Tag: ಪಬ್ಲಿಕ್ ಟಿವಿ Young man

  • ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

    ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

    ಮುಂಬೈ: 24 ವರ್ಷದ ಯುವಕರೊಬ್ಬರು ತಾವೇ ನಿರ್ಮಿಸಿದ ಹೆಲಿಕಾಪ್ಟರ್ ಟ್ರಯಲ್ ರನ್ ನೋಡುವ ವೇಳೆ ಅದರ ಬ್ಲೇಡ್ ಗಂಟಲಿಗೆ ತಗುಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಮಹಾಗಾಂವ್ ತಾಲೂಕಿನ ಪುಲ್ಸವಾಂಗಿ ಗ್ರಾಮದ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ 8ನೇ ತರಗತಿಯಲ್ಲಿದ್ದಾಗಲೇ ಶಾಲೆ ತೊರೆದು ಮೆಕ್ಯಾನಿಕ್ ಆಗಿ ಸ್ಟಿಲ್ ಪೈಪ್‍ಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದರು. ಅವರೇ ಸಿಂಗಲ್ ಸೀಟ್ ಇರುವ ಹೆಲಿಕಾಪ್ಟರ್ ಮೂಲ ಮಾದರಿಯೊಂದನ್ನು ನಿರ್ಮಿಸಿದ್ದರು. ಆದರೆ ಹೆಲಿಕಾಪ್ಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷಿಸುತ್ತಿದ್ದ ವೇಳೆ ಬ್ಲೇಡ್ ತಗುಲಿ ಅವರ ಗಂಟಲು ಕಟ್ ಆಗಿದೆ. ಈ ಘಟನೆ ಆಗಸ್ಟ್ 10 ರಂದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ನಡೆದಿದ್ದು, ಗಾಯಗೊಂಡ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಇಸ್ಮಾಯಿಲ್ ಶೇಖ್ ಮೃತಪಟ್ಟಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ.

    ಈ ಕುರಿತಂತೆ ಪೊಲೀಸರು, ಮೃತ ವ್ಯಕ್ತಿ 2 ವರ್ಷಗಳ ಹಿಂದೆ ಈ ಹೆಲಿಕಾಪ್ಟರ್‌ನನ್ನು ನಿರ್ಮಿಸಿದ್ದರು. ಅಲ್ಲದೇ ಹೆಲಿಕಾಪ್ಟರ್ ಚಾಪರ್ ಸಿದ್ಧಪಡಿಸಲು ವೆಲ್ಡಿಂಗ್ ಸ್ಟೀಲ್ ಪೈಪ್ ಮತ್ತು ಮಾರುತಿ 800 ಎಂಜಿನ್ ಬಳಸಿದ್ದರು. ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಸಾರ್ವಜನಿಕವಾಗಿ ಹೆಲಿಕಾಪ್ಟರ್‍ನನ್ನು ಅನಾವರಣಗೊಳಿಸುವ ಯೋಜನೆ ಹೊಂದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

    ಈ ಬಗ್ಗೆ ಇಸ್ಮಾಯಿಲ್ ಅವರ ಸಹೋದರ ಮತ್ತು ಮೂವರು ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸದ್ಯ ಹೆಲಿಕಾಪ್ಟರ್‌ನನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ. ಇದನ್ನೂ ಓದಿ:BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

  • ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

    ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

    ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಅಟ್ಟುವನಹಳ್ಳಿ ಗ್ರಾಮದ ಮಹದೇವು ಜಮೀನಿನಲ್ಲಿ ಯುವಕನ ಶವ ಪತ್ತೆಯಾಗಿದೆ. ಸುಮಾರು 30-35 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಆರೋಪಿಗಳು ಎಸೆದು ಹೋಗಿದ್ದಾರೆ. ಯುವಕ ಯಾರು ಎಲ್ಲಿಯವನು ಎಂದು ಇನ್ನೂ ಪತ್ತೆಯಾಗಿಲ್ಲ.

