Tag: ಪಬ್ಲಿಕ್ ಟಿವಿ. siddaramaiah

  • ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರ ಟೇಕಾಫ್ ಆಗಿತ್ತಾ : ಭೈರತಿ ಬಸವರಾಜ್

    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರ ಟೇಕಾಫ್ ಆಗಿತ್ತಾ : ಭೈರತಿ ಬಸವರಾಜ್

    ದಾವಣಗೆರೆ: ಸರ್ಕಾರ ಟೇಕಾಫ್ ಆಗಿಲ್ಲ, ಜಾಸ್ತಿ ದಿನ ಉಳಿಯಲ್ಲ ಎಂಬ ಮಾಜಿ ಸಿಎಂಸಿದ್ದರಾಮಯ್ಯ ಹೇಳಿಕೆಗೆ ಇವರು ಸಿಎಂ ಆಗಿದ್ದಾಗ ಟೇಕಾಫ್ ಆಗಿದ್ರಾ, ಹಂಗೇ ಆಕಾಶದಲ್ಲಿ ಹಾರಿಕೊಂಡು ಹೋಗಿದ್ರಾ ಎಂದು ಭೈರತಿ ಬಸವರಾಜ್ ರವರು ಗರಂ ಆಗಿದ್ದಾರೆ.

    ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಎಂಟತ್ತು ದಿನ ಆಗಿಲ್ಲ. ನಾಲ್ಕು ಜಿಲ್ಲೆ ಪ್ರವಾಸ ಮಾಡಿ ಅಭಿವೃದ್ದಿ ಚಿಂತನೆ ಮಾಡುತ್ತಿದ್ದಾರೆ, ಬೆಂಗಳೂರು ನಗರ ಬಗ್ಗೆ ಮೀಟಿಂಗ್ ಮಾಡಿ ಆರು ಸಾವಿರ ಕೋಟಿ ಅನುದಾನ ಕೊಡುತ್ತೇವೆ ಅಂತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಶತ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಸತತ ಸಭೆ ನಡೆಸುತ್ತಿದ್ದಾರೆ. ಇದೆಲ್ಲ ಅಭಿವೃದ್ಧಿಯಲ್ವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಪ್ರಶ್ನಿಸಿದ್ದಾರೆ.

    ಒಂದು ಬಾರಿಯಾದರು ವಿಪಕ್ಷ ನಾಯಕ ಸಿದ್ದರಾಮಯ್ಯ ಗಡಿ ಜಿಲ್ಲೆಗಳಿಗೆ ಹೋಗದೆ ಎಲ್ಲೋ ಕೂತು, ಏನೋ ಒಂದು ಹೇಳೋದು ಬಿಡಲಿ. ಮಾಜಿ ಸಿಎಂ ವಸ್ತುಸ್ಥಿತಿ ಬಗ್ಗೆ ಸಲಹೆ ನೀಡಲಿ, ಅದನ್ನು ಬಿಟ್ಟು ಸರ್ಕಾರ ಉಳಿಯಲ್ಲ, ಟೇಕಾಫ್ ಆಗಿಲ್ಲ ಎನ್ನುವುದು ಸರಿಯಲ್ಲ. ಸರ್ಕಾರ ಬೀಳುತ್ತೆ ಅಂತ ಇವರೇನು ಭವಿಷ್ಯ ಹೇಳ್ತಾರೆ, ಕಾಂಗ್ರೆಸ್ ನಲ್ಲಿ ಎಲ್ಲರೂ ಕಿತ್ತಾಡುತ್ತಿದ್ದಾರೆ, ಮೊದಲು ಇವರ ಭವಿಷ್ಯ ಇವರು ನೋಡಿಕೊಳ್ಳಲಿ, ಸಿಎಂ ಆಗ್ತಾರಾ ಇಲ್ಲ ಅಂತ ಭವಿಷ್ಯ ಹೇಳಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಗುರುವಾರ ಕ್ಯಾಬಿನೆಟ್ ಮೀಟಿಂಗ್ ಇದ್ದು, ಅಲ್ಲಿ ಸಾಧಕ ಬಾಧಕ ಚರ್ಚೆ ಮಾಡುತ್ತೇವೆ. ಕೊನೆಯಲ್ಲಿ ಈ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ.  ಇದನ್ನೂ ಓದಿ:ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ,ಭವಿಷ್ಯ ಹೇಳಲು ಶುರು ಮಾಡಿದ್ದಾರೆ- ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ಕಿಡಿ

  • ಸಿದ್ದರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರೂ ಮಾಡಿಲ್ಲ: ಕಟೀಲ್

    ಸಿದ್ದರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರೂ ಮಾಡಿಲ್ಲ: ಕಟೀಲ್

    ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಇತಿಹಾಸದಲ್ಲಿಯೇ ಯಾರು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಚಿತ್ರದುರ್ಗದಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಣ್ಣ ಬೃಹತ್ ಅರ್ಕಾವತಿ ಘಟನೆ ಮುಚ್ಚಿ ಹಾಕಿದ್ದಾರೆ. ಅವರ ಅವಧಿಯಲ್ಲಿ ನಡೆದಿರುವಷ್ಟು ಭ್ರಷ್ಟಾಚಾರವನ್ನು ಯಾವ ಸರ್ಕಾರ ಮಾಡಲು ಸಾಧ್ಯವಿಲ್ಲ. ಹಿಂದೆಯೂ ಮಾಡಿಲ್ಲ. ಮುಂದೆ ಸಹ ಮಾಡೋದು ಅಸಾಧ್ಯ ಎಂದಿದ್ದಾರೆ.

    ಇತ್ತೀಚೆಗಷ್ಟೇ ಸಿದ್ದರಾಮಯ್ಯನವರು ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ಅವರು, ಈ ದೇಶದಲ್ಲಿ ಅತೀ ಹೆಚ್ಚು ಅವಧಿ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷ ಅಂಬೇಡ್ಕರ್‍ಗೆ ಅವಮಾನ ಮಾಡಿದೆ. ದೇಶದ ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ ಅಂಬೇಡ್ಕರ್‍ರನ್ನು ಈ ಕಾಂಗ್ರೆಸ್ಸಿಗರು ಸೋಲಿಸಿದರು. ಅಲ್ಲದೇ 2ನೇ ಬಾರಿ ಅಂಬೇಡ್ಕರ್ ಅವರ ಸಹಾಯಕನನ್ನು ಅವರ ಎದುರೇ ನಿಲ್ಲಿಸಿ ಸೋಲಿಸಿದ್ದರು. ಅಲ್ಲದೇ ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಹಾಗೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್‍ಗೆ ಭಾರತ ರತ್ನ ಕೂಡ ಕೊಡಲಿಲ್ಲ. ಆದರೆ ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ನಾವು ಎಂದು ಹುಬ್ಬೇರಿಸಿ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಕಾಂಗ್ರೆಸ್ ಪಕ್ಷ ಜಗಜೀವನ್ ರಾಮ್‍ರಂತವರನ್ನು ಪ್ರಧಾನಿ ಮಾಡಲಿಲ್ಲ. ಸಿದ್ದರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಅವರು ಸಿಎಂ ಆದರು. ಆದರೆ ಪರಮೇಶ್ವರ್ ಅವರನ್ನು ಮಾತ್ರ ಡಿಸಿಎಂ ಮಾಡಲಿಲ್ಲ. ಬದಲಾಗಿ ಚುನಾವಣೆಯಲ್ಲಿ ಸೋಲಿಸಿದರು. ಅಲ್ಲದೇ ದಲಿತ ನಾಯಕರಾದ ಖರ್ಗೆ, ಚಂದ್ರಪ್ಪ, ಧ್ರುವನಾರಾಯಣ, ಖರ್ಗೆ ಸೇರಿದಂತೆ ಅನೇಕ ಮುಖಂಡರನ್ನು ಸಿದ್ದರಾಮಯ್ಯ ಸೋಲಿಸಿದರು. ಇಂದಿಗೂ ಖರ್ಗೆ ಹಾಗೂ ಪರಮೇಶ್ವರ್ ಅವರನ್ನು ಮುಂದಕ್ಕೆ ಬರಲು ಸಿದ್ದರಾಮಯ್ಯ ಬಿಡಲ್ಲ ಎಂದು ಆರೋಪಿಸಿದ್ದಾರೆ.

    ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದ್ದರು ಸಹ ಮುಸ್ಲಿಂ ರಾಷ್ಟ್ರಪತಿ ಅಬ್ದುಲ್ ಕಲಾಂರನ್ನು ನಾವು ಮಾಡಿದ್ದೇವೆ. ದಲಿತರಾದ ರಾಮನಾಥ್ ಕೋವಿಂದ್‍ರನ್ನು ರಾಷ್ಟ್ರಪತಿ ಮಾಡಿದ್ದೇವೆ. ಗೋವಿಂದ್ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ. ಜೊತೆಗೆ ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗದಲ್ಲಿ ಸಂಸದರನ್ನಾಗಿಸಿದ್ದೂ, ಎ.ನಾರಾಯಣಸ್ವಾಮಿಗೆ ಕೇಂದ್ರದ ಮಂತ್ರಿ ಸಹ ಮಾಡಿದ್ದೇವೆ. ಹೀಗಾಗಿ ಯಾರು ದಲಿತರ ವಿರೋಧಿಗಳೆಂದು ಸಿದ್ದರಾಮಯ್ಯ ತಿಳಿಯಬೇಕಿದೆ ಎಂದು ಹೇಳಿದ್ದಾರೆ.

    ರಾಜ್ಯಾಧ್ಯಕ್ಷರ ಆಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರಿನ ಫೇಕ್ ಆಡಿಯೋ ಪ್ರಕರಣ ತನಿಖೆ ನಡೆಯುತ್ತಿದೆ. ಈ ಬಗ್ಗೆ ಏನು ಮಾತನಾಡಲ್ಲ ಎಂದು ಮಾತನಾಡಲು ಹಿಂದೇಟು ಹಾಕಿದರು. ಜೊತೆಗೆ ಬಿಜೆಪಿಗೆ ಬಂದಿರುವವರೆಲ್ಲಾ ನಮ್ಮ ಸದಸ್ಯರು. ಹೀಗಾಗಿ ನಮ್ಮಲ್ಲಿ ಮಿತ್ರ ಮಂಡಳಿ ಹಾಗೂ ವಲಸಿಗ ಪದ ಸರಿಯಲ್ಲ. ಅವರೆಲ್ಲರೂ ಬಿಜೆಪಿಯಿಂದ ಗೆದ್ದು, ಶಾಸಕರಾಗಿದ್ದಾರೆ. ಪಕ್ಷದ ಒಂದು ಮಂಡಳಿ ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಸಿಎಂ ಬಿಎಸ್ ವೈ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಡೆದಿರುವ ಅವಘಡಗಳ ಸ್ಥಳಕ್ಕೆ ಸಿಎಂ ಯಡಿಯೂರಪ್ಪ ಈಗಾಗಲೇ ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾ ಉಸ್ತುವಾರಿಗಳಿಗೆ ಅವರ ಜಿಲ್ಲೆಗಳಿಗೆ ತೆರಳಲು ಸೂಚಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಒಂದು ತಿಂಗಳು ಬಿಎಸ್‍ವೈಯೇ ಸಿಎಂ ಆಗಿ ಮುಂದುವರಿದ್ರೆ ಒಳ್ಳೆಯದು: ‘ಕೈ’ ಶಾಸಕಿ ನಿಂಬಾಳ್ಕರ್

  • ಸಿದ್ದರಾಮಯ್ಯ ಅವರ ಪಾಕಿಸ್ತಾನ ಪ್ರೇಮ ಈ ಹಿಂದೆಯೇ ಪ್ರಕಟ – ಬಿಜೆಪಿ ಟೀಕೆ

    ಸಿದ್ದರಾಮಯ್ಯ ಅವರ ಪಾಕಿಸ್ತಾನ ಪ್ರೇಮ ಈ ಹಿಂದೆಯೇ ಪ್ರಕಟ – ಬಿಜೆಪಿ ಟೀಕೆ

    ಬೆಂಗಳೂರು: ಪಾಕಿಸ್ತಾನ ಸೈನಿಕರಿಂದ ಭಾರತೀಯ ಸೈನಿಕರ ಸಾವು ಬಯಸುವ ವ್ಯಕ್ತಿಗಳನ್ನು ಬೆಂಬಲಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುವ ಮೂಲಕ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದೆ.

    ಟ್ವೀಟ್ ನಲ್ಲಿ ಏನಿದೆ?
    ಕಾಂಗ್ರೆಸ್ ಕಾರ್ಯಕರ್ತರಾಗಲು ದೇಶ, ಸೈನಿಕರ ವಿರುದ್ಧದ ನಿಲುವು ಹೊಂದಿರುವುದು ಕಡ್ಡಾಯವೇ? ಪಾಕಿಸ್ತಾನ ಸೈನಿಕರು ನಮ್ಮ ಸೈನಿಕರನ್ನು ಕೊಲ್ಲಲಿ ಎಂದ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಕಾನೂನು ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತಿದೆ. ಈ ಮೂಲಕ ಪಾಕ್ ಮೇಲಿನ ತಮ್ಮ ನಿಷ್ಠೆಯನ್ನು ಕಾಂಗ್ರೆಸ್ ನಾಯಕರು ಸಾಬೀತುಪಡಿಸಿದ್ದಾರೆ.

    ಪಾಕಿಸ್ತಾನ ಬೆಂಬಲಿಸಿದ ವ್ಯಕ್ತಿಯ ಮೇಲಿನ ಕಾನೂನು ಕ್ರಮ ಸಿದ್ದರಾಮಯ್ಯನವರಿಗೆ ನೋವು ತರುತ್ತಿದೆ ಯಾಕೆ?

    ಸಿದ್ದರಾಮಯ್ಯ ಅವರ ಪಾಕಿಸ್ಥಾನ ಪ್ರೇಮ ಈ ಹಿಂದೆಯೇ ಪ್ರಕಟವಾಗಿತ್ತು. ಪಾಕಿಸ್ತಾನವನ್ನು ಪ್ರೇಮಿಸುವ ಸಮಾಜಘಾತುಕ ಸಂಘಟನೆಗಳ ಕೇಸ್ ಹಿಂಪಡೆದಿದ್ದರು. ಈಗ ಶತ್ರುರಾಷ್ಟ್ರ ಪಾಕಿಸ್ಥಾನದ ಪರವಾಗಿ ಬರೆದ ವ್ಯಕ್ತಿಯ ವಿರುದ್ಧ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ತೋರ್ಪಡಿಸುತ್ತಿರುವ ಕಾಳಜಿ ದೇಶದ ಹಿತಾಸಕ್ತಿಗೆ ಮಾರಕವಾದದ್ದು.

    ಈ ಹಿಂದೆ ಗೋ ಕಳ್ಳರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಈಗ ಪಾಕಿಸ್ಥಾನ ಪ್ರೇಮಿಯ ಪರ ನಿಂತಿದ್ದಾರೆ. ಕಾಂಗ್ರೆಸ್ ನಾಯಕರ ಒಲವು, ನಿಲುವುಗಳೆಲ್ಲ ದೇಶದ ವಿರುದ್ಧವಾಗಿರುವವರ ಪರವಾಗಿರುತ್ತದೆ. ಸೈನಿಕರ ಸಾವು ಬಯಸುವ ವ್ಯಕ್ತಿಯನ್ನು ಅಮಾಯಕ ಎಂದು ಬಿಂಬಿಸುವ ಏಕೈಕ ಪಕ್ಷವೊಂದಿದ್ದರೆ, ಅದು ಕಾಂಗ್ರೆಸ್ ಮಾತ್ರ

    ಸುನಿಲ್ ಕುಮಾರ್ ಟೀಕೆ:
    ದೇಶದ್ರೋಹ ಎಂದರೇನು ಎಂದು ಶ್ರೀ ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ. ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಈಗ ಕಾರ್ಕಳದಲ್ಲಿ ಪೊಲೀಸ್ ಬಂಧಿಸಿದೆ. ಅತ್ತಂತೆ ನಟಿಸುವವರ ಸಮರ್ಥನೆಗೆ ನೀವು ಬೇಗ ಬರುತ್ತಿರಿ.

    ಕೆಜೆ ಹಳ್ಳಿ ಗಲಭೆ, ಮಂಗಳೂರು ಗಲಭೆ, ಬೆಂಗಳೂರಿನ ಗೌರಿಪಾಳ್ಯದಲ್ಲಿ ವೈದ್ಯರ ಮೇಲೆ ಹಲ್ಲೆ, ಹಿಂದು ಕಾರ್ಯಕರ್ತರ ಕಗ್ಗೊಲೆ, ಕೊಲೆಗಡುಕ ಎಸ್ ಡಿ ಪಿಐ, ಪಿಎಫ್ ಐ ಸಂಘಟನೆಯನ್ನು ನೀವು ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತನಿಗೆ ಕಾರ್ಕಳ ಎಸ್‍ಐ ಮಧು ಹಲ್ಲೆ – ತನಿಖೆಗೆ ಸಿದ್ದರಾಮಯ್ಯ ಒತ್ತಾಯ

  • ಕಾಂಗ್ರೆಸ್ ಕಾರ್ಯಕರ್ತನಿಗೆ ಕಾರ್ಕಳ ಎಸ್‍ಐ ಮಧು ಹಲ್ಲೆ – ತನಿಖೆಗೆ ಸಿದ್ದರಾಮಯ್ಯ ಒತ್ತಾಯ

    ಕಾಂಗ್ರೆಸ್ ಕಾರ್ಯಕರ್ತನಿಗೆ ಕಾರ್ಕಳ ಎಸ್‍ಐ ಮಧು ಹಲ್ಲೆ – ತನಿಖೆಗೆ ಸಿದ್ದರಾಮಯ್ಯ ಒತ್ತಾಯ

    ಉಡುಪಿ: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಪೊಲೀಸರು ಹಲ್ಲೆ ನಡೆಸಿರುವ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಈ ಕುರಿತಂತೆ ತನಿಖೆ ನಡೆಯಾಗಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

    ಕಾರ್ಕಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ ಎಂಬವರಿಗೆ ಕಾರ್ಕಳ ನಗರ ಪೊಲೀಸ್ ಎಸ್ ಐ ಮಧು ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ. ವರ್ಷದ ಹಿಂದೆ ಫೇಸ್ ಬುಕ್‍ನಲ್ಲಿ ಯೋಧರ ವಿರುದ್ಧ ರಾಧಾಕೃಷ್ಣ ನಾಯಕ್ ಪೋಸ್ಟ್ ಹಾಕಿರುವುದಾಗಿ ಆರೋಪಿಸಿ ಕಾರ್ಕಳ ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆ ದೂರು ನೀಡಿತ್ತು. ವಿಚಾರಣೆಗೆ ಕಾರ್ಕಳ ಪೊಲೀಸರು ಕರೆಸಿಕೊಂಡಿದ್ದಾಗ ನನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿ ಬೆಂಗಳೂರಿನೆಡೆ ಹೋಗಿದ್ದರು ಎನ್ನಲಾಗಿದೆ.

    ನಕಲಿ ಅಕೌಂಟ್ ಮಾಡಿ ಈ ಪೋಸ್ಟ್ ಹಾಕಿರುವ ಬಗ್ಗೆ, ಬೆಂಗಳೂರಿನಲ್ಲಿ ದೂರು ನೀಡಿರುವುದಾಗಿ ರಾಧಾಕೃಷ್ಣ ಹೇಳಿದ್ದರು. ನಂತರ ಇತ್ತೀಚೆಗೆ ಬೆಂಗಳೂರಿನಿಂದ ವಾಪಸಾಗಿದ್ದ ರಾಧಾಕೃಷ್ಣ ಕಾರ್ಕಳದಲ್ಲಿ ನೆಲೆಸಿದ್ದರು. ಈ ವೇಳೆ ಕಾರ್ಕಳ ಪೊಲೀಸರು ಅವರನ್ನು ತನಿಖೆಗೆ ಬರುವಂತೆ ಸೂಚನೆ ನೀಡಿದ್ದರು. ತನಿಖೆಗೆ ಹಾಜರಾದ ವೇಳೆ ರಾಧಾಕೃಷ್ಣ ಏಕವಚನ ಮತ್ತು ಉಡಾಫೆ ಮಾತುಗಳನ್ನಾಡಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಇದೆ.

    ಎಸ್.ಐ ಮಧು ನಿಂದಿಸಿ, ಹಲ್ಲೆ ನಡೆಸಿದ್ದಾಗಿ ರಾಧಾಕೃಷ್ಣ ದೂರಿದ್ದಾರೆ. ಒಂದು ವರ್ಷದಷ್ಟು ಹಳೆಯ ಪೋಸ್ಟಿಗೆ ಮತ್ತೆ ಠಾಣೆಗೆ ಕರೆಸಿಕೊಂಡು, ಹಲ್ಲೆ ನಡೆಸಿರುವುದರ ಬಗ್ಗೆ ಆರೋಪಿಸಿದ್ದಾರೆ. ಹೃದಯದ ಕಾಯಿಲೆಯಿಂದ ಬಳಲುತ್ತಿರುವ ರಾಧಾಕೃಷ್ಣಗೆ, ಹಲ್ಲೆ ನಡೆಸಿರುವುದು ಅಮಾನವೀಯ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದಾರೆ. ಸದ್ಯ ರಾಧಾಕೃಷ್ಣ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವೇಶ
    ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಈ ಘಟನೆಯನ್ನು ಖಂಡಿಸಿದ್ದಾರೆ. ಉಡುಪಿ ಎಸ್.ಪಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾರ್ಕಳ ಬ್ಲಾಕ್ ಕಾಂಗ್ರೆಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ಈ ಬಗ್ಗೆ ಮುಂದೆ ಹೋರಾಟ ನಡೆಸುವ ಸಾಧ್ಯತೆ ಇದೆ.

    ಕುಂದಾಪುರ ಡಿ.ಎಸ್‍ಪಿಯನ್ನು ವಿಚಾರಣೆಗೆ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಘಟನೆ ಸಂಬಂಧ ಎಲ್ಲಾ ರೀತಿಯ ವಿಚಾರಣೆ ಮಾಡಲಾಗುವುದು ಎಂದು ಎಸ್.ಪಿ ವಿಷ್ಣುವರ್ಧನ್ ಮಾಹಿತಿ ನೀಡಿದರು. ಇದನ್ನೂ ಓದಿ: ಟೊಮೆಟೋ ಮಾರ್ಕೆಟ್‍ನಲ್ಲಿ ಭಾರೀ ಗಲಾಟೆ

  • ರಾಜ್ಯದ ಜನತೆ ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಹೇಳ್ತಿರೋದು: ಜಮೀರ್ ಅಹ್ಮದ್ ಖಾನ್

    ರಾಜ್ಯದ ಜನತೆ ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಹೇಳ್ತಿರೋದು: ಜಮೀರ್ ಅಹ್ಮದ್ ಖಾನ್

    – ರೇಣುಕಾಚಾರ್ಯ ಜೋಕರ್ ಇದ್ದಂಗೆ!

    ಕೊಪ್ಪಳ: ಮುಂದಿನ ಸಿಎಂ ಸಿದ್ದರಾಮಯ್ಯನವರು ಆಗಬೇಕೆಂದು ನಾನು, ರಾಘವೇಂದ್ರ ಹಿಟ್ನಾಳ್ ಹೇಳಿರುವುದಲ್ಲ. ರಾಜ್ಯದ ಪ್ರವಾಸ ಮಾಡಿದಾಗ ಜನರೇ ಹೇಳುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರು ನೀಡಿರುವ ಕಾರ್ಯಕ್ರಮಗಳನ್ನು ಯಾರೂ ನೀಡಲು ಆಗುವುದಿಲ್ಲ, ರಾಜ್ಯ ಅಭಿವೃದ್ಧಿ ಆಗಬೇಕಾದರೆ ಅದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಅಂತ ಜನರು ಹೇಳುತ್ತಾರೆ. ಆದರೆ ಸಿಎಂ ಯಾರಾಗ ಬೇಕೆನ್ನುವುದನ್ನು ನಾಯಕರು ತೀರ್ಮಾನ ಮಾಡಬೇಕು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ. ಏನಾದರೂ ಆಗಲಿ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಜನರು ಮಾತನಾಡುತ್ತಾರೆ. ಮುಂದಿನ ಸಿಎಂ ಬಗ್ಗೆ ಮಾತನಾಡಬಾರದೆಂದು ಹೈಕಮಾಂಡ್ ಸೂಚನೆ ಹಿನ್ನೆಲೆ, ನನಗೆ ಏಕೆ ನೋಟಿಸ್ ಕೊಡಬೇಕು, ನಾನು ಸಿಎಂ ಎಂದು ಘೋಷಣೆ ಮಾಡಿಲ್ಲ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ರಾಜ್ಯದ ಜನರ ಅಭಿಪ್ರಾಯ ಹೇಳಿದ್ದೇನೆ. ನಾವು ಹೇಳಿದ ತಕ್ಷಣ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡ್ತಾರಾ ಎಂದು ಪ್ರಶ್ನಿಸಿದರು.

    ರೇಣುಕಾಚಾರ್ಯ ಪ್ಲೇಯಿಂಗ್ ಕಾರ್ಡ್‍ನಲ್ಲಿ ಜೋಕರ್ ಇದ್ದಂಗೆ, ನಮ್ಮ ಪಕ್ಷದ ವಿಷಯ ಆತನಿಗೆ ಏಕೆ, ಜೋಕರ್‍ನನ್ನು ಎಲ್ಲಿ ಬೇಕಾದರೂ ಕೂಡಿಸಿಕೊಳ್ಳಬಹುದು. ಹಾಗೇ ರೇಣುಕಾಚಾರ್ಯ ಜೋಕರ್ ಇದ್ದಂಗೆ, ಆತನ ಬಗ್ಗೆ ಹೆಚ್ಚು ಮಾತನಾಡಲು ಇಷ್ಟ ಪಡುವುದಿಲ್ಲ, ನೂರಕ್ಕೆ ನೂರು ನಾನು ಸಿದ್ದರಾಮಯ್ಯ ಅವರಿಗೆ ನನ್ನ ಕ್ಷೇತ್ರ ಬಿಟ್ಟುಕೊಡುತ್ತೇನೆ, ಸಿದ್ದರಾಮಯ್ಯ ನನ್ನ ಕ್ಷೇತ್ರಕ್ಕೆ ಬಂದು ಅರ್ಜಿ ಹಾಕಲಿ, 70 ಸಾವಿರ ಲೀಡ್ ನಲ್ಲಿ ಗೆಲ್ಲಿಸಿಕೊಂಡು ಬರುತ್ತೇನೆ. ಅವರು ಬೇರೆ ಕಡೆ ಟೂರ್ ಮಾಡಿದರೆ 25 ಸೀಟ್ ಹೆಚ್ಚಿಗೆ ಬರುತ್ತವೆ. ಹೀಗಾಗಿ ಸೀಟ್ ಬಿಟ್ಟುಕೊಡಲು ಸಿದ್ಧವಾಗಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬೇಕೆಂದು ರಾಜ್ಯದ ಜನರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.