Tag: ಪಬ್ಲಿಕ್ ಟಿವಿ Vaccine

  • 10 ಲಕ್ಷ ಕೊಟ್ಟು ಲಸಿಕೆ ಹಾಕಿಸಿ – ಆರೋಗ್ಯ ಸಿಬ್ಬಂದಿಗೆ ಮಹಿಳೆ ಅವಾಜ್

    10 ಲಕ್ಷ ಕೊಟ್ಟು ಲಸಿಕೆ ಹಾಕಿಸಿ – ಆರೋಗ್ಯ ಸಿಬ್ಬಂದಿಗೆ ಮಹಿಳೆ ಅವಾಜ್

    -ಕೋವಿಡ್ ಲಸಿಕೆ ಪಡೆಯಲು ಕೂಲಿಕಾರ್ಮಿಕರ ಹಿಂದೇಟು

    ಯಾದಗಿರಿ: ಲಸಿಕೆ ಪಡೆದಾಗ ಎನಾದರೂ ಆದರೆ ನಾವೇ ಜವಾಬ್ದಾರಿ ಎಂದು ಬರೆದುಕೊಡಿ, ಅವಳಿಗೆ ಎನಾದರೂ ಆದರೆ ಅವಳ ಮಕ್ಕಳನ್ನು ಯಾರೂ ನೋಡಿಕೊಳ್ಳುತ್ತಾರೆ? ಯಾರನ್ನು ಕರೆಸುತ್ತಿರಿ ಕರಿಸಿ ನಾನು ನೋಡುತ್ತೇನೆ. ನೀವು ನೋಡ್ಕೋತಿರಿ ಅಂತ ಹತ್ತು ಲಕ್ಷ ಕೊಟ್ಟು ಅವಳಿಗೆ ಸೂಜಿ ಹಾಕಿ ಎಂದು ನರೆಗಾ ಕೂಲಿ ಕಾರ್ಮಿಕರಿಗೆ ಲಸಿಕೆ ನೀಡಲು ಮುಂದಾದಾಗ ಆರೋಗ್ಯ ಸಿಬ್ಬಂದಿಗೆ ಮಹಿಳೆ ಅವಾಜ್ ಹಾಕಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಶೇ 50ರಷ್ಟು ಕೂಡ ಲಸಿಕೆ ಹಾಕಿಲ್ಲ. ಇದರಿಂದಾಗಿ ಕೊರೊನಾ ಮೂರನೇ ಡೆಂಜರ್ ಝೋನ್ ನಲ್ಲಿ ಯಾದಗಿರಿ ಇದೆ. ಹೀಗಾಗಿ ಲಸಿಕೆ ಟಾರ್ಗೆಟ್ ತಲುಪಲು ಜಿಲ್ಲಾಡಳಿತ ಫುಲ್ ಟೆನ್ಷನ್ ಆಗಿದೆ. ಶತಾಯಗತಾಯ ಲಸಿಕೆ ನೀಡಲು ಹಳ್ಳಿಗಳತ್ತ ಅಧಿಕಾರಿಗಳ ತಂಡಗಳು ಪಯಣ ಬೆಳೆಸಿವೆ. ಇದನ್ನೂ ಓದಿ:ಪೆಗಾಸಸ್ ಬಳಸಿ ಯಾರ ಮೇಲೂ ಗೂಢಾಚಾರಿಕೆ ಮಾಡಿಲ್ಲ- ಸುಪ್ರೀಂಗೆ ಅಫಿಡವಿಟ್ ಸಲ್ಲಿಕೆ

    ಆದರೆ ಅಧಿಕಾರಿಗಳು ವ್ಯಾಕ್ಸಿನ್ ಕೊಡಲು ಹೋದರೆ ಜನ ಮಾತ್ರ ಓಡಿ ಹೋಗುತ್ತಿದ್ದಾರೆ. ನೇರಗಾದಲ್ಲಿ ಕೂಲಿ ಕೆಲಸ ಮಾಡುತ್ತಿರುವವರಿಗೆ ಲಸಿಕೆ ಹಾಕಲು ಹೋದಾಗ ಅಲ್ಲಿನ ಕಾರ್ಮಿಕರು, ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಯಾದಗಿರಿ ಜಿಲ್ಲೆ ಬಳಿ ಚಕ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜನರ ಈ ಮೂಢನಂಬಿಕೆಗೆ ಅಧಿಕಾರಿಗಳು ವ್ಯಾಕ್ಸಿನ್ ಟಾರ್ಗೆಟ್ ರೀಚ್ ಮಾಡಲು ಹರಸಹಾಸ ಪರದಾಡುತ್ತಿದ್ದಾರೆ. ಜನರ ವರ್ತನೆಯ ಬಗ್ಗೆ ಆರೋಗ್ಯ ಅಧಿಕಾರಿಗಳು ಡಿಸಿ ರಾಗಾಪ್ರಿಯಾ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ:ಮಂತ್ರಿ ಸ್ಥಾನಕ್ಕೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಪಡುತ್ತಿಲ್ಲ: ವಿಜಯೇಂದ್ರ

  • ಮೂರನೇ ಅಲೆಯ ಆತಂಕ – ಲಸಿಕೆಗಾಗಿ ಜನರ ಪರದಾಟ

    ಮೂರನೇ ಅಲೆಯ ಆತಂಕ – ಲಸಿಕೆಗಾಗಿ ಜನರ ಪರದಾಟ

    ನೆಲಮಂಗಲ: ದೇಶಾದ್ಯಂತ ಕೋವಿಡ್ ಮೂರನೇ ಅಲೆಯ ಆತಂಕ ಎದುರಾಗಿದ್ದು ವ್ಯಾಕ್ಸಿನ್ ಸಮಸ್ಯೆ ಎದುರಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ವ್ಯಾಕ್ಸಿನ್ ಕೇಂದ್ರದಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಕೆಯಾಗದ ಹಿನ್ನೆಲೆ ಸಾರ್ವಜನಿಕರು ವ್ಯಾಕ್ಸಿನ್ ಗಾಗಿ ಮುಗಿಬಿದ್ದಿರುವ ದೃಶ್ಯ ಕಂಡುಬಂದಿದ್ದು, ಬೆಳಗ್ಗೆ 5-6 ಗಂಟೆಗೆ ಬಂದರೂ ವ್ಯಾಕ್ಸಿನ್ ಸಿಗುತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ನೆಲಮಂಗಲ ತಾಲೂಕು ಆಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಲ್ಕೈದು ದಿನದಿಂದ ವ್ಯಾಕ್ಸಿನ್ ಕೇಂದ್ರಕ್ಕೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಕೇವಲ 400 ಡೋಸ್ ವ್ಯಾಕ್ಸಿನ್ ಗೆ 600 – 700 ಜನರು ಬಂದಿದ್ದು, ವ್ಯಾಕ್ಸಿನ್ ಪಡೆಯಲು ಜನರ ನೂಕು, ನುಗ್ಗಲು ಮುಂದುವರೆದಿದೆ.

    ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಕೆ ಆಗದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ವ್ಯಾಕ್ಸಿನ್ ಪೂರೈಕೆ ಮಾಡಿ ಜನರಿಗೆ ಒದಗಿಸುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಕುರಿ ವ್ಯಾಪಾರಕ್ಕೆ ತೆರಳುತ್ತಿದ್ದ ತಂದೆ, ಮಗ ಸಾವು

  • ರಾಜ್ಯಗಳಿಗೆ 25 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ – ಕೇಂದ್ರ ಸರ್ಕಾರ

    ರಾಜ್ಯಗಳಿಗೆ 25 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ – ಕೇಂದ್ರ ಸರ್ಕಾರ

    ನವದೆಹಲಿ: ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೆ 25,06,41,440 ಕೋವಿಡ್-19 ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಇಂದಿನವರೆಗೂ ನೀಡಲಾದ ಲಸಿಕೆ ಹಾಗೂ ವ್ಯರ್ಥವಾದ ಲಸಿಕೆ ಸೇರಿಸಿದಂತೆ 23,74,21,808 ಲಸಿಕೆಗಳನ್ನು ಬಳಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇನ್ನೂ 1,33,68,727 ಕೋವಿಡ್ ಲಸಿಕೆ ಪ್ರಮಾಣಗಳು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಿದೆ. ಅಲ್ಲದೆ 3 ಲಕ್ಷಕ್ಕೂ ಹೆಚ್ಚು(3,81,750) ಲಸಿಕೆ ಪ್ರಮಾಣವನ್ನು ರವಾನಿಸಲಾಗುತ್ತಿದ್ದು, ಮುಂದಿನ ಮೂರು ದಿನಗಳ ಒಳಗೆ ರಾಜ್ಯಗಳು ಲಸಿಕೆಗಳನ್ನು ಸ್ವೀಕರಿಸಲಿದೆ. ಇದನ್ನು ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ

    ವ್ಯಾಕ್ಸಿನೇಷನ್ ಡ್ರೈವ್‍ನ ಮೂರನೇ ಹಂತವನ್ನು ಈಗಾಗಲೇ ಮೇ 1ರಿಂದ ಆರಂಭಿಸಲಾಗಿದೆ. ಜೂನ್21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದಲೇ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಪ್ರಕಟಿಸಿದ್ದಾರೆ.

  • ಕೈಯಲ್ಲಿ ಎತ್ತಿಕೊಂಡು ಹೋಗಿ 82ರ ವೃದ್ಧೆಗೆ ವ್ಯಾಕ್ಸಿನ್ ಹಾಕಿಸಿದ ಕಾನ್ಸ್‌ಸ್ಟೆಬಲ್ ಫೋಟೋ ವೈರಲ್

    ಕೈಯಲ್ಲಿ ಎತ್ತಿಕೊಂಡು ಹೋಗಿ 82ರ ವೃದ್ಧೆಗೆ ವ್ಯಾಕ್ಸಿನ್ ಹಾಕಿಸಿದ ಕಾನ್ಸ್‌ಸ್ಟೆಬಲ್ ಫೋಟೋ ವೈರಲ್

    ನವದೆಹಲಿ: ಪೊಲೀಸ್ ಕಾನ್ಸ್‌ಸ್ಟೆಬಲ್ ಒಬ್ಬರು 82 ವರ್ಷದ ವೃದ್ಧೆಯನ್ನು ಎತ್ತಿಕೊಂಡು ಹೋಗಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಶೈಲಾ ಡಿಸೋಜಾ(82) ಎಂಬ ನಿವೃತ್ತ ಇಂಗ್ಲಿಷ್ ಶಿಕ್ಷಕಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಇಚ್ಛೆಯನ್ನು ಪೊಲೀಸ್ ಕಾನ್ಸ್ ಸ್ಟೇಬಲ್ ಕುಲದೀಪ್ ಸಿಂಗ್ ಬಳಿ ವ್ಯಕ್ತಪಡಿಸಿದ್ದಾರೆ. ನಂತರ ಕುಲದೀಪ್ ಸಿಂಗ್‍ರವರು ನೋಂದಣಿ ಮಾಡಿಸಿ ವ್ಯಾಕ್ಸಿನ್ ಪಡೆಯಲು ಲಸಿಕೆ ಕೇಂದ್ರಕ್ಕೆ ಎತ್ತಿಕೊಂಡು ಬಂದಿರುವುದಾಗಿ ಕಾಶ್ಮೀರ್ ಗೇಟ್ ಪೊಲೀಸ್ ಠಾಣೆಯ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ವೈರಲ್ ಆಗುತ್ತಿದೆ.

    ಈ ಕುರಿತಂತೆ ಮಾತನಾಡಿದ ಕಾನ್ಸ್‌ಸ್ಟೆಬಲ್, ಶೈಲಾ ಡಿಸೋಜಾರವರು ನಮ್ಮ ಏರಿಯಾದ ಹಿರಿಯ ನಾಗರಿಕ ಮಹಿಳೆಯಾಗಿದ್ದು, ಅವರ ಯೋಗಕ್ಷೇಮ ವಿಚಾರಿಸಲು ಆಗಾಗ ಭೇಟಿ ಮಾಡುತ್ತೇನೆ. ಒಮ್ಮೆ ಅವರು ಕೋವಿಡ್ ಲಸಿಕೆ ಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ನಾನು ನನ್ನ ಎಸ್‍ಎಚ್‍ಒ ಜೊತೆ ಮಾತನಾಡಿ ಲಸಿಕೆಗೆ ನೋಂದಣಿ ಮಾಡಿಸಿ ವ್ಯಾಕ್ಸಿನ್ ಪಡೆಯಲು ಸಹಾಯ ಮಾಡಿದೆ. ಅವರು ಕಳೆದ ಎರಡು ವರ್ಷಗಳಿಂದ ನಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ಸ್ಟ್ರೆಚರ್ ಹಾಗೂ ಗಾಲಿ ಕುರ್ಚಿಯಲ್ಲಿ ಓಡಾಡುತ್ತಾರೆ. ವ್ಯಾಕ್ಸಿನೇಷನ್ ಕೇಂದ್ರ ಮೇಲ್ಗಡೆ ಇದ್ದರಿಂದ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಅವರನ್ನು ಎರಡನೇ ಮಹಡಿಗೆ ಕರೆದೊಯ್ದು ಲಸಿಕೆ ಹಾಕಿಸಿ ಮನೆಗೆ ಕಳುಹಿಸಿಕೊಟ್ಟೆ ಎಂದರು.

    ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ನಾವು ಮನೆಯಿಂದ ದೂರವಿರುವುದರಿಂದ ಇಂತಹ ಜನರಲ್ಲಿ ನಮ್ಮ ಕುಟುಂಬವನ್ನು ಕಾಣುತ್ತಾ ಕಾಳಜಿ ವಹಿಸುತ್ತೇವೆ. ನಾನು ಜನರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಹೇಳಲು ಬಯಸುತ್ತೇನೆ. ಆಗ ಮಾತ್ರ ನಾವು ಈ ಸಾಂಕ್ರಾಮಿಕ ರೋಗದಿಂದ ದೂರವಾಗಬಹುದು ಎಂದು ಹೇಳಿದ್ದಾರೆ.

  • ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ಕೋಲಾರ: ವ್ಯಾಕ್ಸಿನ್ ಹಾಕಿಸಿಕೊಳ್ಳುವ ಕ್ರೇಜ್ ಹಾಗೂ ಕೊರೊನಾ ಹೆದರಿಕೆ ಶುರುವಾಗಿದೆ. ಹಾಗಾಗಿ ವ್ಯಾಕ್ಸಿನ್‍ಗೆ ಬೇಡಿಕೆ ಸೃಷ್ಟಿಯಾಗಿರುವ ಕಾರಣ ರಾಜ್ಯದಲ್ಲಿ ಅವ್ಯವಸ್ಥೆ ಆಗಿದೆ ಎಂದು ಕೋಲಾರದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡಿದ್ದಾರೆ.

    ಕೋಲಾರದ ಜಿಲ್ಲಾ ಎಸ್‍ಎನ್‍ಆರ್ ಆಸ್ಪತ್ರೆಗೆ ಭೇಟಿ ನೀಡಿ ಬೆಡ್, ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಕುರಿತು ಸಿಎಂ ಕೂಡ ಹೇಳಿದ್ದಾರೆ. ರಾಜ್ಯದಲ್ಲಿ ಜನರು ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯಕ್ಕೆ ಬೇಕಾದ ವ್ಯಾಕ್ಸಿನ್ ನಮಗೆ ಸಿಗುತ್ತೆ ಎಂದಿದ್ದಾರೆ.

    ಕೋವಿಶೀಲ್ಡ್ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ಆದರೆ ಕೊವ್ಯಾಕ್ಸಿನ್ ಸಿಗುತ್ತಿಲ್ಲ. ರಾಜ್ಯದಲ್ಲಿ ವ್ಯಾಕ್ಸಿನ್ ಸಿಗುತ್ತಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳಲೇ ಬೇಕು ಎಂದು ರಾಜ್ಯದಲ್ಲಿರುವ ವ್ಯಾಕ್ಸಿನ್ ಅವ್ಯವಸ್ಥೆ ಒಪ್ಪಿಕೊಂಡಿದ್ದಾರೆ. ಕೋವ್ಯಾಕ್ಸಿನ್ ಉತ್ಪಾದನೆ ಕಡಿಮೆಯಾಗಿದ್ದು, ನಮಗಿಂತ ಬೇರೆ ರಾಜ್ಯದಲ್ಲಿ ಹೆಚ್ಚು ಆರ್ಡರ್ ಮಾಡಿದ್ದಾರೆ. ಹಾಗಾಗಿ ಇರುವುದರಲ್ಲಿ ಅಡ್ಜಸ್ಟ್ ಮಾಡಿ ಕೊಡುತ್ತಿದ್ದಾರೆ ಎಂದರು.

    ಸೋಂಕಿನ ಪ್ರಮಾಣ ಹೆಚ್ಚಾದಂತೆ ಜನರಲ್ಲಿ ಅರಿವು ಹೆಚ್ಚಾಗಿದೆ. ಶೇ.30 ರಷ್ಟು ಸೋಂಕಿತ ಜನರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸೋಂಕು ಹರಡಲು ಮತ್ತಷ್ಟು ಕಾರಣವಾಗಿದೆ. ಲಾಕ್‍ಡೌನ್ ಅನಿವಾರ್ಯತೆಯನ್ನು ಜನರೇ ನಿರ್ಮಾಣ ಮಾಡುತ್ತಿದ್ದಾರೆ.

    ರಾಜ್ಯದಲ್ಲಿ ಕೇಸ್‍ಗಳು ಹೆಚ್ಚಾದರೆ ತಪ್ಪೇನಿಲ್ಲ, ಯಾಕೆಂದರೆ ನಮ್ಮಲ್ಲಿ ಟೆಸ್ಟಿಂಗ್‍ಗಳು ಹೆಚ್ಚಾಗುತ್ತಿದೆ. ಎರಡನೇ ಅಲೆಯಲ್ಲಿ ಏನಾಗುತ್ತದೆ ಅಂತ ಗೊತ್ತಾಗುತ್ತಿಲ್ಲ ಎಂದು ತಮ್ಮ ಅಸಾಹಯಕತೆಯನ್ನ ಹೇಳಿಕೊಂಡಿದ್ದಾರೆ. ಬೆಳಿಗ್ಗೆ ಒಂದು ರೀತಿ ಇದ್ದರೆ ಸಂಜೆಗೆ ಮತ್ತೊಂದು ಥರ ದೇಹದಲ್ಲಿ ಬದಲಾಗುತ್ತದೆ. ರೋಗ ಲಕ್ಷಣ ಇದ್ದರೆ ಕೋವಿಡ್ ಕೇರ್ ಸೆಂಟರ್‌ಗೆ ಕೂಡಲೇ ಕಳುಹಿಸಬೇಕು ಎಂದು ಆಶಾ ಕಾರ್ಯಕರ್ತರಿಗೆ, ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದರು.