Tag: ಪಬ್ಲಿಕ್ ಟಿವಿ Salman Khan

  • ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

    ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್ ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಹ್ಯಾಂಡ್‍ಸಮ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಲ್ಲು ಏನೇ ಸ್ಟೈಲ್ ಮಾಡಿದರೂ ಅದು ಬಾಲಿವುಡ್‍ನಲ್ಲಿ ಟ್ರೆಂಡ್ ಸೆಟ್ ಮಾಡಿಬಿಡುತ್ತದೆ. ಸದ್ಯ ಸಲ್ಮಾನ್‍ಖಾನ್ ಗಡ್ಡ ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಅಲೆದಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು, ಬಾಲಿವುಡ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ ಟೈಗರ್-3 ಸಿನಿಮಾದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಕೆಂಪು ಬಣ್ಣದ ಉದ್ದ ದಾಡಿ ಮತ್ತು ಉದ್ದ ಕೂದಲು ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಓಡಾಡಿದ್ದಾರೆ. ಈ ನ್ಯೂ ಲುಕ್‍ನಲ್ಲಿ ಸಲ್ಮಾನ್ ಖಾನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅವರ ಗುರುತೆ ಸಿಗದಂತೆ ಬದಲಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಸಲ್ಮಾನ್ ಕಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸಲ್ಮಾನ್ ಖಾನ್‍ಗೆ ಮಂಡಿಯೂರಿ ಧನ್ಯವಾದ ತಿಳಿಸಿದ ರಾಖಿ ಸಾವಂತ್

    ಏಕ್ ತಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾದ ನಂತರ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಟೈಗರ್-3 ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಸಲ್ಮಾನ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಅಥಿತಿ ಪಾತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಕೂಡ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ.  ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

  • ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

    ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್ ದಕ್ಷಿಣ ಭಾರತದ ಎರಡು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈಗಾಗಲೇ ಬಾಲಿವುಡ್‍ನ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಸಲ್ಮಾನ್ ಖಾನ್, ಈ ಮಧ್ಯೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್‍ನಲ್ಲಿ ಸಲ್ಮಾನ್ ಖಾನ್‍ಗೆ ಅಪಾರ ಅಭಿಮಾನಿ ಬಳಗವಿದೆ. ಸಲ್ಮಾನ್ ಯಾವುದೇ ಚಿತ್ರದಲ್ಲಿ ಅಭಿನಯಿಸಿದರೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೇ ಸಲ್ಮಾನ್ ಚಿತ್ರಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಈ ನಡುವೆ ಸಲ್ಮಾನ್ ಖಾನ್ ತೆಲುಗು ಹಾಗೂ ತಮಿಳು ಚಿತ್ರರಂಗದತ್ತ ಮುಖಮಾಡಿದ್ದಾರೆ. ಟಾಲಿವುಡ್ ನಟ ಚಿರಂಜೀವಿ ಅಭಿನಯದ 153ನೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿರುವುದು ಬಹುತೇಕ ಪಕ್ಕಾ ಆಗಿದೆ. ಅಲ್ಲದೇ ಈ ಸಿನಿಮಾ ಮಲಯಾಳಂನ ಲೂಸಿಫರ್ ಸಿನಿಮಾದ ರಿಮೇಕ್ ಆಗಿದ್ದು, ಇದೊಂದು ಮಾಫಿಯಾ ಹಾಗೂ ಕುಟುಂಬ ಪ್ರೇಮ ಕಥಾಹಂದರ ಸಿನಿಮಾವಾಗಿದೆ. ಈ ಚಿತ್ರದಲ್ಲಿ ನಟ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಅಭಿನಯಿಸಿದ್ದು, ತೆಲುಗಿನಲ್ಲಿ ಮೋಹನ್‍ಲಾಲ್ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದು, ಪೃಥ್ವಿರಾಜ್ ಪಾತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಲಿದ್ದಾರೆ. ಒಟ್ಟಾರೆ ಈ ಸಿನಿಮಾದಲ್ಲಿ ಚಿರಂಜೀವಿ ಬಲಗೈ ಭಂಟನಾಗಿ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ಬಣ್ಣಹಚ್ಚಲಿದ್ದಾರೆ.

    ಕಾಲಿವುಡ್ ಇಳಯ ದಳಪತಿ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾದಲ್ಲಿ ಕೂಡ ಸಲ್ಮಾನ್ ಖಾನ್ ಅಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಸಲ್ಮಾನ್ ಖಾನ್‍ರ ಮುಂದಿನ ಸಿನಿಮಾದಲ್ಲಿ ವಿಜಯ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂಬ ಸುದ್ದಿ ಬಾಲಿವುಡ್ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

  • ಕೋವಿಡ್ ಸೋಂಕಿತರಿಗೆ 500 ಉಚಿತ ಆಕ್ಸಿಜನ್ ಸಿಲಿಂಡರ್ – ಸಲ್ಮಾನ್ ಕಾರ್ಯಕ್ಕೆ ಫ್ಯಾನ್ಸ್ ಫಿದಾ

    ಕೋವಿಡ್ ಸೋಂಕಿತರಿಗೆ 500 ಉಚಿತ ಆಕ್ಸಿಜನ್ ಸಿಲಿಂಡರ್ – ಸಲ್ಮಾನ್ ಕಾರ್ಯಕ್ಕೆ ಫ್ಯಾನ್ಸ್ ಫಿದಾ

    ಮುಂಬೈ: ಕೋವಿಡ್-19 ಎರಡನೇ ಅಲೆಯು ಭಾರತದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಸಂಕಷ್ಟದ ಸಮಯದಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ. ದೇಶದ ಹಲವಾರು ರಾಜ್ಯಗಳಲ್ಲಿ ಆಕ್ಸಿಜನ್ ಹಾಗೂ ಬೆಡ್ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಇಂತಹ ಜನರಿಗೆ ಇದೀಗ ಸಹಾಯ ಮಾಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದೆ ಬಂದಿದ್ದಾರೆ.

    ಕಾಂಗ್ರೆಸ್ ಶಾಸಕ ಬಾಬಾ ಸಿದ್ವಿಕ್ ಹಾಗೂ ಅವರ ಪುತ್ರ ಜೇಶಾನ್ ಸಿದ್ವಿಕ್‍ರೊಟ್ಟಿಗೆ ಸಲ್ಮಾನ್ ಖಾನ್‍ರವರು ಕೋವಿಡ್-19 ರೋಗಿಗಳಿಗೆ 500 ಆಕ್ಸಿಜನ್ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದಾರೆ. ಅವುಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ‘ನಮ್ಮ ಮೊದಲ 500 ಆಕ್ಸಿಜನ್ ಸಿಲಿಂಡರ್‍ಗಳು ಮುಂಬೈಗೆ ತಲುಪಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ಕೊರೊನಾ ಸೋಂಕಿತರು ಈ ಸಂಖ್ಯೆಗೆ ಕರೆ ಮಾಡಿ 8451869785. ನಾವು ಈ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುತ್ತೇವೆ, ಒಮ್ಮೆ ಬಳಸಿದ ನಂತರ ಅದನ್ನು ಹಿಂದಿರುಗಿಸಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Salman Khan (@beingsalmankhan)

    ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಸಲ್ಮಾನ್‍ಖಾನ್‍ರವರ ಕಾರ್ಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.