Tag: ಪಬ್ಲಿಕ್ ಟಿವಿ Ragini

  • ತುಪ್ಪದ ಬೆಡಗಿಗೆ ಸಿಕ್ತು ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ತುಪ್ಪದ ಬೆಡಗಿಗೆ ಸಿಕ್ತು ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿಯವರಿ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಸದ್ಯ ಈ ಕುರಿತಂತೆ ರಾಗಿಣಿರವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ರಾಗಿಣಿ ದ್ವಿವೇದಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಕೆಂಪು ಬಣ್ಣದ ಸೀರೆ ಉಟ್ಟು, ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಜೊತೆಗೆ ಕರ್ನಾಟಕದಲ್ಲಿ ಕಳೆದ ಎರಡು ವರ್ಷದಿಂದ ನಾನು ಮಾಡಿದ ಸಮಾಜ ಮುಖಿ ಕೆಲಸ ಮತ್ತು ಸೇವೆಯಿಂದಾಗಿ ಈ ವಿಶೇಷ ಪ್ರಶಸ್ತಿಯನ್ನು ಪಡೆದಿದ್ದು, ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಬಹಳ ಗೌರವ ಹಾಗೂ ಹೆಮ್ಮೆ ಆಗುತ್ತಿದೆ. ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ನನ್ನ ಜೊತೆಗೂಡಿ ಹಗಲು ರಾತ್ರಿ ಒಟ್ಟಿಗೆ ಕೆಲಸ ಮಾಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ. ನನ್ನ ರಾಜ್ಯದೊಂದಿಗೆ ನಾನು ಬಹಳ ಹೆಮ್ಮೆಯಿಂದ ನಿಲ್ಲುತ್ತೇನೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚು ಸಹಾಯ ಮಾಡಲು ದೇಶವು ನನಗೆ ಸ್ಫೂರ್ತಿದಾಯಕವಾಗಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಮತ್ತೊಂದು ಫೋಟೋದಲ್ಲಿ ಸಮಾಜ ಮುಖಿ ಕಾರ್ಯಕ್ಕಾಗಿ ದಕ್ಷಿಣದಿಂದ ಈ ಪ್ರಶಸ್ತಿ ಪಡೆದ ಏಕೈಕ ಮಹಿಳೆ ಎಂಬ ಹೆಗ್ಗಳಿಗೆ ಪಾತ್ರರಾಗಿರುವುದು ಅತ್ಯಂತ ಪ್ರತಿಷ್ಠಿತ ವಿಚಾರವಾಗಿದೆ. ಜೊತೆ ಇದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಮೇ 25 ರಂದು 31ನೇ ವಸಂತಕ್ಕೆ ಕಾಲಿಟ್ಟ ರಾಗಿಣಿ ದ್ವಿವೇದಿಯವರು ಈ ವಿಶೇಷ ದಿನದಂದು ಬೆಂಗಳೂರಿನ ಜಯನಗರ ಜೈನ್ ಯೂನಿವರ್ಸಿಟಿಯಲ್ಲಿ ಬ್ಲಂಡ್ ಕ್ಯಾಂಪ್ ಆಯೋಜಿಸಿದ್ದರು. ಈ ವೇಳೆ ಜೆನೆಕ್ಟ್ ಚಾರಿಟೇಬಲ್ ಟ್ರಸ್ಟ್ ಹಾಗೂ ರಾಷ್ಟ್ರೋತ್ಥಾನ ಬ್ಲಂಡ್‍ಬ್ಯಾಂಕ್ ನೇತೃತ್ವದಲ್ಲಿ ಸುಮಾರು ಜನರು ರಕ್ತದಾನ ಮಾಡಿದ್ದರು.

     

    View this post on Instagram

     

    A post shared by Ragini dwivedi (@rraginidwivedi)

    ಮೊದಲ ಲಾಕ್ ಡೌನ್ ಸಮಯದಲ್ಲಿ ಊಟ, ಮಾಸ್ಕ್, ದಿನಸಿ ನೀಡಿದ್ದ ನಟಿ ರಾಗಿಣಿಯವರು, ಎರಡನೇ ಅಲೆಯ ಸಂದರ್ಭದಲ್ಲೂ ಸಮಾಜ ಮುಖಿ ಕೆಲಸ ಮಾಡಿದ್ದು, ಪ್ರತಿದಿನ 500 ಮಾಸ್ಕ್, 1000 ಜನರಿಗೆ ಊಟ ನೀಡಿದ್ದರು. ಇದನ್ನೂ ಓದಿ: ರಾಗಿಣಿ ಹುಟ್ಟುಹಬ್ಬ-ಅಭಿಮಾನಿಗಳಿಂದ ರಕ್ತದಾನ ಶಿಬಿರ

     

    View this post on Instagram

     

    A post shared by Ragini dwivedi (@rraginidwivedi)