Tag: ಪಬ್ಲಿಕ್ ಡಿವಿ

  • ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ

    ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ

    – ಅಪ್ಪು ಸಮಾಜ ಸೇವೆಯಲ್ಲಿ ತೊಡಿಗಿದ್ದು ನನಗೆ ಗೊತ್ತಿರಲಿಲ್ಲ
    – ಯಾರೂ ಆತುರಪಡಬೇಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥಕವಾಗಿ ಅನ್ನಸಂತರ್ಪಣೆಯನ್ನು ಅರಮನೆ ಮೈದಾನದಲ್ಲಿ ಮಾಡಲಾಗುತ್ತಿದೆ. ಲಕ್ಷಾಂತರ ಅಭಿಮಾನಿಗಳು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಶಿವರಾಜ್‍ಕುಮಾರ್ ಅವರು ಅಭಿಮಾನಿಗಳಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಷಾರಾಗಿ ಊಟ ಮಾಡಿ ಮನೆಗೆ ಹೋಗಿ. ಯಾರೂ ಆತುರಪಡಬೇಡಿ. ನಿಮ್ಮ ಆಶೀರ್ವಾದ ಪ್ರೀತಿ ಬೇಕು ನಮಗೆ. ಅಪ್ಪು ಹೆಸರಿನಲ್ಲಿ ಒಳ್ಳೆಯ ಕೆಲವನ್ನು ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅಭಿಮಾನಿಗಳಿಗೆ ಕೈ ಮುಗಿದು ಶಿವರಾಜ್‍ಕುಮಾರ್ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಆತ್ಮದ ಜೊತೆ ಮಾತಾಡಿದ್ದಾಗಿ ವೀಡಿಯೋ ಅಪ್ಲೋಡ್- ಚಾರ್ಲಿಗೆ ಅಭಿಮಾನಿಗಳು ಕ್ಲಾಸ್

    ಅಪ್ಪು ಆಸೆ ನೆರವೇರುತ್ತಿದೆ. ಹೀಗೆ ಅವನ ಆಸೆ ನೆರವೇರಬೇಕು ಎಂದು ದೇವರ ಇಚ್ಛೆ ಇತ್ತು ಅನ್ನಿಸುತ್ತಿದೆ. ಅಭಿಮಾನಿಗಳಿಂದ ನಾವು ಈ ಸ್ಥಾನದಲ್ಲಿ ಇದ್ದೇವೆ. ಅವರಿಂದ ಪಡೆದಿದ್ದನ್ನು ಅವರಿಗೆ ಕೊಡುತ್ತಿದ್ದೇವೆ. ಅಪ್ಪು ಸಮಾಜ ಸೇವೆ ಕಾರ್ಯಗಳಲ್ಲಿ ತೊಡಿದ್ದು, ನನಗೆ ಗೊತ್ತಿರಲಿಲ್ಲ. ನಾವು ಇಂಥಹ ವಿಚಾರಗಳನ್ನು ಮಾತನಾಡುತ್ತಿರಲಿಲ್ಲ. ಕುಟುಂಬದ ಸದಸ್ಯರಿಗೆ ಈ ವಿಚಾರ ಗೊತ್ತಿಲ್ಲ ಎಂದರೆ ಅಪ್ಪು ಈ ವಿಚಾರವಾನ್ನು ಎಷ್ಟು ಸಿಕ್ರೇಟ್ ಆಗಿ ಇಟ್ಟಿರಬೇಕು ಎಂದು ತಿಳಿಯುತ್ತದೆ. ನನಗೆ ಹೆಮ್ಮೆ ಆಗುತ್ತದೆ. ಅಪ್ಪುನಂತ ತಮ್ಮನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್

    ಎಡಗೈಯಲ್ಲಿ ಮಾಡುವ ಸಹಾಯ ಬಲಗೈಗೆ ಗೊತ್ತಾಗಬಾರದು ಎಂದು ಅಪ್ಪಾಜಿ ಹೇಳುತ್ತಿದ್ದರು. ನಾವು ಅದನ್ನು ಫಾಲೋ ಮಾಡುತ್ತಿದ್ದೇವೆ. ಸಮಾಧಾನವಾಗಿ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ, ಮಾಡುವ ಕಾರ್ಯ ಯಾವುದು ಎಂದು ಮನೆಗ ತಿಳಿದಿದೆ. ಪ್ರತಿಯೊಬ್ಬ ಅಭಿಮಾನಿಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕೈಲಾದಷ್ಟು ಅನ್ನಸಂತರ್ಪಣೆ ಮಾಡುತ್ತಿದ್ದೇವೆ. ಎಂದು ಹೇಳಿದ್ದಾರೆ.

  • ಪ್ರಶಸ್ತಿಗಳಿಗಿಂತ ಅಪ್ಪು ವ್ಯಕ್ತಿತ್ವ ದೊಡ್ಡದು: ಚೇತನ್

    ಪ್ರಶಸ್ತಿಗಳಿಗಿಂತ ಅಪ್ಪು ವ್ಯಕ್ತಿತ್ವ ದೊಡ್ಡದು: ಚೇತನ್

    ರಾಯಚೂರು: ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಅಪ್ಪು ಅವರ ಸಾಮಾಜಿಕ ಕಾಳಜಿ, ಒಳ್ಳೆಯತನ ದೊಡ್ಡದು ಎಂದು ನಟ ಚೇತನ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದವರು, ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಅಪ್ಪು ಅವರ ಸಾಮಾಜಿಕ ಕಾಳಜಿ, ಒಳ್ಳೆಯತನ ದೊಡ್ಡದು. ಪ್ರಶಸ್ತಿಯಿಂದ ಅಪ್ಪು ಅವರ ವಿಚಾರಗಳು ಹೆಚ್ಚು ಆಗಲ್ಲ , ಸಿಗದಿದ್ರೆ ಕಡಿಮೆಯೂ ಆಗಲ್ಲ ಪ್ರಶಸ್ತಿಗಿಂತ ಅಪ್ಪು ವ್ಯಕ್ತಿತ್ವವೇ ಮುಖ್ಯ. ಅಪ್ಪು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾವಾದದ್ದು ಎಂದಿದ್ದಾರೆ. ಇದನ್ನೂ ಓದಿ:  ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

    ಅಪ್ಪು ಮತ್ತು ನಮ್ಮ ಸ್ನೇಹ 13 ವರ್ಷದ್ದು, ಒಟ್ಟಿಗೆ ಒಂದೇ ಕಡೆ ಜಿಮ್ ಮತ್ತು ಯೋಗ ಮಾಡುತ್ತಿದ್ದೇವು. 2012 ರ ಬಳಿಕ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಅಪ್ಪು ಸಾವಿನ ಬಳಿಕ ಕಣ್ಣು ದಾನ ಮಾಡಿ ನಾಲ್ಕು ಜನರ ಬದುಕಿಗೆ ಬೆಳಕಾಗಿದ್ದಾರೆ. ನಾವು ಕೂಡ ಅಪ್ಪು ಅವರ ಆದರ್ಶದಂತೆ ದೇಹ ಮತ್ತು ಅಂಗಾಂಗಗಳ ದಾನ ಮಾಡಬೇಕು ಅಂತ ನಟ, ಹೊರಾಟಗಾರ ಚೇತನ್ ಹೇಳಿದ್ದಾರೆ. ಇದನ್ನೂ ಓದಿ: ಹೆಚ್.ಆರ್ ರಂಗನಾಥ್ ಅವರಿಗೆ ನಾನು ಆಭಾರಿಯಾಗಿದ್ದೇನೆ: ಹರೇಕಳ ಹಾಜಬ್ಬ

    ಸಿದ್ದರಾಮಯ್ಯ ತನ್ನ ಜಾತಿಗೆ ಹೆಚ್ಚು ಸೌಲಭ್ಯ ನೀಡಿದ್ದಾರೆ: ದೇವದಾಸಿ ಪದ್ದತಿ ನಿರ್ಮೂಲನೆ ಹಾಗೂ ಅಲೆಮಾರಿ ಜನಾಂಗಕ್ಕೆ ಸೂರು ಒದಗಿಸಲು ಹೋರಾಟ ನಡೆಸಿದ್ದೇವೆ. ಜನಪ್ರತಿನಿಧಿಗಳು ಬಣ್ಣದ ಮಾತನಾಡದೆ ಕೆಲಸ ಮಾಡಬೇಕು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರು ಪಕ್ಷಗಳು ಬ್ರಾಹ್ಮಣ್ಯದ ಪರವಾಗೇ ಇವೆ. ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಅಲೆಮಾರಿಗಳನ್ನ ಕಡೆಗಣಿಸಲಾಗಿದೆ. ಸಿದ್ದರಾಮಯ್ಯ ತಾವು ಹುಟ್ಟಿದ ಜಾತಿಗೆ ಹೆಚ್ಚು ಸೌಲಭ್ಯ ಕೊಟ್ಟಿದ್ದಾರೆ, ದಲಿತರಿಗೆ ಹೆಚ್ಚು ಸೌಲಭ್ಯ ನೀಡಿಲ್ಲ. ಜನಪ್ರತಿನಿಧಿಗಳು ಬಣ್ಣಬಣ್ಣದ ಮಾತುಗಳನ್ನ ಹೇಳಿ ತಮ್ಮ ಮತಗಳಿಗೆ ಮಾತ್ರ ಬಡ ಜನರನ್ನ ಬಳಸಿಕೊಳ್ಳುತ್ತಿದ್ದಾರೆ ಅಂತ ಚೇತನ್ ಆರೋಪಿಸಿದ್ದಾರೆ.