Tag: ಪಬ್ಲಿಕ್ ಟಿವಿ Push Ups

  • ಮದುವೆ ವೇದಿಕೆಯಲ್ಲಿಯೇ ವಧು, ವರ ಪುಶ್ ಅಪ್ಸ್ ಕಾಂಪಿಟೇಶನ್

    ಮದುವೆ ವೇದಿಕೆಯಲ್ಲಿಯೇ ವಧು, ವರ ಪುಶ್ ಅಪ್ಸ್ ಕಾಂಪಿಟೇಶನ್

    ಕೋವಿಡ್ ಲಾಕ್‍ಡೌನ್ ವೇಳೆ ಎಲ್ಲರೂ ದೈಹಿಕ ಚಟುವಟಿಕೆಗಳನ್ನು ನಡೆಸದೇ ಆಲೂಗಡ್ಡೆಯಂತೆ ದಪ್ಪಗಾಗಿದ್ದೇವೆ. ಆದರೆ ಫಿಟ್‍ನೆಸ್ ನಮ್ಮ ಸೋಮಾರಿತನವನ್ನು ಹೊಗಲಾಡಿಸಿ ದಿನಚರಿಯನ್ನು ಆರಂಭಿಸಲು ಸ್ಫೂರ್ತಿದಾಯಕವಾಗಿದೆ. ಸದ್ಯ ಮದುವೆ ಸಮಾರಂಭದಲ್ಲಿ ವಧು-ವರ ಇಬ್ಬರೂ ಪುಶ್ ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ವಧು ಹಾಗೂ ವರ ಅತಿಥಿಗಳೊಂದಿಗೆ ಫೋಟೋಗೆ ಪೋಸ್ ನೀಡುವುದನ್ನು ನೋಡಿರುತ್ತೇವೆ. ಕೆಲವು ಜೋಡಿ ಹಾಡು ಅಥವಾ ಒಟ್ಟಿಗೆ ನೃತ್ಯ ಪ್ರದರ್ಶಿಸುವ ಮೂಲಕ ಮನರಂಜನೆ ನೀಡುತ್ತಾರೆ. ಆದರೆ ಜೋಡಿಯೊಂದು ಮದುವೆ ಕಾರ್ಯಕ್ರಮದಲ್ಲಿ ಅತಿಥಿಗಳಿರುವುದನ್ನು ಲೆಕ್ಕಿಸದೇ ನೀನಾ-ನಾನಾ ಎಂಬಂತೆ ಪುಶ್ ಅಪ್ಸ್ ಮಾಡಿದ್ದಾರೆ. ಇದನ್ನು ಕಂಡು ಅಲ್ಲಿದ್ದವರೆಲ್ಲಾ ಬೆರಗಾಗಿದ್ದಾರೆ. ಇದನ್ನೂ ಓದಿ:3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

    ಸದ್ಯ ಈ ವೀಡಿಯೋವನ್ನು ವಿಟ್ಟಿ-ವೆಡ್ಡಿಂಗ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಧು ವರ ಇಬ್ಬರು ಮದುವೆಯ ಉಡುಪಿನಲ್ಲಿಯೇ ವೇದಿಕೆಯ ಮೇಲೆ ಪುಶ್ ಅಪ್ಸ್ ಮಾಡಿದ್ದಾರೆ. ವೀಡಿಯೋದಲ್ಲಿ ವಧು ಕೆನೆ ಮತ್ತು ಕೆಂಪು ಬಣ್ಣದ ಲೆಹೆಂಗಾ, ಭಾರೀ ಚಿನ್ನಾಭರಣಗಳಲ್ಲಿ ಮಿಂಚುತ್ತಿದ್ದರೆ, ವರ ಗುಲಾಬಿ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಮದುವೆ ಉಡುಪು ಧರಿಸಿದ್ದರು ಇಬ್ಬರು ಬಹಳ ಸುಲಭವಾಗಿ ಪುಶ್ ಅಪ್ಸ್ ಮಾಡಿದ್ದಾರೆ. ಇದನ್ನೂ ಓದಿ:ಮದರ್ಸ್ ಡೇ ಪ್ರಯುಕ್ತ 80 ವರ್ಷದ ತಾಯಿ ಜೊತೆ ನಟನಿಂದ ಪುಶ್ ಅಪ್ಸ್ – ವಿಡಿಯೋ ನೋಡಿ