂಗಳೂರಿನ ಪ್ರತಿಷ್ಠಿತ ರಿ-ಸೈಕಲ್ ದಿ ಲಾಂಜ್ ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಒರಾಯನ್ ಮಾಲ್ ಮುಂಭಾಗ ನಡೆಯಿತು ಅಚಾತುರ್ಯ: ಅಮಲಿನ ಶೋಕಿಗೆ ಬಡಜೀವ ಬಲಿ

    ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ತುಂಡುಡುಗೆ ತೊಟ್ಟು ಫೇರ್‌ವೆಲ್ ಪಾರ್ಟಿ ಮಾಡಿದ್ದಾರೆ. ಈ ವೇಳೆ ಏಕಾಏಕಿ ಪಬ್‍ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬುದ್ಧಿ ಹೇಳಿ ಪಬ್‍ನಿಂದ ಹೊರಗೆ ಕಳುಹಿಸಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ಲಿಪ್ ಲಾಕ್ ವಿಡಿಯೋ ಮೂಲಕ ಮಂಗಳೂರಿನ ಕಾಲೇಜಿನ ವಿದ್ಯಾರ್ಥಿಗಳು ಸುದ್ದಿಯಾಗಿದ್ದರು. ಈಗ ಪದವಿ ವಿದ್ಯಾರ್ಥಿಗಳಿಂದ ಪಬ್‍ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಭಜರಂಗದಳದ ಕಾರ್ಯಕರ್ತರು ಪಬ್‍ಗೆ ನುಗ್ಗಿದ್ದರು.

    ನಂತರ ಘಟನೆ ಕುರಿತಂತೆ ಮಾಹಿತಿ ದೊರೆತ ಪೊಲೀಸರು, ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದಾರೆ. ಬಳಿಕ ಅರ್ಧದಲ್ಲಿಯೇ ಪಾರ್ಟಿಯನ್ನು ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಪಬ್‍ನಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ಹಿಂದೂಗಳಿಂದ ನೆಮ್ಮದಿ ಹಾಳಾಗಿದ್ದಕ್ಕೆ ಉಗ್ರ ಸಂಘಟನೆ ಸೇರಲು ಮುಂದಾಗಿದ್ದೆ: ಶಂಕಿತ ಉಗ್ರ

    ಮತ್ತೊಂದೆಡೆ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಬ್ಬರು ನಟೋರಿಯಸ್ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ. ಧೀರಜ್ ಕುಮಾರ್, ಪ್ರೀತಂ ಪೂಜಾರಿ ಎಂಬ ಇಬ್ಬರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ಕೊಲೆ ಯತ್ನ, ಸುಲಿಗೆ, ದರೋಡೆಗೆ ಯತ್ನ, ಹಲ್ಲೆ, ಅಪರಾಧಕ್ಕೆ ಒಳಸಂಚು ಪ್ರಕರಣಗಳಲ್ಲಿ ಇವರಿಬ್ಬರು ಪದೇ ಪದೇ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಅಮಲಿನಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು – ವೀಡಿಯೋ ವೈರಲ್

    ಕುಡಿದ ಅಮಲಿನಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು – ವೀಡಿಯೋ ವೈರಲ್

    ಲಕ್ನೋ: ಕುಡಿದ ಅಮಲಿನಲ್ಲಿದ್ದ ಯುವತಿಯರಿಬ್ಬರು ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಗುರುವಾರ ತಡರಾತ್ರಿ ಉತ್ತರ ಪ್ರದೇಶದ ಲಕ್ನೋದ ಅನ್‍ಪ್ಲಗ್ಡ್ ಕೆಫೆಯ ಹೊರಗೆ ಈ ಘಟನೆ ನಡೆದಿದ್ದು, ವ್ಯಕ್ತಿ ಮೇಲೆ ಯುವತಿಯರಿಬ್ಬರು ಹಲ್ಲೆ ನಡೆಸಿರುವ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಇದನ್ನೂ ಓದಿ: ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಬಿದ್ದು ಬೆಂಕಿ – ಇಬ್ಬರು ಸುಟ್ಟು ಕರಕಲು, ಚಾಲಕ ಗಂಭೀರ

    33 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಪಬ್ ಹೊರಗೆ ಯುವತಿ ವ್ಯಕ್ತಿಗೆ ಮುಷ್ಟಿ ಮಾಡಿ ಹೊಡೆಯುತ್ತಿದ್ದರೆ, ಜನರು ತಮ್ಮ ಫೋನ್‍ಗಳಲ್ಲಿ ಗಲಾಟೆ ವೀಡಿಯೋವನ್ನು ರೆಕಾರ್ಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಪಬ್‍ನ ಪ್ರವೇಶ ದ್ವಾರದಲ್ಲಿ ಇರಿಸಲಾಗಿದ್ದ ಫ್ಲವರ್ ಪಾಟ್‍ನಿಂದಲೂ ವ್ಯಕ್ತಿ ಮೇಲೆ ಯುವತಿ ಹಲ್ಲೆ ನಡೆಸಿದ್ದಾಳೆ.

    ವಿಭೂತಿ ಖಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮ್ಮಿಟ್ ಬಿಲ್ಡಿಂಗ್‍ನಲ್ಲಿ ಗುರುವಾರ ಈ ಘಟನೆ ನಡೆದಿದೆ. ಗಲಾಟೆ ಜೊತೆಗೆ ಕೆಲಕಾಲ ಮಾತಿನ ಚಕಮಕಿ ಮುಂದುವರಿದಿದ್ದರಿಂದ ಕೊನೆಗೆ ಬೌನ್ಸರ್‌ಗಳು ಮತ್ತು ಪಬ್‍ನ ಇತರ ನಿರ್ವಾಹಕರು ಯುವತಿಯರನ್ನು ತಡೆದಿದ್ದಾರೆ. ಇದೀಗ ವೀಡಿಯೋದಲ್ಲಿದ್ದ ಇಬ್ಬರು ಯುವತಿಯರನ್ನು ಗುರುತಿಸಿ ಪೊಲೀಸರು ಬಂಧಿಸಿದ್ದಾರೆ ಮತ್ತು ಇಬ್ಬರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಆದರೆ ಹಲ್ಲೆಗೊಳಗಾದ ವ್ಯಕ್ತಿ ಈ ಬಗ್ಗೆ ಯಾವುದೇ ದೂರು ದಾಖಲಿಸಲು ಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಪಬ್‍ನಲ್ಲಿ ಕನ್ನಡ ಹಾಡು ಗಲಾಟೆ- ಕ್ಷಮೆಯಾಚಿಸಿದ ಡಿಜೆ ಸಿದ್ದಾರ್ಥ್

    ಪಬ್‍ನಲ್ಲಿ ಕನ್ನಡ ಹಾಡು ಗಲಾಟೆ- ಕ್ಷಮೆಯಾಚಿಸಿದ ಡಿಜೆ ಸಿದ್ದಾರ್ಥ್

    – ಅತಿ ಹೆಚ್ಚು ಇಷ್ಟವಾಗುವ ಭಾಷೆ ಕನ್ನಡ
    – ಪುನೀತ್ ರಾಜ್ ಕುಮಾರ್ ಅಂದ್ರೆ ತುಂಬಾ ಇಷ್ಟ

    ಬೆಂಗಳೂರು: ಕನ್ನಡ ಹಾಡು ಹಾಕಲ್ಲ ಎಂದು ಹಲ್ಲೆಗೆ ಮುಂದಾಗಿ ಸುದ್ದಿಯಾಗಿದ್ದ ಕೋರಮಂಗಲದ ಬದ್ಮಾಶ್ ಪಬ್ ಡಿಜೆ ಸಿದ್ದಾರ್ಥ್ ಇದೀಗ ಕ್ಷಮೆಯಾಚಿಸಿದ್ದಾರೆ.

    ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಿದ್ದಾರ್ಥ್, ನಾನು ಪುನೀತ್ ರಾಜ್ ಕುಮಾರ್ ಅಭಿಮಾನಿ. ಪ್ರತಿ ದಿನ ಗೊಂಬೆ ಹೇಳುತೈತೆ ಹಾಡು ಪ್ಲೇ ಮಾಡ್ತಾ ಇದ್ದೆ. ಆದರೆ ಕಾರಣಾಂತರಗಳಿಂದ ಶನಿವಾರ ರಾತ್ರಿ ಕನ್ನಡ ಹಾಡು ಪ್ಲೇ ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ನಾನು ಕ್ಷೇಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಸಿದ್ದಾರ್ಥ್ ಕ್ಷಮೆ:
    ಕಾರಣಾಂತರದಿಂದ ಶನಿವಾರ ರಾತ್ರಿ ಕನ್ನಡ ಹಾಡನ್ನು ಪ್ಲೇ ಮಾಡಿಲ್ಲ ಎಂದು ಒಪ್ಪಿಕೊಂಡ ಡಿಜೆ, ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿಯೇ. ಕಾವೇರಿ ನೀರು ಕುಡಿದು ಬೆಳೆದಿದ್ದೇನೆ. ನನಗೆ ಅತಿ ಹೆಚ್ಚು ಇಷ್ಟವಾಗುವ ಭಾಷೆ ಅಂದರೆ ಕನ್ನಡ. ನಾನು ಪ್ರತಿ ಬಾರಿಯೂ ಕನ್ನಡ ಹಾಡನ್ನು ಪ್ಲೇ ಮಾಡ್ತೇನೆ. ಪುನೀತ್ ರಾಜ್ ಕುಮಾರ್ ಎಂದರೆ ನನಗೆ ತುಂಬಾ ಇಷ್ಟ. ಬೊಂಬೆ ಹೇಳುತೈತೆ ಹಾಡನ್ನು ಪ್ರತಿ ಬಾರಿಯೂ ಪ್ಲೇ ಮಾಡ್ತೇನೆ. ನಿನ್ನೆ ತಡವಾಗಿದ್ದರಿಂದ ಕನ್ನಡ ಹಾಡು ಹಾಕಲು ಸಾಧ್ಯವಾಗಿಲ್ಲ.

    ಸಡನ್ ಆಗಿ 12.30ಕ್ಕೆ ಪಬ್ ಕ್ಲೋಸ್ ಮಾಡಲು ಹೇಳಿದ್ರು. ಹಾಗಾಗಿ ಕನ್ನಡ ಹಾಡು ಹಾಕಲು ಸಾಧ್ಯವಾಗಿಲ್ಲ. ಕನ್ನಡ ಹಾಡು ಪ್ಲೇ ಮಾಡದಿದ್ದಕ್ಕೆ ನಾನು ಕ್ಷಮೆ ಕೇಳ್ತೇನೆ. ಆದರೆ ಸುಮಿತಾ ಹಾಗೂ ಸ್ನೇಹಿತರು ಮಾಡುತ್ತಿರುವ ಆರೋಪ ಸುಳ್ಳು. ಮ್ಯೂಸಿಕ್ ಸಿಸ್ಟಂ ಆಫ್ ಮಾಡಿದ ಮೇಲೆ ಕನ್ನಡ ಹಾಡು ಯಾಕೆ ಹಾಕಿಲ್ಲ ಅಂದ್ರು. ಮೊದಲು ಅವರು ಕನ್ನಡ ಹಾಡು ಹಾಕಲು ಕೇಳಿಲ್ಲ. ಸಿಸ್ಟಂ ಆಫ್ ಆಗಿದ್ರಿಂದ ಮತ್ತೆ ಪ್ಲೇ ಮಾಡಲು ಕಷ್ಟ ಎಂದೆ. ಅವರು 10 ಜನ ನಿರಂತರವಾಗಿ ಬೈಯುತ್ತಲೇ ಇದ್ರು.

    ಕೆಟ್ಟದಾಗಿ ಬೈದಾಗ ನಾನು ಒಂದೆರಡು ಮಾತು ಬೈದಿದ್ದೇನೆ. ಡಿಜೆ ಗೆ ಕನ್ನಡ ಬರಲ್ಲ ಎಂದು ಅವರು ಹೇಳಿದ್ದಾರೆ. ನಾನು ಕನ್ನಡದಲ್ಲೇ ಅವರ ಹತ್ತಿರ ಮಾತಾಡಿದ್ದೇನೆ. ಸಮಯ ಬಂದಾಗ ನಾನು ಮಾಧ್ಯಮಕ್ಕೆ ಬಂದು ಮಾತಾಡ್ತೇನೆ ಎಂದು ಡಿಜೆ ತಿಳಿಸಿದ್ದಾರೆ. ಅಲ್ಲದೆ ಫೇಸ್ ಬುಕ್ ನಲ್ಲಿ ಬೊಂಬೆ ಹೇಳುತೈತೆ ಹಾಡು ಹಾಕಿದ್ದ ವೀಡಿಯೋ ಕೂಡ ಶೇರ್ ಮಾಡಿದ್ದಾರೆ.

  • ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಬೆಂಗಳೂರು: ಬೆಳಗಾವಿ ಮಾತ್ರವಲ್ಲ ಬೆಂಗಳೂರಿನಲ್ಲೂ ಅನ್ಯಭಾಷಿಕರ ದರ್ಬಾರ್ ಆರಂಭವಾಗಿದೆ. ಪಬ್‍ನಲ್ಲಿ ಕನ್ನಡ ಹಾಡು ಕೇಳೋದೇ ತಪ್ಪಾ ಅನ್ನೋ ಪ್ರಶ್ನೆ ಎದ್ದಿದೆ. ಕನ್ನಡ ಹಾಡು ಕೇಳಿದ್ದಕ್ಕೆ ಡಿಜೆ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಪಬ್‍ನಲ್ಲಿ ಈ ಘಟನೆ ನಡೆದಿದೆ. ವಿವೇಕನಗರದ ನಿವಾಸಿ ಸುಮಿತಾ ಫ್ಯಾಮಿಲಿ ನಿನ್ನೆ ರಾತ್ರಿ ಬದ್ಮಾಶ್ ಪಬ್‍ನಲ್ಲಿ ಸಹೋದರ ನಂದಕಿಶೋರ್ ಬರ್ತ್ ಡೇ ಪಾರ್ಟಿಗೆ ಬಂದಿತ್ತು. ಬರೀ ಅನ್ಯಭಾಷೆ ಹಾಡುಗಳನ್ನೇ ಪ್ಲೇ ಮಾಡ್ತಿದ್ದ ಡಿಜೆಗೆ ಕನ್ನಡ ಹಾಡು ಹಾಕಿ ಅಂತ ಸುಮಿತಾ ಕುಟುಂಬ ಕೇಳಿಕೊಂಡಿದೆ. ಈ ವೇಳೆ ಡಿಜೆ, ಕನ್ನಡ ಗಿನ್ನಡ ಇಲ್ಲ, ಕನ್ನಡ ಬೇಕು ಅಂದ್ರೇ ಈ ಪಬ್ ಗೆ ಬರಬೇಡಿ ಎಂದು ಆವಾಜ್ ಹಾಕಿದ್ದಾನೆ. ಇದನ್ನೂ ಓದಿ: 40 ವರ್ಷಗಳ ನಂತರ ತನ್ನ ಮೂಲ ಹುಡುಕುತ್ತಾ ಬಂದ ಸ್ವೀಡನ್ ಪ್ರಜೆ!

    ಆವಾಜ್ ಮಾತ್ರವಲ್ಲ ಡಿಜೆ ಸಿದ್ದಾರ್ಥ ಅಲಿಯಾಸ್ ಡಿಜೆ ಅಪೋಸಿಟ್ ಹಲ್ಲೆ ಮಾಡಲು ಸಹ ಮುಂದಾಗಿದ್ದ. ರಾತ್ರಿ 8:30 ರಿಂದ 12:30ರ ವರೆಗೂ ಕೇಳಿಕೊಂಡ್ರು ಕನ್ನಡ ಸಾಂಗ್ ಪ್ಲೇ ಮಾಡಲೇ ಇಲ್ಲ ಎಂದು ಕುಟುಂಬ ಆರೋಪಿಸಿದೆ. ಇದರಿಂದ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತು ಎಂಬುದು ಸ್ಪಷ್ಟವಾಗಿದೆ. ಕನ್ನಡಿಗರು ಬೆಂಗಳೂರಿನ ಪಬ್ ಗೆ ಹೋಗೊ ಹಾಗೇ ಇಲ್ವಾ, ಪಬ್ ಗೆ ಹೋದ್ರೆ ಕನ್ನಡ ಸಾಂಗ್ ಹಾಕಿ ಅಂತ ಕೇಳಲೇಬಾರದಾ ಎಂಬ ಅನುಮಾನ ಮೂಡಿದೆ.

  • 9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    ಲಂಡನ್: ಬ್ರಿಟಿಷ್ ವ್ಯಕ್ತಿಯೋರ್ವ 9 ಗಂಟೆಯಲ್ಲಿ 51 ಪಬ್ ಸುತ್ತಾಡುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಹೌದು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನವೆಲ್ಲ ಪ್ರಯತ್ನಿಸಿದರೂ 7-8 ಪಬ್‍ಗಳಿಗೆ ಹೋಗಿ ಬರಬಹುದು. ಆದರೆ ಕೇಂಬ್ರಿಡ್ಜ್ ಶೈರ್‍ನ ಸೇಂಟ್ ನಿಯೋಟ್ಸ್‌ನ ಮ್ಯಾಟಿ ಎಲ್ಲಿಸ್, 8 ಗಂಟೆ, 52 ನಿಮಿಷ ಮತ್ತು 37 ಸೆಕೆಂಡುಗಳಲ್ಲಿ ಒಟ್ಟು 51 ಪಬ್‍ಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆಯಲು ಪ್ರತಿ ಪಬ್‍ನಲ್ಲಿಯೂ ಕನಿಷ್ಠ 125 ಮಿಲಿ ಕುಡಿದಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಕಿತ್ತಳೆ ರಸ ಮತ್ತು ಡಯಟ್ ಕೋಕ್ ಅನ್ನು ಅವರ ಆರೋಗ್ಯಕ್ಕೆ ಉತ್ತಮ ಎಂದು ನಾಲ್ಕು ಪಿಂಟ್ ಬಿಯರ್ ಜೊತೆಗೆ ಸೇವಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

     

    View this post on Instagram

     

    A post shared by Matt Ellis (@smilinggrape)

    ಈ ಕುರಿತಂತೆ ಮಾತನಾಡಿದ ಅವರು, ನನ್ನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಾಗಿ ಕುಡಿಯುವುಲ್ಲ. ಬಹುಶಃ ಹಲವು ವರ್ಷಗಳ ಹಿಂದೆ ನಾನು ಆಲ್ಕೋಹಾಲ್ ಯುಕ್ತಪಾನೀಯಗಳನ್ನು ಸೇವಿಸುತ್ತಿದ್ದೆ. ಆದರೆ ಈಗ ಅಲ್ಲ “ಎಂದು ಹೇಳಿದ್ದಾರೆ. ಅಲ್ಲದೇ 24 ಗಂಟೆಯೊಳಗೆ ಅತೀ ಹೆಚ್ಚು ಪಬ್ ಮತ್ತು ನೈಟ್ ಕ್ಲಬ್‍ಗಳಿಗೆ ಭೇಟಿ ನೀಡಲು ಪ್ರಯತ್ನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ

  • ಬೆಂಗಳೂರು ಗ್ಯಾಂಗ್ ರೇಪ್ ಕೇಸ್ – ಆರೋಪಿಗಳ ಬಳಿ ಸಾವಿರಕ್ಕೂ ಹೆಚ್ಚು ವಿಡಿಯೋ ಪತ್ತೆ

    ಬೆಂಗಳೂರು ಗ್ಯಾಂಗ್ ರೇಪ್ ಕೇಸ್ – ಆರೋಪಿಗಳ ಬಳಿ ಸಾವಿರಕ್ಕೂ ಹೆಚ್ಚು ವಿಡಿಯೋ ಪತ್ತೆ

    ಬೆಂಗಳೂರು: ಬಾಂಗ್ಲಾದೇಶ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ ಬಳಿ ಸಾವಿರಕ್ಕೂ ಹೆಚ್ಚು ವಿಡಿಯೋ ಸಿಕ್ಕಿವೆ.

    ಬಾಂಗ್ಲಾದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ರೇಪ್ ಮಾಡಿದ್ದ ವಿಡಿಯೋ ದೇಶದಲ್ಲಿ ವೈರಲ್ ಆಗುತ್ತಿದ್ದಂತೆ ತನಿಖೆಗಿಳಿದ ಪೊಲೀಸರು, ಅದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ ಎನ್ನುವುದನ್ನು ಪತ್ತೆ ಮಾಡಿದ್ದರು. ತಕ್ಷಣ ಪ್ರಕರಣ ದಾಖಲಿಸಿಕೊಂಡು ಹತ್ತಕ್ಕೂ ಹೆಚ್ಚು ಜನ ಆರೋಪಿಗಳನ್ನು ಬಂಧಿಸಿದ್ದರು. ಇದನ್ನೂ ಓದಿ: ಗ್ಯಾಂಗ್ ರೇಪ್ ಪ್ರಕರಣ – ಟಿಕ್‍ಟಾಕ್ ಸ್ಟಾರ್‌ನಿಂದ ಬೆಂಗಳೂರಿಗೆ ಯುವತಿಯರ ಸಪ್ಲೈ..!

    ವಿಚಾರಣೆ ವೇಳೆ ಗ್ಯಾಂಗ್ ರೇಪ್ ಮಾಡಿದ ಯುವಕರ ಮೊಬೈಲ್ ಪರಿಶೀಲನೆ ವೇಳೆ ಪೊಲೀಸರಿಗೆ ಮತ್ತಷ್ಟು ವಿಚಾರಗಳು ಬಯಲಿಗೆ ಬಂದಿದೆ. ಆರೋಪಿಗಳ ಮೊಬೈಲಿನಲ್ಲಿ ಯುವಕ – ಯುವತಿಯರು, ಅರೆಬೆತ್ತಲೆಯಾಗಿ ಡಾನ್ಸ್ ಮಾಡಿರುವ ಸಾವಿರಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿವೆ.

    ಕೆಲವು ಮನೆಯಲ್ಲೇ ಕುಡಿದ ವೇಳೆ ಡಾನ್ಸ್ ಮಾಡಿ ವಿಡಿಯೋ ಮಾಡಿದ್ದರೆ ಇನ್ನೂ ಕೆಲವು, ಡಾನ್ಸ್ ಬಾರ್, ಪಬ್, ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಅಶ್ಲೀಲವಾಗಿ ಡಾನ್ಸ್ ಮಾಡಿರುವ ವಿಡಿಯೋಗಳು ಪತ್ತೆಯಾಗಿವೆ. ಇದನ್ನೂ ಓದಿ: ನಿಲ್ಲಿಸದೇ ಇದ್ರೆ ಗಾಡಿ ಒಳಗಡೆ ಮೂತ್ರ ಮಾಡ್ತೀನಿ – ಗ್ಯಾಂಗ್ ರೇಪ್ ಆರೋಪಿಗೆ ಗುಂಡೇಟು

    ಸಂತ್ರಸ್ತ ಯುವತಿ ಮತ್ತು ಆರೋಪಿಗಳು ಸೇರಿದಂತೆ ಹತ್ತಾರು ಜನ ಯುವಕ – ಯುವತಿಯರು ಬಾಂಗ್ಲಾದೇಶ ದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದು, ಎಲ್ಲರೂ ಕೂಡ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.

    ಬಾಂಗ್ಲಾದೇಶದಿಂದ ಯುವತಿಯರನ್ನು ಕರೆತರುತ್ತಿದ್ದ ಕೆಲ ಯುವಕರು, ನಗರದ ಕೆಲ ಪ್ರತಿಷ್ಠಿತ ಲೇಔಟ್ ಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ಕೆಲ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಇದೇ ವಿಚಾರದ ಹಣ ಹಂಚಿಕೆ ವಿಚಾರಕ್ಕೆ ಗಲಾಟೆ ನಡೆದು, ಯುವತಿ ಮೇಲೆ ಹಲ್ಲೆ ಗ್ಯಾಂಗ್ ರೇಪ್ ಮಾಡಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು.

    ಈ ರೀತಿ ಅಕ್ರಮವಾಗಿ ಬಾಂಗ್ಲಾದೇಶ, ಸೇರಿದಂತೆ ವಿವಿಧ ದೇಶಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವರ ವಿರುದ್ಧ ಪೊಲೀಸರು ಈಗ ವಿಶೇಷ ಕಾರ್ಯಾಚರಣೆಗೆ ಇಳಿದಿದ್ದಾರೆ.

