Tag: ಪಬ್ಲಿಕ್ ಟಿವಿ Snake

  • ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

    ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

    ಬಾಗಲಕೋಟೆ: ಬಾಗಲಕೋಟೆ ಸಮೀಪದ ಮುಚಖಂಡಿ ಗ್ರಾಮದಲ್ಲಿ ವಿಷ ಸರ್ಪ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಇದನ್ನೂ ಓದಿ:ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು

    ಮನೆಯೊಂದರ ಕಟ್ಟಿಗೆಯೊಂದರಲ್ಲಿ ಸರ್ಪವೊಂದು ಅವಿತುಕೊಂಡಿತ್ತು. ನಂತರ ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರಾದ ಸಂತೋಷ್ ಪಾಟೀಲ ಹಾಗೂ ಮಹ್ಮದ್ ಶಫೀಕ್ ಎಂಬವರು ವಿಷ ಸರ್ಪ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.

    ಇಷ್ಟು ದಿನ ಕಾಣಿಸಿಕೊಳ್ಳದೇ ಇದ್ದ ಸರ್ಪ ಇಂದು ಮಳೆಯಿಂದಾಗಿ ಹೊರಗೆ ಬಂದು ಕಟ್ಟಿಗೆಯಲ್ಲಿ ಅವಿತುಕೊಂಡಿತ್ತು. ಈ ವೇಳೆ ಹಾವನ್ನು ಕಂಡು ಅಲ್ಲಿದ್ದ ಸ್ಥಳೀಯರು ಗಾಬರಿಗೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೇ ಇದು ಅತ್ಯಂತ ವಿಷಕಾರಿ ಸರ್ಪವಾಗಿದ್ದು, ಕಚ್ಚಿದರೆ ಪ್ರಾಣಾಪಾಯ ಆಗುವುದು ಖಚಿತ ಎಂದು ತಿಳಿದ ಗ್ರಾಮಸ್ಥರು ವಿಷಕಾರಿ ಸರ್ಪಕ್ಕೆ ಯಾವುದೇ ತೊಂದರೆ ಮಾಡದೆ, ಹಾವು ಹಿಡಿಯವವರು ಬರುವವರೆಗೂ ಅದನ್ನು ಎಲ್ಲಿಯೂ ಹೋಗದಂತೆ ನೋಡಿಕೊಂಡರು.  ಇದನ್ನೂ ಓದಿ:ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ

    ನಂತರ ಸ್ನೇಕ್ ಕ್ಯಾಚರ್ ಬಂದು ಹಾವನ್ನ ಹಿಡಿದು ಚೀಲದಲ್ಲಿ ಹಾಕಿಕೊಂಡು ಅರಣ್ಯಕ್ಕೆ ಕೊಂಡೊಯ್ದದರು. ಇದನ್ನೂ ಓದಿ: ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ

  • ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ

    ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ

    ಬಳ್ಳಾರಿ: ಲಾಕ್‍ಡೌನ್ ಹಿನ್ನೆಲೆ ಜನದಟ್ಟಣೆ ಇಲ್ಲದ ಕಾರಣ ಅಪರೂಪದ ಬಿಳಿ ನಾಗರ ಹಾವು ಒಂದು ಜನ ನಿಬಿಡ ಪ್ರದೇಶದಲ್ಲಿ ಬಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ.

    ಹೊಸಪೇಟೆಯ ಆರ್‍ಟಿಓ ಕಚೇರಿಯ ಮುಂಭಾಗದಲ್ಲಿ ಇರುವ ರಸ್ತೆಯಲ್ಲಿ ಬಂದ ಬಿಳಿ ನಾಗರ ಹಾವು ರಸ್ತೆಯಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಕೆಲವರೂ ಬಿಳಿ ನಾಗರ ಹಾವು ಕಂಡು ಭಯದಿಂದ ದೂರ ಓಡಿ ಹೋದರೆ, ಇನ್ನೂ ಕೆಲವರು, ಹಾವು ಕಂಡು ಭಕ್ತಿಯಿಂದ ಕೈ ಮುಗಿದರು. ಇದನ್ನೂ ಓದಿ:ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು

    ಆದರೆ ಕೆಲ ಸ್ಥಳೀಯರು ನಗರದ ಉರಗ ತಜ್ಞ ಸ್ನೇಕ್ ಅಸ್ಲಂಗೆ ಕರೆ ಮಾಡಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಅಸ್ಲಂ ಅವರು ಜನರಲ್ಲಿ ಹಾವುಗಳನ್ನು ಕೊಲ್ಲದಂತೆ ಮನವಿ ಮಾಡಿ, ಅಪರೂಪದ ಬಿಳಿ ನಾಗರ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟಿದ್ದಾರೆ. ಸ್ನೇಕ್ ಅಸ್ಲಂ ಅವರು ಕೇವಲ ಒಂದೇ ವಾರದಲ್ಲಿ ಸುಮಾರು 100ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಇದನ್ನೂ ಓದಿ: ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ

  • 15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    ಚಿಕ್ಕಮಗಳೂರು: ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.

    ಅತ್ತಿಗೆರೆ ಗ್ರಾಮದ ಮಂಜುನಾಥ್ ಗೌಡ ಎಂಬವರ ತೋಟದಲ್ಲಿ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕಾಫಿ ತೋಟದಲ್ಲಿ ಕಾಳಿಂಗ ಸರ್ಪಗಳಿರುವುದು ಮಾಮೂಲಿ. ಅವು ಇದ್ದಲ್ಲೇ ಇರುವುದಿಲ್ಲ. ಬರುತ್ತದೆ, ಹೋಗುತ್ತೆ ಎಂದು ಜನ ಕೂಡ ಸುಮ್ಮನಾಗುತ್ತಿದ್ದರು. ಇದನ್ನು ಓದಿ: ಮನವಿ ಸ್ವೀಕರಿಸಲು ಬಾರದ ಸಚಿವರು – ಮನವಿ ಪತ್ರ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಿ ಮೀನುಗಾರರಿಂದ ವಿನೂತನ ಪ್ರತಿಭಟನೆ

    ಆದರೆ ಲಾಕ್‍ಡೌನ್ ಇರುವುದರಿಂದ ತೋಟದಲ್ಲಿ ಹೆಚ್ಚಿನ ಕೆಲಸಗಾರರು ಇರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ದಿನ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲಸಗಾರರು ಭಯಗೊಂಡಿದ್ದಾರೆ. ಕೊನೆಗೆ ಆ ಬೃಹತ್ ಕಾಳಿಂಗ ಸರ್ಪವನ್ನ ಕಂಡ ಕೆಲಸಗಾರನೊಬ್ಬ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ತೋಟದ ಮಾಲೀಕ ಮಂಜುನಾಥ್ ಗೌಡ ವಿಷಯವನ್ನ ಸ್ನೇಕ್ ಆರೀಫ್ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದಾರೆ. ಕಾಫಿ ತೋಟ ಆಗಿರುವುದರಿಂದ ಕಾಳಿಂಗ ಸರ್ಪ ತೋಟದೊಳಗೆ ವೇಗವಾಗಿ ಸಂಚರಿಸುತ್ತೆ. ಗಿಡಗಳ ಮಧ್ಯೆ ಹಾವುಗಳು ಹೋದಷ್ಟು ವೇಗವಾಗಿ ಜನಸಾಮಾನ್ಯರು ಹೋಗಿ ಹಾವನ್ನ ಹಿಡಿಯುವುದು ಕಷ್ಟ. ಆದರೂ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ.

    ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪರಿಸರವಾದಿಗಳು ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಾವಾಡಿಗರು ಹಾವನ್ನ ಸೆರೆ ಹಿಡಿಯುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ:ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು