Tag: ಪಬ್ಲಿಕ್ ಟಿವಿ. Priyanka Chopra

  • ಮುಂಬೈ, ಗೋವಾದಲ್ಲಿನ ಆಸ್ತಿ ಮಾರಿ ವಿದೇಶದಲ್ಲಿ ಸೆಟಲ್ ಆದ ದೇಸಿ ಗರ್ಲ್

    ಮುಂಬೈ, ಗೋವಾದಲ್ಲಿನ ಆಸ್ತಿ ಮಾರಿ ವಿದೇಶದಲ್ಲಿ ಸೆಟಲ್ ಆದ ದೇಸಿ ಗರ್ಲ್

    ಮುಂಬೈ: ವಿವಾಹದ ಬಳಿಕ ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಮತ್ತು ಮುಂಬೈನಿಂದ ದೂರ ಉಳಿದಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾಗಳತ್ತ ಹೆಚ್ಚು ಮುಖ ಮಾಡಿರುವ ಪ್ರಿಯಾಂಕ ಹಿಂದಿಯಲ್ಲಿ ಕೆಲವು ಆಯ್ದ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದಾರೆ.

    ಮುಂಬೈ ಮತ್ತು ಗೋವಾದಲ್ಲಿ ಅನೇಕ ಪ್ರಾಪರ್ಟಿಗಳನ್ನು ಹೊಂದಿರುವ ಪ್ರಿಯಾಂಕ ಚೋಪ್ರಾ ಇದೀಗ ತಮ್ಮ ಎರಡು ಅಪಾರ್ಟ್‍ಮೆಂಟ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸುದ್ದಿ ವೈರಲ್ ಆಗುತ್ತಿದೆ. ಸದ್ಯ ಎಂಜಲೀಸ್‍ನಲ್ಲಿ ವಾಸಿಸುತ್ತಿರುವ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಜುಲೈ 19ರಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.

    ಸದ್ಯ ಪ್ರಿಯಾಂಕ ಚೋಪ್ರಾ ಇದೀಗ ಮುಂಬೈನಲ್ಲಿರುವ ತಮ್ಮ 2 ಅಪಾರ್ಟ್‍ಮೆಂಟ್‍ನನ್ನು ಮಾರಾಟ ಮಾಡುತ್ತಿದ್ದು, ಅಂಧೇರಿ ಪಶ್ಚಿಮದ ಒಶಿವಾರಾದ ವಾಸ್ತು ಪ್ರೆಸಿಂಕ್ಟ್ ನಲ್ಲಿ ತಮ್ಮ ಕಚೇರಿಗಾಗಿ 2.11 ಲಕ್ಷಕ್ಕೆ ಭೋಗ್ಯ ನೀಡಿದ್ದಾರೆ. ಇನ್ನೂ ಈ ಎಲ್ಲಾ ವ್ಯವಹಾರಗಳನ್ನು ಪ್ರಿಯಾಂಕ ಚೋಪ್ರಾರವರ ತಾಯಿ ಮಧು ಚೋಪ್ರಾ ನಿಭಾಯಿಸುತ್ತಿದ್ದಾರೆ.

    ಪ್ರಿಯಾಂಕ ಚೋಪ್ರಾ ಅಂಧೇರಿ ವೆಸ್ಟ್ ನ ರಾಜ್ ಕ್ಲಾಸಿಕ್ ವರ್ಸೊವಾದಲ್ಲಿರುವ ತಮ್ಮ ಎರಡು ಅಪಾರ್ಟ್‍ಮೆಂಟ್‍ಗಳನ್ನು 7 ಕೋಟಿ ರೂ.ಗೆ ಮಾರಿದ್ದು, ಈ ಕುರಿತು 2021ರ ಮಾರ್ಚ್ 26ರಂದು ಒಪ್ಪಂದ ಮಾಡಿಕೊಟ್ಟಿದ್ದರು. ಕಳೆದ ವರ್ಷ ಕೂಡ ಮುಂಬೈನ ಅಂಧೇರಿಯ ಲೋಖಂಡ್ವಾಲಾ ಕಾಂಪ್ಲೆಕ್ಸ್‌ನಲ್ಲಿರುವ ಕರಣ್ ಅಪಾರ್ಟ್‍ಮೆಂಟ್‍ನನ್ನು ಸಹ ಮಾರಿದ್ದರು.

    ಜುಹುವಿನಲ್ಲಿಯೂ ಕೂಡ ಪ್ರಿಯಾಂಕ ಮನೆಯನ್ನು ಹೊಂದಿದ್ದು, 2018ರಲ್ಲಿ ರೋಕಾ ಕಾರ್ಯಕ್ರಮ ಇಲ್ಲಿಯೇ ನಡೆದಿತ್ತು. ಗೋವಾದ ಬಾಗಾ ಬೀಚ್ ಬಳಿ ಕೂಡ ಪ್ರಿಯಾಂಕ ಮನೆ ಹೊಂದಿದ್ದಾರೆ. ಇದನ್ನೂ ಓದಿ:407 ಸಿನಿಮಾ ಹೆಸರನ್ನು ಬಳಸಿ ಸ್ಟಾರ್ ನಟನ ಭಾವಚಿತ್ರ – ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಅಭಿಮಾನಿ ಹೆಸರು

  • ಪ್ರಿಯಾಂಕ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಹಿಂದೂಗಳಿಗೆ ಉಗ್ರ ಪಟ್ಟ: ಕ್ಷಮೆ ಕೇಳಿದ ಅಮೆರಿಕಾ ಟಿವಿ ಮಾಧ್ಯಮ!

