Tag: ಪಬ್ಲಿಕ್

  • ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಡೆಹರಾಡೂನ್: ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಹೆರಿಗೆಯ ನಂತರ ನವಜಾತ ಶಿಶು ಮೃತ ಪಟ್ಟಿರುವ ಘಟನೆ ಉತ್ತರಾಖಂಡದ ಡೆಹರಾಡೂನ್ ನ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.

    27 ವರ್ಷದ ಗರ್ಭಿಣಿಯು ಭಾನುವಾರ ಬೆಳಗ್ಗೆ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶೌಚಾಲಯಕ್ಕೆ ಹೋದಾಗ ಅಲ್ಲಿಯೇ ಹೆರಿಗೆಯಾಗಿದೆ. ಇದನ್ನ ಕಂಡ ಆಕೆಯ ಅಜ್ಜಿ ವೈದ್ಯರಿಗೆ ವಿಷಯ ತಿಳಿಸಿ ನರ್ಸ್ ಹಾಗೂ ವೈದ್ಯರು ಸ್ಥಳಕ್ಕೆ ಬಂದು ಮಹಿಳೆಯನ್ನು ಹೆರಿಗೆ ಕೋಣೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು ಮೃತ ಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಹಿಂದೆಯೂ ಆಸ್ಪತ್ರೆಯಲ್ಲಿ ಬೆಡ್ ಇಲ್ಲದ ಕಾರಣ ಗರ್ಭಿಣಿಯೊಬ್ಬರು ಶೌಚಾಲಯದಲ್ಲಿಯೇ ಹೆರಿಗೆಯಾಗಿ ಮೃತ ಪಟ್ಟಿದ್ದರು. ಆಸ್ಪತ್ರೆಯಲ್ಲಿ ಇದು ಮೂರನೇ ಘಟನೆಯಾಗಿದ್ದು, ಜನರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಅನುಮಾನ ಪಡುವಂತಾಗಿದೆ. ಈ ವಿಚಾರವಾಗಿ ಮಗುವಿನ ಸಾವಿನ ಕುರಿತು ವಿಚಾರಣೆ ನಡೆಸಬೇಕೆಂದು ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ಗರ್ಭಿಣಿಗೆ 7 ತಿಂಗಳಾಗಿದ್ದು, ಮಗು ಸರಿಯಾಗಿ ಬೆಳವಣಿಗೆ ಆಗಿರಲಿಲ್ಲ. ಹಾಗಾಗಿ ಮಗುವಿಗೆ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಮೃತಪಟ್ಟಿದೆ. ಇದರಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವಿಲ್ಲ ಎಂದು ಸಿಬ್ಬಂದಿ ಹೇಳಿಕೆಯನ್ನ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೆಡ್ಡಿ ಡೀಲ್ ಕೇಸ್‍ನಲ್ಲಿ ತಗ್ಲಾಕ್ಕೊಂಡಿದ್ದು ಹೇಗೆ?

    ರೆಡ್ಡಿ ಡೀಲ್ ಕೇಸ್‍ನಲ್ಲಿ ತಗ್ಲಾಕ್ಕೊಂಡಿದ್ದು ಹೇಗೆ?

    ಬೆಂಗಳೂರು: ಅಂಬಿಡೆಂಟ್ ಡೀಲ್ ಕೇಸ್‍ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೆಸರು ಬಂದಿರುವ ಹಿಂದೆ ಮಹತ್ವದ ಅಂಶಗಳಿದ್ದು, ಜನಾರ್ದನ ರೆಡ್ಡಿ ಅವರು ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಕಂಪನಿ ನಿದೇರ್ಶಕರಾಗಿದ್ದೇ ಪ್ರಕರಣಲ್ಲಿ ಸಿಸಿಬಿ ಪೊಲೀಸರಿಗೆ ಅನುಮಾನ ಉಂಟಾಗಲು ಕಾರಣವಾಗಿದೆ ಎನ್ನಲಾಗಿದೆ.

