Tag: ಪಬ್ಲಿಕ ಟಿವಿ

  • ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿ ಚಾಕುವಿನಿಂದ ಚುಚ್ಚಿ ಜೋಡಿ ಕೊಲೆ

    ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿ ಚಾಕುವಿನಿಂದ ಚುಚ್ಚಿ ಜೋಡಿ ಕೊಲೆ

    ಮಂಡ್ಯ: ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿ ಚಾಕುವಿನಿಂದ ಚುಚ್ಚಿ ಜೋಡಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ನಡೆದಿದೆ.

    ಕೋಳಿ ಸುರೇಶ್ ಹಾಗೂ ನಾಗರಾಜು ಕೊಲೆಯಾದ ದುರ್ದೈವಿಗಳು. ಕೋಳಿ ಸುರೇಶ್ ಹಾಗೂ ನಾಗರಾಜು ಮಹದೇಶ್ವರಪುರ ಗ್ರಾಮದವರಾಗಿದ್ದು, ಅದೇ ಗ್ರಾಮದ ರೌಡಿಶೀಟರ್ ಕೃಷ್ಣ, ಸುರೇಶ್ ಹಾಗೂ ಸಹಚರರು ಈ ಕೃತ್ಯ ಎಸಗಿದ್ದಾರೆ.

    ಪೊಲೀಸರು ಈಗಾಗಲೇ ಕೃಷ್ಣನನ್ನು ವಶಕ್ಕೆ ಪಡೆದುಕೊಂಡಿದ್ದು, ಕೊಲೆಗೆ ಪ್ರೇಮ ಪ್ರಕರಣ ಹಾಗೂ ಹಣಕಾಸು ವ್ಯವಹಾರವೇ ಕಾರಣ ಎಂದು ಹೇಳಲಾಗುತ್ತಿದೆ. ಕೊಲೆಯಾದ ಕೋಳಿ ಸುರೇಶ್ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದರು. ಇತ್ತ ನಾಗರಾಜು ಜೆಸಿಬಿ ಯಂತ್ರ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು.

    ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಷವಿಕ್ಕಿ, ಪತ್ನಿ-ಮಕ್ಕಳ ತಲೆಗೆ ಬಡಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆ ಮಾಡ್ಕೊಂಡ

    ವಿಷವಿಕ್ಕಿ, ಪತ್ನಿ-ಮಕ್ಕಳ ತಲೆಗೆ ಬಡಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆ ಮಾಡ್ಕೊಂಡ

    ಉಡುಪಿ: ಮಾನಸಿಕ ಖಿನ್ನತೆಯಿಂದ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಹಾಕಿ ದೇವಸ್ಥಾನದ ಬಾಣಸಿಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಜಿಲ್ಲೆಯ ಕುಂದಾಪುರದ ಗೋಳಿಯಂಗಡಿಯ ಈ ಘಟನೆ ನಡೆದಿತ್ತು. ಊರಿಗೆಲ್ಲಾ ಅಡುಗೆ ಮಾಡಿ ಬಡಿಸುತ್ತಿದ್ದ ಬಾಣಸಿಗ ಸೂರ್ಯನಾರಾಯಣ ಭಟ್ ಮನೆಯವರಿಗೆ ವಿಷ ಹಾಕಿ ಕೊಲೆ ಮಾಡಿದ್ದಾರೆ. ಸೂರ್ಯನಾರಾಯಣ ತನ್ನ ಮಡದಿ ಮಾನಸಿ, ಮಕ್ಕಳಾದ ಸುಧೀಂದ್ರ, ಸುಧೀಶ್ ಮೂವರಿಗೂ ವಿಷವಿಕ್ಕಿದ್ದಾನೆ. ನಂತರ ಬಡಿಗೆಯಿಂದ ತಲೆ ಹೊಡೆದು ಮೂವರನ್ನು ಕೊಲೆ ಮಾಡಿದ್ದಾನೆ. ಅವರು ಮೃತಪಟ್ಟ ತಕ್ಷಣ ಸೂರ್ಯನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಪತ್ನಿ ಮಕ್ಕಳನ್ನು ಕೊಂದ, ತಾನು ಆತ್ಮಹತ್ಯೆ ಮಾಡ್ಕೊಂಡ

    ಈ ಬಗ್ಗೆ ಎಸ್.ಪಿ ನಿಶಾ ಜೇಮ್ಸ್ ಮಾತನಾಡಿ, ಕಳೆದ ಐದು ವರ್ಷದಿಂದ ಕೊಲೆ ಆರೋಪಿಗೆ ಮಾನಸಿಕ ಸಮಸ್ಯೆ ಇತ್ತು ಎಂಬ ಮಾಹಿತಿ ಇದೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದನು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಕೌಟುಂಬಿಕ ಕಲಹದ ಬಗ್ಗೆ ಕೆಲ ವರ್ಷಗಳ ಹಿಂದೆ ಪತ್ನಿಯಿಂದ ದೂರು ಬಂದಿತ್ತು ಎಂದರು.

    ನವೆಂಬರ್ 26ರ ರಾತ್ರಿ ಘಟನೆ ನಡೆದಿದೆ. ಗೋಳಿಯಂಗಡಿಯ ಸುರ್ಗೋಳಿಯ ನಿರ್ಜನ ಪ್ರದೇಶದಲ್ಲಿ ಮನೆ ಇರುವುದರಿಂದ ಘಟನೆ ಯಾರಿಗೂ ಗಮನಕ್ಕೆ ಬಂದಿಲ್ಲ. ಮಕ್ಕಳು ಬುಧವಾರ ಶಾಲೆಗೆ ಹೊಗದಿರೋದನ್ನು ನೋಡಿ ಸೂರ್ಯನಾರಾಯಣನ ಸಹೋದರನಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ತಮ್ಮನ ಕರೆ ಸ್ವೀಕರಿಸದಿದ್ದಾಗ ಸಂಜೆಯ ವೇಳೆಗೆ ಮನೆ ಹತ್ತಿರ ಬಂದು ನೋಡಿದಾಗ ಊರಿಗೆ ಊರೇ ಬೆಚ್ಚಿಬಿದ್ದಿದೆ. ಒಂದೇ ಕೋಣೆಯೊಳಗೆ ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ, ಮಾನಸಿಕ ಖಿನ್ನತೆಯೇ ಸೂರ್ಯನಾರಾಯಣನಿಂದ ಈ ದುಷ್ಕೃತ್ಯವೆಸಗಲು ಕಾರಣ.

    ಈ ಘಟನೆ ಬಗ್ಗೆ ಸ್ಥಳೀಯ ಸಂದೀಪ್ ಮಾತನಾಡಿ, ಸುತ್ತಮುತ್ತಲಿನ ಮನೆಯವರ ಬಳಿ ಇವರು ಕಡಿಮೆ ಸಂಪರ್ಕದಲ್ಲಿ ಇದ್ದರು. ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಗಂಡ ಹೆಂಡತಿ ಜಗಳದಲ್ಲೆ ಮಕ್ಕಳು ಬಡವಾದವು ಎಂದು ಹೇಳಿದರು.

    ಮೂರು ಜೀವಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿವೆ. ಶಾಲೆಗೆ ಹೋಗುವ ಮಕ್ಕಳು ಮಾಡಿದ ತಪ್ಪಾದರೂ ಏನು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿದ್ದಾರೆ. ಪತ್ನಿ ಮಾನಸಿ ಕುಟುಂಬದ ಉಪಸ್ಥಿತಿಯಲ್ಲಿ ಮಹಜರು ಮಾಡಲಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

  • ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ

    ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ

    ತುಮಕೂರು: ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ಇಡಿ ಅಧಿಕಾರಿಗಳ ಕೈಗೆ ಸಿಲುಕಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜಾಮೀನಿನ ಮೇಲೆ ಹೊರಬಂದು ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಇಂದು ಟೆಂಪಲ್ ರನ್ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಇಷ್ಟ ದೈವ ಅಜ್ಜಯ್ಯನ ದರ್ಶನ ಮಾಡಿದ್ದಾರೆ.

    ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ ಅಲ್ಲಿಂದ  ನೇರವಾಗಿ ಹೊರಟು ತುಮಕೂರಿನ ತಿಪಟೂರಿನಲ್ಲಿರುವ ನೊಣವಿನ ಕೆರೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಗುರುಭವನದಲ್ಲಿ ಶಿವಯೋಗೀಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿದ್ದು, ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ ಅಜ್ಜಯ್ಯನ ದರ್ಶನ ಮಾಡುಲು ತೆರಳಿದ್ದರು. ಈ ವೇಳೆ ಅಭಿಮಾನಿಗಳು ಡಿಕೆಶಿಯನ್ನು ಸುತ್ತುವರಿದಿದ್ದರು. ಇದನ್ನೂ ಓದಿ: ಎಲ್ಲರ ಕಮೆಂಟ್‍ಗಳಿಗೆ ಮುಂದೆ ಉತ್ತರಿಸುತ್ತೇನೆ: ಡಿಕೆಶಿ

    ಸುಮಾರು 20 ನಿಮಿಷಗಳ ಕಾಲ ಅಜ್ಜಯ್ಯನ ಪೀಠಕ್ಕೆ ವಿಶೇಷವಾಗಿ ಪೂಜೆ ಮಾಡಿಸಿದ್ದಾರೆ. ಡಿಕೆಶಿ ಮತ್ತು ಸಹೋದರ ಸುರೇಶ್ ಅವರಿಗೆ ಮಾತ್ರ ಗರ್ಭ ಗುಡಿಗೆ ಪ್ರವೇಶ ನೀಡಲಾಗಿತ್ತು. ಶ್ರೀಮಠದ ಕರಿಬಸವ ದೇಶಿಕೇಂದ್ರ ಶಿವಯೋಗೇಶ್ವರ್ ಸ್ವಾಮೀಜಿ ನೇತೃತ್ವದಲ್ಲಿ ಅಜ್ಜಯ್ಯನ ಪೀಠಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

  • ಆಸ್ತಿಗಾಗಿ ಸೋದರನನ್ನೇ ಕೊಂದಿದ್ದ ತಮ್ಮನ ಸೆರೆ

    ಆಸ್ತಿಗಾಗಿ ಸೋದರನನ್ನೇ ಕೊಂದಿದ್ದ ತಮ್ಮನ ಸೆರೆ

    ಬೆಂಗಳೂರು: ಆಸ್ತಿ ಕೊಡದ ಸಹೋದರನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ ತಮ್ಮ ಹಾಗೂ ಆತನ ಸ್ನೇಹಿತನನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಗೋವರ್ಧನ್ ಹಾಗೂ ವಿನೋದ್ ಎಂದು ಗುರುತಿಸಲಾಗಿದ್ದು, ಕಳೆದ ತಿಂಗಳು ಆನೇಕಲ್ ಬಸ್ ಡಿಪೋ ಹಿಂಬಾಗ ಆನೇಕಲ್ ನಿವಾಸಿ ಪದ್ಮನಾಬ್ ಎಂಬವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ಈ ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಕೊಲೆಯಾದ ಪದ್ಮನಾಬ್  ನನ್ನು ಮಲ ಸಹೋದರನೇ ಆಸ್ತಿಗಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ತಲೆಮರೆಸಿಕೊಂಡಿದ್ದ ಗೋವರ್ಧನ್ ಹಾಗೂ ವಿನೋದ್ ನನ್ನು ಬಂಧಿಸಿದ್ದಾರೆ.

    ಗೋವರ್ಧನ್ ತಂದೆಗೆ ಇಬ್ಬರು ಹೆಂಡತಿಯರಿದ್ದು, ತಂದೆ ಧರ್ಮರಾಜ್ ಎರಡನೇ ಪತ್ನಿ ಮತ್ತು ಮಗ ಗೋವರ್ಧನನಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೆ ಆಸ್ತಿಯನ್ನು ಕೊಡದೆ ಸತಾಯಿಸುತ್ತಿದ್ದನು. ಈ ಹಿನ್ನೆಲೆ ಗೋವರ್ಧನ್ ತನ್ನ ಸ್ನೇಹಿತ ವಿನೋದ್ ಸೇರಿ ಪದ್ಮನಾಬ್‍ನಿಗೆ ಮದ್ಯಪಾನ ಮಾಡಿಸಿ ತಲೆ ಮೇಲೆ ಸಿಮೆಂಟ್ ಬ್ಲಾಕ್ ಹಾಕಿ ಕೊಲೆ ಮಾಡಿದ್ದನು.

    ಈ ಕುರಿತು ಅನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.

  • ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

    ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

    ನವದೆಹಲಿ: ಸದ್ಯ ಎಲ್ಲಡೆ ಸುದ್ದಿಯಲ್ಲಿರುವ ಹೆಸರಾಂತ ಗೇಮ್ ಪಬ್‍ಜಿ, ಈ ಯುದ್ಧಭೂಮಿಯ ಗೇಮ್ ಕಂಡುಹಿಡಿದಿರುವ ಕಂಪನಿ ದಿನಕ್ಕೆ ಬರೋಬ್ಬರಿ 20 ಕೋಟಿ ರೂ. ಲಾಭ ಪಡೆಯುತ್ತಿದೆ ಎಂದು ಸೂಪರ್ ಡಾಟಾ ತಿಳಿಸಿದೆ.

    ಹೌದು, ಇತ್ತೀಚಿಗೆ ಯುವ ಪೀಳಿಗೆಯವರಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಗೇಮ್ ಅಂದ್ರೆ ಪಬ್‍ಜಿ. ಈ ಗೇಮ್ ಆಡುವವರು ಎಷ್ಟು ಲಾಭ ಪಡೆದಿದ್ದಾರೋ ಗೊತ್ತಿಲ್ಲ. ಆದ್ರೆ ಯುವ ಪೀಳಿಗೆ ಪ್ರತಿದಿನ ಈ ಗೇಮ್ ಆಡುತ್ತಿರುವುದರಿಂದ ಕಂಪನಿಗೆ ಮಾತ್ರ ಸಖತ್ತಾಗಿ ಲಾಭವಾಗುತ್ತಿದೆ. ಎಲ್ಲೆಡೆ ಪಬ್‍ಜಿ ಗೇಮ್ ಮೂಡಿಸಿರುವ ಕ್ರೇಜ್‍ನಿಂದ್ ಕಂಪನಿ ಮಾತ್ರ ತನ್ನ ಖಜಾನೆಯನ್ನು ಆರಾಮಾಗಿ ತುಂಬಿಸಿಕೊಳ್ಳುತ್ತಿದೆ ಅಂದರೆ ತಪ್ಪಾಗಲ್ಲ. ಯಾಕೆಂದರೇ ಪಬ್‍ಜಿ ಗೇಮ್ ಕಂಪನಿಗೆ ತಂದು ಕೊಟ್ಟ ಲಾಭ ಅಷ್ಟಿದೆ. ಏನಿಲ್ಲಾ ಅಂದರೂ ಪ್ರತಿ ದಿನ ಪಬ್‍ಜಿ ಗೇಮ್ 20 ಕೋಟಿ ರೂ. ಗಳಿಕೆ ಮಾಡುತ್ತಿದೆ.

    ಸೂಪರ್ ಡಾಟಾದ ಪ್ರಕಾರ, 2018ರಲ್ಲಿ ಪಬ್‍ಜಿ ಗೇಮ್ ಕಂಪನಿ ಬರೋಬ್ಬರಿ 7 ಸಾವಿರ ಕೋಟಿ ರೂ. ವಾರ್ಷಿಕ ಆದಾಯ ಗಳಿಸಿತ್ತು. ಅಂದರೆ ದಿನಕ್ಕೆ ಸರಿಸುಮಾರು 20 ಕೋಟಿ ರೂ. ಅಲ್ಲದೆ 2018ರ ನವೆಂಬರ್ ಒಂದೇ ತಿಂಗಳಲ್ಲಿ ಪಬ್‍ಜಿಯಿಂದ ಕಂಪನಿ 32.5 ಮಿಲಿಯಲ್ ಡಾಲರ್(230 ಕೋಟಿ ರೂ.) ಲಾಭ ಗಳಿಸಿತ್ತು. ಅಂದಿನಿಂದ ಪಬ್‍ಜಿ ಕಂಪನಿಗೆ ದಿನಕ್ಕೆ ಕನಿಷ್ಠ 28 ಕೋಟಿ ರೂ. ಆದಾಯ ಬರುತ್ತಿದೆ. ಅಂದರೆ ಪ್ರತಿ ಗಂಟೆಗೆ 1 ಕೋಟಿಗೂ ಅಧಿಕ ಹಣವನ್ನು ಕಂಪನಿ ಸಲೀಸಾಗಿ ಗಳಿಸುತ್ತಿದೆ.

    ಏನಿದು ಪಬ್ ಜಿ?
    ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂಡು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು.

    ಸದ್ಯ ಗುಜರಾತ್‍ನಲ್ಲಿ ಪಬ್‍ಜಿ ಗೇಮ್ ಬ್ಯಾನ್ ಮಾಡಲಾಗಿದ್ದು, ಅಲ್ಲಿ ಈ ಗೇಮ್ ಆಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ಪಬ್‍ಜಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಈ ಗೇಮ್ ಆಡುವವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತಾಗಿ ಕಡಿಮೆಯಾಗುತ್ತಿಲ್ಲ.

  • ತರಗತಿಯಲ್ಲಿ ಶಿಕ್ಷಕರಿದ್ದಾಗ್ಲೇ ಡ್ರಿಂಕ್ಸ್ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯರು

    ತರಗತಿಯಲ್ಲಿ ಶಿಕ್ಷಕರಿದ್ದಾಗ್ಲೇ ಡ್ರಿಂಕ್ಸ್ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯರು

    ಹೈದಾರಾಬಾದ್: ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ತರಗತಿಯಲ್ಲೇ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

    ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ.

    ಮದ್ಯ ಸೇವನೆ ಮಾಡಿದ ಬಳಿಕ ವಿದ್ಯಾರ್ಥಿನಿಯರು ಬೇರೆ ವಿದ್ಯಾರ್ಥಿಗಳ ಜೊತೆ ಜೋರಾಗಿ ಮಾತನಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ತರಗತಿಯಲ್ಲಿ ಮದ್ಯದ ವಾಸನೆ ಬಂದಿದೆ. ಇದರಿಂದ ಶಿಕ್ಷಕರು ಅನುಮಾನಗೊಂಡು ಜ್ಯೂಸ್ ಬಾಟಲನ್ನು ಕಿತ್ತುಕೊಂಡು ಪರಿಶೀಲಿಸಿದಾಗ ಮದ್ಯ ಮಿಕ್ಸ್ ಆಗಿರುವುದು ಪತ್ತೆಯಾಗಿದೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿ ತಕ್ಷಣ ಇಬ್ಬರು ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಿದೆ.

    “ವಿದ್ಯಾರ್ಥಿನಿಯರು ತರಗತಿಯಲ್ಲಿ ಮದ್ಯಪಾನ ಮಾಡಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಸಿಕ್ಕಿ ಬಿದ್ದಿರುವ ವಿದ್ಯಾರ್ಥಿನಿಯರು, ಪ್ರತಿದಿನ ನಮ್ಮ ತಂದೆ ಮನೆಯಲ್ಲಿಯೇ ಕುಡಿಯುತ್ತಾರೆ. ಒಮ್ಮೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಬಾಟಲ್ ತೆಗೆದುಕೊಂಡು ಕುಡಿದಿದ್ದೆವು. ಬಳಿಕ ನಮಗೂ ಅದು ಹವ್ಯಾಸವಾಗಿ ಬೆಳೆಯಿತು” ಎಂದು ವಿದ್ಯಾರ್ಥಿನಿಯರು ಹೇಳಿರುವುದಾಗಿ ಮುಖ್ಯೋಪಾಧ್ಯಾಯ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಇಬ್ಬರು ವಿದ್ಯಾರ್ಥಿನಿಯರ ಕೆಟ್ಟ ಅಭ್ಯಾಸದಿಂದ ಉಳಿದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

    ಮದ್ಯ ಸೇವನೆ ಒಂದು ಕೆಟ್ಟ ಹವ್ಯಾಸವಾಗಿದೆ. ಇದಕ್ಕೆ ಯುವಕರು ಬೇಗ ಅಡಿಕ್ಟ್ ಆಗುತ್ತಾರೆ. ಆದರೆ ವಿದ್ಯಾರ್ಥಿನಿಯರನ್ನು ಕೌನ್ಸೆಲಿಂಗ್ ಗೆ ಒಳಪಡಿಸಬೇಕಿತ್ತು. ಈ ರೀತಿ ಶಾಲೆಯಿಂದ ಹೊರ ಹಾಕುವುದು ತಪ್ಪು ಎಂದು ಸಾಮಾಜಿಕ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 70 ವರ್ಷದಲ್ಲಿ ಯಾವ ಸನ್ಯಾಸಿಗೂ ಸರ್ಕಾರ ಭಾರತ ರತ್ನ ಕೊಟ್ಟಿಲ್ಲ: ಬಾಬಾ ರಾಮ್‍ದೇವ್

    70 ವರ್ಷದಲ್ಲಿ ಯಾವ ಸನ್ಯಾಸಿಗೂ ಸರ್ಕಾರ ಭಾರತ ರತ್ನ ಕೊಟ್ಟಿಲ್ಲ: ಬಾಬಾ ರಾಮ್‍ದೇವ್

    ನವದೆಹಲಿ: ಕಳೆದ 70 ವರ್ಷದಲ್ಲಿ ಯಾವುದೇ ಸನ್ಯಾಸಿಗೂ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿಲ್ಲ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಎಲ್ಲಾ ವಿಭಾಗದಲ್ಲೂ ಸಾಧನೆ ಮಾಡಿದ ಗಣ್ಯರಿಗೆ ಸರ್ಕಾರ ಭಾರತದ ಶ್ರೇಷ್ಠ ಪ್ರಶಸ್ತಿ ಭಾರತ ರತ್ನವನ್ನು ನೀಡಿ ಗೌರವಿಸುತ್ತೆ. ಆದರೇ ಕಳೆದ 70 ವರ್ಷದಲ್ಲಿ ಯಾವುದೇ ಸನ್ಯಾಸಿಗಳಿಗೆ ಅಥವಾ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು ಎಂದಿದ್ದಾರೆ. ಇದನ್ನೂ ಓದಿ:ಶ್ರೀಗಳಿಗೆ ಭಾರತರತ್ನ ಕೊಡದಿರುವುದು ಎಲ್ಲರಿಗಿಂತ ನನಗೆ ಹೆಚ್ಚು ನೋವು ತಂದಿದೆ – ಬಿಎಸ್‍ವೈ

    ವಿಪರ್ಯಾಸವೆಂದರೆ ಸಾಮಾಜಕ್ಕಾಗಿ ದುಡಿದು, ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡಿರುವ ಮಹಾಋಷಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರಿಂದ ಹಿಡಿದು ಶ್ರೀ ಶಿವಕುಮಾರ ಸ್ವಾಮೀಜಿಗಳ ವರೆಗೂ ಯಾವ ಸನ್ಯಾಸಿಗೂ ಸರ್ಕಾರ ಭಾರತ ರತ್ನ ನೀಡಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು. ಇದನ್ನೂ ಓದಿ:ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?

    ಮುಂದಿನ ಬಾರಿಯಾದರೂ ಸಾಧು ಸನ್ಯಾಸಿಗಳು ಮಾಡಿರುವ ಸೇವೆಯನ್ನು ಗುರುತಿಸಿ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಕೇಂದ್ರ ಸರ್ಕಾರವನ್ನು ರಾಮ್‍ದೇವ್ ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಮಾನಯಾನದ ವೇಳೆ ಬೆತ್ತಲಾದ ಪ್ರಯಾಣಿಕ..!- ನೋಡಿ ದಂಗಾದ್ರು ಸಹಪ್ರಯಾಣಿಕರು

    ವಿಮಾನಯಾನದ ವೇಳೆ ಬೆತ್ತಲಾದ ಪ್ರಯಾಣಿಕ..!- ನೋಡಿ ದಂಗಾದ್ರು ಸಹಪ್ರಯಾಣಿಕರು

    ಲಕ್ನೋ: ವಿಮಾನದಲ್ಲಿ ದುಬೈನಿಂದ ಲಕ್ನೋಗೆ ತೆರಳುತ್ತಿದ್ದ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ತನ್ನ ಬಟ್ಟೆ ಬಿಚ್ಚಿ ವಿಮಾನದಲ್ಲಿ ಓಡಾಡಿರುವ ವಿಚಿತ್ರ ಘಟನೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಶನಿವಾರದಂದು ನಡೆದಿದೆ.

    ದುಬೈನಿಂದ ಲಕ್ನೋಗೆ ತೆರಳುತ್ತಿದ್ದ ಐಎಕ್ಸ್-194 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ವಿಮಾನಯಾನದ ವೇಳೆ ಇದ್ದಕ್ಕಿದ್ದ ಹಾಗೆ ಬಟ್ಟೆ ಬಿಚ್ಚಿ ಬೆತ್ತಲಾಗಿ ವಿಮಾನದ ಉದ್ದಕ್ಕೂ ಓಡಾಡಿದ್ದಾನೆ. ಆತನ ವಿಚಿತ್ರ ವರ್ತನೆಯನ್ನು ಕಂಡ ಇತರೇ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದಾರೆ. ತಕ್ಷಣ ವಿಮಾನದಲ್ಲಿದ್ದ ಸಿಬ್ಬಂದಿ ಆತನಿಗೆ ಕಂಬಳಿ ಹೊದಿಸಿದ್ದಾರೆ. ಈ ಒಬ್ಬ ಪ್ರಯಾಣಿಕನಿಂದ ವಿಮಾನದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

    ಒಟ್ಟು 150 ಮಂದಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಲಕ್ನೋದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದಂತೆ ದುರ್ವರ್ತನೆ ತೋರಿದ್ದ ವ್ಯಕ್ತಿಯನ್ನು ಏರ್‌ಲೈನ್‌ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆದ್ರೆ ಆತ ಯಾಕೆ ಹಾಗೆ ವರ್ತಿಸಿದ ಎಂಬ ಕಾರಣ ತಿಳಿದು ಬಂದಿಲ್ಲ.

    ವಿಮಾನದ ಕ್ಯಾಪ್ಟನ್‍ನ ಮಾಹಿತಿ ಮೇರೆಗೆ ಪ್ರಯಾಣಿಕನನ್ನು ವಶಕ್ಕೆ ಪಡೆದ ಏರ್‌ಲೈನ್‌ ಭದ್ರತಾ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಕ್ತಾರರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರುಖ್ ಖಾನ್!

    ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರುಖ್ ಖಾನ್!

    ನವದೆಹಲಿ: ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಶಾರುಖ್ ಖಾನ್ ಗಿಫ್ಟ್ ನೀಡಿದ್ದು ತಮ್ಮ `ಝೀರೋ’ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ.

    ಝೀರೋ ಚಿತ್ರವು ಬಾಲಿವುಡ್‍ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಖಾನ್‍ರವರರು ಬಾಬು ಸಿಂಗ್ ಎಂಬ ಕುಳ್ಳ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಖಾನ್‍ಗಳು ಒಟ್ಟಿಗೆ ಸೇರಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

    ಚಿತ್ರದ ಟೀಸರ್ ನಲ್ಲಿ  ಬಾಬು ಸಿಂಗ್ ಒಂದು ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಸಲ್ಮಾನ್ ಖಾನ್‍ರವರನ್ನು ಭೇಟಿ ಮಾಡುತ್ತಾರೆ. ಆಗ ಸಲ್ಮಾನ್ ಖಾನ್ “ಸುನಾ ಹೈ ಜಿಸ್ಕೆ ಪೀಚೆ ಲಗ್ ಜಾತೆ ಹೋ, ಉಸ್ಕ ಲೈಫ್ ಬನಾ ದೇತಾ ಹೋ? (ನಾವು ಯಾವುದರ ಹಿಂದೆ ಹೋಗುತ್ತೇವೋ ಅದರ ಜೀವನ ನಿರ್ಮಾಣವಾಗುತ್ತದೆ) ಎಂದು ಹೇಳುತ್ತಾರೆ. ಆಗ ಬಾಬುಸಿಂಗ್ ಸಲ್ಮಾನ್‍ಗೆ ವಂದಿಸುತ್ತಾರೆ. ಅಲ್ಲದೇ ಇಬ್ಬರೂ ಒಂದೇ ತರಹದ ಬಟ್ಟೆ ಧರಿಸಿ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸುತ್ತಾರೆ. ಬಾಬುಸಿಂಗ್ ಸಲ್ಮಾನ್‍ರನ್ನು ತಬ್ಬಿಕೊಂಡು ಚುಂಬಿಸುವ ಟೀಸರ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಚಿತ್ರದಲ್ಲಿ ಕತ್ರೀನಾ ಕೈಫ್ ಕೂಡ ನಟಿಸಿದ್ದು, ಬಾಬು ಸಿಂಗ್ ಟೀ ಶರ್ಟ್ ಮೇಲೆ ಅವರ ಚಿತ್ರ ಕಾಣಿಸಿಕೊಂಡಿದೆ.

    ಶಾರುಖ್ ಖಾನ್‍ರವರು ಸೋಶಿಯಲ್ ಮಿಡಿಯಾಗಳಲ್ಲಿ ಝೀರೋ ಚಿತ್ರದ ಟೀಸರ್ ಗಳನ್ನು ಶೇರ್ ಮಾಡಿದ್ದಾರೆ. ಚಿತ್ರತಂಡದ ಪರವಾಗಿ ಎಲ್ಲಾ ಅಭಿಮಾನಿಗಳಿಗೆ ರಂಜಾನ್ ಹಬ್ಬದ ಶುಭಕೋರಿದ್ದಾರೆ. ಈ ಟೀಸರ್ ನಿಮಗೆ ಇಷ್ಟ ಆಗುತ್ತದೆ ಎಂದು ತಮ್ಮ ಟ್ಟಿಟ್ಟರ್ ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಇದೂವರೆಗೂ ನೀವು ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರೂಖ್ ಖಾನ್

    ಝೀರೋ ಚಿತ್ರದಲ್ಲಿ ಶಾರುಖ್ ಖಾನ್, ಅನುಷ್ಕಾ ಶರ್ಮ ಅಭಿನಯಿಸಿದ್ದು ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದಾರೆ. ಆನಂದ್ ಎಲ್ ರೈರವರು ಚಿತ್ರ ನಿರ್ದೇಶಿಸಿದ್ದು, ಇದೇ ವರ್ಷ ಡಿಸೆಂಬರ್ ನಲ್ಲಿ ಚಿತ್ರ ತೆರೆಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ.