Tag: ಪಬ್ಲಿಕ್ ಟಿವಿc

  • ಇಂದಿನಿಂದ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

    ಇಂದಿನಿಂದ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

    – ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ

    ಬೆಂಗಳೂರು: ಕೊರೊನಾ ಎರಡನೇ ಅಲೆ ಮಧ್ಯೆ ಶಿಕ್ಷಣ ಇಲಾಖೆ 2021ನೇ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಾರಂಭ ಮಾಡಿದೆ. ಇಂದಿನಿಂದ ಜುಲೈ 10ರ ವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

    ಆಗಸ್ಟ್ 28 ಮತ್ತು 29ರಂದು ಸಿಇಟಿ ಪರೀಕ್ಷೆ ನಡೆಸಲು ಕೆಇಎ ಈಗಾಗಲೇ ವೇಳಾಪಟ್ಟಿ ಪ್ರಕಟ ಮಾಡಿದೆ. ಹೀಗಾಗಿ ಇದೀಗ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಪರೀಕ್ಷೆ ಬರೆಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    ಎಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ-ಫಾರ್ಮ್, ಕೃಷಿ ವಿಜ್ಞಾನ, ವೆಟರಿನರಿ ಕೋರ್ಸ್ ಸೀಟು ಹಂಚಿಕೆಗೆ ರಾಜ್ಯ ಸರ್ಕಾರ ಸಿಇಟಿ ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೇಳಾಪಟ್ಟಿ ಹೀಗಿದೆ.

    ಕೆಇಎ ವೇಳಾಪಟ್ಟಿ
    – ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ- ಜೂನ್ 15 ರಿಂದ ಜುಲೈ 10ವರೆಗೆ
    – ಆನ್‍ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನ- ಜುಲೈ 13
    – ವಿಶೇಷ ಪ್ರವರ್ಗಗಳ ದಾಖಲಾತಿ ಸಲ್ಲಿಕೆ- ಜುಲೈ 14 ರಿಂದ ಜುಲೈ 20
    – ಆನ್‍ಲೈನ್ ಅರ್ಜಿ ಮಾಹಿತಿ ತಿದ್ದುಪಡಿ- ಜುಲೈ 19 ರಿಂದ ಜುಲೈ 22
    – ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳುವುದು- ಆಗಸ್ಟ್ 13ರಿಂದ

  • ಬೆಂಗಳೂರಿನಲ್ಲಿ ವರುಣನ ಅಬ್ಬರ- ಭಾರೀ ಮಳೆಗೆ ಫುಲ್ ಟ್ರಾಫಿಕ್

    ಬೆಂಗಳೂರಿನಲ್ಲಿ ವರುಣನ ಅಬ್ಬರ- ಭಾರೀ ಮಳೆಗೆ ಫುಲ್ ಟ್ರಾಫಿಕ್

    ಬೆಂಗಳೂರು: ಸಿಲಿಕಾನ್ ಸಿಟಿಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿಯಿತು.

    ನಗರದ ಯಶವಂತಪುರ, ಶಾಂತಿನಗರ, ರಾಜಾಜಿನಗರ, ಮೆಜೆಸ್ಟಿಕ್, ಬನಶಂಕರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಮಳೆಯಿಂದ ವಾಹನ ಸವಾರರು ಕಂಗಾಲಾಗಿದ್ದು, ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೆ ಅಂಡರ್ ಪಾಸ್‍ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಡಿದರು.

    ದೀಢೀರ್ ಸುರಿದ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಸಂಪೂರ್ಣ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಕೆಲಸ ಮುಗಿಸಿ ಮನೆಗೆ ತೆರಳುವವವರು ಕೆಲವರು ಮಳೆಯಲ್ಲೇ ನೆನೆದರೆ, ಇನ್ನೂ ಅಂಗಡಿ ಮುಂಗಟ್ಟುಗಳ ಬಳಿ ಹಲವರು ಆಶ್ರಯ ಪಡೆದರು.