    ಬಳ್ಳಾರಿಯಲ್ಲಿ ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಕಂಪನಿ ಪ್ರಸಿದ್ಧ ಸಂಸ್ಥೆಯಾಗಿದ್ದು, ಸದ್ಯ ಇದೇ ಕಂಪನಿಯ ಹೆಸರಲ್ಲಿ 57 ಕೆಜಿ ಖರೀದಿ ಮಾಡಿದ್ದ ಚಿನ್ನದ ಬಿಲ್ ಲಭ್ಯವಾಗಿತ್ತು. ಈ ಕುರಿತು ಫರೀದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ತಾಜ್ ವೆಸ್ಟ್ ಎಂಡ್ ಡೀಲ್ ಸತ್ಯ ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಬಳ್ಳಾರಿಯ ರಾಜ್ ಮಹಲ್ ಜುವೆಲರ್ಸ್ ಮಾಲೀಕ ರಮೇಶ್, 57 ಕೆಜಿ ಚಿನ್ನದ ಬಿಲ್ ನ್ನು ಜನಾರ್ದನ ರೆಡ್ಡಿ ಒಡೆತನದ ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಕಂಪನಿ ಹೆಸರಲ್ಲಿ ಮಾಡಿದ್ದರು. ಈ ವೇಳೆ ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಸಂಸ್ಥೆಗೆ ಹೆಸರಿಗೆ ಬಂದ ಬಿಲ್ ಅನ್ವಯವಾಗಿ ಅಲಿಖಾನ್ ಡೀಲ್ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ರೆಡ್ಡಿ ಆಪ್ತರಾಗಿದ್ದ ಅಲಿಖಾನ್ ಹೆಸರು ಪ್ರಕರಣದಲ್ಲಿ ಕೇಳಿ ಬರುತ್ತಿದಂತೆ ಸಂಸ್ಥೆಯ ನಿರ್ದೇಶಕರಾಗಿದ್ದ ಜನಾರ್ದನ ರೆಡ್ಡಿ ಹೆಸರು ಪ್ರಕರಣದಲ್ಲಿ ಕೇಳಿಬಂತು.

    ಎನ್ನೋಬೆಲ್ ಇಂಡಿಯಾ ಕಂಪನಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾತ್ರವಲ್ಲದೇ ಶಾಸಕ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಕರುಣಾಕರ್ ರೆಡ್ಡಿ ಅವರು ಕೂಡ ನಿರ್ದೇಶಕರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿಚಾರಣೆ ನಡೆಯುವ ಸಾಧ್ಯತೆಗಳು ಕೂಡ ಇದೆ. ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್ ಅವರು, ನಮಗೆ 57 ಕೆಜಿ ಚಿನ್ನದ ಬಿಲ್ ರಹಸ್ಯ ಮಾತ್ರವಲ್ಲ, ಇದರ ಹಿಂದೆ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕಿದೆ ಎಂದು ತಿಳಿಸಿದ್ದರು. ಅಲೋಕ್ ಕುಮಾರ್ ಅವರ ಹೇಳಿಕೆಯಂತೆ ಸದ್ಯ ಎನ್ನೋಬೆಲ್ ಇಂಡಿಯಾ ಕಂಪನಿಯ ನಿರ್ದೇಶಕರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೀಪಾವಳಿ ಸಮಯದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹಾನರ್‌ನಿಂದ ವಿಶೇಷ ಸಾಧನೆ!

    ದೀಪಾವಳಿ ಸಮಯದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹಾನರ್‌ನಿಂದ ವಿಶೇಷ ಸಾಧನೆ!

    ನವದೆಹಲಿ: ಹುವಾವೇ ಹಾನರ್ ಕಂಪನಿ ಇದೇ ಮೊದಲ ಬಾರಿಗೆ ದೀಪಾವಳಿ ಸಮಯದಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಫೋನ್ ಗಳನ್ನು ಮಾರಾಟ ಮಾಡಿದೆ.

    ದೀಪಾವಳಿ ಹಿನ್ನೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಹಾನರ್ ಸ್ಟೋರ್ ಮೂಲಕ ಈ ವಿಶೇಷ ಸಾಧನೆ ನಿರ್ಮಾಣವಾಗಿದೆ ಎಂದು ಹಾನರ್ ಹೇಳಿಕೊಂಡಿದೆ.

    2017ರ ದೀಪಾವಳಿಗೆ ಹೋಲಿಸಿದರೆ ಈ ಬಾರಿಯ ವ್ಯವಹಾರ ಶೇ.300 ರಷ್ಟು ಏರಿಕೆಯಾಗಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಕೋಲ್ಕತ್ತಾದಲ್ಲಿ ಹೆಚ್ಚಿನ ಫೋನ್ ಗಳು ಮಾರಾಟವಾಗಿದೆ ಎಂದು ತಿಳಿಸಿದೆ.

    ಮಧ್ಯಮ ಬೆಲೆಯ ಫೋನ್ ಗಳಾದ ಹಾನರ್ 9ಎನ್, 8 ಎಕ್ಸ್ ಫೋನ್ ಗಳು ಫ್ಲಿಪ್‍ಕಾರ್ಟ್ ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಹೆಚ್ಚು ಮಾರಾಟವಾಗುವ ಮೂಲಕ ಈ ವಿಶೇಷ ಸಾಧನೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

    ಹಬ್ಬದ ಸಮಯದಲ್ಲಿ ಹಾನರ್ ನ 9ಎನ್, 9ಲೈಟ್, 7ಎಸ್, 9ಐ, 7ಎ, 10 ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

    https://twitter.com/HiHonorIndia/status/1060487702557147136

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

  • ನಿಮ್ಮೂರಲ್ಲಿ ವೋಟು ಬಂದಿಲ್ಲ, ಅಭಿವೃದ್ಧಿಗೆ ಅನುದಾನ ನೀಡಲ್ಲ: ಅನ್ಸಾರಿ

    ನಿಮ್ಮೂರಲ್ಲಿ ವೋಟು ಬಂದಿಲ್ಲ, ಅಭಿವೃದ್ಧಿಗೆ ಅನುದಾನ ನೀಡಲ್ಲ: ಅನ್ಸಾರಿ

    ಕೊಪ್ಪಳ: ನಿಮ್ಮೂರಿನಲ್ಲಿ ನನಗೆ ವೋಟ್ ಬಂದಿಲ್ಲ. ಹದಿನೈದಿಪ್ಪತ್ತು ವೋಟ್ ಬಂದ್ರೆ ಕೆಲಸ ಮಾಡಲು ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ಕೈ ನಾಯಕ ಇಕ್ಬಾಲ್ ಅನ್ಸಾರಿ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ.

    ಗಂಗಾವತಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಬಾಯಿಂದಲೇ ಇಂಥ ಸಂವಿಧಾನ ವಿರೋಧಿ ಹೇಳಿಕೆ ಹೊರ ಬಿದ್ದಿದೆ. ನನಗೆ ವೋಟ್ ಹಾಕದ ಗ್ರಾಮಕ್ಕೆ ಅಭಿವೃದ್ಧಿಗಾಗಿ ಅನುದಾನ ನೀಡಲ್ಲ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ.

    ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಇಂದಿರಾನಗರ ಗ್ರಾಮದಲ್ಲಿ ಶನಿವಾರ ಅನ್ಸಾರಿ ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಜನ, ಕಳೆದ ಬಾರಿ ಬಂದಾಗ ಮಸೀದಿ ಅಭಿವೃದ್ಧಿಗೆ ಹಣ ನೀಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆದರೆ ಇದೂವರೆಗೆ ಹಣ ಬಿಡುಗಡೆ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಪ್ರಶ್ನೆಗೆ ಅನ್ಸಾರಿ,  2013ರಲ್ಲಿ ನನಗೆ ನಿಮ್ಮ ಗ್ರಾಮದವರು ಎಷ್ಟು ಮತ ನೀಡಿದ್ದೀರಿ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೇ ನಿಮ್ಮೂರಲ್ಲಿ ಕೇವಲ 15 ರಿಂದ 20 ವೋಟ್ ಮಾತ್ರ ಬಂದಿವೆ. ಇಷ್ಟು ವೋಟ್ ಹಾಕಿದ್ರೆ ಕೆಲಸ ಮಾಡಲು ಆಗುತ್ತಾ ಎಂದು ಉತ್ತರಿಸಿದ್ದಾರೆ. ಕೊನೆಗೆ ಈ ಸಲ ನನ್ನ ಜೊತೆ ಇರಿ ಎಲ್ಲ ಮಾಡೋಣ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

    https://www.youtube.com/watch?v=CGrl__faRx0

  • ದಿನಭವಿಷ್ಯ 18-03-2018

    ದಿನಭವಿಷ್ಯ 18-03-2018

    ಪಂಚಾಂಗ

    ಶ್ರೀ ವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ಪಾಡ್ಯ ತಿಥಿ,
    ಭಾನುವಾರ, ಉತ್ತರಭಾದ್ರ ನಕ್ಷತ್ರ

    ರಾಹುಕಾಲ: ಸಂಜೆ 5:04 ರಿಂದ 6:34
    ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:04
    ಯಮಗಂಡಕಾಲ: ಮಧ್ಯಾಹ್ನ 12:32 ರಿಂದ 2:02

    ಮೇಷ: ಈ ವರ್ಷ ಮಿಶ್ರಫಲ, ಗುರು ಬಲ ಪ್ರಾಪ್ತಿ, ಆರೋಗ್ಯದಲ್ಲಿ ಸುಧಾರಣೆ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಬಂಧು ಮಿತ್ರರಿಂದ ಸಹಾಯ, ಕುಟುಂಬದಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ವರ್ಷ ಪೂರ್ತಿ ಶನಿ ಪ್ರಭಾವ, ಕುಟುಂಬದಲ್ಲಿ ಅನಾರೋಗ್ಯ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ.

    ವೃಷಭ: ಶನಿಯಿಂದ ಅಶುಭ ಫಲ, ಗುರು ಬಲ ಕಡಿಮೆ, ಕುಟುಂಬದಲ್ಲಿ ತೊಂದರೆ, ಬಂಧು ಮಿತ್ರರಲ್ಲಿ ವಿರೋಧ, ಪರಸ್ಥಳ ವಾಸ, ವೃಥಾ ತಿರುಗಾಟ-ಖರ್ಚು, ಸರ್ಕಾರಿ ವ್ಯವಹಾರಗಳಲ್ಲಿ ವಿಘ್ನ, ಹಣಕಾಸು ಅಡಚಣೆ, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಪ್ರಗತಿ, ಯತ್ನ ಕಾರ್ಯದಲ್ಲಿ ಅನುಕೂಲ, ಧನಾಗಮನ, ಶುಭ ಫಲ ಪ್ರಾಪ್ತಿ.

    ಮಿಥುನ: ಈ ವರ್ಷ ಶುಭ ಫಲ ಪ್ರಾಪ್ತಿ, ಆರೋಗ್ಯದಲ್ಲಿ ಸುಧಾರಣೆ, ಬಂಧು ಮಿತ್ರರಿಂದ ಸಹಾಯ, ಗೌರವ ಸನ್ಮಾನ ಪ್ರಾಪ್ತಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸಜ್ಜನರ ಸಹವಾಸದಿಂದ ಕೀರ್ತಿ, ವಷಾಂತ್ಯದಲ್ಲಿ ಧನಹಾನಿ, ವ್ಯಾಪಾರದಲ್ಲಿ ತೊಂದರೆ, ಬಂಧು ಮಿತ್ರರಲ್ಲಿ ಮನಃಸ್ತಾಪ, ಮಾನಸಿಕ ವ್ಯಥೆ.

    ಕರ್ಕಾಟಕ: ವರ್ಷಾದಿಯಲ್ಲಿ ಕಷ್ಟ, ವೃಥಾ ತಿರುಗಾಟ, ಸ್ಥಳ ಬದಲಾವಣೆ, ವ್ಯಾಪಾರದಲ್ಲಿ ಸಾಧಾರಣ ಲಾಭ, ಕುಟುಂಬದಲ್ಲಿ ಅಶಾಂತಿ, ಯತ್ನ ಕಾರ್ಯದಲ್ಲಿ ವಿಘ್ನ, ಶನಿ ಪ್ರಭಾವದಿಂದ ಶುಭ ಫಲ, ಧನಾಗಮನ, ವ್ಯಾಪಾರದಲ್ಲಿ ಲಾಭ, ಬಂಧು-ಮಿತ್ರರಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಆರೋಗ್ಯ ಸುಧಾರಣೆ, ವಿವಾಹ ಭಾಗ್ಯ ಪ್ರಾಪ್ತಿ.

    ಸಿಂಹ: ಗುರು-ಶನಿ ಸಂಚಾರದಿಂದ ತೊಂದರೆ, ಅಶುಭ ಫಲ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಸಾಧಾರಣ ಲಾಭ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ವೃಥಾ ತಿರುಗಾಟ, ಸೇವಕರಿಂದ ಧನಹಾನಿ, ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸಗಳಲ್ಲಿ ಅಲ್ಪ ಪ್ರಗತಿ, ದಾಯಾದಿಗಳ ಕಲಹ.

    ಕನ್ಯಾ: ವರ್ಷಾದಿಯಲ್ಲಿ ಆರೋಗ್ಯ ಸುಧಾರಣೆ, ವಸ್ತ್ರಾಭರಣ ಪ್ರಾಪ್ತಿ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ವ್ಯವಹಾರಗಳಲ್ಲಿ ಧನ ಲಾಭ, ಶುಭ ಕಾರ್ಯ ಜರುಗುವುದು, ವರ್ಷದ ಮಧ್ಯೆ ಅಶುಭ ಫಲ, ಧನ ಹಾನಿ, ಯತ್ನ ಕಾರ್ಯದಲ್ಲಿ ವಿಘ್ನ, ಸೇವಕರಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಅಡಚಣೆ, ಸ್ಥಳ ಬದಲಾವಣೆ, ವೃಥಾ ತಿರುಗಾಟ.

    ತುಲಾ: ವ್ಯಾಪಾರದಲ್ಲಿ ಅನುಕೂಲ, ವ್ಯವಹಾರಗಳಲ್ಲಿ ಧನಾಗಮನ, ಕೀರ್ತಿ ವೃದ್ಧಿ, ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಬಂಧು ಮಿತ್ರರಿಂದ ಸಹಾಯ, ಉದ್ಯೋಗದಲ್ಲಿ ಪ್ರಗತಿ, ಸೇವಕ ವರ್ಗದವರಿಂದ ಸಹಕಾರ, ಶುಭ ಕಾರ್ಯಗಳಲ್ಲಿ ಅನುಕೂಲ, ಈ ವರ್ಷ ಶುಭ ಫಲ.

    ವೃಶ್ಚಿಕ: ಗುರು-ಶನಿ ಪ್ರಭಾವದಿಂದ ಸಂಕಷ್ಟ, ಸ್ಥಳ ಬದಲಾವಣೆ, ಅಧಿಕ ತಿರುಗಾಟ, ಪ್ರಯಾಣದಲ್ಲಿ ಅಡಚಣೆ, ವೃಥಾ ಧನವ್ಯಯ, ಮಿತ್ರರಿಂದ ವಂಚನೆ, ದಾಯಾದಿಗಳ ಕಲಹ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಈ ವರ್ಷ ಅಶುಭ ಫಲ ಪ್ರಾಪ್ತಿ.

    ಧನಸ್ಸು: ಅರ್ಧ ವರ್ಷ ಶುಭ ಫಲ, ಗುರು ಬಲ ಪ್ರಾಪ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಬಂಧು ಮಿತ್ರರ ಸಹಾಯ, ಮನೆಯಲ್ಲಿ ಶುಭ ಕಾರ್ಯ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ವರ್ಷಾರ್ಧದಿಂದ ತೊಂದರೆ, ಸರ್ಕಾರಿ ಕಾರ್ಯಗಳಲ್ಲಿ ಅಡಚಣೆ, ಸ್ಥಳ ಬದಲಾವಣೆ, ಮಾನಸಿಕ ವ್ಯಥೆ, ವೃಥಾ ಅಲೆದಾಟ, ದಾಯಾದಿಗಳ ಕಲಹ, ಇಲ್ಲ ಸಲ್ಲದ ಅಪವಾದ.

    ಮಕರ: ಶನಿ-ಗುರು ಬಲದಿಂದ ಅಶುಭ, ನಾನಾ ರೀತಿಯ ಚಿಂತೆ, ಕಾರ್ಯ ಸಾಧನೆಗೆ ಅಲೆದಾಟ, ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ದುಷ್ಟ ಜನರ ಸಹವಾಸ, ಬಂಧು ಮಿತ್ರರ ವಿರೋಧ, ಕಾರ್ಯಗಳಲ್ಲಿ ವಿಘ್ನ, ವರ್ಷಾರ್ಧದಲ್ಲಿ ಕುಟುಂಬದಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯದಲ್ಲಿ ಪ್ರಗತಿ, ಶುಭ ಕಾರ್ಯಗಳು ನಡೆಯುವುದು, ಗೌರವ ಪ್ರಾಪ್ತಿ.

    ಕುಂಭ: ಶುಭ ಫಲ ಪ್ರಾಪ್ತಿ, ಆರೋಗ್ಯದಲ್ಲಿ ಸುಧಾರಣೆ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸ್ಥಿರಾಸ್ತಿ ಪ್ರಾಪ್ತಿ, ಶುಭ ಕಾರ್ಯ ಜರುಗುವುದು, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯ ಸಾಧನೆಗೆ ತಿರುಗಾಟ, ಅಧಿಕ ಧನವ್ಯ, ಬಂಧುಗಳ ವಿರೋಧ, ಅಲ್ಪ ಧನಾಗಮನ, ಮನಸ್ಸಿನಲ್ಲಿ ನಾನಾ ಆಲೋಚನೆ.

    ಮೀನ: ಶನಿಯ ಪ್ರಭಾವದಿಂದ ಅಶುಭ, ಆರೋಗ್ಯ ಸಮಸ್ಯೆ, ಕಾರ್ಯ ಸಾಧನೆಗೆ ಪರಿಶ್ರಮ, ದುಷ್ಟರ ಸಹವಾಸ ಮಾಡುವಿರಿ, ವೃಥಾ ಧನಹಾನಿ, ಮನಸ್ಸಿಗೆ ಚಿಂತೆ, ಸರ್ಕಾರಿ ವ್ಯವಹಾರಗಳಲ್ಲಿ ಅಡಚಣೆ, ಬಂಧು ಮಿತ್ರರ ವಿರೋಧ, ವರ್ಷದ ಉತ್ತರಾರ್ಧದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಸಾಧಾರಣ ಫಲ ಪ್ರಾಪ್ತಿ.

  • ಮೈಕ್ ಎಂದುಕೊಂಡು ಟಾರ್ಚ್ ಹಿಡಿದು ಮಮತಾ ಭಾಷಣ – ವಿಡಿಯೋ ವೈರಲ್

    ಮೈಕ್ ಎಂದುಕೊಂಡು ಟಾರ್ಚ್ ಹಿಡಿದು ಮಮತಾ ಭಾಷಣ – ವಿಡಿಯೋ ವೈರಲ್

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈಕ್ ಬದಲು ಟಾರ್ಚ್ ಹಿಡಿದುಕೊಂಡು ಭಾಷಣ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಎಡವಟ್ಟಾಗಿದ್ದು, ಮೈಕ್ ಎಂದು ಟಾರ್ಚ್ ಹಿಡಿದು ಸುಮಾರು 16 ಸೆಕೆಂಡ್ ಮಮತಾ ಮಾತನಾಡಿದ್ದಾರೆ.

    ಆಗಿದ್ದು ಏನು?
    ಟಿಎಂಸಿ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ cordless mic ಬಳಸಲಾಗುತಿತ್ತು. ಮಮತಾ ಭಾಷಣ ಮಾಡುವುದಕ್ಕೂ ಮೊದಲು ಅವರ ಸಹಾಯಕರು ಟಾರ್ಚ್ ಹಿಡಿದು ನಿಂತಿದ್ದರು. ತಮ್ಮ ಭಾಷಣದ ಸರದಿ ಬಂದಾಗ ಮಮತಾ ನೇರವಾಗಿ ಸಹಾಯಕರ ಬಳಿ ತೆರಳಿ ಟಾರ್ಚ್ ಪಡೆದು ಮಾತನಾಡಲು ಆರಂಭಿಸಿದ್ದಾರೆ.

    ಈ ಸಂದರ್ಭದಲ್ಲಿ ಅವರ ಮುಖದ ಮೇಲೆ ಟಾರ್ಚ್ ಬೆಳಕು ಬಿದ್ದಿದೆ. ಮಮತಾರ ಈ ಎಡವಟ್ಟನ್ನು ನೋಡಿದ ಕೂಡಲೇ ನಂತರ ಬೇರೊಬ್ಬ ವ್ಯಕ್ತಿ ಟಾರ್ಚ್ ವಾಪಸ್ ಪಡೆದುಕೊಂಡು ಮೈಕ್ ಕೊಟ್ಟಿದ್ದಾರೆ. ಬಳಿಕ ಮಮತಾ ಭಾಷಣ ಮುಂದುವರಿಸಿದ್ದಾರೆ.

    https://www.youtube.com/watch?v=wQP125OWayE

  • ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಮಡಿಕೇರಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಇದು ಕೊಡಗಿನ ಕಾಫಿ ಹಾಗೂ ಕರಿಮೆಣಸು ಬೆಳೆಗಾರರ ಸ್ಥಿತಿಯಾಗಿದೆ. ಬೇಕಾದಾಗ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಕಾಫಿ ಕರಿಮೆಣಸು ಗಿಡಗಳು ದಿನದಿಂದ ದಿನಕ್ಕೆ ಒಣಗುತ್ತಿವೆ.

    ಡಿಸೆಂಬರ್ ನಲ್ಲಿ ಆರಂಭವಾಗುವ ಕಾಫಿ ಕೂಯ್ಲು ಮಾರ್ಚ್‍ವರೆಗೂ ನಡೆಯುತ್ತದೆ. ನಂತರ ಮಳೆ ಅಥವಾ ನೀರಾವರಿ ಮೂಲಕ ಬೆಳೆಗಾರರು ಕಾಫಿಗಿಡದಲ್ಲಿ ಹೂಗಳನ್ನರಳಿಸಿ ಮುಂದಿನ ಬೆಳೆಗೆ ತೋಟಗಳನ್ನ ಅಣಿಗೊಳಿಸುತ್ತಾರೆ. ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯೇ ಬಿದ್ದ ಕಾರಣ ಕಾಫಿ ಗಿಡಗಳು ಒಣಗಲು ಆರಂಭವಾಗಿದೆ.

    ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಕೊಡಗಿನಲ್ಲಿ ಮಳೆಯಾಗಿ ಕಾಫಿ ಗಿಡಗಳಲ್ಲಿ ಹೂ ಬರುವುದು ವಾಡಿಕೆ. ಅದರೆ ಈ ಬಾರಿ ಮಳೆಯೇ ಬಾರದೇ ಗಿಡಗಳು ನಾಶವಾಗುತ್ತಿವೆ. ಆದರೆ ಕಳೆದ ಒಂದು ವಾರದ ಹಿಂದೆ ಮಳೆ ಬಂದು ಕಾಫಿ ಗಿಡಗಳಲ್ಲಿ ಸ್ವಲ್ಪ ಪ್ರಮಾಣದ ಹೂ ಬಿಟ್ಟಿದೆ. ಈಗ ಹೂ ಬಿಟ್ಟಿರುವುದು ಈಗ ಸಮಸ್ಯೆಯಾಗಿದೆ.

    ಕಾಫಿ ಬೆಳೆಯ ಜೊತೆಗೆ ಕರಿಮೆಣಸು ಬೆಳೆಯುತ್ತಾರೆ. ಈ ಬಾರಿ ಪ್ರತಿ ಕೆಜಿ ಮೆಣಸಿಗೆ 700 ರೂ ಇದೆ. ಆದರೆ ಮಳೆ ಇಲ್ಲದೇ ಮೆಣಸಿನ ಬೀಜವೆಲ್ಲವೂ ಹಾಳಾಗುತ್ತಿದ್ದು, ಗುಣಮಟ್ಟ ಕಡಿಮೆಯಾಗ್ತಿದೆ.

    ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಕರಿಮೆಣಸು ಗಿಡಗಳನ್ನು ತೆಗೆದು ಹೊಸದಾಗಿಯೇ ನಾಟಿ ಮಾಡಬೇಕಾಗುತ್ತದೆ. ಹೀಗೆ ಹೊಸದಾಗಿ ನಾಟಿ ಮಾಡಿದ ಬೆಳೆಯಿಂದ ಫಸಲು ಬರಲು ಸುಮಾರು 5 ರಿಂದ 7 ವರ್ಷ ಬೇಕಾಗುತ್ತದೆ. ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಬಾಳೆಲೆ, ನಿಟ್ಟೂರು, ಮಾಯಾಮುಡಿ ಗ್ರಾಮಗಳ ರೈತರು ಈ ತೊಂದರೆಗೆ ಒಳಗಾಗಿದ್ದಾರೆ.