    ಸದ್ಯ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಕೊಲೆಯಾಗಿರುವ ಯುವಕನ ಶರೀರವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಸಿಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

  • ದಲಿತರಿಗೆ ಕ್ಷೌರ ಮಾಡಲ್ಲ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕರು

    ದಲಿತರಿಗೆ ಕ್ಷೌರ ಮಾಡಲ್ಲ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕರು

    ಕೊಪ್ಪಳ: ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕರು ಹೇಳಿದ್ದಕ್ಕೆ ಮನನೊಂದು ಯುವಕರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಹೊಸಳ್ಳಿಯಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿ ಕ್ಷೌರಿಕರು ಜಗಳ ಮಾಡಿದ್ದಾರೆ. ಇದರಿಂದ ನೊಂದ ದಲಿತ ಯುವಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂಬಂಧ 16 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಹೊಸಳ್ಳಿಯಲ್ಲಿ ಜೂ. 6 ರಂದು ಗ್ರಾಮದ ಸಣ್ಣ ಹನುಮಂತ ಹಾಗೂ ಬಸವರಾಜ ಎಂಬವರು ಕ್ಷೌರ ಮಾಡಿಸಲು ಹೋಗಿದ್ದರು. ಆಗ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡಿದ್ದಾರೆ. ನಮಗೆ ಯಾಕೆ ಕ್ಷೌರ ಮಾಡುವುದಿಲ್ಲ ಎಂದು ದಲಿತರು ಪ್ರಶ್ನಿಸಿದ್ದು ನಂತರ ಎಂದು ವಾಗ್ವಾದ ನಡೆದಿದೆ. ಇದನ್ನು ಓದಿ: ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ

    ಇದೇ ಸಂದರ್ಭದಲ್ಲಿ ಸ್ಥಳೀಯ ಸವರ್ಣೀಯರು ಸೇರಿಕೊಂಡು ಕ್ಷೌರ ಮಾಡಿಸಿಕೊಳ್ಳಲು ಬಂದವರ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಗಲಾಟೆಯ ನಂತರ ಇಬ್ಬರು ಯುವಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಯಲಬುರ್ಗಾ ಆಸ್ಪತ್ರೆಗೆ ಸೇರಿಸಲಾಗಿದೆ.

    ಈ ಘಟನೆಯ ಬಳಿಕ ಇಬ್ಬರು ಕ್ಷೌರಿಕರು ಹಾಗೂ ಸ್ಥಳೀಯ 14 ಜನರ ಮೇಲೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಪ್ಪಳ ಡಿವೈಎಸ್‍ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇದನ್ನು ಓದಿ: ವೆಂಟಿಲೇಟರ್ ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು

  • ಪ್ರೀತ್ಸೆ..ಪ್ರೀತ್ಸೆ ಅಂತ ಕಾಡಿದ ಪಾಗಲ್ ಪ್ರೇಮಿ – ಯುವಕನ ಕಾಟ ಸಹಿಸಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ

    ಪ್ರೀತ್ಸೆ..ಪ್ರೀತ್ಸೆ ಅಂತ ಕಾಡಿದ ಪಾಗಲ್ ಪ್ರೇಮಿ – ಯುವಕನ ಕಾಟ ಸಹಿಸಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ

    ಶಿವಮೊಗ್ಗ: ಪ್ರೀತ್ಸೆ, ಪ್ರೀತ್ಸೆ ಅಂತ ಬೆನ್ನಿಗೆ ಬಿದ್ದಿದ್ದ ಯುವಕನಿಂದ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಮದಲ್ಲಿ ನಡೆದಿದೆ.

