ಬೆಂಗಳೂರು: ಸ್ಯಾಂಡಲ್‍ವುಡ್ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಇದೀಗ ಗಾಂಧಿನಗರದ ಗಲ್ಲಿಯೊಳಗೆ ಹರಿದಾಡುತ್ತಿದೆ.
ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾವನ್ನು ಯಾರ ಜೊತೆಗೆ ತೆಗೆಯಬೇಕೆಂದು ಯೋಚಿಸುತ್ತಿದ್ದ ಪ್ರೇಮ್‍ಗೆ ಇದೀಗ ಧ್ರುವ ಸರ್ಜಾ ಕಣ್ಣಿಗೆ ಬಿದ್ದಿದ್ದಾರೆ. ಈಗಾಗಲೇ ಸಿನಿಮಾ ಕುರಿತಂತೆ ಪ್ರೇಮ್ ಮತ್ತು ಧ್ರುವ ಸರ್ಜಾ ಜೊತೆ ಚರ್ಚೆ ನಡೆಸಿದ್ದು, ಈ ಸಿನಿಮಾ ಸೆಟ್ಟೆರುವುದು ಬಹುತೇಕ ಖಚಿತ ಆಗಿದೆ. ಇನ್ನೂ ಈ ಸಿನಿಮಾಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲು ಮುಂದಾಗಲಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಸದ್ಯ ಪ್ರೇಮ್ ಪತ್ನಿ ರಕ್ಷಿತಾರವರ ಸಹೋದರ ರಾಣ ನಟಿಸಿರುವ ‘ಏಕ್ ಲವ್ ಯಾ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದಲ್ಲಿ ರಾಣಾಗೆ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಇತ್ತ ಧ್ರುವ ಸರ್ಜಾ ಕೂಡ ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಹೊಸ ಸಿನಿಮಾಕ್ಕೆ ಕೈ ಜೋಡಿಸಿದ್ದು, ಆ.15ರಂದು ಈ ಸಿನಿಮಾದ ಮೂಹೂರ್ತ ನೆರವೇರಲಿದೆ.
ಒಟ್ಟಾರೆ ಈ ಎರಡು ಚಿತ್ರಗಳನ್ನು ಮುಗಿಸಿದ ನಂತರ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‍ನ ಹೊಸ ಚಿತ್ರಕ್ಕೆ ಒಟ್ಟಿಗೆ ಕೈ ಜೋಡಿಸಲಿದ್ದಾರೆ. ಇದನ್ನೂ ಓದಿ:BB ಫಿನಾಲೆಗೂ ಮುನ್ನವೇ 2 ಲಕ್ಷ ಗೆಲ್ಲಬಹುದು
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕರನ್ನು ಪುಡಂಗಿಗಳು ಎಂಬ ಮಾತು ನನಗೆ ನೋವು ತರಿಸಿದೆ. ಈ ಒಂದು ಮಾತಿಗೆ ನಾನು ರಿಯಾಕ್ಟ್ ಮಾಡುತ್ತಿದ್ದೇನೆ ಎಂದು ನಿರ್ದೇಶಕ ಜೋಗಿ ಪ್ರೇಮ್ ತಿಳಿಸಿದ್ದಾರೆ.