  • ಬಲವಂತವಾಗಿ ಪತ್ನಿಗೆ ಮದ್ಯ ಕುಡಿಸಿ ಫೋಟೋ ಕ್ಲಿಕ್ – ಬ್ಲ್ಯಾಕ್‍ಮೇಲ್

    ಬಲವಂತವಾಗಿ ಪತ್ನಿಗೆ ಮದ್ಯ ಕುಡಿಸಿ ಫೋಟೋ ಕ್ಲಿಕ್ – ಬ್ಲ್ಯಾಕ್‍ಮೇಲ್

    – ಪಬ್, ಬಾರ್‌ಗೆ ಕರ್ಕೊಂಡು ಹೋಗ್ತಿದ್ದ
    – ದಪ್ಪ ಇದ್ದೀಯಾ ಎಂದು ಹಿಂಸೆ

    ಬೆಂಗಳೂರು: ಪತಿ ಪ್ರತಿದಿನ ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದು, ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಗಂಡನ ವಿರುದ್ಧ ದೂರು ದಾಖಲಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    27 ವರ್ಷದ ಮಹಿಳೆ ಪತಿಯ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪತಿಯನ್ನು ರವೀಂದ್ರನಾಥನ್ ಎಂದು ಗುರುತಿಸಲಾಗಿದೆ. 2 ವರ್ಷದ ಹಿಂದೆ ಮಹಿಳೆ ರವೀಂದ್ರನಾಥನ್ ಜೊತೆ ಮದುವೆಯಾಗಿದ್ದು, ಬೆಂಗಳೂರಿನ ಚಿಕ್ಕಮಾವಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

    ಮದುವೆ ನಂತರ ನಾವು ಅನ್ಯೋನ್ಯವಾಗಿದ್ದೆವು. ಆದರೆ ದಿನ ಕಳೆದಂತೆ ಪತಿ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದನು. ಮನೆಯಲ್ಲಿಯೇ ಪ್ರತಿದಿನ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದನು. ಒಂದು ವೇಳೆ ನಾನು ಮದ್ಯಪಾನ ಮಾಡಲು ನಿರಾಕರಿಸಿದರೆ ಥಳಿಸುತ್ತಿದ್ದನು. ಅಷ್ಟೇ ಅಲ್ಲದೇ ಪತಿ ಆಗಾಗ ನನ್ನನ್ನು ಬಾರ್ ಮತ್ತು ಪಬ್‍ಗಳಿಗೆ ಕರೆದುಕೊಂಡು ಹೋಗುತ್ತಿದ್ದನು. ಅಲ್ಲಿಯೂ ಸಹ ಬಲವಂತವಾಗಿ ಮದ್ಯಪಾನ ಮಾಡಿಸುತ್ತಿದ್ದನು ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪತಿ ನನ್ನ ಫೋಟೋಗಳನ್ನು ತನ್ನ ಫೋನಿನಲ್ಲಿ ತೆಗೆದುಕೊಳ್ಳುತ್ತಿದ್ದನು. ನಂತರ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದಕರಿಗೆ ಹಾಕಿದ್ದಾನೆ. ಅಲ್ಲದೇ ಕೆಲಸಕ್ಕೆ ಹೋಗಿ ಮನೆಯ ಖರ್ಚುಗಳನ್ನು ನೀನೆ ನೋಡಿಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.

    ಆರೋಪಿ ರವೀಂದ್ರನಾಥನ್ ಮಹಿಳೆಗೆ ನೀನು ದಪ್ಪಗಿದ್ದೀಯಾ, ನೋಡಲು ಚೆನ್ನಾಗಿಲ್ಲ ಎಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಸದ್ಯಕ್ಕೆ ಮಹಿಳೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಆರೋಪಿ ರವೀಂದ್ರನಾಥನ್ ವಿರುದ್ಧ ದೂರು ದಾಖಲಾಗಿದ್ದು, ಬಸವನಗುಡಿ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

  • ಮಂಗಳವಾರದಿಂದ ಬಾರ್‌, ಪಬ್‌, ರೆಸ್ಟೋರೆಂಟ್‌ ಓಪನ್‌ – ಷರತ್ತುಗಳು ಏನು?

    ಮಂಗಳವಾರದಿಂದ ಬಾರ್‌, ಪಬ್‌, ರೆಸ್ಟೋರೆಂಟ್‌ ಓಪನ್‌ – ಷರತ್ತುಗಳು ಏನು?

    ಬೆಂಗಳೂರು: ಮಂಗಳವಾರದಿಂದ ದೇಶ, ರಾಜ್ಯದಲ್ಲಿ ಅನ್‍ಲಾಕ್-4 ಪ್ರಕ್ರಿಯೆ ಆರಂಭವಾಗುತ್ತಿದೆ. ರಾಜ್ಯ ಸರ್ಕಾರ, ಕೇಂದ್ರ ಪ್ರಕಟಿಸಿದ್ದ ಅನ್‍ಲಾಕ್ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಾರಿಗೆ ತಂದಿದೆ.

    ಲಾಕ್‍ಡೌನ್‍ನಿಂದಾಗಿ ಆರು ತಿಂಗಳಿಂದ ಬಂದ್ ಆಗಿದ್ದ ಬಾರ್, ಪಬ್, ರೆಸ್ಟೋರೆಂಟ್‍ಗಳು ನಾಳೆಯಿಂದ ಓಪನ್ ಆಗಲಿವೆ. ಆದರೆ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಸೂಚಿಸಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ. ಬಾರ್ ಮತ್ತು ರೆಸ್ಟೋರೆಂಟ್ ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ.
    – ರೂಂ, ಕ್ಯಾಬಿನ್ ಗಳ ಬಾಗಿಲ ಬಾಗಿಲ ಬಳಿ ಮದ್ಯ ಅಥವಾ ಆಹಾರ ಇಡಬೇಕು. ಕೆಲಸಗಾರರು ಗ್ಲೌಸ್‌ ಧರಿಸಿ ಕೆಲಸ ಮಾಡಬೇಕು.
    – ಗುಂಪು ನಿಯಂತ್ರಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ಪಾರ್ಕಿಂಗ್‌ ಜಾಗದಲ್ಲಿರುವ ಸಿಬ್ಬಂದಿ ಮಾಸ್ಕ್‌/ ಫೇಸ್‌ ಕವರ್‌ ಧರಿಸಬೇಕು. ವಾಹನಗಳು ನಿಲ್ಲುವ ಜಾಗದಲ್ಲಿ ಸ್ಯಾನಿಟೈಸ್‌ ಮಾಡಿರಬೇಕು.

    – ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿರಬೇಕು. 6 ಅಡಿ ಸಾಮಾಜಿಕ ಅಂತರವನ್ನು ಕಾಪಾಡಬೇಕು. ಬಫೆ ವ್ಯವಸ್ಥೆ ಮಾಡಬಹುದು. ಆದರೆ ಇಲ್ಲೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ.
    – ಎಸ್ಕಲೇಟರ್‌ನಲ್ಲಿ ಒಂದು ಸ್ಟೆಪ್‌ ಬಿಟ್ಟು ಮತ್ತೊಂದು ಸ್ಟೆಪ್‌ನಲ್ಲಿ ವ್ಯಕ್ತಿಗಳು ಹೋಗಬೇಕು. ಏರ್‌ ಕಂಡಿಷನ್‌ ಇರುವ ರೆಸ್ಟೋರೆಂಟ್‌ಗಳ ಉಷ್ಣಾಂಶ 24-30 ಡಿಗ್ರಿ ಸೆಲ್ಸಿಯಸ್‌ ಇರಬೇಕು.
    – ಸಾಧ್ಯವಾದಷ್ಟು ಡಿಜಿಟಲ್‌ ಮೂಲಕ ಬಿಲ್‌ ಪಾವತಿಗೆ ಉತ್ತೇಜಿಸುವುದು. ಒಬ್ಬ ಗ್ರಾಹಕ ತೆರಳಿದ ಬಳಿಕ ಟೇಬಲ್‌ ಶುಚಿಗೊಳಿಸುವುದು.

    – ನೀರಿಗೆ ಶೇ.1 ರಷ್ಟು ಸೋಡಿಯಂ ಹೈಪೋಕ್ಲೋರೆಟ್ ಮಿಶ್ರಣ ಇರುವ ಇರುವ ದ್ರಾವಣವನ್ನು ಹಾಕಿ ಶೌಚಾಲಯ, ಕೈ ತೊಳೆಯುವ ಜಾಗ, ಟೇಬಲ್‌ ಹಾಕಿ ಸ್ವಚ್ಛಗೊಳಿಸುವುದು.
    – ಆಡುಗೆ ಮನೆಯಲ್ಲಿ ಕೆಲಸಗಾರರು ಸಾಮಾಜಿಕ ಅಂತರವನ್ನು ಕಾಪಾಡವುದು. ಆಡುಗೆ ಮನೆಯನ್ನು ಸ್ಯಾನಿಟೈಸ್‌ ಮಾಡುವುದು
    – ಮಕ್ಕಳ ಆಟಕ್ಕಾಗಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ನಿರ್ಮಾಣವಾಗಿರುವ  ಪ್ರದೇಶಗಳನ್ನು ತೆರೆಯುವಂತಿಲ್ಲ.