Tag: ಪಬ್ಲಿಕ್ ಟಿವಿ Renukacharya

  • ಕೊರೊನಾಗೆ ಪೋಷಕರು ಬಲಿ – ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿದ ರೇಣುಕಾಚಾರ್ಯ

    ಕೊರೊನಾಗೆ ಪೋಷಕರು ಬಲಿ – ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿದ ರೇಣುಕಾಚಾರ್ಯ

    ದಾವಣಗೆರೆ: ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಸಮಾಜ ಮುಖಿ ಕೆಲಸ ಮಾಡುವ ಮೂಲಕ ಮನೆ ಮಾತಾಗಿರುವ ಶಾಸಕ ಎಂ.ಪಿ ರೇಣುಕಾಚಾರ್ಯರವರು ಇದೀಗ ಅದೇ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ದೊಡ್ಡೇರಹಳ್ಳಿ ಗ್ರಾಮದ ಬಾಲಕಿ ಕೊರೊನಾದಿಂದ ತನ್ನ ಪೋಷಕರನ್ನು ಕಳೆದುಕೊಂಡಿದ್ದು, ಶಾಸಕ ಎಂಪಿ ರೇಣುಕಾಚಾರ್ಯ ಇಂದು ಅ ಗ್ರಾಮಕ್ಕೆ ಪತ್ನಿ ಸುಮಿತ್ರಾರವರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕೆಲ ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡು ಎರಡು ತಿಂಗಳ ಹಿಂದೆ ಕೋವಿಡ್ ನಿಂದ ತಂದೆಯನ್ನು ಕಳೆದುಕೊಂಡಿದ್ದ ಬಾಲಕಿಗೆ ಆರ್ಥಿಕ ಸಹಾಯ ಕೂಡ ಮಾಡಿದರು.

    ಬಳಿಕ ಬಾಲಕಿಯ ಸಂಬಂಧಿಕರು ಒಪ್ಪಿದರೆ ದತ್ತು ಪಡೆದು ತಂದೆ, ತಾಯಿ ಸ್ಥಾನದಲ್ಲಿ ನಿಂತು ಮುಂದಿನ ವಿದ್ಯಾಭ್ಯಾಸವನ್ನು ಕೊಡಿಸುವುದಾಗಿ ತಿಳಿಸಿದರು. ಅಲ್ಲದೇ ಪೋಷಕರನ್ನು ಕಳೆದುಕೊಂಡಿದ್ದ ಬಾಲಕಿಯನ್ನು ರೇಣುಕಾಚಾರ್ಯ ದಂಪತಿ ಬಾಚಿ ತಬ್ಬಿಕೊಂಡು ಸಾಂತ್ವನ ಹೇಳಿದರು. ಇದನ್ನೂ ಓದಿ: ಜಾರಕಿಹೊಳಿ, ಮುನಿರತ್ನ ಸಚಿವರಾಗ್ತಾರೆ: ನಾರಾಯಣಗೌಡ

  • ಎತ್ತಿನಗಾಡಿ, ಬೈಕಿನಲ್ಲಿ ಸಾಗಿಸುವ ಮರಳು ಸೀಜ್ ಮಾಡಲು ಬಿಡಲ್ಲ: ರೇಣುಕಾಚಾರ್ಯ

    ಎತ್ತಿನಗಾಡಿ, ಬೈಕಿನಲ್ಲಿ ಸಾಗಿಸುವ ಮರಳು ಸೀಜ್ ಮಾಡಲು ಬಿಡಲ್ಲ: ರೇಣುಕಾಚಾರ್ಯ

    ದಾವಣಗೆರೆ: ಅಕ್ರಮ ಮರಳುಗಾರಿಕೆ ಮೇಲೆ ಪೋಲಿಸ್ ಇಲಾಖೆ ದಾಳಿ ಮಾಡಿದ್ದಕ್ಕೆ ಸಿಪಿಐ ಮೂಲಕ ಎಸ್ಪಿಗೆ ಅವಾಜ್ ಹಾಕಿದ್ದ ಶಾಸಕ ರೇಣುಕಾಚಾರ್ಯ ಇಂದು ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಮಾತನಾಡಿದ ಅವರು, ನಾನು ಬಡವರ ಪರ, ಎತ್ತಿನಗಾಡಿ, ಬೈಕ್ ನಲ್ಲಿ ಮರಳು ಸಾಗಿಸುವುದನ್ನು ಪೋಲಿಸರು ಮರಳು ಸೀಜ್ ಮಾಡಲು ಬಿಡುವುದಿಲ್ಲಾ ಎಂದಿದ್ದಾರೆ.