ಈ ಕುರಿತಂತೆ ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೇಮ್, ದರ್ಶನ್‍ರವರು ನನಗೆ, ನನ್ನ ಪತ್ನಿಗಿಂತಲೂ ಮೊದಲಿನಿಂದಲೂ ಫ್ರೆಂಡ್, ಅಲ್ಲದೇ ಫ್ಯಾಮಿಲಿ ಫ್ರೆಂಡ್ ಕೂಡ. ನಾನು ಕರಿಯಾ ಸಿನಿಮಾ ಮಾಡಬೇಕಾದರೆ ಅವರ ಮನೆಗೆ ಹೋದಾಗ ಅವರ ತಾಯಿ, ನನಗೆ ನನ್ನ ತಾಯಿಯಂತೆ ಊಟ ಹಾಕಿದ್ದಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ರಕ್ಷಿತಾ ಮೇಡಂಗೆ ಕ್ಲೋಸ್ ಫ್ರೆಂಡ್. ರಕ್ಷಿತಾ ಹಾಗೂ ನಾನು ಪ್ರತಿಯೊಂದು ವಿಚಾರದಲ್ಲಿಯೂ ದರ್ಶನ್‍ರವರಿಗೆ ಸಪೋರ್ಟ್ ಮಾಡುತ್ತೇವೆ. ನಾನು, ರಕ್ಷಿತಾ ಹಾಗೂ ದರ್ಶನ್ ಒಂದು ರೀತಿ ಫ್ಯಾಮಿಲಿ ಇದ್ದಂತೆ, ಆದರೆ ನಿರ್ದೇಶಕರುಗಳು ಪುಡಂಗುಗಳು ಎಂದು ದರ್ಶನ್ ಹೇಳಿದ್ದು, ನನಗೆ ಬೇಸರ ತರಿಸಿದೆ ಹಾಗಾಗಿ ನನ್ನ ಬೇಸರವನ್ನು ಹೊರಹಾಕುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
ಕರಿಯ ಸಿನಿಮಾ ಮಾಡುವ ವೇಳೆ ನಾನು ವರ್ಷಾನೂಗಟ್ಟಲೆ ಕೆಲಸ ಮಾಡಿ ಎಷ್ಟು ಕಷ್ಟಪಟ್ಟು ಗೆದ್ದೇವು ಎಂಬುವುದು ದರ್ಶನ್‍ಗೂ ಗೊತ್ತು, ಕರ್ನಾಟಕ ಜನತೆಗೂ ಗೊತ್ತು. ಆದರೆ ಏನೋ ಫ್ಲೋನಲ್ಲಿ ಮಾತನಾಡಿರುತ್ತಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ದರ್ಶನ್ ಯಾವತ್ತಿಗೂ ನನ್ನ ಕ್ಲೋಸ್ ಹಾಗೂ ಫ್ಯಾಮಿಲಿ ಫ್ರೆಂಡ್. ರಕ್ಷಿತಾರವರು ಕೂಡ ದರ್ಶನ್ ಯಾವತ್ತು ಹಾಗೇ ಮಾತನಾಡುವುದಿಲ್ಲ. ಅದರಲ್ಲಿಯೂ ನಿಮ್ಮ ಬಗ್ಗೆ ಆ ರೀತಿ ಹೇಳುವುದಿಲ್ಲ. ಆದರೆ ಯಾಕೆ ಹಾಗೆ ಮಾತನಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಕರಿಯ ಸಿನಿಮಾದ ನಂತರ ಪ್ರೇಮ್ ಹಾಗೂ ದರ್ಶನ್ ಕಾಂಬಿನೇಷನ್‍ನಲ್ಲಿ ಸಿನಿಮಾ ಬಂದರೆ ಚೆನ್ನಾಗಿರುತ್ತದೆ ಎಂದು ಹಲವಾರು ರಾಜ್ಯದಿಂದ ಅನೇಕ ನಿರ್ಮಾಪಕರು ಮುಂದೆ ಬಂದರು. ಈ ವೇಳೆ ದರ್ಶನ್ ನಾವಿಬ್ಬರು ಸಿನಿಮಾ ಮಾಡೋಣಾ ಎಂದು ಹೇಳಿದರು. ಈ ವೇಳೆ ಉಮಾಪತಿಯವರು ಬಂದು ನೀವು, ದರ್ಶನ್ ಸಿನಿಮಾ ಮಾಡಿಕೊಡಿ ಎಂದು ಕೇಳಿದ್ದರು. ಹೀಗಾಗಿ ಒಪ್ಪಿಕೊಂಡಿದ್ದೇವು. ಆಗ ಉಮಾಪತಿಯವರನ್ನು ಪರಿಚಯ ಮಾಡಿಸಿ ಕೊಟ್ಟಿದ್ದೆ. ದಿ ವಿಲನ್ ಚಿತ್ರದಲ್ಲಿ ನಾನು ಬ್ಯೂಸಿಯಾಗಿದ್ದ ಕಾರಣ ಸಿನಿಮಾ ಮಾಡಲು ಆಗಲಿಲ್ಲ.
ಹೀಗಾಗಿ ಬೇರೆ ನಿರ್ದೇಶಕರನ್ನು ಇಟ್ಟುಕೊಂಡು ಇಬ್ಬರು ರಾಬರ್ಟ್ ಸಿನಿಮಾ ಮಾಡಿದರು. ಈ ಸಿನಿಮಾ ನೋಡಿದ ಕೂಡಲೇ ಸಿನಿಮಾ ಬಹಳ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿ, ರಾಬರ್ಟ್ ಸಿನಿಮಾಗೆ ಒಳ್ಳೆಯದಾಗಲಿ ಎಂದು ರಕ್ಷಿತಾರವರು ವಿಶ್ ಮಾಡಿದ್ದರು. ದರ್ಶನ್‍ರ ಯಾವುದೇ ಸಿನಿಮಾ ಅಥವಾ ಕಾರ್ಯ ಆಗಲಿ ಮೊದಲು ನಾನು ಅಥವಾ ರಕ್ಷಿತಾ ಅವರು ಶುಭ ಹಾರೈಸುತ್ತಾರೆ. ಈಗ ಬರಬೇಕಾದರು ದರ್ಶನ್ ನನ್ನ ಸ್ನೇಹಿತ ಎಂದು ಹೇಳಿ ಕಳುಹಿಸಿದರು. ಒಂದು ಕಡೆ ಫ್ರೆಂಡ್‍ಗೆ, ಮತ್ತೊಂದು ಕಡೆ ಗಂಡನಿಗೆ ಇಬ್ಬರಿಗೂ ಬೇಸರವಾಗಿದೆ ಎಂದು ರಕ್ಷಿತಾ ಅರ್ಥಮಾಡಿಕೊಂಡಿದ್ದಾರೆ. ಆದರೆ ಈ ನಡುವೆ ನನ್ನನ್ನು ಪ್ರೇಮ್‍ನನ್ನು ಪುಡಂಗು ಎಂದಿದ್ದಕ್ಕೆ ಅಷ್ಟೇ ಬೇಸರವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ:ದರ್ಶನ್ ಅವ್ರೇ ನನಗ್ಯಾವ ಕೊಂಬೂ ಬರ್ಲಿಲ್ಲ, ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ: ಪ್ರೇಮ್
ಇನ್ನೂ ಈ ಘಟನೆಯಿಂದ ಮುಂದಿನ ದಿನಗಳಲ್ಲಿ ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆಗೆ, ರಾಬರ್ಟ್ ನಂತರ ಕೂಡ 5 ಬಾರಿ ದರ್ಶನ್‍ರವನ್ನು ಮೀಟ್ ಮಾಡಿದ್ದೆ. ಈ ಮಧ್ಯೆ ಹೊಸ ಕಂಟೆಂಟ್ ಕೂಡ ಹೇಳಿ, ನಿಮ್ಮ ಮೇಲೆಯೇ ಅದ್ಭುತವಾದ ಕಥೆ ಮೂಲಕ ಪ್ರಯೋಗ ಮಾಡುತ್ತೇನೆ ಎಂದು ಕೂಡ ಹೇಳಿದ್ದೆ. ಯಾವುದೇ ಒಂದು ಕಥೆ ಬಂದಾಗ ನಾವು ಈ ಕಲಾವಿದನನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ತಲೆಗೆ ಬರುತ್ತದೆ.
ನನ್ನ ಅವರ ಫ್ರೆಂಡ್ ಶಿಪ್ ಬೇರೆ, ಸಿನಿಮಾ ಬೇರೆ, ಅವರವರ ವೈಯಕ್ತಿಕ ವಿಚಾರ ಏನು ಬೇಕಾದರೂ ಮಾಡಿಕೊಳ್ಳಲಿ, ಆದರೆ ನನ್ನ ತನಕ ಇದು ಯಾವುದು ಬರಬಾರದು. ನನಗೆ ಹಾರ್ಟ್ ಆಯ್ತು ಹಾಗಾಗಿ ನಾನು ದರ್ಶನ್‍ರವರಿಗೆ ಒಂದು ಲೆಟರ್ ಬರೆಯುವ ಮೂಲಕ ನನ್ನ ನೋವನ್ನು ವ್ಯಕ್ತಪಡಿಸಿದ್ದೇನೆ. ನಿರ್ದೇಶಕರಿಗೆ ಯಾವತ್ತು ಹೀಗೆ ಮಾತನಾಡಬಾರದು ಎಂಬುದು ನನ್ನ ಒಂದು ಕಳಕಳಿಯ ಮನವಿ ಎಂದಿದ್ದಾರೆ. ಇದನ್ನೂ ಓದಿ:ಇಂಡಸ್ಟ್ರಿ ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ- ದರ್ಶನ್ ವಿರುದ್ಧ ರಕ್ಷಿತಾ ಬೇಸರ