Tag: ಪಬ್ಲಿಕ್ ಟಿವಿ Thief

  • ಕಳ್ಳರಿಂದ ಚಿನ್ನ ಖರೀದಿಸಿದ ಆರೋಪ- ಚಿನ್ನದಂಗಡಿ ವ್ಯಾಪಾರಿಯ ಬಂಧನ

    ಕಳ್ಳರಿಂದ ಚಿನ್ನ ಖರೀದಿಸಿದ ಆರೋಪ- ಚಿನ್ನದಂಗಡಿ ವ್ಯಾಪಾರಿಯ ಬಂಧನ

    ಚಿತ್ರದುರ್ಗ: ಕಳ್ಳರು ಕದ್ದ ಚಿನ್ನವನ್ನು ಖರೀದಿಸಿರುವ ಆರೋಪದ ಮೇಲೆ ಬಂಗಾರದ ಅಂಗಡಿ ವ್ಯಾಪಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿರುವ ವಾಸವಿ ಜ್ಯೂವೆಲರ್ಸ್ ಮಾಲೀಕನ ಪುತ್ರ ವಿನಯ್ ಎಂಬ ವ್ಯಾಪಾರಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ಖರೀದಿಸಿರುವ ಆರೋಪ ಕೇಳಿಬಂದಿದ್ದು, ಕಳ್ಳರು ಪೊಲೀಸರ ತನಿಖೆ ವೇಳೆ ನೀಡಿದ ಮಾಹಿತಿ ಆಧರಿಸಿ ಆರೋಪಿ ವಿನಯ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಇಂದು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಹಿರಿಯೂರಿಗೆ ಆಗಮಿಸಿದ್ದ ಸಿಸಿಬಿ ಪೊಲೀಸರು ಧಿಡೀರ್ ಅಂತ ವಾಸವಿ ಜ್ಯೂವೆಲ್ಲರಿ ಮೇಲೆ ದಾಳಿ ನಡೆಸಿದ್ದಾರೆ. ಬಂಗಾರದ ಅಂಗಡಿಯಲ್ಲಿದ್ದ ವಿನಯ್‍ನನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರ ಕಾರನ್ನು ಹತ್ತಲು ಆರೋಪಿ ವಿನಯ್ ಅಂಗಡಿ ಮುಂಭಾಗದಲ್ಲಿ ಹೈಡ್ರಾಮಾ ಮಾಡಿದರೂ ಯಾವುದನ್ನು ಲೆಕ್ಕಿಸದೇ ಪೊಲೀಸರು ಅತನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ:ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ

  • ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

    ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ಮಾಪಕ ರಮೇಶ್ ಕಶ್ಯಪ್‍ರವರ ಹನುಮಂತನಗರ ನಿವಾಸದಲ್ಲಿ ಇತ್ತೀಚೆಗಷ್ಟೇ ಕಳ್ಳತನವಾಗಿತ್ತು. ಇದೀಗ ಈ ಪ್ರರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಚಂದ್ರಶೇಖರ್ ಮತ್ತು ಅಭಿಷೇಕ್ ಬಂಧಿತ ಆರೋಪಿಗಳು. ಆರೋಪಿ ಅಭಿಷೇಕ್ ನಿರ್ಮಾಪಕ ಕಶ್ಯಪ್ ರ ಕಾರು ಚಾಲಕನಾಗಿ ಕೆಲಸ ಕಾರ್ಯನಿರ್ವಹಿಸುತ್ತಿದ್ದ. ಜು.10ರಂದು ಹನುಮಂತನಗರದ ಕಶ್ಯಪ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ವೇಳೆ 3 ಲಕ್ಷ ರೂ. ನಗದು, 710 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಕದ್ದೊಯ್ದಿದ್ದರು.

    ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಸಿಸಿಟಿವಿ ಹಾಗೂ ಟವರ್ ಡಂಪ್ ಸಹಾಯದ ಮೂಲಕ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

    ನಿರ್ಮಾಪಕ ಕಶ್ಯಪ್‍ರ ಕಾರುಚಾಲಕನಾಗಿದ್ದ ಅಭಿಷೇಕ್ ಲಾಕರ್‍ನ ನಕಲಿ ಕೀ ಮಾಡಿಕೊಂಡಿದ್ದ. ಅಲ್ಲದೇ ಸ್ನೇಹಿತ ಚಂದ್ರಶೇಖರನಿಗೆ ಕೀ ನೀಡಿ ಕಳ್ಳತನ ಮಾಡಿಸಿದ್ದನು. ಕದ್ದ ಚಿನ್ನಾಭರಣವನ್ನ ಅಡವಿಟ್ಟು ಹಣ ಪಡೆದು ದಿಲ್ ದಾರ್ ಲೈಫ್ ನಡೆಸುತ್ತಿದ್ದರು. ಇದೀಗ ಹನುಮಂತನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿ ಇದ್ದ 3 ಲಕ್ಷ ನಗದನ್ನು ವಶ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

  • ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು

    ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮೂಳೂರಿನಲ್ಲಿ ಸರಣಿ ಕಳ್ಳತನವಾಗಿದೆ. ಮೂಳೂರು ಪರಿಸರದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ.

    ಕಾಪು ಸಮೀಪದ ಮೂಳೂರು ಗ್ರಾಮದ ಈಸ್ಟ್ ವೆಸ್ಟ್ ನರ್ಸರಿ ಬಳಿಯ ಮಹಮ್ಮದ್ ರಫೀಕ್, ಮಧುರಾ ಕಾಂಪೌಂಡ್ ನ ಇಬ್ರಾಹಿಂ ಮತ್ತು ಶೆಹನಾಜ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ನಗ-ನಗದನ್ನು ದೋಚಿದ್ದಾರೆ. ಬಾಗಿಲು ಒಡೆದು ಮನೆಗೆ ನುಗ್ಗಿ ಸಿಕ್ಕ ಎಲ್ಲಾ ವಸ್ತುಗಳನ್ನು ಕದ್ದಿದ್ದಾರೆ. ಅಲ್ಲದೇ ಬೀರೂ ಒಡೆದು, ಚಿನ್ನಾಭರಣ ಲೂಟಿ ಮಾಡಿದ್ದಾರೆ.

    ಮೂರು ಮನೆಗಳಲ್ಲೂ ಯಾರೂ ಇಲ್ಲದ್ದನ್ನು ತಿಳಿದು ಒಂದೇ ತಂಡದವರು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ. ಕಾಪು ಸರ್ಕಲ್ ಪ್ರಕಾಶ್, ಎಸ್.ಐ ರಾಘವೇಂದ್ರ .ಸಿ, ಕ್ರೈಂ ಎಸ್‍ಐ ತಿಮ್ಮೇಶ್ ಬಂದು ತನಿಖೆ ಮಾಡಿದ್ದಾರೆ. ಬೆರಳಚ್ಚು ಮತ್ತು ಶ್ವಾನದಳ ಪಡೆ ಹಾಗೂ ಪೊಲೀಸ್ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ:ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

  • ನಿರೀಕ್ಷೆಗಿಂತಲೂ ಹೆಚ್ಚು ಹಣ – ಕಳ್ಳನಿಗೆ ಹೃದಯಾಘಾತ

    ನಿರೀಕ್ಷೆಗಿಂತಲೂ ಹೆಚ್ಚು ಹಣ – ಕಳ್ಳನಿಗೆ ಹೃದಯಾಘಾತ

    ಲಕ್ನೋ: ತಾನು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಹಣ ಕಳ್ಳತನ ಮಾಡಿದ್ದನ್ನು ಕಂಡು ಕಳ್ಳನೊಬ್ಬ ಹೃದಯಾಘಾತಕ್ಕೆ ಒಳಾಗಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.

    ಕಳ್ಳನು ಅಪಾರವಾದ ಹಣವನ್ನು ಒಂದೇ ಬಾರಿಗೆ ನೋಡಿ ಸಂತೋಷಗೊಂಡಿದ್ದನು. ಇದರಿಂದ ಹೃದಯಾಘಾತಗೊಂಡಿದ್ದು, ಇದೀಗ ಕದ್ದ ಹಣದ ಅಪಾರ ಭಾಗಗವನ್ನು ತನ್ನ ಹೃದಯದ ಚಿಕಿತ್ಸೆಗೆ ಖರ್ಚುಮಾಡಿದ್ದಾನೆ.

    ಈ ವಿಚಾರ ಕಳ್ಳನೊಂದಿಗೆ ಸಂಬಂಧಹೊಂದಿದ್ದ ಮತ್ತಿಬ್ಬರು ಕಳ್ಳರು ಕಳೆದ ತಿಂಗಳು ಕೊಟ್ವಾಲಿ ದೇಹತ್ ಪ್ರದೇಶದಲ್ಲಿ ಕಳ್ಳತನ ಮಾಡಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದ ವೇಳೆ ವಿಷಯವನ್ನು ಬಹಿರಂಗಪಡಿಸಿದಾಗ ಈ ವಿಚಾರ ಬಯಲಾಗಿದೆ.

    ಈ ಕುರಿತಂತೆ ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಧರಮ್ ವೀರ್ ಸಿಂಗ್, ಫೆಬ್ರವರಿ 16 ಮತ್ತು 17ರ ಮಧ್ಯರಾತ್ರಿ ನವಾಬ್ ಹೈದರ್ ಅವರ ಒಡೆತನದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಇಬ್ಬರು ಕಳ್ಳರು ನುಸುಳಿ, ಅಲ್ಲಿಂದ 7 ಲಕ್ಷ ರೂ.ವನ್ನು ಕಳ್ಳತನವಾಗಿರುವ ಬಗ್ಗೆ ಹೈದರ್ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಬೇಧಿಸಿದಾಗ ಈ ವಿಚಾರ ಬೆಳಕಕಿಗೆ ಬಂದಿದೆ ಎಂದು ತಿಳಿಸಿದರು.