    ಹೊನ್ನಾಳಿ ಸಿಪಿಐ ದೇವರಾಜ್ ಅವರಿಗೆ ಎತ್ತಿನಗಾಡಿನಲ್ಲಿ ಬೈಕ್ ನಲ್ಲಿ ಮರಳು ಸಾಗಿಸುವರಿಗೆ ತೊಂದರೆ ಕೊಡಬೇಡಿ, ಅಂತಹ ಮರಳುಸೀಜ್ ಮಾಡುವುದು ಬೇಡ ಎಂದು ಕಳೆದ ದಿನ ಹೇಳಿದ್ದೇನೆ. ಇನ್ನು ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತೆಗೆದುಕೊಂಡು ಹೋಗಲು ಸರ್ಕಾರದ ಅನುಮತಿ ಇದೆ. ಅಕ್ರಮ ಗಣಿಗಾರಿಕೆ ಮರಳುಗಾರಿಕೆ ಮಾಡಿದರೆ ಸೀಜ್ ಮಾಡಲಿ, ನಾನು ಅದಕ್ಕೆ ಬೆಂಬಲ ಕೊಡುತ್ತೇನೆ. ಮಟ್ಕ, ಜೂಜಾಟ ಆಡುವವರನ್ನು ಸೀಜ್ ಮಾಡಿ. ಅಲ್ಲದೇ ಅಕ್ರಮ ಮರಳುಗಾರಿಕೆಗೆ ನಾನು ಕೂಡ ವಿರೋಧ ವ್ಯಕ್ತ ಪಡಿಸುತ್ತೇನೆ. ಇದನ್ನೂ ಓದಿ: ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

    ಆದರೆ ಅಕ್ರಮ ಮರಳು ದಂಧೆ ಬಗ್ಗೆ ನಾನು ಸಾಕಷ್ಟು ಹೋರಾಟ ಮಾಡಿ ಬಡವರಿಗೆ ಮರಳು ಸಿಗುವಂತೆ ಮಾಡಿದ್ದೇನೆ. ನಾನು ಹೋರಾಟ ಮಾಡಿದ್ದರಿಂದ ಸಾಕಷ್ಟು ಪ್ರಕರಣ ನನ್ನ ಮೇಲೆ ದಾಖಲಾಗಿವೆ. ಎತ್ತಿನಗಾಡಿಯಲ್ಲಿ ಮರಳನ್ನು ಆಶ್ರಯ ಮನೆ ಕಟ್ಟಲು ಸಂಗ್ರಹಿಸಿಕೊಂಡಿದ್ದಾರೆ, ಅಂತಹವರ ಮರಳನ್ನು ಸೀಜ್ ಮಾಡಲು ನಾನು ಬಿಡುವುದಿಲ್ಲ ಎಂದು ಮತ್ತೆ ಎಸ್ಪಿಗೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ:  ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

  • ವಿಜಯಪುರದ ಶಾಸಕ ಫೋನ್ ಮಾಡಿ ನಾನೇ ಮುಖ್ಯಮಂತ್ರಿ ಅಂದ್ರು: ರೇಣುಕಾಚಾರ್ಯ

    ವಿಜಯಪುರದ ಶಾಸಕ ಫೋನ್ ಮಾಡಿ ನಾನೇ ಮುಖ್ಯಮಂತ್ರಿ ಅಂದ್ರು: ರೇಣುಕಾಚಾರ್ಯ

    ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲಗಳ ನಡುವೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ವಿಜಯಪುರ ಶಾಸಕರೊಬ್ಬರು ಕೆಲ ಎಂಎಲ್‍ಎಗಳಿಗೆ ಫೋನ್ ಮಾಡಿ, ನಾನೇ ಮುಂದಿನ ಸಿಎಂ ನನಗೆ ಬೆಂಬಲ ನೀಡಿ ಎಂದಿದ್ದಾರೆ. ಹೈಕಮಾಂಡ್ ನಿಂದ ಸ್ಪಷ್ಟ ಸೂಚನೆ ಬಂದಿದ್ದರೂ, ಈ ರೀತಿ ಮಾತನಾಡುತ್ತಾರೆ. ಕೆಲವರು ಸಿಎಂ ಆಗಬೇಕು ಅಂತ ಈಗಾಗಲೇ ಸೂಟೂಬೂಟು ಹೊಲೆಸಿದ್ದಾರೆ ಎಂದು ಶಾಸಕ ಬಸವನಗೌಡ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

    ಅರುಣ್ ಸಿಂಗ್ ಅವರಿಗೆ ಇಂದು ಕರೆ ಮಾಡಿದ್ದೆ, ಸಂಜೆ 4-30ಕ್ಕೆ ಭೇಟಿಯಾಗಲು ಬನ್ನಿ ಎಂದಿದ್ದರು. ಆದರೆ ನಾನು ಕೋವಿಡ್ ಕೇರ್ ಸೆಂಟರ್ ನಲ್ಲರುವುದರಿಂದ ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಇದೇ ತಿಂಗಳು 17ಕ್ಕೆ ಸಮಯ ನೀಡಿದ್ದಾರೆ. ಕೆಲವರು ಅರುಣ್ ಸಿಂಗ್ ರಾಜ್ಯಕ್ಕೆ ಬಂದರೂ ದೆಹಲಿಗೆ ಹೋಗಿರುವುದಾಗಿ ತಿಳಿಸಿದರು. ಇದನ್ನೂ ಓದಿ: ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಜಮೀರ್ ಪಾಕಿಸ್ತಾನದ ಪರ ಇರುವ ಕಾಂಗ್ರೆಸ್ಸಿಗರು: ಈಶ್ವರಪ್ಪ

    ಯಡಿಯೂರಪ್ಪನವರು ರಾಜ್ಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ರಾಷ್ಟ್ರೀಯ ನಾಯಕರು ಹೇಳಿದ ಮೇಲು ಬಹಿರಂಗವಾಗಿ ಭಿನ್ನಮತ ನಡೆಸುತ್ತಾರೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ರೇಣುಕಾಚಾರ್ಯ ಕೋವಿಡ್ ಕಾರ್ಯಕ್ಕೆ ದುಬೈ ಕನ್ನಡಿಗರು ಫಿದಾ- ಮೆಚ್ಚುಗೆಯ ಮಹಾಪೂರ

  • ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ದಾವಣಗೆರೆ: ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯರವರು ಯೋಗ ಹೇಳಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್ ಕಡದಕಟ್ಟೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ರೇಣುಕಾಚಾರ್ಯ ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ.

    ಇಂದು ಬೆಳಗ್ಗೆ ಕೋವಿಡ್ ಕೇರ್ ಸೆಂಟರ್‌ಗೆ ಆಗಮಿಸಿದ ಶಾಸಕರು ಸೋಂಕಿತರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನ ಹೇಳಿಕೊಟ್ಟರು. ಯೋಗಾಸನದ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ರೇಣುಕಾಚಾರ್ಯರವರು ಯೋಗಾಸನದ ವಿವಿಧ ಬಂಗಿಗಳನ್ನು ಸೋಂಕಿತರ ಮುಂದೆ ಮಾಡಿ ತೋರಿಸಿದರು.

    ಕಳೆದ ಹಲವು ದಿನಗಳಿಂದ ಸೋಂಕಿತರ ಜೊತೆ ಸೇರಿ ರೇಣುಕಾಚಾರ್ಯ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿದ್ದಾರೆ. ಮೃತ ಸೋಂಕಿತನ ಶವ ಹೊತ್ತು ಅಂಬುಲೆನ್ಸ್ ಚಾಲನೆ ಮಾಡುತ್ತ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದೀಗ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಶಾಸಕ ಎಂಪಿ ರೇಣುಕಾಚಾರ್ಯ ಯೋಗ ಹೇಳಿಕೊಟ್ಟು ಆತ್ಮಸ್ಥೈರ್ಯ ತುಂಬಿದ್ದಾರೆ. ಇದನ್ನು ಓದಿ: ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ

  • ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸಿಂಗ್ ಮಾಡಿ – ಅಂಬುಲೆನ್ಸ್ ಡ್ರೈವರ್ ಆದ ಶಾಸಕ ರೇಣುಕಾಚಾರ್ಯ

    ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸಿಂಗ್ ಮಾಡಿ – ಅಂಬುಲೆನ್ಸ್ ಡ್ರೈವರ್ ಆದ ಶಾಸಕ ರೇಣುಕಾಚಾರ್ಯ

    ದಾವಣಗೆರೆ: ಕೊರೊನಾ ಆರ್ಭಟ ಹಿನ್ನಲೆಯಲ್ಲಿ ಶಾಸಕ ರೇಣುಕಾಚಾರ್ಯ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡನೆ ಮಾಡಿದರು. ಔಷಧಿ ಸಿಂಪಡನೆ ಯಂತ್ರ ಹಿಡಿದು ಸ್ವತಃ ಸ್ಯಾನಿಟೈಸರ್ ಮಾಡಿ ಸಮಾಜ ಮುಖಿ ಕೆಲಸ ಮಾಡಿದರು.

    ಹೊನ್ನಾಳಿ-ನ್ಯಾಮತಿ ಜನರಿಗೆ ಉಚಿತ ಅಂಬುಲೆನ್ಸ್ ವ್ಯವಸ್ಥೆ ಮಾಡಿ ನಾಲ್ಕು ಅಂಬುಲೆನ್ಸ್‍ಗಳಿಗೆ ಚಾಲನೆ ನೀಡಲಾಯಿತು. ಶಾಸಕ ರೇಣುಕಾಚಾರ್ಯ ತಂದೆ ತಾಯಿಯ ಸವಿನೆನಪಿಗಾಗಿ ಉಚಿತವಾಗಿ ನಾಲ್ಕು ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.

    ಈ ವೇಳೆ ಸಂಸದ ಜಿಎಂ ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭಾಗಿಯಾಗಿದ್ದರು. ಬಳಿಕ ಶಾಸಕ ರೇಣುಕಾಚಾರ್ಯ ಸ್ವತಃ ಅಂಬುಲೆನ್ಸ್ ಓಡಿಸಿದರು.

    ಹೊನ್ನಾಳಿಯಲ್ಲಿ ಕೊರೊನಾ ಆರ್ಭಟಿಸುತ್ತಿರುವ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಹಗಲು ರಾತ್ರಿಯನ್ನದೇ ಕೊರೊನಾ ಮುನ್ನೆಚ್ಚರಿಕೆ ವಹಿಸುತ್ತಿರುವುದು ತಾಲೂಕಿನ ಜನರ ಪ್ರಶಂಸೆಗೆ ಪಾತ್ರವಾಗಿದೆ.