Tag: ಪಬ್ಲಿಕ್ ಟಿವಿ Yediyurappa

  • ಬಿಎಸ್‍ವೈ ನಮ್ಮ ನಾಯಕರು ರಾಜ್ಯ ಪ್ರವಾಸ ಮಾಡೋದರಲ್ಲಿ ತಪ್ಪೇನಿದೆ: ಭೈರತಿ ಬಸವರಾಜ್

    ಬಿಎಸ್‍ವೈ ನಮ್ಮ ನಾಯಕರು ರಾಜ್ಯ ಪ್ರವಾಸ ಮಾಡೋದರಲ್ಲಿ ತಪ್ಪೇನಿದೆ: ಭೈರತಿ ಬಸವರಾಜ್

    ದಾವಣಗೆರೆ: ಬಿ.ಎಸ್ ಯಡಿಯೂರಪ್ಪನವರು ನಮ್ಮ ನಾಯಕರು ರಾಜ್ಯ ಪ್ರವಾಸ ಮಾಡೋದರಲ್ಲಿ ತಪ್ಪೇನಿದೆ, ಪಕ್ಷದ ಸಂಘಟನೆ ದೃಷ್ಟಿಯಿಂದ ಪ್ರವಾಸ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಪಕ್ಷ ಸಂಘಟನೆ ಮಾಡುತ್ತೇನೆ ಅಂದರೆ ಬೇಡ ಎಂದು ಹೇಳಲಾಗುತ್ತಾ, ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ಸಚಿವರು, ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತಾಡಿರುವುದರಲ್ಲಿ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದಿದ್ದಾರೆ.

    ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರು ನಮ್ಮ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ. ನಮ್ಮ ಗೃಹ ಸಚಿವ ಅರಗ ಜ್ಞಾನೇಂದ್ರರವರು ಅದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು ಸಹ ವಿಶೇಷ ಗಮನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!

    ಗೃಹಮಂತ್ರಿ ತಾಲಿಬಾನ್ ಪ್ರತೀಕ ಎಂಬ ಕಾಂಗ್ರೆಸ್ ಮುಖಂಡ ಉಗ್ರಪ್ಪನವರ ಹೇಳಿಕೆ ಕುರಿತಂತೆ, ಆ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಗೃಹ ಸಚಿವರಿಗೆ ಗೊತ್ತು ಎಂದು ಜಾರಿಕೊಂಡಿದ್ದಾರೆ. ಜೊತೆಗೆ ಎಸ್‍ಬಿಎಂ ಸಚಿವರಲ್ಲಿ ಯಾವುದೇ ಅಸಮಾಧಾನವಿಲ್ಲ, ಅವರ ಕಚೇರಿ ಉದ್ಘಾಟನೆಗೆ ಹೋಗಿದ್ದೆ. ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಬೇಸರವಿತ್ತು. ಇದೀಗ ಎಲ್ಲವು ಸರಿಯಾಗಿದೆ ಎಂದು ತಿಳಿಸಿದ್ದಾರೆ.

    ಸೆಪ್ಟೆಂಬರ್ 2ಕ್ಕೆ ದಾವಣಗೆರೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ನಿರ್ಮಾಣವಾದ ಪೊಲೀಸ್ ವಸತಿ ಶಾಲೆಯನ್ನು ಅಮಿತ್ ಶಾ ಉದ್ಘಾಟನೆ ಮಾಡಲಿದ್ದಾರೆ. ಇದಲ್ಲದೆ ಸೆಪ್ಟಂಬರ್ 24, 25 ಹಾಗೂ 26 ರಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕರಣಿ ಸಭೆ ನಡೆಯಲಿದ್ದು, ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಸವರಾಜ್ ಬೊಮ್ಮಾಯಿ, ಬಿಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು: ಈಶ್ವರ್ ಖಂಡ್ರೆ

  • ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಯಡಿಯೂರಪ್ಪ ಸರ್ಕಾರ ಕಾರಣ: ಸಿದ್ದರಾಮಯ್ಯ

    ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಯಡಿಯೂರಪ್ಪ ಸರ್ಕಾರ ಕಾರಣ: ಸಿದ್ದರಾಮಯ್ಯ

    ಕೊಪ್ಪಳ: ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಯಡಿಯೂರಪ್ಪ ಸರ್ಕಾರ ಕಾರಣ, ಎರಡನೇ ಅಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ಹೇಳಿದ್ದಾರೆ.

    ಕರ್ನಾಟಕದಲ್ಲಿ ಕೊರೊನಾ ಬಂದು ಒಂದು ವರ್ಷ ಮೂರು ತಿಂಗಳು ಆಗಿದೆ. ಈಗ ನಾವು ಎರಡನೇ ಅಲೆಯಲ್ಲಿದ್ದೇವೆ. ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಮೊದಲನೇ ಅಲೆಯಲ್ಲಿ ಬಹಳ ಜನ ಸಾಯಲಿಲ್ಲ, ಎರಡನೇ ಅಲೆಯಲ್ಲಿ ಹೆಚ್ಚು ಜನ ಸತ್ತರು, ಇದಕ್ಕೆ ಕಾರಣ ಯಡಿಯೂರಪ್ಪ ಸರ್ಕಾರ. ಎರಡನೇ ಅಲೆಯನ್ನು ತಡೆಯಲು ಮುನ್ನಚ್ಚೆರಿಕೆ ಕ್ರಮಗಳನ್ನು ಮಾಡಿಕೊಂಡಿದ್ದರೆ, ಇಷ್ಟೊಂದು ಜನ ಸಾಯುತ್ತಿರಲಿಲ್ಲ. ರೋಗ ಬಂದವರಿಗೆ ಬೆಡ್ ಸಿಗಲಿಲ್ಲ, ಆಕ್ಸಿಜನ್ ಬೆಡ್ ಸಿಗಲಿಲ್ಲ, ರೆಮಡಿಸಿವರ್, ಐಸಿಯು, ಅಂಬ್ಯುಲೆನ್ಸ್, ವೆಂಟಿಲೇಟರ್ ಸಿಗಲಿಲ್ಲ. ಇದರಿಂದಾಗಿ ಬಹಳ ಜನ ಸತ್ತರು ಎಂದರು.

    ಚಾಮರಾಜನಗರದಲ್ಲಿ ಆಕ್ಸಿಜನ್ ಆಗದೇ 36 ಜನ ಸಾವನ್ನಪ್ಪಿದರು, ಆಕ್ಸಿಜನ್ ನೀಡಿದರೆ 36 ಜನ ಸಾಯುತ್ತಿರಲಿಲ್ಲ, ಮಿಸ್ಟರ್ ಯಡಿಯೂರಪ್ಪ, 36 ಜನ ಸತ್ತರೆ ಆರೋಗ್ಯ ಸಚಿವ ಸುಧಾಕರ 3 ಜನ ಸತ್ತರು ಎಂದು ಹೇಳುತ್ತಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಾರೆ. ಸುರೇಶ್ ಕುಮಾರ್, ಸುಧಾಕರ್ ರಾಜೀನಾಮೆಗೆ ನಾನು ಒತ್ತಾಯ ಮಾಡಿದೆ. ನ್ಯಾಯಾಂಗ ತನಿಖೆ ಮಾಡಲು ಒತ್ತಾಯ ಮಾಡಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದೆ ಎಂದರು.

    ಲಾಕ್‍ಡೌನ್ ಮಾಡಿದರೆ ಉದ್ಯೋಗ ಸಿಗುವುದಿಲ್ಲ, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ, 10 ಕೆಜಿ ಅಕ್ಕಿ ಕೊಡಲು ಹೇಳಿದೆ ಜಪ್ಪಯ್ಯ ಎನ್ನಲಿಲ್ಲ, ಎರಡು, ಮೂರು ಸಾವಿರ ಕೊಡುತ್ತೀನಿ ಅಂದರು, ಅದನ್ನು ಸರಿಯಾಗಿ ಕೊಟ್ಟಿಲ್ಲ, 7 ಕೆಜಿ ಅಕ್ಕಿ ಕೊಟ್ಟಿದ್ದರೆ, ಇವರ ಅಪ್ಪನ ಮನೆ ಗಂಟು ಹೋಗುತ್ತಿತ್ತಾ ಎಂದು ಪ್ರಶ್ನಿಸಿದರು.

    ನಾನು ಸಿಎಂ ಆಗಿದ್ದರೆ 10 ಕೆಜಿ ಅಕ್ಕಿ ಕೊಡುತ್ತಿದ್ದೆ, ನಾನು ನಮ್ಮ ಅಪ್ಪನ ಮನೆಯಿಂದ ತಂದು ಕೊಡುತ್ತಿರಲಿಲ್ಲ. ನಿಮ್ಮ ದುಡ್ಡಿನಿಂದ ನಿಮಗೆ ಕೊಡುತ್ತಿದೆ. ಅಲ್ಲದೇ ಎರಡನೇ ಅಲೆ ಮುನ್ನೆಚ್ಚರಿಕೆ ಕೈಗೊಂಡಿದ್ದರೆ, ಸಾವಿರಾರು ಜನರ ಪ್ರಾಣ ಉಳಿಸಬಹುದಿತ್ತು, ಕರ್ನಾಟಕದಲ್ಲಿ ಸ್ವರ್ಗನಾ, ನರಕನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಸರ್ಕಾರ ಬರೀ ದುಡ್ಡು ಹೊಡೆಯುವ ಸರ್ಕಾರ, ಇದು ನಾನು ಹೇಳಿದ್ದಲ್ಲ, ಇದನ್ನು ಯತ್ನಾಳ್, ಬೆಲ್ಲದ್, ಯೋಗಿಶ್ವರ್ ಹೇಳಿದ್ದು, ಇವರು ಯಾರು ಬಿಜೆಪಿಯವರು ಅಲ್ವಾ? ಪೆಟ್ರೋಲ್,ಡಿಸೇಲ್, ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ, ನಮ್ಮ ಸರ್ಕಾರದ ಯೋಜನೆಗಳನ್ನು ಇವರು ಮಾಡುತ್ತಿದ್ದಾರೆ. ಹೊಸದಾಗಿ ಯಡಿಯೂರಪ್ಪ ಸರ್ಕಾರ ಒಂದು ರೂಪಾಯಿ ಕೊಟ್ಟಿಲ್ಲ. ಯಡಿಯೂರಪ್ಪನವರನ್ನು ಕೇಳಿದರೆ ಕೊರೊನಾ ಎಂದು ಹೇಳುತ್ತಾರೆ.

    ಕೊರೊನಾಗೆ 4,000 ಕೋಟಿ ಖರ್ಚು ಮಾಡಿರಬಹುದು. ಇದೊಂದು ಕೆಟ್ಟ ಸರ್ಕಾರ, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಜನರ ಸಂಕಷ್ಟದಲ್ಲಿ ಸ್ಪಂದಿಸಬೇಕು. ನಾನು ಸಿಎಂ ಆಗಿದ್ದರೆ, ಇವತ್ತು ಈ ರೋಗ ವೇಗವಾಗಿ ಹರಡಲು, ಸಾಯಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಕಾಂಗ್ರೆಸ್ ಬಡವರ ಪರವಾಗಿ ಇರುವ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ ಎಂದರು. ಇದನ್ನೂ ಓದಿ:ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಗೆ ಸಂಕಷ್ಟ

  • ಸಿಎಂ ಬಿಎಸ್‍ವೈಗೆ ಪ್ರಧಾನಿ ಮೋದಿ ಕರೆ – ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಮೆಚ್ಚುಗೆ

    ಸಿಎಂ ಬಿಎಸ್‍ವೈಗೆ ಪ್ರಧಾನಿ ಮೋದಿ ಕರೆ – ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಮೆಚ್ಚುಗೆ

    ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರಿಗೆ ಕರೆ ಮಾಡಿ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆದಿದ್ದಾರೆ.

    ರಾಜ್ಯದ ಕೆಲವು ಭಾಗಗಳಲ್ಲಿ ಕೊರೊನಾ ಕಫ್ರ್ಯೂ ಸೇರಿದಂತೆ ಕೈಗೊಂಡಿರುವ ಕೆಲ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಿಎಸ್‍ವೈಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಬಗ್ಗೆ ನಿಗಾ ವಹಿಸಬೇಕು ಹಾಗೂ ಮೈಕ್ರೋ ಕಂಟೈನ್ಮೆಂಟ್ ಝೋನ್‍ನಲ್ಲಿ ಅಗತ್ಯ ಟೆಸ್ಟಿಂಗ್, ಟ್ರೇಸಿಂಗ್ ಹೆಚ್ಚಳ ಮಾಡಬೇಕೆಂದು ಬಿಎಸ್‍ವೈಗೆ, ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.

    ಈ ವಿಚಾರವಾಗಿ ಮುಖ್ಯಮಂತ್ರಿ ಬಿಎಸ್‍ವೈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿರವರೊಂದಿಗೆ ಇಂದು ಮಾತನಾಡಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ರಾಜ್ಯದ ಕ್ರಮಗಳ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಮೈಕ್ರೋಕಂಟೈನ್ಮೆಂಟ್ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.