Tag: ಪಬ್ಲಿಕ್ ಟಿವಿ Woman

  • ಸ್ನಾನಕ್ಕೆಂದು ಬಾತ್‍ರೂಮಿಗೆ ಹೋದ ಮಹಿಳೆಯ ಅನುಮಾನಾಸ್ಪದ ಸಾವು

    ಸ್ನಾನಕ್ಕೆಂದು ಬಾತ್‍ರೂಮಿಗೆ ಹೋದ ಮಹಿಳೆಯ ಅನುಮಾನಾಸ್ಪದ ಸಾವು

    ಚಿಕ್ಕಬಳ್ಳಾಪುರ: ಸ್ನಾನ ಮಾಡಲೆಂದು ಬಾತ್ ರೂಮ್ ಗೆ ಹೋದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ವರದಕ್ಷಿಣೆಗಾಗಿ ಮಹಿಳೆಯನ್ನು ಕೊಲೆ ಮಾಡಿದ್ದರೆಂದು ಮೃತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರ ನಿವಾಸಿ ಆಶಾ(30) ಮೃತ ಮಹಿಳೆ. ವರದಕ್ಷಿಣೆ ಹಣಕ್ಕಾಗಿ ಆಶಾಳನ್ನು ಕೊಲೆ ಮಾಡಿದ್ದಾರೆಂದು ಮೃತ ಮಹಿಳೆಯ ಕುಟುಂಬದವರು ಗಂಡನ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಳಸೇಗೌಡನಪಾಳ್ಯದ ಆಶಾಳನ್ನು ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರ ನಿವಾಸಿ ಪೇಂಟರ್ ವೃತ್ತಿಯ ಜಯರಾಮ್‍ರಿಗೆ 2011 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂಬತ್ತು ವರ್ಷ ಹಾಗೂ ಮೂರು ವರ್ಷ ವಯಸ್ಸಿನ ಎರಡು ಹೆಣ್ಣು ಮಕ್ಕಳಿದ್ದಾರೆ. ಮದುವೆ ಸಮಯದಲ್ಲಿ ಜಯರಾಮನಿಗೆ ವರದಕ್ಷಿಣೆ ರೂಪದಲ್ಲಿ 140 ಗ್ರಾಂ ಚಿನ್ನ ಹಾಗೂ ಜೊತೆಯಲ್ಲಿ ನಗದು ಸಹ ನೀಡಲಾಗಿತ್ತು. ಆದರೂ ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನ ಮನೆಯವರು ದೈಹಿಕ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾರೆಂದು ಮೃತಳ ಕುಟುಂಬದವರ ಆರೋಪಿಸಿದ್ದಾರೆ. ಇದನ್ನೂ ಓದಿ:ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

    ಒಂದು ತಿಂಗಳ ಹಿಂದೆ ಫೋನ್ ಮಾಡಿದ ಆಶಾ ಎರಡು ಲಕ್ಷ ಹಣ ನೀಡುವಂತೆ ಗಂಡ ಜಯರಾಮ್, ಅತ್ತೆ ರತ್ನಮ್ಮ, ಜಯರಾಮ್ ಅಕ್ಕನ ಗಂಡ ನಂದಕುಮಾರ್ ಕಿರುಕುಳ ಕೊಡುತ್ತಿದ್ದರೆಂದು ಹೇಳಿದ್ದಳು. ನಮ್ಮ ಬಳಿ ಈಗ ಹಣ ಇಲ್ಲ ಎಂದಿದ್ದೆವು. ಅಂದಿನಿಂದ ಆಕೆ ನಮಗೆ ಫೋನ್ ಮಾಡಿರಲಿಲ್ಲ. ಆಗಸ್ಟ್ 24ರಂದು ಫೋನ್ ಮಾಡಿದ ಆಶಾಳ ಗಂಡ ಜಯರಾಮ್ ಆಶಾಳಿಗೆ ಫಿಡ್ಸ್ ಬಂದಿತ್ತು, ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದಿದ್ದ. ನಾವು ಆಸ್ಪತ್ರೆಗೆ ಹೋದ ಮೇಲೆ ಮಗಳನ್ನು ನೋಡಲು ಬಿಡಲಿಲ್ಲ. ಬುಧವಾರ ಸಂಜೆ ಮಗಳು ಮೃತಪಟ್ಟಿರುವುದಾಗಿ ತಿಳಿಸಿ ಮೃತದೇಹ ನೋಡಲು ಬಿಟ್ಟರು. ನಮ್ಮ ಮಗಳ ಸಾವಿಗೆ ಜಯರಾಮ್ ಮತ್ತು ಮನೆಯವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ತಂತಿ ಉರುಳಿಗೆ ಸಿಲುಕಿ ಶಿರಸಿಯಲ್ಲಿ ಅಪರೂಪದ ಕಪ್ಪು ಚಿರತೆ ಸಾವು

    ಆಶಾಗೆ ಒಂಭತ್ತು ವರ್ಷದ ಮಗಳಿಗೆ ಜಯರಾಮ್ ಮನೆಯವರು ಬರೆ ಹಾಕಿ ಕಿರುಕುಳ ನೀಡಿರುವುದು ಸಹ ತಿಳಿದುಬಂದಿದೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದು, ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

    ಮೃತಳ ಪೋಷಕರ ಆರೋಪದ ನಡುವೆ ಪತಿ ಜಯರಾಮ್, ಮಂಗಳವಾರ ಸ್ನಾನಕ್ಕೆಂದು ಹೋದ ಹೆಂಡತಿ ಎರಡು ಗಂಟೆಯಾದರೂ ಹೊರ ಬಾರದಿರುವುದನ್ನು ಕಂಡು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ, ಗೀಸರ್ ವಾಸನೆಗೆ ಫಿಡ್ಸ್ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅಲ್ಲಿಂದ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಪತ್ನಿ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದರು. ಮಗಳ ಮೈಮೇಲಿನ ಬರೆಗಳು ಪಠ್ಯದ ಕೆಲಸಗಳನ್ನು ಸರಿಯಾಗಿ ಮಾಡದ ಕಾರಣ ನನ್ನ ಅಕ್ಕನ ಮಗ ಮಾಡಿರುವುದು. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

  • ಆರ್ಡರ್ ಮಾಡಿದ್ದ ಪಿಜ್ಜಾದಲ್ಲಿ ಸಿಕ್ತು  ನಟ್ಟು, ಬೋಲ್ಟ್ – ಮಹಿಳೆ ಶಾಕ್

    ಆರ್ಡರ್ ಮಾಡಿದ್ದ ಪಿಜ್ಜಾದಲ್ಲಿ ಸಿಕ್ತು ನಟ್ಟು, ಬೋಲ್ಟ್ – ಮಹಿಳೆ ಶಾಕ್

    ಲಂಡನ್: ಇಂಗ್ಲೆಂಡ್‍ನ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಆರ್ಡರ್ ಮಾಡಿದ್ದ ಡೊಮಿನೊಸ್‍ನಿಂದ ಪಿಜ್ಜಾದಲ್ಲಿ ಕಬ್ಬಿಣದ ಬೋಲ್ಡ್ ಹಾಗೂ ನಟ್ಟನ್ನು ಕಂಡು ಶಾಕ್ ಆಗಿದ್ದಾರೆ.

    ಇದರಿಂದ ಕೋಪಗೊಂಡ ಮಹಿಳೆ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡೊಮಿನೊಸ್ ಪಿಜ್ಜಾ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಪಿಜ್ಜಾವನು ಸೇವಿಸುವುದಕ್ಕೂ ಮುನ್ನ ಪರೀಕ್ಷಿಸಿ ತಿನ್ನುವಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ

    ಈ ಕುರಿತಂತೆ ಫೇಸ್‍ಬುಕ್‍ನಲ್ಲಿ ಫೋಟೋ ಜೊತೆಗೆ, ಅಂದು ರಾತ್ರಿ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದಲ್ಲಿ ಬೋಲ್ಟ್ ಹಾಗೂ ನಟ್ ಕಂಡು ಗಾಬರಿಗೊಂಡೆ. ಅದರ ಅರ್ಧವನ್ನು ನಾನು ತಿಂದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಡೊಮಿನೊಸ್ ಪಿಜ್ಜಾದ ಗುಣಮಟ್ಟವನು ಪರಿಶೀಲಿಸುತ್ತಾರೋ ಇಲ್ವೋ? ಪಿಜ್ಜಾದಲ್ಲಿ ಬೋಲ್ಟ್, ನಟ್ ಸಿಕ್ಕಿದೆ. ದಯವಿಟ್ಟು ಪಿಜ್ಜಾ ತಿನ್ನುವ ಮೊದಲು ಎರಡು ಬಾರಿ ಪರೀಕ್ಷಿಸಿ, ನಾನಗಲಿ, ಯಾರಾದರೂ ಈ ಪಿಜ್ಜಾವನ್ನು ಸೇವಿಸಿದನ್ನು ದ್ವೇಷಿಸುತ್ತೇನೆ. ಫ್ಲೀಟ್ವುಡ್ ಆರ್ಡಿ ನಾರ್ತ್‍ನಲ್ಲಿರುವ ಥಾನ್ರ್ಟನ್-ಕ್ಲೆವೆಲೀಸ್ ಶಾಖೆಯಲ್ಲಿರುವ ಡೊಮಿನೋಸ್‍ನಿಂದ ಪಿಜ್ಜಾ ಆರ್ಡರ್ ಮಾಡುವಾಗ ಜಾಗರೂಕರಾಗಿರಿ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ನಂತರ ಮಹಿಳೆ ರೆಸ್ಟೋರೆಂಟ್‍ಗೆ ಕರೆ ಮಾಡಿ ದೂರು ನೀಡಿ, ಪಿಜ್ಜಾವನ್ನು ಹಿಂದಿರುಗಿಸಿದ್ದಾರೆ. ನಂತರ ಈ ಕುರಿತಂತೆ ಡೊಮಿನೊಸ್ ಮಹಿಳೆಗೆ ಕ್ಷಮೆಯಾಚಿಸಿ, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ:ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

  • ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿದ ಗ್ರಾಮಸ್ಥರು

    ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿದ ಗ್ರಾಮಸ್ಥರು

    -ಮಹಿಳೆಯ ಕೊಲೆ ಮಾಡಿ ರಸ್ತೆ ಬದಿಗೆ ಬೀಸಾಕಿದ ದುಷ್ಕರ್ಮಿಗಳು

    ಚಿಕ್ಕೋಡಿ: ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿ ಗ್ರಾಮಸ್ಥರು ಬುದ್ಧಿ ಕಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದ್ದರೆ, ಇನ್ನೊಂದೆಡೆ ಮಹಿಳೆಯನ್ನು ಕೊಲೆ ಮಾಡಿ ರಸ್ತೆ ಬದಿಗೆ ಬೀಸಾಕಿ ದುಷ್ಕರ್ಮಿಗಳು ಪಾರಾರಿಯಾಗಿರುವ ಘಟನೆ ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ನಡೆದಿದೆ.

    ವಾಟ್ಸಪ್ ನಲ್ಲಿ ಅಸಹ್ಯವಾಗಿ ಮೆಸೇಜ್ ಮಾಡುತ್ತಿದ್ದ ಸುಧಾಕರ್ ಡುಮ್ಮಗೋಳ ಎಂಬಾತನಿಗೆ ಗ್ರಾಮಸ್ಥರೆಲ್ಲರೂ ಸೇರಿ ಧರ್ಮದೇಟು ನೀಡಿ ತಲೆ ಬೋಳಿಸಿ ಪಾಠ ಕಲಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹ ತನ್ನ ಖಯಾಲಿ ಮುಂದುವರೆಸಿದ್ದ ಸುಧಾಕರ್‍ಗೆ ವಾನಿರ್ಂಗ್ ಮಾಡಿದರೂ ಸಹ ಕೇಳದ ಸುಧಾಕರ್‍ನನ್ನು ಹಿಡಿದು ಗ್ರಾಮಸ್ಥರು ತಲೆ ಬೋಳಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಘಟನೆಯಿಂದ ಅವಮಾನಗೊಂಡ ಸುಧಾಕರ್ ಇದೀಗ ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ. ಅಲ್ಲದೇ ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:ಅನ್ನದಾತರ ಬಾಳು ಹಸನಾಗಲು ಸಮಗ್ರ ಕೃಷಿ ಅಭಿಯಾನ ಸಹಕಾರಿ: ಶಶಿಕಲಾ ಜೊಲ್ಲೆ

    ಮತ್ತೊಂದೆಡೆ ಕೊಲೆ ಮಾಡಿ ರಸ್ತೆ ಪಕ್ಕದಲ್ಲಿ ಮಹಿಳೆಯ ಶವ ಎಸೆದು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿ 31ರ ಪಕ್ಕದ ಕಬ್ಬಿನ ಗದ್ದೆಯಲ್ಲಿ ದುಷ್ಕರ್ಮಿಗಳು ಶವ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಅಂದಾಜು 35 ವರ್ಷದ ಅಪರಚಿತ ಮಹಿಳೆಯ ಶವವನ್ನು ಬೀಸಾಕಿ ಹೋಗಿರುವ ಕಾರಣ ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮಹಿಳೆಯ ಪರಿಚಯ ಸಿಗುತ್ತಿದ್ದಂತೆ ದುಷ್ಕರ್ಮಿಗಳ ಹುಡುಕಾಟಕ್ಕೆ ಬಲೆ ಬೀಸಲಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಪಂಚರ್ ಆಗಿ ಹಿಮ್ಮುಖವಾಗಿ ಚಲಿಸಿ ಟ್ರ್ಯಾಕ್ಟರ್ ಪಲ್ಟಿ

  • ದೇವಸ್ಥಾನದಿಂದ ಮನೆಗೆ ಹೋಗ್ತಿದ್ದ ಮಹಿಳೆ – ಹೊತ್ತೊಯ್ದು ಗ್ಯಾಂಗ್ ರೇಪ್

    ದೇವಸ್ಥಾನದಿಂದ ಮನೆಗೆ ಹೋಗ್ತಿದ್ದ ಮಹಿಳೆ – ಹೊತ್ತೊಯ್ದು ಗ್ಯಾಂಗ್ ರೇಪ್

    ಯಾದಗಿರಿ: ದೇವಸ್ಥಾನಕ್ಕೆ ತೆರಳಿ ಮರಳಿ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಓರ್ವ ಮಹಿಳೆಯ ಸಂಬಂಧಿಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಮಹಿಳೆಯನ್ನು ಹೊತ್ತೊಯ್ದು ಗ್ಯಾಂಗ್ ರೇಪ್ ಮಾಡಿರುವ ಘಟನೆ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆಗಸ್ಟ್ 8ರ ಮಧ್ಯರಾತ್ರಿಯಿಂದ ಆಗಸ್ಟ್ 9ರ ಬೆಳಗಿನ ಜಾವದ ಅವಧಿಯಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಒಳಗಾದದ ಮಹಿಳೆ ಮತ್ತು ಆಕೆಯ ಸಂಬಂಧಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಆಕೆಯ ಸಂಬಂಧಿ ದೇವಸ್ಥಾನಕ್ಕೆ ತೆರಳಿ ತಡರಾತ್ರಿ ಮನೆಗೆ ವಾಪಸಾಗುತ್ತಿದ್ದರು. ಇದನ್ನು ಗಮನಿಸಿದ ಮದ್ಯದ ಅಮಲಿನಲ್ಲಿದ್ದ ಇಬ್ಬರು ಕಾಮುಕ ಯುವಕರು, ಈ ಇಬ್ಬರನ್ನು ಆಟೋದಲ್ಲಿ ಫಾಲೋ ಮಾಡಿ ಯಾದಗಿರಿ ಶಹಾಪುರ ಮಾರ್ಗ ಮಧ್ಯದಲ್ಲಿ ಬೈಕ್‍ಗೆ ಅಡ್ಡ ಹಾಕಿದ್ದಾರೆ. ನಂತರ ಮಹಿಳೆಯ ಸಂಬಂಧಿಗೆ ಥಳಿಸಿ ಮಹಿಳೆಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ್ದಾರೆ.

    ಸದ್ಯ ಇಬ್ಬರು ಕಾಮುಕರನ್ನು ಶಹಾಪೂರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

  • ವಿಳಾಸ ಕೇಳುವ ನೆಪದಲ್ಲಿ ಕಿರುಕುಳ – ಪುಂಡನ ಗಾಡಿ ಚರಂಡಿಗೆ ತಳ್ಳಿದ ಮಹಿಳೆ

    ವಿಳಾಸ ಕೇಳುವ ನೆಪದಲ್ಲಿ ಕಿರುಕುಳ – ಪುಂಡನ ಗಾಡಿ ಚರಂಡಿಗೆ ತಳ್ಳಿದ ಮಹಿಳೆ

    ಡಿಸ್ಪುರ್: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ತಡೆದು ಪುಂಡನೊಬ್ಬ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ವಿಚಲಿತರಾಗದೇ ಆತನ ಸ್ಕೂಟರ್ ಎಳೆದು ಚರಂಡಿಗೆ ತಳ್ಳಿ ಆತ ಎಲ್ಲೂ ತಪ್ಪಿಸಿಕೊಳ್ಳದಂತೆ ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಭಾವನಾ ಕಶ್ಯಪ್ ಎಂಬವರು ಈ ವೀಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಡ್ರಸ್ ತಿಳಿದಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಪದೇ ಪದೇ ಆರೋಪಿ ಪೀಡಿಸುತ್ತಿದ್ದ, ಅಲ್ಲದೇ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳಲು ಆರಂಭಿಸಿದ, ಈ ವೇಳೆ ನಾನು ಒಂದು ಕ್ಷಣ ಏನಾಯಿತು ಎಂಬುದರ ಪ್ರಜ್ಞೆಯನ್ನು ಕಳೆದುಕೊಂಡೆ. ಆದರೆ ಯಾವಾಗ ನನ್ನ ಬಾಯಿಯಿಂದ ಮಾತುಗಳು ಬರಲಾರಂಭಿಸತೋ ಆಗ ಆತ ಭಯಭೀತಗೊಂಡ ಎಂದು ಭಾವನಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಮಹಿಳೆ ಸ್ಕೂಟರ್‍ನನ್ನು ಚರಂಡಿಗೆ ತಳ್ಳಿದ ನಂತರ ರೆಕಾರ್ಡ್ ಆಗಿರುವ ಈ ವೀಡಿಯೋದಲ್ಲಿ ಆರೋಪಿ ತನ್ನ ಸ್ಕೂಟರ್‍ನನ್ನು ಹಿಂದೆಗೆದುಕೊಳ್ಳಲು ಸ್ಥಳೀಯರಲ್ಲಿ ಸಹಾಯ ಕೇಳುತ್ತಿರುವುದನ್ನು ಕಾಣಬಹುದಾಗಿದೆ.

    ಘಟನೆ ವೇಳೆ ಆರೋಪಿ ವೇಗವಾಗಿ ಸ್ಕೂಟರನ್ನು ಚಲಾಯಿಸಲು ಪ್ರಯತ್ನಿಸಿದಾಗಲೂ ಮಹಿಳೆ ಅದನ್ನು ಹಿಡಿದು ಚರಂಡಿಗೆ ಎಳೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಗಲಾಟೆ ಮಾಡುತ್ತಿದ್ದ ವೇಳೆ ಸ್ಥಳೀಯರು ಸೇರುತ್ತಿದ್ದಂತೆ, ಮಹಿಳೆ ಮಧುಶನ ರಾಜ್ ಕುಮಾರ್ ಎಂಬ ವ್ಯಕ್ತಿಗೆ ನಡೆದ ಎಲ್ಲಾ ವಿಚಾರವನ್ನು ವಿವರಿಸಿದ್ದಾರೆ. ಆತನಿಂದ ಮಹಿಳೆ ಹೊರ ಹೋಗಲು ಹೆದರಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:2024ಕ್ಕೆ ಭಾರತದ ಪ್ರಧಾನಿ ಮಹಿಳೆಯಾಗಲಿ: ಜಯಾ ಬಚ್ಚನ್

  • ಮಾನವೀಯತೆಗೆ ಸಾಕ್ಷಿ – ಕಳೆದುಕೊಂಡಿದ್ದ 50 ಸಾವಿರ ಮರಳಿ ಪಡೆದ ಮಹಿಳೆ

    ಮಾನವೀಯತೆಗೆ ಸಾಕ್ಷಿ – ಕಳೆದುಕೊಂಡಿದ್ದ 50 ಸಾವಿರ ಮರಳಿ ಪಡೆದ ಮಹಿಳೆ

    – ಆಟೋ ಚಾಲಕರು, ಕೆಎಸ್‌ಆರ್‌ಟಿಸಿ ನಿಲ್ದಾಣಾಧಿಕಾರಿ ಮಾನವೀಯತೆ

    ಬೆಂಗಳೂರು: ಮಹಿಳೆಯೊಬ್ಬರು ಕಳೆದುಕೊಂಡಿದ್ದ 50 ಸಾವಿರ ರೂಪಾಯಿ ಅಧಿಕಾರಿ ಹಾಗೂ ಆಟೋ ಚಾಲಕರ ಸಮಯ ಪ್ರಜ್ಞೆಯಿಂದ ಮತ್ತೆ ಸಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ತಮ್ಮ ಅತ್ತೆಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಶಶಿಕಲಾ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ನಂತರ ಆಟೋ ಹತ್ತಿ ಅತ್ತೆ ಜೊತೆಗೆ ಸಂಜಯ್ ಗಾಂಧಿ ಆಸ್ಪತ್ರೆ ಬಳಿ ಹೋದ ನಂತರ ತಮ್ಮ ಬಳಿ ಇದ್ದ ಹಣವನ್ನು ಎಂಆರ್‍ಐ ಸ್ಕ್ಯಾನಿಂಗ್ ರಿಪೋರ್ಟ್ ಜೊತೆಗೆ ಮಿಸ್ ಮಾಡಿಕೊಂಡಿದ್ದಾರೆ.

    ನಂತರ ನೇರ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಕರೆತಂದ ಆಟೋ ಚಾಲಕ ಸಿದ್ದರಾಜು, ಸ್ಯಾಟಲೈಟ್ ನಿಲ್ದಾಣಾಧಿಕಾರಿ ಲಕ್ಕೇಗೌಡರ ಬಳಿ ವಿಷಯ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ಯಾವ ಬಸ್, ಯಾವ ಡಿಪೋಗೆ ಸೇರಿದ ಬಸ್, ನಿರ್ವಾಹಕರ ನಂಬರ್ ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಬಳಿಕ ಶಶಿಕಲಾರವರು ಬಂದ ಬಸ್ ರಾಮನಗರದ ಬಳಿ ಸಂಚರಿಸುತ್ತಿದ್ದ ವಿಷಯ ತಿಳಿದುಬಂದಿದೆ. ಎಂಆರ್‌ಐ ಸ್ಕ್ಯಾನಿಂಗ್ ರಿಪೋರ್ಟ್ ಒಳಗೆ ಹಣ ಇದ್ದಿದ್ದರಿಂದ ಸದ್ಯ ಯಾರ ಗಮನಕ್ಕೂ ಬಂದಿರಲಿಲ್ಲ. ಕೊನೆಗೆ ಆಟೋ ಚಾಲಕ ಸಿದ್ದರಾಜು ಹಾಗೂ ಸ್ಯಾಟಲೈಟ್ ಕೆಎಸ್‌ಆರ್‌ಟಿಸಿ ನಿಲ್ದಾಣಾಧಿಕಾರಿ ಲಕ್ಕೇಗೌಡರಿಂದ ಶಶಿಕಲಾ ಅವರಿಗೆ ಹಣ ಮತ್ತೆ ಸಿಕ್ಕಿದೆ.

    ಶಶಿಕಲಾ ಅವರು ತಮ್ಮ ಅತ್ತೆಗೆ ಶಸ್ತ್ರಚಿಕಿತ್ಸೆ ಇದ್ದ ಹಿನ್ನೆಲೆಯಲ್ಲಿ ಒಡವೆ ಮಾರಿ ಹಣ ತಂದಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಕಷ್ಟಪಟ್ಟು ದುಡಿದಿದ್ದ ಹಣ ಮತ್ತೆ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಯಿಂದ ನಮ್ಮ ಹಣ ಸಿಕ್ಕಿದೆ. ಅವರಿಗೆ ಒಳ್ಳೆದಾಗಲಿ ಎಂದು ಶಶಿಕಲಾ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ

  • ಊರಿನವ್ರ ಕಿರುಕುಳ-  ಗ್ರಾ.ಪಂ ಡಾಟಾ ಎಂಟ್ರಿ ಸಿಬ್ಬಂದಿ ಆತ್ಮಹತ್ಯೆ

    ಊರಿನವ್ರ ಕಿರುಕುಳ- ಗ್ರಾ.ಪಂ ಡಾಟಾ ಎಂಟ್ರಿ ಸಿಬ್ಬಂದಿ ಆತ್ಮಹತ್ಯೆ

    ಬಾಗಲಕೋಟೆ: ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಡಾಟಾ ಎಂಟ್ರಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮದಲ್ಲಿ ನಡೆದಿದೆ.

    ಅನ್ನಪೂರ್ಣ ಪಾದಗಟ್ಟಿ ಎಂಬ ಮಹಿಳಾ ಸಿಬ್ಬಂದಿ ಮೃತ ದುರ್ದೈವಿ. ಸ್ಥಳೀಯರ ಕಿರುಕುಳಕ್ಕೆ ಬೇಸತ್ತಿದ್ದ ಅನ್ನಪೂರ್ಣ, ಗ್ರಾಮ ಪಂಚಾಯತಿ ಅಭಿವೃದ್ಧಿ ಕಾರ್ಯಗಳಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಊರಿನವರು ಆರೋಪಿಸಿ, ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದರಿಂದ ಅನ್ನಪೂರ್ಣ ಬೇಸತ್ತು ಹೋಗಿದ್ದರು. ಇತ್ತ ಸ್ಥಳೀಯರ ದೂರಿನ ಆಧಾರದ ಮೇಲೆ ಪರಿಶೀಲನೆಗೆ ಬಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಧಿಕಾರಿಯ ಮುಂದೆಯೇ ಅನ್ನಪೂರ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

    ಕಳೆದ ಎರಡು ವರ್ಷಗಳಿಂದ ಮೇಲಾಧಿಕಾರಿ ಹಾಗೂ ಸ್ಥಳೀಯ ಮುಖಂಡರು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಮಹಿಳಾ ಸಿಬ್ಬಂದಿ ಮನನೊಂದು ಆತ್ಮಹತ್ಯಗೆ ಯತ್ನಿಸಿದ್ದಾರೆ. ಸೋಮವಾರ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನನ್ವಯ ಹಳದೂರು ಗ್ರಾಮಪಂಚಾಯತಿಗೆ ಪರಿಶೀಲಿಸಲು ಬಂದಿದ್ದ ಅಧಿಕಾರಿಯ ಮುಂದೆ, ಕಿರುಕುಳದ ಬಗ್ಗೆ ಮಾಹಿತಿ ನೀಡಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಬಳಿಕ ತಕ್ಷಣವೇ ಅವರನ್ನು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತ ಮಹಿಳೆಯ ಸಂಬಂಧಿಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಆಸ್ಪತ್ರೆ ಎದುರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಅನ್ನಪೂರ್ಣ ಶವವನ್ನ ನಿನ್ನೆ ಮಧ್ಯರಾತ್ರಿವರೆಗೂ ಆಸ್ಪತ್ರೆಯಲ್ಲಿ ಬಿಟ್ಟು, ಅವಳ ಸಾವಿಗೆ ಕಾರಣರಾದಾವರನ್ನು ಬಂಧಿಸುವಂತೆ ಆಸ್ಪತ್ರೆಯ ಎದುರು ಮೃತ ಅನ್ನಪೂರ್ಣ ಮನೆಯವರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಧರಣಿ ನಡೆಸಿದ್ದಾರೆ.

    ನಂತರ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಮನೆಯವರು ಅನ್ನಪೂರ್ಣ ಶವ ತಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಈ ಕುರಿತು ಗುಳೆದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ

  • ಸೀರೆಯುಟ್ಟು ಜಿಮ್‍ನಲ್ಲಿ ಮಹಿಳೆ ಪುಷ್ ಅಪ್ಸ್ – ವೀಡಿಯೋ ವೈರಲ್

    ಸೀರೆಯುಟ್ಟು ಜಿಮ್‍ನಲ್ಲಿ ಮಹಿಳೆ ಪುಷ್ ಅಪ್ಸ್ – ವೀಡಿಯೋ ವೈರಲ್

    ಮುಂಬೈ: ಸಾಮಾನ್ಯವಾಗಿ ಟ್ರ್ಯಾಕ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ಜಿಮ್‍ನಲ್ಲಿ ವರ್ಕೌಟ್ ಮಾಡುವವರನ್ನು ನಾವು ನೋಡಿರುತ್ತೇವೆ. ಆದರೆ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‍ನಲ್ಲಿ ಪುಷ್-ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕೊರನಾ ಲಾಕ್‍ಡೌನ್ ವೇಳೆ ಮನೆಯಲ್ಲಿಯೇ ಇದ್ದು, ವ್ಯಾಯಾಮ ಮಾಡದೇ ಸೋಮಾರಿಯಂತೆ ಹಲವಾರು ಮಂದಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಆದರೆ ಆರೋಗ್ಯಕರವಾಗಿದ್ದು, ಫಿಟ್ ಆಗಿ ಕಾಣಬೇಕು ಅಂದರೆ ವ್ಯಾಯಾಮಾ ದೇಹಕ್ಕೆ ಬಹಳ ಮುಖ್ಯ. ಹೀಗಾಗಿ ಬಿಡುವಿದ್ದಾಗಲೆಲ್ಲಾ ಫಿಟ್ನೆಸ್ ಕಾಪಾಡಿಕೊಳ್ಳಲು ವ್ಯಾಯಾಮ ಮಾಡುವುದು ಉತ್ತಮ.

    ಸದ್ಯ ಪುಣೆ ಮೂಲದ ಡಾ. ಶಾರ್ವರಿ ಇಮಾಮ್ದಾರ್ ಎಂಬವರು ಸೀರೆಯುಟ್ಟು ಬಹಳ ಸಲೀಸಾಗಿ ಪುಷ್ ಅಪ್ಸ್ ಮಾಡಿದ್ದಾರೆ. ಈ ವೀಡಿಯೋ ವ್ಯಾಯಾಮ ಮಾಡಲು ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಿದ್ದು, ಶಾರ್ವರಿ ಇಮಾಮ್ದಾರ್ ರವರು ಕಳೆದ 5 ವರ್ಷದಿಂದ ಪ್ರತಿನಿತ್ಯ ಪುಷ್-ಅಪ್ಸ್ ಹಾಗೂ ಪುಲ್ ಆಪ್ಸ್, ಲಿಫ್ಟ್, ಭಾರವಾದ ಡಂಬಲ್ಸ್‌ಗಳನ್ನು ಎತ್ತುವ ಮೂಲಕ ಫಿಟ್ನೆಸ್ ಮೈಂಟೈನ್ ಮಾಡುತ್ತಿದ್ದಾರೆ.

    ಸದ್ಯ ಈ ವೀಡಿಯೋವನ್ನು ಶಾರ್ವರಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾನ್ಯವಾಗಿ ಸೀರೆತೊಟ್ಟು ನಡೆಯುವುದಕ್ಕೆ ಕಷ್ಟ, ಸೀರೆ ಅನ್ ಕಂಫರ್ಟ್‍ಟೇಬಲ್ ಎನ್ನುವ ಇಂದಿನ ಮಹಿಳೆಯರ ಮಧ್ಯೆ, ಸಂಪ್ರದಾಯಿಕ ಉಡುಗೆ ತೊಟ್ಟು ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಈ ವೀಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಮಹಿಳೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಒಟ್ಟಾರೆ ಪ್ರೀತಿ, ಛಲ, ಆಸಕ್ತಿ, ಪರಿಶ್ರಮವಿದ್ದರೆ ಏನನ್ನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ಎಂದೇ ಹೇಳಬಹುದು. ಇದನ್ನೂ ಓದಿ:  ನಂಗೆ ಅವನೇ ಬೇಕು – ಕೊನೆಗೆ ಇಬ್ಬರನ್ನು ಒಂದೇ ಮಂಟಪದಲ್ಲಿ ಮದ್ವೆಯಾದ ವರ

  • ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಕೇಪ್‍ಟೌನ್: ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಹತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ

    ಈಗಾಗಲೇ ಅವಳಿ ಮಕ್ಕಳಿಗೆ ತಾಯಿಯಾಗಿರುವ, ಗೋಸಿಯಮ್ ತಮಾರಾ ಸಿಥೋಲ್(37) ಇದೀಗ ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಏಳು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಅವರ ಪತಿ ತಿಳಿದ್ದಾರೆ.

    ಪ್ರಸ್ತುತ ನಿರುದ್ಯೋಗಿ ಟೆಬೋಗೊ ತ್ಸೊಟೆಟ್ಸಿ ಸೋಮವಾರ ತಡರಾತ್ರಿ ತಮಗೆ ಮಗು ಜನಿಸಿರುವ ಬಗ್ಗೆ ಮಾದ್ಯಮಗಳಿಗೆ ತಿಳಿಸಿದ್ದು, ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಮುನ್ನ ಗೋಸಿಯಮ್ ತಮಾರಾ ಸಿಥೋಲ್ ಗರ್ಭಿಣಿಯಾಗಿದ್ದಾಗ ಸ್ವಾಭಾವಿಕ ಹೆರಿಗೆಯಾಗಿತ್ತು. ಆದರೆ ಚಿಕಿತ್ಸೆಯ ಪರಿಣಾಮ ಮಹಿಳೆ ಇಷ್ಟು ಭ್ರೂಣಗಳಿಗೆ ಗರ್ಭಧರಿಸಿದ್ದಾರೆ. ಇದನ್ನು ಓದಿ: ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಈ ಮುನ್ನ ಮೊರೊಕ್ಕೊದ ಆಸ್ಪತ್ರೆಯಲ್ಲಿ ಮಾಲಿಮನ್ ಮಹಿಳೆ-ಹಲೀಮಾ ಸಿಸ್ಸೆ ಒಂಬತ್ತು ಮ್ಕಕಳಿಗೆ ಜನ್ಮ ನೀಡಿದ್ದರು. ಇದಕ್ಕೆ ಆಕೆ ಪಡೆದ ಚಿಕಿತ್ಸೆ ಕಾರಣ ಎಂದು ಹೇಳಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾದ ಮಹಿಳೆ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಇದನ್ನು ಓದಿ: ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್

  • ಲಸಿಕೆ ಪಡೆದ್ರೆ ಬದೋಕಲ್ಲಾ ಸಾಯೋದೆ ಇದೆ – ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ

    ಲಸಿಕೆ ಪಡೆದ್ರೆ ಬದೋಕಲ್ಲಾ ಸಾಯೋದೆ ಇದೆ – ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ

    ಬೀದರ್ : ಲಸಿಕೆ ಪಡೆದರೆ ಬದುಕಲ್ಲ ಸಾಯೋದೆ ಇದೆ ಎಂದು ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದಕ್ಕೆ ಇಳಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರತಿಯೊಬ್ಬರು ಕೋವಿಡ್-19 ಲಸಿಕೆ ಪಡೆಯಬೇಕೆಂದು ಸರ್ಕಾರ ಘೋಷಿಸಿದೆ. ಆದರೆ ಲಸಿಕೆ ಪಡೆದರೆ ಅಡ್ಡ ಪರಿಣಾಮಗಳಾಗುತ್ತೆ ಎಂಬ ವದಂತಿಗಳಿರುವ ಹಿನ್ನೆಲೆ ಮಹಿಳೆಯೊಬ್ಬರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ.

    ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ್ ಕೆ ಗ್ರಾಮದ ಭಾಗಮ್ಮ(55) ಎಂಬ ಮಹಿಳೆ ಲಸಿಕೆ ಪಡೆಯಲು ಸತಾಯಿಸಿದ್ದಾರೆ. ಲಸಿಕೆ ಪಡೆದುಕೊಳ್ಳಿ ಎಂದು ತಾಲೂಕು ಕಾರ್ಯನಿರ್ವಹಕ ಅಧಿಕಾರಿ, ತಹಶಿಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಎಷ್ಟೇ ಮನವೊಲಿಸಿದ್ರು ಯಾವುದೇ ಪ್ರಯೋಜವಾಗಲಿಲ್ಲ. ನಾನು ಲಸಿಕೆ ಪಡೆಯಲ್ಲಾ, ನನ್ನ ಸಾಯಿಸಿ ಹಾಕರೀ, ನಾವು ದುಡಿದು ತಿನ್ನೋದಕ್ಕೆ ಇದ್ದೇವೆ. ಲಸಿಕೆ ಪಡೆದರೆ ಬದೋಕಲ್ಲಾ ಸಾಯೋದೆ ಇದೆ ಎಂದು ಮಹಿಳೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಈಗಾಗಲೇ ಭಾಲ್ಕಿ ತಾಲೂಕಿನ ಉಚ್ಛಾ ಗ್ರಾಮ ನೂರಕ್ಕೆ ನೂರು ಮಂದಿ ಲಸಿಕೆ ಪಡೆದು ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಪಕ್ಕದಲ್ಲೇ ಇರುವ ತಳವಾಡ ಕೆ ಗ್ರಾಮದ ಮಹಿಳೆ ಅಧಿಕಾರಿಗಳು ಎಷ್ಟೇ ಮನವೊಲಿಸಿದ್ರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಇದನ್ನು ಓದಿ:ಬೆಂಗಳೂರಿನಲ್ಲಿ ಒಂದಂಕಿಗೆ ಇಳಿದ ವಲಯವಾರು ಪಾಸಿಟಿವಿಟಿ ರೇಟ್

    ಕೊರೊನಾ ಮಹಾಮಾರಿಗೆ ರಾಮ ಬಾಣ ಅಂದರೆ ಅದು ಸಂಜೀವಿನಿ ಲಸಿಕೆ. ಆದರೆ ಈ ಸಂಜೀವಿನಿ ಲಸಿಕೆ ಪಡೆಯಲು ತಪ್ಪು ವದಂತಿಗಳಿಂದ ಹಲವಾರು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.