Tag: ಪಬ್ಲಿಕ್ ಟಿವಿ Rajinikanth

  • ರಜನಿ ಪುತ್ರಿಯಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ

    ರಜನಿ ಪುತ್ರಿಯಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಹಾಗೂ ಅವರ ಕುಟುಂಬಸ್ಥರು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ಸೌಂದರ್ಯ ರಜನಿಕಾಂತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸೌಂದರ್ಯ ರಜನಿಕಾಂತ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನನ್ನ ಮಾವ ಶ್ರೀ ಎಸ್.ಎಸ್. ವನಂಗಮುಡಿ, ಪತಿ ವಿಶಾಗನ್, ಅವರ ಸಹೋದರಿ ಮತ್ತು ನಾನು ಇಂದು ಬೆಳಗ್ಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‍ರವರನ್ನು ಭೇಟಿ ಮಾಡಿ 1 ಕೋಟಿ ರೂವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದೇವೆ ಎಂದು ಹೇಳಿದ್ದಾರೆ.

    ನಟ ಸೂಪರ್ ಸ್ಟಾರ್ ರಜನಿಕಾಂತ್‍ರವರು ಗುರುವಾರ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‍ನನ್ನು ಪಡೆದಿದ್ದರು. ಈ ಫೋಟೋವನ್ನು ಕೂಡ ಸೌಂದರ್ಯ ರಜನಿಕಾಂತ್‍ರವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

  • ಕೊರೊನಾ ಲಸಿಕೆ ಪಡೆದ ತಲೈವಾ

    ಕೊರೊನಾ ಲಸಿಕೆ ಪಡೆದ ತಲೈವಾ

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಗುರುವಾರ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‍ನನ್ನು ಪಡೆದುಕೊಂಡಿದ್ದಾರೆ.

    ಈ ಕುರಿತಂತೆ ರಜನಿಕಾಂತ್ ಪುತ್ರಿ, ಸೌಂದರ್ಯ ರಜನಿಕಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ತಲೈವರ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಬನ್ನಿ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡಿ ಗೆಲವು ಸಾಧಿಸೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ರಜನಿಕಾಂತ್ ಗ್ರೇ ಕಲರ್ ಟೀ ಶರ್ಟ್ ಹಾಗೂ ಬ್ಲಾಕ್ ಕಲರ್ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದಾಗಿದೆ.

    ನಿರ್ದೇಶಕ ಸಿರುತೈ ಶಿವ ಆ್ಯಕ್ಷನ್ ಕಟ್ ಹೇಳುತ್ತಿರುವ ಅಣ್ಣಾತ್ತೆ ಚಿತ್ರೀಕರಣಕ್ಕಾಗಿ ಹೈದರಾಬಾದ್‍ಗೆ ತೆರಳಿದ್ದರು. ಆದರೆ ನಿನ್ನೆ ರಜನಿಕಾಂತ್ ಚೆನ್ನೈಗೆ ಹಿಂದಿರುಗಿ ಲಸಿಕೆ ಪಡೆದುಕೊಂಡಿದ್ದಾರೆ.

    ಅಣ್ಣಾತ್ತೆ ಸಿನಿಮಾದಲ್ಲಿ ರಜನಿಕಾಂತ್‍ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮೀನಾ, ಖುಷ್ಬು, ಪ್ರಕಾಶ್ ರಾಜ್ ಮತ್ತು ಕಾಣಿಸಿಕೊಂಡಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

  • ಇಂದು ಬೆಳ್ಳಂಬೆಳ್ಳಗ್ಗೆ ಮತ ಚಲಾಯಿಸಿದ ರಜನಿಕಾಂತ್, ಕಮಲ್ ಹಾಸನ್

    ಇಂದು ಬೆಳ್ಳಂಬೆಳ್ಳಗ್ಗೆ ಮತ ಚಲಾಯಿಸಿದ ರಜನಿಕಾಂತ್, ಕಮಲ್ ಹಾಸನ್

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಈ ಹಿನ್ನೆಲೆ ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಂದು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ್ದಾರೆ.

    ಅಸ್ಸಾಂನಲ್ಲಿ ಅಂತಿಮ ಹಂತದ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿದ್ದು, ಜೊತೆಗೆ ಕೇರಳ, ಪುದುಚೇರಿ ಮತದಾರರು ಮತಚಲಾಯಿಸುತ್ತಿದ್ದಾರೆ.

    ಅಸ್ಸಾಂನ ಅಂತಿಮ ಹಂತದಲ್ಲಿ 40 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಆಡಳಿತ ಸರ್ಕಾರ ಬಿಜೆಪಿ ಎರಡನೇ ಭಾರೀ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ 31 ಸ್ಥಾನಗಳಿಗಾಗಿ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ಕೇರಳದಲ್ಲಿ 140 ಸ್ಥಾನಕ್ಕಾಗಿ ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಆಡಳಿತ ಸರ್ಕಾರ ಎಲ್‍ಡಿಎಫ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ನಡೆಸುತ್ತಿದೆ.

    ವಿ ನಾರಾಯಣಸ್ವಾಮಿ ನೇತೃತ್ವದಲ್ಲಿದ್ದ ಪುದುಚೇರಿ ಕಾಂಗ್ರೆಸ್ ಸರ್ಕಾರದ ನಾಟಕೀಯ ಕುಸಿತದಿಂದ, ಪ್ರಸ್ತುತ ರಾಷ್ಟ್ರಪತಿ ಆಡಳಿತದಲ್ಲಿದೆ. ಕಾಂಗ್ರೆಸ್ ಪಕ್ಷವು 30 ಸ್ಥಾನಗಳಲ್ಲಿ 14 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಡಿಎಂಕೆ 13 ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಎಐಎಡಿಎಂಕೆ ಮತ್ತು ಡಿಎಂಕೆ ಆಡಳಿತ ನಡೆಸುತ್ತಿರುವ ತಮಿಳುನಾಡಿನಲ್ಲಿ ಒಟ್ಟು 234 ಸ್ಥಾನಗಳಿಗೆ ಇಂದು ಒಂದೇ ದಿನ ಮೊದಲ ಹಂತದ ಚುನಾವಣೆ ನಡೆಯುತ್ತಿದೆ.

    ಸದ್ಯ ಕೋವಿಡ್-19 ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಮತದಾನ ನಡೆಸಲಾಗುತ್ತಿದೆ. ಅಲ್ಲದೆ ಚುನಾವಣಾ ಆಯೋಗವು ಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‍ಪಿಸಿಯು ಸೆಕ್ಷನ್ 144ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ಜಾರಿಗೊಳಿಸಿದೆ. ಜೊತೆಗೆ ಶಾಂತಿಯುತವಾಗಿ ಮತದಾನ ನಡೆಸಲು ಎಲ್ಲಾ ರೀತಿಯ ಬಿಗಿ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.