Tag: ಪಬ್ಲಿಕ್ ಟಿವಿ Yash

  • ಲವ್ ಯೂ ಅಪ್ಪಾ – ಯಶ್‍ಗೆ ಐರಾ, ಯಥರ್ವ್ ವಿಶ್

    ಲವ್ ಯೂ ಅಪ್ಪಾ – ಯಶ್‍ಗೆ ಐರಾ, ಯಥರ್ವ್ ವಿಶ್

    ಬೆಂಗಳೂರು: ಇಂದು ವಿಶ್ವದ ಅಪ್ಪಂದಿರ ದಿನ. ಈ ವಿಶೇಷ ದಿನದಂದು ರಾಕಿಂಗ್ ಸ್ಟಾರ್ ಯಶ್‍ಗೆ ತಮ್ಮ ಮುದ್ದಾದ ಮಕ್ಕಳಾದ ಐರಾ ಹಾಗೂ ಯಥರ್ವ ವಿಶ್ ಮಾಡಿದ್ದಾರೆ.

    ಸದಾ ಸಿನಿಮಾ ಶೂಟಿಂಗ್ ಅಂತ ಬ್ಯೂಸಿಯಾಗಿರುವ ಯಶ್, ಬಿಡುವು ಸಿಕ್ಕಗಲೆಲ್ಲಾ ತಮ್ಮ ಪ್ರೀತಿಯ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಎಷ್ಟೇ ದೊಡ್ಡವರಾಗಿದ್ದರು, ತಮ್ಮ ಮಕ್ಕಳ ಜೊತೆ ಮಕ್ಕಳಂತೆ ಆಟವಾಡುವ ಯಶ್ ಫೋಟೋ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.

    ಸದ್ಯ ರಾಧಿಕಾ ಪಂಡಿತ್‍ರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳ ಜೊತೆ ಯಶ್ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಕೃಷ್ಣ ವೇಶ ಧರಿಸಿ ಐರಾ ಪ್ರೀತಿಯ ಅಪ್ಪನ ಕೆನ್ನೆಗೆ ಚುಂಬಿಸುತ್ತಿದ್ದರೆ, ಮತ್ತೊಂದು ಫೋಟೋದಲ್ಲಿ ಯಥರ್ವ ಅಪ್ಪನನ್ನು ದಿಟ್ಟಿಸಿ ನೋಡುತ್ತಾ, ಅಪ್ಪನ ಮುಖವನ್ನು ಸವರುತ್ತಿರುವುದನ್ನು ಕಾಣಬಹುದಾಗಿದೆ. ಮತ್ತೊಂದರಲ್ಲಿ ಫೋಟೋದಲ್ಲಿ ಯಶ್ ತಮ್ಮ ಮುದ್ದಾದ ಇಬ್ಬರು ಮಕ್ಕಳನ್ನು ಎರಡು ಕೈಗಳ ಮೇಲೆ ಎತ್ತಿಕೊಂಡಿರುವುದನ್ನು ನೋಡಬಹುದಾಗಿದೆ.

    ಈ ಫೋಟೋಗಳ ಜೊತೆಗೆ ರಾಧಿಕಾ ಪಂಡಿತ್, ಯಶ್ ಒಬ್ಬರು ಅದ್ಭುತ ಬಾಯ್‍ಫ್ರೆಂಡ್ ಹಾಗೂ ಉತ್ತಮ ಪತಿ ಕೂಡ. ಆದರೆ ಅವರಲ್ಲಿರುವ ಒಬ್ಬ ಒಳ್ಳೆಯ ತಂದೆಯನ್ನು ಕೂಡ ನೋಡಿದೆ. ಐರಾ, ಯಥರ್ವ್ ಲವ್ ಯೂ ಡಾಡಾ, ವಿಶ್ವದ ಎಲ್ಲ ಅದ್ಭುತ ತಂದೆಯಂದಿರಿಗೂ ಹ್ಯಾಪಿ ಫಾದರ್ಸ್ ಡೇ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಒಟ್ಟಾರೆ ಯಶ್ ಒಬ್ಬ ಉತ್ತಮ ಫ್ಯಾಮಿಲಿ ಮ್ಯಾನ್ ಹಾಗೂ ಬೆಸ್ಟ್ ತಂದೆ ಎಂಬುವುದಕ್ಕೆ ವೈರಲ್ ಆಗುತ್ತಿರುವ ಈ ಫೋಟೋಗಳೇ ಸಾಕ್ಷಿ ಎಂದರೆ ತಪ್ಪಾಗಲಾರದು.

