Tag: ಪಬ್ಲಿಕ್ ರಥ

  • ಪಬ್ಲಿಕ್ ತೇರಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಪಬ್ಲಿಕ್ ತೇರಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಬೀದರ್: ಕನ್ನಡಿಗರ ಅಚ್ಚು ಮೆಚ್ಚಿನ ಪಬ್ಲಿಕ್ ಟಿವಿಗೆ ದಶಮಾನೋತ್ಸವದ ಸಂಭ್ರಮ. ಈ ಹಿನ್ನೆಲೆ ಪಬ್ಲಿಕ್ ಟಿವಿಯನ್ನು ಕೈಹಿಡಿದು ನಡೆಸಿದ ರಾಜ್ಯದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಲು ರಾಜ್ಯಾದ್ಯಂತ ಪಬ್ಲಿಕ್ ತೇರು ಸಂಚಾರ ಮಾಡುತ್ತಿದೆ.

    ಬುಧವಾರ ಪಬ್ಲಿಕ್ ದಶರಥ ಗಡಿ ಜಿಲ್ಲೆ ಬೀದರ್‍ಗೆ ಎಂಟ್ರಿ ಕೊಟ್ಟಿದ್ದು, ಬೀದರ್‍ನ ಜನರು ಪಬ್ಲಿಕ್ ತೇರನ್ನು ಬಹಳ ಅದ್ದೂರಿಯಾಗಿ ಸ್ವಾಗತ ಮಾಡಿದರು. ನಗರದ ಐತಿಹಾಸಿಕ ಹನುಮಾನ್ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ಮಾಡಿ ಪಬ್ಲಿಕ್ ಟಿವಿಯ ಒಳಿತಿಗಾಗಿ ಸಂಕಲ್ಪ ಮಾಡಿದರು. ಇದನ್ನೂ ಓದಿ: ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ

    ಸಾರ್ವಜನಿಕರು ಪಬ್ಲಿಕ್ ತೇರಿಗೆ ಹೂ ಮಳೆ ಸುರಿಸಿ ಪರಸ್ಪರ ಸಿಹಿ ಹಂಚಿಕೊಂಡು ಅದ್ದೂರಿಯಾಗಿ ಸ್ವಾಗತ ಮಾಡಿ ಸಂಭ್ರಮಿಸಿದರು. ಪಬ್ಲಿಕ್ ಟಿವಿಯ ಹತ್ತು ವರ್ಷಗಳ ಜರ್ನಿ ಬಗ್ಗೆ ವಿಟಿ ನೋಡುತ್ತಾ ಪಬ್ಲಿಕ್ ಟಿವಿಗೆ ಹಾಗೂ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್‍ಆರ್ ರಂಗನಾಥ್ ಅವರಿಗೆ ಜೈಕಾರದ ಘೋಣೆಗಳನ್ನು ಹಾಕಿ ಪಬ್ಲಿಕ್ ಟಿವಿ ಶತಮಾನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಉತ್ತರ ಬಂದಿಲ್ಲ: ವಿದ್ಯಾರ್ಥಿ ಸಹೋದರ

     

     

    ಅವಮಾನಗಳನ್ನೇ ಮಟ್ಟಿಲಾಗಿ ಮಾಡಿಕೊಂಡು ಪಬ್ಲಿಕ್ ಟಿವಿ ಇಂದು ರಾಜ್ಯದ ನಂಬರ್ ಒನ್ ಚಾನಲ್ ಆಗಿದೆ. ಒಬ್ಬ ವ್ಯಕ್ತಿಯ, ಪಕ್ಷದ ಟಿವಿ ಅಲ್ಲ. ಇದು ಜನ ಸಾಮಾನ್ಯರ ಟಿವಿಯಾಗಿದೆ. ಹೀಗಾಗೀ ನಾವು ಬೀದರ್ ಜನ ಸಮಾನ್ಯರು ಅದ್ಧೂರಿಯಾಗಿ ಪಬ್ಲಿಕ್ ಟಿವಿಯ ದಶರಥಕ್ಕೆ ವಿಶೇಷವಾಗಿ ಪೂಜೆ, ಹೂ ಚೆಲ್ಲುವ ಹಾಗೂ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡಿದ್ದೆವೆ ಎಂದು ಸಾರ್ವಜನಿಕರು ಹಾಗೂ ಪಬ್ಲಿಕ್ ಟಿವಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

  • ಹಾಸನಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಜಿಲ್ಲೆಯಾದ್ಯಂತ ಭರ್ಜರಿ ಸ್ವಾಗತ

    ಹಾಸನಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಜಿಲ್ಲೆಯಾದ್ಯಂತ ಭರ್ಜರಿ ಸ್ವಾಗತ

    ಹಾಸನ: ದಶಕದ ಸಂಭ್ರಮದಲ್ಲಿರುವ ಪಬ್ಲಿಕ್ ಟಿವಿಯ ಸಾಧನೆಯ ಸಂದೇಶ ಸಾರುತ್ತಿರುವ ಪಬ್ಲಿಕ್ ರಥ ಇಂದು ಎರಡನೇ ದಿನ ಹಾಸನ ಜಿಲ್ಲೆಯ ಹಲವೆಡೆ ಸಂಚಾರ ನಡೆಸಿದೆ. ಹಾಸನಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಜಿಲ್ಲೆಯ ಜನ ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.

    ಹನುಂಮತಪುರ ಗ್ರಾಮದ ಪಂಚಮುಖಿ ದೇವಾಲಯದ ಬಳಿ, ಪಬ್ಲಿಕ್ ರಥಕ್ಕೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರೇ ಸಿಹಿ ಹಂಚಿ ಪಬ್ಲಿಕ್ ಟಿವಿಯ ದಶಮಾನೋತ್ಸವನ್ನು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು, ಪಬ್ಲಿಕ್ ಟಿವಿಯು ದಶಕಗಳಿಂದ ಕನ್ನಡ ನಾಡಿನ ಜನರ ಮನೆಮಾತಾಗಿದೆ ಎಂದರು. ಇದನ್ನೂ ಓದಿ: ಮುಸ್ಲಿಂ ಗೂಂಡಾಗಳಿಂದ ಕೊಲೆ – ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ

    ಜನರ ಕಷ್ಟಕ್ಕೆ ಸ್ಪಂದಿಸಿ ನ್ಯಾಯಕೊಡಿಸುವ ಕೆಲಸ ಮಾಡುತ್ತಿದೆ ಅಂತ ಶುಭ ಹಾರೈಸಿದರು. ಹನುಂಮತಪುರದಿಂದ ಪಬ್ಲಿಕ್ ರಥ ನೇರವಾಗಿ ಬೇಲೂರಿಗೆ ಆಗಮಿಸಿತು. ಬೇಲೂರಿನಲ್ಲಿ ಪಬ್ಲಿಕ್ ರಥವನ್ನು ಸ್ವಾಗತಿಸಿದ ಕರವೇ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಪಬ್ಲಿಕ್ ಟಿವಿಗೆ ಜೈಕಾರ ಹಾಕಿ, ನೂರಾರು ವರ್ಷ ಪಬ್ಲಿಕ್ ಟಿವಿ ಜನತೆಯ ಧ್ವನಿಯಾಗಿ ನಿಲ್ಲಲಿ ಎಂದು ಶುಭ ಹಾರೈಸಿದರು.

  • ಮೈಸೂರಿನಲ್ಲಿ ಪಬ್ಲಿಕ್ ರಥ ಸಂಚಾರ

    ಮೈಸೂರಿನಲ್ಲಿ ಪಬ್ಲಿಕ್ ರಥ ಸಂಚಾರ

    ಮೈಸೂರು: ಪಬ್ಲಿಕ್ ಟಿವಿ ದಶಮಾನೋತ್ಸವ ಹಿನ್ನೆಲೆಯಲ್ಲಿ ಪಬ್ಲಿಕ್ ರಥ ಇಡೀ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಇಂದು ಅರಮನೆ ನಗರಿ ಮೈಸೂರು ನಗರ ಪ್ರವೇಶಿಸಿದೆ.

    ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪಬ್ಲಿಕ್ ರಥಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಬೆಟ್ಟದಿಂದ ನಗರಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಯುವ ಸಮೂಹ ಹೂಹಾಕಿ ರಥವನ್ನು ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಪಬ್ಲಿಕ್ ಟಿವಿ ನಡೆದು ಬಂದ ಹಾದಿಯ ವೀಡಿಯೋ ವೀಕ್ಷಿಸಿದರು. ಇಂದು ಮತ್ತು ನಾಳೆ ಮೈಸೂರಿನ ನಗರ ಮತ್ತು ಗ್ರಾಮಾಂತರದಲ್ಲಿ ಸಂಚರಿಸಲಿದೆ.

    ಈ ಬಗ್ಗೆ ಅಭಿಮಾನಿಗಳು ಪಬ್ಲಿಕ್ ಟಿವಿ ದಶಕ ಪೂರೈಸಿದ ಯಶಸ್ಸಿನ ಬಗ್ಗೆ ಮಾತನಾಡಿ, ಪಬ್ಲಿಕ್ ಟಿವಿ ಜನರ ಸಮಸ್ಯೆಗೆ ಧ್ವನಿಯಾಗಿದೆ. ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರ ವ್ಯಕ್ತಿತ್ವ, ನೇರ ನುಡಿಯು ನಮಗೆ ಇಷ್ಟವಾಗುತ್ತದೆ. ಪಬ್ಲಿಕ್ ಟಿವಿಗೆ ಶುಭವಾಗಲಿ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

    ಪಬ್ಲಿಕ್ ಟಿವಿ ಯಾವಾಗಲೂ ಜನರ ಪರವಿದೆ. ಪಬ್ಲಿಕ್ ಟಿವಿಯ ನಡೆದ ಹಾದಿಯನ್ನು ನೋಡಿದರೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಮನೆಯೇ ಮಂತ್ರಾಲಯದಿಂದ ನೋಡಿ ನಮಗೂ ಏನಾದರೂ ಸಹಾಯ ಮಾಡಬೇಕು ಎನಿಸುತ್ತಿತ್ತು ಎಂದು ನುಡಿದರು.

    ಕೊರೊನಾ ಸಮಯದಲ್ಲಿ ಮಾಡಿದ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಸಹಾಯ ಉನ್ನತವಾದ ಕೊಡುಗೆಯಾಗಿದೆ. ಪಬ್ಲಿಕ್ ಟಿವಿ ಮನೆ ಮನೆಗೂ ತಲುಪಿದೆ. ಕಷ್ಟಕಾಲದಲ್ಲಿ ಪಬ್ಲಿಕ್ ಟಿವಿ ಸಹಾಯ ಮಾಡಿದೆ ಎಂದು ಆಟೋ ಚಾಲಕರೊಬ್ಬರು ನೆನಪಿಸಿಕೊಂಡರು. ಇದನ್ನೂ ಓದಿ:  ಕೃಷಿ ಕ್ಷೇತ್ರದಲ್ಲಿ ಕ್ರಾಂತಿ – 100 ʼಕಿಸಾನ್‌ ಡ್ರೋನ್‌ʼಗಳಿಗೆ ಪ್ರಧಾನಿ ಮೋದಿ ಚಾಲನೆ

    ಹತ್ತು ವರ್ಷ ಪೂರೈಸಲು ಕಾರಣದ ರಾಜ್ಯದ ಜನತೆಗೆ ಧನ್ಯವಾದ, ಕೃತಜ್ಞತೆ ಸಲ್ಲಿಸುವ ಸಲುವಾಗಿ, ಪಬ್ಲಿಕ್ ಟಿವಿ ಪಬ್ಲಿಕ್ ದಶ ರಥಕ್ಕೆ ಚಾಲನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಇಂದು ಪಬ್ಲಿಕ್ ಟಿವಿ ತೇರು ಮೈಸೂರಿನಲ್ಲಿ ಸಂಚರಿಸುತ್ತಿದೆ.

  • ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

    ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

    ಬೆಂಗಳೂರು: ಪಬ್ಲಿಕ್ ಟಿವಿಗೆ ದಶಮನೋತ್ಸವದ ಸಂಭ್ರಮ. ಈ ಸಾರ್ಥಕ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಲು ಪಬ್ಲಿಕ್ ದಶರಥ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಪಬ್ಲಿಕ್ ದಶರಥ ಸಂಚರಿಸಿ ಸಿಲಿಕಾನ್ ಸಿಟಿ ಜನರಿಗೆ ಕೃತಜ್ಞತೆ ಸಲ್ಲಿಸಿದೆ. ಬೆಂಗಳೂರಿನ ಜನ ಕೂಡ ಪಬ್ಲಿಕ್ ಟಿವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಹರಸಿ ಹಾರೈಸಿದ್ದಾರೆ.

