Tag: ಪಬ್ಲಿಕ್ ಟಿವಿ Temple

  • ಇಂದಿನಿಂದ ದೇವಾಲಯಗಳು ಓಪನ್ – ಗರ್ಭಗುಡಿಯ ಮೇಲೆ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪತ್ಯಕ್ಷ

    ಇಂದಿನಿಂದ ದೇವಾಲಯಗಳು ಓಪನ್ – ಗರ್ಭಗುಡಿಯ ಮೇಲೆ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪತ್ಯಕ್ಷ

    ದಾಸರಹಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ಮುಚ್ಚಿದ್ದ ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆ ಇಂದಿನಿಂದ ದೇವಾಲಯಗಳನ್ನು ತರೆಯಲಾಗಿದ್ದು, ದೇವಾಸ್ಥಾನವೊಂದರಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪ್ರತ್ಯಕ್ಷವಾಗಿದೆ.

    ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿರುವ ರಾಜಮಾತ ಉಚ್ಛಂಗಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿದೆ. ದೇವರ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ಅಚ್ಚರಿಯೇ ಕಾದಿದ್ದು, ದೇವರ ಗರ್ಭಗುಡಿಯ ಮೇಲೆ ಅಚ್ಚರಿ ರೂಪದಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ದರ್ಶನವನ್ನು ನೀಡಿದೆ.

    ಶುಭ ಸಂಕೇತವಾಗಿ ದೇವಸ್ಥಾನದ ಅರ್ಚಕ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆಗೆ ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಪೂಜೆಯನ್ನು ಸಲ್ಲಿಸಿದರೂ ಕೂಡ ಬಿಳಿ ಗೂಬೆ ದೇವಸ್ಥಾನವನ್ನು ಬಿಟ್ಟು ತೆರಳಲಿಲ್ಲ. ಸದ್ಯ ದೇವಸ್ಥಾನದ ವತಿಯಿಂದ ಬೇಕಾದ ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ ಹಾಗೂ ದೇವಾಲಯಕ್ಕೆ ಬಂದಂತಹ ಭಕ್ತಾದಿಗಳಿಗೆ ಮಂಗಳಾರತಿ ಮಾತ್ರ ನೀಡಲಾಗುತ್ತಿದೆ. ಅಲ್ಲದೇ ದೇವಸ್ಥಾನದಲ್ಲಿ ಯಾವುದೇ ವಿಶೇಷ ಪೂಜೆಯನ್ನು ಹಾಗೂ ದೇವರ ಪ್ರಸಾದವನ್ನು ಕೂಡ ನೀಡಲಾಗುತ್ತಿಲ್ಲ. ದೇವಸ್ಥಾನಕ್ಕೆ ನಿಧಾನವಾಗಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ದೇವಸ್ಥಾನದಲ್ಲಿ ಎಲ್ಲಾ ರೀತಿಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ

  • ಕಣ್ಣು ಬಿಟ್ಟಿದ್ದ ದೇವರ ಕಣ್ಣನ್ನು ಪೂಜಾರಿ ಕೈಯಿಂದಲೇ ತೆಗೆಸಿದ ತಹಶೀಲ್ದಾರ್

    ಕಣ್ಣು ಬಿಟ್ಟಿದ್ದ ದೇವರ ಕಣ್ಣನ್ನು ಪೂಜಾರಿ ಕೈಯಿಂದಲೇ ತೆಗೆಸಿದ ತಹಶೀಲ್ದಾರ್

    ಚಿಕ್ಕೋಡಿ: ಕಣ್ಣು ಬಿಟ್ಟಿದ್ದ ದೇವಿ ವಿಗ್ರಹದ ಕಣ್ಣನ್ನು ಪೂಜಾರಿ ಕೈಯಿಂದಲೇ ತಹಶೀಲ್ದಾರ್ ತೆಗೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.

    ದೇವಸ್ಥಾನದಲ್ಲಿನ ದೇವಿಯ ವಿಗ್ರಹ ಕಣ್ಣು ಬಿಟ್ಟಿದೆ. ಇದು ಕೊರೊನಾ ಪ್ರಪಂಚದಿಂದ ತೊಲಗುವ ಸಂದೇಶ ಎಂದು ಆ ಊರಿನ ಜನ ಗುಲ್ಲೆಬ್ಬಿಸಿದ್ದರು. ಊರಿನ ಜನ ಅಷ್ಟೇ ಅಲ್ಲದೇ ಪರ ಊರಿನ ಜನರೂ ಸಹ ದೇವಿ ಕಣ್ಬಿಟ್ಟಿದ್ದಾಳೆ ಎಂದು ದೇವಾಲಯಕ್ಕೆ ಬಂದು ಕಾಯಿ ಕರ್ಪೂರ ನೀಡಿ ದೇವಿಗೆ ಸೇವೆ ಸೇವೆ ಸಲ್ಲಿಸಿದ್ದರು. ಆದರೆ ದೇವಿ ಕಣ್ಣು ಬಿಟ್ಟಿದ್ದ ಹಿಂದಿನ ರಹಸ್ಯವನ್ನು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರು ಬೇಧಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸಂತೂಬಾಯಿ ದೇವಸ್ಥಾನದ ದೇವಿ ಕೆಲ ದಿನಗಳ ಹಿಂದೆ ಕಣ್ಣು ಬಿಟ್ಟಿದ್ದಳು. ಅದನ್ನ ನೋಡುವುದಕ್ಕೆಂದು ಅಲ್ಲಿ ಭಕ್ತ ಸಾಗರವೇ ಹರಿದು ಬರತೊಡಗಿತ್ತು. ಕೆಲವರಂತೂ ಇದು ಕೊರೊನಾ ಪ್ರಪಂಚವನ್ನು ಬಿಟ್ಟು ಹೊರಡುವ ಶುಭ ಸುದ್ದಿ ಎಂದೇ ಬಣ್ಣಿಸಿದ್ದರು.

    ದೇವಿ ಕಣ್ಣು ಬಿಟ್ಟಿರುವ ಹಾಗೂ ಅಲ್ಲಿಗೆ ದಿನಂ ಪ್ರತಿ ಭಕ್ತರು ಭೇಟಿ ನೀಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿ ಕಡೆಗೆ ಈ ಸುದ್ದಿ ಕಾಗವಾಡ ತಹಶೀಲ್ದಾರ್ ಪ್ರಮಿಳಾ ದೇಶಪಾಂಡೆಯವರ ಗಮನಕ್ಕೆ ಬಂದಿದೆ. ದೇವಿ ಹೇಗೆ ಕಣ್ಣು ಬಿಟ್ಟಿದ್ದಾಳೆ? ದೇವಿಯೇ ಕಣ್ಣು ಬಿಟ್ಟಳೋ ಅಥವಾ ಯಾರಾದರು ಕಣ್ಣು ಬಿಡಿಸಿದರೋ ಎಂಬುದನ್ನ ಪರಿಶೀಲಿಸಲು ಅಲ್ಲಿಗೆ ಕಾಗವಾಡ ತಹಶೀಲ್ದಾರ್ ತಮ್ಮ ಸಿಬ್ಬಂದಿಯ ಜತೆ ತೆರಳಿ ಪರಿಶೀಲಿಸಿದಾಗ ದೇವಿ ಕಣ್ಣು ಬಿಟ್ಟಿರುವ ಹಿಂದಿನ ರಹಸ್ಯ ಗೊತ್ತಾಗಿದೆ.

    ದೇವಿಯ ಮೂರ್ತಿಗೆ ಕೃತಕ ಕಣ್ಣು ಜೋಡಿಸಿ ಜನರಿಗೆ ಮಂಕು ಬೂದಿ ಎರಚಲು ಯತ್ನಿಸಿದವರಿಗೆ ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದು, ದೇವಿಗೆ ಅಂಟಿಸಿದ್ದ ಕೃತಕ ಕಣ್ಣು ತೆಗೆಸಿದ್ದಾರೆ. ದೇವಿಗೆ ಕಣ್ಣು ಬಿಡಿಸಿ ಜನರ ಬುದ್ದಿಗೆ ಮಂಕೆರಚಲು ಯತ್ನಿಸಿದ್ದವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ತಹಶೀಲ್ದಾರ್ ಇನ್ನೊಂದು ಬಾರಿ ಇಂತಹ ಕಿತಾಪತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೆ ದೇವಿ ಕಣ್ಣು ಬಿಟ್ಟ ಪ್ರಹಸನ ಸುಖಾಂತ್ಯಗೊಂಡಿದೆ. ಇದನ್ನೂ ಓದಿ:ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು