Tag: ಪಬ್ಲಿಕ್ ಟಿವಿ Shamant

  • ಕಿಚ್ಚನ ಮುಂದೆ ಕಲರ್ ಕಲರ್ ಕಾಗೆ ಬಂತು ಅಂದ ಶಮಂತ್

    ಕಿಚ್ಚನ ಮುಂದೆ ಕಲರ್ ಕಲರ್ ಕಾಗೆ ಬಂತು ಅಂದ ಶಮಂತ್

    ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ತಮ್ಮ ಹಾಡುಗಳ ಮೂಲಕ ಮಿಂಚಲು ಆರಂಭಿಸಿದ್ದ ಶಮಂತ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭದಲ್ಲಿಯೇ ಪ್ರೇಕ್ಷಕರನ್ನು ರಂಜಿಸಲು ಶುರುಮಾಡಿದ್ದಾರೆ.

    ಕಳೆದ ಇನ್ನಿಂಗ್ಸ್‌ನಲ್ಲಿ ಶಮಂತ್ ಮನೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲದರಲ್ಲೂ ಅವರ ಭಾಗವಹಿಸುವಿಕೆ ಕಡಿಮೆ ಇದೆ ಎಂದು ಹೇಳಿದ್ದ ಮನೆ ಮಂದಿಗೆ ಇದೀಗ ಶಮಂತ್ ತಮ್ಮ ಪ್ರತಿಭೆಯನ್ನು ಹೊರ ಹಾಕುವ ಮೂಲಕ ಉತ್ತರ ನೀಡುತ್ತಿದ್ದಾರೆ.

    ಬಿಗ್‍ಬಾಸ್‍ನ ಕಳೆದ ವಾರದ ಪಂಚಾಯತಿ ಕಟ್ಟೆಯಲ್ಲಿ ಮನೆಯ ಬಹುತೇಕ ಮಂದಿ ಶಮಂತ್‍ಗೆ ಚೊಂಬನ್ನು ನೀಡಿದ್ದರು. ಅಲ್ಲದೇ ಬಿಗ್‍ಬಾಸ್ ಕೂಡ ತಮ್ಮ ಮುಂದಿನ ಆದೇಶದವರೆಗೂ ಚೊಂಬನ್ನು ಶಮಂತ್ ಕೈನಲ್ಲಿಯೇ ಇಟ್ಟುಕೊಂಡು ಓಡಾಡಬೇಕು ಎಂದು ಟಾಸ್ಕ್ ನೀಡಿದ್ದರು. ಅದರಂತೆ ತಮ್ಮ ಜೊತೆಯಲ್ಲಿಯೇ ಹಿಡಿದುಕೊಂಡಿದ್ದ ಚೊಂಬಿನ ಬಗ್ಗೆ ಶಮಂತ್ ಹಾಡೊಂದನ್ನು ಬರೆದಿದ್ದಾರೆ.

    ಸದ್ಯ ಆ ಹಾಡನ್ನು ಈ ವಾರ ಕಿಚ್ಚ ಸುದೀಪ್ ಸುಮ್ಮುಖದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಮೊದಲಿಗೆ ಕಲರ್ ಕಲರ್ ಕಾಗೆ ಬಂತು, ನನ್ನ ಬಣ್ಣ ವೈಟ್ ಟೂ ಅಂತು, ಪಕ್ಕದಲ್ಲಿ ಕುಳಿತು ಹುಡುಗಿ ನಕ್ಕಳಂತೆ, ಅಷ್ಟೇ ಸಾಕು ಹುಡುಗ ಜಾರಿ ಬಿದ್ದನಂತೆ, ಮದುವೆ ಇನ್ವಿಟೇಷನ್‍ನನ್ನು ಕೊಟ್ಟಳಂತೆ, ಖಾಲಿ ದಿಂಬು ಕೈಗೆ ಚೊಂಬು, ಹಿಂದೆ ಮುಂದೆ ನೋಡಿ ನಂಬು.. ಎಂದು ಹಾಡು ಹೇಳಿದ್ದಾರೆ.

    ಒಟ್ಟಾರೆ ಶಮಂತ್ ಹಾಡನ್ನು ಕೇಳಿ ಮನೆ ಮಂದಿಗೆಯೆಲ್ಲಾ ಫಿದಾ ಆದರೆ, ಕಿಚ್ಚ ಒಂದು ಚೊಂಬನ್ನು ಎಷ್ಟು ಸುಂದರವಾಗಿ ನೋಡಿದ್ದೀರಾ ಎಂದು ಹೇಳುತ್ತಾ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ..!

    ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ..!

    ಹಲವು ದಿನಗಳ ನಂತರ ಶಮಂತ್ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ರೂಂನಲ್ಲಿ ತಮಗಾದ ಅನುಭವವನ್ನು ಬಾಯ್ಬಿಟ್ಟಿದ್ದಾರೆ.

    ಪ್ರಿಯಾಂಕ ತಿಮ್ಮೇಶ್‍ರನ್ನು ಬಾತ್ ರೂಮ್ ಏರಿಯಾಗೆ ಕರೆದುಕೊಂಡು ಹೋಗಿ ವೈಷ್ಣವಿ ಒಮ್ಮೆ ಕುಳಿತುಕೊಂಡಿದ್ದರು, ಬೆಡ್ ರೂಮ್ ಒಳಗೆ ಹೋದಾಗ ಡಿಎಸ್ ಮಲಗುವ ಜಾಗದಲ್ಲಿ ಡಿಯು ಮಲದ್ದಳು. ನಾನು ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡಿದ್ದೆ, ರಘು ಭೂತ ಕೋಲ ಎಂದು ಮಾತನಾಡುತ್ತಿದ್ದರು. ಆಗ ಕ್ಯಾಪ್ಟನ್ ರೂಮ್‍ನಲ್ಲಿ ಬ್ಲಾಕ್ ಕಲರ್ ಮಾದರಿ ಹೋಯಿತು. ಅದನ್ನು ನೋಡಿ 5 ನಿಮಿಷ ನಾನು ತಲೆ ಕೆಡಿಸಿಕೊಂಡು ಬಿಟ್ಟೆ ಎಂದಿದ್ದಾರೆ.

    ಇದಕ್ಕೆ ಪ್ರಿಯಾಂಕ ಇದನ್ನು ನೀವು ಯಾರ ಬಳಿಯು ಹೇಳಲಿಲ್ಲವಾ ಎಂದು ಕೇಳಿದಾಗ, ಇಲ್ಲಿಯವರೆಗೂ ಇದನ್ನು ನಾನು ಯಾರಿಗೂ ಹೇಳಿಲ್ಲ. ನಿನಗೆ ಮೊದಲ ಬಾರಿಗೆ ಬಂದು ಹೇಳುತ್ತಿದ್ದೇನೆ. ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡು ವೈಷ್ಣವಿ, ಡಿಯುರನ್ನು ನೋಡುತ್ತಾ, ಬಾಟಲ್ ಇದ್ಯಾ ಎಂದು ನೋಡುತ್ತೇನೆ. ಆಗ ಕ್ಯಾಪ್ಟನ್ ರೂಮ್‍ನಿಂದ ಬ್ಲಾಕ್ ಕಲರ್‍ನಲ್ಲಿ ಹೀಗೆ ಏನೋ ಹೋಯಿತು ಇದನ್ನು ನಾನು ಯಾರಿಗೂ ಕೂಡ ಹೇಳಿಲ್ಲ ಎಂದು ಹೇಳಿದ್ದಾರೆ.

    ನಂತರ ಪ್ರಿಯಾಂಕ ಹಾಗಾದರೆ ಇದನ್ನು ನನಗೆ ಯಾಕೆ ಹೇಳಿದ್ರಿ, ನಿಜವಾಗಲೂ ಹಾಗೆ ಹೋಯಿತಾ? ಹೆಂಗಿತ್ತು, ರೌಂಡ್ ಹಾಕಿಕೊಂಡು ಹೋಯಿತಾ ಎಂದು ಕೂತೂಹಲದಿಂದ ಕೇಳುತ್ತಾರೆ. ಆಗ ಶಮಂತ್ ರೌಂಡ್ ಅಲ್ಲ. ಏನೋ ಬ್ಲಾಕ್ ಕಲರ್ ಒಂದಿಷ್ಟು ನನ್ನ ಭುಜದಷ್ಟು ಎತ್ತರ ಇತ್ತು, ಒಳಗಡೆ ಪಾಸ್ ಆಯಿತು ಎನ್ನುತ್ತಾರೆ. ಇದು ಫ್ರ್ಯಾಂಕ್ ಅಲ್ಲ ತಾನೇ ದೇವರಾಣೆ ನಿನಗೆ ಹಾಗೆ ಅನಿಸಿತಾ ಎಂದು ಪ್ರಶ್ನಿಸಿದಾಗ, ಅನಿಸಿತಾ ಅಲ್ಲ, ನೋಡ್ದೆ ಎಂದು ಸತ್ಯ ಬಾಯ್ಬಿಟ್ಟಿದ್ದಾರೆ.

    ಇದಕ್ಕೆ ಹೆದರಿ ಪ್ರಿಯಾಂಕ ಅಯ್ಯೋ ನಾನು ಸ್ನಾನ ಮಾಡಲು ಅಲ್ಲಿಗೆ ಹೋಗಿದ್ದೆ, ನನ್ನ ಪ್ರಕಾರ ಅಲ್ಲಿ ಇರುವ ಮೀರರ್‍ರನ್ನು ಯಾರೋ ಸರಿಸಿರಬಹುದು ಎಂದಾಗ ಶಮಂತ್ ಮೀರರ್ ಎಲ್ಲೋ ಇದೆ. ಆದರೆ ಒಂದು ಗ್ಲಾಸ್ ಡೋರ್ ಮುಚ್ಚಿತ್ತು, ಇನ್ನೊಂದು ಡೋರ್‍ನಿಂದ ಏನೋ ಬಾತ್ ರೂಂ ಕಡೆಗೆ ಪಾಸ್ ಆಯ್ತು. ನಾನು ಕ್ಯಾಪ್ಟನ್ ಆಗಿದ್ದಾಗಲು ಅಲ್ಲಿ ಮಲಗಿಕೊಂಡಾಗ ನಿದ್ದೆ ಬರುತ್ತಿರಲಿಲ್ಲ ಅಂದಾಗ, ಪ್ರಿಯಾಂಕ ತಿಮ್ಮೇಶ್ ಕೂಡ ಕ್ಯಾಪ್ಟನ್ ರೂಮ್‍ನಲ್ಲಿ ಯಾರಿಗೂ ನಿದ್ದೆ ಬರಲ್ಲ ಎನ್ನುತ್ತಾರೆ.

    ಅದಕ್ಕೆ ಮಾತು ಜೋಡಿಸಿದ ಶಮಂತ್, ಹೌದು ಹಾಗಾದರೆ ಪಕ್ಕಾ ಎಂದು ಹೇಳುತ್ತಾ, ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಪ್ರಿಯಾಂಕರನ್ನು ಗಾರ್ಡನ್ ಏರಿಯಾಗೆ ಕರೆದುಕೊಂಡು ಹೋಗುತ್ತಾರೆ.

  • ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ಬೆಂಗಳೂರು: ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಹಾಡುಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಬ್ರೋ ಗೌಡ ಶಮಂತ್ ನನ್ನ ಮೇಲೆ ತುಂಬಾ ಜನ ದೃಷ್ಟಿ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.

    ವೇದಿಕೆ ಮೇಲೆ ಯೆಲ್ಲೋ ಆ್ಯಂಡ್ ಯೆಲ್ಲೋ ಡ್ರೆಸ್‍ನಲ್ಲಿ ಎಂಟ್ರಿ ಕೊಟ್ಟ ಶಮಂತ್, ಬರುತ್ತಿದ್ದಂತೆ ತುಂಬಾ ಜನ ನನ್ನ ಮೆಲೆ ದೃಷ್ಟಿಂ ಹಾಕಿರುವುದು ಗೊತ್ತಾಗಿದೆ. ಹೀಗಾಗಿ ದೃಷ್ಟಿ ಹೋಗಬೇಕೆಂದು ಈ ಕಲರ್ ಡ್ರೆಸ್ ಚೂಸ್ ಮಾಡಿಕೊಂಡು ಹಾಕಿಕೊಂಡು ಬಂದೆ ಎಂದಿದ್ದಾರೆ. ಆಗ ಸುದೀಪ್ ನನಗೆ ಗೊತ್ತಿರುವಂತೆ ದೃಷ್ಟಿ ಹೋಗುವುದಕ್ಕೆ ಯೂಸ್ ಮಾಡುವುದು ಬ್ಲಾಕ್, ಇದು ಯಾವುದು ಹೊಸ ಕಲರ್, ಹಲೋ ಲಕ್ಕಿ ಸ್ಟಾರ್ ಸ್ವಲ್ಪ ವಿವರಣೆ ಕೊಡಿ ಅರ್ಥವಾಗುತ್ತಿಲ್ಲ ಎಂದು ಕೇಳಿದ್ದಾರೆ.

    ಇದಕ್ಕೆ ಇರೋ ಬರುವ ದೃಷ್ಟಿ ಎಲ್ಲಾ ಕಳೆಯಲಿ ಎಂದು ಬಟ್ಟೆ ಧರಿಸಿದೆ ಎಂದು ಶಮಂತ್ ಹೇಳಿದಾಗ, ನಿಧಿ ಸುಬ್ಬಯ್ಯ ಜಾತ್ರೆಯಂತಿದೆ ಎಂದು ಅಣುಕಿಸುತ್ತಾರೆ. ಹೌದು ಯಾವ ವಿಚಾರಕ್ಕೆ ನಿಮ್ಮ ಮೇಲೆ ದೃಷ್ಟಿ ಬಿದ್ದರುವುದು ಎಂದು ಸುದೀಪ್ ಕೇಳಿದಾಗ, ಶಮಂತ್ ಲಕ್ ವಿಚಾರಕ್ಕೆ ಎಂದು ಉತ್ತರಿಸುತ್ತಾರೆ. ಹಾ ಲಕ್ ವಿಚಾರದಲ್ಲಿ ಬಿದ್ದಿದೆ ಎಂಬುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗಲೂ ನಿಮಗೆ ಆ ಲಕ್ ಇದ್ಯಾ ಅಂತ ಪ್ರಶ್ನಿಸುತ್ತಾರೆ.

    ಲಕ್ ನನ್ನ ಹಾರ್ಡ್ ವರ್ಕ್‍ಗೆ ಕನ್ವರ್ಟ್ ಆಗಿದೆ. ಇನ್ನೂ ಒಂದರಿಂದ ಹತ್ತ ಅಂಕಗಳಲ್ಲಿ ನನಗೆ ಇರುವ ಲಕ್‍ಗೆ 8 ಅಂಕ ನೀಡಬಹುದು. ಆದರೆ ಲಾಸ್ಟ್ ನಲ್ಲಿ ಲಕ್ ಹಾಗೂ ಹಾರ್ಡ್ ವರ್ಕ್ ಎರಡು ಬ್ಯಾಲೆನ್ಸ್ ಆಯಿತು. ಎರಡಕ್ಕೂ 5-5 ಅಂಕಗಳನ್ನು ನೀಡಬಹುದು ಎಂದು ಶಮಂತ್ ಹೇಳಿದ್ದಾರೆ. ಇದನ್ನೂ ಓದಿ:ಐ ವಾಂಟೂ ಮ್ಯಾರಿ ಯೂ ಅಂದವರ ಮೇಲೆ ನಿಧಿ ಕೆಂಡ

  • ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ

    ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ

    ನಾರೋಗ್ಯದ ಕಾರಣ ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯಿಂದ ನಿನ್ನೆ ಹೊರ ಹೋಗಿದ್ದಾರೆ. ದಿವ್ಯಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಬಿಗ್‍ಬಾಸ್ ಮನೆಯ ಸ್ಪರ್ಧಿಗಳು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

    ದಿವ್ಯಾ ಇಲ್ಲದೇ ಒಂದೆಡೇ ಬಿಗ್‍ಬಾಸ್ ಮನೆಯೆಲ್ಲಾ ಒಂದು ರೀತಿ ಖಾಲಿ ಖಾಲಿಯಾಗಿದೆ. ಎಲ್ಲರೊಟ್ಟಿಗೆ ತುಂಬಾ ಲವಲವಿಕೆಯಿಂದ ಮನೆಯ ತುಂಬಾ ಓಡಾಡುತ್ತಾ, ಎಲ್ಲರೊಂದಿಗೆ ಬೆರೆತು ಕಾಮಿಡಿ ಮಾಡಿಕೊಂಡು ಎಲ್ಲರನ್ನು ನಗಿಸಿ ಅವರೊಟ್ಟಿಗೆ ತಾನು ಸಂತೋಷದಿಂದ ಇದ್ದ ದಿವ್ಯಾ ಉರುಡುಗರನ್ನು ದೊಡ್ಮನೆ ಮಂದಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

    ಶಮಂತ್ ನಿನ್ನೆ ದಿವ್ಯಾ ಉರುಡುಗ ಬಗ್ಗೆ ಹಾಡೊಂದನ್ನು ಬರೆದಿದ್ದು, ಕ್ಯಾಮೆರಾ ಮುಂದೆ ನಿಂತು ಹಾಡಿದ್ದಾರೆ. ಜೊತೆಗೆ ಶಮಂತ್ ಹಾಡು ಹೇಳುವಾಗ ಬೆನ್ನ ಹಿಂದೆ ನಿಂತು ಮನೆ ಮಂದಿಯೆಲ್ಲಾ ಸಾಥ್ ನೀಡಿದ್ದಾರೆ.

    ದಿವ್ಯಾ ಉರುಡುಗಗೆ ಹುಷಾರಿಲ್ಲ ಅವರು ಟ್ರೀಟ್‍ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೆ ಒಂದು ಸಾಂಗ್ ಬರೆದಿದ್ದೇನೆ ಎನ್ನುತ್ತಾ ಶಮಂತ್, ಹೇ, ಹೇ ದಿವ್ಯಾ ಹೇಗಿದ್ಯಾ..? ನನ್ ಕಡೆ ಒಸಿ ನೋಡಕ್ಕಿಲ್ವಾ.. ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ.. ಬಜಾರ್ ಆದಾಗ ಓಡುತ್ತಿದ್ದೆ, ಟಾಸ್ಕೂ ಗಿಸ್ಕು ವಿನ್ ಆಗ್ತಿದ್ದೆ. ಹಾಡು ಚೆನ್ನಾಗೆ ಆಡ್ತಿದ್ದೆ, ಏನಕ್ಕೆ ಬ್ಯಾಕ್ ಟೂ ಬ್ಯಾಕ್ ತಿನ್ನುತ್ತಿದ್ದೆ. ತೀರ್ಥಹಳ್ಳಿ ಊರಿಂದ ಹೊಸಕೆರೆ ಹಳ್ಳಿಗೆ ಬಂದು ಮನ್ಸನ್ನೇ ಕದ್ದು ಬಿಟ್ಟಾವ್ಳೆ.. ಕೇಳೆ ದಿವ್ಯಾ ಉರುಡುಗ.. ಬಿಗ್‍ಬಾಸ್ ಮನೆಗೆ ಬಾ ಬೇಗ, ಕೇಳೆ ದಿವ್ಯಾ ಉರುಡುಗ.. ನಾವೆಲ್ಲಾ ವೈಟಿಂಗ್ ಬಾ ಬೇಗ.. ಎಂದು ಹಾಡಿದ್ದಾರೆ.

    ಒಟ್ಟಾರೆ ಶಮಂತ್ ಸಾಂಗ್ ಕೇಳಿ ಮನೆ ಮಂದಿಯಷ್ಟೇ ಅಲ್ಲದೆ ವೀಕ್ಷಕರು ಕೂಡ ಫುಲ್ ಫಿದಾ ಆಗಿದ್ದಾರೆ.

  • ದಿವ್ಯಾ ವಿರುದ್ಧ ನನ್ನ ಫ್ರಸ್ಟ್ರೆಷನ್ ತೀರಿಸಿಕೊಳ್ಳುತ್ತೇನೆ ಅಂದಿದ್ಯಾಕೆ ಶಮಂತ್!

    ದಿವ್ಯಾ ವಿರುದ್ಧ ನನ್ನ ಫ್ರಸ್ಟ್ರೆಷನ್ ತೀರಿಸಿಕೊಳ್ಳುತ್ತೇನೆ ಅಂದಿದ್ಯಾಕೆ ಶಮಂತ್!

    ಬಿಗ್‍ಬಾಸ್ ರಿಯಾಲಿಟಿ ಶೋ ಆರಂಭದಿಂದಲೂ ದಿವ್ಯಾ ಸುರೇಶ್ ಹಾಗೂ ಶಮಂತ್ ಎಣ್ಣೆ-ಸೀಗೆಕಾಯಿಯಂತೆ ಇದ್ದಾರೆ. ಎಷ್ಟೋ ಬಾರಿ ಶಮಂತ್ ದಿವ್ಯಾ ಜೊತೆ ಮಾತನಾಡಲು ಪ್ರಯತ್ನಿಸಿದರೂ, ದಿವ್ಯಾ ಶಮಂತ್‍ರನ್ನು ಆವಾಯ್ಡ್ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಅಷ್ಟಾಗಿ ಹೊಂದಾಣಿಕೆ ಇಲ್ಲ ಎಂಬುವುದು ಎದ್ದು ಕಾಣುತ್ತದೆ.

    ಸದ್ಯ ನಿನ್ನೆ ಶಮಂತ್ ರಘು ಜೊತೆ ಗಾರ್ಡನ್ ಏರಿಯಾದಲ್ಲಿ ಕುಳಿತು ಈ ವಾರ ಕಳಪೆ ಬೋರ್ಡ್ ಯಾರಿಗೆ ನೀಡುವುದು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಂಜೆ ಕಳಪೆ ಯಾರಿಗೆ ನೀಡುವುದು ಎಂದು ಈಗಲೇ ನಿರ್ಧರಿಸಿ ಎಂದು ಹೇಳುತ್ತಾರೆ. ಆಗ ರಘು ನಿಮ್ಮ ತಲೆಯಲ್ಲಿ ಇರುವುದು ಯಾರು ಎನ್ನುತ್ತಾರೆ.

    ಈ ವೇಳೆ ಶಮಂತ್ ಹುಸಿನಗೆ ಬೀರುತ್ತಾ, ಒಂದೊಂದು ಬಾರಿ ಸುಮ್ ಸುಮ್ನೆ ಏನೇನೋ ಕ್ಯಾರಿ ಮಾಡುವುದು, ಒಂದೇ ಕಡೆ ಇರುವುದು, ದಿಕ್ಕು ತಪ್ಪಿಸುವುದು, ಎಲ್ಲರ ಅಭಿಪ್ರಾಯ ಒಂದೇ ಇರುವಾಗ, ಅವಳದ್ದೇ ಬೇರೆ ಎಂಬುವಂತೆ ಹೇಳುವುದು. ಅದರಲ್ಲೂ ಈ ಬಾರಿ ಕಳಪೆಗೆ ಹುಡುಗಿ ಹೋಗಬೇಕೆಂಬುವುದು ನನ್ನ ಅಭಿಪ್ರಾಯ ಎಂದು ಪರೋಕ್ಷವಾಗಿ ದಿವ್ಯಾ ಸುರೇಶ್ ಬಗ್ಗೆ ಮಾತನಾಡಿದ್ದಾರೆ.

    ನನಗೂ ಕೆಲವೊಂದು ಸಿಟ್ಟಿದೆ ಅದನ್ನೇಲ್ಲಾವನ್ನು ತೀರಿಸಿಕೊಂಡು ಬಿಡಬೇಕು. ಅಲ್ಲಿಯವರೆಗೂ ನನಗೆ ಸಮಾಧಾನ ಇಲ್ಲ. ಯಾಕೆಂದರೆ ಅವರು ನನಗೆ ಏನು ನೀಡುತ್ತಾರೋ ಅದನ್ನೇ ನಾನು ವಾಪಸ್ ಅವರಿಗೆ ನೀಡುತ್ತೇನೆ. ಇಲ್ಲಿ ಲವ್ ಮಾಡುವುದಕ್ಕೆ ಬಂದಿದ್ದಾರೋ ಇಲ್ಲ ಗೇಮ್ ಆಡಲು ಬಂದಿದ್ದಾರೋ ಗೊತ್ತಿಲ್ಲ ಬಿಗ್‍ಬಾಸ್ ಎಂದು ಹೇಳಿದ್ದರು. ಆ ಫ್ರಸ್ಟ್ರೆಷನ್‍ನನ್ನು ನಾನು ಇಂದು ತೀರಿಸಿಕೊಳ್ಳಬೇಕು. ಇಂದು ಸಂಜೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೇನೆ. ನಾನು ಹೇಳೆ ಹೇಳುತ್ತೀನೆ ಎಂದು ಕಿಡಿಕಾರಿದರು.