    ಪ್ರಿಯಾಂಕ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಹಿಂದೂಗಳಿಗೆ ಉಗ್ರ ಪಟ್ಟ: ಕ್ಷಮೆ ಕೇಳಿದ ಅಮೆರಿಕಾ ಟಿವಿ ಮಾಧ್ಯಮ!

    ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರಗಾಮಿಗಳೆಂದು ಬಿಂಬಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಎಬಿಸಿ ಟಿವಿ ಮಾಧ್ಯಮ ಸಂಸ್ಥೆಯು ಕ್ಷಮೆಯಾಚಿಸಿದೆ.

    ಅಮೆರಿಕ ಎಬಿಸಿ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕ್ವಾಂಟಿಕೋದಲ್ಲಿ ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾರವರು ಅಭಿನಯಿಸಿದ್ದರು. ಈ ಧಾರಾವಾಹಿಯಲ್ಲಿ ನಟಿ ಎಫ್‍ಬಿಐನ ಏಜೆಂಟ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಕಳೆದ ವಾರ ಬಿಡುಗಡೆಗೊಂಡ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರರೆಂದು ಬಿಂಬಿಸಲಾಗಿತ್ತು. ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

    ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಟ್ವಿಟ್ಟರ್ ನಲ್ಲಿ ಭಾರೀ ಟೀಕೆಗಳು ಕೇಳಿಬಂದಿದ್ದವು. ಹಣಕ್ಕೋಸ್ಕರ ಭಾರತೀಯರ ವಿರುದ್ಧ ಎಂತಹುದೇ ಪಾತ್ರಗಳಲ್ಲಿ ನಟಿಸುವ ನಿಮಗೆ ನಾಚಿಕೆಯಾಗಬೇಕು ಎಂದು ಆರೋಪಿಸಿ, ಕೂಡಲೇ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಹಿನ್ನೆಲೆಯಲ್ಲಿ ಸಂಸ್ಥೆಯು “ಸಂಚಿಕೆಯಲ್ಲಿ ಬರುವ ಸನ್ನಿವೇಶಕ್ಕೂ ನಟಿ ಪ್ರಿಯಾಂಕ ಚೋಪ್ರಾಗೂ ಯಾವುದೇ ಸಂಬಂಧವಿಲ್ಲ, ಕೇವಲ ಅವರು ಪಾತ್ರ ನಿರ್ವಹಿಸಿದ್ದಾರೆ.” ಅಲ್ಲದೇ ಧಾರಾವಾಹಿಯ ಯಾವುದೇ ತಯಾರಿಯಲ್ಲಿ ಅವರು ಭಾಗವಹಿಸಿಲ್ಲ. ಭಾರತೀಯರ ಭಾವನೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಾವು ಕ್ಷಮೆಯಾಚಿಸುತ್ತಿದ್ದೇವೆ ಎಂದು ಎಬಿಸಿ ಸಂಸ್ಥೆ ಹೇಳಿದೆ.

    ಪ್ರಿಯಾಂಕ ಚೋಪ್ರಾರವರು ಈ ಸಂಚಿಕೆಯಲ್ಲಿ ಮೊದಲನೇ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕ್ವಾಂಟಿಕೋದ ಸಂಚಿಕೆಯ ಮೂರನೇ ಅವತರಣೆಯಾಗಿತ್ತು. ಇದಲ್ಲದೆ ಹಾಲಿವುಡ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಗಳು ಶೀಘ್ರವೇ ತೆರೆಕಾಣಲಿವೆ.

    ಏನಿದೆ ಕ್ವಾಂಟಿಕೋ ಸಂಚಿಕೆಯಲ್ಲಿ?
    ಪ್ರಿಯಾಂಕ ಚೋಪ್ರಾರವರು ಆಲೆಕ್ಸ್ ಪ್ಯಾರಿಸ್ ಎಂಬ ಎಫ್‍ಬಿಐ ಏಜೆಂಟ್ ಅಧಿಕಾರಿಯಾಗಿದ್ದು, ಮ್ಯಾನ್‍ಹಟನ್‍ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನದ ಶೃಂಗ ಸಭೆ ವೇಳೆ ಪಾಕಿಸ್ತಾನದಲ್ಲಿ ಪರಮಾಣು ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದ ಶಂಕಿತ ಆರೋಪಿಯನ್ನು ಬಂಧಿಸಿರುತ್ತಾಳೆ. ಇವನು ರುದ್ರಾಕ್ಷಿ ಧರಿಸಿದ ಹಿನ್ನೆಲೆಯಲ್ಲಿ ಆತನನ್ನು ಹಿಂದೂ ಉಗ್ರಗಾಮಿ ಎಂಬಂತೆ ಸಂಚಿಕೆಯಲ್ಲಿ ಬಿಂಬಿಸಲಾಗಿತ್ತು.