Tag: ಪಬ್ಲಿಕ್ ಟಿವಿ Rashmika

  • ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಹೈದರಾಬಾದ್: ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಜಿಮ್‍ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ನಂತರ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಅವರು ನಟಿಸಿದ ಸಿನಿಮಾಗಳೆಲ್ಲವೂ ಸಕ್ಸಸ್ ಕಂಡಿತು. ಸದ್ಯ ಟಾಲಿವುಡ್ ಹಾಗೂ ಬಾಲಿವುಡ್‍ನ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಸಿನಿಮಾಗಳಿಗಾಗಿ ಹೈದರಾಬಾದ್‍ನಲ್ಲಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಬರ್ತ್‍ಡೇಗೆ ರಶ್ಮಿಕಾ ವಿಶ್ – ಫೋಟೋ ವೈರಲ್

    ಮತ್ತೊಂದೆಡೆ ವಿಜಯ್ ದೇವರಕೊಂಡ ಕೂಡ ಲೈಗರ್ ಸಿನಿಮಾದಲ್ಲಿ ನಿರತರಾಗಿದ್ದು, ಈ ಚಿತ್ರದ ಚಿತ್ರೀಕರಣಕ್ಕಾಗಿ ಕೆಲವು ದಿನಗಳ ಹಿಂದೆ ಮುಂಬೈಗೆ ಹಾರಿದ್ದರು. ಅಲ್ಲದೇ ರಶ್ಮಿಕಾ ಕೂಡ ಮುಂಬೈನಲ್ಲಿ ಬಾಲಿವುಡ್‍ನ ಗುಡ್ ಬೈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಹೀಗೆ ಇಬ್ಬರು ಮುಂಬೈನಲ್ಲಿದ್ದಾಗ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ರಶ್ಮಿಕಾ ಹಾಗೂ ವಿಜಯ್ ಹೈದರಾಬಾದ್‍ನ ಜಿಮ್‍ವೊಂದರಲ್ಲಿ ಕಾಣಿಸಿಕೊಂಡಿದ್ದು, ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಇವರಿಬ್ಬರು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಕುಲದೀಪ್ಸೆತಿ ಎಂಬವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋ ಫುಲ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ದೇವರಕೊಂಡ ಜೊತೆಗಿರುವ ಫೇವರಿಟ್ ಫೋಟೋ ಶೇರ್ ಮಾಡಿದ ರಶ್ಮಿಕಾ

     

    View this post on Instagram

     

    A post shared by Kuldep Sethi (@kuldepsethi)

    ಈ ಹಿಂದೆ ಗೀತಾ ಗೋವಿಂದಂ ಸಿನಿಮಾದ ಮೂಲಕ ಫೇಮಸ್ ಆಗಿದ್ದ ಈ ಜೋಡಿ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ನಾವಿಬ್ಬರು ಗುಡ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಇಬ್ಬರು ಗಾಸಿಪ್‍ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಇವರಿಬ್ಬರ ಮಧ್ಯೆ ಏನಾದರೂ ನಡೆಯುತ್ತಿದ್ಯಾ ಎಂದು ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ.