Tag: ಪಬ್ಲಿಕ್ ಟಿವಿ Tamil Nadu

  • ಪಟಾಕಿ ಸ್ಫೋಟಕ್ಕೆ 16 ಮಂದಿ ಬಲಿ – ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

    ಪಟಾಕಿ ಸ್ಫೋಟಕ್ಕೆ 16 ಮಂದಿ ಬಲಿ – ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

    – ಪ್ರಧಾನಿ ಮೋದಿ ಸಂತಾಪ

    ತಮಿಳುನಾಡು: ಫೆಬ್ರವರಿ 13ರಂದು ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 16 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಪ್ರಕರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಆಘಾತಕಾರಿಯಾಗಿದೆ. ನಾನು ಕುಟುಂಬಸ್ಥರ ದುಃಖದಲ್ಲಿ ಭಾಗಿಯಾಗಿದ್ದೇನೆ. ಘಟನೆ ವೇಳೆ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಸದ್ಯ ಅನಾಹುತದಲ್ಲಿ ಗಾಯಗೊಂಡವರಿಗೆ ಅಧಿಕಾರಿಗಳು ಸಹಾಯ ಮಾಡುವಲ್ಲಿ ಕಾರ್ಯ ನಿರತರಾಗಿದ್ದಾರೆ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.

    ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪಿಎಮ್‍ಎನ್‍ಆರ್‍ಎಫ್ ವತಿಯಿಂದ 2 ಲಕ್ಷ ರೂ. ಮತ್ತು ಗಂಭೀರವಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ರಾಸಾಯನಿಕಗಳನ್ನು ಬೆರೆಸುವಾಗ ಉಂಟಾದ ಘರ್ಷಣೆಯಿಂದ ಅವಘಡ ಸಂಭವಿಸಿದೆ. ಬೆಂಕಿ ನಾಂದಿಸಲು ವಿವಿಧ ಸ್ಥಳಗಳಿಂದ ಹತ್ತು ಅಗ್ನಿ ಶಾಮಕ ದಳವನ್ನು ಸ್ಥಳಕ್ಕೆ ಧಾವಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮೃತಪಟ್ಟ ಕುಟುಂಬಸ್ಥರಿಗೆ 3 ಲಕ್ಷ ರೂ.ವನ್ನು ಮತ್ತು ಘಟನೆಯಲ್ಲಿ ಗಾಯಗೊಂಡವರಿಗೆ 1 ಲಕ್ಷರೂ ಪರಿಹಾರ ಘೋಷಿಸಿದ್ದಾರೆ.

  • ಅಟ್ಟಹಾಸ ಮೆರೆದ ಗ್ಯಾಂಗ್ – ನಡು ಬೀದಿಯಲ್ಲಿ ಬರ್ಬರ ಕೊಲೆ

    ಅಟ್ಟಹಾಸ ಮೆರೆದ ಗ್ಯಾಂಗ್ – ನಡು ಬೀದಿಯಲ್ಲಿ ಬರ್ಬರ ಕೊಲೆ

    ಚೆನ್ನೈ: ಕೋರ್ಟಿಗೆ ಹಾಜರಾಗಿ ಮನೆಗೆ ಹಿಂದಿರುಗುತ್ತಿದ್ದ ಆರೋಪಿಗಳಿಬ್ಬರನ್ನು ಹಗಲು ಹೊತ್ತಿನಲ್ಲಿಯೇ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಪೊಲೀಸರು, ಮೃತಪಟ್ಟವರು 30 ಮತ್ತು 38 ವರ್ಷದವರಾಗಿದ್ದು, ವೀರಪ್ಪನ್‍ಚತ್ರಂ ಪ್ರದೇಶದ ಬೀದಿವೊಂದರಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಥಳಕ್ಕೆ ಬಂದ ಸುಮಾರು 7-8 ಜನರ ಗುಂಪು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಆರೋಪಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಇಬ್ಬರು 2018ರಲ್ಲಿ ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಸೆಷನ್ ನ್ಯಾಯಾಲಯ ವಿಚಾರಣೆಗೆಂದು ಹಾಜರಾಗಿ ನಂತರ ಮನೆಗೆ ಹಿಂದಿರುಗುತ್ತಿದ್ದ ವೇಳೆ ಗ್ಯಾಂಗ್‍ವೊಂದು ಇವರ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದರು.

    ಹಿಂದಿನ ಘಟನೆಗೆ ಪ್ರತೀಕರ ತೀರಿಸಿಕೊಳ್ಳುವ ಸಲುವಾಗಿ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

  • ನಿಮ್ಮ ಪ್ರೀತಿಯೇ ನನಗೆ ಔಷಧಿ – ಅಭಿಮಾನಿಗಳಿಗೆ ಕಮಲ್ ಸಂದೇಶ

    ನಿಮ್ಮ ಪ್ರೀತಿಯೇ ನನಗೆ ಔಷಧಿ – ಅಭಿಮಾನಿಗಳಿಗೆ ಕಮಲ್ ಸಂದೇಶ

    ಚೆನ್ನೈ: ಕಾಲಿವುಡ್ ನಟ ಕಮಲ್ ಹಾಸನ್ ಪಾದದ ಶಸ್ತ್ರಚಿಕಿತ್ಸೆಯ ನಂತರ ಮಂಗಳವಾರ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

    2016ರಲ್ಲಿ ಕಮಲ್ ಹಾಸನ್ ಚೆನ್ನೈ ನಿವಾಸದಲ್ಲಿ ಕುಸಿದ ಬಿದ್ದ ಪರಿಣಾಮ ಪಾದಕ್ಕೆ ಗಂಭೀರ ಗಾಯಗೊಂಡಿದ್ದರು. ಸದ್ಯ ಇದೀಗ ಚೆನ್ನೈನ ರಾಮಚಂದ್ರ ಆಸ್ಪತ್ರೆಯಲ್ಲಿ ಪಾದಕ್ಕೆ ಸಂಬಂಧಿಸಿದಂತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಪೂರ್ಣಗೊಂಡು ಸ್ವಲ್ಪ ಚೇತರಿಸಿಕೊಂಡ ಕಮಲ್, ನಿಮ್ಮ ಪ್ರೀತಿಯೇ ನನಗೆ ಔಷಧಿ ಎಂದು ಟ್ವೀಟ್ ಮಾಡಿದ್ದಾರೆ.

    ತಮಿಳಿನಲ್ಲಿ ಟ್ವೀಟ್ ಮಾಡಿರುವ ಕಮಲ್ ಹಾಸನ್, ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿದೆ. ಶ್ರೀ ರಾಮಚಂದ್ರ ಆಸ್ಪತ್ರೆಯ ವೈದ್ಯರ ತಂಡಕ್ಕೆ ದೊಡ್ಡ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಸಂಪೂರ್ಣ ಚೇತರಿಸಿಕೊಳ್ಳುವ ತನಕ ಇಲ್ಲಿಂದಲೇ ಅಭಿಮಾನಿಗಳ ಹೃದಯದೊಂದಿಗೆ ಸಂವಹನ ನಡೆಸಲು ಇಚ್ಛಿಸುತ್ತೇನೆ. ನಿಮ್ಮ ಪ್ರೀತಿಯೇ ನನಗೆ ಔಷಧಿ, ಶೀಘ್ರವೇ ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಕಮಲ್ ಇನ್ನೂ 4-5 ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವರದಿಯಾಗಿದೆ.

     

  • ಹಾಡಹಗಲೇ ಯುವಕನ ಶಿರಚ್ಛೇದನ ಮಾಡಿ ಅರ್ಧ ಕಿ.ಮೀ ಮೆರವಣಿಗೆ ಮಾಡಿದ್ರು!

    ಹಾಡಹಗಲೇ ಯುವಕನ ಶಿರಚ್ಛೇದನ ಮಾಡಿ ಅರ್ಧ ಕಿ.ಮೀ ಮೆರವಣಿಗೆ ಮಾಡಿದ್ರು!

    – ಚರ್ಚ್ ಮುಂಭಾಗಕ್ಕೆ ತಲೆ ಎಸೆದ ಗ್ಯಾಂಗ್

    ಮಧುರೈ: ಹಾಡಹಗಲೇ ನಡುಬೀದಿಯಲ್ಲಿ ಸಾರ್ವಜನಿಕರ ಮುಂದೆ ಗ್ಯಾಂಗ್ ಒಂದು 22 ವರ್ಷದ ಯುವಕನ ಶಿರಚ್ಛೇದನ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

    ಈ ಭಯಾಂಕರ ದೃಶ್ಯವನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ್ದಿದ್ದು, ಈ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ನಗರದ ಸೆಂಟ್ ಮೇರಿ ಚರ್ಚ್ ಬಳಿ ಯುವಕನ ಶಿರಚ್ಛೇದನ ಮಾಡಿದ್ದಾರೆ. ನಂತರ ಆತನ ಶಿರವನ್ನು ಅರ್ಧ ಕಿಲೋ ಮೀಟರ್‍ ವರೆಗೂ ಮೆರವಣಿಗೆ ನಡೆಸಿ ಬಳಿಕ ಚರ್ಚಿನಿಂದ ಮುಂದಕ್ಕೆ ತಲೆಯನ್ನು ಎಸೆದಿದ್ದಾರೆ.

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮೃತಪಟ್ಟ ವ್ಯಕ್ತಿ ಮುರುಗನಾಥಂ ಎಂಬಾತನಾಗಿದ್ದು, ಈತ ಸೊಲಾಯಪ್ಪನ್ ನಗರದ ನಿವಾಸಿ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದೀಗ ಯುವಕನ ದೇಹವನ್ನು ಮರಣೋತ್ತರ ಪರಿಕ್ಷೆಗೆ ಕಳುಹಿಸಲಾಗಿದೆ.

    ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಧುರೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಸುತ್ತಿದ್ದ ಕಾರನ್ನು ಸಹ ವಶ ಪಡಿಸಿಕೊಂಡಿದ್ದಾರೆ. ಕ್ರೂರ ಹತ್ಯೆಯ ಹಿಂದಿನ ಕಾರಣ ವೈಯಕ್ತಿಕ ದ್ವೇಷ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.