Tag: ಪಬ್ಲಿಕ್ ಟಿವಿ saree

  • ಸೀರೆಯಲ್ಲಿ ರಶ್ಮಿಕಾ ಮಂದಣ್ಣ – ಕೊಡಗಿನ ಕುವರಿ ಲುಕ್‍ಗೆ ಫಿದಾ ಆದ ಫ್ಯಾನ್ಸ್

    ಸೀರೆಯಲ್ಲಿ ರಶ್ಮಿಕಾ ಮಂದಣ್ಣ – ಕೊಡಗಿನ ಕುವರಿ ಲುಕ್‍ಗೆ ಫಿದಾ ಆದ ಫ್ಯಾನ್ಸ್

    ಬೆಂಗಳೂರು: ದಕ್ಷಿಣ ಭಾರತದ ಚೆಲುವೆ ನಟಿ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಮಿಂಚುವ ಮೂಲಕ ಅಭಿಮಾನಿಗಳನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ನಟ ಕಾರ್ತಿಕ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸುಲ್ತಾನ್ ಸಿನಿಮಾದ ಟ್ರೈಲರ್ ಲಾಂಚ್ ಸಮಾರಂಭ ಚೆನ್ನೈನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ರಶ್ಮಿಕಾ ರೆಟ್ರೋ ಕಮ್ ಮಾಡ್ರೆನ್ ಸೀರೆ ಲುಕ್‍ನಲ್ಲಿ ಮಿಂಚಿದ್ದರು. ಸದ್ಯ ಸೀರೆ ತೊಟ್ಟು ಫೋಟೋಗೆ ಪೋಸ್ ನೀಡಿರುವ ರಶ್ಮಿಕಾ ಮಂದಣ್ಣ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಫೋಟೋದಲ್ಲಿ ರಶ್ಮಿಕಾ ಕ್ರೀಮ್ ಕಲರ್ ನೆಟ್ ಸೀರೆ ತೊಟ್ಟು, ಕೂದಲನ್ನು ಬನ್ ಮೂಲಕ ಮೇಲಕ್ಕೆ ಕಟ್ಟಿದ್ದಾರೆ ಹಾಗೂ ಅದಕ್ಕೆ ಕೃತಕ ಗುಲಾಬಿ ಹೂವೊಂದನ್ನು ಮುಡಿದುಕೊಂಡಿದ್ದಾರೆ.

    ಸದಾ ಹೊಸ ತರಹದ ಲುಕ್‍ಗಳಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುವ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಅಲ್ಲದೆ ಈ ಸೀರೆ ರಶ್ಮಿಕಾ ಮಂದಣ್ಣ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರು. ಸದ್ಯ ಈ ಫೋಟೋವನ್ನು ರಶ್ಮಿಕಾ ತಮ್ಮ ಇನ್ ಸ್ಟಾಗ್ರಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ರೀತಿಯ ಪರಿಪೂರ್ಣತೆ( ಮೈ ಕೈಂಡ್ ಪರ್ಫೆಕ್ಟ್ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ರಶ್ಮಿಕಾರ ಈ ಫೋಟೋಗೆ ಅಭಿಮಾನಿಗಳು ಕಮೆಂಟ್ ಸೆಕ್ಷನ್‍ನಲ್ಲಿ ಹಾರ್ಟ್ ಚಿಹ್ನೆಯನ್ನು ಹಾಕುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕಾಲಿವುಡ್ ನಟಿ ಕೀರ್ತಿ ಸುರೇಶ್ ಕೂಡ ರಶ್ಮಿಕಾ ಮಂದಣ್ಣರ ಈ ಫೋಟೋಗೆ ಸ್ಮೈಲಿ ಚಿಹ್ನೆಯನ್ನು ಹಾಕಿ ಕಮೆಂಟ್ ಮಾಡಿದ್ದಾರೆ.

    ದಕ್ಷಿಣ ಭಾರತದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ರಶ್ಮಿಕಾ ಮಂದಣ್ಣ ಇದೀಗ ಮಿಷನ್ ಮಜ್ನು ಸಿನಿಮಾದ ಮೂಲಕ ಬಾಲಿವುಡ್‍ಗೆ ಲಗ್ಗೆ ಇಟ್ಟಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಜೋಡಿಯಾಗಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸಿದ್ದಾರೆ.