    ಆನೇಕಲ್ ತಾಲೂಕಿನಾದ್ಯಂತ ಸಹ ಮಳೆಯಾಗಿದ್ದು, ಆನೇಕಲ್ ಅತ್ತಿಬೆಲೆ ಎಲೆಕ್ಟ್ರಾನ್ ಸಿಟಿ ಬನ್ನೇರುಘಟ್ಟ ಭಾಗದಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರರು ಅಂಗಡಿ-ಮುಂಗಟ್ಟು ಮತ್ತು ಬಸ್ ನಿಲ್ದಾಣದ ಬಳಿ ಆಶ್ರಯ ಪಡೆದರು.

  • ಹೊಸವರ್ಷ, ಕ್ರಿಸ್ಮಸ್ ರಜೆ – ಕೊಡಗಿನ ಹೋಂಸ್ಟೇ, ರೆಸಾರ್ಟ್ ಭರ್ತಿ

    ಹೊಸವರ್ಷ, ಕ್ರಿಸ್ಮಸ್ ರಜೆ – ಕೊಡಗಿನ ಹೋಂಸ್ಟೇ, ರೆಸಾರ್ಟ್ ಭರ್ತಿ

    ಮಡಿಕೇರಿ: ಹೊಸವರ್ಷ ಮತ್ತು ಕ್ರಿಸ್ಮಸ್ ಹಿನ್ನಲೆ ರಜೆ ಇರುವುದರಿಂದ ಕೊಡಗಿನ ಕಡೆ ಪ್ರವಾಸಿಗರ ದಂಡು ಹೆಚ್ಚಾಗಿ ಬರುತ್ತಿದ್ದು, ಕೊಡಗು ಜಿಲ್ಲೆಯಲ್ಲಿರುವ ಶೇ.90 ರಷ್ಟು ಹೋಂಸ್ಟೇ ಹಾಗೂ ರೆಸಾರ್ಟ್‍ಗಳು ಈಗಾಗಲೇ ಭರ್ತಿಯಾಗಿವೆ.

    ಪ್ರಕೃತಿ ಸೌಂದರ್ಯವನ್ನು ಸವಿಯುವ ಜೊತೆಗೆ ಹೊಸವರ್ಷ ಆಚರಣೆಗಾಗಿ ಜನರು ಕೊಡಗಿನತ್ತ ಆಗಮಿಸುತ್ತಿದ್ದಾರೆ. ಕೊಡಗಿನ ಪ್ರವಾಸಿತಾಣಗಳಲ್ಲಿ ಒಂದಾದ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ನಿನ್ನೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಬೆಳಿಗ್ಗೆಯಿಂದ ಮೂರು ಗಂಟೆ ಅವಧಿಯಲ್ಲಿ ಬರೋಬ್ಬರಿ 2000 ರಷ್ಟು ಪ್ರವಾಸಿಗರು ಎಂಟ್ರಿ ಕೋಟ್ಟಿದ್ದಾರೆ.

    ಪ್ರವಾಸಿಗರು ಕೊರಾನಾ ಅತಂಕ ಇಲ್ಲದೆ ಮಾಸ್ಕ್ ಗಳನ್ನು ಧರಿಸದೇ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಸಖತ್ ಎಂಜಾಯ್ ಮೆಂಟ್ ಮೂಡ್ ನಲ್ಲಿ ಇದ್ದಾರೆ. ರಾಜ್ಯ, ಹೊರಾ ರಾಜ್ಯ ಹಾಗೂ ವಿದೇಶಗಳಿಂದ ಬಂದಿರುವ ಪ್ರವಾಸಿಗರು ಕಾವೇರಿ ನದಿ ತೀರದಲ್ಲೇ ಹೆಚ್ಚಾಗಿ ಜಾಲಿ ಮೂಡ್‍ನಲ್ಲಿ ಕಾಲ ಕಳೆಯುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.

  • ಕೊಡಗಿನ ಬೆಡಗಿ ಈಗ ‘ನ್ಯಾಷನಲ್ ಕ್ರಶ್’!

    ಕೊಡಗಿನ ಬೆಡಗಿ ಈಗ ‘ನ್ಯಾಷನಲ್ ಕ್ರಶ್’!

    ಬೆಂಗಳೂರು: ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಮನೆಮಾತಾಗಿದ್ದ ಕೊಡಗಿನ ಬೆಡಗಿ, ಇದೀಗ ತಮಿಳು- ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ದೇಶದ ಜನ ರಶ್ಮಿಕಾ ಮುಗ್ಧತೆಗೆ ಮನಸೋತಿದ್ದಾರೆ.

    ಹೌದು, ಒಂದು ಕಾಲದಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ರಶ್ಮಿಕಾ, ಇದೀಗ ದೇಶದ ಕ್ರಶ್ ಆಗಿದ್ದಾರೆ. ಹೀಗಂತ ನಾವು ಹೇಳ್ತಿಲ್ಲ. ಗೂಗಲ್ ನಲ್ಲಿ ‘ನ್ಯಾಷನಲ್ ಕ್ರಶ್ ಆಫ್ ಇಂಡಿಯಾ’ ಅಂತ ಹುಡುಕಿದ್ರೆ ರಶ್ಮಿಕಾ ಮಂದಣ್ಣ ಅವರ ಹೆಸರು, ಫೋಟೋ ಬರುತ್ತಿದೆ. ಹೀಗಾಗಿ ಕೊಡಗಿನ ಬೆಡಗಿ ಇಡೀ ದೇಶದ ಹಾಟ್ ಫೇವರೆಟ್ ಆಗಿದ್ದಾರೆ ಎಂಬುದು ಬಯಲಾಗಿದೆ.

    ನ್ಯಾಷನಲ್ ಕ್ರಶ್ ಎಂದೆನಿಸಿಕೊಳ್ಳುವ ಮೂಲಕ ರಶ್ಮಿಕಾ, ಈ ಹಿಂದೆ ಇದ್ದಂತಹ ಪ್ರಿಯಾ ಪ್ರಕಾಶ್ ವಾರಿಯರ್, ದಿಶಾ ಪಟಾನಿ ಅವರುಗಳನ್ನು ಹಿಂದಿಕ್ಕಿ, ತಾವು ಅತೀ ವೇಗದಲ್ಲಿ ಮುಂದೆ ಬಂದಿದ್ದಾರೆ ಎಂದರೆ ತಪ್ಪಾಗಲಾರದು.

    ರಶ್ಮಿಕಾ ಅವರು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಮಾತ್ರ ನಟಿಸಿದ್ದಾದರೂ ಅವರ ನಟನೆಯ ಹಲವು ಚಿತ್ರಗಳು ಹಿಂದಿಯಲ್ಲಿ ಡಬ್ ಆಗಿವೆ. ಹೀಗಾಗಿ ಈ ಸಿನಿಮಾವನ್ನು ಸಾಕಷ್ಟು ಮಂದಿ ವೀಕ್ಷಿಸಿದ್ದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವುದರೊಂದಿಗೆ ದೇಶದ ಕ್ರಶ್ ಆಗಿದ್ದಾರೆ.

    ರೂಪದರ್ಶಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿರುವ ನಟಿ ರಶ್ಮಿಕಾ ಮಂದಣ್ಣ, ನಂತರ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದು ಬೀಗಿದರು. ಸದ್ಯ ಇಡೀ ದಕ್ಷಿಣ ಭಾರತ ಸಿನಿಮಾರಂಗದ ಬ್ಯುಸಿ ನಟಿಯರಲ್ಲಿ ತಾವು ಕೂಡ ಒಬ್ಬರಾಗಿದ್ದಾರೆ. ಒಂದು ಕಾಲದಲ್ಲಿ ರಾಜ್ಯದ ಜನರ ಅಚ್ಚುಮೆಚ್ಚಿನ ನಟಿಯಾಗಿದ್ದ ಈಕೆ ಇದೀಗ ಇಡೀ ದೇಶದ ಜನರೇ ತಮ್ಮತ್ತ ಸೆಳೆಯುವಂತಾಗಿದ್ದಾರೆ.