Tag: ಪಬ್ಲಿಲ್ ಟಿವಿ

  • ಕೆ.ಆರ್ ಮಾರ್ಕೆಟ್‍ನಲ್ಲಿ ಕಸದ ರಾಶಿ ನೋಡಿ ಮೇಯರ್ ಪದ್ಮಾವತಿ ಗರಂ, ಅಧಿಕಾರಿಗಳಿಗೆ ಕ್ಲಾಸ್

    ಕೆ.ಆರ್ ಮಾರ್ಕೆಟ್‍ನಲ್ಲಿ ಕಸದ ರಾಶಿ ನೋಡಿ ಮೇಯರ್ ಪದ್ಮಾವತಿ ಗರಂ, ಅಧಿಕಾರಿಗಳಿಗೆ ಕ್ಲಾಸ್

    ಬೆಂಗಳೂರು: ಕೆಆರ್ ಮಾರ್ಕೆಟ್‍ಗೆ ಭೇಟಿ ನೀಡಿದ ಮೇಯರ್ ಪದ್ಮಾವತಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರ ಮೇಲೆ ಗರಂ ಆಗಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

     

    ಜನರಿಗೆ ಓಡಾಡೊಕ್ಕೆ ಜಾಗ ಇಲ್ಲ. ರಸ್ತೆ ಮಧ್ಯದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ, ಏನ್ ಮಾಡುತ್ತಿದ್ದಿರಾ? ನಾನೇನು ಮೇಸ್ತ್ರಿನಾ? ದಿನಾ ಬಂದು ಇವರನ್ನ ಓಡಿಸೋಕೆ ಹುಷಾರ್ ಎಂದು ಪದ್ಮಾವತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಕೆಆರ್ ಮಾರ್ಕೆಟ್ ನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ ಹಿನ್ನಲೆಯಲ್ಲಿ ಯಾರ್ರೀ ನಿಮಗೆ ಮಾರ್ಕೆಟ್ ನಲ್ಲಿ ಗಣೇಶ ಇಡೋಕೆ ಪರ್ಮಿಷನ್ ಕೊಟ್ಟಿದು? ಮೊದಲು ಇದನ್ನ ತೆಗೆಸ್ರಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈಗ ಗಣೇಶ ಇಡ್ತಾರೆ. ಆಮೇಲೆ ಇಲ್ಲೆ ದೇವಸ್ಥಾನ ಕಟ್ಟುತ್ತಾರೆ. ಮೊದಲು ಇದನ್ನ ಇಲ್ಲಿಂದ ತೆಗೆಸಿ. ಮಾರ್ಕೆಟ್ ನಲ್ಲಿ ಇಟ್ಟಿರುವ ಗಣೇಶ ಮೂರ್ತಿಯನ್ನ ಮೊದ್ಲು ತೆಗೆಸಿ. ಯಾರಾದರೂ ದೇವಸ್ಥಾನ ಕಟ್ಟಿದ್ರೆ ಯಾರು ಸಸ್ಪೆಂಡ್ ಆಗ್ತೀರೋ ಗೊತ್ತಿಲ್ಲ. ಸಂಜೆ ಒಳಗೆ ಯಾವ ಮೂರ್ತಿನೂ ಇರಬಾರದು ಎಂದು ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.

    ಮಾರುಕಟ್ಟೆಯಲ್ಲಿ ಕಸದ ರಾಶಿ ಕಂಡು ಮೇಯರ್ ಗರಂ ಆಗಿದ್ದು, ಸ್ಥಳದಲ್ಲಿಯೇ ಇದ್ದ ಆರೋಗ್ಯ ಅಧಿಕಾರಿ ಶಶಿಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರರ ವಿರುದ್ಧ ಹರಿಹಾಯ್ದು ಮಾರ್ಕೆಟ್ ಕ್ಲೀನ್ ಇಡೋಕೆ ಏನ್ ನಿಮಗೆ? ಎಂದು ಹೇಳಿ ಕಸದ ರಾಶಿ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹೊಟ್ಟೆಗೆ ಏನ್ ತಿನ್ನುತ್ತೀರಾ? ಮಾರ್ಕೆಟ್ ಕ್ಲಿನ್ ಆಗಿ ಇಡೋಕೆ ಏನ್ ದಾಡಿ ನಿಮಗೆ? ರಸ್ತೆ ಮಧ್ಯೆದಲ್ಲೇ ತರಕಾರಿ ಮಾರುತ್ತಿದ್ದಾರೆ ಎಂದು ಕ್ಲಾಸ್ ಮಾಡಿದ್ರು. ಹೂವಿನ ಮಾರ್ಕೆಟ್‍ನಲ್ಲಿ ಕಸ ತೆಗೆಯದ ಅಧಿಕಾರಿ ಫಾಜಲ್‍ಗೆ ಮೇಯರ್ ನೋಟಿಸ್ ಜಾರಿ ಮಾಡಿದ್ರು. ಕಳೆದ ಮೂರು ದಿನಗಳಿಂದ ಮಾರ್ಕೆಟ್ ನಲ್ಲಿ ಕಸ ತೆರವು ಮಾಡದ ಹಿನ್ನಲೆಯಲ್ಲಿ ಅಧಿಕಾರಿ ಫಜಲ್‍ಗೆ ನೋಟಿಸ್ ಜಾರಿ ಮಾಡಿದ್ದಾರೆ.

     

    ಜಂಟಿ ಆಯುಕ್ತ ಸರ್ಫರಾಜ್ ಖಾನ್ ಕೂಡ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೂವಿನ ಮಾರ್ಕೆಟ್ ನಲ್ಲಿ ಕಸ ತೆಗೆಯದ ನೋಡಲ್ ಅಧಿಕಾರಿ ಫಜಲ್ ಗೆ ಮೇಯರ್ ರಿಂದ ನೋಟಿಸ್ ಜಾರಿಯಾಗಿದ್ದು ಆರೋಗ್ಯ ಅಧಿಕಾರಿ ಶಶಿ ಕುಮಾರ್ ವಿರುದ್ಧವು ಕ್ರಮ ತೆಗೆದುಕೊಂಡಿದ್ದಾರೆ. ಎಂಟು ಅಂಗಡಿಗಳಿಗೆ ತಲಾ 500 ರೂ. ದಂಡ ಹಾಕಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮೇಯರ್ ಪದ್ಮಾವತಿ ಸೂಚನೆ ನೀಡಿದ್ದಾರೆ.

  • ವಿಡಿಯೋ: ಡ್ರೈವ್ ಮಾಡೋವಾಗ ಫೋನ್ ಬಳಸಬಾರ್ದು ಅನ್ನೋದು ಇದ್ದಕ್ಕೇ!

    ವಿಡಿಯೋ: ಡ್ರೈವ್ ಮಾಡೋವಾಗ ಫೋನ್ ಬಳಸಬಾರ್ದು ಅನ್ನೋದು ಇದ್ದಕ್ಕೇ!

    ಬೀಜಿಂಗ್: ವಾಹನ ಚಾಲನೆ ಮಾಡುವಾಗ ಫೋನ್ ಬಳಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಇದೇ ಕಾರಣದಿಂದ ಒಂದಲ್ಲ ಒಂದು ಅಪಘಾತ ಆಗುತ್ತಲೇ ಇರುತ್ತೆ. ಹೀಗೇ ಡ್ರೈವಿಂಗ್ ಮಾಡುವಾಗ ಫೋನ್‍ನಲ್ಲಿ ಬ್ಯುಸಿಯಾಗಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸೀದಾ ರಸ್ತೆಯಲ್ಲಿ ತೆರೆದುಕೊಂಡಿದ್ದ ಗುಂಡಿಯೊಳಗೆ ಬೀಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಚೀನಾದ ಗುವಾಂಗ್ಸಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬೇಜೈ ನಗದರಲ್ಲಿ ರಸ್ತೆ ಇದ್ದಕ್ಕಿದ್ದಂತೆ ಕುಸಿದು ಸುಮಾರು 32 ಅಡಿ ಅಗಲ ಹಾಗೂ 6 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ರಸ್ತೆ ಕುಸಿಯುವ ದೃಶ್ಯವನ್ನ ವಿಡಿಯೋದಲ್ಲಿ ಕಾಣಬಹುದು. ಬಳಿಕ ದ್ವಿಚಕ್ರವಾಹನ ಸವಾರನೊಬ್ಬ ಫೋನ್ ನೋಡುತ್ತಾ ಚಾಲನೆ ಮಾಡಿಕೊಂಡು ಬಂದಿದ್ದು, ರಸ್ತೆ ಕುಸಿದಿರೋದನ್ನ ಗಮನಿಸದೇ ಸೀದಾ ಗುಂಡಿಯೊಳಗೆ ಬಿದ್ದಿದ್ದಾನೆ.

    ಇಲ್ಲಿನ ಪತ್ರಿಕೆಯೊಂದರ ವರದಿಯ ಪ್ರಕಾರ ಸವಾರನಿಗೆ ಯಾವುದೇ ಗಾಯಗಳಾಗದೇ ಬಚಾವಾಗಿದ್ದು, ಗುಂಡಿಯಿಂದ ಮೇಲೆ ಹತ್ತಿ ಬಂದಿದ್ದಾನೆ ಎನ್ನಲಾಗಿದೆ. ಆದ್ರೂ ಡ್ರೈವಿಂಗ್ ಮಾಡುವಾಗ ಫೋನ್ ಬಳಸಬಾರದು ಎಂದು ಹೇಳೋದು ಯಾಕೆ ಅಂತ ಈ ವಿಡಿಯೋ ನೋಡಿಯಾದ್ರೂ ತಿಳಿದುಕೊಳ್ಳಬೇಕು.

    https://www.youtube.com/watch?v=9udAh–50sQ