    ಹೊಸನಗರ ತಾಲೂಕಿನ ಸಹನಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸಹನಾ ಹೊಸ ನಗರದ ಹೋಲಿ ರೆಡಿಮೆಡ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಪ್ರಶಾಂತ್ ಕನ್ನಳ್ಳಿಯ ನಿವಾಸಿಯಾಗಿದ್ದು, ತನ್ನನ್ನು ಪ್ರೀತಿಸುವಂತೆ ಆಗಾಗ ಸಹಾನ ಫೋನ್‍ಗೆ ಕರೆ ಮಾಡಿ ಪದೇ ಪದೇ ಪೀಡಿಸುತ್ತಿದ್ದ. ಈ ಬಗ್ಗೆ ಮೃತ ಸಹನಾ ಕೂಡ ತನ್ನ ತಾಯಿಯ ಜೊತೆ ಹೇಳಿಕೊಂಡಿದ್ದಳು. ನಂತರ ಸಹನಾಳ ತಂದೆ ತಾಯಿ ಪ್ರಶಾಂತ್ ಗೆ ತನ್ನ ಮಗಳಿಗೆ ಫೋನ್ ಮಾಡಬೇಡ, ಅವಳ ಹಿಂದೆ ಹೋಗಬೇಡ ಎಂದು ಬುದ್ದಿ ಹೇಳಿದ್ದರು. ಇದನ್ನು ಓದಿ:  ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ಬುದ್ದಿ ಹೇಳಿದರೂ ಪ್ರಶಾಂತ್ ತನ್ನ ಚಾಳಿಯನ್ನು ಮುಂದುವರಿಸಿದ್ದ. ಇದರಿಂದ ಬೇಸತ್ತ ಸಹನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಮ್ಮ ಮಗಳ ಆತ್ಮಹತ್ಯೆಗೆ ಪ್ರಶಾಂತ್ ಕಾರಣ ಎಂದು ಸಹನಾ ಪೋಷಕರಾದ ಸುಧಾಕರ್ ಹಾಗೂ ಮಮತ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಹನಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಪ್ರಶಾಂತ್ ನಾಪತ್ತೆಯಾಗಿದ್ದಾನೆ. ಇದನ್ನು ಓದಿ: ಗುಡುಗು ಯತ್ನಾಳ್, ಮಿಂಚು ಯೋಗೇಶ್ವರ್ ಮಳೆ ಬಂದ್ಮೇಲೆ ತಣ್ಣಗಾಗ್ತಾರೆ: ಕೋಟ ವ್ಯಾಖ್ಯಾನ

  • ಹೆಣ್ಣು ನೋಡಲು ಬಂದು ಪ್ರೀತಿ ಮಾಡಿದ – ಪ್ರೀತಿಸಿ ಕೈಕೊಟ್ಟ ಯುವಕನಿಗಾಗಿ ಯುವತಿ ಹೋರಾಟ

    ಹೆಣ್ಣು ನೋಡಲು ಬಂದು ಪ್ರೀತಿ ಮಾಡಿದ – ಪ್ರೀತಿಸಿ ಕೈಕೊಟ್ಟ ಯುವಕನಿಗಾಗಿ ಯುವತಿ ಹೋರಾಟ

    ರಾಯಚೂರು: ಮದುವೆಗೆ ಹೆಣ್ಣು ನೋಡಲು ಬಂದು ಹುಡುಗಿಯನ್ನು ಪ್ರೀತಿಸಿ ಯುವಕ ಕೈಕೊಟ್ಟ ಹಿನ್ನೆಲೆ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ನಾಳೆ ಯುವಕ ಬೇರೆ ಯುವತಿಯೊಂದಿಗೆ ಮದುವೆಯಾಗುತ್ತಿರುವುದರಿಂದ ಮೋಸ ಹೋದ ರಾಯಚೂರು ತಾಲೂಕಿನ ಬಾಪೂರ ಗ್ರಾಮದ ಉಮೇಶಮ್ಮ ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾಳೆ.

    ವಡವಟ್ಟಿ ಗ್ರಾಮದ ಯುವಕ ಮಲ್ಲೇಶ್ ಮೂರು ತಿಂಗಳ ಕೆಳಗೆ ಹೆಣ್ಣು ನೋಡಲು ಉಮೇಶಮ್ಮಳ ಮನೆಗೆ ಬಂದಿದ್ದ, ಎರಡು ಕುಟುಂಬದವರ ಮಧ್ಯೆ ಮಾತುಕತೆ ಪೂರ್ಣ ಆಗಿರಲಿಲ್ಲ. ಆಗಲೇ ಇಬ್ಬರ ಮಧ್ಯೆ ಪ್ರೇಮ ಬೆಳೆದು ದೈಹಿಕ ಸಂಬಂಧವನ್ನೂ ಹೊಂದಿದ್ದರು. ಆದರೆ ಈಗ ಯುವಕ ಬೇರೆ ಯುವತಿ ಜೊತೆ ಮದುವೆಗೆ ಮುಂದಾಗಿದ್ದಾನೆ. ಹೀಗಾಗಿ ಯುವತಿ ಹಾಗೂ ಯುವತಿಯ ಕುಟುಂಬಸ್ಥರು ನ್ಯಾಯಕ್ಕಾಗಿ ಎಸ್ಪಿ ಕಚೇರಿಗೆ ಬಂದಿದ್ದಾರೆ. ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲು ಮುಂದಾಗಿದ್ದಾರೆ. ಉಮೇಶ್ ಜೊತೆ ಮದುವೆ ಮಾಡಿಸುವಂತೆ ಯುವತಿ ಪೊಲೀಸರಿಗೆ ಒತ್ತಾಯಿಸಿದ್ದಾಳೆ.

    ಮೇ 28 ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ನಾಪತ್ತೆಯಾಗಿದ್ದ ಯುವಕ ಯುವತಿ ಬೋಳಮಾನದೊಡ್ಡಿಯ ಗುಡ್ಡದಲ್ಲೇ ಕಾಲ ಕಳೆದಿದ್ದಾರೆ. ಮದುವೆಯಾಗುವಂತೆ ಮನವೊಲಿಸಲು ಉಮೇಶಮ್ಮ ನಡೆಸಿದ ಪ್ರಯತ್ನ ವಿಫಲವಾಗಿದೆ. ಅಲ್ಲದೆ ಪೊಲೀಸರು ಮದುವೆ ಮಾಡಿಸಿವುದಾಗಿ ಕರೆಸಿಕೊಂಡು ಅನ್ಯಾಯ ಮಾಡಿದ್ದಾರೆ ಅಂತ ಯುವತಿ ಆರೋಪ ಮಾಡಿದ್ದಾಳೆ.

    ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತಿದ್ದ ಯುವಕ ಮಲ್ಲೇಶ್ ಇನ್ನೊಬ್ಬ ಯುವತಿ ಜೊತೆ ಮದುವೆ ನಿಶ್ಚಯವಾದ ಮೇಲೂ ಉಮೇಶಮ್ಮ ಜೊತೆ ಪ್ರೇಮ ಮುಂದುವರೆಸಿದ್ದ. ಈಗ ಯುವತಿಗೆ ಕೈ ಕೊಟ್ಟು ನಾಳೆ ಹಸೆಮಣೆ ಏರಲು ಸಜ್ಜಾಗಿದ್ದಾನೆ. ಇದಕ್ಕೆಲ್ಲಾ ಯುವಕನ ಸ್ನೇಹಿತ ನೇತಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವರಾಜ್ ಸಹಾಯ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

  • ಮಾತು ಬಾರದ ಮಹಿಳೆಯ ಮೇಲೆ ಅತ್ಯಾಚಾರ

    ಮಾತು ಬಾರದ ಮಹಿಳೆಯ ಮೇಲೆ ಅತ್ಯಾಚಾರ

    ಮಂಡ್ಯ: ಮಾತು ಬಾರದ ಮಹಿಳೆಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ಜುರುಗಿದೆ.

    ಹೊನಗನಹಳ್ಳಿ ಗ್ರಾಮದ ಮಾತು ಬಾರದ 48 ವರ್ಷದ ಮಹಿಳೆಯ ಮೇಲೆ ಅದೇ ಗ್ರಾಮದ ಮೂವರು ಯುವಕರು ಅತ್ಯಾಚಾರವೆಸಗಿದ್ದಾರೆ. ಏಪ್ರಿಲ್ 1 ರಂದು ಈ ಮಹಿಳೆ ತನ್ನ ಹೊಲದಲ್ಲಿ ಹಸು ಮೇಯಿಸಲು ಹೋಗಿದ್ದಾರೆ. ಸಂಜೆ ನಾಲ್ಕು ಗಂಟೆಯ ವೇಳೆಯಲ್ಲಿ ಮಹಿಳೆ ಇದ್ದ ಹೊಲಕ್ಕೆ ಹೊನಗನಹಳ್ಳಿ ಗ್ರಾಮದ ಪ್ರಸನ್ನ, ಶೇಖರ್, ಪವನ್ ಎಂಬ ಯುವಕರು ಹೋಗಿದ್ದಾರೆ. ಈ ವೇಳೆ ಮಹಿಳೆಯನ್ನು ಎಳೆದಾಡಿದ್ದಾರೆ, ಬಳಿಕ ಮೂವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

     

    ಈ ಮೂವರು ಯುವಕರು ಕೇವಲ 25 ವರ್ಷದ ಒಳಗಿನವರಾಗಿದ್ದಾರೆ. ಈ ಪ್ರಕರಣವಾದ ಬಳಿಕ ಗ್ರಾಮದಲ್ಲೇ ರಾಜಿ ಪಂಚಾಯ್ತಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಸಹ ಯತ್ನ ಮಾಡಲಾಗಿತ್ತು. ಆದರೆ ರಾಜಿ ಸಂಧಾನಕ್ಕೆ ಮಹಿಳೆಯ ಕಡೆಯವರು ಒಪ್ಪಿಲ್ಲ. ನಂತರ ನಿನ್ನೆ ಪಾಂಡವಪುರ ಪೊಲೀಸ್ ಠಾಣೆಗೆ ಮಹಿಳೆಯ ಸಂಬಂಧಿಕರು ದೂರು ನೀಡಿದ್ದಾರೆ. ದೂರಿನ ಅನ್ವಯ ಇದೀಗ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

  • ನಡು ರಸ್ತೆಯಲ್ಲೇ ಡ್ರಾಗರ್‌ನಿಂದ ಚುಚ್ಚಿ ಚಿನ್ನ ದೋಚಿದ ದುಷ್ಕರ್ಮಿಗಳು – ಯುವಕ ಸಾವು

    ನಡು ರಸ್ತೆಯಲ್ಲೇ ಡ್ರಾಗರ್‌ನಿಂದ ಚುಚ್ಚಿ ಚಿನ್ನ ದೋಚಿದ ದುಷ್ಕರ್ಮಿಗಳು – ಯುವಕ ಸಾವು

    ಮಂಡ್ಯ: ಸ್ನೇಹಿತರೊಂದಿಗೆ ರಸ್ತೆ ಬದಿಯಲ್ಲಿ ನಿಂತು ಮಾತನಾಡುವ ವೇಳೆ ದುಷ್ಕರ್ಮಿಗಳು ಡ್ರಾಗರ್‌ನಿಂದ  ಚುಚ್ಚಿ ವ್ಯಕ್ತಿಯ ಮೈ ಮೇಲೆ ಇದ್ದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಿನ್ನೆ ರಾತ್ರಿ ದಳವಾಯಿಕೋಡಿಹಳ್ಳಿ ಗ್ರಾಮದ ಮಧು (30) ರಸ್ತೆ ಬದಿಯಲ್ಲಿ ನಿಂತುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುವ ವೇಳೆ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಡ್ರಾಗರ್‍ ನಲ್ಲಿ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದಾರೆ. ಇದನ್ನು ಕಂಡ ಸ್ನೇಹಿತರು ಸಹ ಭಯದಿಂದ ಹಿಂದೆ ಸರಿದಿದ್ದಾರೆ. ದುಷ್ಕರ್ಮಿಗಳು ಮಧುವಿಗೆ ಚುಚ್ಚಿದ ಬಳಿಕ ಅವರ ಮೈ ಮೇಲೆ ಇದ್ದ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

    ನಂತರ ರಕ್ತದ ಮಡುವಿನಲ್ಲಿ ಬಿದ್ದು ಹೊದ್ದಾಡುತ್ತಿದ್ದ ಮಧುವನ್ನು ಮಳವಳ್ಳಿಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಮಧು ಸಾವನ್ನಪ್ಪಿದ್ದಾರೆ.

    ಈ ಪ್ರಕರಣವನ್ನು ಮೇಲ್ನೊಟಕ್ಕೆ ಚಿನ್ನಾಭರಣವನ್ನು ದೋಚುವ ಸಲುವಾಗಿ ದುಷ್ಕರ್ಮಿಗಳು ನಡೆಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ದುಷ್ಕರ್ಮಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ವಿಡಿಯೋ ರೆಕಾರ್ಡ್‌ ಮಾಡಿದ ಗ್ಯಾಂಗ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಈಗ ಗೆಳೆಯನ ವಿರುದ್ಧ ಗೆಳತಿ ದೂರು

    ವಿಡಿಯೋ ರೆಕಾರ್ಡ್‌ ಮಾಡಿದ ಗ್ಯಾಂಗ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಈಗ ಗೆಳೆಯನ ವಿರುದ್ಧ ಗೆಳತಿ ದೂರು

    ಹುಬ್ಬಳ್ಳಿ: ಪ್ರೇಮಿಗಳಿಬ್ಬರ ಖಾಸಗಿ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದಲ್ಲದೇ ಯುವಕನನ್ನ ಥಳಿಸಿದ ದುಷ್ಕರ್ಮಿಗಳ ಗ್ಯಾಂಗ್ ವಿರುದ್ಧ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆ ಸಹ ಪ್ರತಿದೂರು ದಾಖಲಿಸಿದ್ದಾಳೆ.

    ಪ್ರೇಯಸಿಯೊಂದಿಗೆ ಪಾರ್ಕ್‍ನಲ್ಲಿದ್ದ ವೀಡಿಯೋವನ್ನು ಗ್ಯಾಂಗ್‍ವೊಂದು ಶೂಟ್ ಮಾಡಿ, ಬಳಿಕ ವೀಡಿಯೋವನ್ನು ಯುವಕ ಕುಮಾರಸ್ವಾಮಿಗೆ ತೋರಿಸಿ 5 ಲಕ್ಷ ರೂ. ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು. ಯುವಕ ಹಣ ನೀಡಲು ಒಪ್ಪದಿದ್ದಾಗ ದುಷ್ಕರ್ಮಿಗಳು ಕುಮಾರಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಕುರಿತಂತೆ ಯುವಕನ ತಾಯಿ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಯುವತಿ ಸಹ ಇಂದು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ.

    ದೂರಿನಲ್ಲಿ ಏನಿದೆ?
    ದೂರಿನಲ್ಲಿ ಸಂತ್ರಸ್ತ ಯುವತಿ ನಾನು ನರ್ಸ್ ಕೋರ್ಸ್ ಮಾಡುವ ವೇಳೆ ಬಿಸಿಎಂ ಹಾಸ್ಟೆಲ್‍ನಲ್ಲಿ ರೂಮ್ ಹುಡುಕಾಟದಲ್ಲಿದ್ದಾಗ ಆರೋಪಿ ಕುಮಾರಸ್ವಾಮಿ ಪರಿಚಯವಾಗಿತ್ತು. ಕುಮಾರಸ್ವಾಮಿ ತನಗೆ ಬಿಸಿಎಂ ಹಾಸ್ಟೆಲ್‍ನಲ್ಲಿರುವ ಅಧಿಕಾರಿಗಳು ಪರಿಚಯ ಇದ್ದಾರೆ ಎಂದು ನಂಬಿಸಿದ್ದನು. ನಂತರ ಹಾಸ್ಟೆಲ್ ವಿಚಾರ ಮಾತನಾಡುವುದು ಇದೆ ಎಂದು ಹೇಳಿ ತನ್ನ ಅಂಗಡಿಗೆ ಕರೆಯಿಸಿಕೊಂಡು ಪ್ರೀತಿ ಮಾಡುವುದಾಗಿ ಹೇಳಿದ್ದ. ಆದರೆ ನಾನು ಒಪ್ಪದಿದ್ದಾಗ ಕೆಲವು ದಿನಗಳ ಬಳಿಕ ತನ್ನ ಮನೆಯಲ್ಲಿ ನಮ್ಮಿಬ್ಬರ ಮದುವೆ ವಿಷಯ ಮಾತನಾಡುವುದು ಇದೆ. ಮನೆಗೆ ಬಾ ಎಂದು ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ, ಲೈಂಗಿಕ ಚಟುವಟಿಕೆಯ ವೀಡಿಯೋ ರೆರ್ಕಾಡ್ ಮಾಡಿಕೊಂಡಿದ್ದಾನೆ.

    ನಂತರ ಮದುವೆಯ ವಿಷಯದ ಬಗ್ಗೆ ಯಾರಿಗಾದರೂ ತಿಳಿಸಿದರೆ, ನಿನ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ವೇಳೆ ನಮ್ಮಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆದ ವೇಳೆ ಕಾಲು ಜಾರಿ ಬಿದ್ದು ಕುಮಾರಸ್ವಾಮಿ ತಲೆಗೆ ಪೆಟ್ಟಾಗಿತ್ತು. ಅದನ್ನೇ ಬಳಸಿಕೊಂಡು ಇದೀಗ ಮಧ್ಯಸ್ಥಿಕೆ ಮಾಡಲು ಬಂದವರ ವಿರುದ್ಧ ದೂರು ನೀಡಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಬೇಕೆಂದು ಸಂತ್ರಸ್ತ ಯುವತಿ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ಈ ಸಿಡಿ ಪ್ರಕರಣದಲ್ಲಿ ಈಗಾಗಲೇ ಕುಮಾರಸ್ವಾಮಿ ತಾಯಿಯ ದೂರಿನ ಮೇರೆಗೆ ಹತ್ತು ಜನರ ವಿರುದ್ಧ ಗೋಕುಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

    ಇದೀಗ ಸಂತ್ರಸ್ತ ಯುವತಿ ಪ್ರತಿ ದೂರು ಸಲ್ಲಿಸಿದ್ದು, ವಿದ್ಯಾನಗರ ಪೊಲೀಸರು ಪ್ರೇಮಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ತಂಗಿಯನ್ನು ಪ್ರೀತಿಸಿದ್ದಕ್ಕೆ ಕತ್ತು ಕೂಯ್ದು ಕೊಂದ

    ತಂಗಿಯನ್ನು ಪ್ರೀತಿಸಿದ್ದಕ್ಕೆ ಕತ್ತು ಕೂಯ್ದು ಕೊಂದ

    ಭೋಪಾಲ್: ತಂಗಿಯನ್ನು ಪ್ರೀತಿಸಿದ ಕಾರಣಕ್ಕೆ ಗೆಳೆಯನ ಕತ್ತು ಕೂಯ್ದು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕಿಶನ್ ನಿಹಾನಾ(22) ಎಂದು ಗುರುತಿಸಲಾಗಿದೆ. ಯುವಕನ ಮೃತದೇಹ ರಕ್ತದ ಮಡುವಿನಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದು, ಯುವಕನನ್ನು ಆರೋಪಿ ಕತ್ತು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಘಟನೆಯು ಲುಸಾಡಿಯಾ ಪೊಲೀಸ್ ಠಾಣೆಯ ನಿರಂಜಂಜಪುರದಲ್ಲಿ ಜರುಗಿದೆ.

    ಈ ಕುರಿತಂತೆ ತನಿಖೆ ವೇಳೆ, ಮೃತ ಯುವಕನ ಕುಟುಂಬಸ್ಥರು, 2 ದಿನಗಳ ಹಿಂದೆ ಕಿಶನ್ ಸ್ನೇಹಿತ ಅನಿಲ್ ಪಾಂಚಲ್ ಎಂಬಾತ ಕರೆ ಮಾಡಿದ್ದನು. ಆತನನ್ನು ಭೇಟಿ ಮಾಡಲು ಹೋದ ಕಿಶನ್ ಮಧ್ಯರಾತ್ರಿಯಾದರೂ ಮನೆಗೆ ಹಿಂದಿರುಗದಿದ್ದಾಗ, ಗಾಬರಿಗೊಂಡು ಮನೆಯವರು ದೂರು ದಾಖಲಿಸಿದರು. ಅಲ್ಲದೆ ಕಿಶನ್ ಕಾಣೆಯಾದಗನಿಂದ ಅನಿಲ್ ಹಾಗೂ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಮಧ್ಯೆ ದಾರಿಹೋಕರೊಬ್ಬರು ಮೃತದೇಹ ಪತ್ತೆಯಾಗಿರುವ ವಿಚಾರವಾಗಿ ಪೊಲೀಸರಿಗೆ ತಡ ರಾತ್ರಿ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹವನ್ನು ಕಿಶನ್ ಎಂದು ಗುರುತಿಸಿ ಎಂವಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದರು.

    ಘಟನೆ ವಿಚಾರವಾಗಿ ಮಾತನಾಡಿದ ಪೊಲೀಸರು, ಕಿಶನ್ ಸ್ನೇಹಿತ ಅನಿಲ್ ಪಂಚಲ್ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಈ ವಿಚಾರ ತಿಳಿದ ಅನಿಲ್ ನಿರ್ಜನ ಪ್ರದೇಶಕ್ಕೆ ಕಿಶನ್‍ನನ್ನು ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗುತ್ತದೆ ಎಂದು ಹೇಳಿದರು.