     

    View this post on Instagram

     

    A post shared by Radhika Pandit (@iamradhikapandit)

  • ಕೆಜಿಎಫ್ ನಂತರ ನೌಕಾಧಿಕಾರಿ ಪಾತ್ರದಲ್ಲಿ ರಾಕಿಂಗ್ ಸ್ಟಾರ್

    ಕೆಜಿಎಫ್ ನಂತರ ನೌಕಾಧಿಕಾರಿ ಪಾತ್ರದಲ್ಲಿ ರಾಕಿಂಗ್ ಸ್ಟಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ದಿ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾ ಕೆಜಿಎಫ್-2 ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಯಶ್ ಮುಂದಿನ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಸಿನಿಮಾದ ನಂತರ ನೌಕಾ ನೆಲೆಯ ಅಧಿಕಾರಿಯಾಗಿ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಪ್ರತಿ ಸಿನಿಮಾದಲ್ಲಿ ಭಿನ್ನ ಪಾತ್ರಗಳಲ್ಲಿ ಹಾಗೂ ಮಾಸ್ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದ ರಾಕಿ ಬಾಯ್ ಯಶ್, ಇದೀಗ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ದೊಡ್ಡ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿದ್ದು, ಈ ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಚರ್ಚೆ ನಡೆಯುತ್ತಿದೆ.

    ಈ ಮುನ್ನ ನಟ ಡಾ.ಶಿವರಾಜ್‍ಕುಮಾರ್ ಹಾಗೂ ಶ್ರೀಮುರುಳಿ ಕಾಂಬಿನೇಷನ್‍ನಲ್ಲಿ ಮೂಡಿಬಂದಿದ್ದ ಮಫ್ತಿ ಸಿನಿಮಾಕ್ಕೆ ನರ್ತನ್ ನಿರ್ದೇಶನ ಮಾಡಿದ್ದರು. ಇದೀಗ್ ರಾಕಿ ಬಾಯ್ ಯಶ್ ಮುಂದಿನ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಸಿನಿಮಾದಲ್ಲಿ ಖಡಕ್ ನೌಕಾ ನೆಲೆಯ ಅಧಿಕಾರಿ ಲುಕ್‍ನಲ್ಲಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅಭಿಮಾನಿಗಳು ಎಡಿಟ್ ಮಾಡಿರುವ ಯಶ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈಗಾಗಲೇ ಬೆಳ್ಳಿ ಪರದೆ ಮೇಲೆ ಬರಬೇಕಿದ್ದ ಕೆಜಿಎಫ್-2 ಸಿನಿಮಾ ಕೊರೊನಾದಿಂದ ಕೊಂಚ ತಡವಾಗಿ ಬಿಡುಗಡೆಯಾಗಲಿದೆ. ಇನ್ನೂ ಈ ಸಿನಿಮಾದಲ್ಲಿ ರಗಡ್ ಹಾಗೂ ಮಾಸ್ ಲುಕ್‍ನಲ್ಲಿ ಯಶ್ ಕಾಣಿಸಿಕೊಂಡಿದ್ದು, ಯಶ್‍ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ, ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕ ಅವಿನಾಶ್ ಸೇರಿದಂತೆ ದೊಡ್ಡ ತಾರ ಬಳಗವೇ ಇರಲಿದೆ. ಇದನ್ನೂ ಓದಿ:  ಕೆಜಿಎಫ್-2ಗೆ ದೀಪಾ ಹೆಗ್ಡೆ ವಾಯ್ಸ್ ಡಬ್ಬಿಂಗ್ – ಫೋಟೋ ವೈರಲ್

  • ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದು ಯಾಕೆ – ಸ್ಪಷ್ಟನೆ ನೀಡಿದ ಯಶ್

    ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದು ಯಾಕೆ – ಸ್ಪಷ್ಟನೆ ನೀಡಿದ ಯಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಯಶ್ ಫಾರ್ಮ್ ಹೌಸ್ ಜಾಗ ವಿವಾದದ ವಿಚಾರವಾಗಿ ಇಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಹಾಸನದಲ್ಲಿ ಜಾಗ ಖರೀದಿಸಿರುವ ಮುಖ್ಯ ಉದ್ದೇಶ ವ್ಯವಸಾಯ ಮಾಡುವುದು. ನನ್ನ ತಾಯಿಯವರು ಹಾಸನ ಜಿಲ್ಲೆಯವರು ಹಾಗಾಗಿ ಅವರಿಗೆ ಹಾಸದಲ್ಲಿಯೇ ಇರಬೇಕೆಂಬ ಆಸೆ ಇದೆ. ಅವರಿಗಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಆ ಸ್ಥಳ ಖರೀದಿಸಿದೆ ಎಂದು ಹೇಳಿದ್ದಾರೆ.

    ಯಶ್ ಹೇಳಿದ್ದೇನು?
    ನನ್ನಂತಹವರು ಜಾಗ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಆ ಸ್ಥಳಕ್ಕೆ ಸಂಪೂರ್ಣ ಭದ್ರತೆ ವಹಿಸುವುದು ನಮ್ಮ ವೃತ್ತಿಪರ ಅವಶ್ಯಕತೆಯಾಗಿರುತ್ತದೆ. ನಾವು ಅಲ್ಲಿ ಏನೇ ಮಾಡಿದರೂ ನಮಗೆ ಪ್ರೈವೆಸಿ ಬೇಕಾಗುತ್ತದೆ. ಹೀಗಿರುವಾಗ ರಾತ್ರೋರಾತ್ರಿ ಕಾಂಪೌಂಡ್ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಸುತ್ತಲು 20-30 ಜನರಿಗೆ ಸಂಬಂಧಿಸಿದ ಆಸ್ತಿಗಳಿದ್ದು, ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತದೆ. ಆದರೆ ಕಾನೂನಿನ ಪ್ರಕಾರ ಪತ್ರದಲ್ಲಿ ಏನಿರುತ್ತದೆ ಅದನ್ನು ಚರ್ಚಿಸಿ ನಾವು ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