    ನಿಮ್ಮ ಪ್ರೀತಿಯ ಕೂಸು ಪಬ್ಲಿಕ್ ಟಿವಿಗೆ 10 ವರ್ಷದ ಸಂಭ್ರಮ. ಹತ್ತು ವರ್ಷ ಪೂರೈಸಲು ಕಾರಣದ ನಿಮಗೆ ಅಂದ್ರೆ ರಾಜ್ಯದ ಜನತೆಗೆ ಧನ್ಯವಾದ, ಕೃತಜ್ಞತೆ ಸಲ್ಲಿಸುವ ಸಲುವಾಗಿ, ಪಬ್ಲಿಕ್ ಟಿವಿ ನಿನ್ನೆ ಪಬ್ಲಿಕ್ ದಶ ರಥಗೆ ಚಾಲನೆ ನೀಡಿತ್ತು. ಪಬ್ಲಿಕ್ ದಶರಥಗೆ ಚಾಲನೆ ಸಿಕ್ಕ ಹಿನ್ನೆಲೆ ಇಂದು ಪಬ್ಲಿಕ್ ಟಿವಿ ತೇರು ಬೆಂಗಳೂರಿನಲ್ಲಿ ಸಂಚರಿಸ್ತು.

    ಪಬ್ಲಿಕ್ ಟಿವಿಯ ಕಚೇರಿ ಯಶವಂತಪುರದಿಂದ ಹೊರಟ ಪಬ್ಲಿಕ್ ರಥ ಮಲ್ಲೇಶ್ವರಂ ಮಾರ್ಗವಾಗಿ ಸಂಚರಿಸ್ತು. ಮಲ್ಲೇಶ್ವರಂನ 18 ನೇ ಕ್ರಾಸ್‌ನಲ್ಲಿ ಎಲ್ ಇಡಿ ಹೊಂದಿರುವ ಪಬ್ಲಿಕ್ ರಥದಲ್ಲಿ ಪಬ್ಲಿಕ್ ಟಿವಿ ನಡೆದು ಬಂದ ಹಾದಿ, ಜನರು ಬೆಳೆಸಿರುವ ರೀತಿ ಬಗ್ಗೆ ವಿವರಣೆ ನೀಡ್ತಾ ಜನರಿಗೆ ಧನ್ಯವಾದ ತಿಳಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಜನ ಪಬ್ಲಿಕ್ ಟಿವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು.

    ಬೆಂಗಳೂರಿನ ಹೃದಯ ಭಾಗ ಆಗಿರೋ ಮೆಜೆಸ್ಟಿಕ್‌ನಲ್ಲಿ ರಂಗನಾಥ್ ಸರ್ ಧ್ವನಿ ಕೇಳಿದ ತಕ್ಷಣವೇ ಜನ ನಿಂತು ನೋಡಿದ್ರು. ಪಬ್ಲಿಕ್ ಟಿವಿಗೆ ಶುಭಕೋರಿದ್ರು. ಇನ್ನು ಜಯನಗರ ಮತ್ತು ಕೆ.ಆರ್ ಮಾರ್ಕೆಟ್ ನಲ್ಲಿ ಕೂಡ ಪಬ್ಲಿಕ್ ದಶರಥ ಧನ್ಯವಾದ ಆಲಿಸಿದ ಜನ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ನೇರವಾಗಿ ಮಾತಾಡ್ತಾರೆ ಅದು ನಮಗೆ ಇಷ್ಟ ಅಂದ್ರು. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

    ಒಟ್ಟಾರೆ ಪಬ್ಲಿಕ್ ಟಿವಿಯ ದಶಮಾನೋತ್ಸವ ಹಿನ್ನೆಲೆ ಜನರಿಗೆ ಕೃತಜ್ಞತೆ ಸಲ್ಲಿಸಲು ಪಬ್ಲಿಕ್ ತೇರು ಬೆಂಗಳೂರು ಸಂಚರಿಸಿದೆ. ನಾಳೆಯಿಂದ ಎಲ್ಲಾ ಜಿಲ್ಲೆಗಳಿಗೂ ಪ್ರಯಾಣ ಬೆಳೆಸಲಿದೆ. ಪಬ್ಲಿಕ್ ರಥದ ಕೃತಜ್ಞತೆಯನ್ನ ಜನ ಸ್ವೀಕರಿಸಿ ಪಬ್ಲಿಕ್ ಟಿವಿ ಮೇಲೆ ಇದೇ ರೀತಿ ಪ್ರೀತಿ ವಿಶ್ವಾಸ ಇರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಇದನ್ನೂ ಓದಿ: ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ – ಎಸ್‍ಪಿಗೆ ಎಚ್‍ಡಿಕೆ ವಾರ್ನಿಂಗ್