    ಮೊದಲು ಆ ಸ್ಥಳದಲ್ಲಿ ರಸ್ತೆ ಇತ್ತು. ಹಾಗಾಗಿ ಈ ಸ್ಥಳ ನಮಗೆ ಓಡಾಡಲು ಸ್ವಲ್ಪ ಅನುಕೂಲಕರವಾಗಿದೆ ಎಂದು ಜನರು ಬಂದು ಕೇಳಿಕೊಂಡರು. ಹೀಗಾಗಿ ಈ ವಿಚಾರವಾಗಿ ಕೂಲಂಕೂಷವಾಗಿ ಮ್ಯಾಪ್‍ನಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿ ರಸ್ತೆ ಇಲ್ಲ ಎಂಬ ವಿಚಾರ ತಿಳಿದು ಬಂದಿದೆ. ನಮ್ಮ ಜಮೀನಿನಲ್ಲಿರುವ ರಸ್ತೆಯೇ ಬೇರೆ, ಸಾರ್ವಜನಿಕ ರಸ್ತೆಯೇ ಬೇರೆ. ಜಮೀನಿನ ಮಧ್ಯೆ ರಸ್ತೆಗೆ ಜಾಗ ಮಾಡಿಕೊಟ್ಟರೆ ಅದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದ್ದರಿಂದ ಕಾಂಪೌಂಡ್ ನಿರ್ಮಿಸುವುದು ಅನಿವಾರ್ಯವಾಯಿತು ಎಂದರು.

    ಜಮೀನಿನ ಹಿಂಭಾಗ ಒಂದು ದೇವಾಲಯವಿದ್ದು, ದೇವಾಲಯಕ್ಕೆ ಹೋಗಲು ದಾರಿ ಮಾಡಿಕೊಳ್ಳಬಹುದೆಂದು ಜೆಸಿಬಿ ಬಳಸಿ ನಾವೇ ರಸ್ತೆ ಮಾಡಿಕೊಂಡಿದ್ದೇವೆ. ಅಲ್ಲೊಂದು ಕೃಷಿ ಹೊಂಡದ ರೀತಿಯಲ್ಲಿ ಚಿಕ್ಕ ಕೆರೆ ನಿರ್ಮಿಸಲು ಏನು ಮಾಡಬೇಕೆಂದು ಯೋಜನೆ ನಡೆಸುತ್ತಿದ್ದಾನೆ. ಅಷ್ಟರಲ್ಲಿ ಕಾಂಪೌಂಡ್ ಹಾಕುವ ಕುರಿತಂತೆ ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ಖಂಡಿತ ಯಾವುದೇ ಕಾರಣಕ್ಕೂ ನಮ್ಮಿಂದ ಇನ್ನೊಬ್ಬರಿಗೆ ಅನ್ಯಾಯವಾಗಲೂ ನಾನು ಬಿಡುವುದಿಲ್ಲ. ನಮ್ಮ ಜಮೀನಿನ ಪಕ್ಕದಲ್ಲಿ ರಸ್ತೆ ಮಾಡಿಕೊಟ್ಟರೆ ಜನ ಸುಲಭವಾಗಿ ಓಡಾಡುತ್ತಾರೆ. ಈ ಕುರಿತಂತೆ ನಾನು ಈಗಾಗಲೇ ಶಾಸಕರ ಜೊತೆ ಕೂಡ ಚರ್ಚೆ ನಡೆಸಿದ್ದೇನೆ. ಆದಷ್ಟು ಬೇಗ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ನನಗೆ ಸದ್ಯ ಸಮಯವಿಲ್ಲದ ಕಾರಣ ಇದರ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನನ್ನ ತಂದೆ-ತಾಯಿ ಕಾಂಪೌಂಡ್ ಹಾಕಿಸುವ ಕೆಲಸ ಮಾಡಲು ಮಂದಾಗಿದ್ದರು ಎಂದು ಹೇಳಿದರು.

    ಈ ಚಿಕ್ಕ ವಿಷಯವನ್ನು ದೊಡ್ಡ ವಿಚಾರ ಮಾಡಬೇಡಿ. ನಾನು ಪೊಲೀಸ್ ಠಾಣೆಗೆ ಹೋಗಲು ಇಚ್ಛಿಸುವುದಿಲ್ಲ. ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಖಂಡಿತ ನಾನು ಅಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿಸುತ್ತೇನೆ. ಅಲ್ಲಿಯವರೆಗೂ ನನಗೆ ಕೊಂಚ ಕಾಲಾವಕಾಶಬೇಕು. ಎಲ್ಲರೂ ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿದರು.